ಬೆಂಗಳೂರು ನಗರ ಆಗ್ನೇಯ ವಿಭಾಗದ ಸಿಇಎನ್ (ಸೈಬರ್ ಕ್ರೈಂ) ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸ್ ಇನ್ಸ್ಪೆಕ್ಟರ್ ಶ್ರೀ ರವಿ ಕೆ.ಬಿ. ಅವರು, ಸೈಬರ್ ಕ್ರೈಂ ಪ್ರಕರಣವೊಂದರ ತನಿಖೆಗಾಗಿ ಪೊಲೀಸ್ ತಂಡದೊಂದಿಗೆ ಮಧ್ಯಪ್ರದೇಶಕ್ಕೆ ತೆರಳಿದ್ದರು. ಭೋಪಾಲ್ನಿಂದ ಇಂದೋರ್ಗೆ ತೆರಳುತ್ತಿದ್ದ ವೇಳೆ ಅವರು ಪ್ರಯಾಣಿಸುತ್ತಿದ್ದ ಬಸ್ ನಿಯಂತ್ರಣ ತಪ್ಪಿ ಪ್ರಪಾತಕ್ಕೆ ಉರುಳಿಬಿದ್ದ ಪರಿಣಾಮ, ಗಂಭೀರವಾಗಿ ಗಾಯಗೊಂಡು ಮೃತಪಟ್ಟಿರುವುದು ಅತ್ಯಂತ ದುಃಖಕರ ಸಂಗತಿಯಾಗಿದೆ.
ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ನಮ್ಮನ್ನು ಅಗಲಿದ ಪೊಲೀಸ್ ಇನ್ಸ್ಪೆಕ್ಟರ್ ರವಿ ಕೆ.ಬಿ. ಅವರ ಆತ್ಮಕ್ಕೆ ಶಾಂತಿ ಹಾಗೂ ಸದ್ಗತಿ ದೊರಕಲಿ.
ಅವರ ಕುಟುಂಬ, ಬಂಧು-ಮಿತ್ರರು ಹಾಗೂ ಸಹೋದ್ಯೋಗಿಗಳಿಗೆ ಈ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತನು ನೀಡಲಿ ಎಂದು ಪ್ರಾರ್ಥಿಸುತ್ತೇವೆ.
ಭಾವಪೂರ್ಣ ಶ್ರದ್ಧಾಂಜಲಿ. 🙏
#RIP #Tribute #KarnatakaStatePolice #BengaluruCityPolice #SouthEastDivision
🚨 ಅಪ್ರಾಪ್ತ ವಯಸ್ಸಿನ ಮಕ್ಕಳಿಗೆ ವಾಹನ ಚಾಲನೆ ನೀಡುವುದು ಅಪರಾಧ! 🚨
ಮಕ್ಕಳ ಜೀವದೊಂದಿಗೆ ಆಟವಾಡಬೇಡಿ. ಅಪ್ರಾಪ್ತ ವಯಸ್ಸಿನವರಿಗೆ ವಾಹನ ಚಾಲನೆ ನೀಡುವುದು ಕಾನೂನುಬಾಹಿರವಾಗಿದ್ದು, ಪೋಷಕರ ವಿರುದ್ಧವೂ ಕಠಿಣ ಕಾನೂನು ಕ್ರಮ ಜರುಗಿಸಲಾಗುತ್ತದೆ.
✅ ನಿಮ್ಮ ಮಗುವಿನ ಸುರಕ್ಷತೆ ನಿಮ್ಮ ಜವಾಬ್ದಾರಿ.
✅ ಸಂಚಾರ ನಿಯಮಗಳನ್ನು ಪಾಲಿಸಿ.
🚨 ವೀಲ್ಹಿಂಗ್ಗೆ ಕಠಿಣ ಕಾನೂನು ಕ್ರಮ 🚨
24.07.2026 ರಂದು @JpnagarTrfPs ಠಾಣಾ ವ್ಯಾಪ್ತಿಯ ಜೆ.ಪಿ.ನಗರ 4ನೇ ಹಂತದ ಡಾಲರ್ಸ್ ಕಾಲೋನಿಯಲ್ಲಿ ವೀಲ್ಹಿಂಗ್ ಮಾಡುತ್ತಿದ್ದ ದ್ವಿಚಕ್ರ ವಾಹನ ಸವಾರನ ವಿರುದ್ಧ ಪ್ರಕರಣ ದಾಖಲಿಸಿ ಕಾನೂನು ಕ್ರಮ ಜರುಗಿಸಲಾಗಿದೆ.
