ವಿಷಯ: ಪೊಲೀಸ್ ಕಾನ್ಸ್ಟೇಬಲ್ ದೈಹಿಕ ಪರೀಕ್ಷೆಗೆ ಹಾಜರಾಗಲು ಸಾಧ್ಯವಾಗದ ಅಭ್ಯರ್ಥಿಗಳಿಗೆ ಪರ್ಯಾಯ ದಿನಾಂಕದಲ್ಲಿ ಮತ್ತೊಂದು ಅವಕಾಶ ನೀಡುವ ಕುರಿತು ಮನವಿ @PriyankKharge
ಮಾನ್ಯರೇ,
ಪೊಲೀಸ್ ಕಾನ್ಸ್ಟೇಬಲ್ ನೇಮಕಾತಿಯ ಲಿಖಿತ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ದೈಹಿಕ ಪರೀಕ್ಷೆಗೆ ಅರ್ಹರಾಗಿರುವ ಕೆಲವು ಅಭ್ಯರ್ಥಿಗಳಿಗೆ ಸೆಪ್ಟೆಂಬರ್ 29 ಹಾ��ೂ ಅಕ್ಟೋಬರ್ 2 ಮತ್ತು 4 ರಂದು ದೈಹಿಕ ಪರೀಕ್ಷೆ ನಿಗದಿಯಾಗಿದೆ.
ಇದೇ ಅವಧಿಯಲ್ಲಿ ಹಾರ್ಟಿಕಲ್ಚರ್, ಲ್ಯಾಂಡ್ ಸರ್ವೇಯರ್ ಹಾಗೂ ವಿಲೇಜ್ ಅಕೌಂಟೆಂಟ್ ಸೇರಿದಂತೆ ವಿವಿಧ ನೇಮಕಾತಿ ಪರೀಕ್ಷೆಗಳು ನಡೆಯುತ್ತಿರುವುದರಿಂದ, ಎರಡೂ ನೇಮಕಾತಿಗಳಿಗೆ ಅರ್ಹರಾಗಿರುವ ಅಭ್ಯರ್ಥಿಗಳಿಗೆ ಒಂದೇ ಸಮಯದಲ್ಲಿ ಪರೀಕ್ಷೆ/ದೈಹಿಕ ಪರೀಕ್ಷೆಗೆ ಹಾಜರಾಗುವುದು ಸಾಧ್ಯವಾಗುತ್ತಿಲ್ಲ.
ಈ ಅಭ್ಯರ್ಥಿಗಳು ಈಗಾಗಲೇ ಪೊಲೀಸ್ ಕಾನ್ಸ್ಟೇಬಲ್ ಲಿಖಿತ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ದೈಹಿಕ ಪರೀಕ್ಷೆಗೆ ಅರ್ಹತೆ ಪಡೆದಿರುವುದರಿಂದ, ದಿನಾಂಕಗಳ ಸಂಘರ್ಷದ ಕಾರಣಕ್ಕೆ ಅವರ ಅವಕಾಶ ಕೈತಪ್ಪಬಾರದು.
ಆದ್ದರಿಂದ ಇಂತಹ ಅಭ್ಯರ್ಥಿಗಳ ಪರಿಸ್ಥಿತಿಯನ್ನು ಮಾನವೀಯವಾಗಿ ಪರಿಗಣಿಸಿ, ಸಂಬಂಧಪಟ್ಟ ಪರೀಕ್ಷೆಯ ಪ್ರವೇಶ ಪತ್ರ ಅಥವಾ ಸೂಕ್ತ ದಾಖಲೆ ಸಲ್ಲಿಸುವ ಅಭ್ಯರ್ಥಿಗಳಿಗೆ ಪೊಲೀಸ್ ಕಾನ್ಸ್ಟೇಬಲ್ ದೈಹಿಕ ಪರೀಕ್ಷೆಗೆ ಪರ್ಯಾಯ ದಿನಾಂಕದಲ್ಲಿ ಮತ್ತೊಂದು ಅವಕಾಶ ನೀಡಬೇಕೆಂದು ವಿನಮ್ರವಾಗಿ ಮನವಿ ಮಾಡುತ್ತೇವೆ.
ಧನ್ಯವಾದಗಳು.
ಕಾಂತಕುಮಾರ್ ಸರ್
ರಾಜ್ಯಾಧ್ಯಕ್ಷರು, AKSSA
ಮಾನ್ಯ ಮುಖ್ಯಮಂತ್ರಿ @siddaramaiah ಅವ���ನ್ನು ಇಂದು ಮತ್ತೆ ಭೇಟಿ ಮಾಡಿ ಕೆಪಿಎಸ್ ಸಿ ನಡೆಸಿದ ಕೆಎಎಸ್ ಪರೀಕ್ಷೆಯಲ್ಲಿ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ಆಗಿರುವ ಅನ್ಯಾಯವನ್ನು ವಿವರಿಸಿದೆ.
ಇಂಗ್ಲಿಷ್ ಮಾಧ್ಯಮದಲ್ಲಿ ಪರೀಕ್ಷೆ ಬರೆದವರೂ ಕನ್ನಡದ ಮಕ್ಕಳೇ ಗೌಡ್ರೇ, ಈಗ ಮರು ಅಧಿಸೂಚನೆ ಮಾಡಿದರೆ ಅವರಿಗೆ ಅನ್ಯಾಯವಾಗೋದಿಲ್ವಾ ಎಂದು ಹಿರಿಯ ಅಧಿಕಾರಿಯೊಬ್ಬರು ಪ್ರಶ್ನಿಸಿದರು. ನಿಜ, ಅವರೂ ಕನ್ನಡದ ಮಕ್ಕಳೇ ಇರಬಹುದು. ಇಂಗ್ಲಿಷ್ ಮಾಧ್ಯಮದವರಿಗೆ ಸರಿಯಾದ ಪ್ರಶ್ನೆಪತ್ರಿಕೆ, ಕನ್ನಡ ಮಾಧ್ಯಮದವರಿಗೆ ತಪ್ಪುತಪ್ಪಾದ ಪ್ರಶ್ನೆ ಪತ್ರಿಕೆ ಕೊಡುವುದು ಎಷ್ಟು ನ್ಯಾಯ ಎಂದು ಹೇಳಿದೆ. ಕನ್ನಡ ಮಾಧ್ಯಮದವರೇನು ಪಾಪ ಮಾಡಿದ್ದರು? ಅವರಿಗೆ ಯಾಕೆ ಶಿಕ್ಷೆ ಎಂದು ಪ್ರಶ್ನಿಸಿದೆ. ಹೀಗಾದರೆ ಮುಂದೆ ಕನ್ನಡ ಮಾಧ್ಯಮದಲ್ಲಿ ಯಾರು ಓದುತ್ತಾರೆ ಎಂದು ಕೇಳಿದೆ.
