ಅಲ್ಪಸಂಖ್ಯಾತರನ್ನು ಓಲೈಸಲು ��ಳಂದದ ಶ್ರೀ ರಾಘವ ಚೈತನ್ಯ ಮಂದಿರದ ಮೇಲೆ ದಾಳಿ ಮಾಡಿದವರ ವಿರುದ್ಧ ದಾಖಲಾಗಿದ್ದ ಪ್ರಕರಣ ಕುರಿತು ವಿಚಾರಣೆ ಕೋರ್ಟ್ನಲ್ಲಿ ಬಾಕಿ ಇರುವಾಗಲೇ ಕಾಂಗ್ರೆಸ್ ಸರ್ಕಾರ ದಾಳಿಕೋರರ ಮೇಲಿನ ಕೇಸ್ ಅನ್ನು ವಾಪಸ್ ಪಡೆದ ನಿರ್ಧಾರವನ್ನು ಖಂಡಿಸಿ, ಈ ಆದೇಶವನ್ನು ತಕ್ಷಣವೇ ರದ್ದುಪಡಿಸುವಂತೆ ಕೋರಿ ಇಂದು ವಿಧಾನ ಪರಿಷತ್ ವಿಪಕ್ಷ ನಾಯಕರಾದ ಶ್ರೀ ಛಲವಾದಿ ನಾರಾಯಣಸ್ವಾಮಿ ಅವರ ನೇತೃತ್ವದ ಬಿಜೆಪಿ ನಿಯೋಗವು ಇಂದು ರಾಜ್ಯಪಾಲರಾದ ಶ್ರೀ ಥಾವರ್ಚಂದ್ ಗೆಹ್ಲೋಟ್ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿತು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಪ್ರತಿಪಕ್ಷದ ಉಪನಾಯಕರಾದ ಶ್ರೀ ಸುನಿಲ್ ವಲ್ಯಾಪುರೆ, ಮಾಜಿ ಸಂಸದರಾದ ಡಾ. ಉಮೇಶ್ ಜಾಧವ್, ಶಾಸಕರಾದ ಶ್ರೀ ಅವಿನಾಶ್ ಜಾಧವ್, ವಿಧಾನ ಪರಿಷತ್ ಸದಸ್ಯರಾದ ಶ್ರೀ ಶಶಿಲ್ ಜಿ. ನಮೋಶಿ, ಶ್ರೀ ಬಿ. ಜಿ. ಪಾಟೀಲ್, ಮಾಜಿ ವಿಧಾನ ಪರಿಷತ್ ಸದಸ್ಯರಾದ ಶ್ರೀ ಅಮರನಾಥ್ ಪಾಟೀಲ್, ಕಲ್ಬುರ್ಗಿ ಗ್ರಾಮಾಂತರ ಜಿಲ್ಲಾಧ್ಯಕ್ಷರಾದ ಶ್ರೀ ಅಶೋಕ್ ಬಗಲಿ, ಪದಾಧಿಕಾರಿಗಳು ಮತ್ತು ಪ್ರಮುಖರು ಉಪಸ್ಥಿತರಿದ್ದರು.
