2030ರ ವೇಳೆಗೆ ದೇಶೀಯವಾಗಿ ವಾರ್ಷಿಕ 300 ದಶಲಕ್ಷ ಟನ್ ಉಕ್ಕು ಉತ್ಪಾದಿಸುವ ಗುರಿಯೊಂದಿಗೆ ನಾವು ಅವಿರತವಾಗಿ ಕೆಲಸ ಮಾಡುತ್ತಿದ್ದು, ಗೌರವಾನ್ವಿತ ಪ್ರಧಾನಿಗಳಾದ ಶ್ರೀ @narendramodi ಅವರ ದೂರದೃಷ್ಟಿ ನಾಯಕತ್ವದಲ್ಲಿ ದೊಡ್ಡ ಪ್ರಯತ್ನಕ್ಕೆ ನಾಂದಿ ಹಾಡಿದ್ದೇವೆ. ಇದರ ಭಾಗವಾಗಿ ಭದ್ರಾವತಿಯ ಸರ್ ಎಂ.ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆ (#VISL ) ಲಾಭದ ಹಳಿಗೆ ಮರಳಿದೆ. ಇದನ್ನು ಮುಂದುವರಿಸಿಕೊಂಡು ಹೋಗುವ ನಿಟ್ಟಿನಲ್ಲಿ @SteelMinIndia ದೃಢವಾದ ಕ್ರಮ ವಹಿಸಿದೆ. ಅಲ್ಲದೆ, ಆತ್ಮನಿರ್ಭರ ಭಾರತ ಪರಿಕಲ್ಪನೆಯಡಿ ವಿಕಸಿತ ಭಾರತ ಕನಸು ಸಾಕಾರ ಮಾಡುವ ದಿಕ್ಕಿನಲ್ಲಿ ಕಾರ್ಯಪ್ರವೃತ್ತರಾಗಿದ್ದೇವೆ. 1/2
#SteelIndia
#AtmanirbharBharat
#ViksitBharat2047
2001-02ರಲ್ಲಿ ನೈಸ್ ರಸ್ತೆ ಕಾಮಗಾರಿಗೆಂದು ಸಿದ್ದಗಂಗಾ ಮಠಕ್ಕೆ ಸೇರಿದ 7 ಎಕರೆ 39 ಗುಂಟೆ ಜಮೀನನ್ನು ಪಡೆದು, ಪರ್ಯಾಯ ಜಾಗ ಹಾಗೂ ಆದಾಯದ ಭರವಸೆ ನೀಡಿ ವಂಚಿಸಲಾಗಿದೆ. ರಸ್ತೆಗೆ ಕೇವಲ 2 ಎಕರೆ ಬಳಸಿ, ಉಳಿದ ಜಮೀನನ್ನು 25 ವರ್ಷಗಳಾದರೂ ಮಠಕ್ಕಾಗಲಿ, ರೈತರಿಗಾಗಲಿ ವಾಪಸ್ ಕೊಟ್ಟಿಲ್ಲ.
ಒಂದೆಡೆ @DKShivakumar ಕುಟುಂಬಕ್ಕೆ ನಿಯಮ ಮೀರಿ ತ್ವರಿತವಾಗಿ NOC ಸಿಗುತ್ತದೆ, ಆದರೆ ಸಿದ್ದಗಂಗಾ ಮಠ ಮತ್ತು ಬಡ ರೈತರು ಪತ್ರ ಬರೆದು, ಹೋರಾಟ ಮಾಡಿದರೂ ರಾಜ್ಯ ಸರ್ಕಾರ ಕಣ್ಮುಚ್ಚಿ ಕುಳಿತಿದೆ.
ಕೂಡಲೇ ರೈತರ ಪರ ನಿಂತು, ಬಳಸದೆ ಉಳಿದಿರುವ ಜಮೀನನ್ನು ವಾಪಸ್ ಕೊಡಿಸಬೇಕು. ನಮ್ಮ ಪಕ್ಷ ಸದಾ ರೈತರು ಹಾಗೂ ಮಠದ ಬೆಂಬಲಕ್ಕೆ ನಿಲ್ಲಲಿದೆ.