ಮುಖ್ಯಮಂತ್ರಿಗಳು ತಾಳ್ಮೆಯಿ���ದ ನನ್ನ ಮಾತುಗಳನ್ನು ಕೇಳಿದರು. ನಾಳೆ ಕೆಪಿಎಸ್ ಸಿ ಅಧಿಕಾರಿಗಳನ್ನು ಕರೆಯಿಸಿ ಮಾತನಾಡುವುದಾಗಿ ಹೇಳಿದ್ದಾರೆ. ಅವರು ಸೂಕ್ತ ನಿರ್ಧಾರ ತೆಗೆದುಕೊಂಡು ಅನ್ಯಾಯಕ್ಕೆ ಒಳಗಾದ ಕನ್ನಡ ಮಾಧ್ಯಮ ಅಭ್ಯರ್ಥಿಗಳಿಗೆ ನ್ಯಾಯ ಒದಗಿಸಲಿ ಎಂಬುದು ಆಶಯ.
ಕೆಪಿಎಸ್ ಸಿಗೆ ಸಾವಿರಾರು ಕರವೇ ಕಾರ್ಯಕರ್ತರಿಂದ ಮುತ್ತಿಗೆಗೆ ತೀರ್ಮಾನ
ಇಂದು ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯ ಮುಖಂಡರು, ಬೆಂಗಳೂರು ನಗರ ಪದಾಧಿಕಾರಿಗಳ ತುರ್ತು ಸಭೆ ಇಂದು ನಡೆಯಿತು. ಬಹಳ ಮುಖ್ಯವಾಗಿ
ಕೆಪಿಎಸ್ ಸಿ ನಡೆಸಿದ ಕೆಎಎಸ್ ಪರೀಕ್ಷೆಗಳಲ್ಲಿ ಕನ್ನಡ ಮಾಧ್ಯಮದ ಅಭ್ಯರ್ಥಿಗಳಿಗೆ ಆಗಿರುವ ಅನ್ಯಾಯದ ಹಿನ್ನೆಲೆಯಲ್ಲಿ ಕರವೇ ಸಂಘಟಿಸಿರುವ ಚಳವಳಿಯನ್ನು ತೀವ್ರಗೊಳಿಸುವ ಕುರಿತು ಚರ್ಚೆ ನಡೆಯಿತು.
ಫೆ.18ರಂದು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಬೃಹತ್ ಹೋರಾಟ ನಡೆಸಿದ್ದೆವು. ಚಳವಳಿಯ ಸಂದರ್ಭದಲ್ಲಿ ಮಾನ್ಯ ಮುಖ್ಯಮಂತ್ರಿ @siddaramaiah ಸಿದ್ಧರಾಮಯ್ಯನವರನ್ನು ಕರವೇ ನಿಯೋಗ ಭೇಟಿ ನ���ಡಿ ಆಗಿರುವ ಅನ್ಯಾಯವನ್ನು ಬಿಡಿಸಿ ಹೇಳಿತ್ತು. ಈ ಸಂದರ್ಭದಲ್ಲಿ ನಮ್ಮ ಚಳವಳಿಗೆ ಸ್ಪಂದಿಸಿದ ಮುಖ್ಯಮಂತ್ರಿಗಳು ಎರಡು ದಿನಗಳಲ್ಲಿ ಕೆಪಿಎಸ್ ಸಿ ಅಧ್ಯಕ್ಷರ ಮತ್ತು ಅಧಿಕಾರಿಗಳನ್ನು ಕರೆಯಿಸಿ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳುವುದಾಗಿ ಹೇಳಿದ್ದರು.
ಆದರೆ ನಾಲ್ಕು ದಿನಗಳು ಕಳೆದರೂ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ನ್ಯಾಯ ಕೊಡುವ ಕುರಿತು ಸ್ವತಃ ಮುಖ್ಯಮಂತ್ರಿಗಳಾಗಲೀ, ಕೆಪಿಎಸ್ ಸಿಯಾಗಲೇ ಒಂದೇ ಒಂದು ಮಾತು ಹೇಳಿಲ್ಲ. ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಆಗಿರುವ ಅನ್ಯಾಯಕ್ಕೆ ಯಾರೂ ಸ್ಪಂದಿಸುವ ಹಾಗೆ ಕಾಣುತ್ತಿಲ್ಲ.
ನಮ್ಮ ಶಾಂತಿಯುತ ಹೋರಾಟಕ್ಕೆ ಸರ್ಕಾರ, ಕೆಪಿಎಸ್ ಸಿ ಸ್ಪಂದಿಸುತ್ತಿಲ್ಲ. ಹೀಗಾಗಿ ನಾವು ಅನಿವಾರ್ಯವಾಗಿ ತೀವ್ರ ಸ್ವರೂಪದ ಹೋರಾಟಕ್ಕೆ ಕೈ ಹಾಕಬೇಕಾಗಿದೆ. ಚಳವಳಿಯ ಸ್ವರೂಪದ ಕುರಿತು ಇಂದಿನ ಸಭೆಯಲ್ಲಿ ಚರ್ಚಿಸಲಾಯಿತು. ಚರ್ಚೆಯ ನಂತರ ಬೆಂಗಳೂರು ಮತ್ತು ಸುತ್ತಮುತ್ತಲಿನ ಜಿಲ್ಲೆಗಳ ಕರವೇ ಕಾರ್ಯಕರ್ತರು ಮತ್ತು ಸಾವಿರಾರು ವಿದ್ಯಾರ್ಥಿಗಳು ಕೆ.ಪಿ.ಎಸ್.ಸಿ. ಕಚೇರಿಗೆ ಮುತ್ತಿಗೆ ಹಾಕುವ ನಿರ್ಧಾರ ಕೈಗೊಳ್ಳಲಾಯಿತು. ಸರ್ಕಾರ ಮತ್ತು ಕೆಪಿಎಸ್ ಸಿ ನಮ್ಮ ಮುಂದಿನ ಹೋರಾಟಗಳ ಆಗುಹೋಗುಗಳಿಗೆ ಜವಾಬ್ದಾರಿ ಹೊರಬೇಕು. ನಾವು ವಿದ್ಯಾರ್ಥಿಗಳಿಗೆ ನ್ಯಾಯ ಸಿಗುವವರೆಗ��� ಕೈಕಟ್ಟಿ ಕೂರುವ ಪ್ರಶ್ನೆಯೇ ಇಲ್ಲ.
