ಪ್ರತಿ ವರ್ಷ ಫೆ4ರಂದು 'ವಿಶ್ವ ಕ್ಯಾನ್ಸರ್ ದಿನ'ವನ್ನಾಗಿ ವಿಶ್ವ ಸಂಸ್ಥೆ ಘೋಷಿಸಿದೆ. ಕ್ಯಾನ್ಸರ್ ಬಗೆಗೆ ಸಾರ್ವಜನಿಕರಲ್ಲಿನ ತಪ್ಪು ಕಲ್ಪನೆಗಳ ವಿರುದ್ಧ ಜಾಗೃತಿ ಮೂಡಿಸುವುದು ಈ ದಿನದ ಉದ್ದೇಶವಾಗಿದೆ.
ಸರಿಯಾದ ಆಹಾರ ಕ್ರಮ, ಸದೃಢ ಆತ್ಮವಿಶ್ವಾಸದಿಂದ ಈ ಕಾಯಿಲೆಯನ್ನು ಮೆಟ್ಟಿ ನಿಲ್ಲಬಹುದು. ಕ್ಯಾನ್ಸರ್ ಗೆದ್ದು ಗುಣಮುಖರಾಗಿರುವವರು ನಮ್ಮ ಸುತ್ತಮುತ್ತಲು ಬಹಳಷ್ಟು ಜನರಿದ್ದಾರೆ. ಇವರ ಯಶೋಗಾಥೆ ಎಲ್ಲರಿಗೂ ಪ್ರೇರಣೆಯಾಗಲಿ. ಕ್ಯಾನ್ಸರ್ ಮುಕ್ತ ಭಾರತದ ಕನಸು ನನಸಾಗಲಿ.
#WorldCancerDay
ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ಮುನ್ನೆಚ್ಚರಿಕೆ ವಹಿಸಲು ಸೂಚನೆ
#ವಿಜಯಪುರಮಹಾನಗರಪಾಲಿಕೆ ಮೊದಲ ಸಾಮಾನ್ಯ ಸಭೆಯಲ್ಲಿ ಪಾಲ್ಗೊಂಡು ಪಾಲಿಕೆಯ ಸದಸ್ಯರಿಗೆ ಅಭಿನಂದನೆ ಸಲ್ಲಿಸಿ, ಮಾತನಾಡಿದೆ.
ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಸರ್ಕಾರ ದೂರದೃಷ್ಟಿ ಯೋಜನೆಗಳನ್ನು ರೂಪಿಸುತ್ತಿದೆ. ತಕ್ಷಣದಲ್ಲಿ ಎದುರಾಗಲಿರುವ ಬೇಸಿಗೆ ದಿನಗಳನ್ನು ಗಮನದಲ್ಲಿರಿಸಿಕೊಂಡು, ನೀರಿನ ಪೂರೈಕೆಗೆ ಅಗತ್ಯವಾದ ತುರ್ತು ಕ್ರಮಗಳನ್ನು ಕೈಗೊಳ್ಳುವಂತೆ ನಿರ್ದೇಶನ ನೀಡಿದೆ.
ಸಚಿವನಾಗಿದ್ದಾಗ ಈ ಹಿಂದೆ ಸ್ವಚ್ಛಗೊಳಿಸಿರುವ ಬಾವಡಿಗಳು, ಬಾವಿಗಳ ನೀರನ್ನೂ ಸಹ ಪೂರೈಸುವಂತೆ ಸೂಚಿಸಿರುವೆ. ಅಗತ್ಯವಿದ್ದರೆ ಪ್ರತಿ ವಾರ್ಡ್ ನಲ್ಲೂ ಬೋರ್ ವೆಲ್ ಕೊರೆಸುವುದರೊಂದಿಗೆ, ಖಾಸಗಿ ಬೋರ್ ವೆಲ್ ಗಳನ್ನು ಸಹ ಬಾಡಿಗೆ ಪಡೆದು ನಗರದಲ್ಲಿ ನೀರಿನ ಸಮಸ್ಯೆ ಎದುರಾಗದಂತೆ ನಿಗಾವಹಿಸಲು ಸೂಚಿಸಿರುವೆ. ಈ ಕುರಿತು 10ದಿನಗಳಲ್ಲಿ ಮತ್ತೊಮ್ಮೆ ಪ್ರಗತಿ ಪರಿಶೀಲನೆ ನಡೆಸುವೆ.
