ಇವತ್ತು ಸಂಜೆ 7ಗಂಟೆಗೆ ರಾಜ್ಯ ಸಚಿವ ಸಂಪುಟದ ಸಭೆ ನಡೆಯುತ್ತಿದೆ. 70 ಸಾವಿರಕ್ಕೂ ಹೆಚ್ಚು ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಆಗಿರುವ ಅನ್ಯಾಯದ ಕುರಿತು ಮಾನ್ಯ ಮುಖ್ಯಮಂತ್ರಿ @siddaramaiah ಸಿದ್ಧರಾಮಯ್ಯ ಅವರ ನೇತೃತ್ವದ ಸಚಿವ ಸಂಪುಟ ಸರಿಯಾದ ತೀರ್ಮಾನ ತೆಗೆದುಕೊಳ್ಳುತ್ತದೆ ಎಂಬ ವಿಶ್ವಾಸ ನನ್ನದು. ಈಗಾಗಲೇ ಎಲ್ಲ ಸಚಿವರಿಗೂ ಆಗಿರುವ ಪ್ರಮಾದದ ಅರಿವಾಗಿದೆ. ಹೀಗಾಗಿ ಗೆಜೆಟೆಡ್ ಪ್ರೊಬೆಷನರಿ ಹುದ್ದೆಗಳಿಗೆ ಈಗ ಆಗಿರುವ ಪೂರ್ವಭಾವಿ ಪರೀಕ್ಷೆ ರದ್ದುಗೊಳಿಸಿ, ಹೊಸದಾಗಿ ಅಧಿಸೂಚನೆ ಹೊರಡಿಸುವ ತೀರ್ಮಾನ ತೆಗೆದುಕೊಳ್ಳಬಹುದು ಎಂಬುದು ನನ್ನ ನಿರೀಕ್ಷೆ.
ಕೆಪಿಎಸ್ಸಿಯಲ್ಲಿ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ಅನ್ಯಾಯವಾಗಿದೆ ಎಂಬುದು ಗೊತ್ತಾದ ನಂತರ ಕರ್ನಾಟಕ ರಕ್ಷಣಾ ವೇದಿಕೆ ನಿರಂತರ ಹೋರಾಟ ಸಂಘಟಿಸುತ್ತ ಬಂದಿದೆ. ನಮ್ಮೆಲ್ಲರ ಸಾಂಘಿಕ ಹೋರಾಟದ ಫಲವಾಗಿಯೇ ಮುಖ್ಯಮಂತ್ರಿಗಳು ಈ ಹಿಂದೆ ಮರುಪರೀಕ್ಷೆಗೆ ಆದೇಶಿಸಿದ್ದರು. ಆದರೆ ಹೊಣೆಹೇಡಿತನದ ಪರಮಾವಧಿ ಎಂಬಂತೆ ಕೆಪಿಎಸ್ಸಿ ಮೊದಲ ಬಾರಿ ಮಾಡಿದ್ದ ತಪ್ಪುಗಳಿಂತ ಹೆಚ್ಚು ತಪ್ಪುಗಳನ್ನು ಮರುಪರೀಕ್ಷೆಯಲ್ಲಿ ಮಾಡಿತು.