-ಟಿ.ಎ.ನಾರಾಯಣಗೌಡ
ರಾಜ್ಯಾಧ್ಯಕ್ಷರು
ಕರ್ನಾಟಕ ರಕ್ಷಣಾ ವೇದಿಕೆ
ಕೆಪಿಎಸ್ ಸಿ ಪರೀಕ್ಷೆಯಲ್ಲಿ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ಆದ ಅನ್ಯಾಯದ ವಿರುದ್ಧ ಕರವೇ ಸಂಘಟಿಸಿದ್ದ ಬೃಹತ್ ಪ್ರತಿಭಟನೆ ಸಂದರ್ಭದಲ್ಲಿ ಕರವೇ ರಾಜ್ಯಾಧ್ಯಕ್ಷರಾದ ಟಿ.ಎ.ನಾರಾಯಣಗೌಡರು ಮುಖ್ಯಮಂತ್ರಿ ಸಿದ್ಧರಾಮಯ್ಯ ನವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ ಸಂದರ್ಭದ ಚಿತ್ರಗಳು.
@siddaramaiah#kpscdroha#kpscmosa#ಕರವೇ#KRV
ಕೆಪಿಎಸ್ ಸಿ ನಡೆಸಿರುವ ಕೆಎಎಸ್ ಪರೀಕ್ಷೆಗಳಲ್ಲಿ ಮತ್ತೆ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ಆಗಿರುವ ಅನ್ಯಾಯದ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆ ಫೆ.18ರಂದು ಬೆಂಗಳೂರಿನಲ್ಲಿ ದೊಡ್ಡ ಹೋರಾಟವನ್ನು ಹಮ್ಮಿಕೊಂಡಿದೆ. ಅನ್ಯಾಯಕ್ಕೆ ಒಳಗಾದ ಸಾವಿರಾರು ವಿದ್ಯಾರ್ಥಿಗಳು ಈ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಹಿಂದೆ ಪ್ರಶ್ನೆ ಪತ್ರಿ��ೆಯಲ್ಲಿ ಕನ್ನಡಾನುವಾದದ ಸಮಸ್ಯೆ ಕಂಡುಬಂದಿದ್ದರಿಂದ ಆದ ಅನ್ಯಾಯದ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆ ಸ್ವಾತಂತ್ರ್ಯ ಉದ್ಯಾನವನದಲ್ಲಿ ಬೃಹತ್ ಚಳವಳಿ ಹಮ್ಮಿಕೊಂಡಿತ್ತು. ನಮ್ಮ ಚಳವಳಿಗೆ ಸ್ಪಂದಿಸಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಮರುಪರೀಕ್ಷೆಗೆ ಆದೇಶಿಸಿದ್ದರು. ಮುಖ್ಯಮಂತ್ರಿಗಳ ತೀರ್ಮಾನವನ್ನು ನಾವೆಲ್ಲ ಒಕ್ಕೊರಲಿನಿಂದ ಅಭಿನಂದಿಸಿದ್ದೆವು.
ಆದರೆ ಮರುಪರೀಕ್ಷೆಯಲ್ಲೂ ಕನ್ನಡಾನುವಾದದ ಸಮಸ್ಯೆ ಉಂಟಾಗಿದೆ. ಹೋರಾಟದ ಸಂದರ್ಭದಲ್ಲಿ ನಾವು ಕನ್ನಡದಲ್ಲೇ ��್ರಶ್ನೆ ಪತ್ರಿಕೆ ಸಿದ್ಧಪಡಿಸಿ ನಂತರ ಅದನ್ನು ಇಂಗ್ಲಿಷ್ ಗೆ ಅನುವಾದಿಸುವಂತೆ ಆಗ್ರಹಿಸಿದ್ದೆವು. ಕರ್ನಾಟಕದ ಆಡಳಿತ ಭಾಷೆ ಕನ್ನಡವಾದ್ದರಿಂದ ಇದೇ ಸಹಜವಾಗಿ ನಡೆಯಬೇಕಿತ್ತು. ಆದರೆ ದುರಂಹಕಾರಿ ಅಧಿಕಾರಿಗಳಿಂದಾಗಿ ಮತ್ತೆ ಇಂಗ್ಲಿಷ್ ನಲ್ಲಿ ಪ್ರಶ್ನೆ ಪತ್ರಿಕೆ ತಯಾರಿಸಿ, ಕನ್ನಡಕ್ಕೆ ತಪ್ಪುತಪ್ಪಾಗಿ ಅನುವಾದಿಸಲಾಗಿದೆ. ಇದರಿಂದಾಗಿ ಕನ್ನಡ ಮಾಧ್ಯಮದಲ್ಲಿ ಕಲಿತ ವಿದ್ಯಾರ್ಥಿಗಳಿಗೆ ವಂಚನೆ ಎಸಗಲಾಗಿದೆ.
ಈಗ ಫಲಿತಾಂಶದಲ್ಲಿ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳು ತೀರಾ ಕನಿಷ್ಟ ಪ್ರಮಾಣದಲ್ಲಿ ಉತ್ತೀರ್ಣರಾಗಿದ್ದಾರೆ ಎಂಬ ಮಾಹಿತಿ ಇದೆ. ಇದಕ್ಕೆ ಕೆಟ್ಟದಾಗಿ ಸಿದ್ಧಪಡಿಸಿದ ಕನ್ನಡಾನುವಾದದ ಪ್ರಶ್ನೆ ಪತ್ರಿಕೆಗಳೇ ಕಾರಣ ಎಂದು ಕನ್ನಡ ವಿದ್ಯಾರ್ಥಿಗಳು ಹೇಳುತ್ತಿದ್ದಾರೆ. ಇವರೆಲ್ಲ ಗ್ರಾಮೀಣ ಭಾಗದ ವಿದ್ಯಾರ್ಥಿಗಳು, ಸಾಮಾಜಿಕವಾಗಿ ಹಿಂದುಳಿದ ಜನವರ್ಗಗಳಿಂದ ಬಂದವರು. ಇಂಥವರಿಗೆ ಅನ್ಯಾಯವಾಗುತ್���ಿದ್ದರೂ ಸರ್ಕಾರ ಮೌನವಾಗಿ ಕುಳಿತುಕೊಳ್ಳಲು ಹೇಗೆ ಸಾಧ್ಯ?
