ರಾಷ್ಟ್ರದ ಏಕತೆ, ಅಖಂಡತೆ ಹಾಗೂ ರಾಷ್ಟ್ರೀಯತೆಯ ಸಂಕಲ್ಪವನ್ನು ಜೀವನದ ಧ್ಯೇಯವನ್ನಾಗಿಸಿಕೊಂಡ ಮಹಾನ್ ದೇಶಭಕ್ತ, ಭಾರತೀಯ ಜನಸಂಘದ ಸಂಸ್ಥಾಪಕರಾದ ಆದರಣೀಯ ಡಾ. ಶ್ಯಾಮ ಪ್ರಸಾದ್ ಮುಖರ್ಜಿ ಅವರ ಪುಣ್ಯಸ್ಮರಣೆಯಂದು ಗೌರವಪೂರ್ವಕ ನಮನಗಳು.
#Shyamaprasadmukherjee
ಮುಖ್ಯ ಮಂತ್ರಿಗಳೇ,
ಈ ಹಿಂದೆ ದೇವನಹಳ್ಳಿಯ ರೈತರು ಭೂ ಸ್ವಾದೀನದ ವಿರುದ್ಧ ಹೋರಾಟ ಮಾಡಿದಾಗ ಸರ್ಕಾರ ಭೂ ಸ್ವಾಧೀನವನ್ನು ಕೈ ಬಿಟ್ಟಿತ್ತು.
ಎರಡನೆಯದಾಗಿ, ಡಿನೋಟಿಫಿಕೇಷನ್ ಮಾಡಿದರೆ ಜೈಲಿಗೆ ಹೋಗುತ್ತಾರೆ ಎಂದು ತಪ್ಪು ಮಾಹಿತಿಯನ್ನು ನೀವು ಬಿತ್ತರಿಸಬೇಡಿ. ಪರಿಸರ ನಾಶ, ರೈತರಿಗೆ ಸಂಕಷ್ಟವಾಗುವ ಯೋಜನೆಗಳನ್ನು ಸಚಿವ ಸಂಪುಟದಲ್ಲಿ ಚರ್ಚೆ ಮಾಡಿ ಭೂ ಸ್ವಾಧೀನವನ್ನು ಕೈಬಿಟ್ಟು, denotify ಮಾಡಬಹುದು. ಡಿನೋಟಿಫಿಕೇಷನ್ ಮಾಡುವುದರಿಂದ ಖಾಸಗಿ ವ್ಯಕ್ತಿಗಳಿಗೆ, ಸಂಸ್ಥೆಗಳಿಗೆ, ಕೈಗಾರಿಕೆಗಳಿಗೆ, ರಿಯಲ್ ಎಸ್ಟೇಟ್ ಮಾಫಿಯಾ ಅನುಕೂಲವಾಗುವ ಸಂದರ್ಭದಲ್ಲಿ ಮಾತ್ರ ಡಿನೋಟಿಫಿಕೇಷನ್ ಕಾನೂನುಬಾಹಿರ (illegal) ಆಗುತ್ತದೆ.
ನಿಮ್ಮ ತರ್ಕಾನುಸಾರ ಡಿನೋಟಿಫಿಕೇಷನ್ ಮಾಡುವುದು ತಪ್ಪಾಗಿದ್ದರೆ ದೇವನಹಳ್ಳಿ ರೈತರ ಭೂ ಸ್ವಾಧೀನವನ್ನು ಹಿಂದಿನ ಮುಖ್ಯ ಮಂತ್ರಿ ಕೈಬಿಟ್ಟಾಗ ತಾವು ಏಕೆ ಮಾತನಾಡಲಿಲ್ಲ ?
