ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಇನ್ನು ನಾಲ್ಕೈದು ದಿನದಲ್ಲಿ ಉಡಾನ್ ಸ್ಕೀಮ್ ಮುಗಿಯುತ್ತಿದ್ದ ಹಾಗೆಯೇ ವಿಮಾನಯಾನ ಸಂಸ್ಥೆಗಳಿಗೆ ಕೊಡುತ್ತಿದ್ದ ಸಬ್ಸಿಡಿ ನಿಂತು, ವಿಮಾನ ಹಾರಾಟ ನಿಲ್ಲುತ್ತದೆ. ಈ ಸುದ್ದು ಹೊರಬೀಳುತ್ತಿದ್ದಂತೆಯೇ ಕಾಂಗ್ರೆಸ್ ಹಾಗೂ ಬಿಜೆಪಿ ರಾಜಕಾರಣಿಗಳ ಮಧ್ಯೆ ಕೇಂದ್ರ-ರಾಜ್ಯ ಫೈಟ್ ಶುರುವಾಗಿದೆ.
ಬಹಳ ತಮಾಷೆಯ ಸಂಗತಿಯೆಂದರೆ, ಇದು ಶಿವಮೊಗ್ಗ ವಿಮಾನ ನಿಲ್ದಾಣ ಆಗಿದ್ದಕ್ಕೆ ಈ ವಿಚಾರ ಚರ್ಚೆಗೆ ಬಂದಿದೆ. ಒಂದು ವೇಳೆ ಕಲಬುರಗಿ ವಿಮಾನ ನಿಲ್ದಾಣ ಆಗಿರುತ್ತಿದ್ದರೆ, ಇದು ಸುದ್ದಿಯೂ ಆಗುತ್ತಿರಲಿಲ್ಲ!
ಸಾವಿರ ಕೋಟಿ ರೂ. ಖರ್ಚು ಮಾಡು, ಭಾರಿ ಪ್ರಮಾಣ 750 ಎಕರೆ ವಿಸ್ತೀರ್ಣದ ಜಾಗದಲ್ಲಿ (ದೇಶೀಯ ವಿಮಾನ ನಿಲ್ದಾಣಕ್ಕೆ ಅಗತ್ಯವಿದ್ದುದಕ್ಕಿಂತ ಸುಮಾರು ದುಪ್ಪಟ್ಟು ಜಾಗ ಸ್ವಾಧೀನ ಮಾಡಿಕೊಳ್ಳಲಾಗಿದೆ) ನಿರ್ಮಾಣವಾದ ಕಲಬುರಗಿ ವಿಮಾನ ನಿಲ್ದಾಣಕ್ಕೆ ಕೂಡಾ ಕಳೆದ ವರ್ಷದ ನವೆಂಬರ್ ಸುಮಾರಿಗೆ ಉಡಾನ್ ಯೋಜನೆ ಸ್ಥಗಿತ ಆಗಿತ್ತು.
ಆದರೆ, ಈ ವಿಷಯ ಸುದ್ದಿಯಾಗಲೇ ಇಲ್ಲ! ಯಾಕೆ?
ವಿಷಯ ಇಷ್ಟೇ...
ಉಡಾನ್ ಸ್ಕೀಮ್ ಮುಗಿಯುವುದಕ್ಕೂ ಒಂದು ತಿಂಗಳು ಮೊದಲೇ ರಾಜ್ಯ ಸರ್ಕಾರ ಈ ವಿಮಾನ ನಿಲ್ದಾಣದಿಂದ ಬೆಂಗಳೂರಿಗೆ ದಿನಕ್ಕೊಂದು ವಿಮಾನ ಹಾರಾಟ ಮಾಡಿಸುವುದಕ್ಕೆ ವರ್ಷಕ್ಕೆ 15 ಕೋಟಿ ರೂ. ಅನುದಾನವನ್ನು ಸೈಲೆಂಟ್ ಆಗಿ ಘೋಷಿಸಿದೆ. ಇವತ್ತಿಗೂ ರಾಜ್ಯ ಸರ್ಕಾರದ ಸಬ್ಸಿಡಿಯಲ್ಲಿ ಬೆಂಗಳೂರು-ಕಲಬುರಗಿ ಮಧ್ಯೆ ಒಂದು ವಿಮಾನ ಹಾರಾಟ ನಡೆಸುತ್ತಿದೆ.
ಕಲಬುರಗಿಗೆ ಮಾತ್ರ ಯಾಕೆ?