#SiddagangaMath
#AKDKGolmaal
#NothingNice
#NiceLootsKarnataka
"ತಾಕತ್ತಿದ್ದರೆ ಒಂದು ಕಾರ್ಯಕ್ರಮ ತಡೆದು ತೋರಿಸು ನೋಡೋಣ!"
ನಿಖಿಲ್ ಕುಮಾರಸ್ವಾಮಿ ಅವರ ವಿರುದ್ಧ ಮಾತನಾಡುವವರಿಗೆ ಜೆಡಿಎಸ್ ಮುಖಂಡರಿಂದ ನೇರ ಖಡಕ್ ವಾರ್ನಿಂಗ್!
ಕೇವಲ ಮಾಧ್ಯಮಗಳ ಮುಂದೆ ನಿಂತು ಮಾತನಾಡುವುದಲ್ಲ, ಧಮ್ಮು-ತಾಕತ್ತು ಇದ್ದರೆ ಮೈದಾನಕ್ಕೆ ಬನ್ನಿ.
ಜೆಡಿಎಸ್ ಕಾರ್ಯಕರ್ತರು ಸುಮ್ಮನೆ ಕೂತಿಲ್ಲ, ತಕ್ಕ ಶಾಸ್ತಿ ಮಾಡುತ್ತೇವೆ ಎಂದು ಎಚ್ಚರಿಕೆ!
#NikhilKumaraswamy
#ಜೆಡಿಎಸ್ಕರ್ನಾಟಕ
#PoliticalFight #TrendingNewsKannada #BangaloreRural
Captain Smit Machchhar has shown the world the highest form of courage.
Without fearing for his own life, he fought valiantly and prevented another 9/11 like attack from happening.
140 crore Indians salute Captain Smit and are praying for his well-being.
ಮಾನ್ಯ ಮುಖ್ಯಮಂತ್ರಿಗಳೇ! ಭಾವನೆ + ಬದುಕು ಏನಾದರೂ ಇರಲಿ. ದಯವಿಟ್ಟು ರೈತರಿಗೆ ಸ್ವಾಭಿಮಾನದ ಬದುಕನ್ನು ಕಟ್ಟಿಕೊಳ್ಳಲು ಅವಕಾಶ ಮಾಡಿಕೊಡಿ.
ರೈತ ಪರವಾದ ಕೆಲಸವನ್ನು ಮಾಡಿದರೆ ನಾವೇ ನಿಮಗೆ ಶಾಲು ಹಾಕಿ ಸನ್ಮಾನ ಮಾಡುತ್ತೇವೆ.
#ಮಳವಳ್ಳಿವಿಧಾನಸಭಾಕ್ಷೇತ್ರ#ರೈತಸ್ವಾಭಿಮಾನಯಾತ್ರೆ#ಮಂಡ್ಯಜಿಲ್ಲೆ
ನಾನು ಯಾವುದನ್ನೂ ಕಥೆ ಕಟ್ಟಿ ಹೇಳುತ್ತಿಲ್ಲ. ಎಲ್ಲವನ್ನೂ ದಾಖಲೆಗಳೇ ಹೇಳುತ್ತಿವೆ. ಇದು ₹3 ಲಕ್ಷ ಕೋಟಿಗೂ ಮೀರಿದ ನೈಸ್ ಭೂ ಅಕ್ರಮ.. ಮುಖ್ಯಮಂತ್ರಿ ಕುಟುಂಬವು ಈ ಯೋಜನೆಗೆ ರಾಜ್ಯ ಸರಕಾರ ಜನರಿಂದ ಸ್ವಾಧೀನ ಮಾಡಿಕೊಂಡ ಭೂಮಿಯಲ್ಲಿ ನೂರಾರು ಎಕರೆಯನ್ನು ಕಬಳಿಸಿದೆ. ಮೂಲ ಫ್ರೇಮ್ ವರ್ಕ್ ಅಗ್ರಿಮೆಂಟ್ ತಿರುಚಿ ನಂತರ ಮಾಡಿಕೊಂಡ ಔಟ್ ಲೈನ್ ಡೆವಲಪ್ಮೆಂಟ್ ಪ್ಲಾನ್ (ODP) ಎಲ್ಲಾ ಅಕ್ರಮಗಳ ಮೂಲ. ಇದಕ್ಕೆ ಮೂಲಪುರುಷರು @DKShivakumar ಆಗಿದ್ದಾರೆ. ಮುಖ್ಯಮಂತ್ರಿ ಅವರು ನನಗೆ ಹೆದರುವುದು ಬೇಕಿಲ್ಲ, ದಾಖಲೆಗಳನ್ನು ನೋಡಲಿ, ಸಾಕು.