ಬಿಡದಿಯ ಫಲವತ್ತಾದ ಜಮೀನಿನಲ್ಲಿ ವಿವಿಧ ಬಗೆ ಬೆಳೆಗಳನ್ನು ಬೆಳೆಯಬಹುದು. (Multicropping). ಅಲ್ಲದೆ, ಇಲ್ಲಿಂದ ನಿತ್ಯ ಬೆಂಗಳೂರಿಗೆ ಲಕ್ಷಗಟ್ಟಲೆ ಹಾಲು ಸರಬರಾಜು ಆಗುತ್ತೆ. ಸಪೋಟ, ಹಲಸು, ಪೇರಳೆ, ರಾಗಿ, ಬಾಳೆ ಬೆಳೆದು ರೈತರು ಸಮೃದ್ಧರಾಗಿದ್ದರೆ. ರೇಷ್ಮೆ ಕೃಷಿ ರೈತರ ಆದಾಯವನ್ನು ಹೆಚ್ಚಿಸಿದೆ. ರೈತರು ಆರ್ಥಿಕವಾಗಿ ಸಧೃಡರಾಗಿದ್ದರೆ. ಭೂತಾಯಿ ಬಿಡದಿಯ ಮಣ್ಣಿನ ಮಕ್ಕಳನ್ನು ಹರಸಿದ್ದಾಳೆ. ಕೃಷಿ ಆದಾಯದಿಂದ ಮಕ್ಕಳ ವಿದ್ಯಾಭ್ಯಾಸ ಆಗಿದೆ. ತಾಲೂಕಿನ ಆರ್ಥಿಕತೆ ಕೃಷಿಯ ಮೇಲೆ ಅವಲಂಬಿತವಾಗಿದೆ. ಮುಖ್ಯ ಮಂತ್ರಿಗಳು ಮೊಸಳೆ ಕಣ್ಣೀರನ್ನು ಹಾಕುವುದನ್ನು ಬಿಟ್ಟು ವಾಸ್ತವಿಕವಾಗಿ ಮಾತನಾಡಬೇಕೆ ಹೊರತು ಮಾಧ್ಯಮಗಳ ಮುಂದೆ ಸುಳ್ಳನ್ನು ಹೇಳಬಾರದು.
@CMofKarnataka I @udayavani_web I @UvEnglish I @tv9kannada I
ಕಲಬುರಗಿ ಜಿಲ್ಲೆಯ ಆಳಂದ ಪಟ್ಟಣದಲ್ಲಿರುವ ಲಾಡ್ಲೆ ಮಶಾಕ್ ದರ್ಗಾದಲ್ಲಿ ಮಾರ್ಚ್ 2022 ರಂದು ಚೈತನ್ಯ ಶಿವ ಲಿಂಗದ ಮೇಲೆ ಮುಸಲ್ಮಾನರು ಅಪವಿತ್ರಗೊಳಿಸಿದ್ದು ಹಾಗೂ ಅಂದು ಅಲ್ಲಿ ಉಪಸ್ಥಿತರಿದ್ದ ಪೊಲೀಸರು, ಜಿಲ್ಲಾಧಿಕಾರಿಗಳ ವಾಹನದ ಮೇಲೆ ಕಲ್ಲು ತೂರಾಟ ನಡೆಸಿದವರ ಮೇಲಿದ್ದ ಕೇಸುಗಳನ್ನು ಹಿಂಪಡೆಯಬೇಕೆಂದು ಹಾಲಿ ಗೃಹ ಮಂತ್ರಿಗಳಾದ ಪ್ರಿಯಾಂಕ್ ಖರ್ಗೆ ಅವರು ಅಂದಿನ ಗೃಹ ಸಚಿವರಿಗೆ ಪತ್ರ ಬರೆದಿದ್ದರು. ತಮ್ಮ ವೋಟ್ ಬ್ಯಾಂಕ್ ಅನ್ನು ರಕ್ಷಿಸುವ ಸಲುವಾಗಿ ಈ ಮಟ್ಟಿಗೆ ಪ್ರಿಯಾಂಕ್ ಖರ್ಗೆ ಅವರು ಇಳಿದಿರುವುದು ನಿಜಕ್ಕೂ ಖಂಡನೀಯ. ಕಾನೂನು ಸುವ್ಯವಸ್ಥೆ, ಸಂವಿಧಾನದ ಬಗ್ಗೆ ಪುಂಖಾನುಪುಂಖವಾಗಿ ಮಾತನಾಡುವ ಪ್ರಿಯಾಂಕ್ ಖರ್ಗೆ ಅವರು ಅಂದು ಹಿಂಸಾಚಾರವೆಸಗಿದವರನ್ನು ಪಾತ್ರದಲ್ಲಿ 'ಅಮಾಯಕರೆಂದು' , ಅಲ್ಲಿರುವ ಶಿವಲಿಂಗವು 'ಅಸ್ತಿತ್ವ' ಇಲ್ಲವೆಂದು