ನೀರಿನ ಸಮಸ್ಯೆಯ ಜೊತೆ ಜೊತೆಗೆ ನಗರದ ಸಮಗ್ರ ಅಭಿವೃದ್ಧಿ ಕುರಿತಂತೆಯೂ ಗಮನ ಹರಿಸುವಂತೆ ಪಾಲಿಕೆಯ ಸದಸ್ಯರಿಗೆ, ಅಧಿಕಾರಿಗಳಿಗೆ ನಿರ್ದೇಶನ ನೀಡಿರುವೆ.
ಪಾಲಿಕೆಯ ಸದಸ್ಯರು ಇಂದು ಹೃತ್ಪೂರ್ವಕವಾಗಿ ಸನ್ಮಾನಿಸಿದರು.
ವಿಶ್ವಬ್ಯಾಂಕ್ ನೆರವಿನ ರಿವಾರ್ಡ್ ಯೋಜನೆಗೆ ಚಾಲನೆ
ವಿಜಯಪುರ ಜಿಲ್ಲೆ ಹಾಗೂ ತಾಲ್ಲೂಕಿನ ಹೊನ್ನುಟಗಿ ಗ್ರಾಮದಲ್ಲಿ ಕೃಷಿ ಇಲಾಖೆ, ಜಲಾನಯನ ಅಭಿವೃದ್ದಿ ಇಲಾಖೆ ಹಾಗೂ ವಿಜಯಪುರ ಜಿಲ್ಲಾ ಪಂಚಾಯತ್ ಇವರ ಸಹಯೋಗದಲ್ಲಿ ವಿಶ್ವಬ್ಯಾಂಕ್ ನೆರವಿನ ರಿವಾರ್ಡ್ ಯೋಜನೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದೆ.
ಬರಗಾಲ ನಿವಾರಣೆಗೆ ಮಣ್ಣು ಮತ್ತು ನೀರಿನ ಸಂರಕ್ಷಣೆ ಅತ್ಯಗತ್ಯವಾಗಿದ್ದು, ಈ ನಿಟ್ಟಿನಲ್ಲಿ ಕೃಷಿಯ ಸುಸ್ಥಿರತೆಗಾಗಿ ನವೀನ ಅಭಿವೃದ್ದಿಯ ಮೂಲಕ ಒಟ್ಟು 6,166.08 ಹೆಕ್ಟೇರ್ ಜಲಾನಯನ ಪ್ರದೇಶವನ್ನು ವಿಶ್ವ ಬ್ಯಾಂಕ್ ನೆರವಿನಿಂದ ಪುನಶ್ಚೇತನಗೊಳಿಸಲಾಗುತ್ತಿದೆ. ಈ ಯೋಜನೆಯಿಂದಾಗಿ ಹೊನ್ನುಟಗಿ, ಹಡಗಲಿ, ಕುಮಟಗಿ, ಮದಭಾವಿ ಹಾಗೂ ಆಹೇರಿ ಗ್ರಾಮ ಪಂಚಾಯತಿಗಳ ರೈತರಿಗೆ ಅನುಕೂಲವಾಗಲಿದೆ.
ಇಂದಿನ ಕಾರ್ಯಕ್ರಮದಲ್ಲಿ ನಾಗಠಾಣಾ ಶಾಸಕರಾದ ಶ್ರೀ ವಿಠ್ಠಲ ಕಟದಕೊಂಡ, ZP CEO ಶ್ರೀ ರಿಷಿ ಆನಂದ, ಕೃಷಿ ಇಲಾಖೆ ಜಂಟಿ ನಿರ್ದೇಶಕರಾದ ಶ್ರೀ ರಾಜಶೇಖರ ವಿಲಿಯಮ್ಸ್, ಸಂಬಂಧಿಸಿದ ವಿವಿಧ ಗ್ರಾಮ ಪಂಚಾಯತಿಯ ಅಧ್ಯಕ್ಷರು, ರೈತರು, ಸಾರ್ವಜನಿಕರು ಉಪಸ್ಥಿತರಿದ್ದರು.
ನಿನ್ನೆದಿನ #ವಿಜಯಪುರಮಹಾನಗರಪಾಲಿಕೆ ಯ ಮೊದಲ ಸಾಮಾನ್ಯ ಸಭೆಯಲ್ಲಿ ಪಾಲ್ಗೊಂಡು, ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರದಂತೆ ಮುನ್ನೆಚ್ಚರಿಕೆ ವಹಿಸುವಂತೆ ಸೂಚಿಸಿದೆ. ಆ ಕುರಿತಂತೆ ಇಂದಿನ ಮಾಧ್ಯಮಗಳಲ್ಲಿ ಮೂಡಿ ಬಂದಿರುವ ವರದಿ ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ಧೇನೆ...
