The world has forgotten Peter Parker, but he hasn’t forgotten them 🕷️
#SpiderManBrandNewDay - in cinemas July 31. Releasing in English, Hindi, Tamil, Telugu, Malayalam and Kannada.
ಕಾಂತಾರ ಚಾಪ್ಟರ್ 1 ಆದಮೇಲೆ ಯಾವ ದೊಡ್ಡ ಕನ್ನಡ ಚಿತ್ರವೂ ಬಿಡುಗಡೆಯಾಗಿಲ್ಲ. ಟಾಕ್ಸಿಕ್ ಬಿಡುಗಡೆ ಮತ್ತೊಮ್ಮೆ ಮುಂದಕ್ಕೆ ಹೋಗಿದೆ. ಅಲ್ಲಿಗೊಂದು ದೊಡ್ಡ ಸಿನಿಮಾ ತಡವಾಗಿದೆ.
ಚಿತ್ರದಲ್ಲಿ ಮೌಲ್ಯಗಳಿಲ್ಲ, ಮನರಂಜನೆ ಹೆಸರಲ್ಲಿ ಅಶ್ಲೀಲತೆ , ಕೆಲವು cringe ಸಿನಿಮಾಗಳು ಬಂದರೂ ಕುಟುಂಬ ಸಮೇತ ಕೂತು ನೋಡಲು ಸಾಧ್ಯವಿಲ್ಲ, ಹಾಗಾಗಿ ಕೌಟುಂಬಿಕ ಪ್ರೇಕ್ಷಕರು ಅದನ್ನು ತಿರಸ್ಕರಿಸುತ್ತಾರೆ. ಪಡ್ಡೆ ಹುಡುಗರು, ಅಭಿಮಾನಿಗಳು ಅನಿಸಿಕೊಳ್ಳುವ ಕೆಲವರು ನೋಡಬಹುದು ಅಷ್ಟೇ.
ಕನ್ನಡ ಚಿತ್ರರಂಗ ಹಿಂದೆಂದೂ ಕಾಣದ ಕೆಟ್ಟ ಪರಿಸ್ಥಿಯಲ್ಲಿದೆ. ಅದು ನಾಯಕನಟರ ಮತ್ತು ನಿರ್ದೇಶಕರ ಅಭಾವ. ಕೆಟ್ಟ ಕೊಳಕು ಚಿತ್ರಗಳಿಗೂ ನಿರ್ಮಾಪಕರು ಸಿಗುವಾಗ ಒಳ್ಳೆಯ ಚಿತ್ರಗಳಿಗೆ ಸಿಗುವುದಿಲ್ಲವೇ? ಚಿತ್ರಮಂದಿರಗಳಲ್ಲಿ ಕನ್ನಡ ಚಿತ್ರಗಳೇ ಇಲ್ಲದಿದ್ದರೆ ನಮ್ಮದು ಕನ್ನಡನಾಡು ಅಂತ ಅನಿಸಿಕೊಳ್ಳುವುದಾದರೂ ಹೇಗೆ?
Hindi imposition is a Delhi establishment project and all Kannada activists know about it. Irrespective of Congress or BJP, we will remove Hindi imposition on six crore Kannadigas. Come what may.
Hindi as compulsory third language in Karnataka's three-lang formula correlates with high SSLC failures: 142,400 of 721,782 students (19.7%) failed Hindi in 2025 exams; avg >100k yearly. Recent policy drops its marks weight due to this burden, esp. in Kannada-medium schools with teacher shortages, risking dropouts/time diverted from Kannada/English.
Kannada speakers (~44M native nationally; ~43% in Bengaluru) show low Hindi proficiency (~8.5% bilingual per 1991-2011 data, stagnant). Hindi value limited outside North/Central India or select govt roles.
English: 34% higher hourly wages for fluent speakers (men; 22% women) vs none, per IHDS studies (consistent post-2010). 97% employers (2026 ETS report) say English more critical now; 98% link better assessments to efficiency; 84% cite disadvantage without it. Karnataka's IT/services sector (global hub) demands English.
Data: English yields broader job/competition edge than Hindi for Kannada students. Focus on it + skills aligns with outcomes.
ಹಿಂದಿ ಹೇರಿಕೆಯನ್ನು ತಡೆಯುವಲ್ಲಿ ಡಬ್ಬಿಂಗ್ ಪಾತ್ರ ಬಹಳ ದೊಡ್ಡದಿದೆ. ಅದಕ್ಕೆ ಎರಡೂ ಹೋರಾಟಗಳನ್ನ ಕಳೆದ ೧೫ ವರ್ಷಗಳಿಂದ ಒಟ್ಟೊಟ್ಟಿಗೆ ಮಾಡಿಕೊಂಡು ಬರುತ್ತಿದ್ದೇವೆ.
