ಕೆಲ ವರ್ಷಗಳ ಹಿಂದೆ, ಒಂದು ದಿನ ಪ್ರಕಾಶ ರಾಜ್ ನನಗೆ ಫೋನ್ ಮಾಡಿದರು.
'ನನ್ನ ಎರಡನೇ ಪತ್ನಿಗೆ ಮಕ್ಕಳಾಗಿಲ್ಲ. ಸರ್ಪದೋಷವಿದೆಯೆಂದು ಪತ್ನಿಗೆ ಯಾರೋ ಹೇಳಿದ್ದಾರೆ. ಕುಕ್ಕೆಗೆ ಹೋಗಿ ಸರ್ಪದೋಷ ನಿವಾರಿಸಿಕೊಳ್ಳಲು ಅವಳು ಬಯಸಿದ್ದಾಳೆ. ಹಾಗೆ ಮಾಡಿಸಿಕೊಳ್ಳದ ವಿನಃ ಮಕ್ಕಳಾಗುವುದಿಲ್ಲ ಅಂತ ಅವಳಿಗೆ ಮನವರಿಕೆ ಆಗಿದೆ. ನಿಮಗೆ ಅಲ್ಲಿ ಯಾರಾದಾದರೂ ಪರಿಚಯದವರಿದ್ದರೆ ಕುಕ್ಕೆಯಲ್ಲಿ ಸರ್ಪದೋಷ ನಿವಾರಣೆ ಪೂಜೆ ಮಾಡಿಸಬೇಕಿತ್ತು. ಹೆಲ್ಪ್ ಮಾಡ್ತೀರಾ?' ಎಂದು ಕೇಳಿದರು.
ನಾನು ನಮ್ಮ ಮಂಗಳೂರು ವರದಿಗಾರ ಜಿತೇಂದ್ರ ಕುಂದೇಶ್ವರಗೆ ಹೇಳಿದೆ. ಅವರು ಅಲ್ಲಿ ಎಲ್ಲ ವ್ಯವಸ್ಥೆ ಮಾಡಿದರು. ಆ ಪ್ರಕಾರ, ಪ್ರಕಾಶರಾಜ್ ಪತ್ನಿ ಕುಕ್ಕೆಗೆ ಬಂದು, ಪೂಜೆ ಸಲ್ಲಿಸಿ ಹೋದರು.
ಅದಾಗಿ ಒಂದು ವರ್ಷದ ಬಳಿಕ ಅವರ ಪತ್ನಿಗೆ ಮಗುವಾಯಿತು. ಈ ವಿಷಯವನ್ನು ನನಗೆ ಪ್ರಕಾಶ ರಾಜ್ ಮತ್ತು ಅವರ ಪತ್ನಿ ಖುದ್ದಾಗಿ ಫೋನ್ ಮಾಡಿ ತಿಳಿಸಿದರು.
ಪ್ರಕಾಶ ರಾಜ್ ಗೆ ಮಗುವಾಗಿದ್ದರೆ ಅದಕ್ಕೆ 'ಕುಕ್ಕೆ ಮಹಾತ್ಮೆ'ಯೇ ಕಾರಣ!
ಇದನ್ನು ಅವರು ಅಲ್ಲ ಎಂದು ಹೇಳ್ತಾರಾ? Just Asking!
ಇದು ನಮ್ಮ ಎಡಬಿಡಂಗಿಗಳ ಕಥೆ. ಹೊರಗೊಂದು, ಒಳಗೊಂದು. ಹೊರಗೆ ಪ್ರಗತಿಪರ, ವಿಚಾರವಾದ, ಚಿಂತಕನ ಸೋಗು. ಒಳಗೆ ಬರೀ ಮಣ್ಣಂಗಟ್ಟೆ! ಈ ಪ್ರಕಾಶ್ ರಾಜ್ ನಾವೆಲ್ಲ ನಿರ್ಲಕ್ಷಿಸಬೇಕಾದ ಒಬ್ಬ ಶುದ್ಧ ಹಿಪೊಕ್ರೇಟ್. ಡಬಲ್ ಸ್ಟ್ಯಾಂಡರ್ಡ್ ಮನುಷ್ಯ.
ಯಾರನ್ನು 'ವಿಷ' ಸರ್ಪ ಎಂದು ದೂಷಿಸುತ್ತಾರೋ, ಆ 'ಸರ್ಪ' ವೇ ಅವರಿಗೆ ವರವಾಗಿ ಬರಬೇಕಾಯ್ತು!
ಮೊನ್ನೆ ಇಸ್ರೋ ವಿಜ್ಞಾನಿಗಳು ತಿರುಪತಿಗೆ ಹೋದಾಗ ಪ್ರಗತಿಪರರು "ಸ್ವಂತ ಸಾಮರ್ಥ್ಯದಲ್ಲಿ ನಂಬಿಕೆ ಇಲ್ಲದವರು ದೇವರ ಮೊರೆ ಹೋಗುತ್ತಾರೆ" ಎಂದು ಕುಹಕವಾಡಿದ್ದಕ್ಕೂ, ಈ ಘಟನೆಗೂ ಸಂಬಂಧವಿಲ್ಲ ಬಿಡಿ.
(Disclaimer : ಇಂಥ ಖಾಸಗಿ ವಿಷಯಗಳನ್ನು ನಾನು ಸಾರ್ವಜನಿಕವಾಗಿ ಚರ್ಚಿಸಲು ಇಷ್ಟಪಡುವುದಿಲ್ಲ. ನನ್ನದೇ ಪತ್ರಿಕೆ, ಅಂಕಣಗಳಿದ್ದರೂ ಅಂಥ ವಿಷಯಗಳನ್ನು ಬರೆದು ಪುಟಗಳನ್ನು ಗಲೀಜು ಮಾಡುವುದಿಲ್ಲ. ಸಮಸ್ಯೆ ಏನಂದ್ರೆ, ಕೆಲವು ವಿಷಯಗಳನ್ನು ಹೇಳದಿದ್ದರೆ, ಕೆಲವರ ಅಸಲಿ ವ್ಯಕ್ತಿತ್ವ ಗೊತ್ತೇ ಆಗುವುದಿಲ್ಲ.)
#JustTelling
ಮೊದಲ ಫೋಟೋದಲ್ಲಿರುವವರು ನಮ್ಮ ವರದಿಗಾರ ಜಿತೇಂದ್ರ ಕುಂದೇಶ್ವರ ಮತ್ತು ಪ್ರಕಾಶ್ ರಾಜ್ ಎರಡನೇ ಪತ್ನಿ ಪೋನಿ ವರ್ಮ, ಕುಕ್ಕೆ ದೇವಸ್ಥಾನದ ಎದುರು.
I just joined the BJP, you too can join the BJP and join hands to help create a New India! Give a missed call on 89 80 80 80 80 to #JoinBJP#BJPMembership. Via @BJP4India https://t.co/z4A2z1uxlE