ರೈತರ ಅಭಿಮಾನಕ್ಕೆ ಆಭಾರಿ
ವಿಶ್ವ ಬ್ಯಾಂಕ್ ನೆರವಿನ ರಿವಾರ್ಡ್ ಯೋಜನೆಗಳಿಗೆ ನಿನ್ನೆದಿನ ಹೊನ್ನುಟುಗಿ ಗ್ರಾಮದಲ್ಲಿ ಚಾಲನೆ ನೀಡುವ ವೇಳೆ ಅನುಷ್ಠಾನಗೊಂಡಿರುವ ನೀರಾವರಿ ಯೋಜನೆಗಳನ್ನು ಕೃತಜ್ಞತೆಯಿಂದ ಸ್ಮರಿಸಿ, ಈ ಭಾಗದ ರೈತರು ದ್ರಾಕ್ಷಿ, ತೆಂಗು, ಪೇರಲ, ಬಾಳೆಗೊನೆ, ಕಬ್ಬು, ಟೊಮೊಟೋ ನೀಡಿ, ತಮ್ಮ ಅಭಿಮಾನ ವ್ಯಕ್ತಪಡಿಸಿದರು. ಅವರ ಅಭಿಮಾನಕ್ಕೆ ಹೃತ್ಪೂರ್ವಕ ಧನ್ಯವಾದಗಳು. ಇನ್ನೂ ಹೆಚ್ಚಿನ ರೀತಿಯಲ್ಲಿ ಅವರು ಅಭಿವೃದ್ಧಿ ಹೊಂದಲಿ ಎಂಬ ಆಶಯ ನನ್ನದು.
ಜನಪ್ರತಿನಿಧಿಯಾಗಿ ರೂಪಿಸಿದ ಯೋಜನೆಗಳು ಹಾಗೂ ಅಭಿವೃದ್ಧಿ ಕಾರ್ಯಗಳು ನಮ್ಮ ರೈತರನ್ನು ತಲುಪುತ್ತಿದ್ದು, ಅವರ ಬದುಕು ಹಸನಾಗುತ್ತಿರುವುದು ನನಗೆ ಸಂತೋಷ ತಂದಿದೆ.
ರೈತರು ಅಭಿವೃದ್ಧಿಯಾದರೆ ದೇಶವೇ ಅಭಿವೃದ್ಧಿಯಾದಂತೆ!
"Shri Jagadeesh Shettar is a senior political figure. He experienced humiliation in the BJP and later joined our party. Despite his loss, we gave him a well-deserved position as an MLC and assured further support. He had a promising future with us. The reason behind his decision or the pressure he encountered remain unclear. While we extended due respect, this decision doesn't align with someone of his caliber. This decision won't impact our party."
ರಾಜ್ಯದ ಯುವ ಜನತೆಗೆ ಉದ್ಯೋಗ ದೊರಕಿಸಿಕೊಡುವ ನಿಟ್ಟಿನಲ್ಲಿ ಸಚಿವ ಸಂಪುಟದ ವತಿಯಿಂದ ಡಾ. @S_PrakashPatil ಅವರ ಅಧ್ಯಕ್ಷತೆಯಲ್ಲಿ ‘ಉದ್ಯೋಗ ಮೇಳ’ ಸಮಿತಿ ರಚಿಸಲಾಗಿದ್ದು, ಈದಿನ ಸಮಿತಿಯ ಸಭೆಯಲ್ಲಿ ಪಾಲ್ಗೊಂಡಿದ್ದೆ. ಜಿಲ್ಲಾ/ವಲಯ ಹಾಗೂ ರಾಜ್ಯಮಟ್ಟದಲ್ಲಿ ಉದ್ಯೋಗ ಮೇಳ ಹಮ್ಮಿಕೊಳ್ಳುವ ಕುರಿತಂತೆ ಚರ್ಚಿಸಲಾಯಿತು. ಸಚಿವರಾದ ಶ್ರೀ @dineshgrao ಶ್ರೀ @drmcsudhakar ಶ್ರೀ @BNagendraINC ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
#ಉದ್ಯೋಗಮೇಳ
ಸಮಸ್ತ ಭಾರತೀಯರಿಗೆ 75ನೇ ಗಣರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು.
