ಭಾರತದ ಜಾಗತಿಕ ಪಯಣದಲ್ಲಿ ಮತ್ತೊಂದು ಐತಿಹಾಸಿಕ ಅಧ್ಯಾಯ.
ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರಿಗೆ ನ್ಯೂಜಿಲೆಂಡ್ನ ಆಕ್ಲೆಂಡ್ನಲ್ಲಿರುವ ಸರ್ಕಾರಿ ಭವನದಲ್ಲಿ ಔಪಚಾರಿಕ ಗಾರ್ಡ್ ಆಫ್ ಆನರ್ ನೀಡಿ ಸ್ವಾಗತಿಸಲಾಯಿತು. 🇮🇳🇳🇿
#ModiInNewZealand
ಅಹಿಂದ ಚಾಂಪಿಯನ್ ಎಂದು ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುವ @siddaramaiah ಅವರೇ..
ದಲಿತರು, ಶೂದ್ರರು ಹಾಗೂ ಶೋಷಿತರ ಧ್ವನಿಯಾಗಿದ್ದ ಬಾಬಾಸಾಹೇಬ್ ಅಂಬೇಡ್ಕರ್ ಅವರನ್ನು ಚುನಾವಣೆಯಲ್ಲಿ ಸೋಲಿಸಿ, ಅವರು ಸಂಸತ್ತಿಗೆ ಬರದಂತೆ ತಡೆದ ಕರಾಳ ಇತಿಹಾಸ ಇರುವುದು ನಿಮ್ಮದೇ ಕಾಂಗ್ರೆಸ್ ಪಕ್ಷಕ್ಕೆ ಅಲ್ಲವೇ?
ಅಂಬೇಡ್ಕರ್ ಅವರಿಗೆ ಭಾರತ ರತ್ನ ನೀಡಲು ದಶಕಗಳ ಕಾಲ ಸತಾಯಿಸಿದ ನಿಮ್ಮ ಪಕ್ಷದ ಇತಿಹಾಸ ನಿಮಗೆ ನೆನಪಿಲ್ಲವೇ? ಮರೆತುಹೋಗಿದ್ದರೆ, ನಿಮ್ಮದೇ ಪಕ್ಷದ ನಾಯಕ ರಮೇಶ್ ಕುಮಾರ್ ಅವರು ಅಂದು ಸದನದಲ್ಲೇ ನಿಂತು 'ಅಂಬೇಡ್ಕರ್ ಅವರನ್ನು ಚುನಾವಣೆಯಲ್ಲಿ ಸೋಲಿಸಿ ಕಾಂಗ್ರೆಸ್ ಮಹಾ ದ್ರೋಹ ಮಾಡಿತು' ಎಂದು ಬಿಚ್ಚಿಟ್ಟ ಕಟು ಸತ್ಯದ ಮಾತುಗಳನ್ನು ಒಮ್ಮೆ ಆತ್ಮಾವಲೋಕನ ಮಾಡಿಕೊಳ್ಳಿ. ಅಂದು ಬಾಬಾಸಾಹೇಬರ ಹಕ್ಕುಗಳನ್ನು ತುಳಿದು ಅನ್ಯಾಯ ಮಾಡಿದವರ ಮಡಿಲಲ್ಲೇ ಆಶ್ರಯ ಪಡೆದ ನೀವೆಲ್ಲಾ ಇಂದು ಸಾಮಾಜಿಕ ನ್ಯಾಯದ ಸೋಗು ಹಾಕುತ್ತಿರುವುದು ವಿಪರ್ಯಾಸ!
