ಅನೇಕ ಜನ್ಮ ಸಂಪ್ರಾಪ್ತ ಕರ್ಮಬಂಧ ವಿದಾಹಿನೇ|
ಜ್ಞಾನಾನಲ ಪ್ರಭಾವೇನ ತಸ್ಮೈ ಶ್ರೀಗುರವೇ ನಮಃ|| 🙏🏻🙏🏻🙏🏻
Jagadguru Shankaracharya Sri Sri Raghaveshwara Bharati Mahaswamiji, SriSamsthana Gokarna – Sri RamachandrapuraMatha
@SriSamsthana@Shankaracarya36
ಮಾನ್ಯ ಗೃಹ ಸಚಿವರಾದ ಶ್ರೀ ಅರಗ ಜ್ಞಾನೇಂದ್ರ ಇವರು ಗೋಕರ್ಣದ ಅಶೋಕೆಯ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಪರಿಸರದಲ್ಲಿ ನಡೆಯುತ್ತಿರುವ #ಗುರುಕುಲ_ಚಾತುರ್ಮಾಸ್ಯ ದ ಸುಸಂದರ್ಭದಲ್ಲಿ ವಿಶೇಷವಾಗಿ ಶ್ರೀಪೂಜೆಯಲ್ಲಿ ಉಪಸ್ಥಿತರಿದ್ದು, ಶ್ರೀಸಂಸ್ಥಾನದವರನ್ನು ಭೇಟಿಯಾಗಿ, ಆಶೀರ್ವಾದವನ್ನು ಪಡೆದರು.
ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ. ಡಿ ವೀರೇಂದ್ರ ಹೆಗ್ಗಡೆಯವರು ಇಂದು ಶ್ರೀಸಂಸ್ಥಾನದವರನ್ನು ಭೇಟಿಯಾಗಿ, ಶ್ರೀ ಮಲ್ಲಿಕಾರ್ಜುನ ದೇವಸ್ಥಾನ ಹಾಗೂ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಪರಿಸರವನ್ನು ವೀಕ್ಷಿಸಿ, ಆಶೀರ್ವಾದವನ್ನು ಪಡೆದರು.
ಮಾಸದ ಮಾತೆ ಯೋಜನೆಯಡಿ #ಲಕ್ಷಭಾಗಿನಿ:
ಬೆಂಗಳೂರು ಪ್ರಾಂತ್ಯದ ದಕ್ಷಿಣ ಬೆಂಗಳೂರು ನಗರ, ದೀಪಾಂಜಲಿ ಸಮಿತಿಯ, ಶ್ರೀಯುತ ಜಿ. ಎಸ್. ಹೆಗಡೆ ಇವರ ಧರ್ಮಪತ್ನಿ ಶ್ರೀಮತಿ ವಾಸಂತಿ ಹೆಗಡೆ ಇವರು ಗೋಮಾತೆಯ ರಕ್ಷಣೆಗೆ ಒಂದು ಲಕ್ಷಕ್ಕೂ ಅಧಿಕ ಮೊತ್ತವನ್ನು ಸಂಗ್ರಹಿಸಿ ಲಕ್ಷಭಾಗಿನಿಯಾಗಿದ್ದಾರೆ.
ಇವರಿಗೆ ಗೋಮಾತೆಯ ಪೂರ್ಣಾನುಗ್ರಹವಿರಲಿ.
#ಮಾತೃತ್ವಮ್