🚦 ರಸ್ತೆ ನಿಮ್ಮ ಸಾಹಸ ಪ್ರದರ್ಶನಕ್ಕೆ ಅಲ್ಲ, ಸುರಕ್ಷಿತ ಸಂಚಾರಕ್ಕೆ.
ಈ ದಿನ ಸಂಚಾರ ದಕ್ಷಿಣ ವಿಭಾಗದಲ್ಲಿ “ಸಂಚಾರ ಸಂಪರ್ಕ ದಿವಸ” ಕಾರ್ಯಕ್ರಮವನ್ನು ಆಯೋಜಿಸಿ, ನಾಗರಿಕರಿಂದ ಸುಗಮ ಸಂಚಾರಕ್ಕೆ ಸಂಬಂಧಿಸಿದ ಸಲಹೆಗಳು, ಅಹವಾಲುಗಳು ಹಾಗೂ ಇತರೆ ವಿಷಯಗಳ ಕುರಿತು ಚರ್ಚಿಸಿ ವಿಚಾರ ವಿನಿಮಯ ಮಾಡಿಕೊಳ್ಳಲಾಯಿತು. ಸಾರ್ವಜನಿಕರ ಸಹಭಾಗಿತ್ವದಿಂದ ಉತ್ತಮ ಸಂಚಾರ ವ್ಯವಸ್ಥೆ ನಿರ್ಮಾಣಕ್ಕೆ ನಮ್ಮ ಬದ್ಧತೆ ಮುಂದುವರಿಯಲಿದೆ. 🚦
ಈ ದಿನ ಬಸವನಗುಡಿ ಸಂ. ಪೊ.ಠಾಣಾ ವ್ಯಾಪ್ತಿಯ ಶಾಲಾ ವಿದ್ಯಾರ್ಥಿಗಳಿಗೆ ರಸ್ತೆ ಸುರಕ್ಷತೆ/ಸಂಚಾರ ನಿಯಮಗಳ ಕುರಿತು ಅರಿವು ಮೂಡಿಸಿ,ತಮ್ಮ ಸುರಕ್ಷತೆಯನ್ನು ಕಾಪಾಡಿಕೊಳ್ಳುವುದರೊಂದಿಗೆ ಕುಟುಂಬ/ಸಮಾಜದಲ್ಲಿಯೂ ರಸ್ತೆ ಸುರಕ್ಷತೆಯ ಸಂದೇಶವನ್ನು ಹರಡುವ ಜವಾಬ್ದಾರಿಯುತ ನಾಗರಿಕರಾಗಿ ಬೆಳೆಯುವಂತೆ ಪ್ರೇರೇಪಿಸಲಾಯಿತ @blrcitytraffic
ಬೆಂಗಳೂರು ನಗರ ಪೊಲೀಸ್ ಆಯುಕ್ತರಾದ ಶ್ರೀ ಸೀಮಾಂತ್ ಕುಮಾರ್ ಸಿಂಗ್, ಐಪಿಎಸ್ ಅವರು ಇಂದು ಆರ್.ಟಿ. ನಗರದ ಎಚ್ಎಂಟಿ ಆಟದ ಮೈದಾನದಲ್ಲಿ ಉತ್ತರ ವಿಭಾಗ ಹಮ್ಮಿಕೊಂಡಿದ್ದ 'ಸ್ವತ್ತು ಪ್ರದರ್ಶನ ಕಾರ್ಯಕ್ರಮ'ದಲ್ಲಿ ಪತ್ತೆಯಾದ ಕಳವು ಮಾಲುಗಳನ್ನು ಅವುಗಳ ನೈಜ ವಾರಸುದಾರರಿಗೆ ಹಸ್ತಾಂತರಿಸಿದರು.