ದಶಕಗಳ ಕಾಲ ದೇಶವನ್ನಾಳಿದ ಕಾಂಗ್ರೆಸ್ ಪಕ್ಷ ಹಿಂದುಳಿದ ವರ್ಗಗಳ ಹೆಸರಲ್ಲಿ ರಾಜಕೀಯ ಮಾಡಿಕೊಂಡು ಅಧಿಕಾರದ ಚುಕ್ಕಾಣಿ ಹಿಡಿಯಿತೇ ಹೊರತು, ಶೋಷಿತ ಸಮುದಾಯಗಳ ಏಳಿಗೆಗೆ ಪ್ರಾಮಾಣಿಕ ಪ್ರಯತ್ನ ಮಾಡಲಿಲ್ಲ. ವೋಟ್ ಬ್ಯಾಂಕ್ ರಾಜಕೀಯಕ್ಕಾಗಿ ಹಿಂದುಳಿದವರನ್ನು ಕೇವಲ ಮತಪೆಟ್ಟಿಗೆಯಾಗಿ ಬಳಸಿಕೊಳ್ಳುತ್ತಿದೆ ಅಷ್ಟೆ. ಕಾಂಗ್ರೆಸ್ಸಿನ ಇಂತಹ ಸರ್ವಾಧಿಕಾರಿ ಸಂಸ್ಕೃತಿಗೆ ನೀವು ಗುಲಾಮರಾಗಿದ್ದೀರಿಯೇ ಹೊರತು, ರಾಷ್ಟ್ರೀಯತೆಯ ಉಳಿವಿಗೆ ಶ್ರಮಿಸುತ್ತಿರುವ ಬಿಜೆಪಿ ಪಕ್ಷವಲ್ಲ.
ಅಧಿಕಾರದಿಂದ ಕೆಳಗಿಳಿಯುತ್ತಿದ್ದಂತೆಯೇ ನಿಮ್ಮನ್ನು ಕಾಂಗ್ರೆಸ್ ಪಕ್ಷ ಸಂಪೂರ್ಣವಾಗಿ ಮೂಲೆಗುಂಪು ಮಾಡಿದೆ. ಕನಿಷ್ಠ ಪಕ್ಷ ಪಕ್ಷದ ವೇದಿಕೆಗಳಲ್ಲಾಗಲಿ, ಪೋಸ್ಟರ್ಗಳಲ್ಲಾಗಲಿ ಭಾವಚಿತ್ರವನ್ನೂ ಬಳಸದಷ್ಟು ನಿಮ್ಮನ್ನು ಕಡೆಗಣಿಸಲಾಗುತ್ತಿದೆ. ಮತ್ತೊಂದೆಡೆ, ಹಿರಿಯ ದಲಿತ ನಾಯಕರಾದ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಅವರ ಭಾವಚಿತ್ರವನ್ನು ಸರ್ಕಾರದ ಅಧಿಕೃತ ಜಾಹಿರಾತುಗಳಲ್ಲೇ ವ್ಯವಸ್ಥಿತವಾಗಿ ಕೈಬಿಡಲಾಗುತ್ತಿದೆ. ಹಿಂದುಳಿದ ಮತ್ತು ದಲಿತ ಸಮುದಾಯದ ನಾಯಕರನ್ನು ಕೇವಲ ಅಧಿಕಾರ ಹಿಡಿಯಲು ದಾಳವಾಗಿ ಬಳಸಿ, ನಂತರ ಮೂಲೆಗುಂಪು ಮಾಡುವುದು ಕಾಂಗ್ರೆಸ್ನ ರಕ್ತದಲ್ಲೇ ಬಂದಿದೆ.
ಪರರ ಜರಿಯುವ ಮುನ್ನ.. ನಿಮ್ಮ ನಿಮ್ಮ ತನುವ ಸಂತೈಸಿಕೊಳ್ಳಿ,
ನಿಮ್ಮ ನಿಮ್ಮ ಮನವ ಸಂತೈಸಿಕೊಳ್ಳಿ, ಸಿದ್ದರಾಮಯ್ಯನವರೇ..!