ಹೇಳುತ್ತಾರೆ. ಕೇಸುಗಳನ್ನು ವಾಪಾಸ್ ಪಡೆಯಲು ಪತ್ರ ಬರೆಯುವುದು ಇವರಿಗೆ ಹೊಸತೇನಲ್ಲ. ಚಿತ್ತಾಪುರ ಪೊಲೀಸ್ ಠಾಣೆಗೆ ದಾಳಿಮಾದವರ ಮೇಲಿದ್ದ ಪ್ರಕರಣವನ್ನೂ ಮಾಫಿ ಮಾಡಬೇಕೆಂದು ಪತ್ರ ಬರೆದಿದ್ದರು. ಈ ರೀತಿ ಪತ್ರ ಬರೆಯುವುದರಿಂದ ಪೊಲೀಸ್ ಇಲಾಖೆಯ ಮನೋಬಲ ಕುಸಿಯುತ್ತದೆ ಎಂಬುದರ ಬಗ್ಗೆ ಇವರಿಗೆ ಅರಿವಿಲ್ಲವೇ ? ಗೃಹ ಸಚಿವರು ತಮ್ಮ 'ಪತ್ರ ವ್ಯವಹಾರವನ್ನು' ನಿಲ್ಲಿಸಿ ರಾಜ್ಯದ ಕಾನೂನು ಸುವ್ಯವಸ್ಥೆಯನ್ನು ಬಿಗಿಗೊಳಿಸಲಿ ಹಾಗೂ ತಮ್ಮ ವೋಟ್ ಬ್ಯಾಂಕ್ ಮನವೊಲಿಸಲು ಈ ರೀತಿ ಕೆಲಸಗಳನ್ನು ಮಾಡದಿರಲಿ.
@PriyankKharge I #AlandaRiots I @tv9kannada I @AsianetNewsSN I
Congratulations @narendramodi ji
4,399 days and counting...
A historic day as PM becomes the longest-serving elected Prime Minister of India today.
#longestserviceasPMIndia
Please bring back to @BasanagoudaBJP ji for bjp Karnataka
ಬಿಡದಿ 📍
ಕೃಷಿ ಕೃತ್ಯ ಕಾಯಕ ಮಾಡುವ ಸದ್ಭಕ್ತನ ಪಾದಗಳ ತೋರಿಸಿ ಬದುಕಿಸಯ್ಯ
ಆತನ ತನು ಶುದ್ಧ, ಆತನ ಮನ ಶುದ್ಧ, ಆತನ ಭಾವ ಶುದ್ಧ.
ಆತನ ಮನೆಯಲ್ಲಿ ಹೊಕ್ಕು ಲಿಂಗಾರ್ಚನೆ ಮಾಡಿದ ಗುರು ಪಾವನ ನೋಡಾ ಕೂಡಲಸಂಗಮದೇವ ಎಂದು ಬಸವಣ್ಣನವರು ಹೇಳಿದ್ದಾರೆ
ಕಣ್ಣಿಗೆ ಕಾಣಿಸಿದಷ್ಟು ತೆಂಗು, ಬಾಳೆ, ಅಡಿಕೆ ಮರಗಳು. ಉತ್ತಮ ರೇಷ್ಮೆ ಬೆಳೆ. ತರಕಾರಿ, ಸಪೋಟ, ಏಲಕ್ಕಿ, ಪೇರಳೆ, ಹಲಸು. ಇವೆಲ್ಲವನ್ನೂ ನಾಶ ಮಾಡಿ ಬಿಡದಿ ಟೌನ್ ಶಿಪ್ ಯೋಜನೆ ಮಾಡಲು ಹೊರಟಿರುವ ಕಾಂಗ್ರೆಸ್ ಸರ್ಕಾರದ ನಿರ್ಧಾರ ಖಂಡನೀಯ. ಬಂಗಾರ ಬೆಳೆಯುತ್ತಿರುವ ಭೂಮಿಯಲ್ಲಿ ಟೌನ್ ಶಿಪ್ ಅವಶ್ಯಕತೆ ಇದೆಯೇ ? ಸ್ವರ್ಗದಂತ ಭೂಮಿಯನ್ನು ನರಕ ಮಾಡಲು ಸರ್ಕಾರ ಹೊರಟಿದೆ.