ಕಲಬುರಗಿಯಲ್ಲಿ ಇರೋ ಗಣ್ಯರು ಯಾರು ಹೇಳಿ? ಖರ್ಗೆ, ಮರಿ ಖರ್ಗೆ ಮತ್ತು ಅವರ ಮರಿ ಮರಿ ಖರ್ಗೆಗಳು! ಅವರಿಗೆ ಓಡಾಡುವುದಕ್ಕೆ ನಮ್ಮ ದುಡ್ಡಿನಲ್ಲಿ ಸಬ್ಸಿಡಿ ಸಿಗ್ತಾ ಇದೆ! ಅದೇ ಬೇರೆ ವಿಮಾನ ನಿಲ್ದಾಣಕ್ಕೆ ಬೇಕಾದರೆ ಕೇಂದ್ರ ಸರ್ಕಾರ ಕೊಡಲಿ ಅಂತ ಉದ್ಧಟತನದ ಮಾತನಾಡುತ್ತಿದ್ದಾರೆ. ಹಾಗಾದರೆ, ಕಲಬುರಗಿಗೂ ಕೇಂದ್ರವೇ ಕೊಡಲಿ ಎಂದು ಕುಳಿತುಕೊಳ್ಳಬೇಕಿತ್ತಲ್ಲ! ಅಲ್ಲಿ, ನಿಮ್ಮ ರಾಷ್ಟ್ರಾಧ್ಯಕ್ಷರನ್ನು ಮೆಚ್ಚಿಸಬೇಕಿತ್ತು. ಇಲ್ಲಿ ಮೆಚ್ಚಿಸುವುದಕ್ಕೆ ಯಾರೂ ಇಲ್ಲವಲ್ಲ! ಇದನ್ನು ಅಲ್ಲಿನ ಸಂಸದರ ತಲೆಗೆ ಕಟ್ಟಬಹುದು ಎಂಬ ಹೊಲಸು ರಾಜಕೀಯ...
ಇಷ್ಟೇ ಅಲ್ಲ... ಇನ್ನೂ ತಮಾಷೆಯ ಸಂಗತಿ ಹಲವು ಇವೆ.
ಸಾಮಾನ್ಯವಾಗಿ ರಾಜ್ಯದ ಒಳಗಿನ ಸಣ್ಣ ವಿಮಾನ ನಿಲ್ದಾಣಗಳನ್ನು ರಾಜ್ಯ ಸರ್ಕಾರವೇ ನಿರ್ಮಾಣ ಮಾಡಿ, ಅದನ್ನು ಏರ್ಪೋರ್ಟ್ ಅಥಾರಿಟಿ ಆಫ್ ಇಂಡಿಯಾ (ಎಎಐ)ಗೆ ಹಸ್ತಾಂತರ ಮಾಡುತ್ತದೆ. ಅದೇ ರೀತಿ, ಕಲಬುರಗಿ ವಿಮಾನ ನಿಲ್ದಾಣವನ್ನೂ ಹಸ್ತಾಂತರ ಮಾಡಲಾಯಿತು. ಆದರೆ, ಎಎಐಗೆ ಹಸ್ತಾಂತರ ಮಾಡಿದ ನಂತರ, ಅದರಲ್ಲಿ ರಾಜ್ಯದ ಮಸಲತ್ತು ಏನೂ ನಡೆಯುವುದಿಲ್ಲ. ಎಎಐ ತನ್ನ ಪರಿಣಿತಿಯನ್ನು ಬಳಸಿ ನೌಕರರನ್ನು ನೇಮಿಸಿ, ಅದು ನಿಗದಿ ಮಾಡಿದ ಮಾನದಂಡವನ್ನು ಅನುಸರಿಸುತ್ತದೆ. ಇದರಲ್ಲಿ ರಾಜ್ಯದ ರಾಜಕಾರಣಿಗಳು ಕೈಯಾಡಿಸುವುದಕ್ಕೆ ಸಾಧ್ಯವಾಗುವುದಿಲ್ಲ.