ಮರುಪರೀಕ್ಷೆಯ ಎರಡು ಪ್ರಶ್ನೆಪತ್ರಿಕೆ ಗಳಲ್ಲಿ 80 ತಪ್ಪುಗಳಾಗಿ ಕನ್ನಡ ಮಾಧ್ಯಮ ವಿದ್ಯಾರ್ಥಿಗಳು ಮತ್ತೆ ಸಂಕಷ್ಟಕ್ಕೆ ಸಿಲುಕಿದಾಗ ಮತ್ತೆ ಕರ್ನಾಟಕ ರಕ್ಷಣಾ ವೇದಿಕೆ ಹೋರಾಟಕ್ಕೆ ಇಳಿಯಿತು. ಸ್ವಾತಂತ್ರ್ಯ ಉದ್ಯಾನವನದಲ್ಲಿ ನಡೆದ ಪ್ರತಿಭಟನೆಗೆ ಹತ್ತು ಸಾವಿರಕ್ಕೂ ಹೆಚ್ಚು ಮಂದಿ ನೆರೆದಿದ್ದರು. ಒಂದಲ್ಲ, ಎರಡಲ್ಲ ಮೂರುಬಾರಿ ಮುಖ್ಯಮಂತ್ರಿಗಳನ್ನು ನಾನೇ ಖುದ್ದಾಗಿ ಭೇಟಿ ಮಾಡಿ ಮಾತನಾಡಿದೆ. ಸಚಿವರು, ಶಾಸಕರ ಜೊತೆ ಮಾತಾಡಿದೆ, ವಿರೋಧ ಪಕ್ಷದ ನಾಯಕರ ಜೊತೆಯೂ ಮಾತಾಡಿದೆ. ನಮ್ಮ ಕರವೇ ಸೇನಾನಿಗಳು ಕೆಪಿಎಸ್ಸಿ ಮುತ್ತಿಗೆಯನ್ನೂ ನಡೆಸಿ ಬಂಧನಕ್ಕೊಳಗಾದರು, ಕೇಸೂ ಹಾಕಿಸಿಕೊಂಡರು. ಅಂದು ಸುಮಾರು ಇನ್ನೂರಕ್ಕೂ ಹೆಚ್ಚು ಪೊಲೀಸರನ್ನು ನನ್ನ ಮನೆಯ ಸುತ್ತ ಕಾವಲಿಗಿಟ್ಟು ನನ್ನ ಬಂಧನಕ್ಕೆ ತಯಾರಿ ನಡೆಸಲಾಗಿತ್ತು. (ನಾನು ಆ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವುದು ನಿಗದಿಯಾಗಿರಲಿಲ್ಲವಾದ್ದರಿಂದ ನಾನು ಮನೆಯಿಂದ ಹೊರಗೆ ಬಂದಿರಲಿಲ್ಲ)
ಕೆಪಿಎಸ್ ಸಿ ಕುರಿತಾದ ಈ ಹೋರಾಟದಲ್ಲಿ ನಾವು ಪ್ರಜಾಪ್ರಭುತ್ವ ಮಾರ್ಗದ ಎಲ್ಲ ಹೋರಾಟದ ವಿಧಾನಗಳನ್ನು ಬಳಸಿದ್ದೇವೆ. ಕೊನೆಗೆ ಮುಖ್ಯಮಂತ್ರಿಗಳ ಮನ ಕರಗಲಿ ಎಂದು ರಕ್ತದಲ್ಲೂ ಪತ್ರ ಬರೆಯುವ ಅಭಿಯಾನ ನಡೆಸಿದ್ದೇವೆ. ನಾನೂ ಕೂಡ ನನ್ನ ರಕ್ತದಲ್ಲೇ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದೇನೆ. ಪೋಸ್ಟರ್ ಕ್ಯಾಂಪೇನ್, ಟ್ವಿಟರ್ (ಎಕ್ಸ್) ಕ್ಯಾಂಪೇನ್ ಎಲ್ಲ ಮಾಡಿಮುಗಿಸಿದ್ದೇವೆ.
ಇವತ್ತು ಸಂಪುಟ ಸಭೆಯಲ್ಲಿ ಸರಿಯಾದ ತೀರ್ಮಾನ ಆಗದೇ ಹೋದಲ್ಲಿ ಪರಿಸ್ಥಿತಿ ಕೈ ಮೀರಬಹುದು. ಅದಕ್ಕೆ ನಾನು ಹೊಣೆಯಲ್ಲ. 7ನೇ ತಾರೀಕಿನಿಂದ ಅನ್ಯಾಯಕ್ಕೆ ಒಳಗಾದ ಅಭ್ಯರ್ಥಿಗಳು, ಅವರ ಪೋಷಕರು ಬೆಂಗಳೂರಿಗೆ ಬರಲಿದ್ದಾರೆ. ನಮ್ಮ ಹೋರಾಟದ ವರಸೆ ಬದಲಾಗುತ್ತದೆ. ದಯವಿಟ್ಟು ಯಾರೂ ನಮ್ಮನ್ನು ದೂರಬೇಡಿ.
