ಐಎಎಸ್ ಅಧಿಕಾರಿ ಶ್ರೀ ಮಹಾಂತೇಶ್ ಬಿಳಗಿ ಅವರ ದುರಂತ ನಿಧನದ ಸುದ್ದಿ ಮನಸ್ಸಿಗೆ ತೀವ್ರ ವೇದನೆಯನ್ನುಂಟುಮಾಡಿದೆ. ಬೀದರ್ ಜಿಲ್ಲೆಯಲ್ಲಿ ಜಿಲ್ಲಾಪಂಚಾಯತ್ ಸಿಇಒ ಆಗಿ ಸೇವೆ ಸಲ್ಲಿಸಿದ ಸಂದರ್ಭದಲ್ಲಿ ಅವರು ತೋರಿದ ನಿಷ್ಠೆ, ಪರಿಶ್ರಮ ಮತ್ತು ಜನಪರ ಆಡಳಿತ ಜನಮನದಲ್ಲಿ ಅಚ್ಚಳಿಯದ ನೆನಪಾಗಿ ಉಳಿದಿದೆ.
ಬೀದರ ಜಿಲ್ಲೆಯ ಅಭಿವೃದ್ಧಿ, ಶಿಕ್ಷಣ, ಆರೋಗ್ಯ, ಗ್ರಾಮೀಣಾಭಿವೃದ್ಧಿ ಮತ್ತು ಪಾರದರ್ಶಕ ಆಡಳಿತ ಕ್ಷೇತ್ರಗಳಲ್ಲಿ ಅವರು ತಂದ ಬದಲಾವಣೆಗಳು ಅತ್ಯಂತ ಶ್ಲಾಘನೀಯ. ಸರಳತೆ, ಸಂವೇದನೆ ಮತ್ತು ಸೇವಾಭಾವ ಇವರ ಕಾರ್ಯಶೈಲಿಯ ಗುರುತು.
ತಾವು ಸಮಾಜಕ್ಕೆ ಸಲ್ಲಿಸಿದ ಸೇವೆ ಸದಾ ಸ್ಮರಣೀಯ. ಅವರ ಅಗಲಿಕೆ ಆಡಳಿತ ವ್ಯವಸ್ಥೆಗೆ, ಜಿಲ್ಲೆಯ ಜನತೆಗೆ ತುಂಬಲಾರದ ನಷ್ಟ.
ದೇವರು ಅವರ ಆತ್ಮಕ್ಕೆ ಶಾಂತಿ ನೀಡಲಿ. ದುಃಖಿತ ಕುಟುಂಬಕ್ಕೆ ದೇವರು ಶಕ್ತಿ ಮತ್ತು ಸಹನೆಯನ್ನು ಕರುಣಿಸಲಿ.
ರಾಜ್ಯ ಕಂಡ ಅತ್ಯಂತ ಜನಪ್ರಿಯ @CMofKarnataka ಹಾಗೂ ದೇಶದ ಶ್ರೇಷ್ಠ ಅಹಿಂದ ನೇತಾರ ಸನ್ಮಾನ್ಯ @siddaramaiah ಅವರ ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಶನ್ ಗೆ ಅನುಮತಿ ನೀಡುವ ಮಟ್ಟಕ್ಕೆ ಇಳಿದಿದ್ದು ನಿಜಕ್ಕೂ ಅಸಂವಿಧಾನಿಕ.
ತಮ್ಮ 4 ದಶಕಗಳ ರಾಜಕೀಯ ಜೀವನದಲ್ಲಿ ಒಂದೂ ಕಪ್ಪುಚುಕ್ಕೆ ಬಾರದಂತೆ ಜವಾಬ್ದಾರಿಯಿಂದ ರಾಜಕಾರಣ ಮಾಡಿದ ಧೀಮಂತ ನಾಯಕನ ಯಶಸ್ಸು ಸಹಿಸದ ಕೇಂದ್ರ ಬಿಜೆಪಿ ಸರ್ಕಾರ ಮತ್ತ�� ಪಕ್ಷ ಈ ಮಟ್ಟದ ನೀಚತನಕ್ಕಿಳಿಯುತ್ತವೆ ಎಂದು ಭಾವಿಸಿರಲಿಲ್ಲ.
ನಾಡಿನ ಬಡವರ ಕಲ್ಯಾಣಕ್ಕೆ ಭಾಗ್ಯಗಳ ಸರಮಾಲೆ ನೀಡಿದ ಬಡವರ ಭಾಗ್ಯವಿಧಾತ, ಗ್ಯಾರಂಟಿಗಳ ಮೂಲಕ ಜನರ ಜೀವನ ಬೆಳಗಿದ ಮಹಾನ್ ನಾಯಕ ಸಿದ್ದರಾಮಯ್ಯನವರ ಜತೆಗೆ ಇಡೀ ಕರುನಾಡಿದೆ. ಹಾಗೆಯೇ ಸಂವಿಧಾನವನ್ನು ಗೌರವಿಸುವ ಪ್ರ��ಿಯೊಬ್ಬ ಭಾರತೀಯರಿದ್ದಾರೆ.
#ಜೈಭೀಮ್ #ಜೈಸಂವಿಧಾನ #ಜೈಪ್ರಜಾಪ್ರಭುತ್ವ