ಹಲವಾರು ವಿದ್ಯಾರ್ಥಿಗಳು ಪ್ರತಿನಿತ್ಯ ನನ್ನೊಂದಿಗೆ ಮಾತನಾಡುತ್ತಿದ್ದಾರೆ. ಅವರ ಸಂಕಟಗಳನ್ನು ಹೇಳುತ್ತಿದ್ದಾರೆ. ಅವರ ಭವಿಷ್ಯದ ಬದುಕು ಬೀದಿಗೆ ಬಿದ್ದಂತಾಗಿದೆ. ಎಷ್ಟೋ ವರ್ಷಗಳಿಂದ ಅವರು ಈ ಪರೀಕ್ಷೆಗಾಗಿ ಸಿದ್ಧತೆ ನಡೆಸಿದ್ದರು. ಇದಕ್ಕಾಗಿ ಅವರ ಪೋಷಕರೂ ತ್ಯಾಗ ಮಾಡಿದ್ದಾರೆ. ಈ ಪರೀಕ್ಷೆಯಲ್ಲಿ ಅವರು ಅನುತ್ತೀರ್ಣಗೊಂಡರೆ ಬಹುತೇಕರು ವಯೋಮಿತಿಯ ಕಾರಣಕ್ಕೆ ಮುಂದೆ ಇನ್ನೊಂದು ಪರೀಕ್ಷೆ ಬರೆಯಲು ಸಾಧ್��ವಿಲ್ಲ. ಯಾರೋ ದುಷ್ಟ ಅಧಿಕಾರಿಗಳು ಮಾಡಿದ ದ್ರೋಹಕ್ಕೆ ಅವರ ಬದುಕು ನರಕವಾಗಿದೆ.
ಪರೀಕ್ಷೆ ಬರೆದವರಿಗೆಲ್ಲ ಕೆಎಎಸ್ ಹುದ್ದೆಯೇನು ಲಭಿ��ುವುದಿಲ್ಲ. ಆದರೆ ಕನ್ನಡ ಮಾಧ್ಯಮದಲ್ಲಿ ಪರೀಕ್ಷೆ ಬರೆದ ಲಕ್ಷಾಂತರ ವಿದ್ಯಾರ್ಥಿಗಳನ್ನು ಬೇಕೆಂದೇ ತಪ್ಪುತಪ್ಪಾದ ಪ್ರಶ್ನೆ ಪತ್ರಿಕೆ ಕೊಟ್ಟು ಅಂಕಗಳಿಸಿದಂತೆ ತಡೆಯಲಾಯಿತು ಎಂಬ ಅನ್ಯಾಯ ಪ್ರಜ್ಞೆ ಅವರನ್ನು ಕೊನೆಯವರೆಗೂ ಬಾಧಿಸಲಿದೆ. ಅಧಿಕಾರಿಗಳಾಗುವ ನಮ್ಮ ಆಸೆಗೆ ರಾಜ್ಯ ಸರ್ಕಾರವೇ ತಣ್ಣೀರೆರಚಿತು, ನಮಗೆ ಮೋಸ ಮಾಡಿತು ಎಂದು ಅವರು ಭಾವಿಸುತ್ತಾರೆ. ಇದು ಬೇಕಾಗಿರಲಿಲ್ಲ. ಇದಕ್ಕೆ ನೇರವಾಗಿ ಕೆಪಿಎಸ್ ಸಿ ಮತ್ತು ರಾಜ್ಯ ಸರ್ಕಾರವೇ ಹೊಣೆ. ಇದನ್ನು ಸರಿಪಡಿಸುವ ಜವಾಬ್ದಾರಿಯನ್ನೂ ಸರ್ಕಾರವೇ ಹೊರಬೇಕಿದೆ.
ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಹಿಂದೆ ಮಾಡಿದಂತೆ ಕೂಡಲೇ ಮಧ್ಯೆ ಪ್ರವೇಶಿಸಿ ಕೂಡಲೇ ಫಲಿತಾಂಶವನ್ನು ತಡೆಹಿಡಿಯಬೇಕು, ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ಆಗಿರುವ ಅನ್ಯಾಯ ಸರಿಪಡಿಸಲು ಪರಿಹಾರ ಸೂತ್ರವನ್ನು ರೂಪಿಸಬೇಕು. ತಪ್ಪಿತಸ್ಥ ಅಧಿಕಾರಿಗಳ ಮೇಲೆ ಮೊಕದ್ದಮೆ ಹೂಡಿ ಜೈಲಿಗಟ್ಟಬೇಕು. ಫೆ. 18ರಂದು ನಡೆಯುವ ಸಾಂಕೇತಿಕ ಪ್ರತಿಭಟನೆಯಲ್ಲೇ ಹತ್ತಾರು ಸಾವಿರ ಮಂದಿ ನೆರೆಯುತ್ತಿದ್ದಾರೆ. ಅನ್ಯಾಯ ಸರಿಪಡಿಸದೇ ಹೋದಲ್ಲಿ ಅದರ ಪರಿಣಾಮ ಗಂಭೀರವಾಗಿರುತ್ತದೆ.
ಕೆಪಿಎಸ್ಸಿ ಗೊಂದಲ: ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಕಾಂಗ್ರೆಸ್ ಸರ್ಕಾರದಿಂದ ನಿರಂತರ ಅನ್ಯಾಯ!
"ಕಂಗಾಲನ ಮನೀಗೆ ಕಂಗಾಲ ಹೋದರೆ ಗಂಗಾಳ ನೆಕ್ಕು" ಎಂಬ ಗಾದೆಯ ಅರ್ಥದಂತೆ ಸರ್ಕಾರ ಮತ್ತು ಕೆಪಿಎಸ್ಸಿ ಎಸಗುವ ಎಲ್ಲಾ ಅನಾಚಾರಗಳನ್ನು ಸಹಿಸಿಕೊಳ್ಳಿ ಎಂದ��� ಪರೀಕ್ಷಾರ್ಥಿಗಳನ್ನು ಅತಂತ್ರ ಸ್ಥಿತಿಯಲ್ಲಿ ಸಿಕ್ಕಿಹಾಕಿಸುತ್ತಿದೆ ಕಾಂಗ್ರೆಸ್.