#CongressLies
ಮೋದಿ ಸರ್ಕಾರ ನೀಡುತ್ತಿರುವ ಅಕ್ಕಿಯನ್ನೂ ಜನರಿಗೆ ಕೊಡದೆ ರಾಜ್ಯ ಕಾಂಗ್ರೆಸ್ ಸರ್ಕಾರ ವಂಚಿಸುತ್ತಿರುವುದಲ್ಲದೆ, ಇತ್ತ ಗೃಹಲಕ್ಷ್ಮಿ ಹಣವನ್ನೂ ನೀಡುತ್ತಿಲ್ಲ, ವೃದ್ಧರ-ವಿಧವೆಯರ ಪಿಂಚಣಿಯೂ ಬರುತ್ತಿಲ್ಲ. ಬಡ ಜನರ ಬದುಕಿನೊಂದಿಗೆ ಚೆಲ್ಲಾಟವಾಡುತ್ತಿರುವ ಈ ಜನವಿರೋಧಿ @INCKarnataka ಸರ್ಕಾರದ ವಿರುದ್ಧ ರಾಜ್ಯಾದ್ಯಂತ ಜನಾಕ್ರೋಶ ಸ್ಫೋಟಗೊಂಡಿದೆ.
ಕಾಂಗ್ರೆಸ್ಸಿಗರ ಸುಳ್ಳು ಭರವಸೆಗಳಿಂದ ಬೇಸತ್ತಿರುವ ಜನತೆ, ಮುಂಬರುವ ದಿನಗಳಲ್ಲಿ ಈ ಸರ್ಕಾರವನ್ನು ಅಧಿಕಾರದಿಂದ ಕಿತ್ತೊಗೆಯುವುದು ಗ್ಯಾರಂಟಿ!
#CongressFailsKarnataka
#CongressLootsKarnataka
ಕರ್ನಾಟಕದಲ್ಲಿ ಹವಾಮಾನ ವೈಪರೀತ್ಯ ಹಾಗೂ ಮಾರುಕಟ್ಟೆಯಲ್ಲಿ ಬೆಲೆ ಕುಸಿತದಿಂದ ತೋತಾಪುರಿ ಮಾವು ಬೆಳೆಗಾರರು ಎದುರಿಸುತ್ತಿರುವ ಸಮಸ್ಯೆಗಳಿಗೆ ಸ್ಪಂದಿಸುವಂತೆ ಕೇಂದ್ರ ಕೃಷಿ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಪತ್ರ ಬರೆದು ಬೆಲೆ ಕೊರತೆ ಪಾವತಿ ಯೋಜನೆ (PDPS) ಅಡಿಯಲ್ಲಿ ಬೆಂಬಲ ನೀಡುವಂತೆ ನಾನು ಮನವಿ ಮಾಡಿದ್ದೆ.
ನನ್ನ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಸಚಿವರು ಮಾರುಕಟ್ಟೆ ಹಸ್ತಕ್ಷೇಪ ಯೋಜನೆ (Market Intervention Scheme - MIS) ಅಡಿಯಲ್ಲಿ 1,30,000 ಮೆಟ್ರಿಕ್ ಟನ್ ತೋತಾಪುರಿ ಮಾವಿಗೆ ಪ್ರತಿ ಕ್ವಿಂಟಾಲ್ಗೆ ₹1,750 ರೈತರಿಗೆ ಸಹಾಯಧನವನ್ನು ನೀಡಲು ಅನುಮೋದನೆ ನೀಡಿದ್ದಾರೆ.
ರಾಜ್ಯದ ಮಾವು ಬೆಳೆಗಾರರ ಹಿತಾಸಕ್ತಿಯನ್ನು ಕಾಪಾಡಲು ಅಗತ್ಯ ಕ್ರಮ ಕೈಗೊಂಡಿರುವ ಕೇಂದ್ರ ಕೃಷಿ ಸಚಿವರಿಗೆ ಹೃತ್ಪೂರ್ವಕ ಧನ್ಯವಾದಗಳು. ಈ ನಿರ್ಧಾರವು ಸಾವಿರಾರು ರೈತ ಕುಟುಂಬಗಳಿಗೆ ನೆರವಾಗಲಿದ್ದು, ಅವರ ಆರ್ಥಿಕ ಸ್ಥಿರತೆ ಮತ್ತು ಆತ್ಮವಿಶ್ವಾಸವನ್ನು ಹೆಚ್ಚಿಸಲಿದೆ.