📍ಬಿಡದಿ
ಬಿಡದಿ ಟೌನ್ ಶಿಪ್ ಯೋಜನೆಯನ್ನು ಕೈಬಿಡಲು ಬೈರಮಂಗಲ ಹಾಗೂ ಕಂಚುಗಾರನಹಳ್ಳಿ ಗ್ರಾಮ ಪಂಚಾಯಿತಿಗಳ ರೈತರ ಭೂ ಹಿತರಕ್ಷಣಾ ಸಂಘದ ವತಿಯಿಂದ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಸಂದರ್ಭ
ಈ ಸಂದರ್ಭದಲ್ಲಿ ಸಹಸ್ರಾರು ಅನ್ನ ದಾತರು, ಪರಿಸರವಾದಿಗಳು, ಸ್ಥಳೀಯರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು
#BidadiTownshipBeda I #CongressFailsKarnataka I #GBIT
ಬಿಡದಿ ಟೌನ್ ಶಿಪ್ ವಿರೋಧಿಸಿ ರೈತರು ಕಳೆದ 450 ದಿನಗಳಿಂದ ಧರಣಿ ಮಾಡುತ್ತಿದ್ದಾರೆ. ಫಲವತ್ತಾದ ಭೂಮಿಯನ್ನು ಸ್ವಾಧೀನ ಮಾಡಿಕೊಳ್ಳುವ ನಿರ್ಧಾರ ವಿವೇಚನಾರಹಿತವಾದದ್ದು. ಸರ್ಕಾರ ರಿಯಲ್ ಎಸ್ಟೇಟ್ ಲಾಬಿಗೆ ಶರಣಾಗಿದೆ.
ಬಿಡದಿಯ ಮಣ್ಣಿನ ಗುಣ ವಿಶಿಷ್ಟವಾಗಿದೆ. ಇಲ್ಲಿ ವಿವಿಧ ಬೆಳೆಗಳನ್ನು ಬೆಳೆಯಬಹುದು (multi cropping). ಬಿಡದಿಯಿಂದ ನಿತ್ಯ 6 ಲಕ್ಷ ಲೀಟರ್ ಹಾಲು ಬೆಂಗಳೂರಿಗೆ ಸರಬರಾಜು ಆಗುತ್ತದೆ. 2 ಲಕ್ಷ ತೆಂಗಿನ ಮರಗಳಿವೆ. ಬಿಡದಿಯಲ್ಲಿ ಯಾರೂ ರೈತರೇ ಇಲ್ಲ, ನಾವು ಟೌನ್ ಶಿಪ್ ಮಾಡುತ್ತೇವೆ ಎಂಬ ಸರ್ಕಾರದ ವಾದಕ್ಕೆ ಯಾವುದೇ ಹುರುಳಿಲ್ಲ.
ಫಲವತ್ತಾದ ಭೂಮಿ ಸರ್ಕಾರದ ಕೈ ವಶವಾಗಲು ಬಿಡುವುದಿಲ್ಲ. ಹೋರಾಟ ನಿಶ್ಚಿತ. ಬಿಡದಿಯ ರೈತರೊಂದಿಗೆ ನಾನು ಇದ್ದೇನೆ.
#BidadiTownshipBeda I #CongressFailsKarnataka I #GBIT
📍ಬಿಡದಿ (ನಾಳೆ ದಿನಾಂಕ 08.06.2026)
ಕಳೆದ 450 ದಿನಗಳಿಂದ ಕಾಂಗ್ರೆಸ್ ಸರ್ಕಾರದ ಪ್ರಸ್ತಾವಿತ ಬಿಡದಿ ಟೌನ್ಶಿಪ್ ವಿರುದ್ಧ ಪ್ರತಿಭಟನೆ ಮಾಡುತ್ತಿರುವ ರೈತರನ್ನು ಭೇಟಿ ಮಾಡಿ ಅವರಿಗೆ ಬೆಂಬಲ ನೀಡುವುದು
ರಾಮನಗರ ಜಿಲ್ಲೆಯ ಬಿಡದಿ ಹೋಬಳಿಯ ಬೈರಮಂಗಲ ಮತ್ತು ಕಂಚುಗಾರನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ 25 ಹಳ್ಳಿಗಳಲ್ಲಿ ಭೂ ಸ್ವಾಧೀನ ಮಾಡಿಕೊಂಡು ಅಲ್ಲಿ AI ಸಿಟಿ ಮತ್ತು ಸ್ಯಾಟಲೈಟ್ ಸಿಟಿ ನಿರ್ಮಿಸಲು ಹೊರಟಿರುವ ರಾಜ್ಯ ಕಾಂಗ್ರೆಸ್ ಸರ್ಕಾರದ ಅತಾರ್ಕಿಕ, ರೈತ ವಿರೋಧಿ ನಿರ್ಧಾರವನ್ನು ವಿರೋಧಿಸಿ ನಾಳೆ ಬಿಡದಿಯ ರೈತರನ್ನು ಭೇಟಿ ಮಾಡಿ ಅವರ ಬೆಂಬಲಕ್ಕೆ ನಿಲ್ಲಲಿದ್ದೇನೆ.