ಪ್ರಶ್ನೆ ಪತ್ರಿಕೆಯಲ್ಲಿ ದೋಷ, ಅನುವಾದದಲ್ಲಿ ಅರ್ಥಹೀನತೆ, ಪರೀಕ್ಷಾ ವೇಳಾಪಟ್ಟಿಯಲ್ಲಿ ಗೊಂದಲ, ಫಲಿತಾಂಶದಲ್ಲಿ ತಾರತಮ್ಯ – ಈ ಎಲ್ಲ ಸಮಸ್ಯೆಗಳ ಕಾರಣದಿಂದಾಗಿ ಕೆಪಿಎಸ್ಸಿ ಮೇಲೆ ವಿದ್ಯಾರ್ಥಿಗಳು ನಂಬಿಕೆಯನ್ನು ಕಳೆದುಕೊಳ್ಳುತ್ತಿದ್ದಾರೆ. ಪ್ರತಿ ಬಾರಿ ಪರೀಕ್ಷೆ ನಡೆಸಿದಾಗಲೂ ಪುನಃಪರೀಕ್ಷೆ, ಪ್ರಶ್ನೆಪತ್ರಿಕೆ ಸೋರಿಕೆ, ಅಧಿಕಾರಿಗಳ ನಿರ್ಲಕ್ಷ್ಯವೆಂಬುದು ರೂಢಿಯಾಗಿದೆ.
ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ವಿದ್ಯಾರ್ಥಿಗಳು ನಿರಂತರ ಹೋರಾಟ ನಡೆಸಿದರೂ, @INCKarnataka ಸರ್ಕಾರ ಅವರ ಕೂಗಿಗೆ ಮನ್ನಣೆ ನೀಡುತ್ತಿಲ್ಲ. ಪ್ರತಿಭಾವಂತ ಅಭ್ಯರ್ಥಿಗಳಿಗೆ ಪ್ರತಿ ಬಾರಿ ಅನ್ಯಾಯವಾಗುತ್ತಿದ್ದು, ಸರ್ಕಾರ ಈ ಸಮಸ್ಯೆಯನ್ನು ಉದ್ದೇಶಪೂರ್ವಕವಾಗಿ ನಿರ್ಲಕ್ಷ್ಯ ಮಾಡುತ್ತಿದೆ.
ಇನ್ನಾದರೂ ಕಾಂಗ್ರೆಸ್ ಸರ್ಕಾರ ಎಚ್ಚೆತ್ತುಕೊಂಡು ಕೆಪಿಎಸ್ಸಿ ಪರೀಕ್ಷಾ ವ್ಯವಸ್ಥೆಯಲ್ಲಿ ಸುಧಾರಣೆ ಮಾಡಬೇಕಾಗಿದೆ. ಯುವಕರ ಭವಿಷ್ಯದ ಜೊತೆ ಚೆಲ್ಲಾಟ ಆಡುತ್ತಿರುವ ಈ ಭ್ರಷ್ಟ ವ್ಯವಸ್ಥೆಯನ್ನು ಶುದ್ಧೀಕರಿಸುವ ಜವಾಬ್ದಾರಿ ಸರ್ಕಾರದ ಮೇಲಿದೆ. ಇದು ಕೇವಲ ಒಂದು ಪರೀಕ್ಷೆಯ ಪ್ರಶ್ನೆಯಲ್ಲ, ಇದು ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯದ ಪ್ರಶ್ನೆ!
#CongressFailsKarnataka #KPSCಮೋಸ #KPSCMosa
KAS 2024 ರ PRELIMS ಫಲಿತಾಂಶ
ಬಿಡುಗಡೆ ಮಾಡುವುದರೊಂದಿಗೆ,
KAS ಮರು ಪರೀಕ್ಷೆ ದೋಷಗಳಿಗೆ ಕೃಪಾಂಕ ನೀಡದೆ, Ratio ಕೂಡ ಹೆಚ್ಚಿಸಲು ಹೋಗದೆ,
ನಾವು ಕನ್ನಡವನ್ನು ಕೊಲ್ಲುತ್ತೇವೆ,
ಕತ್ತು ಹಿಚುಕಿ ಅಮುಕುತ್ತೇವೆ,
ನಮ್ಮನ್ನು ಹೇಳುವವರು ಕೇಳುವವರು
ಯಾರು ಇಲ್ಲ,
ಇಲ್ಲಿ ನಮ್ಮದೇ ಸಾಮ್ರಾಜ್ಯ,
ಶಕ್ತಿ ಇದ್ದರೆ ಕಾಪಾಡಿಕೊಳ್ಳಿಯೆಂದು
ಈ ಮೂಲಕ ಪರೋಕ್ಷವಾಗಿ KPSC ಸವಾಲೆಸೆದಿದೆ,
ಇದು
ಆಕಾಂಕ್ಷಿಗಳು V/S KPSC ಅಲ್ಲ,
ಇದು,
ಕನ್ನಡ V/S KPSC!
ಹೊರಾಡಲು ಸಿದ್ಧ���ಾಗಿ,
ಮೊಳಗಲಿ ಸಮರ ಕಹಳೆ📯!
ಇದೇ 18ನೇ ತಾರೀಕಿನಂದು ಒಂದ್ 10,000 ಸಾವಿರ ಜನ Freedom Park ಗೆ ಬಂದು ಬಿಡ್ರಪ್ಪಾ ದಶಕಗಳ ಕಷ್ಟ ನೀಗುತ್ತದೆ! 🔥
ಕಾಲ ಕೂಡಿ ಬಂದಿದೆ,
ಕಬ್ಬಿಣ ಕಾದಿದೆ,
ಹಾಕಿ ಸರಿಯಾಗಿ ಬಡಿಯೋಣ!
