"ನಮ್ಮ ತುಮಕೂರು" ನಗರದ ಚಿಕ್ಕಪೇಟೆಯ ಶ್ರೀ ಶ್ರೀನಿವಾಸ ದೇವಾಲಯದಲ್ಲಿ ದಿ. 06-06-2026 ರಂದು ಆತ್ಮೀಯರೂ, ಅಗ್ರಹಾರದ ನಿವಾಸಿಗಳೂ, "ಶ್ರೀಪಂಚಾಂಗಂ" ಖ್ಯಾತಿಯ ಜ್ಯೋತಿಷಿಗಳೂ ಆದ ಹೆಚ್.ಎಸ್.ರಾಜಾರಾವ್ ರವರ ಭೇಟಿಯಾಯಿತು.ನಾಲ್ಕು ದಶಕಗಳ ಹಿಂದೆಯೇ "ತುಮಕೂರು ಜ್ಯೋತಿ" ಹೆಸರಿನ ದಿನಪತ್ರಿಕೆಯನ್ನು ನಡೆಸಿರುವ ಹೆಗ್ಗಳಿಕೆ ಹಾಗೂ ಸಾಹಸ ಇವರದ್ದು.
ನಾಡಿನ ಪ್ರಸಿದ್ಧ ಪರಿಸರ ತಜ್ಞರೂ, ವಿಶೇಷವಾಗಿ ಜಲಸಂರಕ್ಷಣಾ ಪರಿಣತರಾಗಿ ಹೆಸರು ಗಳಿಸಿರುವ ಶಿರಸಿಯ ಶ್ರೀ ಶಿವಾನಂದ ಕಳವೆಯವರನ್ನು ಭೇಟಿ ಮಾಡುವ, ಅವರ ಮಾತುಗಳನ್ನಾಲಿಸುವ ಸುಸಂದರ್ಭ ಇಂದು (ದಿ.16-05-2026) ನನಗೆ ಮತ್ತು ವಿಶ್ವನಾಥನ್ ಗೆ ಒದಗಿಬಂತು.
ಶ್ರೀ ಶಂಕರ ಜಯಂತಿ ಸಭಾದ ಸಂಸ್ಥಾಪಕರೂ, ಸ್ವಾತಂತ್ರ್ಯ ಹೋರಾಟಗಾರರೂ ಆದ ನಮ್ಮ ತಂದೆ ಶ್ರೀ ವಿ.ಎಸ್.ರಾಮಚಂದ್ರನ್
(97 ) ರವರು ದಿ.24-04-2026 ರಂದು "ಶ್ರೀ ಶಂಕರ ಜಯಂತಿ" ಹಿನ್ನೆಲೆಯಲ್ಲಿ ಜಗದ್ಗುರು ಶ್ರೀ ಶಂಕರಾಚಾರ್ಯರ ಭಾವಚಿತ್ರಕ್ಕೆ ಶ್ರದ್ಧೆ-ಭಕ್ತಿಯಿಂದ ಪೂಜೆ ಸಲ್ಲಿಸಿ, ನಮಿಸಿದರು. ನಾನು ಮತ್ತು ವಿಶ್ವನಾಥನ್ ಜೊತೆಯಲ್ಲಿದ್ದೆವು.
ಮಿತ್ರರೂ, ತುಮಕೂರು ಜಿಲ್ಲಾ ಬ್ರಾಹ್ಮಣ ಸಭಾದ ಅಧ್ಯಕ್ಷರೂ ಆದ ಸ್ವಾಂಪ್ ವೆಂಡರ್ ಶ್ರೀ ಹೆಚ್.ಎನ್.ಚಂದ್ರಶೇಖರ್ ರವರು ತುಮಕೂರಿನ ಸರಸ್ವತಿ ಪುರಂನಲ್ಲಿರುವ ತಮ್ಮ ನಿವಾಸದಲ್ಲಿ ದಿ.03-05-2026 ಬೆಳಗ್ಗೆ ಶ್ರೀ ಸತ್ಯನಾರಾಯಣ ಸ್ವಾಮಿ ಪೂಜಾ ಕಾರ್ಯಕ್ರಮ ಏರ್ಪಡಿಸಿದ್ದರು. ನಾನು ಮತ್ತು ವಿಶ್ವನಾಥನ್ ಪಾಲ್ಗೊಂಡಿದ್ದೆವು.
ತುಮಕೂರು ನಗರದ ಹಿರಿಯ ಕರಾಟೆ ಶಿಕ್ಷಕ ಶ್ರೀ ಕೆ.ಕೃಷ್ಣಮೂರ್ತಿಯವರು ದಿ. 21-12-2025 ಸುಯೋಕುಕನ್ ಕರಾಟೆ ಸಂಸ್ಥೆ ವತಿಯಿಂದ "131 ನೇ ಕರಾಟೆ ಕಲರ್ ಬೆಲ್ಟ್ ಪರೀಕ್ಷೆ" ಸಂದರ್ಭದಲ್ಲಿ ನನ್ನನ್ನು ಮತ್ತು ವಿಶ್ವನಾಥನ್ ರನ್ನು ಸನ್ಮಾನಿಸಿದರು.
ತುಮಕೂರಿನ ಸೋಮೇಶ್ವರಪುರಂನಲ್ಲಿರುವ ಪ್ರತಿಷ್ಠಿತ ಶ್ರೀ ಗಾಯತ್ರಿ ಪತ್ತಿನ ಸಹಕಾರ ಸಂಘವು ಪ್ರಕಟಿಸಿರುವ “2026 ನೇ ಹೊಸ ವರ್ಷದ ದಿನದರ್ಶಿ ”(ಕ್ಯಾಲೆಂಡರ್)ಯನ್ನು ದಿ. 12-12-2025 ನಮ್ಮ ತಂದೆ ಸ್ವಾತಂತ್ರ್ಯ ಹೋರಾಟಗಾರರೂ, ಶ್ರೀ ಶಂಕರ ಜಯಂತಿ ಸಭಾದ ಸಂಸ್ಥಾಪಕರೂ ಆದ ಶ್ರೀ ವಿ.ಎಸ್.ರಾಮಚಂದ್ರನ್ (96) ರವರು ಬಿಡುಗಡೆಗೊಳಿಸಿ, ಶುಭ ಕೋರಿದರು.