ತೆಂಗು, ಅಡಿಕೆ, ಬಾಳೆ, ಮಾವು, ತರಕಾರಿ, ಸಪೋಟ, ಹಲಸು, ರೇಷ್ಮೆ ಕೃಷಿ, ಹೈನುಗಾರಿಕೆ ಮಾಡಿಕೊಂಡು ಸಮೃದ್ಧರಾಗಿರುವ ರೈತರ ಭೂಮಿಯನ್ನು ನಗರೀಕರಣದ ನೆಪದಲ್ಲಿ ಒತ್ತಾಯಪೂರ್ವಕವಾಗಿ ಕಸಿಯುತ್ತಿರುವ ರಾಜ್ಯ ಸರ್ಕಾರದ ನಿರ್ಧಾರ ಅತಾರ್ಕಿಕ ಹಾಗೂ ರಿಯಲ್ ಎಸ್ಟೇಟ್ ಲಾಬಿಗೆ ಸರ್ಕಾರ ಸಂಪೂರ್ಣವಾಗಿ ಶರಣಾಗಿದೆ.
ಅಷ್ಟಕ್ಕೂ AI City, ಸ್ಯಾಟಲೈಟ್ ಸಿಟಿ ಮಾಡೋಕೆ ರೈತರ ಫಲವತ್ತಾದ ಭೂಮಿಯೇ ಬೇಕೇ ? ರಿಯಲ್ ಎಸ್ಟೇಟ್ ಲಾಬಿ ಗೆ ಶರಣಾಗಿರುವ ಕಾಂಗ್ರೆಸ್ ಸರ್ಕಾರ, ಸ್ವಾವಲಂಬಿ, ಸ್ವಾಭಿಮಾನಿ ರೈತರ ಬಾಳಿಗೆ ಕೊಳ್ಳಿ ಇಡುತ್ತಿದೆ.
ನಾಳೆ, ರೈತ ಬಾಂಧವರನ್ನು ಭೇಟಿ ಮಾಡಿ ಅವರಿಗೆ ಬೇಷರತ್ ಬೆಂಬಲ ಸೂಚಿಸಲಿದ್ದೇನೆ. ರೈತ ಬಾಂಧವರು, ಸಹಸ್ರಾರು ಸಂಖ್ಯೆಯಲ್ಲಿ ಸೇರಿ ಪ್ರತಿಭಟನೆಯನ್ನು ಯಶಸ್ವಿಗೊಳಿಸೋಣ.
ಅನ್ನದಾತೋ ಸುಖೀ ಭವ
ಜೈ ಜವಾನ್
ಜೈ ಕಿಸಾನ್
#BidadiTownshipBeda I #CongressFailsKarnataka I @tv9kannada I @AsianetNewsSN I @NewsArenaIndia I
@HosadiganthaWeb I @DeccanHerald I @VijayaKarnataka
Dear @narendramodi ji @AmitShah ji @NitinNabin ji
It’s booth level workers appeal if u want continue Karnataka bjp president it’s difficult for bjp bcz majority voting for bjp is Lingayat voters these factor beyond is now @BasanagoudaBJP he is mass for all Hindu voters
ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಬೀರನಗಡ್ಡಿ ಗ್ರಾಮದಲ್ಲಿ ಸೋಮವಾರ ನೂತನವಾಗಿ ನಿರ್ಮಾಣ ಮಾಡಲಾದ ಜಗಜ್ಯೋತಿ ಶ್ರೀ ಬಸವೇಶ್ವರ ಅಶ್ವಾರೂಢ ಕಂಚಿನ ಪುತ್ಥಳಿ ಅನಾವರಣ ಸಮಾರಂಭ ಉದ್ಘಾಟಿಸಿ ಮಾತನಾಡಿದೆ. ಜಗಜ್ಯೋತಿ ಶ್ರೀ ಬಸವೇಶ್ವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಲಾಯಿತು.