ಜೈ ಕರ್ನಾಟಕ! 🔥
@vinaygb
@RekhaBasavaraju @ChekrishnaCk
@AKSSAofficial
@kanthakumarr
@prajavani @kpscadda @Kavirajlyricist @karnatakaparty1
@SuhasDuga @pbilimale #KAS2024 #KPSCMOSA #KASREEXAM
ಲೋಕಸೇವಾ ಕೆಎಎಸ್ ಪೂರ್ವಭಾವಿ ಮರುಪರೀಕ್ಷೆಯ ಕನ್ನಡ ಪತ್ರಿಕೆಯಲ್ಲಿ ದೋಷಗಳಾಗಿರುವುದರಿಂದ ಮತ್ತೊಮ್ಮೆ ಪರೀಕ್ಷೆ ನಡೆಸಬೇಕೆಂದು ಆಗ್ರಹಿಸಿ ಇಂದು ಫ್ರೀಡಂ ಪಾರ್ಕ್ನಲ್ಲಿ ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿಗಳ ಸಂಘದ ವತಿಯಿಂದ ನಡೆಯುತ್ತಿರುವ ಪ್ರತಿಭಟನೆಗೆ ಬೆಂಬಲ ಸೂಚಿಸಿ ರಾಜ್ಯಾಧ್ಯಕ್ಷರಾದ ಶ್ರೀ @BYVijayendra ಅವರು ಪ್ರತಿಭಟನೆಯಲ್ಲಿ ಪಾಲ್ಗೊಂಡು ವಿದ್ಯಾರ್ಥಿಗಳ ಅಹವಾಲು ಸ್ವೀಕರಿಸಿದರು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ವಿಪಕ್ಷ ನಾಯಕರಾದ ಶ್ರೀ @NswamyChalavadi , ಯುವ ಮೋರ್ಚಾ ರಾಜ್ಯಾಧ್ಯಕ್ಷರಾದ ಶ್ರೀ @dheerajmuniraj , ಬೆಂಗಳೂರು ಕೇಂದ್ರ ಜಿಲ್ಲಾಧ್ಯಕ್ಷರಾದ ಶ್ರೀ @sapthagirigowda , ಸಂಘಟನೆಯ ಪ್ರಮುಖರು, ವಿದ್ಯಾರ್ಥಿಗಳು ಉಪಸ್ಥಿ��ರಿದ್ದರು.
#KPSCMosa
To,
The Transport Minister,(@RLR_BTM)
Government of Karnataka,
Bengaluru.
Subject: Request for Free Bus Travel on the Occasion of KAS Exam Re-examination
Dear Sir
I am writing to kindly request that the Karnataka Government provide free bus travel for students attending the KAS re-examination on 29th December 2024. As you are aware, the previous KAS exam was cancelled due to several errors made by the KPSC. The cancellation was beyond our control, and it was an unfortunate situation for all the candidates.
Now, with the re-exam being held on 29th December 2024, many of us, especially students from middle-class families, are facing financial strain. We have already spent money on preparation, registration, and other related expenses. Since the exam cancellation was due to KPSC's mistakes, we believe that it would be a considerate gesture from the government to allow us free bus travel on the day of the re-examination
We kindly request that students be allowed to travel for free on government buses by showing their hall ticket and Aadhaar card, which will help alleviate some of the financial burden on us.
We hope you will consider this request positively and extend your support to the students appearing for the re-exam.
Thank you for your time and attention.
@RLR_BTM@Sowmyareddyr@KSRTC_Journeys
(@AKSSAofficial ) @secretarykpsc@shalinirajnish@siddaramaiah@PriyankKharge@INCKarnataka@tv9kannada@AsianetNewsSN@NewsFirstKan@publictvnews@BJPKarnataka@RAshokaBJP@BYVijayendra@INCIndia@INCKarnataka@BJPindia__@BJPKarnataka@BasanagoudaBJP@KannadaPrabha@Vijayavani_Digi
ಮಾನ್ಯರೇ; @siddaramaiah@PriyankKharge@CMahadevappa ಒಳ ಮೀಸಲಾತಿಗೆ ಸಂಬಂಧಪಟ್ಟಂತೆ ಮನವಿ.
ವಿಷಯ- ಮಾನ್ಯ ಸುಪ್ರೀಂಕೋರ್ಟ್ ಸೂಚನೆಯ ಮೇರೆಗೆ ಕರ್ನಾಟಕ ರಾಜ್ಯ ಸರ್ಕಾರದ ಸಚಿವ ಸಂಪುಟವು ಒಳ ಮೀಸಲಾತಿ ಜಾರಿಗೆ ಆಯೋಗ ರಚನೆಗ��� ಸ್ವಾಗತಿಸುವಿಕೆ ಮತ್ತು ಈ ಸಂಬಂಧ ಈಗಾಗಲೇ ಅಧಿಸೂಚನೆ ಹೊರಡಿಸಿರುವ ಮತ್ತು ಅಧಿಸೂಚನೆ ಹೊರಡಿಸಲು ಸಿದ್ಧಗೊಂಡಿರುವ ನೇಮಕಾತಿಗಳಿಗೆ ತಾತ್ಕಾಲಿಕವಾಗಿ ತಡೆ ನೀಡದಂತೆ ಮನವಿ.
ಈ ಸದರಿ ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಮಾನ್ಯ ಸುಪ್ರೀಂ ಕೋರ್ಟ್ ಒಳ ಮೀಸಲಾತಿ ಜಾರಿಗೆ ಸಂಬಂಧಿಸಿದಂತೆ ಆಯಾ ರಾಜ್ಯ ಸರ್ಕಾರಗಳು ನಿರ್ಧಾರ ಕೈಗೊಳ್ಳಲು ಅವಕಾಶ ನೀಡಿದೆ. ಕೋರ್ಟ್ ನ ಸೂಚನೆಯ ಮೇರೆಗೆ ಮಾನ್ಯ ಕರ್ನಾಟಕ ರಾಜ್ಯ ಸರ್ಕಾರವು 28/10/2024 ರಂದು ಸಚಿವ ಸಂಪುಟ ನಿರ್ಣಯದಲ್ಲಿ ಒಳ ಮೀಸಲಾತಿ ಜಾರಿಗೆ ಸಂಬಂಧಿಸಿದಂತೆ ಆಯೋಗ ರಚನೆ ಮಾಡಿರುತ್ತದೆ, ಈ ಒಂದು ಸರ್ಕಾರದ ಪ್ರಗತಿಪರ ಕ್ರಮವನ್ನು AKSSA ಸಂಘಟನೆಯು ತುಂಬು ಹ���ದಯದಿಂದ ಸ್ವಾಗತಿಸುತ್ತದೆ. ಆದರೆ ಸಚಿವ ಸಂಪುಟ ನಿರ್ಣಯದಲ್ಲಿ ಆಯೋಗದ ವರದಿ ಸಲ್ಲಿಕೆಗೆ ಮೂರು ತಿಂಗಳ ಅವಕಾಶ ನೀಡಿದ್ದು, ಅಲ್ಲಿಯವರೆಗೂ ಯಾವುದೇ ಹೊಸ ನೇಮಕಾತಿ ಅಧಿಸೂಚನೆಗಳನ್ನು ಹೊರಡಿಸದಂತೆ ನಿರ್ಧಾರ ಕೈಗೊಳ್ಳಲಾಗಿದೆ.