#HinduVirodhiCongress
ಆಳಂದದ ಲಾಡ್ಲೆ ಮಶಾಕ್ ದರ್ಗಾ ಗಲಭೆ ಪ್ರಕರಣ ಹಿಂಪಡೆದ @INCKarnataka ಸರ್ಕಾರದ ಕಾನೂನು ಬಾಹಿರ ಕ್ರಮದ ವಿರುದ್ಧ ಇಂದು ಕಲಬುರಗಿಯಲ್ಲಿ ನಡೆದ ಬೃಹತ್ ಪ್ರತಿಭಟನೆಯಲ್ಲಿ ಪಾಲ್ಗೊಂಡು, ದುಷ್ಕರ್ಮಿಗಳ ವಿರುದ್ಧ ಪ್ರಕರಣ ಮರು ದಾಖಲಿಸಿಕೊಂಡು ಕಾನೂನು ರೀತ್ಯಾ ಕಠಿಣ ಕ್ರಮ ತೆಗೆದುಕೊಳ್ಳಲೇಬೇಕು ಎಂದು ಆಗ್ರಹಿಸಲಾಯಿತು. ಪವಿತ್ರ ರಾಘವ ಚೈತನ್ಯ ಶ್ರೀ ಶಿವಲಿಂಗ ದೇವಸ್ಥಾನದ ಅಪಚಾರ ನಡೆಸಿದ ಗಲಭೆಕೋರರ ಮೇಲಿನ ಮೊಕದ್ದಮೆಗಳನ್ನು ಹಿಂಪಡೆದಿರುವ ಈ ತುಘಲಕ್ ಕಾಂಗ್ರೆಸ್ ಸರ್ಕಾರದ ಕ್ರಮ ಅತ್ಯಂತ ಖಂಡನೀಯ. ಕೇವಲ ತನ್ನ ಓಟ್ ಬ್ಯಾಂಕ್ ತುಷ್ಟೀಕರಣಕಾರಣಕ್ಕಾಗಿ ರಾಜ್ಯ ಸರ್ಕಾರವೇ ಸಮಾಜಘಾತುಕರ ಪರ ನಿಂತರೆ ಜನತೆಯ ಗತಿಯೇನು?
'ಹೇಳುವುದು ಆಚಾರ, ತಿನ್ನೋದು ಬದನೆಕಾಯಿ' ಎನ್ನುವಂತೆ ಈ ಕಾಂಗ್ರೆಸ್ ಸರ್ಕಾರ ಬಾಯಲ್ಲಿ ಹೇಳುವುದಕ್ಕೂ ಕಾರ್ಯತಃ ಮಾಡುವುದಕ್ಕೂ ಸಂಬಂಧವೇ ಇಲ್ಲ. ತಮ್ಮ ಮತ ಬ್ಯಾಂಕ್ ಸಂತೃಪ್ತಿಗಾಗಿ ಜನರ ಧಾರ್ಮಿಕ ನಂಬಿಕೆಗಳ ಮೇಲೆ ಆಕ್ರಮಣ ಮಾಡಿದವರನನ್ನು, ಶ್ರದ್ಧಾಕೇಂದ್ರಗಳ ಮೇಲೆ ದಾಳಿ ಮಾಡಿದವರನ್ನು ರಕ್ಷಿಸುತ್ತಿರುವಷ್ಟು ನೈತಿಕವಾಗಿ ಕುಸಿದಿದೆ. ಒಂದು ಧರ್ಮದವರನ್ನು ಓಲೈಸಲು, ಇನ್ನೊಂದು ಧರ್ಮಕ್ಕೆ ಅವಮಾನ ಮಾಡಿದ ನೀಚರನ್ನೇ ರಕ್ಷಿಸುವಷ್ಟು ಬೌದ್ಧಿಕ ದಿವಾಳಿತನ ಪ್ರದರ್ಶಿಸಿದೆ. ಈ ಕಾಂಗ್ರೆಸ್ ಸರ್ಕಾರ ತುಷ್ಟೀಕರಣ ರಾಜಕೀಯ, ರಾಜ್ಯದ ಕಾನೂನು ಸುವ್ಯವಸ್ಥೆಯ ಅಧಃಪಾತಕ್ಕೆ ಕನ್ನಡಿ ಹಿಡಿದಿದೆ. ರಾಜ್ಯ ಸರ್ಕಾರ ಕೂಡಲೇ ಎಚ್ಛೆತ್ತುಕೊಂಡು ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮ ತೆಗ���ದುಕೊಳ್ಳದೆ ಇದ್ದಲ್ಲಿ ಕಲಬುರ್ಗಿಯ ಪ್ರತಿಭಟನೆಯ ಕಿಚ್ಚು ರಾಜ್ಯಾದ್ಯಂತ ಹರಡಲಿದೆ.