#AKDKGolmaal
#NothingNice
#NiceLootsKarnataka
📍ಬೆಂಗಳೂರು
•ಮೂಲ ಉದ್ದೇಶ ಬೆಂಗಳೂರು ಮತ್ತು ಮೈಸೂರು ನಡುವೆ ಸುಸಜ್ಜಿತ, ಅತ್ಯಾಧುನಿಕ ರಸ್ತೆ ನಿರ್ಮಿಸುವುದು; ಆಗಿದ್ದು ರಿಯಲ್ ಎಸ್ಟೇಟ್ ದಂಧೆ ಮತ್ತು ಅನಿಯಂತ್ರಿತ ಭೂಕಬಳಿಕೆ! ಬೇಲಿಯೇ ಎದ್ದು ಹೊಲ ಮೇಯ್ದ ಕರಾಳ ಕಥಾನಕವಿದು.
•ನೈಸ್ ಅಕ್ರಮಗಳಲ್ಲಿ #DK (ಡಿಕೆಶಿ) #AK (ಅಶೋಕ್ ಖೇಣಿ) ಸಂಘಟಿತರಾಗಿ ವ್ಯವಸ್ಥಿತ ಸಿಂಡಿಕೇಟ್ ಮಾಡಿಕೊಂಡು ನಡೆಸಿರುವ ಅಕ್ರಮಗಳ 'ಜುಗಲ್ಬಂದಿ' ಇದು.
•2ಜಿ, ಕಲ್ಲಿದ್ದಲು ಹಗರಣಗಳನ್ನೇ ಮೀರಿಸುವಂತಹ ಮಹಾನ್ ಹಗರಣ ಇದು. ₹3 ಲಕ್ಷ ಕೋಟಿಗೂ ಅಧಿಕ ಅವ್ಯವಹಾರ ನಡೆದಿದೆ ಎಂಬ ಶಂಕೆ ಇದೆ.
•ದಾಖಲೆಗಳ ಸಮೇತ, ಸಮಗ್ರವಾಗಿ ಎಲ್ಲಾ ವಿವರಗಳನ್ನು ನಾಡಿನ ಮುಂದೆ ಇರಿಸಿದ್ದೇನೆ. ಅಂಗೈ ಹುಣ್ಣಿಗೆ ಕನ್ನಡಿ ಬೇಕಿಲ್ಲ. ಈಗ ಆಗಬೇಕಿರುವುದು ಆಗಿರುವ ಅನ್ಯಾಯವನ್ನು ಸರಿಪಡಿಸುವುದು.
•ನನ್ನ ಒತ್ತಾಯ: ಯೋಜನೆಯನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು, ಭೂಮಿಯನ್ನು ಆಯಾ ಭೂ ಮಾಲೀಕರಿಗೆ ವಾಪಸ್ ನೀಡಬೇಕು.
ಇಲ್ಲದಿದ್ದರೆ ನಮ್ಮ ಹೋರಾಟ ನಿರಂತರ.
#AKDKGolmaal
#NothingNice
#NiceLootsKarnataka
•ಇದು ವಿಸ್ಮಯವಲ್ಲ, ವಿಪರೀತವೂ ಅಲ್ಲಾ, ವಿಚಿತ್ರವೂ ಅಲ್ಲಾ!
•ನಮ್ಮ ಮುಖ್ಯಮಂತ್ರಿಯ ಅಸಾಧಾರಣ ಸಾಧನೆ!!
•ಇದು ವೇಗವಾಗಿ ಹಣ ಮಾಡುವ ಕಲೆ!