ಮುಂದಿನ ಮೂರು ತಿಂಗಳುಗಳ ಕಾಲ ರಾಜ್ಯ ಸರ್ಕಾರವು ಹೊಸ ನೇಮಕಾತಿ ಅಧಿಸೂಚನೆಗಳನ್ನು ಹೊರಡಿಸದಿರುವ ಕ್ರಮವು ಸಾಕಷ್ಟು ಉದ್ಯೋಗ ಆಕಾಂಕ್ಷಿಗಳಲ್ಲಿ ನಿರಾಶಾಭಾವನೆ ಉಂಟುಮಾಡಿದೆ. ಈಗಾಗಲೇ ರಾಜ್ಯದಲ್ಲಿ ದೊಡ್ಡ ಪ್ರಮಾಣದಲ್ಲಿ ನಿರುದ್ಯೋಗದ ಪ್ರಮಾಣ ತಾಂಡವಾಡುತಿದೆ, ಇಂತಹ ಒಂದು ಸಿನಿಕತನ ಪರಿಸ್ಥಿತಿಯಲ್ಲಿ ಈ ಕ್ರಮವು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಸರ್ಕಾರಿ ಉದ್ಯೋಗ ಆಕಾಂಕ್ಷಿಗಳಿಗೆ ದೊಡ್ಡ ಪೆಟ್ಟು ನೀಡಿದಂತೆ. ಆದ್ದರಿಂದ, ನಿಮ್ಮಲ್ಲಿ ನಮ್ಮ AKSSA ಸಂಘಟನೆಯು ಲಕ್ಷಾಂತರ ಪರೀಕ್ಷಾರ್ಥಿಗಳ ಪರವಾಗಿ ಮನವಿ ಮಾಡಿಕೊಳ್ಳುವುದೇನೆಂದರೆ ಈಗಾಗಲೇ ಅಧಿಸೂಚನೆ ಹೊರಡಿಸಿರುವ ಮತ್ತು ಅಧಿಸೂಚನೆಗೆ ಸಿದ್ಧಗೊಂಡಿರುವ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯನ್ನು ಯಾವುದೇ ಕಾರಣಕ್ಕೂ ತಡೆಹಿಡಿಯಬಾರದು. ಈ ರೀತಿ ಏಕಾಏಕಿ ನೇಮಕಾತಿ ಪ್ರಕ್ರಿಯೆಗಳು ಸ್ಥಗಿತಗೊಂಡರೆ ಅಭ್ಯರ್ಥಿಗಳಲ್ಲಿ ಗೊಂದಲ ಮತ್ತು ಅನಿಶ್ಚಿತತೆ ಪರಿಸ್ಥಿತಿ ನಿರ್ಮಾಣವಾಗುತ್ತದೆ ಮತ್ತು ಸಾವಿರಾರು ಅಭ್ಯರ್ಥಿಗಳ ವಯೋಮಿತಿ ಗಡಿ ಮೀರುವುರಿಂದ ಹುದ್ದೆಗಳಿಂದ ವಂಚಿ���ರಾಗುತ್ತಾರೆ.ಆದ್ದರಿಂದ, ಒಳ ಮೀಸಲಾತಿ ಜಾರಿಗೆ ಸಂಬಂಧಿಸಿದಂತೆ ಆಯೋಗವು ನೀಡುವ ಶಿಫಾರಸ್ಸುಗಳನ್ನು ನೇಮಕಾತಿ ಪ್ರಕ್ರಿಯೆಗಳ ವಿವಿಧ ಹಂತಗಳಲ್ಲಿಯೂ ಮತ್ತು ಅಂತಿಮ ಆಯ್ಕೆ ಪಟ್ಟಿ ಪ್ರಕಟಿಸುವ ಮುನ್ನವು ಜಾರಿಗೊಳಿಸಬಹುದು.
ಅಂತಿಮವಾಗಿ, ತಮ್ಮಲ್ಲಿ ನಮ್ಮ ಸವಿನಯ ಪೂರ್ವಕ ಮನವಿ ಏನೆಂದರೆ, ಯಾವುದೇ ನೇಮಕಾತಿ ಪ್ರಕ್ರಿಯೆಗಳನ್ನು ಸ್ಥಗಿತಗೊಳಿಸದೆ, ಒಳ ಮೀಸಲಾತಿಗೆ ಸಂಬಂಧಿಸಿದಂತೆ ಸರ್ಕಾರ ರಚಿಸಿರುವ ಆಯೋಗವು ನೀಡುವ ಶಿಫಾರಸ್ಸುಗಳನ್ನು ನೇಮಕಾತಿ ಪ್ರಕ್ರಿಯೆಯ ಅಂತಿಮ ಆಯ್ಕೆ ಪಟ್ಟಿ ಪ್ರಕಟಣೆಗೊಳ್ಳುವ ಮುನ್ನ ಅನ್ವಯ ಮಾಡಿಕೊಂಡು ರಾಜ್ಯದ ಎಲ್ಲಾ ಸಮುದಾಯದ ಅಭ್ಯರ್ಥಿಗಳಿಗೂ ನ್ಯಾಯ ನೀಡಬೇಕೆಂದು ಕೈಮುಗಿತು ಕೇಳಿಕೊಳ್ಳುತ್ತೇವೆ.