ಸರ್ಕಾರ ಪರಿಸ್ಥಿತಿ ಕೈ ಮೀರಿ ಹೋಗುವುದಕ್ಕೆ ಅವಕಾಶ ನೀಡದೇ ಇಂದೇ ಸರಿಯಾದ ನಿರ್ಧಾರ ಕೈಗೊಳ್ಳಲಿ ಎಂದು ಆಶಿಸುತ್ತೇನೆ.
ಕೆಎಎಸ್ ಪೂರ್ವಭಾವಿ ಪರೀಕ್ಷೆಯಲ್ಲಿ ಅದ ಕನ್ನಡದ ಪ್ರಶ್ನೆಗಳ ಲೋಪದಿಂದ ಕನ್ನಡ ಮಾಧ್ಯಮದ ಅಭ್ಯರ್ಥಿಗಳಿಗೆ ಆಗಿರುವ ಅನ್ಯಾಯದ ವಿರುದ್ಧ ಪರೀಕ್ಷೆ ನಡೆದ ದಿನದಿಂದ ಇಲ್ಲಿಯವರೆಗೂ ಮರು ಅಧಿಸೂಚನೆಗಾಗಿ ಸತತ ಪ್ರಯತ್ನ ನಡೆಯುತಿದ್ದು ಈಗಾಗಲೇ ಎರಡು ಬಾರಿ ಬೃಹತ್ ಪ್ರತಿಭಟನೆ ಕೂಡ ನಡೆದಿದ್ದು ಇಲ್ಲಿಯವರೆಗೆ ಸರ್ಕಾರದಿಂದ ಯಾವುದೇ ಸ್ಪಂದನೆ ಸಿಕ್ಕಿರುವುದಿಲ್ಲ ಹೀಗಾಗಿ ಮುಂದಿನ ಹೋರಾಟದ ರೂಪುರೆಷೆ ಕುರಿತು ನಿನ್ನೆ ಸಾಯಂಕಾಲ ಕನ್ನಡಿಗರ ಹೆಮ್ಮೆಯ ಸಂಘಟನೆ ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷರಾದ ಮಾನ್ಯ ಶ್ರೀ ನಾರಾಯಣ ಗೌಡ್ರು ಅಣ್ಣನವರ ನೇತೃತ್ವದಲ್ಲಿ ಸಭೆ ನಡೆಯಿತು,
ಕರ್ನಾಟಕದಲ್ಲಿ ಒಬ್ಬ ಕನ್ನಡಿಗನಿಗೆ ಅನ್ಯಾಯವಾದರೂ @karave_KRV ಕರವೇ ಸಹಿಸುವುದಿಲ್ಲ ಉದಾಹರಣೆಗೆ:- ಬೆಳಗಾವಿಯಲ್ಲಿ ಮರಾಠಿ ಪುಂಡರಿಂದ ಹಲ್ಲೆಗೆ ಒಳಗಾದ ಒಬ್ಬ ಕನ್ನಡದ ಬಸ್ ಕಂಡಕ್ಟರ್ ಗೆ ಸ್ವತಃ ನಾರಾಯಣ ಗೌಡರು ಹಾಗೂ ಅವರ ಕ ರ ವೇ ತಂಡ ಬೆಳಗಾವಿಗೆ ತೆರಳಿ ನ್ಯಾಯ ಒದಗಿಸಿ ಬಂದ ಕೀರ್ತಿ ಕರವೇಗೆ ಸಲ್ಲುತ್ತದೆ, ಇನ್ನೂ ನಾಡಿನ ಲಕ್ಷಾಂತರ ವಿದ್ಯಾರ್ಥಿಗಳಿಗೆ ಅನ್ಯಾಯವಾದಾಗ ಸುಮ್ಮನಿರುವ ಪ್ರಶ್ನೆಯೇ ಇಲ್ಲ.
