ಬೆಂಗಳೂರಿಗೆ ಬರುತ್ತಿರುವಾಗ ಹೊಸೂರು ರಸ್ತೆಯ ಚಂದಾಪುರದ ಮುನ್ನ ಸುಮಾರು 50 ನಿಮಿಷಗಳಿಂದ ಒಂದಡಿ ಮುಂದೆ ಸಾಗುವುದಕ್ಕೆ ಆಗದೆ ನಿಂತಿದ್ದೇವೆ. ನಮ್ಮ ಮುಂದೆ ಸುಮಾರು 2 km traffic ಇದೆ ಎಂದಿದೆ.
ಪುದುಚೇರಿಗೆ ಸುಲಭವಾಗಿದ್ದ ಸೈಕಲ್ ಪಯಣ ಈಗ ಕೆಣಕುತ್ತಿದೆ.
ಹಿಂದೂ ದೇವಸ್ಥಾನಗಳಿಗೆ ತನ್ನದೇ ಆದ ಪಾವಿತ್ರ್ಯತೆ ಇರುತ್ತದೆ. ಜ್ಞಾನಯೋಗಿ ಬಸವಣ್ಣನವರ ಐಕ್ಯ ಸ್ಥಳದಲ್ಲಿ ನುಗ್ಗಿ ಮಾಂಸಾಹಾರ ಸೇವಿ ಸ್ಥಳದ ಪಾವಿತ್ರ್ಯತೆ ಹಾಳುಗೆಡುವುತ್ತಿರುವ ಇವರು ನಾಗರೀಕ ಸಮಾಜಕ್ಕೆ ಕಳಂಕ ತಂದಿದ್ದಾರೆ. ಇವರಿಗೆ ಕಿಂಚಿತ್ತೂ ವಿವೇಕ, ಧರ್ಮನಿಷ್ಠೆ, ಪ್ರಜ್ಞೆ ಇದ್ದಿದ್ದರೆ ಈ ಪವಿತ್ರ ಜಾಗದಲ್ಲಿ ಮಾಂಸಾಹಾರ ಸೇವಿಸುತ್ತಿರಲಿಲ್ಲ.
ಪೊಲೀಸರು ಹಾಗೂ ಜಿಲ್ಲಾಡಳಿತ ಇವರ ಕೃತ್ಯವನ್ನು public nuisance ಎಂದು ಪರಿಗಣಿಸಿ ಇವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಹಾಗೂ ಬಸವಣ್ಣನವರ ಐಕ್ಯ ಸ್ಥಳದಲ್ಲಿ ಪಾವಿತ್ರ್ಯತೆ, ನೈರ್ಮಲ್ಯತೆ, ಶ್ರದ್ದೆ ಕಾಪಾಡಲು ಸೂಕ್ತ ನಿಯಮಾವಳಿಗಳನ್ನು ರೂಪಿಸಲಿ ಹಾಗೂ ಅದನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲಿ.
ಇಲ್ಲಿ ಪಾಲಿಸಬೇಕಾದ ಕನಿಷ್ಠ ಶಿಷ್ಟಾಚಾರವನ್ನು ಸೂಚನಾ ಫಲಕಗಳಲ್ಲಿ ಪ್ರದರ್ಶಿಸಲಿ ಹಾಗೂ ಅದನ್ನು ಉದ್ದೇಶಪೂರ್ವಕವಾಗಿ ನಿರ್ಲಕ್ಷ್ಯ , ಪಾಲಿಸದೆ ಅಸಡ್ಡೆ ತೋರಿದವರ ಮೇಲೆ ದಂಡ ಹಾಗೂ ಕಾನೂನು ಕ್ರಮ ಜರುಗಿಸಲಿ.
ನೂರಾರು ವೈದ್ಯರಿಗೆ ಸ್ಪೂರ್ತಿಯಾಗಿರುವ ಖ್ಯಾತ ಹೃದ್ರೋಗ ತಜ್ಞರು, ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಸದಸ್ಯರಾಗಿರುವ ಡಾ. ಸಿ.ಎನ್.ಮಂಜುನಾಥ್ ಅವರಿಗೆ ಜನ್ಮದಿನದ ಹೃತ್ಪೂರ್ವಕ ಶುಭಾಶಯಗಳು.
ಭಗವಂತನು ತಮಗೆ ಉತ್ತಮ ಆಯುರಾರೋಗ್ಯ ನೀಡಿ ಕಾಪಾಡಲಿ, ಹೆಚ್ಚಿನ ಜನಸೇವೆ ಮಾಡಲು ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ.
@DrCNManjunath
🙏 Sri Venkateswara Swamy's Pedda Sesha Vahanam during the Salakatla Annual Brahmotsavam in #Tirumala is a spectacular display of devotion and divine grace. Thousands of devotees gathered to receive the Lord's blessings on the sacred Adi Sesha Vahanam.
Govinda! Govinda! ✨
ಮಹಾನ್ ಮೇಧಾವಿ, ಅಸಾಮಾನ್ಯ ತಂತ್ರಜ್ಞ, ಭಾರತ ರತ್ನ ಸರ್. ಎಂ. ವಿಶ್ವೇಶ್ವರಯ್ಯ ಅವರ ಜನ್ಮದಿನದ ಸ್ಮರಣೆಗಳು.
ರಾಷ್ಟ್ರ ನಿರ್ಮಾಣದಲ್ಲಿ ಮಹತ್ತರ ಕೊಡುಗೆ ನೀಡುತ್ತಿರುವ ಎಲ್ಲಾ ಪರಿಶ್ರಮಿ ಇಂಜಿನಿಯರ್ಗಳಿಗೆ ಅಭಿಯಂತರರ ದಿನದ ಶುಭಾಶಯಗಳು.
#EngineersDay
ಈ ಹಿಂದೆ ಸರ್. ಎಂ ವಿಶ್ವೇಶ್ವರಯ್ಯರವರ ಜನ್ಮದಿನದಂದು ಬರೆದಿದ್ದ ಅಂಕಣ.
ಒಬ್ಬ ವ್ಯಕ್ತಿಯಿಂದ ಒಂದು ದೇಶಕ್ಕೆ ಇಷ್ಟೆಲ್ಲಾ ಲಾಭವಾದ ಇನ್ನೊಂದು ಉದಾಹರಣೆ ಜಗತ್ತಿನಲ್ಲಿದೆಯೇ?
#EngineersDay
ಹೊಸ ಮಾದರಿಯ ಐಫೋನ್ ಮಾರುಕಟ್ಟೆಗೆ ಲಗ್ಗೆಯಿಟ್ಟಾಗಲೆಲ್ಲ ಶೋರೂಂಗಳ ಮುಂದೆ ಕಿಲೋಮೀಟರುಗಟ್ಟಲೆ ಉದ್ದದ ಸಾಲುಗಳು ಬೆಳೆಯುವುದು ಇತ್ತೀಚಿನ ವರ್ಷಗಳ ಸಾಮಾನ್ಯ ದೃಶ್ಯ. ಆಪಲ್ ಸಂಸ್ಥೆ ಹೊಸ ಐಫೋನ್ ಡ್ಯುಯೊ (iPhone Duo) ಬಿಡುಗಡೆ ಮಾಡಿದ ಬೆನ್ನಲ್ಲೇ ಜಗತ್ತಿನಾದ್ಯಂತ ಉಂಟಾಗಿರುವ ತಂತ್ರಜ್ಞಾನದ ಕ್ರೇಜ್ ಅಷ್ಟಿಷ್ಟಲ್ಲ.
