ಸಿರಿವಂತರಿಗೆ ಹೇರಕಟ್, ಬಡವರಿಗೆ ಕೈ ಕಟ್ ಬಾಯ್ ಮುಚ್!
ತನ್ನದೇ ಹಿರಿ ಕಂಪನಿಯ, ಮರಿ ಕಂಪನಿ ಮಾಡಿಕೊಂಡಿದ್ದ ₹22,006 ಕೋಟಿಯಷ್ಟು ದೊಡ್ಡ ಮೊತ್ತದ ಸಾಲಕ್ಕೆ(ಬಡ್ಡಿ ಸೇರಿಸಿ) ಜಾಮೀನಾಗಿ ನಿಂತು, ಅದನ್ನು ತೀರಿಸಲು ತಿಣುಕುತ್ತಿದ್ದ 'ಬಡ ಉದ್ಯಮಿ' ಯೊಬ್ಬನಿಗೆ NCLT(National Company Law Tribunal) ಉದಾರ, ವಿಶಾಲ ಮನಸ್ಸು ಮಾಡಿ "₹6.5 ಕೋಟಿ ಮಾತ್ರ ವಾಪಸ್ ಕೊಡು ಸಾಕು ಪುಟ್ಟಾ" ಎಂದು ಇತ್ತೀಚೆಗೆ ಆದೇಶಿಸಿದೆ. — ಅಂದರೆ ಸುಮಾರು 99.97% Discount!
ಇದನ್ನ Economy ಭಾಷೆಯಲ್ಲಿ Haircut ಎನ್ನುತ್ತಾರೆ. ಅಂದ್ರೆ ನೀವ್ ಬ್ಯಾಂಕಿನಲ್ಲಿ, 100 ರೂಪಾಯಿ ಸಾಲ ತೆಗೆದುಕೊಂಡು, 3 ಪೈಸೆ ವಾಪಸ್ ಕೊಟ್ಟಂತೆ. ನಿಮ್ಮಿಂದ ಇದು ಆಗುತ್ತದಾ Try ಮಾಡಿ! IMPOSSIBLE! ಬಡವರ ಬಳಿ ನಮ್ಮ ಬ್ಯಾಂಕುಗಳು 100 ಕ್ಕೆ 1000 ಬಿಚ್ಚುತ್ತವೆ, ಆದರೆ ಸಿರಿವಂತರ ಮುಂದೆ ಕುಂಯ್ ಗುಡುತ್ತಿವೆ.
22,006 ಕೋಟಿಯಲ್ಲಿ 6 ಕೋಟಿ 25 ಲಕ್ಷ ಸಾಲ ಪಾವತಿಸುವ ಲಕ್ಕಿ ಲಾಟರಿಹೊಡೆದದ್ದು ಸುಭಾಷ್ ಚಂದ್ರ ಎನ್ನುವ ವ್ಯಕ್ತಿಗೆ. ಈತ ಯಾರು ಇವರ ಹಿನ್ನೆಲೆಯೇನು ಎಂಬುದು ನಿಮ್ಮ ಗಮನಕ್ಕೆ ಬಿಟ್ಟದ್ದು.
ಇಂತಹ ಪ್ರಕರಣಗಳು ಹೊರಬಂದು "ನಮ್ಮ ಆರ್ಥಿಕ ವ್ಯವಸ್ಥೆಯಲ್ಲಿ ಸರ್ಕಾರದ ನಿಯಮಗಳು ಎಲ್ಲರಿಗೂ ಒಂದೇ ರೀತಿಯಲ್ಲಿ ಅನ್ವಯವಾಗುತ್ತಿವೆಯಾ?" ಎನ್ನುವ ದೊಡ್ಡ ಪ್ರಶ್ನೆಯೊಂದನ್ನ ಮುಂದಿಡುತ್ತವೆ. ಇದೊಂದೇ ಅಲ್ಲ, ಸಾಲು ಸಾಲು ಪ್ರಕರಣಗಳು ನಡೆಯುತ್ತಿವೆ ಆದರೆ, ಆರ್ಥಿಕತೆ ಅಷ್ಟು ಬೇಗ ಜನರಿಗೆ ಅರ್ಥವಾಗುವ ವಿಷಯವಲ್ಲ. ಹಾಗಾಗಿ ಮಂಕು ಕವಿದಿವೆ.