ಉತ್ತರ ವಿಭಾಗದ ಪೊಲೀಸರು ಹಗಲು ಮತ್ತು ರಾತ್ರಿ ಕನ್ನ ಕಳುವು ಪ್ರಕರಣಗಳು ಹಾಗೂ ವಾಹನ ಕಳ್ಳತನ ಸೇರಿದಂತೆ ಒಟ್ಟು 70 ಆಸ್ತಿ ಅಪರಾಧ ಪ್ರಕರಣಗಳನ್ನು ಯಶಸ್ವಿಯಾಗಿ ಪತ್ತೆಹಚ್ಚಿದ್ದು, 94 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ಇವರಿಂದ ಚಿನ್ನ ಮತ್ತು ವಜ್ರದ ಆಭರಣಗಳು, ಬೆಳ್ಳಿ ವಸ್ತುಗಳು, ವಾಹನಗಳು, ಮೊಬೈಲ್ ಫೋನ್ಗಳು, ಎಲೆಕ್ಟ್ರಾನಿಕ್ ಉಪಕರಣಗಳು, ಎಲ್ಪಿಜಿ ಸಿಲಿಂಡರ್ಗಳು, ಶ್ರೀಗಂಧ, ಸೀರೆಗಳು, ನಗದು ಹಾಗೂ ಇನ್ನಿತರ ಬೆಲೆಬಾಳುವ ವಸ್ತುಗಳು ಸೇರಿದಂತೆ ಸುಮಾರು ₹4.92 ಕೋಟಿ ಮೌಲ್ಯದ ಕಳವು ಮಾಲುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಈ ಯಶಸ್ವಿ ಕಾರ್ಯಾಚರಣೆಯು ನೊಂದವರಿಗೆ ನ್ಯಾಯ ಒದಗಿಸುವಲ್ಲಿ, ಕಳವು ಮಾಲುಗಳನ್ನು ಪತ್ತೆಹಚ್ಚುವಲ್ಲಿ ಹಾಗೂ ಸಾರ್ವಜನಿಕರಲ್ಲಿ ನಂಬಿಕೆಯನ್ನು ಬಲಪಡಿಸುವಲ್ಲಿ ಬೆಂಗಳೂರು ನಗರ ಪೊಲೀಸರ ನಿರಂತರ ಪ್ರಯತ್ನವನ್ನು ಪ್ರತಿಬಿಂಬಿಸುತ್ತದೆ.
Today, Shri Seemant Kumar Singh, IPS, Commissioner of Police, Bengaluru City, handed over recovered stolen properties to their rightful owners during the Property Display Programme held by the North Division at HMT Playground, R.T. Nagar.
The North Division Police successfully detected 70 property crime cases, including burglary and vehicle theft, leading to the arrest of 94 accused persons. Stolen property worth approximately ₹4.92 crore was recovered, including gold and diamond jewellery, silver articles, vehicles, mobile phones, electronics, LPG cylinders, sandalwood, sarees, cash, and other valuables.
This successful recovery reflects the relentless efforts of Bengaluru City Police in ensuring justice, recovering stolen property, and strengthening public trust.