ಅಂದ ಹಾಗೆ ಐಫೋನ್ ಡ್ಯುಯೊ (iPhone Duo) ಬೆಲೆ ಕೇಳಿದರೆ ಹೌಹಾರಿಹೋಗುತ್ತೀರಿ. 2TB ಐಫೋನ್ ಡ್ಯುಯೊ ಗೆ ಹತ್ತಿರ ಹತ್ತಿರ ನಾಲ್ಕು ಲಕ್ಷ ರುಪಾಯಿ ! ಆರಂಭಿಕ ಮಾಡೆಲ್ ಬೆಲೆಯೇ ಮೂರು ಲಕ್ಷ ರುಪಾಯಿ!
ಇದನ್ನು ನೋಡಿದಾಗ ನನಗೆ ಒಂದು ಮಾತು ನೆನಪಾಯಿತು - If your phone costs more than the money in your bank account, you’re not serious about your life. (ನಿಮ್ಮ ಬ್ಯಾಂಕ್ ಖಾತೆಯಲ್ಲಿರುವ ಮೊತ್ತಕ್ಕಿಂತ ನಿಮ್ಮ ಜೇಬಿನಲ್ಲಿರುವ ಫೋನಿನ ಬೆಲೆ ಹೆಚ್ಚಾಗಿದ್ದರೆ, ನೀವು ನಿಮ್ಮ ಬದುಕಿನ ಬಗ್ಗೆ ಗಂಭೀರವಾಗಿಲ್ಲ ಎಂದೇ ಅರ್ಥ.)
ಈ ಮಾತು ಮೇಲ್ನೋಟಕ್ಕೆ ವ್ಯಂಗ್ಯದಂತೆ ಕಂಡರೂ, ಇಂದಿನ ಯುವ ಪೀಳಿಗೆ ಸಿಲುಕಿಕೊಂಡಿರುವ ಆರ್ಥಿಕ ಭ್ರಮೆಯ ಕನ್ನಡಿಯಾಗಿದೆ. ಆಧುನಿಕ ಮಾರುಕಟ್ಟೆ ಜಗತ್ತು ಮನುಷ್ಯನ ನಿಜವಾದ ಅಗತ್ಯಗಳಿಗಿಂತ ಅವನ ಕೃತಕ ಆಸೆಗಳನ್ನು ಬಂಡವಾಳ ಮಾಡಿಕೊಂಡು ಬೆಳೆಯುತ್ತಿದೆ. ಒಂದು ಕರೆ ಮಾಡಲು, ಸಂದೇಶ ಕಳುಹಿಸಲು ಅಥವಾ ಇಂಟರ್ನೆಟ್ ಜಾಲಾಡಲು ಯಾವುದೇ ಸಾಧಾರಣ ಸ್ಮಾರ್ಟ್ಫೋನ್ ಸಾಕು. ಆದರೆ ಪ್ರೀಮಿಯಂ ಬ್ರ್ಯಾಂಡ್ಗಳು ಮಾರಾಟ ಮಾಡುತ್ತಿರುವುದು ಕೇವಲ ಎಲೆಕ್ಟ್ರಾನಿಕ್ ಉಪಕರಣವನ್ನಲ್ಲ, ಬದಲಿಗೆ ಒಂದು 'ಸಾಮಾಜಿಕ ಸ್ಥಾನಮಾನ'ವನ್ನು.
ಕೇವಲ ಅರ್ಧ ಕಚ್ಚಿದ ಸೇಬಿನ ಲೋಗೋ ಜೇಬಿನಲ್ಲಿದ್ದರೆ ತಾನು ಸಮಾಜದ ಗಣ್ಯ ವರ್ಗಕ್ಕೆ ಸೇರಿದವನು ಎಂಬ ಕೀಳರಿಮೆಯ ಮುಖವಾಡವನ್ನು ಜನ ಧರಿಸುತ್ತಿದ್ದಾರೆ. ಬ್ಯಾಂಕಿನಲ್ಲಿ ಕನಿಷ್ಠ ಮೊತ್ತವನ್ನು ಉಳಿಸಿಕೊಳ್ಳಲು ಪರದಾಡುವ ವ್ಯಕ್ತಿ, ಒಂದೂವರೆ-ಎರಡು ಲಕ್ಷ ರುಪಾಯಿಯ ಫೋನ್ ಕೈಯಲ್ಲಿಡಿದು ಓಡಾಡುವುದು ಕೇವಲ ತೋರಿಕೆಯ ಪರಮಾವಧಿ.
ಇಂದಿನ ತಲೆಮಾರನ್ನು ಆವರಿಸಿರುವ ಅತ್ಯಂತ ಅಪಾಯಕಾರಿ ಪಿಡುಗು ಎಂದರೆ ‘ನೋ-ಕಾಸ್ಟ್ ಇಎಂಐ’ (No-Cost EMI) ಮತ್ತು ಸಾಲದ ಸೌಲಭ್ಯಗಳು. ಜೇಬಿನಲ್ಲಿ ಹಣವಿಲ್ಲದಿದ್ದರೂ, ಮುಂದಿನ ಹನ್ನೆರಡು ಅಥವಾ ಇಪ್ಪತ್ನಾಲ್ಕು ತಿಂಗಳುಗಳ ಕಷ್ಟದ ದುಡಿಮೆಯನ್ನು ಅಡವಿಟ್ಟು ದುಬಾರಿ ಗ್ಯಾಜೆಟ್ಗಳನ್ನು ಖರೀದಿಸುವುದು ಸುಲಭವಾಗಿದೆ. ಬ್ಯಾಂಕ್ ಖಾತೆಯಲ್ಲಿ ಹತ್ತು ಸಾವಿರ ರುಪಾಯಿ ಕೂಡ ಉಳಿತಾಯವಿಲ್ಲದಿದ್ದಾಗ, ಲಕ್ಷ ರುಪಾಯಿಯ ಸಾಲದ ಕಂತನ್ನು ಮೈಮೇಲೆ ಎಳೆದುಕೊಳ್ಳುವುದು ಆರ್ಥಿಕ ಆತ್ಮಹತ್ಯೆಗೆ ಸಮಾನ. ಪ್ರತಿ ತಿಂಗಳ ಸಂಬಳ ಬರುತ್ತಿದ್ದಂತೆ ಅರ್ಧಕ್ಕಿಂತ ಹೆಚ್ಚು ಹಣ ಈ ಸಾಲಗಳ ಪಾವತಿಗೇ ಮುಗಿದುಹೋದರೆ, ವ್ಯಕ್ತಿಯ ಸ್ವಾತಂತ್ರ್ಯ ಮತ್ತು ಆರ್ಥಿಕ ಭದ್ರತೆ ಸಂಪೂರ್ಣವಾಗಿ ನಾಶವಾಗುತ್ತದೆ.