ಇದು ಹೀಗಾಗುತ್ತಿದ್ದ ಹಾಗೆ, ನಮ್ಮ ರಾಜ್ಯ ಹೊಸ ಕ್ಯಾತೆ ತೆಗೆಯಿತು. ನಾವೇ ವಿಮಾನ ನಿಲ್ದಾಣವನ್ನು ನಿರ್ವಹಿಸುತ್ತೇವೆ. ಎಎಐಗೆ ಹಸ್ತಾಂತರ ಮಾಡುವುದಿಲ್ಲ ಎಂದು ಹೇಳಿತು. ಅದಕ್ಕೆ ರಾಜ್ಯ ಸರ್ಕಾರದ ಸಂಸ್ಥೆ ಕೆಎಸ್ಐಐಡಿಸಿ ಗೆ ವಿಮಾನ ನಿಲ್ದಾಣ ನಿರ್ವಹಣೆ ಹೊಣೆ ಕೊಡುತ್ತೇವೆ ಎಂದಿತು. ಅದೇ ಪ್ರಕಾರ, ಶಿವಮೊಗ್ಗ ವಿಮಾನ ನಿಲ್ದಾಣವನ್ನು ಎಎಐ ಅಲ್ಲ, ರಾಜ್ಯದ ಕೆಎಸ್ಐಐಡಿಸಿಯೇ ನಿರ್ವಹಿಸುತ್ತಿದೆ. ಆದರೆ, ಈ ಕೆಎಸ್ಐಐಡಿಸಿ ಎಂಬುದು ಒಂದು ಘೋಸ್ಟ್ ಸಂಸ್ಥೆಯ ರೀತಿ! ವಿಮಾನ ನಿಲ್ದಾಣವನ್ನು ನಿರ್ವಹಿಸುವ ತಾಂತ್ರಿಕ ಪರಿಣಿತಿ ಇದಕ್ಕಿಲ್ಲ. ಹೀಗಾಗಿ, ಮತ್ತೆ ಎಎಐ ಬರಬೇಕಾಯಿತು. ಎಎಐ ಎಲ್ಲ ತಾಂತ್ರಿಕ ವಿಷಯಗಳನ್ನು ಈಗಲೂ ನಿರ್ವಹಿಸುತ್ತಿದೆ. ಆದರೆ, ಕೆಎಸ್ಐಐಡಿಸಿ ಹೆಸರಿನಲ್ಲಿ ಒಂದಷ್ಟು ಕೋಟಿ ರೂಪಾಯಿಯನ್ನು ರಾಜ್ಯ ಸರ್ಕಾರ ವಿಮಾನ ನಿಲ್ದಾಣಕ್ಕೆ ಅಂತ ಭರಿಸುತ್ತಿದೆ.
ಎಎಐಗೆ ವಿಮಾನ ನಿಲ್ದಾಣಗಳನ್ನು ವಹಿಸಿದ್ದರೆ, ವಿಮಾನ ನಿಲ್ದಾಣದ ನಿರ್ವಹಣೆಯ ಅಷ್ಟೂ ವೆಚ್ಚವನ್ನೂ ಎಎಐ ನೋಡಿಕೊಳ್ಳುತ್ತಿತ್ತು. ಆದರೆ, ಈಗ ಖಾಲಿ ಬಿದ್ದಿರುವ, ವಿಮಾನ ಹಾರಾಟ ಇಲ್ಲದ ಏರ್ಪೋರ್ಟ್ಗಳಿಗೆ ವರ್ಷವೂ ಕೋಟಿಗಟ್ಟಲೆ ವೆಚ್ಚವನ್ನು ರಾಜ್ಯಸರ್ಕಾರವೇ ಭರಿಸುವ ಪರಿಸ್ಥಿತಿ ಬಂದಿದೆ. ಇದರ ಬದಲಿಗೆ, ಎಎಐಗೆ ನಿರ್ವಹಣೆಗೆ ಕೊಟ್ಟು, ದಿನಕ್ಕೆ ಒಂದೋ ಎರಡೋ ವಿಮಾನ ಹಾರಾಟಕ್ಕೆ ರಾಜ್ಯ ಸರ್ಕಾರ ಸಬ್ಸಿಡಿ ಕೊಟ್ಟಿದ್ದರೆ, ಅಲ್ಲಿಗೆ ಜನರಿಗೂ ಅನುಕೂಲವಾಗುತ್ತಿತ್ತು.