ಬಹುಸಂಖ್ಯಾತರ ಭಾವನೆಗಳೊಂದಿಗೆ ಆಟವಾಡುತ್ತಿರುವ ಮತಿಗೆಟ್ಟ ಕಾಂಗ್ರೆಸ್ ಸರ್ಕಾರದ ಇಂತಹ ಜನವಿರೋಧಿ ಧೋರಣೆಗಳನ್ನು ನಮ್ಮ ಪಕ್ಷ ಎಂದಿಗೂ ಸಹಿಸುವುದಿಲ್ಲ. ನಮ್ಮ ಧರ್ಮ, ನಮ್ಮ ಸಂಸ್ಕೃತಿ ಮತ್ತು ಸಮಾಜದ ಶಾಂತಿಯನ್ನು ಕದಡುವ ಶಕ್ತಿಗಳಿಗೆ ಕಾಂಗ್ರೆಸ್ ಸರ್ಕಾರದ ಪ್ರೋತ್ಸಾಹದ ವಿರುದ್ಧ ನಮ್ಮ ಹೋರಾಟ ಮತ್ತಷ್ಟು ತೀವ್ರಗೊಳ್ಳಲಿದೆ. ಕಾಂಗ್ರೆಸ್ಸಿನ ಹಿಂದೂ ವಿರೋಧಿ ಧೋರಣೆಗೆ ಜನರೇ ತ���್ಕ ಪಾಠ ಕಲಿಸಲಿದ್ದಾರೆ. ಪಕ್ಷದ ಕಲಬುರಗಿ ಗ್ರಾಮಾಂತರ ಜಿಲ್ಲಾಧ್ಯಕ್ಷ ಶ್ರೀ ಅಶೋಕ್ ಬಗಲಿ, ಬೀದರ್ ಜಿಲ್ಲಾಧ್ಯಕ್ಷ ಶ್ರೀ ಸೋಮನಾಥ ಪಾಟೀಲ್, ಶಾಸಕರ���ಗಳಾದ ಶ್ರೀ ಶೈಲೇಂದ್ರ ಬೆಲ್ದಾಳೆ, ಶ್ರೀ ಬಸವರಾಜ ಮತ್ತಿಮೂಡ್, ಶ್ರೀ ಅವಿನಾಶ್ ಜಾಧವ್, ವಿಧಾನ ಪರಿಷತ್ ಸದಸ್ಯರುಗಳಾದ ಶ್ರೀ ಬಿ.ಜಿ. ಪಾಟೀಲ್, ಶ್ರೀ ಶಶಿಲ್ ನಮೋಶಿ, ಮಾಜಿ ಕೇಂದ್ರ ಸಚಿವ ಶ್ರೀ ಭಗವಂತ ಖೂಬಾ, ಮಾಜಿ ಸಂಸದ ಡಾ. ಉಮೇಶ್ ಜಾಧವ್, ಮಾಜಿ ಶಾಸಕರುಗಳಾದ ಶ್ರೀ ಸುಭಾಷ್ ಗುತ್ತೇದಾರ್, ಶ್ರೀ ಅಪ್ಪುಗೌಡ, ಶ್ರೀ ನರಸಿಂಹ ನಾಯಕ್ (ರಾಜು ಗೌಡ) ಸೇರಿದಂತೆ ಹಲವಾರು ನಾಯಕರು, ಜನಪ್ರತಿನಿಧಿಗಳು, ಪ್ರಮುಖರು, ಮುಖಂಡರು, ಹೆಚ್ಚಿನ ಸಂಖ್ಯೆಯಲ್ಲಿ ನಮ್ಮ ಕಾರ್ಯಕರ್ತರು ಮತ್ತು ಸಾರ್ವ��ನಿಕ ಬಂಧುಗಳು ಉಪಸ್ಥಿತರಿದ್ದರು.