ಮನಃಶಾಸ್ತ್ರಜ್ಞರು ಇದನ್ನು ‘ಫೋಮೊ’ (FOMO - Fear of Missing Out) ಎಂದು ಕರೆಯುತ್ತಾರೆ. ಅಂದರೆ ಗೆಳೆಯರ ನಡುವೆ, ಆಫೀಸಿನಲ್ಲಿ ಅಥವಾ ಸೋಷಿಯಲ್ ಮೀಡಿಯಾದಲ್ಲಿ ತಾನು ಹಿಂದೆ ಬಿದ್ದುಬಿಡುತ್ತೇನೋ ಎಂಬ ಅನಗತ್ಯ ಭಯ. ಇನ್ಸ್ಟಾಗ್ರಾಮ್ ಮತ್ತು ಇತರ ಜಾಲತಾಣಗಳಲ್ಲಿ ಕನ್ನಡಿಯ ಮುಂದೆ ನಿಂತು ಐಫೋನ್ ಹಿಡಿದು ಸೆಲ್ಫಿ ಕ್ಲಿಕ್ಕಿಸಿ ಹಾಕುವ ಒಂದು ಕ್ಷಣದ ‘ಲೈಕ್ಸ್’ ಮತ್ತು ‘ಕಾಮೆಂಟ್ಸ್’ಗಾಗಿ ಜನರು ತಮ್ಮ ಭವಿಷ್ಯದ ಉಳಿತಾಯವನ್ನೇ ಪಣಕ್ಕಿಡುತ್ತಿದ್ದಾರೆ. ಬೇರೆಯವರ ಮೆಚ್ಚುಗೆಯನ್ನು ಕೊಳ್ಳಲು ನಮ್ಮ ಸ್ವಂತ ಪರಿಶ್ರಮದ ಹಣವನ್ನು ಸುರಿಯುವುದು ಈ ಜಮಾನದ ಹುಚ್ಚು ಕ್ರೇಜ್.
ಬದುಕಿನ ಬಗ್ಗೆ ಗಂಭೀರವಾಗಿರುವ ಒಬ್ಬ ವ್ಯಕ್ತಿ ಯಾವತ್ತೂ ‘ಆಸ್ತಿ’ (Asset) ಮತ್ತು ‘ಹೊಣೆಗಾರಿಕೆ’ (Liability) ನಡುವಿನ ವ್ಯತ್ಯಾಸವನ್ನು ಚೆನ್ನಾಗಿ ಅರಿತಿರುತ್ತಾನೆ. ಚಿನ್ನ, ಭೂಮಿ ಅಥವಾ ಷೇರು ಮಾರುಕಟ್ಟೆಯಲ್ಲಿ ಹೂಡಿದ ಹಣ ಕಾಲಕ್ರಮೇಣ ಬೆಳೆಯುತ್ತದೆ ಮತ್ತು ಸಂಕಷ್ಟದ ಸಮಯದಲ್ಲಿ ನೆರವಾಗುತ್ತದೆ. ಆದರೆ ಸ್ಮಾರ್ಟ್ಫೋನ್ ಎನ್ನುವುದು ಕೊಂಡ ಕ್ಷಣದಿಂದಲೇ ಮೌಲ್ಯ ಕಳೆದುಕೊಳ್ಳುವ (Depreciating) ವಸ್ತು. ಇಂದು ಲಕ್ಷ ರುಪಾಯಿ ಕೊಟ್ಟು ಕೊಂಡ ಫೋನ್, ನಾಳೆ ಬೆಳಗ್ಗೆ ಬಾಕ್ಸ್ ತೆರೆದ ತಕ್ಷಣ ಇಪ್ಪತ್ತು ಸಾವಿರ ಮೌಲ್ಯ ಕಳೆದುಕೊಳ್ಳುತ್ತದೆ. ಇಂಥ ತ್ವರಿತವಾಗಿ ಮೌಲ್ಯ ಕಳೆದುಕೊಳ್ಳುವ ವಸ್ತುವಿನ ಮೇಲೆ ತನ್ನೆಲ್ಲ ಶಕ್ತಿಯನ್ನು ಸುರಿಯುವವನು ಬದುಕಿನ ಗುರಿಗಳನ್ನು ಗಂಭೀರವಾಗಿ ತೆಗೆದುಕೊಂಡಿದ್ದಾನೆಂದು ಭಾವಿಸುವುದು ಮೂರ್ಖತನ.
ಆಕಸ್ಮಿಕವಾಗಿ ಎದುರಾಗುವ ವೈದ್ಯಕೀಯ ತುರ್ತು ಪರಿಸ್ಥಿತಿಗಳು ಅಥವಾ ಉದ್ಯೋಗ ನಷ್ಟದಂಥ ಸಂದರ್ಭಗಳಲ್ಲಿ ಕೈಯಲ್ಲಿರುವ ದುಬಾರಿ ಫೋನ್ ಯಾವ ನೆರವಿಗೂ ಬರುವುದಿಲ್ಲ. ಬ್ಯಾಂಕ್ ಖಾತೆಯಲ್ಲಿ ಕನಿಷ್ಠ ಆರು ತಿಂಗಳ ಖರ್ಚಿಗೆ ಆಗುವಷ್ಟು ತುರ್ತು ನಿಧಿ (Emergency Fund) ಇಲ್ಲದ ವ್ಯಕ್ತಿ, ಯಾವುದೇ ಅನಿರೀಕ್ಷಿತ ಹೊಡೆತಕ್ಕೆ ಸುಲಭವಾಗಿ ಕುಸಿದುಹೋಗುತ್ತಾನೆ. ಆಸ್ಪತ್ರೆಯ ಬಿಲ್ ಕಟ್ಟಲು ಸಂಬಂಧಿಕರ ಮುಂದೆ ಕೈಚಾಚುವ ಪರಿಸ್ಥಿತಿ ಬಂದಾಗ, ಕೈಯಲ್ಲಿರುವ ಪ್ರೀಮಿಯಂ ಫೋನ್ ಆತನ ಬೇಜವಾಬ್ದಾರಿತನವನ್ನು ಎತ್ತಿ ತೋರಿಸಿ ಅಣಕಿಸತೊಡಗುತ್ತದೆ. ಬದುಕನ್ನು ಪ್ರೀತಿಸುವವನು ಮೊದಲು ಸುರಕ್ಷತೆಯ ಕೋಟೆಯನ್ನು ಕಟ್ಟುತ್ತಾನೆಯೇ ಹೊರತು, ಕೇವಲ ರಂಗುರಂಗಿನ ತೋರಿಕೆಯ ಗೋಡೆಯನ್ನಲ್ಲ.
