🚩 ಬೆಂಗಳೂರು ಫ್ರೀಡಂ ಪಾರ್ಕ್ನಲ್ಲಿ ನಡೆಯುತ್ತಿರುವ ಪರವಾನಗಿ ಭೂಮಾಪಕರ ಹೋರಾಟಕ್ಕೆ ಕರ್ನಾಟಕ ರಾಜ್ಯ ರೈತ ಸಂಘದ ಮುಖಂಡರು ಹಾಗೂ ರೈತ ಬಂಧುಗಳು ಬೆಂಬಲ ಸೂಚಿಸಿದರು. ಖಾಯಂ ನೇಮಕಾತಿ ಮತ್ತು ಸಮಾನ ಕೆಲಸಕ್ಕೆ ಸಮಾನ ವೇತನಕ್ಕಾಗಿ ನಮ್ಮ ಹೋರಾಟ ಮುಂದುವರಿಯಲಿದೆ. ✊
#LSStrike#FreedomPark#EqualPayForEqualWork#LicensedSurveyors
ನಮ್ಮಲ್ಲಿ ಮಹಿಳಾ ಪರವಾನಗಿ ಭೂಮಾಪಕರೂ ಇದ್ದಾರೆ.
ಗ್ರಾಮ ಗ್ರಾಮ ಸುತ್ತಿ ಸರ್ಕಾರಿ ಸರ್ವೇ ಕೆಲಸ ಮಾಡುತ್ತಾರೆ.
ಮಾತೃತ್ವ ರಜೆ ಇಲ್ಲ. ಆರೋಗ್ಯ ವಿಮೆ ಇಲ್ಲ. ಪ್ರಯಾಣ ಭದ್ರತೆ ಇಲ್ಲ.
ಸಮಾನ ಪರೀಕ್ಷೆ, ಸಮಾನ ತರಬೇತಿ, ಸಮಾನ ಕೆಲಸ — ಆದರೆ ಸಂರಕ್ಷಣೆ ಶೂನ್ಯ.
@siddaramaiah@krishnabgowda#JusticeForLicensedSurveyors
ಒಬ್ಬ ಪರವಾನಗಿ ಭೂಮಾಪಕ ಸೇವೆಯಲ್ಲಿರುವಾಗ ತೀರಿಕೊಂಡರೆ —
ಪಿಂಚಣಿ ಇಲ್ಲ.
ಗ್ರಾಚುಯಿಟಿ ಇಲ್ಲ.
ವಿಮೆ ಇಲ್ಲ.
ಪರಿಹಾರ ಇಲ್ಲ.
20+ ವರ್ಷ ಸರ್ಕಾರಿ ಕೆಲಸ ಮಾಡಿ, ಕುಟುಂಬಕ್ಕೆ ಉಳಿಸಿಹೋಗುವುದು ಶೂನ್ಯ.
ಇದಕ್ಕಿಂತ ದೊಡ್ಡ ಅನ್ಯಾಯ ಏನಿದೆ?
@siddaramaiah@krishnabgowda#JusticeForLicensedSurveyors
2002ರ ಮೊದಲ ಬ್ಯಾಚ್ ಪರವಾನಗಿ ಭೂಮಾಪಕರು — ಇಂದು 60 ದಾಟಿದ್ದಾರೆ.
24 ವರ್ಷ ಸರ್ಕಾರಿ ಸೇವೆ. ನಿವೃತ್ತಿ ಸಮಯ ಬಂದಿದೆ.
ಆದರೆ —
ಪಿಂಚಣಿ ಇಲ್ಲ.
ಗ್ರಾಚುಯಿಟಿ ಇಲ್ಲ.
ಒಂದು ರೂಪಾಯಿ ಉಳಿತಾಯ ಇಲ್ಲ.
ಜೀವನ ಪೂರ್ತಿ ಸೇವೆ ಸಲ್ಲಿಸಿ — ಮುಪ್ಪಿನಲ್ಲಿ ಬರಿಗೈ?
@siddaramaiah@krishnabgowda#JusticeForLicensedSurveyors
“ಮಾನ್ಯ ಸರ್ಕಾರವೇ, ವರ್ಷಗಳ ಸೇವೆ ಸಲ್ಲಿಸಿದ ಪರವಾನಗಿ ಭೂ ಮಾಪಕರ ಬದುಕು ಉಳಿಸಿ.