#CongressFailsKarnataka #HinduVirodhiCongress
ಈ ಸಲವೂ ಕಪ್ ನಮ್ದೆ...
��ಪಿಎಲ್-2026 ಕ್ರೀಡಾಕೂಟದ ಫೈನಲ್ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ತಂಡವನ್ನು ಎದುರಿಸಲು ಸ��ದ್ಧವಾಗಿರುವ ನಮ್ಮ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ತಂಡಕ್ಕೆ ಹೃತ್ಪೂರ್ವಕ ಶುಭಾಶಯಗಳು.
All the best Team RCB
#RCBvGT #IPL2026
ಲಕ್ಷಾಂತರ ಮನೆಗಳ ಮೇಲ್ಛಾವಣಿಗಳು ಈಗ ವಿದ್ಯುತ್ ಉತ್ಪಾದನಾ ಕೇಂದ್ರವಾಗುತ್ತಿದೆ ! ☀️🇮🇳
ಜನವರಿ ಮತ್ತು ಮಾರ್ಚ್ 2026 ರ ನಡುವೆ, ದೇಶದಲ್ಲಿ 2.7 GW ಮೇಲ್ಛಾವಣಿ ಸೌರ ಫಲಕಗಳನ್ನು ಅಳವಡಿಸಲಾಗಿದೆ ಮತ್ತು ಸಾಮಾನ್ಯ ಮನೆಗಳು ಇದರಲ್ಲಿ ಹೆಚ್ಚಿನ ಪಾಲನ್ನು ಹೊಂದಿವೆ.
ಇದು ಕೇವಲ ಅಂಕಿ-ಅಂಶವಲ್ಲ; ಲಕ್ಷಾಂತರ ಕುಟುಂಬಗಳ ಮೇಲ್ಛಾವಣಿಗಳು ಈಗ ವಿದ್ಯುತ್ ಬಿಲ್ಗ���ನ್ನು ಕಡಿಮೆ ಮಾಡುವ ಮೂಲಕ ಆದಾಯದ ಮೂಲವಾಗುತ್ತಿರುವ ಯಶಸ್ಸಿನ ಕಥೆಯಾಗಿದೆ. ಸರಿಯಾದ ಉದ್ದೇಶಗಳು ಮತ್ತು ಸರಿಯಾದ ನೀತಿಗಳು ಅನುಷ್ಠಾನಕ್ಕೆ ಬಂದಾಗ ಬದಲಾವಣೆ ಸ್ಪಷ್ಟವಾಗಿ ಗೋಚರಿಸುತ್ತದೆ. 🏠
#PMSuryaGhar #ViksitBharat
ದೇಶದ ನಾಗರಿಕರ ಸಾಧನೆ, ಆಶೋತ್ತರಗಳಿಗೆ ಧ್ವನಿಯಾಗಿರುವ ಹೆಮ್ಮೆಯ ಪ್ರಧಾನಮಂತ್ರಿ ಶ್ರೀ @narendramodi ಜೀ ಅವರ ‘ಮನ್ ಕಿ ಬಾತ್��� ಕಾರ್ಯಕ್ರಮ ನಾಳೆ ಬೆಳಗ್ಗೆ 11 ಗಂಟೆಗೆ ಪ್ರ��ಾರಗೊಳ್ಳಲಿದೆ.
ಜನಸಾಮಾನ್ಯರ ಸಾಧನೆಗಳ ಸ್ಪೂರ್ತಿದಾಯಕ ಕಥಾನಕಗಳ ಬಿತ್ತರದ ಈ ಪ್ರೇರಣಾದಾಯಕ ಕಾರ್ಯಕ್ರಮವನ್ನು ತಪ್ಪದೆ ಆಲಿಸೋಣ. ಸಶಕ್ತ ರಾಷ್ಟ್ರ ನಿರ್ಮಾಣದ ನಿಟ್ಟಿನಲ್ಲಿ ಜೊತೆಯಾಗೋಣ.