•ಡಿಕೆ ಶಿವಕುಮಾರ್ ಅವರಿಗೆ ಇದು ಕರತಲಾಮಲಕ!!
•2003ರಲ್ಲಿ ₹4 ಕೋಟಿ ಇದ್ದ 2024ನೇ ವರ್ಷಕ್ಕೆ ₹1448 ಕೋಟಿ ಆಗುತ್ತದೆ!!??
ಹೇಗೆ?
ಎಲ್ಲರಿಗೂ ಕಲಿಸಿ ಕೊಡಿ ಡಿಕೆಶಿ ಅವರೇ..
@DKShivakumar
#AKDKGolmaal
#NothingNice
#NiceLootsKarnataka
ರಾಜ್ಯದಲ್ಲಿ ಬರಗಾಲದ ಭೀಕರತೆಗೆ ಅನ್ನದಾತ ಕಣ್ಣೀರಲ್ಲಿ ಕೈ ತೊಳೆಯುತ್ತಿದ್ದರೂ, ಈ ದಪ್ಪ ಚರ್ಮದ @INCKarnataka ಸರ್ಕಾರ ಪೂರ್ಣ ಕುರುಡಾಗಿ ಕುಳಿತಿದೆ! 50 ತಾಲೂಕುಗಳಲ್ಲಿ 84,000 ಹೆಕ್ಟೇರ್ ತೆಂಗು ನಾಶವಾಗಿ 592 ಕೋಟಿ ರೂ.ಗಳಿಗೂ ಹೆಚ್ಚು ನಷ್ಟ ಸಂಭವಿಸಿದೆ. ಫಲ ನೀಡಲು ವರ್ಷಗಳೇ ಬೇಕಾಗುವ ತೆಂಗಿನ ಮರಗಳು ಒಣಗಿ, ರೈತರ ಮುಂದಿನ 3 ವರ್ಷಗಳ ಭವಿಷ್ಯವೇ ಬೀದಿಗೆ ಬಿದ್ದಿದೆ.
ಬೆಳಗಾವಿಯೊಂದರಲ್ಲೇ 15,000 ಹೆಕ್ಟೇರ್ ಬಾಸುಮತಿ ಸೇರಿದಂತೆ 57,000 ಹೆಕ್ಟೇರ್ ಭತ್ತದ ಬೆಳೆ ಶೇ. 50ಕ್ಕಿಂತ ಹೆಚ್ಚು ಹಾನಿಗೊಳಗಾಗಿದೆ. ಎಕರೆಗೆ ಹತ್ತಾರು ಸಾವಿರ ರೂಪಾಯಿ ಹೂಡಿಕೆ ಮಾಡಿದ ನಮ್ಮ ರೈತರು, ಸಾಲದ ಸುಳಿಗೆ ಸಿಲುಕಿ ಅನಿವಾರ್ಯವಾಗಿ ಟ್ರ್ಯಾಕ್ಟರ್ಗಳಿಂದ ಬೆಳೆ ನಾಶಪಡಿಸುವ ಹಾಗೂ ಮೇವಿಗಾಗಿ ಅಕಾಲಿಕ ಕೊಯ್ಲು ಮಾಡುವ ದಯನೀಯ ಪರಿಸ್ಥಿತಿ ಎದುರಿಸುತ್ತಿದ್ದಾರೆ!
'ಕೃಷಿ ಭಾಗ್ಯ' ಯೋಜನೆಯಡಿ ನಿರ್ಮಿಸಿದ 2.5 ಲಕ್ಷ ಕೃಷಿ ಹೊಂಡಗಳಲ್ಲಿ ಶೇ.70 ರಷ್ಟು ಹೊಂಡಗಳು ಸಂಪೂರ್ಣ ಒಣಗಿ ಹೋಗಿವೆ. ನೀರಿಲ್ಲದೆ, ಅಂತರ್ಜಲ ಕುಸಿದು ಕೃಷಿ ಹೊಂಡಗಳು ಕೇವಲ 'ಖಾಲಿ ಗುಂಡಿ'ಗಳಾಗಿ ಉಳಿದಿವೆ.