ಶ್ರೀಮಂತಿಕೆ ಎನ್ನುವುದು ವ್ಯಕ್ತಿಯ ಬಳಿ ಇರುವ ವಸ್ತುಗಳಲ್ಲಲ್ಲ, ಬದಲಿಗೆ ಆತ ಉಳಿಸಿರುವ ಮತ್ತು ಹೂಡಿಕೆ ಮಾಡಿರುವ ಆರ್ಥಿಕ ಸಂಪನ್ಮೂಲದಲ್ಲಿದೆ. ನಿಜವಾದ ಶ್ರೀಮಂತರು ತಮ್ಮ ಹಣವನ್ನು ದುಡಿಸುತ್ತಾರೆ ಮತ್ತು ಆ ಹಣ ತರುವ ಲಾಭದಿಂದ ಐಷಾರಾಮಿ ವಸ್ತುಗಳನ್ನು ಕೊಳ್ಳುತ್ತಾರೆ. ಆದರೆ ಮಧ್ಯಮ ವರ್ಗದವರು ಮತ್ತು ಯುವಜನರು ತಾವು ಪಡುವ ಕಷ್ಟದ ದುಡಿಮೆಯನ್ನೇ ನೇರವಾಗಿ ಐಷಾರಾಮಿಗೆ ಸುರಿದು, ಬಡತನದ ವಿಷವರ್ತುಲದಲ್ಲಿ ಶಾಶ್ವತವಾಗಿ ಸಿಲುಕಿಕೊಳ್ಳುತ್ತಾರೆ. ನಿಮ್ಮ ನಿವ್ವಳ ಮೌಲ್ಯಕ್ಕಿಂತ (Net Worth) ನಿಮ್ಮ ಜೀವನಶೈಲಿಯ ವೆಚ್ಚ ಹೆಚ್ಚಾಗಿದ್ದರೆ…
ಮುಂದಿನ ಓದಿಗೆ : https://t.co/WxEyMcOoCf
ಹಿಂದೂ ಧರ್ಮದ ಧಾರ್ಮಿಕ ವಿಚಾರಗಳು:
🫠,ಒಡೆದಿರುವ ಅಥವಾ ಬಿರುಕು ಬಿಟ್ಟಿರುವ ಕನ್ನಡಿ ಇಡಬೇಡಿ.ಅದು ನಕಾರಾತ್ಮಕ ಶಕ್ತಿಯನ್ನು ಆಹ್ವಾನಿಸುತ್ತದೆ,
🫠,ಮನೆಯ ಯಾವುದೇ ಸ್ಥಳದ ನಲ್ಲಿಯಲ್ಲಿ ನೀರು ನಿರಂತರ ಸೋರುವಿಕೆ ಇರಬಾರದು.ಅದರಿಂದ ಹಣ ವ್ಯಯ ಸಂಭವ,
🫠,ಮನೆಯ ಆವರಣದಲ್ಲಿ ಒಣಗಿದ ಗಿಡಗಳು ಇಡಬೇಡಿ ಇದರಿಂದಮನಸ್ಸನಲ್ಲಿಖಿನ್ನತೆ ಉಂಟಾಗುವ ಸಂಭವ,
🫠,ಸಾಧ್ಯವಾದಷ್ಟುದೇವರಿಗೆ ಮನೆಯ ಹೂವುಗಳನ್ನೇ ಅರ್ಪಿಸಲು ಪ್ರಯತ್ನ ಮಾಡಿ.ಹೊರಗಡೆಯಿಂದ ತಂದಹೂವಿಗೆ ಮನೆಯ ನೀರನ್ನುಸಿಂಪಡಿಸಬೇಕು. ಶುದ್ಧ ಮಾಡಿ ನಂತರ ಉಪಯೋಗಿಸಬೇಕು,
🫠,ನಿಂತ ಗಡಿಯಾರವು ಅಶುಭ ಲಕ್ಷಣ.ಇದನ್ನು ಕೂಡಲೇ ಸರಿಪಡಿಸುವುದು ಉತ್ತಮ,
🫠,ದೇವರಕೋಣೆಯಮೇಲೆ.ಅತಿಯಾದ ಭಾರವನ್ನು ಇಡಬಾರದು.ಒಡೆದುಹೋದ ದೇವರ ಮೂರ್ತಿ ಅಥವಾ ಫೋಟೋಗಳನ್ನುಇಡಬೇಡಿ,
🫠,ಮನೆಯಲ್ಲಿ ಹಿರಿಯರಿಗೆ ಮತ್ತು ತಂದೆ-ತಾಯಿಯರಿಗೆ ಕಾಲುಮುಟ್ಟಿ ನಮಸ್ಕಾರ ಮಾಡುವ ಪದ್ಧತಿಯನ್ನು ಮಕ್ಕಳಲ್ಲಿ ಬೆಳೆಸಿ. ಹೆತ್ತವರಿಗೆ ಇದರ ಅವಶ್ಯಕತೆ ಇಲ್ಲದೆ ಇರಬಹುದು.ಆದರೆ ಹೆತ್ತವರ ಆಶೀರ್ವಾದವು ಮಕ್ಕಳನ್ನು ನಿರಂತರ ರಕ್ಷಿಸಲು ಇದು ಅತ್ಯಂತ ಸಹಕಾರಿ,
🫠,ದೇವರ ಕೋಣೆಯಲ್ಲಿ ಒಂಟಿದೀಪಉರಿಸಬಾರದು. ಸಣ್ಣ ದೀಪವಾದರೂ ಅಡ್ಡಿ ಇಲ್ಲ, ಎರಡು ದೀಪಗಳನ್ನು ಇಡಿ,
🫠,ಚಾಪೆ ಬಳಸುತ್ತಿದ್ದರೆ ಮುಗುಚಿ ಹಾಕಬಾರದು,
🫠,ಸಂಜೆಗುಡಿಸಿದಕಸವನ್ನು ಹೊರಗೆ ಹಾಕಬಾರದು,
🫠,ಯಾವುದೇ ಹೊಸ ಬಟ್ಟೆ ಅಥವಾ ಒಡವೆಗಳನ್ನು ತಂದರೆ ಮೊದಲು ದೇವರ ಸನ್ನಿಧಾನದಲ್ಲಿಟ್ಟು ತೆಗೆದುಕೊಳ್ಳುವುದು. ಇದರಿಂದ ವಸ್ತುವಿನಲ್ಲಿ ಇದ್ದ ಕಲಿದೋಷದೂರವಾಗುವುದು,
🫠,ಕುಲದೇವರಿಗೆ-ಇಷ್ಟ ದೇವರಿಗೆ-ಗ್ರಾಮ ದೇವರಿಗೆ ಮನೆಯಎಲ್ಲಶುಭಕಾರ್ಯಗಳಲ್ಲಿ.ಕಾಣಿಕೆಯನ್ನುತೆಗೆದು ಇಡುವುದನ್ನು ರೂಢಿ ಮಾಡಿ,
🫠,ಜೇಡರಬಲೆ ಮನೆಯಲ್ಲಿ ಕಟ್ಟಿದ್ದರೆತಕ್ಷಣನಿವಾರಿಸಿ-
ಅದು ಅಶುಭತರುವ ಸಂಕೇತ.ಮನೆಯನ್ನು ಎಷ್ಟು ಶುಚಿಯಾಗಿಇಟ್ಟುಕೊಳ್ಳುತ್ತೇವೆ.ಅಷ್ಟು ದೈವಿಕ ಕಳೆ ವೃದ್ಧಿಸುವುದು,