ಈ ಶಿವಮೊಗ್ಗ ವಿಮಾನ ನಿಲ್ದಾಣವನ್ನು ರಾಜ್ಯ ಸರ್ಕಾರವೇ ನಿರ್ಮಿಸಿದ್ದೇನೋ ನಿಜ. ಆದರೆ, ಇವತ್ತಿಗೂ ಕೆಲಸವೇ ಸರಿಯಾಗಿ ಮುಗಿದಿಲ್ಲ. ಇಷ್ಟು ವರ್ಷ ಆದರೂ, ರಾತ್ರಿ ಲ್ಯಾಂಡಿಂಗ್ಗೆ ಬೇಕಾದ ಸೌಲಭ್ಯವನ್ನು ಕಲ್ಪಿಸುವುದಕ್ಕೆ ಆಗಲಿಲ್ಲ. ನಮ್ಮಲ್ಲಿ ಇನ್ನೂ ವಿಮಾನ ನಿಲ್ದಾಣ ಎಂದರೆ, ಜನರು ಓಡಾಡುವುದಕ್ಕೆ ಅನುಕೂಲ ಕಲ್ಪಿಸುವುದು ಎಂದಷ್ಟೇ ಆಗಿದೆಯೇ ಹೊರತು, ವಿಮಾನ ನಿಲ್ದಾಣ ಬಂದರೆ, ಅದು ಕೃಷಿ ಹಾಗೂ ಉದ್ಯಮದ ಅವಕಾಶಕ್ಕೆ ತೆರೆದ ಬಾಗಿಲು ಎಂಬ ಮನಸ್ಥಿತಿ ಇನ್ನೂ ಬೆಳೆದಿಲ್ಲ.
ಶಿವಮೊಗ್ಗ ವಿಮಾನ ನಿಲ್ದಾಣವನ್ನು ಬಳಸಿಕೊಂಡು ಸುತ್ತಮುತ್ತಲಿನ ಕೃಷಿ ಉತ್ಪನ್ನಗಳು ಹಾಗೂ ತರಕಾರಿಗಳ ಮೌಲ್ಯವರ್ಧನೆಗೆ ಅಪಾರ ಅವಕಾಶವಿತ್ತು. ವಿಮಾನ ನಿಲ್ದಾಣ ಹಾಗೂ ಕೋಲ್ಡ್ ಚೈನ್ ಸ್ಟೊರೇಜ್ ಮತ್ತು ಕಾಂಟ್ರಾಕ್ಟ್ ಫಾರ್ಮಿಂಗ್ ಇವು ಮೂರೂ ಅತ್ಯಂತ ಅದ್ಭುತ ಸಂಯೋಜನೆ. ವಿಮಾನ ನಿಲ್ದಾಣವೇನೋ ಹೆಸರಿಗೆ ಆಯಿತು. ಆದರೆ, ಅದನ್ನು ಯಶಸ್ವಿಯಾಗಿ ಹಾಗೂ ಲಾಭದಾಯಕವಾಗಿ ನಡೆಸುವುದಕ್ಕೆ ಬೇಕಾದ ಯಾವ ಸೌಕರ್ಯ ಹಾಗೂ ಅನುಕೂಲವನ್ನು ರಾಜ್ಯ ಸರ್ಕಾರ ಮಾಡಲಿಲ್ಲ.
ಇದರಿಂದ, ಅಷ್ಟು ಚೆಂದದ ವಿನ್ಯಾಸದಿಂದ ನಿರ್ಮಾಣ ಮಾಡಿದ, ಅತ್ಯಂತ ಸ್ಟ್ರಾಟಜಿಕ್ ಸ್ಥಳದಲ್ಲಿ ಇರುವ ವಿಮಾನ ನಿಲ್ದಾಣವೊಂದು ಅನಾಥವಾಗಿ ನಿಲ್ಲುವ ಪರಿಸ್ಥಿತಿ ಬಂದಿದೆ.
ಬರಹ : ಕೃಷ್ಣ ಭಟ್
Mohit Ulva turns the impossible into reality! 👌
A sensational unbeaten knock to take India to the U19 Asia Cup title in the most dramatic fashion.
#SonySportsNetwork#SonyLIV#PAKvIND
DMK govt was atheistic. Joseph Vijay govt is evangelistic..more dangerous.
This was my editorial in last week Thuglak titled
The ‘Vijay’ govt transforms into an Evangelical ‘Joseph’ Regime
Actor Vijay—popularly known as ‘Thalapathy’ Vijay in the film industry for decades—revealed in 2017 that his name is ‘Joseph Vijay’ and included the phrase “Jesus Saves”—a core tenet of the Christian faith—on his official letterhead. During the election period, he was also seen kneeling and crawling toward an altar in a church to offer prayers.