ನಮ್ಮ ಕುಟುಂಬಗಳ ಭವಿಷ್ಯ ಇಂದು ನಿಮ್ಮ ನಿರ್ಧಾರಕ್ಕೆ ಕಟ್ಟಿಹಾಕಲಾಗಿದೆ.
ನಾವು ಹುದ್ದೆಗಾಗಿ ಅಲ್ಲ,
ಬದುಕಿನ ಭದ್ರತೆಗೆ ಮನವಿ ಮಾಡುತ್ತಿದ್ದೇವೆ.
ಪರವಾನಗಿ ಭೂ ಮಾಪಕರಿಗೆ ಶಾಶ್ವತ ನ್ಯಾಯ ನೀಡಿ.”
#JusticeForLicensedSurveyors@krishnabgowda 🙏
ಭೂಮಾಪಕರ ಧರಣಿಯಿಂದ ರೈತರಿಗೆ ಬೇಕಾದ ಅಗತ್ಯ ಸೇವೆ ಸಿಗದೇ ಪರದಾಡುತ್ತಿದ್ದಾರೆ. ಇತ್ತ ಸರ್ಕಾರ ಅವರ ಸಮಸ್ಯೆಗಳನ್ನು ಆಲಿಸಲು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ರಾಜ್ಯದಲ್ಲಿ 45% ರಷ್ಟು ಭೂ ಮಾಪಕರ ಹುದ್ದೆಗಳು ಖಾಲಿ ಇದೆ. ಈ ಬೇಡಿಕೆಯನ್ನು ಪೂರೈಸಲು ಸರ್ಕಾರ ಸುಮಾರು 4,500 ಖಾಸಗಿ ಭೂಮಾಪಕರನ್ನು (private licensed land surveyors) ನಿಯೋಜಿಸಿದೆ. ಖಾಸಗಿ ಭೂ ಮಾಪಕರ ಪ್ರತಿಭಟನೆಯಿಂದ 5.78 ಲಕ್ಷ ಸರ್ವೇ ಅರ್ಜಿಗಳು ಬಾಕಿ ಉಳಿದಿವೆ.
ಮ್ಯುಟೇಷನ್ ಪೂರ್ವ ನಕ್ಷೆ ತಯಾರಿಕೆ, ತತ್ಕಾಲ್ ಪೋಡಿ ಅಳತೆ, ದರಖಾಸ್ತು ಪೋಡಿ, ಮರುಭೂಮಾಪನ, ಕೆರೆ ಅಳತೆ, ನಾಳ, ವಿದ್ಯುತ್ ಮಾರ್ಗ, ಹೆದ್ದಾರಿ, ಮುಜರಾಯಿ ದೇವಸ್ಥಾನಗಳ ಭೂಮಾಪನವನ್ನು ಇವರು ಮಾಡುತ್ತಿದ್ದಾರೆ. ರೈತರು ಭೂ ಹಕ್ಕು ಸಂಬಂಧಿತ ಪ್ರಕ್ರಿಯೆಗಳು ಇವರ ಸೇವೆಯ ಮೇಲೆ ಅವಲಂಬಿತವಾಗಿದೆ.
ಜಮೀನು ಪೋಡಿ ಮಾಡುವುದು, ನಕ್ಷೆ ಸಿದ್ದಪಡಿಸುವುದು, ಖರೀದಿ ನಕ್ಷೆ, ವಿಭಾಗ ನಕ್ಷೆ, ದಾನಪತ್ರ ನಕ್ಷೆ ಹದ್ದುಬಸ್ತು, ದರಖಾಸ್ತು, 11 E ಕೆಲಸಗಳನ್ನು ಭೂ ಮಾಪಕರು ಮಾಡುತ್ತಿದ್ದಾರೆ. ಸರ್ವೇ ಕೆಲಸ ಇಲ್ಲದ ಸಮಯದಲ್ಲಿ ದಾಖಲೆಗಳ ಡಿಜಟಲೀಕರಣ, ನಿರ್ವಹಣೆ, ಹಿಸ್ಸಾ ತಿದ್ದುಪಡಿ, ಜಾಮೀನು ಒಟ್ಟುಗೂಡಿಸುವಿಕೆ ಕೆಲಸವನ್ನು ಸರ್ಕಾರ ನೀಡುತ್ತದೆ.
