ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ ಡಿಜಿ ಮತ್ತು ಐಜಿಯಾಗಿ ಅಧಿಕಾರ ಸ್ವೀಕರಿಸಿದ ಅಪ್ಪಟ ಕನ್ನಡಿಗ, ಕನ್ನಡಾಭಿಮಾನಿ ಡಾ.ಎಂ.ಎ.ಸಲೀಂ ಅವರನ್ನು ಇಂದು ಭೇಟಿಯಾಗಿ ಅಭಿನಂದನೆ ಸಲ್ಲಿಸಿದೆ. ಮೂಲತಃ ಬೆಂಗಳೂರಿನ ಚಿಕ್ಕಬಾಣವಾರದವರಾದ ಡಾ.ಸಲೀಂ ಅವರು 1993ರ ಬ್ಯಾಚ್ನ ಐಪಿಎಸ್ ಅಧಿಕಾರಿಯಾಗಿ, ರಾಜ್ಯದ ವಿವಿಧ ಪ್ರಮುಖ ಹುದ್ದೆಗಳಲ್ಲಿ ಸಮರ್ಥವಾಗಿ ಸೇವೆ ಸಲ್ಲಿಸಿ, ಅಪಾರ ಅನುಭವ ಮತ್ತು ಗೌರವವನ್ನು ಗಳಿಸಿದ್ದಾರೆ. ಅನೇಕ ವಿಶೇಷ ತನಿಖಾ ದಳಗಳ ಮುಖ್ಯಸ್ಥರಾಗಿ, ಅವುಗಳ ಭಾಗವಾಗಿ ಕಾರ್ಯ ನಿರ್ವಹಿಸಿ ದಕ್ಷತೆಯನ್ನು ಮೆರೆದಿದ್ದಾರೆ. ಅವರ ನಾಯಕತ್ವದಲ್ಲಿ ಕರ್ನಾಟಕ ಪೊಲೀಸ್ ಇಲಾಖೆ ಮತ್ತಷ್ಟು ಎತ್ತರಕ್ಕೆ ಬೆಳೆಯಲಿದೆ ಎಂಬ ನಂಬುಗೆ ನನ್ನದು.
ಪೊಲೀಸ್ ಮಹಾನಿರ್ದೇಶಕರ ಹುದ್ದೆಗೆ ಕನ್ನಡಿಗರೇ ನೇಮಕವಾದಲ್ಲಿ ಅವರು ಕನ್ನಡಿಗರ ನಾಡಿಮಿಡಿತವನ್ನು ಗ್ರಹಿಸಿ ಕೆಲಸ ಮಾಡಲು ಅನುಕೂಲವಾಗುತ್ತದೆ. ಹಿಂದೆ ಪೊಲೀಸ್ ಕಮಿಷನರ್ ಆಗಿದ್ದವರೊಬ್ಬರು ಬೆಂಗಳೂರಿನ ಪೊಲೀಸರು ಪರಭಾಷಿಗರ ಅನುಕೂಲಕ್ಕಾಗಿ ಇತರ ಭಾಷೆಗಳನ್ನು ಕಡ್ಡಾಯವಾಗಿ ಕಲಿಯಬೇಕು ಎಂಬ ಆದೇಶವೊಂದನ್ನು ಹೊರಡಿಸಿದ್ದರು. ಕರ್ನಾಟಕ ರಕ್ಷಣಾ ವೇದಿಕೆಯ ಹೋರಾಟದಿಂದಾಗಿ ಕೊನೆಗೆ ಅದನ್ನು ಹಿಂದಕ್ಕೆ ಪಡೆಯಬೇಕಾಯಿತು. ಡಾ. ಎಂ.ಎ. ಸಲೀಂ ಅಂಥವರು ಉನ್ನತ ಮಟ್ಟದ ಹುದ್ದೆಗೇರಿದರೆ ಇಂಥ ಅಧಿಕಪ್ರಸಂಗಗಳು ನಡೆಯುವುದಿಲ್ಲ. ಹೀಗಾಗಿಯೇ ಆಯಕಟ್ಟಿನ ಜಾಗಗಳಿಗೆ ಕನ್ನಡಿಗ ಅಧಿಕಾರಿಗಳನ್ನೇ ನೇಮಕ ಮಾಡಿ ಎಂದು ನಾನು ಮೊದಲಿನಿಂದಲೂ ಸರ್ಕಾರಗಳನ್ನು ಒತ್ತಾಯಿಸುತ್ತ ಬಂದಿದ್ದೇನೆ.