#BengaluruCityPolice #NorthDivision #PropertyRecovery #JusticeDelivered #CitizenFirst
@CPBlr@seemantsingh96@DgpKarnataka@KarnatakaCops@CMofKarnataka@PriyankKharge@JointCPWest@DCPNorthBCP
ಈ ದಿನ ಸಂಚಾರ ಪೂರ್ವ ವಿಭಾಗದ ಎಲ್ಲಾ ಸಂಚಾರ ಪೊಲೀಸ್ ಠಾಣೆಗಳ ಪೊಲೀಸ್ ಇನ್ಸ್ ಪೆಕ್ಟರ್ ಮತ್ತು ಎ. ಸಿ. ಪಿ ರವರುಗಳಿಗೆ ಅಪರಾಧ ವಿಮರ್ಶನಾ ಸಭೆಯನ್ನು ಏರ್ಪಡಿಸಿ, ತನಿಖಾ ಹಂತದಲ್ಲಿರುವ ಪ್ರಕರಣಗಳನ್ನು ಕಾಲ ಮಿತಿಯೊಳಗೆ ವಿಲೇವಾರಿ ಮಾಡುವುದು, ವೀಲಿಂಗ್, ರೋಡ್ ರೇಜ್ ನಂತಹ ಪ್ರಕರಣಗಳಿಗೆ ಕಡಿವಾಣ ಹಾಕುವುದು, ಅಧಿಕಾರಿಗಳು/ಸಿಬ್ಬಂದಿಗಳ ಕುಂದುಕೊರತೆಗಳನ್ನು ಆಲಿಸುವುದು ಹಾಗೂ ತಮ್ಮ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ಜಂಕ್ಷನ್ ಗಳ ಅಭಿವೃದ್ಧಿ ಹಾಗೂ ಪೀಕ್ ಅವರ್ ನಲ್ಲಿ ವಾಹನ ದಟ್ಟಣೆ ಉಂಟಾಗುವ ಜಂಕ್ಷನ್ /ಸ್ಥಳಗಳಲ್ಲಿ ಠಾಣಾಧಿಕಾರಿಯವರು ಖುದ್ದಾಗಿ ಹಾಜರಿದ್ದು ಕರ್ತವ್ಯ ನಿರ್ವಹಿಸಲು ಹಾಗೂ ಸುಗಮ ಸಂಚಾರಕ್ಕೆ ಈಗಾಗಲೇ ಕೖಗೊಂಡಿರುವ ಕ್ರಮಗಳ ಜೊತೆಗೆ ಇನ್ನೂ ಹೆಚ್ಚಿನದಾಗಿ ಕೖಗೊಳ್ಳಬೇಕಾಗಿರುವ ಕ್ರಮಗಳ ಬಗ್ಗೆ ಚರ್ಚಿಸಿ ಸೂಕ್ತ ನಿರ್ದೇಶನ ನೀಡಲಾಯಿತು.
🪖 ಹೆಲ್ಮೆಟ್ ನಿಮ್ಮ ಎಲ್ಲಾ ಹವಾಮಾನದ ಸ್ನೇಹಿತ! ☀️🌧️
ಬಿಸಿಲು, ಮಳೆ ಹಾಗೂ ಅಪಘಾತದ ವೇಳೆ ಪ್ರಾಣಾಪಾಯದಿಂದ ನಿಮ್ಮನ್ನು ರಕ್ಷಿಸುವುದು ಹೆಲ್ಮೆಟ್.
ಪ್ರತಿ ಪ್ರಯಾಣದಲ್ಲೂ ಹೆಲ್ಮೆಟ್ ಧರಿಸಿ — ಸುರಕ್ಷಿತವಾಗಿ ಮನೆ ಸೇರಿ. 🚦
ಈ ದಿನ ಠಾಣಾ ಸರಹದ್ದಿನ 19ನೇ ಮುಖ್ಯರಸ್ತ ಜಂಕ್ಷನ್ ನಲ್ಲಿ ವಾಹನ ಸವಾರರಿಗೆ ಜಂಕ್ಷನ್ ಗಳಲ್ಲಿ ಸ್ಟಾಪ್ ಲೈನ್ ಹಿಂಭಾಗದಲ್ಲಿ ವಾಹನಗಳನ್ನು ನಿಲ್ಲಿಸುವಂತೆ ಹಾಗು ಕಡ್ಡಾಯವಾಗಿ ವಾಹನ ಸವಾರರು ಸುರಕ್ಷತೆಯ ದೃಷ್ಟಿಯಿಂದ ಐಎಸ್ಐ ಮಾರ್ಕ್ ನ ಪುಲ್ ಹೆಲ್ಮೆಟ್ ಗಳನ್ನು ಬಳಸುವಂತೆ ಅರಿವು ಮೂಡಿಸಲಾಯಿತು.
ಈ ದಿನ ಠಾಣಾ ಸರಹದ್ದಿನ 19ನೇ ಮುಖ್ಯರಸ್ತೆ ಜಂಕ್ಷನ ನಲ್ಲಿದ್ದ ಸಿಬ್ಬಂದಿಯವರು ವಾಹನ ಸವಾರರಿಗೆ ಸ್ಟಾಫ್ ಲೈನ್ ಹಿಂದೆ ವಾಹನವನ್ನುನಿಲ್ಲಿಸುವಂತೆ, ಐಎಸ್ಐ ಮಾರ್ಕ್ ನ ಫುಲ್ ಹೆಲ್ಮೆಟ್ ಬಳಸುವಂತೆ ಹಾಗು ಸೀಟ್ ಬೆಲ್ಟ್ ಧರಿಸಿ ವಾಹನ ಚಾಲಾಯಿಸುವಂತೆ ಅರಿವು ಮೂಡಿಸಿ ಸಂಚಾರ ನಿಯಮಗಳನ್ನು ಪಾಲನೆ ಮಾಡುವಂತೆ ಸೂಚಿಸಲಾಯಿತು
ಒಂದು ತಪ್ಪು...