ಭೂ ಮಾಪಕರ ಬೇಡಿಕೆಗಳಾಗಿರುವ ಗೌರವಯುತ ಬದುಕು ಮತ್ತು ಸೇವಾ ಭದ್ರತೆಯನ್ನು ಸರ್ಕಾರ ಕೂಡಲೇ ನೀಡಬೇಕು. ಮಾನ್ಯ ಮುಖ್ಯ ಮಂತ್ರಿಗಳಾದ @CMofKarnataka ನವರು ಈ ಹಿಂದೆ ಪ್ರತಿಪಕ್ಷ ನಾಯಕರಾಗಿದ್ದಾಗ ಭೂ ಮಾಪಕರ ಪರ ಧ್ವನಿ ಎತ್ತಿದ್ದರು, ಈಗ 'ಜಾಣ ಕಿವುಡು' ಪ್ರದರ್ಶಿಸುತ್ತಿದ್ದಾರೆ. ಭೂ ಮಾಪಕರ ಧರಣಿಯಿಂದ ಜಮೀನು ಸರ್ವೆ ವಿವಾದಗಳು ನಿರ್ಧಾರವಾಗದೆ ರೈತರು ಸರ್ವೇ ಆಗದ ದಾಖಲಾತಿ ಪಡೆಯದ ಕಾರಣ ಅವರಿಗೆ ಬೆಳೆ ಸಾಲ ಸಿಗುತ್ತಿಲ್ಲ.
ಗಾಯದ ಮೇಲೆ ಬರೆ ಇಟ್ಟಂತೆ ಸುಮಾರು 300 ಪ್ರತಿಭಟನಾ ನಿರತ ಭೂ ಮಾಪಕರ ಪರವಾನಗಿಯನ್ನು ರಾತ್ರೋ ರಾತ್ರಿ ಸರ್ಕಾರ ರದ್ದುಗೊಳಿಸಿದೆ. ಮುಖ್ಯ ಮಂತ್ರಿಗಳು ಕೂಡಲೇ ಗಮನ ವಹಿಸಿ ಇವರ ಬೇಡಿಕೆಗಳಿಗೆ ನ್ಯಾಯಯುತವಾದ ಪರಿಹಾರವನ್ನು ಆದ್ಯತೆಯ ಮೇಲೆ ನೀಡಲಿ.
@tv9kannada I @AsianetNewsSN I @Vijayavani_Digi I @Vijaykarnataka I @HosadiganthaWeb I @krishnabgowda I @KannadaRepublic I @AKSSAofficial
21 ವರ್ಷಗಳಿಂದ ಸೇವೆ… ಇನ್ನೂ ಭದ್ರತೆ ಇಲ್ಲ!
ಪರವಾನಗಿ ಭೂಮಾಪಕರು ರೈತರ backbone…
ಆದರೆ ಅವರ ಬದುಕಿಗೆ security ಇಲ್ಲ ಅಂದ್ರೆ ಇದು ನ್ಯಾಯವೇ?
👉 ಇದು ಕೆಲಸ ಅಲ್ಲ… ಇದು modern slavery!
#justiceforlicensedsurveyors
Mirror ನಲ್ಲಿ: “ನೀವು ಮುಖ್ಯ”
Reality ನಲ್ಲಿ: “ಗುರುತಿಸೋವರು ಯಾರೂ ಇಲ್ಲ…”
ಪರವಾನಗಿ ಭೂಮಾಪಕರು ಕೆಲಸ ಮಾಡ್ತಾರೆ…
ಆದರೆ ಅವರಿಗೆ ಗೌರವ, ಭದ್ರತೆ, ಗುರುತು ಎಲ್ಲಿದೆ?
👉 ಸತ್ಯ ಕಹಿ… ಆದರೆ ಸತ್ಯವೇ! 💔
#justiceforlicensedsurveyors#justiceforlicensedsurveyors
21 ವರ್ಷಗಳಿಂದ ಸೇವೆ… ಇನ್ನೂ ಭದ್ರತೆ ಇಲ್ಲ!
ಪರವಾನಗಿ ಭೂಮಾಪಕರು ರೈತರ backbone…
ಆದರೆ ಅವರ ಬದುಕಿಗೆ security ಇಲ್ಲ ಅಂದ್ರೆ ಇದು ನ್ಯಾಯವೇ?
👉 ಇದು ಕೆಲಸ ಅಲ್ಲ… ಇದು modern slavery!
#justiceforlicensedsurveyors