🫠,ಮನೆಯ ಯಾವುದೇ ಜಾಗದಲ್ಲಿ ಪಾರಿವಾಳಗಳು ಮನೆ ಮಾಡಿದರೆ - ಅದು ಕಷ್ಟಗಳು ಎದುರಾಗುವ ಸಂಕೇತ. ಅವುಗಳ ಪ್ರಾಣ
ಹಾನಿ ಆಗದಂತೆ ಅಲ್ಲಿಂದ ಓಡಿಸಬೇಕು,
🫠,ಜೇನಿನಗೂಡುಮನೆಯಲ್ಲಿಕಟ್ಟಬಾರದು.ಸಾಧ್ಯವಾದಷ್ಟು. ಮನೆಯೊಳಗೆ ಯಾವುದೇ ಜೀವಿಗಳಿಗೆ ಜೀವ ಹಾನಿ ಮಾಡಬೇಡಿ,
🫠,ಬಾವುಲಿಗಳು ಮನೆಯ ಸರಹದ್ದಿನಲ್ಲಿವಾಸಮಾಡದಂತೆ,ಎಚ್ಚರವಹಿಸಿ,
🫠,ಹಿರಿಯರುನಂಬಿಕೊಂಡು. ಬಂದ ದೈವಗಳಿಗೆ ಗ್ರಾಮ ದೇವರಿಗೆ; ಅವರದೇ ಆದ ಸಂಪ್ರದಾಯಗಳಿಗೆ ಗೌರವ ತೋರಿಸುವುದು ನಮ್ಮ ಆದ್ಯ ಕರ್ತವ್ಯ,
🫠,ಉತ್ತರ ದಿಕ್ಕಿಗೆ ತಲೆ ಮಾಡಿ ಮಲಗಬಾರದು. ದಕ್ಷಿಣ ದಿಕ್ಕಿಗೆ ಮುಖ ಮಾಡಿ ನಿರಂತರ ಕುಳಿತುಕೊಳ್ಳುವ ವ್ಯವಸ್ಥೆ ಇರಬಾರದು
🫠,ಬರೀ ನೆಲದಲ್ಲಿ ಮಲಗುವುದಾಗಲಿ ಹರಿದ ವಸ್ತ್ರಗಳನ್ನು ಧರಿಸುವುದು ಮಾಡಬೇಡಿ,
🫠,ಪ್ರತೀ ದಿನ ಬೆಳಗ್ಗೆ ಮತ್ತು ಸಂಜೆ ಸಂಧ್ಯಾಕಾಲದಲ್ಲಿ ದೇವರಿಗೆ ದೀಪ ಬೆಳಗುವ ಅಭ್ಯಾಸ ರೂಢಿಮಾಡಿ,
🫠,ಸೂರ್ಯೋದಯ ಮತ್ತು ಸೂರ್ಯಾಸ್ತದ ಸಮಯದಲ್ಲಿವಿಷ್ಣು ಸಹಸ್ರನಾಮ ಅಥವಾ ನಿಮ್ಮ ಇಷ್ಟದೇವರ ಯಾವುದೇ ಸ್ತೋತ್ರ ಮಂತ್ರ {ಭಜನೆ}ಪಠಿಸಿ ಅಥವಾ ಅದನ್ನು ಮನೆಯಲ್ಲಿ ಕೇಳುವಂತೆ ನಿತ್ಯವ್ಯವಸ್ಥೆಮಾಡಿ.
ಇದರಿಂದ ಮನೆಯಲ್ಲಿ ಸಾತ್ವಿಕ ವಾತಾವರಣ ವೃದ್ಧಿಯಾಗುತ್ತದೆ,
🫠,ಆಗ್ನೇಯ ದಿಕ್ಕಿನಲ್ಲಿ, ಅಂದರೆ ದಕ್ಷಿಣ ಮತ್ತು ಪೂರ್ವ ಮಧ್ಯದ ದಿಕ್ಕಿನಲ್ಲಿ ಅಡುಗೆ ಮನೆ ಇರಬೇಕು. ಅದು ಇಲ್ಲವೆಂದಾದಲ್ಲಿ ನಿಮ್ಮ ಅಡುಗೆ ಮನೆಯ ಆಗ್ನೇಯ ದಿಕ್ಕಿನಲ್ಲಿ ಗ್ಯಾಸ್ ಸ್ಟವ್ ಅನ್ನಾದರೂ ಇಡಬೇಕು,
🫠,ಅಡುಗೆ ಮನೆಯಲ್ಲಿ ಔಷಧಗಳನ್ನ ಇಡಬೇಡಿ. ನೆಗಟಿವ್ಎನರ್ಜಿವಕ್ಕರಿಸುವ.ಅಪಾಯವಿರುತ್ತದೆ,
🫠,ಆಹಾರ ಸೇವಿಸಿದ ನಂತರ ಎಂಜಲು ಮುಸುರೆ ಗಳನ್ನು ತುಂಬಾ ಕಾಲ ಹಾಗೆಯೇ ತೊಳೆಯದೆ ಇಡಬೇಡಿ,
🫠,ನೀವು ಮಲಗುವ ಕೋಣೆಯಲ್ಲಿ ಕನ್ನಡಿ ಇಟ್ಟುಕೊಳ್ಳಬೇಡಿ.ಒಂದು ವೇಳೆ,ಕನ್ನಡಿ ತೆಗೆದುಹಾಕಲು ಸಾಧ್ಯವಿಲ್ಲವೆಂದಾದರೆ ನಿಮ್ಮ ಮುಖ ಕಾಣದಂತೆ ಕನ್ನಡಿಯನ್ನ ದೂರ ಇಡಿ. ರಾತ್ರಿಹೊತ್ತಿನಲ್ಲಿ ಕನ್ನಡಿ ನೋಡುವುದು ಅಷ್ಟು ಸಮಂಜಸವಲ್ಲ,
🫠,ವರ್ಷಕ್ಕೆಒಮ್ಮೆಯಾದರೂ ಗಣ ಹೋಮವನ್ನು ಮಾಡಿದರೆ ತುಂಬಾ ಉತ್ತಮ.ಇದರಿಂದ ವಾಸ್ತು ಸದೃಢವಾಗಿರುತ್ತದೆ,
🫠,ವರ್ಷಕ್ಕೆಒಮ್ಮೆಯಾದರೂಬ್ರಾಹ್ಮಣಸುವಾಸಿನಿ{ಅತಿಥಿಸತ್ಕಾರ} ಪೂಜೆ ಮಾಡಿ. ಯೋಗ್ಯರಿಗೆ ದಾನ ಮಾಡಿ. ಇದರಿಂದ ಸಂಪತ್ತು ದೈವಿಕ ರೂಪ ಪಡೆಯುತ್ತದೆ,
🫠,ಸಾಧ್ಯವಿದ್ದಲ್ಲಿ ನಿತ್ಯವೂ ಮನೆಯ ಸಮೀಪದ ದೇವಾಲಯ ಮತ್ತು ಗ್ರಾಮದೇವರ ಸಂದರ್ಶನ ಉತ್ತಮ,
🫠,ವರ್ಷಕ್ಕೆಒಮ್ಮೆಯಾದರೂ.ಸಮಾಜದ.ಕುಟುಂಬದ.ಗುರುಪೀಠದಫಲಮಂತ್ರಾಕ್ಷತೆಯನ್ನು ತರುವುದು,
🫠,ಸ್ನಾನವಿಲ್ಲದೆ ಊಟ ಮಾಡುವುದು ಒಳ್ಳೆಯದಲ್ಲ.