ಒಂದು ಕ್ಷಣದ ನಿರ್ಲಕ್ಷ್ಯ...
ಇಡೀ ಜೀವನವನ್ನೇ ಬದಲಾಯಿಸಬಹುದು.ನಿಮ್ಮ ಸುರಕ್ಷತೆ ನಿಮ್ಮ ಕೈಯಲ್ಲಿದೆ.
ನೀವು ಮಾಡುವ ಸಂಚಾರ ನಿಯಮ ಉಲ್ಲಂಘನೆಯ ಪರಿಣಾಮ
ನಿಮ್ಮ ಕುಟುಂಬದ ಸಂತೋಷವನ್ನೇ ಕಸಿದುಕೊಳ್ಳಬಹುದು.ಎಚ್ಚರಿಕೆಯಿಂದ ವಾಹನ ಚಲಾಯಿಸಿ.
ಸಂಚಾರ ನಿಯಮ ಪಾಲಿಸಿ – ಸುರಕ್ಷಿತವಾಗಿರಿ.🚦
ಶಿಸ್ತಿನ ಚಾಲನೆ, ಸುರಕ್ಷಿತ ಪ್ರಯಾಣ ! 🛵🚗
ರಸ್ತೆಗಳಲ್ಲಿ ಸುಗಮ ಸಂಚಾರ ಕಾಯ್ದುಕೊಳ್ಳಲು ಸಂಚಾರ ನಿಯಮಗಳ ಪಾಲನೆ ಅತ್ಯಗತ್ಯ. ನಿಯಮಗಳನ್ನು ಗೌರವಿಸುವುದು ಕೇವಲ ಕರ್ತವ್ಯವಲ್ಲ, ನಮ್ಮ ಮತ್ತು ಇತರರ ಜೀವದ ರಕ್ಷಣೆ.
ನಿಮ್ಮ ಜವಾಬ್ದಾರಿಯನ್ನು ಅರಿಯಿರಿ, ಸುರಕ್ಷಿತವಾಗಿರಿ.
👉 ಸಂಚಾರ ನಿಯಮ ಪಾಲಿಸಿ – ಸುರಕ್ಷಿತವಾಗಿರಿ.
#TrafficSafety
ಜೆ.ಪಿ ನಗರ ಸಂಚಾರ ಪೊಲೀಸ್ ಠಾಣಾ ಸರಹದಿನಲ್ಲಿ ವಾಹನ ಚಾಲಕರಿಗೆ/ಸವಾರರಿಗೆ
''ಏಕಮುಖ ರಸ್ತೆಯಲ್ಲಿ ದಿಕ್ಕಿಗೆ ವಿರುದ್ಧ ಚಾಲನೆ ಮಾಡದಂತೆ,
"ವಾಹನ ಚಲಾಯಿಸುವಾಗ ಮೊಬೈಲ್ ಬಳಸದಂತೆ,
"ಮದ್ಯಪಾನ ಮಾಡಿ ವಾಹನ ಚಲಾಯಿಸದಂತೆ, ಹಾಗೂ ಇತರೆ ಸಂಚಾರ ನಿಯಮಗಳು ಪಾಲನೆ ಮಾಡುವಂತೆ ಅರಿವು ಮೂಡಿಸಲಾಯಿತು.