ಡಾ. ಎಂ.ಎ. ಸಲೀಂ ಅವರು ಒಳ್ಳೆಯ ಬರೆಹಗಾರರು ಮಾತ್ರವಲ್ಲ, ಪುಸ್ತಕಪ್ರೇಮಿಯೂ ಹೌದು. ಕರ್ನಾಟಕದ ಸಾಂಸ್ಕೃತಿಕ ಹಿರಿಮೆಯನ್ನು ಅವರು ಬಲ್ಲರು. ನಾನು ಗಮನಿಸಿದಂತೆ ಅವರೊಬ್ಬ ಮಾದರಿ ಪೊಲೀಸ್ ಅಧಿಕಾರಿ. ಅವರಿಗೆ ಮತ್ತೊಮ್ಮೆ ಅಭಿನಂದನೆಗಳು, ರಾಜ್ಯದ ಶಾಂತಿ, ಸುರಕ್ಷತೆ ಹಾಗೂ ಸೌಹಾರ್ದತೆಯನ್ನು ಕಾಪಾಡುವ ಅವರ ಕಾರ್ಯದಲ್ಲಿ ಯಶಸ್ಸು ಒಲಿಯಲಿ. ಕರ್ನಾಟಕ ಪೊಲೀಸ್ ಇಲಾಖೆಯ ಹಿರಿಮೆಯನ್ನು ಅವರು ಇನ್ನಷ್ಟು ಬೆಳೆಸಲಿ ಎಂದು ಆಶಿಸುತ್ತೇನೆ.
@DgpKarnataka@masaleemips
ಕನ್ನಡಿಗರ ಬದುಕಿಗೆ ಮುಳ್ಳಾಗಿರುವವರ ಕುರಿತು ಇನ್ನೆಷ್ಟು ದಿನ ಮೃದುವಾಗಿ ಇರಲು ಸಾಧ್ಯ? ನಮ್ಮ ತಾಳ್ಮೆ ಮಿತಿ ಮೀರಿದೆ. ಕನ್ನಡಿಗರು ಸಹಿಷ್ಣುಗಳು ನಿಜ, ಆದರೆ ನಮ್ಮ ಅಸ್ತಿತ್ವಕ್ಕೆ ಧಕ್ಕೆ ತಂದರೆ ಸುಮ್ಮನಿರುವ ಮಾತೇ ಇಲ್ಲ.
#KarnatakaIsForKannadigas#ಕರ್ನಾಟಕಕನ್ನಡಿಗರಿಗೆಮಾತ್ರ
ಕನ್ನಡಿಗರ ಬದುಕಿಗೆ ಮುಳ್ಳಾಗಿರುವವರ ಕುರಿತು ಇನ್ನೆಷ್ಟು ದಿನ ಮೃದುವಾಗಿ ಇರಲು ಸಾಧ್ಯ? ನಮ್ಮ ತಾಳ್ಮೆ ಮಿತಿ ಮೀರಿದೆ. ಕನ್ನಡಿಗರು ಸಹಿಷ್ಣುಗಳು ನಿಜ, ಆದರೆ ನಮ್ಮ ಅಸ್ತಿತ್ವಕ್ಕೆ ಧಕ್ಕೆ ತಂದರೆ ಸುಮ್ಮನಿರುವ ಮಾತೇ ಇಲ್ಲ.
#KarnatakaIsForKannadigas#ಕರ್ನಾಟಕಕನ್ನಡಿಗರಿಗೆಮಾತ್ರ
ಪ್ರತಿ ರಾಜ್ಯ ತನ್ನ ರಾಜ್ಯದ ಜನರಿಗೆ ಉದ್ಯೋಗ ಸಿಗುವಂತೆ ಮಾಡಬೇಕು. ಕರ್ನಾಟಕದ ಉದ್ಯೋಗಗಳು ಕರ್ನಾಟಕದವರಿಗೆ ಸಿಗಬೇಕು ಬಿಹಾರ/UP ಜನರಿಗೆ ಅಲ್ಲ
Every state must take care of its own people. Karnataka jobs should be for Kannadigas, not UP-Bihar migrants! #KarnatakaIsForKannadigas#ಕರ್ನಾಟಕಕನ್ನಡಿಗರಿಗೆಮಾತ್ರ
ಕರ್ನಾಟಕದ ಉದ್ಯಮಗಳಲ್ಲಿ ಯುಪಿ, ಬಿಹಾರಿಗಳನ್ನು ತುಂಬುವ ಮಾತುಗಳನ್ನಾಡಿರುವ ಒಕ್ಕೂಟ ಸರ್ಕಾರದ ರಕ್ಷಣಾ ಸಚಿವ @rajnathsingh ಅವರಿಗೆ ಭಾರತ ಒಕ್ಕೂಟ ಹೇಗೆ ರಚನೆಯಾಗಿದೆ ಎಂಬುದು ಗೊತ್ತಿಲ್ಲ. ಅವರದು ಭಾರತವನ್ನು ದುರ್ಬಲಗೊಳಿಸುವ ದೇಶದ್ರೋಹದ ಹೇಳಿಕೆ. ಕೂಡಲೇ ಅವರು ರಾಜೀನಾಮೆ ನೀಡಬೇಕು.
#KarnatakaIsForKannadigas
#ಕರ್ನಾಟಕಕನ್ನಡಿಗರಿಗೆಮಾತ್ರ