ಖಜಾನೆ ಲೂಟಿ ಮಾಡಿ, ಗ್ಯಾರಂಟಿಗಳ ನೆಪ ಒಡ್ಡಿ ಅನ್ನ ನೀಡುವ ರೈತನ ಜೀವ ಹಿಂಡುತ್ತಿರುವುದೇಕೆ ಮಾನ್ಯ ಮುಖ್ಯಮಂತ್ರಿ ಶ್ರೀ @DKShivakumar ರವರೇ? ತಕ್ಷಣವೇ ಪ್ರತಿ ಎಕರೆಗೆ ವೈಜ್ಞಾನಿಕ ಪರಿಹಾರ ಘೋಷಿಸಿ, ಇಲ್ಲದಿದ್ದರೆ ರೈತರ ಪರವಾಗಿ ರಾಜ್ಯಾದ್ಯಂತ ನಮ್ಮ ಹೋರಾಟ ಇನ್ನಷ್ಟು ಪ್ರಬಲವಾಗಿ ನಡೆಯುವುದು ನಿಶ್ಚಿತ!
#CongressFailsKarnataka #RaitaVirodhiCongress
The bat raise, the roar, the milestone 👏👏
A Virat Kohli show in Thiruvananthapuram 🍿
Updates ▶️ https://t.co/O2cs86p4gq
#TeamIndia | #INDvWI | @mflone_ | @imVkohli
ಗೌರವಾನ್ವಿತ ರಾಷ್ಟ್ರಪತಿಗಳಾದ ಶ್ರೀಮತಿ ದ್ರೌಪದಿ ಮುರ್ಮು (@rashtrapatibhvn ) ಅವರಿಂದ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಸ್ವೀಕರಿಸಿದ ಕನ್ನಡ ಚಿತ್ರರಂಗದ ಹಿರಿಯ ನಟರಾದ ಶ್ರೀ ಅನಂತ್ ನಾಗ್ ಅವರಿಗೆ ಮತ್ತೊಮ್ಮೆ ಹೃದಯಪೂರ್ವಕವಾಗಿ ಶುಭ ಕೋರುತ್ತೇನೆ. ಕನ್ನಡಿಗರ ಪಾಲಿಗೆ ಇದು ಅತ್ಯಂತ ಸಂತಸದ ಸಾರ್ಥಕ ಕ್ಷಣವಾಗಿದೆ ಎಂಬುದು ನನ್ನ ಅಭಿಪ್ರಾಯ. ವರನಟ ಡಾ.ರಾಜ್ ಕುಮಾರ್ ಅವರ ಬಳಿಕ ಈ ಪ್ರತಿಷ್ಠಿತ ಪ್ರಶಸ್ತಿ ಸ್ವೀಕರಿಸಿದ ಅನಂತ್ ನಾಗ್ ಅವರು ಕರ್ನಾಟಕದ ಗರಿಮೆಯನ್ನು ಹೆಚ್ಚಿಸಿದ್ದಾರೆ.
#NationalFilmAwards #NFA #IndiaCelebratesCinema #FilmsThatUnite #72ndNationalFilmAwards #NationalFilmAwards2024
@nfdcindia@NFAIOfficial
ನಥಿಂಗ್ ನೈಸ್
ಟೋಲ್ ಬೇಡ !
ನಮ್ಮ ನೆಲ , ಜಲ ಮತ್ತು ರೈತರ ಹಕ್ಕುಗಳಿಗಾಗಿ ಪ್ರಾರಂಭವಾಗಿರುವ ನಮ್ಮ #NorthingNice ಹೋರಾಟಕ್ಕೆ ನಿಮ್ಮ ಬೆಂಬಲ ಅತ್ಯಗತ್ಯ.
ತಾವೆಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ
#NothingNICE ಅಭಿಯಾನದಲ್ಲಿ ಭಾಗವಹಿಸಿ.
ಭೇಟಿ ನೀಡಿ: https://t.co/goJXOTNDws
#NothingNice
ನಥಿಂಗ್ ನೈಸ್!