Although Joseph Vijay holds fundamentalist Christian beliefs, many Hindus voted for him, trusting that he would not engage in the kind of anti-Hindu politics practiced by the DMK. To foster this perception, he began visiting temples and temple tanks, and—unlike the DMK—he even extended greetings on Hindu festivals. Consequently, Hindus began to believe that he was not anti-Hindu. However, it soon became clear that this was merely a ruse. Within a month of Joseph Vijay’s administration taking office, his Speaker, ministers, and party members turned the Legislative Assembly itself into a church-like space to propagate Christian ideology. Reports emerged that this evangelical agenda had spread beyond the Assembly, with the ruling party—the TVK (Tamilaga Vetri Kazhagam)—increasingly functioning like a Christian organization. Against this backdrop, the TVK government’s recent announcement that land titles (patta) would be granted to thousands of churches (and mosques) that have encroached upon public land—coupled with the approval to introduce an M.A. program in Christian Studies at colleges affiliated with the University of Madras—leaves no doubt that Joseph Vijay’s administration is openly becoming a ‘Joseph’ (Christian-centric) regime. Yet, the ‘Dravidian’ sycophants who grovel for Christian votes, the so-called ‘secular’ parties, and even the mainstream media have remained silent—and will continue to remain silent—on this matter. Therefore, it is our duty to speak about this openly and unequivocally. A Distinct Perspective from *Thuglak*
It is true that voters with Hindu sentiments supported Vijay after he declared the anti-Hindu DMK to be his political adversary; however, our perspective on Vijay is somewhat different. When Vijay achieved victory, *Thuglak*—in an editorial titled "Dear Mr. Joseph Vijay"—praised him for not concealing his religion (unlike many Christian politicians), yet it portrayed his success in a rather unique light. “In cinema, you gained fame under the Hindu name ‘Vijay,’ but in politics, you have emerged as ‘Joseph Vijay’—a choice that reveals your commitment to Christianity. This effectively shatters the ‘pseudo-secular’ narrative that claims a need to ‘protect’ minorities from the Hindu majority. The fact that you, a member of a minority community, have become Chief Minister demonstrates not only that minorities face no crisis at the hands of the majority, but also that the Hindu majority is, in fact, accepting of them. Therefore, you must realize that the slogan of ‘protecting minorities’ is entirely inapplicable to a government led by Joseph Vijay. As a Chief Minister who belongs to a minority community yourself, you must recognize your responsibility toward every segment of the diverse Hindu majority society. Your administration is not one of those ‘pseudo-secular’ outfits that deceive minorities by promising them ‘protection’; rather, it is an administration where a member of a minority community—you—holds the reins of power. You claim to represent everyone—Hindus, Christians, and Muslims alike—yet your minister, Adhav Arjuna (who is also a Christian), describes this as a ‘government that protects minorities.’ This outdated and inappropriate slogan holds no water under your leadership; it is, in fact, absurd.
Continued 1/5
https://t.co/G5LiYQbOy1
HONSLA 🥵
EENDHAN 🔥
BADLA 🥶
Second Edit Video of India vs Pakistan U19 Asia Cup Final match, Save it guys 🇮🇳
Straight Outta Dhurandhar - The Revenge 💥
#INDvsPAK
Outstanding day for Indian cricket!
Immensely proud of our young cricketers for today’s impressive performance and for winning the Men’s U-19 Asia Cup 2026. Their success will inspire several youngsters.
Best wishes to the team for their endeavours ahead.
ಬಿಎಂಆರ್ಸಿಎಲ್ನಲ್ಲಿ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರದ ಪಾಲು 50:50 ಇದ್ದರೂ ಕೂಡಾ, ಭೂಸ್ವಾಧೀನಕ್ಕೆ, ಸಾಲ ಮರುಪಾವತಿಗೆ ಕರ್ನಾಟಕ ಸರ್ಕಾರವೇ ಹಣ ಹಾಕುತ್ತಿದೆ. ಇದರಿಂದ ಕರ್ನಾಟಕದ ಪಾಲು 84% ಆಗಿದೆ, ಕೇಂದ್ರದ ಪಾಲು 16% ಆಗಿದೆ ಎಂದು ರಾಜ್ಯ ಸರ್ಕಾರ ಹೇಳುತ್ತಿದೆಯಲ್ಲ.
