ಮೀನುಗಾರರ ಸ್ವಾಭಿಮಾನವೇ ನಮ್ಮ ಹೆಮ್ಮೆ!
ಕರಾವಳಿ ಹಾಗೂ ರಾಜ್ಯದ ಎಲ್ಲಾ ಶ್ರಮಿಕ ಮೀನುಗಾರ ಸಹೋದರ-ಸಹೋದರಿಯರ ಹಕ್ಕು ಮತ್ತು ಕಲ್ಯಾಣಕ್ಕಾಗಿ ವಿಧಾನ ಪರಿಷತ್ತಿನಲ್ಲಿ ದ್ವನಿಯೆತ್ತಲು ಶ್ರೀ ಮಂಜುನಾಥ ಸುಣಗಾರ ಅವರಿಗೆ ನಿಮ್ಮ ಬೆಂಬಲ ನೀಡಿ.
ಸಮೃದ್ಧ ಮೀನುಗಾರ ಸಮಾಜದ ನಿರ್ಮಾಣವೇ ನಮ್ಮ ಏಕೈಕ ಗುರಿ.
ಪ್ರಸಕ್ತ ಸಾಲಿನಲ್ಲಿ ರಾಜ್ಯ ಸರ್ಕಾರಿ ನೌಕರರ ಸಾರ್ವತ್ರಿಕ ವರ್ಗಾವಣೆಗೆ ನಿಗದಿಪಡಿಸಿದ್ದ ಅವಧಿಯನ್ನು ಜುಲೈ 15ರ ವರೆಗೆ ವಿಸ್ತರಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಎಲ್ಲ ವೃಂದಗಳಿಗೆ (ಗ್ರೂಪ್ ಎ,ಬಿ,ಡಿ,ಸಿ) ಅನ್ವಯವಾಗುವಂತೆ ಒಂದು ಜ್ಯೇ��್ಠತಾ ಘಟಕದಲ್ಲಿ ಕಾರ್ಯನಿರತ ವೃಂದ ಬಲದ ಶೇ.6ರನ್ನು ಮೀರದಂತೆ ವರ್ಗಾವಣೆ ಪ್ರಕ್ರಿಯೆ ನಡೆಸುವ ಅಧಿಕಾರವನ್ನು ಆಯಾ ಇಲಾಖೆಗಳ ಸಚಿವರಿಗೆ ನೀಡಲಾಗಿದೆ.
#ಸರ್ಕಾರಿ_ನೌಕರರ_ವರ್ಗಾವಣೆ
@CMofKarnataka
@siddaramaiah
ದೇಶದಲ್ಲೇ ಮೊದಲ ಬಾರಿಗೆ ಬೆಂಗಳೂರು ನಗರ ಪೊಲೀಸ್ ವಿಭಾಗದಲ್ಲಿ ಆಪತ್ಬಾಂಧವ (ಸೇಫ್ ಕನೆಕ್ಟ್) ಮತ್ತು ಹೊಯ್ಸಳ ಟ್ರ್ಯಾಕಿಂಗ್ ವ್ಯವಸ್ಥೆ ಜಾರಿಗೊಳಿಸಲಾಗಿದ್ದು, ಸಾರ್ವಜನಿಕರಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ತಿಳಿಸಿದ್ದಾರೆ.
ಈ ಮೊದಲು ಸಾರ್ವಜನಿಕರು 112ಗೆ ಕರೆ ಮಾಡಿದಾಗ ಹ��ಯ್ಸಳ ಗಸ್ತು ವಾಹನ ಸಂಖ್ಯೆ ಹಾಗೂ ಸಿಎಫ್ಎಸ್ ಸಂಖ್ಯೆಯ ಸಂದೇಶ ಹೋಗುತ್ತಿತ್ತು. ಇದೀಗ ಅದನ್ನು ಅಪ್ಗ್ರೇಡ್ ಮಾಡಿದ್ದು, ಕರೆ ಮಾಡಿದ ಸಾರ್ವಜನಿಕರಿಗೆ ಹೊಯ್ಸಳದ ಲೈವ್ ಲೊಕೇಶನ್ ಲಿಂಕ್ ಕಳುಹಿಸಲಾಗುತ್ತದೆ.