ಸದಾ ರೈತರ ಕಲ್ಯಾಣಕ್ಕೆ ಬದ್ಧವಾಗಿರುವ ಪ್ರಧಾನಮಂತ್ರಿ @narendramodi ನರೇಂದ್ರ ಮೋದಿ ಅವರಿಗೆ ಹಾಗೂ ಕೃಷಿ ಸಚಿವ ಶ್ರೀ ಶಿವರಾಜಸಿಂಗ್ ಚವ್ಹಾಣ @ChouhanShivraj ಅವರಿಗೆ ಕರ್ನಾಟಕದ ಸಮಸ್ತ ರೈತರ ಪರವಾಗಿ ಧನ್ಯವಾದಗಳು.
#FarmersFirst
#MangoGrowers
ರಕ್ಷಣೆ
ಪೂರೈಕೆ
ರೈಲ್ವೆ
ಹೀಗೆ... ಭಾರತ ಪ್ರತಿ ವಲಯದಲ್ಲೂ ತಂತ್ರಜ್ಞಾನವನ್ನು ಅಳವಡಿಸುತ್ತಿದೆ. ಒಂದು ಕಾಲದಲ್ಲಿ ತಂತ್ರಜ್ಞಾನಗಳಿಗಾಗಿ ಬೇರೆ ದೇಶಗಳನ್ನು ಅವಲಂಬಿಸಿದ್ದ ಭಾರತ ಇಂದು ಅಪ್ಪಟ ಸ್ವದೇಶಿ ತಂತ್ರಜ್ಞಾನಗಳ ಮೂಲಕ ಜಗತ್ತಿನ ಗಮನ ಸೆಳೆಯುತ್ತಿದೆ.
#AtmanirbharBharat
Congress’s hypocrisy stands completely exposed!
Rahul Gandhi sheds crocodile tears for NEET students, but his party in Karnataka orchestrates massive traffic chaos in Bengaluru by holding a mega-rally on the exact day of the crucial NEET exam.
The heartbreaking sight of students crying and desperately climbing gates to enter the exam hall exposes the true face of Congress's misgovernance in Karnataka.
@INCKarnataka wanted to show a paid show of strength, but all they showed was how little they care about our children's future!
राष्ट्रपति श्रीमती द्रौपदी मुर्मू और प्रधानमंत्री श्री नरेन्द्र मोदी ने ओडिशा के मयूरभंज जिले के पहाड़पुर गांव में पवित्र उपवन संथाली जाहेरा और हो जाहेरा में पूजा अर्चना एवं प्रार्थना की।
ये सिर्फ एक यात्रा नहीं, दुनिया के केंद्र में खड़े नए भारत की तस्वीर है। 🇮🇳
G7 शिखर सम्मेलन में पीएम मोदी की मौजूदगी बताती है कि आज भारत सिर्फ वैश्विक चर्चाओं का हिस्सा नहीं, बल्कि उन्हें दिशा देने वाली प्रमुख शक्ति बन चुका है।
देखिए, इस ऐतिहासिक यात्रा की खास झलकियां... 🌍🎥
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹಳಿ ತಪ್ಪಿದೆ ಎಂಬುದಕ್ಕೆ ಹಿಂದೂಗಳ ಅಂಗಡಿಗಳ ಮೇಲೆ "ಕಾಂಗ್ರೆಸ್ ಬ್ರದರ್ಸ್" ನಡೆಸಿದ ದಾಂಧಲೆಯೇ ಸಾಕ್ಷಿ! ತುಘಲಕ್ @INCKarnataka ಸರ್ಕಾರದ ಅತಿಯಾದ ಓಲೈಕೆಯಿಂದಾಗಿಯೇ ಬ್ರದರ್ಸ್ ಬಾಲಬಿಚ್ಚಿ, ದುಷ್ಟತನ ಮೆರೆಯುತ್ತಿದ್ದಾರೆ.