ಕರ್ನಾಟಕ ರಕ್ಷಣಾ ವೇದಿಕೆ ನಮ್ಮೊಂದಿಗಿದೆ ಯಾವ ವಿದ್ಯಾರ್ಥಿಗಳು ಸೋಲನ್ನು ಒಪ್ಪಿಕೊಳ್ಳಬೇಡಿ ಸಮರಸಿಂಹ ಮಾನ್ಯ ಶ್ರೀ ನಾರಾಯಣಗೌಡರ ನೇತೃತ್ವದಲ್ಲಿ ಜಯ ಸಿಕ್ಕೇ ಸಿಗುತ್ತೆ.ಮುಂದಿನ ಹೋರಾಟದ ವಿವರ ಶೀಘ್ರವಾಗಿ ತಿಳಿಸಲಾಗುವುದು.
ಜೈ ಕನ್ನಡ. ಜೈ ಕರವೇ 💛❤️
@AKSSAofficial
KAS 2024 ರ PRELIMS ಫಲಿತಾಂಶ
ಬಿಡುಗಡೆ ಮಾಡುವುದರೊಂದಿಗೆ,
KAS ಮರು ಪರೀಕ್ಷೆ ದೋಷಗಳಿಗೆ ಕೃಪಾಂಕ ನೀಡದೆ, Ratio ಕೂಡ ಹೆಚ್ಚಿಸಲು ಹೋಗದೆ,
ನಾವು ಕನ್ನಡವನ್ನು ಕೊಲ್ಲುತ್ತೇವೆ,
ಕತ್ತು ಹಿಚುಕಿ ಅಮುಕುತ್ತೇವೆ,
ನಮ್ಮನ್ನು ಹೇಳುವವರು ಕೇಳುವವರು
ಯಾರು ಇಲ್ಲ,
ಇಲ್ಲಿ ನಮ್ಮದೇ ಸಾಮ್ರಾಜ್ಯ,
ಶಕ್ತಿ ಇದ್ದರೆ ಕಾಪಾಡಿಕೊಳ್ಳಿಯೆಂದು
ಈ ಮೂಲಕ ಪರೋಕ್ಷವಾಗಿ KPSC ಸವಾಲೆಸೆದಿದೆ,
ಇದು
ಆಕಾಂಕ್ಷಿಗಳು V/S KPSC ಅಲ್ಲ,
ಇದು,
ಕನ್ನಡ V/S KPSC!
ಹೊರಾಡಲು ಸಿದ್ಧರಾಗಿ,
ಮೊಳಗಲಿ ಸಮರ ಕಹಳೆ📯!
ಇದೇ 18ನೇ ತಾರೀಕಿನಂದು ಒಂದ್ 10,000 ಸಾವಿರ ಜನ Freedom Park ಗೆ ಬಂದು ಬಿಡ್ರಪ್ಪಾ ದಶಕಗಳ ಕಷ್ಟ ನೀಗುತ್ತದೆ! 🔥
ಕಾಲ ಕೂಡಿ ಬಂದಿದೆ,
ಕಬ್ಬಿಣ ಕಾದಿದೆ,
ಹಾಕಿ ಸರಿಯಾಗಿ ಬಡಿಯೋಣ!