ಆದ್ದರಿಂದ ಹೊಯ್ಸಳ ವಾಹನ ಸಂಚರಿಸುವ ಮಾರ್ಗ, ಅದು ಎಷ್ಟು ದೂರದಲ್ಲಿದೆ, ಸ್ಥಳಕ್ಕೆ ಬರಲು ಎಷ್ಟು ಸಮಯ ಬೇಕಾಗುತ್ತದೆ ಎಂಬುದು ತಿಳಿಯಬಹುದಾಗಿದೆ. ಓಲಾ, ಊಬರ್ ಅಥವಾ ಫುಡ್ ಡೆಲಿವರಿ ಆ್ಯಪ್ಗಳ ಮಾದರಿಯಲ್ಲಿ ಸಮಯವನ್ನು ಟ್ರ್ಯಾಕಿಂಗ್ ಮಾಡಬಹುದಾಗಿದೆ ���ಂದು ಅವರು ತಿಳಿಸಿದ್ದಾರೆ.
#KSPApp
@CMofKarnataka
@siddaramaiah
ಅಸ್ಪೃಶ್ಯತೆಯ ನಿವಾರಣೆಗಾಗಿ, ಸಮ ಸಮಾಜ ನಿರ್ಮಾಣಕ್ಕಾಗಿ ಜೀವನವನ್ನೇ ಮುಡಿಪಾಗಿಟ್ಟ,
ವಿಶ್ವದ ಅತ್ಯಂತ ದೊಡ್ಡ ಪ��ರಜಾಪ್ರಭುತ್ವವಾದ
ಭಾರತದ ಘನ ಸಂವಿಧಾನವನ್ನು ರಚಿಸಿದ,
ಮಹಾನ್ ಮಾನವತಾವಾದಿ ಡಾ. ಬಿ.ಆರ್ ಅಂಬೇಡ್ಕರ್ ಜಯಂತಿಯಂದು ಅವರನ್ನು ಗೌರವ, ಕೃತಜ್ಞತಾ ಪೂರ್ವಕವಾಗಿ ನೆನೆಯುತ್ತೇವೆ.
ಮಾರ್ಚ್ 3ರಂದು ರಾಜ್ಯಾದ್ಯಂತ 0-5 ವರ್ಷದೊಳಗಿನ ಮಕ್ಕಳಿಗೆ ಪಲ್ಸ್ ಪೋಲಿಯೊ ಲಸಿಕೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ನಿಗದಿತ ಬೂತ್, ಅಂಗನವಾಡಿ ಮುಂತಾದ ಸ್ಥಳಗಳಲ್ಲಿ ಲಸಿಕಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಗ್ರಾಮ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿ, ನಗರ ಮಟ್ಟಗಳಲ್ಲೂ ಪೋಲಿಯೊ ಲಸಿಕೆ ಬಗ್ಗೆ ಅರಿವು ಮೂಡಿಸಲು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾ��ಿದೆ. ನಂತರದ ಮೂರು ದಿನ ತಂಡಗಳು ಮನೆ ಮನೆಗೆ ತೆರಳಿ ಲಸಿಕೆ ನೀಡಲಿವೆ ಎಂದು ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಟಿ.ಕೆ.ಅನಿಲ್ ಕುಮಾರ್ ತಿಳಿಸಿದ್ದಾರೆ.
#polio #pulspolio #polioforkids #poliofreekarnataka
@CMofKarnataka
@siddaramaiah
ಜನರ ಬಳಿಗೇ ಆಡಳಿತವನ್ನು ಕೊಂಡೊಯ್ಯುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗೃಹ ಕಚೇರಿ 'ಕೃಷ್ಣಾ'ದಲ್ಲಿ ಜನರಿಂದಲೇ ನೇರವಾಗಿ ಅಹವಾಲು ಸ್ವೀಕರಿಸಿ ಸ್ಪಂದಿಸುವ 'ಜನಸ್ಪಂದನ' ಕಾರ್ಯಕ್ರಮವನ್ನು ನಡೆಸಿದ್ದಾರೆ. ಬೆಳಗ್ಗೆ 9.30ರಿಂದ ಸಂಜೆ 6 ಗಂಟೆಯವರೆಗೆ ಜನರಿಂದ ಅಹವಾಲುಗಳನ್ನು ಸ್ವೀಕರಿಸಿ, ಪರಿಹರಿಸುವ ನಿಟ್ಟಿನಲ್ಲಿ ಸ್ಪಂದಿಸಿದ್ದಾರೆ.