ದಶಕಗಳಿಂದ ವಂಚನೆಗೊಳಗಾದ ರೈತರಿಗೆ ನ್ಯಾಯ ಒದಗಿಸಲು ಹಾಗೂ ನೈಸ್ ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರ ಅಕ್ರಮ ಟೋಲ್ ಸುಲಿಗೆಯಿಂದ ತಪ್ಪಿಸಲು ನಮ್ಮ #NothingNICE ಅಭಿಯಾನದಲ್ಲಿ ಭಾಗವಹಿಸಿ.
ಭೇಟಿ ನೀಡಿ: https://t.co/goJXOTNDws
#NothingNice
KPSC ಯ ಭ್ರಷ್ಟ ವ್ಯವಸ್ಥೆಗೆ ಧಿಕ್ಕಾರ!
ನಾಡಿನ ಲಕ್ಷಾಂತರ ಯುವಜನತೆಯ ಉದ್ಯೋಗವನ್ನು ಮಾರಾಟ ಮಾಡುವ ಮೂಲಕ ಯುವ ಜನತೆಯ ಭವಿಷ್ಯದ ಜೊತೆಗೆ ಚೆಲ್ಲಾಟವಾಡುತ್ತಿರುವ ಕೆಪಿಎಸ್ಸಿ ಯಲ್ಲಿ ಭ್ರಷ್ಟಾಚಾರ ತುಂಬಿ ತುಳುಕುತ್ತಿರುವುದು ನಿಮ್ಮೆಲ್ಲರ ಗಮನಕ್ಕೆ ಬಂದಿದೆ.
ಈ ಹಿಂದೆಯೇ ನಾನು ನಿಮ್ಮೊಂದಿಗೆ ಧ್ವನಿಗೂಡಿಸಲು " ಭ್ರಷ್ಟ ಕೆಪಿಎಸ್ಸಿ ವ್ಯವಸ್ಥೆಯ ವಿರುದ್ದ ಸಮರ" ಸಾರಿ ನಿಮ್ಮ ಹಕ್ಕೊತ್ತಾಯಗಳನ್ನು ದಾಖಲಿಸಲು ಮನವಿ ಮಾಡಿದ್ದೆ. ಈ ಹಿನ್ನೆಲೆಯಲ್ಲಿ ಈವರೆಗೆ ರಾಜ್ಯದ ಸುಮಾರು 2000ಕ್ಕೂ ಅಧಿಕ ಯುವಜನತೆ ಹಕ್ಕೊತ್ತಾಯಗಳನ್ನು ದಾಖಲಿಸಿದ್ದಾರೆ.
ಈ ಸಮರವನ್ನು ದೊಡ್ಡ ಮಟ್ಟಕ್ಕೆ ತೆಗೆದುಕೊಂಡು ಹೋಗಲು ನಿರ್ಧರಿಸಿದ್ದು, KPSCಯ ಕುರಿತು ನಿಮ್ಮಲ್ಲಿ ಇನ್ನಷ್ಟು ದೂರು, ಸಲಹೆಗಳು ಇದ್ದರೆ ಅವುಗಳನ್ನು ಇಲ್ಲಿ ದಾಖಲಿಸಿ:
https://t.co/l6qyHKtR6E
ಇದು ಕೇವಲ ಅಭಿಯಾನವಲ್ಲ, ಭ್ರಷ್ಟ ವ್ಯವಸ್ಥೆಯ ವಿರುದ್ಧ ನಮ್ಮೆಲ್ಲರ ಹೋರಾಟ.
ನಿಮ್ಮೆಲ್ಲರ ಧ್ವನಿಯೇ ನಮ್ಮ ಹೋರಾಟಕ್ಕೆ ಸ್ಪೂರ್ತಿ
#ಕೆಪಿಎಸ್ಸಿ_ಉಳಿಸಿ
Experience the rise of Devaraaya https://t.co/kcoP32e5eK
On a day filled with love, I share something very special. ❤️
A character rooted in history.
A king whose legacy echoes through time.
A journey I’m truly honoured to be a part of *Sri Krishna Devaraaya*
The journey begins with *#Devaraaya*⚔️🔥
Produced by @vishwaprasadtg & #KrithiPrasad
Music by @GowrahariK@peoplemediafcy@SupriyanviPicS #VandanaPrasad @sujithkolli
#KichchaSudeep #PMFxSupriyanvi