26ನೇ ಜನವರಿ 1950 ಸಂವಿಧಾನವನ್ನು ಅಂಗೀಕರಿಸಿ, ಶಾಸನವನ್ನಾಗಿ ಒಪ್ಪಿಕೊಂಡ ದಿನ. ಬಲಿಷ್ಠ ಪ್ರಜಾಪ್ರಭುತ್ವ ವ್ಯವಸ್ಥೆಗೆ ನಮ್ಮ ಶ್ರೇಷ್ಠ ಸಂವಿಧಾನವೇ ಆಧಾರ. ಅದರ ಸದಾಶಯಗಳನ್ನು ಪಾಲಿಸುವ ಜೊತೆಗೆ ಭಾರತದ ಸ್ವಾತಂತ್ರ್ಯ ಮತ್ತು ಸಂವಿಧಾನಕ್ಕಾಗಿ ಶ್ರಮಿಸಿದ ಎಲ್ಲ ಮಹನೀಯರಿಗೆ ಗೌರವ ಸಲ್ಲಿಸೋಣ.
#RepublicDay2024
After hoisting the flag at the district-level 75th Republic Day celebrations today at B R Ambedkar Stadium in Vijayapura, I addressed all our people.
In homage to the esteemed saint Parama Pujya Sri Siddeshwara Swamiji's legacy, I proposed impactful projects for the Vijayapur district, including the development of a 1000-acre forest, establishment of a science research center, creation of industries for job opportunities, construction of a world-class stadium, and enhancement of quality education in schools and colleges. The event not only recognized achievers but also featured a captivating cultural program by school children. The distinguished gathering included notable figures such as MP Shri Ramesh Jigajinagi, DC Shri T. Bhubalan, SP Shri Rishikesh Sonavane, ZP CEO Shri Rishi Anand, and thousands of citizens, contributing to the resounding success of the celebration.
#ಬಬಲೇಶ್ವರ ಮತ ಕ್ಷೇತ್ರದ #ಅರ್ಜುಣಗಿ ಗ್ರಾಮದಲ್ಲಿ ಶ್ರೀ ಗುರಪ್ಪ ಪರಪ್ಪ ಬಡಿಗೇರ ಅವರು 'ಮೌನೇಶ್ವರ ಮನುಕ ಕಲರ ಶಾರ್ಟಿಂಗ್ ಮಶೀನ್' ಘಟಕವನ್ನು ಸ್ಥಾಪಿಸಿದ್ದು, ಇದರ ಉದ್ಘಾಟನೆ ನೆರವೇರಿಸಿ, ಶುಭಹಾರೈಸಿದೆ. ಇಂತಹದ್ದೊಂದು ಘಟಕ ಈ ಭಾಗದಲ್ಲಿ ಅಗತ್ಯವಿದ್ದು, ಆ ಕೊರತೆಯನ್ನು ಬಡಿಗೇರ ಕುಟುಂಬದವರು ನೀಗಿಸಿದ್ದಾರೆ. ದ್ರಾಕ್ಷಿ ಬೆಳೆಗಾರರಿಗೆ, ಮಾರಾಟಗಾರರಿಗೆ ಅನುಕೂಲವಾಗಲಿದೆ. ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಬಬಲಾದಿ ಮಠದ ಪೂಜ್ಯ ಶ್ರೀ ಶಿವರುದ್ರಯ್ಯ ಅವರು ವಹಿಸಿದ್ದರು. ಗುರು-ಹಿರಿಯರು, ತಾಯಂದಿರು ಗ್ರಾಮದ ಜನ ಇಂದಿನ ಸಭೆಯಲ್ಲಿ ಉಪಸ್ಥಿತರಿದ್ದರು.
ವಿಜಯಪುರ ಜಿಲ್ಲಾ ಆಡಳಿತದಿಂದ ನಗರದ ಡಾ. ಬಿ.ಆರ್. ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಆಯೋಜನೆಗೊಂಡಿದ್ದ #75ನೇಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಧ್ವಜಾರೋಹಣ ನೆರವೇರಿಸಿ, ಗೌರವ ವಂದನೆ ಸ್ವೀಕರಿಸಿದ ಬಳಿಕ ಮಾತನಾಡಿದೆ. ಆ ಕುರಿತು ಇಂದಿನ ಮಾಧ್ಯಮಗಳಲ್ಲಿ ಮೂಡಿ ಬಂದಿರುವ ವರದಿಗಳು ಇಲ್ಲಿವೆ…
ಮಹಾದಾನಿ ಸಿರಸಂಗಿ ಶ್ರೀ ಲಿಂಗರಾಜ ದೇಸಾಯಿ ಅವರ 163ನೇ ಜಯಂತ್ಯೋತ್ಸವ
ಪೂಜ್ಯ ಜಗದ್ಗುರುಗಳಾದ ಡಾ. ಸಾರಂಗಧರ ದೇಶಿಕೇಂದ್ರ ಮಹಾಸ್ವಾಮಿಗಳು, ಪೂಜ್ಯ ಶ್ರೀ ಶಿವರಾಯ ಒಡೆಯರ್, ಅವರು ಸೇರಿದಂತೆ ಗುರು-ಹಿರಿಯರ ಘನ ಉಪಸ್ಥಿತಿಯಲ್ಲಿ ಕಲಬುರಗಿ ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಜರುಗಿದ ತ್ಯಾಗವೀರ ಸಿರಸಂಗಿ ಶ್ರೀ ಲಿಂಗರಾಜ ದೇಸಾಯಿ ಅವರ 163ನೇ ಜಯಂತಿ ಉತ್ಸವದಲ್ಲಿ ಪಾಲ್ಗೊಂಡಿದ್ದೆ.