#ಹಿಂದಿಹೇರಿಕೆನಿಲ್ಲಿಸಿ#ಡಬ್ಬಿಂಗ್_ಇದು_ಕನ್ನಡಪರ
Namaskara Karnataka 🙏
Feel the energy of your favourite sports, now in Kannada 🤩
🚨 Now Launching Ten 4 Kannada on April 1 🚨
📞 Contact your Cable or DTH operator to subscribe! 📺
#SonySportsNetwork
Instead of fighting to make Kannada the official language of GOI and thereby allowing official usage of Kannada in parliament, @ShobhaBJP is shamelessly pushing for Hindi imposition on Kannada children in schools.
ಶಾಲೆಯಲ್ಲಿ ಮೂರನೇ ಬಾಷೆ ಕನ್ನಡವಾದರೆ ಏನು ಮಾಡೋದು ಅನ್ನೋದು ಕೆಲವರ ಕಳವಳ.
2017 ರಲ್ಲಿ ಮಾಡಿರುವ ಕರ್ನಾಟಕದ ಕಾನೂನಿನ ಪ್ರಕಾರ CBSE/ICSE ಶಾಲೆಗಳಲ್ಲಿ ಕೂಡ ಕನ್ನಡವನ್ನು ಮೊದಲ ಅಥವಾ ಎರಡನೇ ಬಾಷೆಯಾಗಿ ಕಲಿಸುವುದು ಕಡ್ಡಾಯ. 2017 ರಲ್ಲಿ ಒಂದನೇ ತರಗತಿಯಿಂದ ಪ್ರಾರಂಭವಾಗಿ ಮುಂಬರುವ ಶೈಕ್ಷಣಿಕ ವರ್ಷದಲ್ಲಿ (2026-27) ಇದು 10ನೇ ತರಗತಿಯಲ್ಲಿ ಜಾರಿಯಾಗಬೇಕು. ಇದನ್ನು ಪ್ರಶ್ನಿಸಿ ಕೆಲವರು 2023ರಲ್ಲಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಇನ್ನು ಮಿಕ್ಕವರು ರಾಷ್ಟ್ರೀಯತೆ, ಧರ್ಮ-ಕರ್ಮ ಅಂತ ಏನೇನೋ ಪಿತೂರಿ ಮಾಡಲು ಸಜ್ಜಾಗಿದ್ದಾರೆ. ಕರ್ನಾಟಕದಲ್ಲಿರುವ ಯಾವುದೇ ಇಂಗ್ಲಿಷ್, ಹಿಂದಿ-ಉರ್ದು, ಮರಾಠಿ, ತಮಿಳು ಮಾಧ್ಯಮ ಶಾಲೆಯಾಗಲಿ ಕನ್ನಡ ಮೊದಲ ಅಥವಾ ಎರಡನೇ ಭಾಷೆಯಾಗಿ ಮುಂಬರುವ ಶೈಕ್ಷಣಿಕ ವರ್ಷದಲ್ಲಿ 1ರಿಂದ 10ನೇ ತರಗತಿವರೆಗೂ ಕಲಿಸಲೇ ಬೇಕು. ಅದಕ್ಕೆ ಒಪ್ಪದಿದ್ದರೆ ಆ ಶಾಲೆಯನ್ನು ಸರ್ಕಾರ ವಶಪಡಿಸಿಕೊಳ್ಳಬೇಕು.
#ಎರಡು_ನುಡಿ_ಪಾಲಿಸಿ #ದ್ವಿಭಾಷಾ_ನೀತಿ
#TwoLanguagePolicy
#ನಮ್ಮನಾಡು_ನಮ್ಮಆಳ್ವಿಕೆ
ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರಾದ ಬಿ.ವೈ.ವಿಜಯೇಂದ್ರ @BYVijayendra ಅವರೇ,
ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಇದ್ದ ಹೊರೆಯನ್ನು ತೆಗೆದು, ಮೂರನೇ ಭಾಷೆಗೆ ಗ್ರೇಡಿಂಗ್ ನೀಡುವ ರಾಜ್ಯ ಸರ್ಕಾರದ ಕ್ರಮದ ವಿರುದ್ಧ ನಿಮ್ಮ ಹೇಳಿಕೆ ಗಮನಿಸಿದೆ. ನಿಮ್ಮ ಒಟ್ಟು ಹೇಳಿಕೆಯು ಆತ್ಮಘಾತಕತನದಿಂದ ಕೂಡಿದೆ, ಕನ್ನಡದ ಮಕ್ಕಳ ಭವಿಷ್ಯದ ವಿರುದ್ಧವಾಗಿದೆ, ಕನ್ನಡಿಗರ ಆಶೋತ್ತರಗಳನ್ನು ಹೀಯಾಳಿಸುವಂತೆ ಇದೆ. ಇಂಥ ಹೇಳಿಕೆಯನ್ನು ನಿಮ್ಮಿಂದ ನಾನು ನಿರೀಕ್ಷಿಸಿರಲಿಲ್ಲ.