ಇದಕ್ಕೂ ಮೊದಲು ಜೆಸಿಬಿ ಮೂಲಕ ಹೂ ಮಳೆ ಸುರಿಸಿ ಅತ್ಯಂತ ಸಂಭ್ರಮ ಮತ್ತು ಆತ್ಮೀಯವಾಗಿ ಸ್ವಾಗತಿಸಿ ಸನ್ಮಾನಿಸಿದ ಅಭಿಮಾನಿ, ಹಿತೈಷಿ ಬಳಗಕ್ಕೆ ಧನ್ಯವಾದಗಳು.
ರಾಜ್ಯಸಭಾ ಸದಸ್ಯರಾದ ಶ್ರೀ ಈರಣ್ಣ ಕಡಾಡಿ ಅವರು ಸೇರಿದಂತೆ ಮುಖಂಡರು, ಹಿತೈಷಿಗಳು, ಕಾರ್ಯಕರ್ತರು ಹಾಗೂ ಬಸವ ಅಭಿಮಾನಿಗಳು ಉಪಸ್ಥಿತರಿದ್ದರು.
ನ್ಯಾಯಾಲಯಗಳಲ್ಲಿ ಇರುವ ಬಾಕಿ ಹುದ್ದೆಗಳ ಭರ್ತಿಗೆ, ಮೂಲ ಸೌಕರ್ಯ ಅಭಿವೃದ್ಧಿಗೆ ಹಾಗೂ ನ್ಯಾಯಾಧೀಶರಿಗೆ ವಸತಿ ಸೌಲಭ್ಯ ಕಲ್ಪಿಸಲು ಕಳುಹಿಸಿದ ಪ್ರಸ್ತಾವನೆಗಳ ಪಟ್ಟಿಯನ್ನು ರಾಜ್ಯ ಸರ್ಕಾರ ಪದೇ-ಪದೇ ಕಡಿತಗೊಳಿಸುತ್ತಿರುವುದಕ್ಕೆ ಸರ್ವೋಚ್ಛ ನ್ಯಾಯಾಲಯದ ನ್ಯಾಯಾಧೀಶರಾದ ಅರವಿಂದ್ ಕುಮಾರ್ ಅವರು ಬೇಸರ ವ್ಯಕ್ತಪಡಿಸಿದರು.
ಸಕಾಲದಲ್ಲಿ ತೀರ್ಪುಗಳು, ನ್ಯಾಯ ಸಲ್ಲಿಕೆ ಆಗಬೇಕಾದರೆ ಸರ್ಕಾರ ಸೂಕ್ತ ವ್ಯವಸ್ಥೆ, ಮೂಲಭೂತ ಸೌಕರ್ಯ, ಸರ್ಕಾರಿ ಅಭಿಯೋಜಕರ ನೇಮಕಾತಿಯನ್ನು ತ್ವರಿತ ಗತಿಯಲ್ಲಿ ಮಾಡಬೇಕೆ ವಿನಃ ಪ್ರಸ್ತಾವನೆಯನ್ನು ಕಡಿತಗೊಳಿಸುವುದರಿಂದ ಜನರಿಗೆ ನ್ಯಾಯ ದೊರಕಿಸಿಕೊಡುವುದರಲ್ಲಿ ವಿಳಂಬವಾಗುತ್ತದೆ ಎಂದು ಸರ್ವೋಚ್ಛ ನ್ಯಾಯಾಲಯದ ನ್ಯಾಯಾಧೀಶರಾದ ಅರವಿಂದ್ ಕುಮಾರ್ ಸರ್ಕಾರದ ವಿಳಂಬ ಧೋರಣೆಯನ್ನು ಟೀಕಿಸಿದ್ದಾರೆ.
ಸರ್ಕಾರಿ ಅಧಿಕಾರಿಗಳ ನಿರ್ಲಕ್ಷ್ಯ, ಮುಂದಾಲೋಚನೆಯ ಕೊರತೆ (lack of foresight/planning) ಹಾಗೂ ಸರ್ಕಾರದ ಇಚ್ಛಾಶಕ್ತಿಯ ಕೊರತೆಯನ್ನು ಮುಖ್ಯ ಮಂತ್ರಿಗಳಾದ ಸಿದ್ದರಾಮಯ್ಯ ಹಾಗೂ CJI ಸೂರ್ಯಕಾಂತ್ ಶರ್ಮ ಸಮ್ಮುಖದಲ್ಲೇ ಸವಿವರವಾಗಿ, ಅಂಕಿ ಅಂಶಗಳ ಸಮೇತ ವಿವರಿಸಿದರು.