ಶ್ರೀ ಸಿರಸಂಗಿ ಲಿಂಗರಾಜರು ಲಿಂಗಾಯತ ಸಮಾಜದ ಸಾಮಾಜಿಕ, ಧಾರ್ಮಿಕ ಮತ್ತು ಶೈಕ್ಷಣಿಕ ಅಭಿವೃದ್ಧಿಗಾಗಿ ಪೂಜ್ಯ ಹಾನಗಲ್ಲ ಕುಮಾರಸ್ವಾಮಿಗಳ ಮಾರ್ಗದರ್ಶನದಲ್ಲಿ ಅಖಿಲ ಭಾರತ ವೀರಶೈವ ಮಹಾಸಭೆಯನ್ನು ಸ್ಥಾಪಿಸಿ, ಸಮಾಜದ ಅಭಿವೃದ್ಧಿಗೆ ಶ್ರಮಿಸಿದ್ದು ಸೇರಿದಂತೆ ನೀರಾವರಿ ಹಾಗೂ ಕೃಷಿ ಕ್ಷೇತ್ರಗಳಿಗೆ ಅವರು ನೀಡಿದ ಕೊಡುಗೆಗಳನ್ನು ಭಕ್ತಿಯಿಂದ ಸ್ಮರಿಸಿದೆ.
ಸಚಿವ ಸಂಪುಟದ ಸಹೋದ್ಯೋಗಿಗಳಾದ ಶ್ರೀ ಈಶ್ವರ್ ಖಂಡ್ರೆ, ಶರಣಬಸಪ್ಪ ದರ್ಶನಾಪೂರ, ಶಾಸಕರಾದ ಶ್ರೀ ಅಲ್ಲಮಪ್ರಭು ಪಾಟೀಲ, M.Y. ಪಾಟೀಲ, ಡಾ. ಅಜಯ್ ಸಿಂಗ್ ಸಮಾಜದ ಬಂಧುಗಳು, ಸಾರ್ವಜನಿಕರು ಹಾಜರಿದ್ದು, ಸಮಾರಂಭವನ್ನು ಯಶಸ್ವಿಗೊಳಿಸಿದರು.
@eshwar_khandre@allamprabupatil@SBDarshanapur@Dr_Ajay_Singh
ಕಲಬುರಗಿ ಜಿಲ್ಲೆ ಅಫಜಲಪುರ ತಾಲೂಕಿನ ಪುರಾಣ ಹಾಗೂ ಇತಿಹಾಸ ಪ್ರಸಿದ್ಧ ಕ್ಷೇತ್ರವಾದ ಗಾಣಗಾಪುರದ ಶ್ರೀ ದತ್ತಾತ್ರೇಯ ಸ್ವಾಮಿ ದೇವಸ್ಥಾನಕ್ಕೆ ಭೇಟಿನೀಡಿ, ದೇವರ ದರ್ಶನ ಪಡೆದು, ನಾಡಿನ ಸಮಸ್ತ ಜನತೆಯ ಒಳಿತು ಬಯಸಿ ಪ್ರಾರ್ಥನೆ ಸಲ್ಲಿಸಿದೆ. ಇಲ್ಲಿಗೆ ಆಗಮಿಸಿ, ಪೂಜಾ ಕಾರ್ಯಗಳಲ್ಲಿ ತೊಡಗಿಕೊಂಡಿದ್ದು ಹೊಸ ಉತ್ಸಾಹ ತಂದಿದೆ. ನಮ್ಮೆಲ್ಲ ಜನರಿಗೂ ದೈವಾನುಗ್ರಹವಿರಲಿ.