ಎರಡೂ ರಾಜ್ಯ ಸರ್ಕಾರಗಳ ಪಾಲು ಬಿಎಂಆರ್ಸಿಎಲ್ನಲ್ಲಿ 20% ಕ್ಕಿಂತ ಹೆಚ್ಚಾಗದ ಹಾಗೆ ನಿಯಮವೇ ಇದೆ. ಹಾಗಾದರೆ, ಇವರು 84% ಖರ್ಚು ಮಾಡಿದ್ದೇವೆ ಎಂದು ಹೇಗೆ ಹೇಳುತ್ತಾರೆ? ಉಳಿದ ಶೇಕಡಾವಾರು ಖರ್ಚು ಎಲ್ಲಿಂದ ಆಯಿತು? ಅನ್ನೋದು ಎಲ್ಲರ ಅನುಮಾನ. ಮೇಲ್ನೋಟಕ್ಕೆ ಎಲ್ಲರಿಗೂ ಕಾಣಿಸುವುದೂ ಅದೇ...
20%+20% ಎರಡೂ ಸರ್ಕಾರಗಳು ವಹಿಸಿಕೊಂಡ ಮೇಲೆ, ಉಳಿದ 60% ವೆಚ್ಚವನ್ನು ಸಾಲದ ರೂಪದಲ್ಲಿ ಅಂತಾರಾಷ್ಟ್ರೀಯ ಏಜೆನ್ಸಿಗಳಿಂದ ತರಲಾಗುತ್ತದೆ. ನಮ್ಮ ಬಿಎಂಆರ್ಸಿಎಲ್ಗೆ ಜೈಕಾ ಹಾಗೂ ಇತರ ಕಂಪನಿಗಳಿಂದ ಸಾಲ ತರಲಾಗಿದೆ. ಹಾಗಾದರೆ, ಆ 60% ಜೈಕಾ ಪಾಲಾಗಬೇಕಿತ್ತಲ್ಲ! ಅದು ಹೇಗೆ, 60% ಸಾಲ ಕೊಟ್ಟರೂ, ಜೈಕಾಗೆ ಬಿಎಂಆರ್ಸಿಎಲ್ನಲ್ಲಿ ಒಂದು ಷೇರೂ ಸಿಗಲಿಲ್ಲ? ಎಂದು ಷೇರು ಮಾರುಕಟ್ಟೆಯ ಬಗ್ಗೆ ಗೊತ್ತಿದ್ದವರು ಕೇಳಬಹುದು.
ಈ ಜೆವಿ ಅನ್ನು ಎಷ್ಟು ಚೆನ್ನಾಗಿ ರೂಪಿಸಿದ್ದಾರೆ ಎಂದರೆ, ಇದರಲ್ಲಿ ಹೇಗೇ ನೋಡಿದರೂ, ರಾಜ್ಯ ಸರ್ಕಾರವೇ ದೊಡ್ಡ ಫಲಾನುಭವಿ ಆಗಿರುತ್ತದೆ.
ವಿಷಯ ಇಷ್ಟೇ...
ರಾಜ್ಯ ಸರ್ಕಾರವೇ ಸಾಲ ಮರುಪಾವತಿ ಹೊಣೆ ಹೊರಬೇಕು ಮತ್ತು ಭೂಸ್ವಾಧೀನಕ್ಕೆ ಕೋಟಿಗಟ್ಟಲೆ ಖರ್ಚು ಮಾಡಬೇಕು ಎಂದು ನಮ್ಮ ಸರ್ಕಾರ ಅಲವತ್ತುಕೊಳ್ಳುತ್ತದೆಯಲ್ಲ!
ವಾಸ್ತವದಲ್ಲಿ, ಇವರು ಭೂಸ್ವಾಧೀನಕ್ಕೆ ಮಾಡುವ ಪ್ರತಿ ಒಂದೊಂದು ರೂಪಾಯಿ ಖರ್ಚು ಕೂಡಾ ಅದು ಹೂಡಿಕೆ. ಈ ಒಂದೊಂದು ರೂಪಾಯಿಯನ್ನೂ ಬಿಎಂಆರ್ಸಿಎಲ್ ಸಾಲ ಅಂತ ತನ್ನ ಲೆಕ್ಕದ ಪುಸ್ತಕದಲ್ಲಿ ಬರೆದಿಟ್ಟುಕೊಳ್ಳುತ್ತದೆ. ಅದಕ್ಕೆ ಸಬಾರ್ಡಿನೇಟ್ ಡೆಟ್ ಎಂದು ಹೆಸರು ಕೊಡಲಾಗಿದೆ. ಅದಕ್ಕೆ ಬಡ್ಡಿ ಇಲ್ಲ. ಅಂತಾರಾಷ್ಟ್ರೀಯ ಕಂಪನಿಗಳಾದ ಜೈಕಾ ಇತ್ಯಾದಿ 1-3% ಬಡ್ಡಿ ದರದಲ್ಲಿ ಸಾಲ ತರಲಾಗುತ್ತದೆ. ಆದರೆ, ರಾಜ್ಯ ಕೊಡುವ ಸಾಲಕ್ಕೆ ಆ ಬಡ್ಡಿಯೂ ಇರುವುದಿಲ್ಲ.