ಸರ್ಕಾರದ 'ಭಾಗ್ಯ' ಯೋಜನೆಗಳನ್ನು ಸಮಾಜದ ಧುರೀಣರು, ಚಿಂತಕರು ಟೀಕಿಸಿದಾಗ ರಾಜಕೀಯ ಎಂದು ಬಣ್ಣಿಸುತ್ತಿದ್ದ ಸ'ಮಜಾ'ವಾದಿ ಮುಖ್ಯ ಮಂತ್ರಿ ಸಿದ್ದರಾಮಯ್ಯನವರ 'ಸಿದ್ಧ' ಸೂತ್ರಗಳ ಬಗ್ಗೆ ಈಗ ಸರ್ವೋಚ್ಛ ನ್ಯಾಯಾಲಯದ ನ್ಯಾಯಾಧೀಶರು ಅವರ ಸಮ್ಮುಖದಲ್ಲೇ ಟೀಕಿಸುವ ಪ್ರಸಂಗ ಬಂದೊದಗಿದೆ. ಸರ್ಕಾರ ಹಾಗೂ ಮುಖ್ಯ ಮಂತ್ರಿಗಳು ಈಗಲಾದರೂ ಎಚೆತ್ತುಕೊಂಡು ಜನರ ಕಲ್ಯಾಣಕ್ಕಾಗಿ, ನ್ಯಾಯಾಲಯದಲ್ಲಿರುವ ಪ್ರಕರಣಗಳ ತ್ವರಿತ ವಿಲೇವಾರಿ ಮಾಡಲು, ಅಭಿಯೋಜಕರ ನೇಮಕಾತಿ, ಮೂಲಭೂತ ಸೌಕರ್ಯದ ಬಗ್ಗೆ ಗಮನ ಹರಿಸಿ 'ಚುನಾವಣಾ ರಾಜಕೀಯದ' ಚುನಾವಣಾ ರಾಜಕೀಯದ ಮನಃಸ್ಥಿತಿಯಿಂದ ಹೊರಬರಲಿ
Justice Arvind Kumar, Hon'ble Supreme Court Judge, strongly criticized the state government for failing to provide the necessary infrastructure, official quarters, and other essential facilities for judicial officers, improving judicial infrastructure in Karnataka despite the rise in cases in the State. This situation is despite the courts providing adequate revenue to the state government in the form of court fees and other charges.
Justice Arvind Kumar highlighted the need to augment the infrastructure in view of the increasing number of cases and the need to clear such cases on a war footing to ensure timely justice to the petitioners and the aggrieved. Hon'ble Jus. has clearly pointed out the lack of priority of the state government to improve the legal infrastructure in the state in the presence of the chief minister of Karnataka.
The deficiency in administration and lack of priority have been pointed out clearly & concisely by Jus. Kumar. This case is just an example of how the welfare schemes of the government have outweighed development in the state
Since the viewpoint on the administration is coming from one of the highest judicial officers of the country, I hope the Congress government makes amends and ensures the priorities of the people are met instead of merely indulging in wooing a certain section of people for vote bank politics.
@CMofKarnataka I @siddaramaiah I #CongressFailsKarnataka
ಸಮಾಜ ಸುಧಾರಕರು, ಕ್ರಾಂತಿಯೋಗಿಗಳೂ ಆದ ಬಸವಣ್ಣನವರ ತತ್ವ, ಆದರ್ಶಗಳು ಇಂದಿಗೂ ಎಂದೆಂದಿಗೂ ಪ್ರಸ್ತುತ. ತಮ್ಮ ವಚನಗಳ ಮೂಲಕ ಸಮಾಜದ ಅನಿಷ್ಟಗಳನ್ನು ತೊಲಗಿಸಿ ಮಹಾ ಕ್ರಾಂತಿ ಮಾಡಿದ ಪುಣ್ಯ ಪುರುಷ ಬಸವಣ್ಣನವರ ಜಯಂತಿಯಂದು ಅವರಿಗೆ ನನ್ನ ನಮನಗಳು.
#BasavaJayanthi