#MannKiBaat
ಸಮಯ ಮತ್ತು ಕರ್ಮ
ಪಕ್ಷಿ ಜೀವಂತವಾಗಿರುವಾಗ ಅದು ಇರುವೆಗಳನ್ನು ತಿನ್ನುತ್ತದೆ ಪಕ್ಷಿ ಸತ್ತಾಗ ಇರುವೆಗಳು ಅದನ್ನು ತಿನ್ನುತ್ತವೆ ...
ಒಂದು ಮರದಿಂದ ಲಕ್ಷಾಂತರ ಬೆಂಕಿಕಡ್ಡಿಗಳನ್ನು ತಯಾರಿಸಬಹುದು ಆದರೆ ಲಕ್ಷಾಂತರ ಮರಗಳನ್ನು ಸುಡಲು ಒಂದೇ ಒಂದು ಬೆಂಕಿಕಡ್ಡಿ ಸಾಕು ಪರಿಸ್ಥಿತಿಗಳು ಯಾವುದೇ ಸಮಯದಲ್ಲಿ ಬದಲಾಗಬಹುದು
ಪಕ್ಷದ ಗೌರವಾನ್ವಿತ ರಾಷ್ಟ್ರೀಯ ಅಧ್ಯಕ್ಷರಾದ ಸನ್ಮಾನ್ಯ ಶ್ರೀ @NitinNabin ಜೀ ಅವರ ಪ್ರಖರ ನೇತೃತ್ವದಲ್ಲಿ ಇಂದು ರಾಜ್ಯ ಕೋರ್ ಕಮಿಟಿ ಸಭೆಯನ್ನು ನಡೆಸಲಾಯಿತು. ಸಂಘಟನೆ�� ಬಲವರ್ಧನೆ, ಮುಂದಿನ ಜನಪರ ಹೋರಾಟಗಳ ��ೂಪುರೇಷೆಗಳು ಹಾಗೂ ಪಕ್ಷದ ಕಾರ್ಯತಂತ್ರಗಳ ನಿಟ್ಟಿನಲ್ಲಿ, ರಾಷ್ಟ್ರೀಯ ಅಧ್ಯಕ್ಷರ ಮಾರ್ಗದರ್ಶನದಲ್ಲಿ ವಿಸ್ತೃತ ಪರಾಮರ್ಶೆ ಹಾಗೂ ಚರ್ಚೆ ನಡೆಸಲಾಯಿತು.
ಸಭೆಯಲ್ಲಿ ಮಾಜಿ ಮುಖ್ಯಮಂತ್ರಿ ಶ್ರೀ @BSYBJP ಪ, ಕೇಂದ್ರ ಸಚಿವರಾದ ಶ್ರೀ @JoshiPralhad , ರಾಜ್ಯ ಉಸ್ತುವಾರಿಗಳು, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಶ್ರೀ @AgrawalRMD , ಸಹ ಉಸ್ತುವಾರಿ ಶ್ರೀ @ReddySudhakar21 ಡಿ, ವಿಧಾನಸಭೆ ಪ್ರತಿಪಕ್ಷ ನಾಯಕ ಶ್ರೀ @RAshokaBJP , ವಿಧಾನ ಪರಿಷತ್ ವಿಪಕ್ಷ ನಾಯಕ ಶ್ರೀ @NswamyChalavadi , ಮಾಜಿ ಮುಖ್ಯಮಂತ್ರಿ ಶ್ರೀ @DVSadanandGowda , ಮಾಜ��� ಡಿಸಿಎಂ, ಸಂಸದರಾದ ಶ್ರೀ @govind_karjol , ಮಾಜಿ ರಾಜ್ಯಾಧ್ಯಕ್ಷ ಶ್ರೀ @nalinkateel , ಮಾಜಿ ಡಿಸಿಎಂ ಮತ್ತು ಶಾಸಕ ಶ್ರೀ @drashwathcn , ಮಾಜಿ ಸಚಿವರುಗಳಾದ ಶ್ರೀ @CTRavi_BJP , ಶ್ರೀ @sriramulubjp , ರಾಜ್ಯ ಪ್ರಧಾನ ಕಾರ್ಯದರ್ಶಿ ಶ್ರೀ ಪಿ.