ಜೈ ಕರ್ನಾಟಕ! 🔥
@vinaygb@RekhaBasavaraju@ChekrishnaCk@AKSSAofficial@kanthakumarr@prajavani@kpscadda@Kavirajlyricist@karnatakaparty1@SuhasDuga@pbilimale #KAS2024 #KPSCMOSA #KASREEXAM
ಆಗಸ್ಟ್ 27ರಂದು ನಿಗದಿಯಾಗಿರುವ ಕೆಎಎಸ್ ಪೂರ್ವಭಾವಿ ಪರೀಕ್ಷೆಯನ್ನು ಮುಂದೂಡುವ ಕುರಿತು ವಿದ್ಯಾರ್ಥಿಗಳು ಪ್ರತಿಭಟನೆಯನ್ನು ನಡೆಸಿದ್ದವು ಆದರೆ ನಮ್ಮ ಹೋರಾಟವನ್ನು ಮಾನ್ಯ ರಾಜ್ಯ ಸರ್ಕಾರ ಹತ್ತಿಕ್ಕಿತು
ಪ್ರಜಾಪ್ರಭುತ್ವದ ಕೋಗ್ಗೊಲೆ ಧಿಕ್ಕಾರವಿರಲಿ ಆಡಳಿತ ಪಕ್ಷಕ್ಕೆ
ಕೆಪಿಎಸ್ಸಿ ಇಲಾಖೆಗೆ ಖಾಯಂ ಕಾರ್ಯದರ್ಶಿಯವರನ್ನು ನೇಮಕ ಮಾಡಿ @kanthakumarr ಅವರಿಂದ ಅಗ್ರಹ
ಪರೀಕ್ಷೆಗಳು ನಡೆದು ವರ್ಷಗಳು ಕಳೆದರೂ ಫಲಿತಾಂಶ ಬಿಡುಗಡೆಯಾಗುತ್ತಿಲ್ಲ
ಹೆಚ್ಚುವರಿ ಆಯ್ಕೆ ಪಟ್ಟಿ ಅಂತೂ ಕನಸಿನ ಮಾತು
@INCKarnataka ಖಾಲಿ ಹುದ್ದೆಗಳ ಭರ್ತಿಗೆ ಭರವಸೆ ನೀಡುತ್ತೀರಿ ನೇಮಕಾತಿ ಇಲಾಖೆಗಳ ಪಾರದರ್ಶಕತೆಗೆ ಶ್ರಮಿಸುವುದಿಲ್ಲ !
@KEA_karnataka@drmcsudhakar@krishnabgowda ಮಾನ್ಯರೇ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ GM ಇತರೆ ಪ್ರವರ್ಗಗಳು750/- SC- ST ಅಭ್ಯರ್ಥಿಗಳಿಗೆ 500/- ಪರೀಕ್ಷಾ ಶುಲ್ಕ ವಿಧಿಸಿದ್ದೀರಿ
ನಿಗಮ ಮಂಡಳಿಗಳ ಅಧ್ಯಕ್ಷರಿಗೆ ಕಾರು ಡೀಸೆಲ್ ಇನ್ನಿತರ ಖರ್ಚು ವೆಚ್ಚಗಳಿಗೆ ಬಡ ವಿದ್ಯಾರ್ಥಿಗಳ ಹಣವೇಕೆ ?
ಕೂಡಲೇ ಶುಲ್ಕ ಕಡಿಮೆ ಮಾಡಿ
KPTCL Junior Assistant ಅಭ್ಯರ್ಥಿಗಳ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನ ಹಾಗು ಅಂತಿಮ ಆಯ್ಕೆ ಪಟ್ಟಿಯನ್ನ ಬೇಗನೆ ಬಿಡುಗಡೆಗೊಳಿಸಲು ಅಭ್ಯರ್ಥಿಗಳು ವಿನಂತಿಸುತಿದ್ದೆವೆ ಕಾರಣ ಇನ್ನು ಕೇಲವೆ ವಾರಗಳಲ್ಲಿ 2024 ರ ಚುನಾವಣಾ ನೀತಿ ಸಂಹಿತೆ ಜಾರಿಯಾಗುವುದು. @iaspankajpandey@kptcl_official@thekjgeorge@KJGeorgeOffice