ಸೌಹಾರ್ದತೆಯ ಭಾಷಣ ಬಿಗಿಯುವ @PriyankKharge ಅವರೇ, ಸಮಾಜದ ಶಾಂತಿ ಕದಡಲು ಯತ್ನಿಸುತ್ತಿರುವ ಆ ದುಷ್ಟರ ಹೆಡೆಮುರಿ ಕಟ್ಟಿ! "ಕಾಂಗ್ರೆಸ್ ಬ್ರದರ್ಸ್" ಎಂಬ ಮಮಕಾರ ಪಕ್ಕಕ್ಕಿಟ್ಟು, ಕಾನೂನು ಸುವ್ಯವಸ್ಥೆ ಕಾಪಾಡಿ. ತಪ್ಪಿತಸ್ಥರ ವಿರುದ್ಧ ತಕ್ಷಣವೇ ಕಠಿಣ ಕಾನೂನು ಕ್ರಮ ಕೈಗೊಳ್ಳಿ.
#CongressFailsKarnataka
ಜನಸೇವೆಯ ಸಾರ್ಥಕ 12 ವರ್ಷಗಳು !
ಭಾರತದ ಅತ್ಯಂತ ದೀರ್ಘಾವಧಿ ಸೇವೆ ಸಲ್ಲಿಸಿದ ಚುನಾಯಿತ ಪ್ರಧಾನಿಯಾಗಿ 4,399 ದಿನಗಳ ಐತಿಹಾಸಿಕ ಮೈಲುಗಲ್ಲು ಸಾಧಿಸಿದ ಹಿನ್ನೆಲೆಯಲ್ಲಿ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರಿಗೆ ಎನ್ಡಿಎ ಶಾಸಕಾಂಗ ಪಕ್ಷದ ಸಭೆಯಲ್ಲಿ ಎನ್ಡಿಎ ಮೈತ್ರಿಕೂಟದ ನಾಯಕರು ಅಭಿನಂದನೆ ಸಲ್ಲಿಸಿದರು.
#12YearsOfSeva #LongestServingElectedPMModi
* PM Modi is the first Prime Minister born after Independence. 🇮🇳
* The Prime Minister with the longest Chief Ministerial experience.
* Today, PM Modi stands as the longest continuously serving elected Prime Minister of Bharat.
But his journey is about more than milestones and records.
His legacy is not defined by the years in office, but by the transformation of a nation and the aspirations of 140 crore Indians. 🇮🇳
#LongestServingElectedPMModi
* 4,399 days of leadership.
* 4,399 days of transformation.
* 4,399 days of building a stronger, more connected and aspirational India. 🇮🇳
The difference 4,399 days can make is the difference between aspiration and achievement.
#LongestServingElectedPMModi
ಪಿಚ್ಚರ್ ಅಭಿ ಬಾಕಿ ಹೈ..!
ಭ್ರಷ್ಟ @INCKarnataka ಸರ್ಕಾರದ ಮೊದಲ ವಿಕೆಟ್ ಸಂಪುಟ ರಚನೆಯಾಗಿ ಎರಡನೇ ದಿನಕ್ಕೆ ಪತನವಾಗಿದೆ.!
ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ @RLR_BTM ಅವರು ಇಂಟರ್ವೆಲ್ ಸಿಎಂ @DKShivakumar ಅವರ ಅವಧಿಯಲ್ಲೂ ಕಿತ್ತಾಟ ಮುಂದುವರಿಯಲಿದೆ ಎಂಬ ದೊಡ್ಡ ಸಂದೇಶ ರವಾನಿಸಿದಂತಿದೆ.
ಆಂತರಿಕ ಕಚ್ಚಾಟಗಳಲ್ಲೇ ಮುಳುಗುವ ಮುನ್ಸೂಚನೆ ಈಗಲೇ ಸಿಕ್ಕಿರುವಾಗ ಇನ್ನು ರಾಜ್ಯದ ಹಳಿತಪ್ಪಿರುವ ಆಡಳಿತ ಸರಿದಾರಿಗೆ ಹೋಗಬಹುದು ಎನ್ನುವುದನ್ನು ಈ ನಾಡಿನ ಜನ ನಿರೀಕ್ಷಿಲು ಸಾಧ್ಯವೇ?