ಆದರೆ, ಈ ಸಾಲ ತೀರಿಸುವ ಪ್ರಕ್ರಿಯೆಯೂ ಅಷ್ಟೇ... ಮೊದಲು ಬಡ್ಡಿ ಕೊಟ್ಟು ತಂದ ಸಾಲಕ್ಕೆ ಆದ್ಯತೆ. ಅಂದರೆ, ಅಂತಾರಾಷ್ಟ್ರೀಯ ಸಂಸ್ಥೆಗಳು ಹಾಗೂ ದೇಶದ ಒಳಗಿನ ಹಣಕಾಸು ಸಂಸ್ಥೆಗಳಾದ ಹುಡ್ಕೋದಿಂದ ಪಡೆದ ಸಾಲವನ್ನು ಮೊದಲು ತೀರಿಸಬೇಕು. ಆ ಸಾಲ ತೀರಿಸಿ ಆದ ನಂತರ, ರಾಜ್ಯ ಸರ್ಕಾರವು ಭೂಸ್ವಾಧೀನಕ್ಕೆ ಮಾಡಿದ ವೆಚ್ಚ ಹಾಗೂ ಇತರ ವೆಚ್ಚವನ್ನೂ ಬಿಎಂಆರ್ಸಿಎಲ್ ಮರುಪಾವತಿ ಮಾಡುತ್ತದೆ. ಒಂದು ವೇಳೆ, ಬಿಎಂಆರ್ಸಿಎಲ್ ಎಲ್ಲ ಸಾಲವನ್ನೂ ತೀರಿಸಿ ಅಂದರೆ, ಅಂತಾರಾಷ್ಟ್ರೀಯ ಸಂಸ್ಥೆಗಳಿಂದ ಪಡೆದ ಸಾಲ ಹಾಗೂ ರಾಜ್ಯ ಸರ್ಕಾರ ಬೇರೆ ಬೇರೆ ಉದ್ದೇಶಕ್ಕೆ ಮಾಡಿದ ಸಾಲ ಆಧರಿತ ಹೂಡಿಕೆಯನ್ನನೆಲ್ಲ ಮರುಪಾವತಿ ಮಾಡಿದ ಮೇಲೆ ಎರಡೂ ಸರ್ಕಾರಗಳ ಬಳಿ ಬಿಎಂಆರ್ಸಿಎಲ್ನ 50% ಷೇರು ಇರುತ್ತದೆ.
ಅಂದರೆ, ರಾಜ್ಯ ಸರ್ಕಾರ ಈ 20% ಗಿಂತ ಹೆಚ್ಚುವರಿಯಾಗಿ ಕೊಟ್ಟ ಒಂದೊಂದು ರೂಪಾಯಿಯೂ ವಾಪಸು ಬರುತ್ತದೆ.
ಆದರೆ, ಅದೇ ಕೇಂದ್ರ ಸರ್ಕಾರ 20% ವರೆಗೆ ಕೊಡುವ ಹಣ ಇದೆಯಲ್ಲ, ಅದರಲ್ಲಿ ಒಂದು ರೂಪಾಯಿಯನ್ನೂ ಮರಳಿ ಬಿಎಂಆರ್ಸಿಎಲ್ ಕೊಡುವ ಪ್ರಸ್ತಾಪ ಇಲ್ಲ. ಅಂದರೆ, ಕೇಂದ್ರ ಸರ್ಕಾರ ಕೊಡುವ ಅಷ್ಟೂ ಮೊತ್ತವೂ ಚಾರಿಟಿ! ರಾಜ್ಯದ ಜನರ ಅನುಕೂಲಕ್ಕೆ ಕೇಂದ್ರ ಮಾಡುವ ಚಾರಿಟಿ ಅದು.