ರಾಜೀವ್, ಕೋರ್ ಕಮಿಟಿ ಸದಸ್ಯ ಶ್ರೀ @BlrNirmal ಪಾಲ್ಗೊಂಡಿದ್ದರು. ನಮ್ಮ ರಾಷ್ಟ್ರೀಯ ನಾಯಕತ್ವದ ಮುಂದಾಳತ್ವದಲ್ಲಿ ಮುಂದಿನ ದಿನಗಳಲ್ಲಿ ಸಂಘಟಿತ ಶಕ್ತಿಯೊಂದಿಗೆ ಮುನ್ನಡೆಯಲು ಪಕ್ಷ ಕಟಿಬದ್ಧವಾಗಿದೆ.
#BJP4Karnataka
During the Karnataka pravas, met and interacted with the dedicated staff working at the state BJP office.
With their hard work and discipline, they play a crucial role in smoothly running the daily operations of the organization.
ಕರ್ನಾಟಕ ಪ್ರವಾಸದ ಸಂದರ್ಭದಲ್ಲಿ, ಇಲ್ಲಿನ ರಾಜ್ಯ ಬಿಜೆಪಿ ಕಾರ್ಯಾಲಯದಲ್ಲಿ ಸೇವೆ ಸಲ್ಲಿಸುತ್ತಿರುವ ನಿಷ್ಠಾವಂತ ಸಿಬ್ಬಂದಿ ವರ್ಗದವರನ್ನು ಭೇಟಿಯಾಗಿ ಸಂವಾದ ನಡೆಸಲಾಯಿತು.
ತಮ್ಮ ಪರಿಶ್ರಮ ಹಾಗೂ ಶಿಸ್ತಿನ ಮೂಲಕ ಸಂಘಟನೆಯ ದೈನಂದಿನ ಚಟುವಟಿಕೆಗಳು ಸುಗಮವಾಗಿ ಸಾಗುವಲ್ಲಿ ಅವರು ಅತ್ಯಂತ ಮಹತ್ವದ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ.
@BJP4Karnataka
"ಜನಸಾಮಾನ್ಯರ ಹಿತವೇ ಪರಮೋಚ್ಚ ಧ್ಯೇಯ - ಇದುವೇ ಮೋದಿ ಸರ್ಕಾರ"
ಜಾಗತಿಕ ತೈಲ ಮಾರುಕಟ್ಟೆಯ ಬಿಕ್ಕಟ್ಟಿನಿಂದಾಗಿ ವಿಶ್ವದ ಪ್ರಮುಖ ರಾಷ್ಟ್ರಗಳು ತತ್ತರಿಸುತ್ತಿವೆ. ಪ್ರಬಲ ಆರ್ಥಿಕತೆ ಹೊಂದಿರುವ 25ಕ್ಕೂ ಹೆಚ್ಚು ದೇಶಗಳಲ್ಲಿ ಇಂಧನ ಬೆಲೆ ಗಗನಕ್ಕೇರಿದೆ. ಆದರೆ, ಇಂತಹ ಕಠಿಣ ಜಾಗತಿಕ ಸವಾಲುಗಳ ಮಧ್ಯೆಯೂ ಭಾರತದಲ್ಲಿ ಮಾತ್ರ ಪೆಟ್ರೋಲ್ (+3.2%) ಮತ್ತು ಡೀಸೆಲ್ (+3.4%) ಬೆಲೆ ಏರಿಕೆಯನ್ನು ಅತ್ಯಂತ ಕನಿಷ್ಠ ಮಟ್ಟದಲ್ಲಿ ನಿಯಂತ್ರಿಸಲಾಗಿದೆ.