"ಈ ಪೆಟ್ಟು ಯಾರ ಒಳ ಏಟು" ಎಂದು ತಿಳಿದುಕೊಳ್ಳುವುದರಲ್ಲೇ ಬಂಡೆ ಜೆಲ್ಲಿಪುಡಿಯಾಗುವ ಎಲ್ಲಾ ಮುನ್ಸೂಚನೆ ಸಿಕ್ಕಂತಿದೆ!
#CongressFailsKarnataka
ಕರ್ನಾಟಕ ಕಾಂಗ್ರೆಸ್ಸಿನ ಕುರ್ಚಿ ಕಚ್ಚಾಟದ ಪ್ರಹಸನಕ್ಕೆ ತಾತ್ಕಾಲಿಕ ಅಂತ್ಯ ದೊರೆತಿದೆ. ಆದರೆ ಇದರಿಂದ ಕನ್ನಡಿಗರಿಗೆ ನಯಾಪೈಸೆ ಪ್ರಯೋಜನ ಇಲ್ಲ.
@INCKarnataka ದ ಮೂರು ವರ್ಷಗಳ ಸಾಧನೆ ಎಂದರೆ ಅದು ದಲಿತರ ಹಣ ದುರ್ಬಳಕೆ, ವಾಲ್ಮೀಕಿ ನಿಗಮದ ಹಣ ಲೂಟಿ, ಯುವಕರಿಗೆ ಟೋಪಿ, ರೈತರಿಗೆ ನೇಣು ಕುಣಿಕೆ, ಜನಸಾಮಾನ್ಯರಿಗೆ ಬೆಲೆ ಏರಿಕೆ, ಕರ್ನಾಟಕಕ್ಕೆ ಸಾಲದ ಶೂಲ ಹೊದಿಕೆ.
ಕರ್ನಾಟಕದ ಅಭಿವೃದ್ಧಿಯನ್ನು ಸಂಪೂರ್ಣ ಸ್ತಬ್ಧಗೊಳಿಸಿ, ಕಲೆಕ್ಷನ್-ಕರಪ್ಷನ್-ಕಮಿಷನ್ನಲ್ಲಿಯೇ ಮೂರು ವರ್ಷ ದೂಡಿ, ಈಗ ರಾಜೀನಾಮೆ ಎಂಬ ಅಲ್ಪ ವಿರಾಮ ಇಟ್ಟಿದ್ದಾರೆ.
ನೂತನವಾಗಿ ಯಾರೇ ಸಿಎಂ ಆಗಿ ಬಂದರೂ, ಕನ್ನಡಿಗರಿಗಾಗಲಿ, ಕರ್ನಾಟಕಕ್ಕಾಗಲಿ ನಯಾಪೈಸೆ ಪ್ರಯೋಜನ ಇಲ್ಲ. ಬಡವರು, ಶ್ರಮಿಕರು, ರೈತರು, ಯುವಕರು, ಮಹಿಳೆಯರು, ದೀನ-ದಲಿತರು, ಹಿಂದುಳಿದವರನ್ನು ಹಿಂಸಿಸಿ, ಶೋಷಿಸಿ ಸರ್ಕಾರ ನಡೆಸುವ ಇವರ ಪ್ರವೃತ್ತಿ ಮುಂದುವರೆಯುತ್ತದೆ ಹೊರತು ಬದಲಾಗುವುದಿಲ್ಲ. ಕರ್ನಾಟಕವನ್ನು ಸಂಪೂರ್ಣ ದಿವಾಳಿ ಮಾಡುವುದು ಹಾಗೂ ಕಾಂಗ್ರೆಸ್ ಹೈಕಮಾಂಡಿಗೆ ಕರ್ನಾಟಕವನ್ನು ಎಟಿಎಂ ಮಾಡುವುದು ಎರಡೇ ಇವರ ಅಜೆಂಡಾ. ಹಾಗಾಗಿ, ಆದಷ್ಟು ಬೇಗ ಈ ಜನವಿರೋಧಿ ಸರ್ಕಾರ ತೊಲಗಿದರೆ ಕನ್ನಡಿಗರಿಗೆ ನೆಮ್ಮದಿಯ ದಿನ ಸಿಗಲಿದೆ.
#CongressFailsKarnataka