ಅನ್ನವು ದೇವರಿಗೆ ಸಮಾನ,
🫠,ಓದುತ್ತಿರುವಪುಸ್ತಕವನ್ನು ಯಾರಾದರೂ ಕರೆದಾಗ ಹಾಗೆಯೇಬಿಟ್ಟುಹೋಗಬೇಡಿ,
🫠,ಪುಸ್ತಕಗಳನ್ನು ಮಡಚಿಟ್ಟು ಸರಿಯಾದ ಜಾಗದಲ್ಲಿ ಇರಿಸಿ ಹೋಗಿ.
ಪುಸ್ತಕಗಳು ನಮ್ಮ ನಿಜವಾದ ಸ್ನೇಹಿತರು,
🫠,ಸಂಧ್ಯಾಕಾಲಗಳಲ್ಲಿ ಯಾರೊಂದಿಗೂವೈಮನಸ್ಸು;ಕೆಟ್ಟ ವಿಚಾರ;ಮಾತುಕತೆ ಬೇಡ.ವಾತಾವರಣದಲ್ಲಿ ವಾಸ್ತು ಅಂದರೆ ಅಸ್ತು ದೇವತೆಗಳು ಹಾಗೆಯೇ ಆಗಲಿ ಎಂದು ಅನುಗ್ರಹಿಸುತ್ತವೆ,
🫠,ಸಾಧ್ಯವಾದಷ್ಟು ದೇವರ ಮನೆಯಲ್ಲಿ ಶುಚಿತ್ವವಿರಲಿ ಅಗತ್ಯಕ್ಕಿಂತ ಇತರೇ ಯಾವುದೇ ವಸ್ತುಗಳನ್ನು ಇಡಬೇಡಿ,
🫠,ದೇವರ ಉತ್ಸವ ಮತ್ತು ಆರತಿಗಳು ಇದ್ದಲ್ಲಿ ಎದ್ದು ನಿಂತು ಗೌರವವನ್ನು ತೋರಿಸಿ. ಧಾರ್ಮಿಕ ಆಚರಣೆಗಳಲ್ಲಿ ಭಾವನೆಗೆ ಅತ್ಯಂತ ದೊಡ್ಡ ಮಹತ್ವ,
🫠,ಯಾವುದೇ ಜಾತಿ ಪಂಗಡದವರಾಗಿದ್ದರೂ ಎಲ್ಲಾ ಧರ್ಮಗಳ ದೈವಿಕ ವಿಚಾರವನ್ನು ಗೌರವಿಸಿ,
🫠,ಕಿರಿಯರು ಅಥವಾ ಮಕ್ಕಳು ಕೇಳುವ ಯಾವುದೇ ದೈವಿಕ ವಿಚಾರಗಳಿಗೆ ಹಾರಿಕೆಯ ಉತ್ತರ ನೀಡಬೇಡಿ. ಸಂಸ್ಕಾರಗಳನ್ನು ನಮ್ಮಿಂದ ನೋಡಿ ತಿಳಿದು ಕಲಿಯುತ್ತವೆ ಮಕ್ಕಳು,
🫠,ಸುಮ್ಮಸುಮ್ಮನೆ ಯಾವುದೇ ಗಿಡ-ಮರ ಕ್ರಿಮಿ-ಕೀಟ ಪಶುಪಕ್ಷಿಗಳಿಗೆ ಹಿಂಸಿಸಬೇಡಿ.ಮನುಷ್ಯ
ನಿಗಿಂತ ಮೊದಲೇ ಅವುಗಳು ಭೂಮಿಯಲ್ಲಿ ಇವೆ,
🫠,ದೀಪ ಹಾರಿ ಹೋಗಿದೆ ಅಕ್ಕಿ ಖಾಲಿಯಾಗಿದೆ ಈ ರೀತಿ ಮಾತುಗಳನ್ನು ಮನೆಯಲ್ಲಿ ಹೇಳಬಾರದು. ದೀಪ ಸಣ್ಣದಾಗಿದೆ. ಅಕ್ಕಿ ತರಬೇಕು ಈ ರೀತಿ ಮಾತುಗಳನ್ನು ಮಕ್ಕಳಲ್ಲಿ ಹೇಳುವಂತೆ ತಿಳಿಸಿ,
🫠,ರಾತ್ರಿ ಊಟವಾದ ಮೇಲೆಊಟದಪಾತ್ರೆಗಳನ್ನು ಎಲ್ಲಾ ಖಾಲಿಮಾಡಿ ಸಾರಿಸಿ ಇಡುವುದು ಶುಭವಲ್ಲ. ಕೊನೆಯಪಕ್ಷ ಬೆಲ್ಲ-ಅವಲಕ್ಕಿ ಯನ್ನಾದರೂ ಪಾತ್ರೆಯಲ್ಲಿ ಇರಿಸಿ,
🫠,ದೇವರ ಬಗೆಗೆ ವಿಶೇಷ ಭಯ-ಭೀತಿಯನ್ನುಮಕ್ಕಳಲ್ಲಿ ಉಂಟು ಮಾಡಬೇಡಿ. ದೇವರಷ್ಟು ಹತ್ತಿರದವರು ನಮಗೆ ಯಾರು ಇಲ್ಲ,
🫠,ಪ್ರತಿ ತಿಂಗಳಲ್ಲಿ ಬರುವ ಹಬ್ಬ ಹರಿದಿನಗಳ ಬಗ್ಗೆ ತಿಳಿದುಕೊಳ್ಳುವ ಜಿಜ್ಞಾಸೆ ಮಕ್ಕಳಲ್ಲಿ ಬೆಳೆಸಿ,
🫠,ಸಾಧ್ಯವಾದಷ್ಟು ಮುಂಜಾನೆ ಅಥವಾ ಊಟಕ್ಕೆ ಮೊದಲು ಕಾಗೆಗಳಿಗೆ-ಪಕ್ಷಿಗಳಿಗೆ ಆಹಾರ ನೀಡುವ ಕ್ರಮ ಬೆಳೆಸಿಕೊಳ್ಳಿ,
🫠,ಮನೆಯಲ್ಲಿ ಕುಡಿಯುವ ನೀರನ್ನುಪ್ರತಿನಿತ್ಯಬದಲಾವಣೆ. ಮಾಡಿ{ಸ್ಟೀಲ್ಪಾತ್ರೆಯಲ್ಲಿ ಇದ್ದರೆ}ಇಲ್ಲವಾದಲ್ಲಿ ಮಣ್ಣಿನ -ತಾಮ್ರದ ಪಾತ್ರೆಯಲ್ಲಿಇರಿಸಿ,
🫠,ಬೆಳಿಗ್ಗೆಸ್ನಾನವಾದಮೇಲೆ ಮಕ್ಕಳಿಗೆದೇವರಕೋಣೆಯಲ್ಲಿ.ನಿಂತುಪ್ರಾರ್ಥನೆಮಾಡುವುದನ್ನು ಹೇಳಿಕೊಡಿ. ಮಕ್ಕಳ ಪ್ರಾರ್ಥನೆಗಳು ಬಹುಬೇಗ ಫಲ ಕೊಡುತ್ತವೆ,