ಅನಿಲ್ ಅಂಬಾನಿ ಪ್ರಕರಣದಲ್ಲಿ ಸುಮಾರು ₹47,251 ಕೋಟಿ admitted claims ಇದ್ದರೂ resolutionನಲ್ಲಿ ಸುಮಾರು ₹455.92 ಕೋಟಿ ಮಾತ್ರ realization ಆಗಿದೆ. ಇಷ್ಟು ಕಡಿಮೆ recovery ಏಕೆ ಆಯಿತು? ಯಾವ assets/guarantees ಮೂಲಕ recovery ಪ್ರಯತ್ನಿಸಲಾಯಿತು? ಎನ್ನುವುದಕ್ಕೆ ಉತ್ತರಗಳಿಲ್ಲ.
ಬ್ಯಾಂಕ್ ಆಫ್ ಬರೋಡಾದಲ್ಲಿ ₹100 ಕೋಟಿಗಿಂತ ಹೆಚ್ಚಿನ NPA ಸಾಲಗಳನ್ನ ಸೇರಿಸಿ ಒಟ್ಟು ₹35,715 ಕೋಟಿ technical write-off ಮಾಡಲಾಗಿದೆ. ಯಾವ ಯಾವ ದೊಡ್ಡ accountsನಲ್ಲಿ ಎಷ್ಟು write-off ಮಾಡಲಾಗಿದೆ? ಅವು ಯಾವ ಕಂಪೆನಿಗಳು? ಯಾರ ಒಡೆತನಕ್ಕೆ ಸಂಬಂಧಿಸಿದವು? ಎಂದು ಕೇಳಿದರೂ, ಉತ್ತರ ಬಂದಿಲ್ಲ. ಆ ಹೆಸರುಗಳನ್ನು ಬಹಿರಂಗಪಡಿಸದಿರುವ ಕಾರಣವೇನು? ಎಷ್ಟು ಹಣವನ್ನು ನಂತರ recover ಮಾಡಲಾಗಿದೆ? ಎಂಬುದು ಅರಣ್ಯರೋದನವಾಗಿದೆ.
ಜಿಯೋ ತನ್ನ ನೈಜ ಲೆಕ್ಕದಲ್ಲಿ ₹11,003 ಕೋಟಿಯನ್ನು ಬಂಡವಾಳ ವೆಚ್ಚ (CWIP) ಎಂದು ತೋರಿಸಿ, ತೆರಿಗೆ ಲೆಕ್ಕದಲ್ಲಿ ಸಾಮಾನ್ಯ ವೆಚ್ಚವೆಂದು ಹೇಳಿಕೊಂಡು Tax deduction ಕೇಳಿತು. ಆದಾಯ ತೆರಿಗೆ ಇಲಾಖೆ ಅದನ್ನು ಒಪ್ಪದೇ Tax ಕಟ್ಟಲು ಹೇಳಿದಾಗ, Jio ITAT ಹೋಯಿತು. ಅಲ್ಲಿ ITAT (Income Tax Appellate Tribunal) Jio ಮಾತಿಗೆ ಜೈ ಅಂದು ತೆರಿಗೆ ವಿನಾಯಿತಿ ನೀಡಿತು. ಹಾಗಾದರೆ ಆದಾಯ ತೆರಿಗೆ ಇಲಾಖೆಯ ₹11,003 ಕೋಟಿ disallowanceಗೆ ಇದ್ದ ಸಾಕ್ಷ್ಯವೇನು?
ಮಧ್ಯಮ ವರ್ಗದ ಕುಟುಂಬವೊಂದು ಕೆಲವೇ ಲಕ್ಷ ರೂಪಾಯಿಗಳ ಸಾಲ ಪಡೆದರೆ, ವರ್ಷ ವರ್ಷಗಳ ಕಾಲ EMI, ಬಡ್ಡಿ ಮತ್ತು ಕಠಿಣ ಹಣಕಾಸಿನ ಶಿಸ್ತನ್ನು ಪಾಲಿಸಬೇಕಾಗುತ್ತದೆ. ಒಂದೇ ಒಂದು EMI ಮಿಸ್ ಆದರೂ ಪೆನಾಲ್ಟಿಗಳು ಬಂದುಬೀಳುತ್ತವೆ. CIBIL Score Down ಆಗುತ್ತದೆ. CIBIL Score ಕಡಿಮೆ ಇದೆಯೆಂದು ಮದುವೆಗಳು ಮುರಿದುಬಿದ್ದಿವೆ.
ಬಡವರು ಅಕೌಂಟಿನಲ್ಲಿ ಹಣವೇ ಇಟ್ಟಿಲ್ಲ ಎಂದು ದಂಡಹಾಕುವ ವ್ಯವಸ್ಥೆ ನಮ್ಮದು.