ಧನ್ಯವಾದಗಳು 🙏
4 ವರ್ಷ ಕಳೆದರೂ ಮುಗಿಯದ ಗೋಳು #PSI 545#
PSI 545 ರ ನೇಮಕಾತಿಯ ಅಧಿಸೂಚನೆಯು 2020 ರಲ್ಲಿ ಹೊರಡಿಸಲಾಗಿರುತ್ತದೆ.ಅದರ ಪರೀಕ್ಷೆಯು ಅಕ್ಟೋಬರ್ 3 2021 ಎಲ್ಲಿ ನಡೆದು ಅದರ ಫಲಿತಾಂಶವನ್ನು ಜನವರಿ 19 2022 ರಾಲ್ಲಿ ಪ್ರಕಟಿಸಿರುತಾರೆ.ನಂತರ ಅದರಲ್ಲಿ ಅಕ್ರಮ ಕಂಡುಬಂದ ಇನ್ನೆಲೆ ಆಗಿನ ಸರ್ಕಾರವು ಅದಕ್ಕೆ ಮರು ಪರೀಕ್ಷೆ ಮಾಡಬೇಕು ಎಂದು ಆದೇಶಿಸುತ್ತದೆ. ನಂತರ ಅದರಲ್ಲಿ ಆಯ್ಕೆಗೊಂಡ ಅಭ್ಯರ್ಥಿಗಳು ನ್ಯಾಯಾಲಯದ ಮೆಟ್ಟಿಲು ಹೇರುತ್ತಾರೆ. ಇದಕ್ಕೆ ಅನುಗುಣವಾಗಿ ಮಾನ್ಯ ಘನ ನ್ಯಾಯಲಯವು ಮರು ಪರೀಕ್ಷೆ ಮಾಡುವುದು ಸೂಕ್ತ ಎಂದು ನವೆಂಬರ್ 19 2023 ರಂದು ತೀರ್ಪು ನೀಡಿ ಸರ್ಕಾರಕ್ಕೆ ಆದೇಶಿಸುತ್ತದೆ. ಇದಕ್ಕೆ ಅನುಗುಣವಾಗಿ ಮಾನ್ಯ ಸರ್ಕಾರವು ಇದರ ಮರು ಪರೀಕ್ಷೆಯನ್ನು ಮಾಡುವಂತೆ KEA ಗೆ ಆದೇಶ ನೀಡುತ್ತದೆ. ನಂತರ KEA January 23 2024 ರಂದು ಇದರ ಮರು ಪರೀಕ್ಷೆ ನಡೆಸಿ ಅದರ ಎಲ್ಲರ ಅಭ್ಯರ್ಥಿಗಳ ಅಂಕ ಪಟ್ಟಿಯನ್ನು ಮಾರ್ಚ್ 1 2024 ರಂದು ಸಿದ್ಧಗೊಳಿಸಿ ಅದನ್ನು ಮುಂದಿನ ಪ್ರಕ್ರಿಯೆಗಾಗಿ KSP(Karnataka state police) ಗೆ ವರ್ಗಾಯಿಸುತ್ತದೆ.ತದನಂತರ ಅದರ ತಾತ್ಕಾಲಿಕ ಆಯ್ಕ�� ಪಟ್ಟಿ ಪ್ರಕಟಿಸುವ ಯಾವುದೆ ಪ್ರಕ್ರಿಯೆ ನೀಡಿದಿರುವುದಿಲ್ಲ. ಇದರಿಂದ ಮನ ನೊಂದ ಪಿಎಸ್ಐ ಅಭ್ಯರ್ಥಿಗಳು ಮಾನ್ಯ ಸರ್ಕಾರವನ್ನು ಎಷ್ಟು ಬಾರಿ ಒತ್ತಾಯಿಸಿದರು ಯಾವುದೆ ಬೆಳವಣಿಗೆಗಳು ಆಗಿರುವುದಿಲ್ಲ. ನಂತರ ಅಭ್ಯರ್ಥಿಗಳು ಸರ್ಕಾರಕ್ಕೆ ತಮ್ಮ ರಕ್ತದಲ್ಲಿಯೂ ಸಹ ಪತ್ರ ಬರೆದು ಮನವಿ ಮಾಡಿಕೊಂಡಿರುತ್ತಾರೆ.ಆದ್ದರಿಂದ ಈ ವಿಷಯವನ್ನು ಘನ ಸರ್ಕಾರವು ಅತ್ಯಂತ ಗಂಭೀರವಾಗಿ ಪರಿಗಣಿಸಿ ಅದರ ಆಯ್ಕೆ ಪಟ್ಟಿಯನ್ನು ಪ್ರಕಟಿಸಿ ಅಭ್ಯರ್ಥಿಗಳು ಹಾಗೂ ಅವರ ಕುಟುಂಬದವರಿಗೆ ಕರ್ನಾಟಕ ಸರ್ಕಾರ ಯುವ ಜನತೆಯ ಪರ ಎಂಬುದನ್ನು ಸಾಬೀತುಪಡಿಸಬೇಕು. ಇಲ್ಲವಾದರೆ ಆಯ್ಕೆ ಪಟ್ಟಿ ಬಿಡುಗಡೆಗಾಗಿ ಅಭ್ಯರ್ಥಿಗಳು AKKSA ಸಂಘಟನೆಯ ವತಿಯಿಂದ ಅಕ್ಟೋಬರ್ 14 ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ದೊಡ್ಡ ಮಟ್ಟ�� ಹೋರಾಟಕ್ಕೆ ಮುಂದಾಗಿದ್ದಾರೆ. @DrParameshwara @siddaramaiah @PriyankKharge
#PSI545_ ಮರುಪರೀಕ್ಷೆ ನಡೆದು 7 ತಿಂಗಳು ಕಳೆದರೂ ಕೂಡ ಅದರ ಫಲಿತಾಂಶ ಇನ್ನು ಪ್ರಕಟವಾಗಿಲ್ಲ. ಈ ಕುರಿತು ಮನನೊಂದ ಅಭ್ಯಥಿಗಳ ಪೋಷಕರು ಮಾನ್ಯ ಮುಖ್ಯ ಮಂತ್ರಿಗಳು ಮತ್ತು ಮಾನ್ಯ ಗೃಹ ಮಂತ್ರಿಗಳಿಗೆ ತಮ್ಮ ಕಷ್ಟಗಳನ್ನು ಹೇಳುವ ಮೂಲಕ ಘನ ಸರ್ಕಾರಕ್ಕೆ ಬೇಗ ಆಯ್ಕೆಪಟ್ಟಿಯನ್ನು ಪ್ರಕಟಿಸುವಂತೆ ಈ ಮೂಲಕ ಒತ್ತಾಯಿಸಿದ್ದಾರೆ @DrParameshwara
@KEA_karnataka ವಿವಿಧ ನಿಗಮ ಮಂಡಳಿ���ಳಲ್ಲಿ ಖಾಲಿ ಉಳಿದಿದ್ದ 670 ಹುದ್ದೆಗಳಿಗೆ ಪರೀಕ್ಷೆ ನಡೆಸಿ ವರ್ಷವಾಗುತ್ತಾ ಬಂದಿದೆ ಇನ್ನೂ ಕೂಡ ಅಂತಿಮ ಪಲಿತಾಂಶ ಪ್ರಕಟಗೊಂಡಿಲ್ಲ ಸ್ವಲ್ಪ ಬದ್ಧತೆ ಇದ್ದಾರೆ ಕೂಡಲೇ ಪಲಿತಾಂಶ ಬಿಡುಗಡೆಗೊಳಿಸಿ ;
ಇಲ್ಲದಿದ್ದರೆ ಮುಂದಿನ ದಿನದಲ್ಲಿ ವಿದ್ಯಾರ್ಥಿಗಳ ಆಕ್ರೋಶವನ್ನು ಎದುರಿಸಬೇಕಾಗುತ್ತದೆ
@drmcsudhakar