🫠,ಪೂಜೆ ಪುರಸ್ಕಾರ ಗಳಲ್ಲಿ ಮನೆಯ ಹಿರಿಯರನ್ನು ಮುಂದೆ ನಿಲ್ಲಿಸಿ ಪ್ರಾರ್ಥನೆ ಮಾಡಿಸಿ. ಹಿರಿಯರಿಂದ ಪ್ರಸಾದ ಸ್ವೀಕರಿಸಿ. ಇದು ನಮ್ಮ ಸನಾತನ ಧರ್ಮ,
🫠,ಕುಟುಂಬದ ಶುಭಕಾರ್ಯಗಳಲ್ಲಿ ಸಾಧ್ಯವಾದಷ್ಟು ಭಾಗವಹಿಸಲು ಪ್ರಯತ್ನ ಮಾಡಿ{ಭಿನ್ನಾಭಿಪ್ರಾಯಗಳು ಯಾವಾಗಲೂಇರಬಹುದು}
🫠,ಮಕ್ಕಳಿಗೆ ಕುಟುಂಬದ ಸರ್ವ ಸದಸ್ಯರ ಪರಿಚಯ ಮಾಡಿಕೊಡಿ. ಕುಟುಂಬದ ವಂಶವೃಕ್ಷದ ದಾಖಲೆ ಮಾಡಿ ಇಡಿ,
🫠,ದೇವರಿಗೆ ಪ್ರಾರ್ಥನೆಗೆ ಮತ್ತು ಬೇರೆಯವರಿಗೆ ದಾನಕ್ಕೆ ತೆಂಗಿನಕಾಯಿ ಕೊಡುವಾಗ ಅದರ ಜುಟ್ಟಿನ ಭಾಗ ನಿಮ್ಮ ದಿಕ್ಕಿನಲ್ಲಿಇರಲಿ. ಇದೇ ರೀತಿ ಬಾಳೆಹಣ್ಣು ಮತ್ತು ವೀಳ್ಯದಲೆಯ ತುದಿಭಾಗವೂ ಕೂಡ,
🫠,ತೆಂಗಿನಕಾಯಿ ಒಡೆದ ಭಾಗದಲ್ಲಿ ಕಣ್ಣುಗಳಿರುವ ಭಾಗವನ್ನು ಬೇರೆಯವರಿಗೆ ಕೊಡಬೇಕು.{ಬ್ರಾಹ್ಮಣರಿಗೆ ಕೊಡುವಾಗ}
🫠,ಪೂರ್ಣ ಕತ್ತಲೆ ಇರುವ ಕೋಣೆಯಲ್ಲಿಮಲಗಬಾರದು.ಸಣ್ಣ ಬೆಳಕಾದರೂ ಉರಿಯುತ್ತಿರಬೇಕು,
🫠,ತಟ್ಟೆಯಲ್ಲಿ ಮೊದಲು ಅನ್ನವನ್ನು ಹಾಕಬಾರದು ಯಾವುದಾದರೂ ಪಲ್ಯ ಉಪ್ಪು.ಇತರೆಖಾದ್ಯವನ್ನಾದರೂ ಬಳಸಿಕೊಂಡು ನಂತರ ಅನ್ನವನ್ನುಹಾಕಿಕೊಳ್ಳಬೇಕು,
🫠,ದೇವರ ಕೋಣೆಯ ಎದುರು ಕಾಲು ಬಿಡಿಸಿ ಮಲಗುವುದು ಅಥವಾ ಕಾಲುಬಿಡಿಸಿಕುಳಿತುಕೊಳ್ಳುವುದು ಅಥವಾ ದೇವರಿಗೆ ನೇರವಾಗಿ ಬೆನ್ನುಹಾಕಿ ಕುಳಿತುಕೊಳ್ಳುವುದು ಮಾಡಬೇಡಿ,
🫠,ಮುತ್ತೈದೆಯರಿಗೆ ಶುಕ್ರವಾರ, ಮಂಗಳವಾರ, ಅತ್ತೆಮಾವಂದಿರಶ್ರಾದ್ಧದಂದು,ಉತ್ಸವದಂದು, ಅಭ್ಯಂಜನ ದಂದು,{ನದೀ ಸ್ನಾನ, ಸಮುದ್ರಸ್ನಾನ}ಮಾತ್ರ ತಲೆ ಸ್ನಾನ ಮಾಡಬೇಕು.ಉಳಿದ ದಿನಗಳಲ್ಲಿ ಕಂಠಪರ್ಯಂತ ಸ್ನಾನ ಮಾತ್ರ,
🫠,ಊಟ ಮಾಡಲು ಕುಳಿತುಕೊಂಡ ಮೇಲೆ ಊಟದ ಮಧ್ಯದಲ್ಲಿ ಎದ್ದು ಹೋಗಬೇಡಿ. ಊಟವು ಒಂದು ಯಜ್ಞಕ್ಕೆ ಸಮಾನ,
🫠,ಮನೆಯಿಂದ ಹೊರಗೆ ಹೊರಟಾಗ ಮನೆಯವರಿಗೆ ಹೋಗಿ ಬರುತ್ತೇನೆ ಎಂದು ಹೇಳಬೇಕು,ಹೋಗುತ್ತೇನೆ ಎಂದು ಹೇಳಬಾರದು, ಪ್ರತಿನಿತ್ಯ ಇವುಗಳನ್ನು ಅನುಸರಿಸಿ. ನೀವು ಸಂಸ್ಕಾರವಂತರಾಗುವುದರ ಜೊತೆಗೆ ಮಕ್ಕಳನ್ನು ಸಹ ಸಂಸ್ಕಾರವಂತರನ್ನಾಗಿ ಮಾಡಿ,👏
***ಸಂಗ್ರಹ***
As an artist, when you play a character, you try to bring it to life from the bottom of your heart. And here, I am truly impressed by the conviction with which the struggle of a powerful man has been portrayed.