@acpsouthtrf@DCPSouthTrBCP@blrcitytraffic
ಶ್ರೀ.ಜಗನ್ನಾಥ ದೇವಸ್ಥಾನ ಅಗರ ರಥೋತ್ಸವದ ಸಂಬಂದ ಹೆಚ್ಚಿನ ಭಕ್ತಾಧಿಗಳು ಸೇರಿರುವುದರಿಂದ ಹೊರವರ್ತುಲ ರಸ್ತೆಯಲ್ಲಿ ವಾಹನ ದಟ್ಟಣೆ ಉಂಟಾಗಿದ್ದು, ವಾಹನ ಸವರಾರು ಬದಲಿ ಮಾರ್ಗವನ್ನು ಬಳಸಲು ಕೋರಲಾಗಿದೆ. ಹೆಚ್ಚಿನ ಅಧಿಕಾರಿ ಸಿಬ್ಬಂದಿಗಳನ್ನು ನಿಯೋಜಿಸಿಕೊಂಡು ಸುಗಮ ಸಂಚಾರ ನಿರ್ವಹಣೆ ಮಾಡಲಾಗುತ್ತಿರುತ್ತದೆ ಸಾರ್ವಜನಿಕರು ಸಹಕರಿಸಲು ಕೋರಲಾಗಿದೆ
ಈ ದಿನ @JnagarTr ಠಾಣಾ ವ್ಯಾಪ್ತಿಯ ಅರವಿಂದ ಜಂಕ್ಷನ್ನ ರಾಘವೇಂದ್ರ ಸ್ವಾಮಿ ಮಠದ ಸಮೀಪ ಗುರುವಾರದಂದು ಉಂಟಾಗುವ ಸಂಚಾರ ದಟ್ಟಣೆಯನ್ನು ಪರಿಶೀಲನೆ ನಡೆಸಿ ವೀಕ್ಷಿಸಲಾಯಿತು. ಸಂಚಾರ ಸುಗಮವಾಗಿರುವಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಸಿಬ್ಬಂದಿಗೆ ಸೂಕ್ತ ಸೂಚನೆಗಳನ್ನು ನೀಡಲಾಯಿತು.
ಫ್ರೇಜರ್ ಟೌನ್ ಸಂಚಾರ ಪೊಲೀಸ್ ಠಾಣೆಯ ವ್ಯಾಪ್ತಿಗೆ ಒಳಪಡುವ ನೇತಾಜಿ ರಸ್ತೆಗೆ 15/07/2026 ರಂದು ಭೇಟಿ ನೀಡಿ, ಆ ಪ್ರದೇಶದಲ್ಲಿನ ಪಾರ್ಕಿಂಗ್ (ವಾಹನ ನಿಲುಗಡೆ) ಸಮಸ್ಯೆಗಳನ್ನು ಮೌಲ್ಯಮಾಪನ ಮಾಡಲಾಯಿತು. ಪ್ರಸ್ತುತ ಇರುವ ಪಾರ್ಕಿಂಗ್ ಪರಿಸ್ಥಿತಿಯನ್ನು ಪರಿಶೀಲಿಸಲು, ಸಂಚಾರದ ಮೇಲೆ ಪರಿಣಾಮ ಬೀರುತ್ತಿರುವ ಸವಾಲುಗಳನ್ನು ಗುರುತಿಸಲು ಹಾಗೂ ಪಾರ್ಕಿಂಗ್ ನಿರ್ವಹಣೆಯನ್ನು ಸುಧಾರಿಸಲು, ದಟ್ಟಣೆಯನ್ನು ಕಡಿಮೆ ಮಾಡಲು ಮತ್ತು ಎಲ್ಲಾ ರಸ್ತೆ ಬಳಕೆದಾರರಿಗೆ ಸುಗಮ ಹಾಗೂ ಸುರಕ್ಷಿತ ಸಂಚಾರವನ್ನು ಖಚಿತಪಡಿಸಿಕೊಳ್ಳಲು ಸೂಕ್ತ ಕ್ರಮಗಳನ್ನು ಮೌಲ್ಯಮಾಪನ ಮಾಡುವತ್ತ ಈ ಭೇಟಿಯು ಗಮನ ಹರಿಸಿತ್ತು.
Visited Netaji Road, under the jurisdiction of Frazer Town Traffic Police Station, on 15/07/2026 to assess the parking issues in the area. The visit focused on reviewing the existing parking situation, identifying challenges affecting traffic movement, and evaluating suitable measures to improve parking management, reduce congestion, and ensure smoother and safer movement for all road users.
#TrafficManagement #RoadSafety #BengaluruTraffic #NammaBengaluru #PublicService