#publicspeaking @CMofKarnataka@siddaramaiah
ಎಸ್ಸಿ ಮತ್ತು ಎಸ್ಟಿ ಸಮುದಾಯ ಸಹಕಾರ ಸಂಘಗಳಲ್ಲಿ ಈವರೆಗೂ ನೋಂದಣಿ ಆಗಿಲ್ಲ. ಆದ್ದರಿಂದ ಎಲ್ಲರಿಗೂ ಸದಸ್ಯತ್ವ ನೀಡಬೇಕು ಎಂಬುದು ಸರ್ಕಾರದ ಚಿಂತನೆ ಎಂದು ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ ತಿಳಿಸಿದ್ದಾರೆ.
#SCST#cooperativecare
ಪರಿಶಿಷ್��� ಜಾತಿ ಉಪ ಯೋಜನೆ (ಎಸ್ಸಿಎಸ್ಪಿ) ಮತ್ತು ಪರಿಶಿಷ್ಟ ಪಂಗಡಗಳ ಉಪ ಯೋಜನೆ (ಟಿಎಸ್ಪಿ) ಅನುಷ್ಠಾನ ಕುರಿತು ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿದ ನಂತರ ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ ತಿಳಿಸಿದ್ದಾರೆ.
#SCST #TSP #SCSP
ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ಇಂದು ಹಮ್ಮಿಕೊಂಡಿದ್ದ ವಿಶ್ವ ಮೀನುಗಾರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದೆ. ಮೀನನ್ನು ನಾವು ದೇವರ ಸ್ವರೂಪ ಎಂದು ಕರೆಯುತ್ತೇವೆ. ಶ್ರೀಮನ್ ನಾರಾಯಣನಿಗೆ ಮೀನನ್ನು ಹೋಲಿಸುತ್ತೇವೆ. ನಾವು ಚುನಾವಣೆಗೆ ಮುಂಚಿತವಾಗಿ ಮೀನುಗಾರಿಕಾ ಸಮುದಾಯಕ್ಕೆ ಸಾಕಷ್ಟು ಭರವಸೆ ನೀಡಿದ್ದೆವು ಅವನ್ನು ಈಡೇರಿಸಲು ನಾವು ಬದ್ಧರಾಗಿದ್ದೇವೆ.
ಮಾನ್ಯ ಮೀನುಗಾರಿಕಾ ಸಚಿವರಾದ ಮಂಕಾಳ ವೈದ್ಯ ಅವರು ಸರ್ಕಾರದ ಸಹಕಾರ ಪಡೆದು ಸಮುದಾಯದವರಿಗೆ ಸಾಕಷ್ಟು ಸೌಲಭ್ಯಗಳನ್ನು ತಲುಪಿಸುತ್ತಿದ್ದಾರೆ. ಬರೀ ಸಮುದ್ರದಲ್ಲೇ ಮೀನುಗಾರಿಕೆ ಮಾಡುವುದಕ್ಕಿಂತ ಸಿಹಿ ನೀರಿನ ಮೀನುಗಾರಿಕೆ ಮಾಡಲು ಸಮುದಾಯದವರು ಮುಂದಾಗಬೇಕು. ಸರ್ಕಾರ ಈಗಾಗಲೇ ಏತ ನೀರಾವರಿ ಮೂಲಕ ಸಾಕಷ್ಟು ಕೆರೆಗಳನ್ನು ತುಂಬಿಸಿದ್ದು ಹರಾಜಿನ ಮೂಲಕ ಹಂಚಿಕೆ ಮಾಡಲಾಗುವುದು.
ಎಳೆಯ ಪ್ರಾಯದಲ್ಲಿ ನಾನು ಕೂಡ ನಮ್ಮೂರಿನ ಬಳಿಯ ಸಂಗಮದಲ್ಲಿ ಮೀನು ಹಿಡಿಯಲು ಹೋಗುತ್ತಿದ್ದೆ. ಗಾಳ ಹಾಕಿ ತಾ���ುಗಟ್ಟಲೆ ಕುಳಿತುಕೊಳ್ಳಲು ತಾಳ್ಮೆ ಬೇಕು. ಮಹಶೀರ್ ಮೀನು ಹಿಡಿದು ಕೆರೆಯಲ್ಲಿ ವಾಪಸ್ ಬಿಡಲು ಆಗ ಹೊರದೇಶದಿಂದಲೂ ಬರುತ್ತಿದ್ದರು. ಮೀನುಗಾರಿಕಾ ಸಮುದಾಯದವರೂ ಕೂಡ ಉತ್ತಮ ತಳಿಗಳನ್ನು ತಂದು ಸಾಕಿ ಲಾಭ ಮಾಡಬೇಕು ಎಂದು ತಿಳಿಸಿದೆ.