Maybe the plot and driving characters are not on the usual track on which most films travel, but that doesn’t mean the track is wrong. The effort that goes into telling a story, and the journey it takes from being a thought in the mind to becoming a film on screen, is humongous.
@TheNameIsYash sir, hats off to the way you have surrendered yourself to a character and a world that demands a larger-than-life performance. I could clearly feel that in every single scene.
It’s not easy to give the audience an experience of how guilt multiplies and increases the toxicity in life. I stand with you for attempting this daring experiment, sir.
We love you for the love you have for taking Kannada cinema to the global stage.
#ToxicTheMovie
Best wishes to @GeetuMohandas and @TheKVNofficial
Just want to say this, @TheNameIsYash — you’ve genuinely tried something out of the box rather than taking the predictable route of making another regular, expected, formulaic follow-up to your previous commercial blockbuster.
It takes a different mindset, conviction, and most importantly, the guts to attempt something like this.
#Toxic is an unusual and commendable attempt. There are several portions that are genuinely intriguing and open to great debate, discussion, and learning.
Kudos to you for daring to experiment and step away from the conventional.
Bestest wishes, my friend. ❤️🤗
L&H’s
❤️🤗
K
TOXIC IS A FAIRY TALE …. BUT GROWN-UPS ??
Watched Toxic. Wow! What a movie !
A new world and an entirely new experience!
The hard work, dedication, and passion of every artist and technician are truly commendable !
Hats off to Yash and the entire team! 👏
@thenameisyash@kvn.productions
TOXIC ಒಂದು ಕಾಲ್ಪನಿಕ ಕಥೆ… ಆದರೆ ದೊಡ್ಡವರಿಗಾಗಿ ??
Toxic ಸಿನಿಮಾ ನೋಡಿದೆ. ವಾವ್! ಎಂತಹ ಸಿನಿಮಾ!
ಒಂದು ಹೊಸ ಲೋಕ… ಒಂದು ಸಂಪೂರ್ಣ ಹೊಸ ಅನುಭವ!
ಪ್ರತಿಯೊಬ್ಬ ಕಲಾವಿದ ಮತ್ತು ತಂತ್ರಜ್ಞರ ಶ್ರಮ, ಶ್ರದ್ಧೆ ಹಾಗೂ ಕಲೆಯ ಮೇಲಿನ ಪ್ರೀತಿ ನಿಜಕ್ಕೂ ಅಭಿನಂದನೀಯ! ❤️
ಯಶ್ ಮತ್ತು ಇಡೀ ತಂಡಕ್ಕೆ ಹ್ಯಾಟ್ಸ್ ಆಫ್! 👏
@thenameisyash@kvnproductions
ಪೂಜ್ಯಾಯ ರಾಘವೇಂದ್ರಾಯ ಸತ್ಯಧರ್ಮ ರತಾಯ ಚ | ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನುವೇ ||
ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ಆರಾಧನಾ ಮಹೋತ್ಸವದ ಭಕ್ತಿಪೂರ್ವಕ ಶುಭಾಶಯಗಳು
ರಾಯರ ಅನುಗ್ರಹ ಎಲ್ಲರ ಮೇಲಿರಲಿ ಎಂದು ಪ್ರಾರ್ಥಿಸುತ್ತೇನೆ.
Sacred Pavitra Mala Samarpana was offered to Sri Vimana Venkateswara Swamy during the annual #Pavitrotsavam in Tirumala. The holy thread garlands symbolize purification, devotion, and the seeking of divine forgiveness for ritual imperfections, as prescribed in Agama traditions.
TTD conducted the annual trial run of Srivari Garuda Seva at Tirumala on the auspicious Full Moon evening as part of preparations for the Srivari Salakatla Brahmotsavams (Sept 15–23). The mock procession, held from 7 PM to 9 PM, reviewed arrangements for the grand festival. #Ttd
ಇಂದಿನಿಂದ ಮೂರು ದಿನ ರಾಯರ ಆರಾಧನೆ ಮಹೋತ್ಸವ..
ವರ್ಷಕ್ಕೊಮ್ಮೆ ರಾಯರು ಇಂದು ತಮ್ಮ ಕಣ್ಣು ತೆರೆದು ತಮ್ಮ ಭಕ್ತರನ್ನು ನೋಡುತ್ತಾರೆ.
ಅವರ ಕೃಪಾದೃಷ್ಟಿ ಬಿದ್ದರೆ ಸಾಕು
"ಸರ್ವಕಾರ್ಯ ಜಯಪ್ರಧ"
ಓಂ ಶ್ರೀ ರಾಘವೇಂದ್ರಾಯಃ ನಮಃ
ರಾಯರಿದ್ದಾರೆ 🙏
ಕನ್ನಡಿಗರ ಹೆಮ್ಮೆಯ HMT ಗತವೈಭವಕ್ಕೆ ಮರುಜೀವ! 🇮🇳⌚
ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಹೆಚ್ಎಂಟಿ ಬಿಡುಗಡೆ ಮಾಡಿರುವ ವಿಶೇಷ ಕೈಗಡಿಯಾರ ಖರೀದಿಸಲು ಬೆಂಗಳೂರಿನ ಜಾಲಹಳ್ಳಿಯಲ್ಲಿ ಶೋರೂಮ್ ಮುಂದೆ 2 ಕಿ.ಮೀಗೂ ಹೆಚ್ಚು ದೂರ ಸಾಲುಗಟ್ಟಿ ನಿಂತು ವಾಚ್ಗಳನ್ನು ಖರೀದಿಸುತ್ತಿರುವುದು #HMT ಮೇಲಿನ ಜನರ ನಂಬಿಕೆ ಮತ್ತು ಅಭಿಮಾನಕ್ಕೆ ಸಾಕ್ಷಿ.
ಮಾನ್ಯ ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವರಾದ ಶ್ರೀ @hd_kumaraswamy ಅವರ ದೂರದೃಷ್ಟಿ ಹಾಗೂ ಅವಿರತ ಪರಿಶ್ರಮದಿಂದಾಗಿ ಹೆಚ್ಎಂಟಿ ಮತ್ತೆ ಜನರ ಮನ ಗೆಲ್ಲುತ್ತಿದೆ. ಈ ಐತಿಹಾಸಿಕ ಸಂಸ್ಥೆಯು ಪುನರುಜ್ಜೀವನದತ್ತ ಹೆಜ್ಜೆ ಇಡುತ್ತಿರುವುದು ಶ್ಲಾಘನೀಯ.
ಕನ್ನಡಿಗರ ಹೆಮ್ಮೆ, ದೇಶದ ಗರಿಮೆಯಾದ ನಮ್ಮ #HMT ಸಂಸ್ಥೆಯನ್ನು ನಾವೆಲ್ಲರೂ ಒಟ್ಟಾಗಿ ಪ್ರೋತ್ಸಾಹಿಸೋಣ.
#HMTWatches #HMTRevival
#VocalForLocal #MakeInIndia
#HDKumaraswamy #AtmanirbharBharat