ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ. ಸಿ ಟ್ರಸ್ಟ್ (ರಿ) ಸಂಸ್ಥೆಯ ಮಂಡ್ಯ ತಾಲ್ಲೂಕ್ ಹೊಳಲು ವಲಯದ ಮಲ್ಲನಾಯಕನಕಟ್ಟೆ ಗ್ರಾಮದ ಬೆಳಕು ಜ್ಞಾನ ವಿಕಾಸ ಕೇಂದ್ರದ ಮಹಿಳಾ ಸದಸ್ಯರಿಗೆ ಈ ದಿನ ಸೈಬರ್ ಪೊಲೀಸ್ ಠಾಣೆಯ ಡಿ.ವೈ ಎಸ್.ಪಿ, ಶಿವಮೂರ್ತಿ ರವರು ಸೈಬರ್ ಅಪರಾಧಗಳ ಬಗ್ಗೆ ಜಾಗೃತಿ ಮೂಡಿಸಿರುತ್ತಾರೆ.
ದಿನಾಂಕ:14-08-2025 ರಂದು ಮಂಡ್ಯದ ಬಿ. ಹೊಸೂರಿನ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ಸ್ನಾತಕೋತ್ತರ ಕೇಂದ್ರದಲ್ಲಿ ಸೈಬರ್ ಅಪರಾಧಗಳ ಬಗ್ಗೆ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಈ ದಿನ ಮಂಡ್ಯ ಸಿ.ಇ.ಎನ್ ಅಪರಾಧ ಪೊಲೀಸ್ ಠಾಣಾ ವತಿಯಿಂದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕೆ.ಆರ್.ಎಸ್ ನಲ್ಲಿ ಸೈಬರ್ ಅಪರಾಧ ತಡೆಗಟ್ಟುವ ಬಗ್ಗೆ ಅರಿವು ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು, ಕಾರ್ಯಕ್ರಮದಲ್ಲಿ ಸೆನ್ ಅಪರಾಧ ಪೊಲೀಸ್ ಠಾಣೆ ಪಿ. ಎಸ್. ಐ ಬಸವರಾಜು ಚಿಂಚೋಳಿ, ಸಿಬ್ಬಂದಿಗಳು ಹಾಗೂ ಕೆ.ಆರ್.ಎಸ್ ಠಾಣಾ ಉಪನಿರೀಕ್ಷಕರು ಹಾಜರಿದ್ದರು.
ಈ ದಿನ ದಿನಾಂಕಃ 26-06-2026 ರಂದು ಅಂತರಾಷ್ಟ್ರೀಯ ಮಾದಕ ವಸ್ತು ಸೇವನೆ ಮತ್ತು ಅಕ್ರಮ ಸಾಗಾಣೆ ವಿರೋಧಿ ದಿನದ ಅಂಗವಾಗಿ ಕೆ.ಎಂ ದೊಡ್ಡಿಯ ಭಾರತಿ ಕಾಲೇಜು ಸ್ನಾಥಕೋತ್ತರ ಮತ್ತು ಸಂಶೋಧನ ಕೇಂದ್ರದ ವಿಧ್ಯಾರ್ಥಿಗಳಿಗೆ ಮಾದಕ ವಸ್ತು ಸೇವನೆ ಹಾಗೂ ಅದರಿಂದ ಆಗುವ ದುಷ್ಪರಿಣಾಮಗಳು ಮತ್ತು ಮಾದಕ ವಸ್ತು ಉತ್ಪಾದನೆ ಹಾಗೂ ಅಕ್ರಮ ಸಾಗಾಣಿಕೆ ಬಗ್ಗೆ
ಕಾನೂನಿನ ಅರಿವು ಮೂಡಿಸಲಾಯಿತು. ಜೊತೆಗೆ ಸೈಬರ್ ಅಪರಾಧಗಳ ಬಗ್ಗೆ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮದಲ್ಲಿ ನಿರ್ದೇಶಕರಾದ ಶ್ರೀ ನಾಗರಾಜು, ಅಪರ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀ ಗಂಗಾಧರಸ್ವಾಮಿ, ಡಿವೈ.ಎಸ್.ಪಿ ಶಿವಮೂರ್ತಿ, ಪೊಲೀಸ್ ಇನ್ಸ್ಪೆಕ್ಟರ್ ಮಂಜೇಗೌಡ ಹಾಗೂ ಪಿಎಸ್ಐ ಬಸವರಾಜು ಚಿಂಚೋಳಿರವರು ಭಾಗವಹಿಸಿದ್ದರು.
ಮಂಡ್ಯ ಮಹಿಳಾ ಸರ್ಕಾರಿ ಕಾಲೇಜಿನ ವತಿಯಿಂದ ಕೆರಗೋಡು ಗ್ರಾಮದಲ್ಲಿ ಆಯೋಜಿಸಲಾಗಿದ್ದ ಎನ್.ಎಸ್.ಎಸ್ ಕಾರ್ಯಕ್ರಮದಲ್ಲಿ ಸೈಬರ್ ಅಪರಾಧಗಳ ಬಗ್ಗೆ ವಿದ್ಯಾರ್ಥಿನಿಯರಿಗೆ ಅರಿವು ಮೂಡಿಸಲಾಯಿತು.