ಹಾಗೆ ದಂಡ ಹಾಕಿ ಹಾಕಿ, 2022 ರಿಂದ ಈ ವರೆಗೆ 26,000 ಕೋಟಿಯಷ್ಟನ್ನು ನಮ್ಮ ಬ್ಯಾಂಕುಗಳು ಪೀಕಿವೆ. ಬಡವರಿಗೆ Haircut ಗೀರಕಟ್ ಏನಿಲ್ಲ, ನುಣ್ಣಗೆ ತಲೆ ಬೋಳಿಸೋದೊಂದೆ. ಹೆಚ್ಚಿಗೆ ಮಾತನಾಡಿದರೆ, ಬಾಯ್ ಮುಚ್ ಕೈ ಕಟ್!
ಇವೆಲ್ಲ ಆಳವಾದ ವಿಚಾರಗಳು, 75% ಸಾಕ್ಷರತೆ ಇದ್ದರೂ, ದೇಶದ ಕೆಲವೇ ಜನರಿಗೆ ತಿಳಿಯುವ ವಿಚಾರಗಳು.
ಕ್ರೋನಿ ಕ್ಯಾಪಿಟಲಿಸಮ್ ಜಗತ್ತಿನ ಅತ್ಯಂತ ಭಯಂಕರ ವ್ಯವಸ್ಥೆ ಅಲ್ಲಿ, ಆಡಳಿಗಾರರು, ಸಿರಿವಂತ ಉದ್ಯಮಿಗಳ ಕೈಗೊಂಬೆಗಳಾಗಿರುತ್ತಾರೆ. ಜಗತ್ತಿನ ಸಾಕಷ್ಟು ದೇಶಗಳಲ್ಲಿ ಇಂದು ಇದೇ ನಡೆದಿರೋದು.
ಕಮ್ಯುನಿಸಮ್ ನ ತೀವ್ರತೆ ಇಳಿದು ಹೋಗಿದೆ. ತಮಗೋಸ್ಕರವೇ ಹೋರಾಡುವ ಈ ಕಮ್ಯುನಿಸ್ಟರ ಬಗ್ಗೆ ಸರಿಯಾಗಿ ತಿಳಿಯದೆ, ಜನ ಅವರನ್ನು 'ಕಮ್ಮಿನಿಸ್ಟರು', ಲೆಫ್ಟಿಸ್ಟಗಳು, ಲಿಬರಾಂಡೂಗಳು ಎಂದು ಹೀಗೆಳೆಯುತ್ತಾ ತಮ್ಮ ಕಾಲ ಮೇಲೆ ತಾವೇ ಕಲ್ಲು ಚೆಲ್ಲಿಕೊಳ್ಳುತ್ತಾ, ಆ ಕಲ್ಲಿನ ಪೆಟ್ಟಿಗೆ ಅಯ್ಯೋ ಎನ್ನದೆ, ಯಾವನೋ ಒಬ್ಬ ಅಯೋಗ್ಯ ರಾಜಕಾರಣಿಗೆ ಜೈ ಎನ್ನುತ್ತಾ ನಡೆದಿದ್ದಾರೆ.
ಇನ್ನು ಸಮಾಜವಾದ ಎತ್ತಿ ಹಿಡಿಯಲು, ನೆಹರೂ ಅವರೂ ಇಲ್ಲ, ಸುಭಾಷ್ ಚಂದ್ರ ಬೋಸರೂ ಇಲ್ಲ.
ಬಂಡವಾಳಶಾಹಿಗಳ ಆಟಾಟೋಪ ಹೀಗೆಯೇ ಮಿತಿಮೀರಿದರೆ, ಫ್ರೆಂಚ್ ಕ್ರಾಂತಿಯಂತಹ ಇನ್ನೊಂದು ಕ್ರಾಂತಿ ಆಗುವುದರಲ್ಲಿ ಎರಡುಮಾತಿಲ್ಲ.
-
ಪ್ರವೀಣ ಮ. ಮಗದುಮ್ಮ
Feedback: [email protected]@prajavani@ChekrishnaCk@RealMrIG
First and last movie where yash did some acting is in ಕಿರಾತಕ
After that all he doing is self grooming,lots of dance and tons of mediocre slow and deep voiced dialogue deliveries.
Not only him all the so called "stars" are taking the audience for granted.
@RealMrIG Still your community can’t stand in front of them in their respective fields…to secure your self you have to represent yourselves as a reserved community…just remember you may gain some seats being undeserved with reservation but never the competency