ಈ ಎಲ್ಲ ಸಾಲ ತೀರಿಸಿದ ನಂತರ, ಬಿಎಂಆರ್ಸಿಎಲ್ ಲಾಭಕ್ಕೆ ತಿರುಗಿದರೆ, ಇದರ ಲಾಭವನ್ನು ಎರಡೂ ಸರ್ಕಾರಗಳು ಸಮಾನವಾಗಿ ಹಂಚಿಕೊಳ್ಳುತ್ತವೆ. ಈವರೆಗೆ ನಮ್ಮ ದೇಶದ ಯಾವ ಮೆಟ್ರೋ ರೈಲು ಯೋಜನೆಯೂ ಲಾಭಾಂಶವನ್ನು ಹಂಚಿಕೊಳ್ಳುವ ಹಂತಕ್ಕೆ ಇನ್ನೂ ಹೋಗಿಲ್ಲದ್ದರಿಂದ ಆ ಪ್ರಸ್ತಾಪ ಸದ್ಯಕ್ಕಂತೂ ಇಲ್ಲ ಬಿಡಿ.
ಈ ಇಷ್ಟೂ ಮಾಹಿತಿ, ಬಿಎಂಆರ್ಸಿಎಲ್ನ ವಾರ್ಷಿಕ ವರದಿಯಲ್ಲಿ ಪ್ರಸ್ತಾಪ ಆಗಿರುತ್ತದೆ. ನಾವು ಇದನ್ನು ಓದೋದಿಲ್ಲ. ಹಾಗಾಗಿ, ನಾವು ರಾಜಕಾರಣಿಗಳು ಹೇಳಿದ್ದಷ್ಟನ್ನೇ ನಿಜ ಎಂದು ನಂಬಿಕೊಳ್ಳುತ್ತೇವೆ.
ಈಗ ಹೇಳಿ, ರಾಜ್ಯ ಸರ್ಕಾರ ಮಾಡುತ್ತಿರೋದು ಖರ್ಚೋ ಅಥವಾ ಹೂಡಿಕೆಯೋ?
ಬರಹ ಕೃಷ್ಣ ಭಟ್
There's no "Grantha" like Ramayana
There's no "Upadesha" like Bhagwad Gita
There's no "Religion" like Hinduism
There's no "Organization" like RSS
There's no "Country" like Bharath
There's no "Leader" like Narendra Modi
Jai Hind
@narendramodi ji pls visit Bengaluru more often so that our non-existent civic authority wakes up from deep slumber to clean up the city & also proudly put out self-congratulatory videos, as though doing a supposed regular duty is a great achievement!
The recent political discussion regarding Namma Metro’s funding highlights a significant misunderstanding of how urban transit infrastructure is financed and managed in India. The Karnataka state government claims it has funded 84% (₹65,000 crore) of the overall cost, while describing the Central Government’s contribution as a mere 16% (₹12,600 crore). However, this representation overlooks the statutory policy framework that governs metro rail developments across the entire country.
Under the 2017 National Metro Rail Policy, all urban metro systems operate as an equal 50:50 joint venture between the Central Government and the respective state government. A dedicated Special Purpose Vehicle (SPV) is formed for each city, with both parties holding equal 50% equity shares. Direct financial capital is provided equally, with the Centre and the State each contributing 20% direct equity to the SPV. The remaining 60% of the required capital is funded through soft loans from international funding agencies, including JICA, ADB, EIB, AIIB, and HUDCO.
The state government’s higher expenditure total arises because it incorporates two specific responsibilities: land acquisition costs and debt servicing obligations. Constitutionally, land is strictly a state subject, meaning state governments are responsible for land acquisition across all public infrastructure projects within their territory. Furthermore, state governments cannot directly negotiate foreign borrowing; these international loans are only made possible because the Central Government grants formal authorization and provides sovereign repayment guarantees to secure low interest rates.
This 50:50 operational model is not exclusive to Bengaluru; it applies universally to metro networks in Delhi, Mumbai, Chennai, Pune, Ahmedabad, and Kochi. The policy was established to guarantee thorough federal oversight, ensuring that Detailed Project Reports (DPRs) undergo strict technical and financial evaluation to prevent cost inflation and project mismanagement.
Despite central supervision, Namma Metro (BMRCL) faces persistent operational challenges, including major construction delays, land acquisition bottlenecks, and rapid administrative turnover, having seen eight Managing Directors since 2013. The financial losses caused by these delays could have funded additional metro lines. Unlike the Delhi Metro, which achieved financial sustainability by developing rental commercial spaces above stations, BMRCL has implemented limited initiatives like selling station naming rights. In short, while state figures appear larger due to land and debt commitments, Namma Metro is fundamentally a 50:50 joint enterprise backed by central guarantees.