ನೆರೆಹೊರೆ ಹಾಗೂ ಜಗತ್ತಿನ ಮುಂದುವರಿದ ರಾಷ್ಟ್ರಗಳಿಗೆ ಹೋಲಿಸಿದರೆ ಭಾರತೀಯರ ಹಿತ ಕಾಯುವಲ್ಲಿ ಮೋದಿ ಸರ್ಕಾರ ಯಶಸ್ವಿಯಾಗಿದೆ. ಸಮರ್ಥ ಆರ್ಥಿಕ ನಿರ್ವಹಣೆಯಿಂದಾಗಿ ಇಂದು ಜಾಗತಿಕ ಬಿಕ್ಕಟ್ಟಿನ ನಡುವೆಯೂ ಭಾರತದ ಆರ್ಥಿಕತೆ ಅತ್ಯಂತ ಸ್ಥಿರ ಹಾಗೂ ಭದ್ರವಾಗಿದೆ.
ನೈಜವಾಗಿ ಜೀವಿಸುವ ಕಲೆಯನ್ನು, ಕಲಿಸುವ ವಿಧಾನವನ್ನು ತಿಳಿಸಿಕೊಟ್ಟು, ಲಕ್ಷಾಂತರ ಜನರ ಜೀವನದಲ್ಲಿ ಪರಿವರ್ತನೆಯುಂಟು ಮಾಡಿರುವ ಪೂಜ್ಯ ಗುರುಗಳು, ಇಂದು ದೇಶ ವಿದೇಶಗಳಲ್ಲಿ ಭಾರತದ ಆಧ್ಯಾತ್ಮಿಕತೆಯ ರಾಯಭಾರಿಗಳಾಗಿದ್ದಾರೆ. ಬೆಂಗಳೂರಿನ ಆರ್ಟ್ ಆಫ್ ���ಿವಿಂಗ್ ಆಶ್ರಮಕ್ಕೆ ಇಂದು ತೆರಳಿ, ಇತ್ತೀಚೆಗೆ ತಮ್ಮ 70 ನೇ ಜನ್ಮದಿನವನ್ನು ಆಚರಿಸಿಕೊಂಡ ಪೂಜ್ಯ ಗುರುದೇವ್ ಶ್ರೀ ಶ್ರೀ ರವಿಶಂಕರ್ ಅವರನ್ನು ಭೇಟಿ ಮಾಡಿ, ಗೌರವಪೂರ್ವಕ ಶುಭಹಾರೈಕೆಗಳನ್ನು ಸಲ್ಲಿಸಿ, ಆಶೀರ್ವಾದ ಪಡೆಯಲಾಯಿತು. ಆರ್ಟ್ ಆಫ್ ಲಿವಿಂಗ್ ಆಶ್ರಮದ 45ನೇ ವರ್ಷಾಚರಣೆಯ ಶುಭಾಶಯಗಳನ್ನು ತಿಳಿಸಲಾಯಿತು.
ಈ ಸಂದರ್ಭದಲ್ಲಿ ಶಾಸಕರಾದ ಶ್ರೀ ಎಂ.ಕೃಷ್ಣಪ್ಪ ಉಪಸ್ಥಿತರಿದ್ದರು. ಎಂದಿನಂತೆ ಆಶ್ರಮದ ಭೇಟಿ ಪ್ರಶಾಂತತೆ, ಸಮಾಧಾನ ಮೂಡಿಸಿ, ನವಚೈತನ್ಯವನ್ನು ನೀಡಿದೆ.
2014ರಿಂದ ಕರ್ನಾಟಕಕ್ಕೆ ಭೇಟಿ ನೀಡುತ್ತಿದ್ದೇನೆ ಮತ್ತು ಪೂಜ್ಯ ಸಂತರೊಂದಿಗೆ ಅನೇಕ ವೇದಿಕೆ ಹಂಚಿ���ೊಂಡಿದ್ದೇನೆ. ಸನ್ಮಾನ್ಯ ಬಿ.ಎಸ್. ಯಡಿಯೂರಪ್ಪನವರ ಜನಮನ್ನಣೆಯ ವ್ಯಕ್ತಿತ್ವದಿಂದಾಗಿ ಇಂದು ನಮ್ಮೊಂದಿಗೆ ಎಲ್ಲಾ ಸಮುದಾಯದ ಸ್ವಾಮೀಜಿಗಳು ವೇದಿಕೆ ಅಲಂಕರಿಸಿರುವುದು ಹೆಮ್ಮೆಯ ಸಂಗತಿ.
- ಶ್ರೀ @AmitShah, ಕೇಂದ್ರ ಗೃಹ ಹಾಗೂ ಸಹಕಾರ ಸಚಿವರು
#BSYಅಭಿಮಾನೋತ್ಸವ
#BsyAbhimanotsava
ಬಿಎಸ್ವೈ ಅಭಿಮಾನೋತ್ಸವದ ವೇದಿಕೆ ಸಜ್ಜಾಗಿ���ೆ...
ರಾಜ್ಯಾಧ್ಯಕ್ಷರಾದ ಶ್ರೀ ವಿಜಯೇಂದ್ರ ಯಡಿಯೂರಪ್ಪ ಅವರು ಇಂದು ಬಿಎಸ್ವೈ ಅಭಿಮಾನೋತ್ಸವದ ಸಕಲ ತಯಾರಿಗಳನ್ನು ವೀಕ್ಷಿಸಿದರು.
ಮೇ 9 ಕ್ಕೆ ಚಿತ್ರದುರ್ಗದಲ್ಲಿ ಸಂಭ್ರಮಾಚರಿಸೋಣ ಬನ್ನಿ....
#BSYಅಭಿಮಾನೋತ್ಸವ #BsyAbhimanotsava
ಇಂದು ಬೆಳಗ್ಗೆ ನಮ್ಮನ್ನು ಅಗಲಿದ ಆತ್ಮೀಯ ಒಡನಾಡಿ, ಕೇಂದ್ರ ಸಫಾಯಿ ಕರ್ಮಚಾರಿ ಆಯೋಗದ ಮಾಜಿ ಸದಸ್ಯ, ಪಕ್ಷದ ನಿಷ್ಠಾವಂತರಾದ ಶ್ರೀ ಜಗದೀಶ್ ಹಿರೇಮನಿ ಅವರ ಪಾರ್ಥಿವ ಶರೀರದ ದರ್ಶನ ಪಡೆದು ಅಶ್ರುಪೂರ್ಣ ಶ್ರದ್ಧಾಂಜಲಿಗಳೊಂದಿಗೆ ಅ���ತಿಮ ನಮನ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಪರಮಪೂಜ್ಯ ಶ್ರೀ ಮಾದಾರ ಚನ್ನಯ್ಯ ಸ್ವಾಮೀಜಿಗಳು, ಮಾಜಿ ಉಪಮುಖ್ಯಮಂತ್ರಿಗಳು, ಸಂಸದರು ಆದ ಶ್ರೀ ಗೋವಿಂದ ಕಾರಜೋಳ ಸೇರಿದಂತೆ ಹಲವಾರು ಗಣ್ಯರೂ, ಪ್ರಮುಖರೂ ಕೂಡ ಉಪಸ್ಥಿತರಿದ್ದು, ಅಗಲಿದ ಚೇತನಕ್ಕೆ ಸದ್ಗತಿ ಪ್ರಾರ್ಥಿಸಿದರು.