2023-2024ರ SSLC ಪರೀಕ್ಷೆಯಲ್ಲಿ 90,000ಕ್ಕೂ ಹೆಚ್ಚು ಕನ್ನಡದ ಮಕ್ಕಳು ಹಿಂದಿಯಲ್ಲಿ ಅನುತ್ತೀರ್ಣರಾಗಿದ್ದರು. 2024-25ರಲ್ಲಿ ಹಿಂದಿಯೊಂದರಲ್ಲಿ 1,42,400 ಮಕ್ಕಳು ಫೇಲ್ ಆಗಿದ್ದರು. ಪ್ರತಿ ವರ್ಷ ನಮ್ಮ ಕನ್ನಡದ ಮಕ್ಕಳು ತಮ್ಮದಲ್ಲದ ಹಿಂದಿಯ ಕಡ್ಡಾಯ ಕಲಿಕೆಯಿಂದ ಒಂದು ವರ್ಷ ಕಳೆದುಕೊಳ್ಳುತ್ತಿದ್ದರು. ಇದು ನಿಮ್ಮ ಗಮನಕ್ಕೆ ಬಂದಿಲ್ಲವೇ? ನಮ್ಮ ಕನ್ನಡದ ಮಕ್ಕಳ ಭವಿಷ್ಯಕ್ಕೆ ಕೊಳ್ಳಿ ಇಡಲು ನಮಗೇನು ಹಕ್ಕಿದೆ? ಯಾಕೆ ಅವರ ಮೇಲೆ ಇಂಥ ದೌರ್ಜನ್ಯ? ಯಾವತ್ತಾದರೂ ಯೋಚಿಸಿದ್ದೀರಾ? ದಶಕಗಳಿಂದ ಕನ್ನಡದ ಮಕ್ಕಳು ಈ ದೌರ್ಜನ್ಯ ಅನುಭವಿಸಿದ್ದಾರೆ. ಇನ್ನೂ ಎಷ್ಟು ಕಾಲ ಈ ಮಾನಸಿಕ ಅತ್ಯಾಚಾರವನ್ನು ಅನುಭವಿಸಬೇಕು?
ಕಳೆದ ವರ್ಷ ನಿಮ್ಮದೇ ಪಕ್ಷ ಅಧಿಕಾರದಲ್ಲಿರುವ ಮಹಾರಾಷ್ಟ್ರದಲ್ಲಿ ತೃತೀಯ ಭಾಷೆಯನ್ನು ಕೈಬಿಟ್ಟು ದ್ವಿಭಾಷಾ ನೀತಿಯನ್ನು ಅಳವಡಿಸಿಕೊಳ್ಳಲಾಯಿತು? ಯಾಕೆ ಅಲ್ಲಿ ಹಿಂದಿಯನ್ನು ತೆಗೆಯಲಾಯಿತು ಎಂಬುದನ್ನು ಅಲ್ಲಿನ ನಿಮ್ಮ ಮುಖ್ಯಮಂತ್ರಿಗಳನ್ನು ಒಮ್ಮೆ ಕೇಳಿ. ಆಗ ನೀವು ಯಾಕೆ ಮಾತನಾಡಲಿಲ್ಲ? ದೇಶದಲ್ಲೇ ಮಾದರಿ ತ್ರಿಭಾಷಾ ಶಿಕ್ಷಣ ನೀತಿಯನ್ನು ಯಾಕೆ ತೆಗೆದಿರಿ ಎಂದು ಕೇಳಬೇಕಿತ್ತಲ್ಲವೇ? ಒಂದು ಕಣ್ಣಿಗೆ ಬೆಣ್ಣೆ, ಒಂದು ಕಣ್ಣಿಗೆ ಸುಣ್ಣ ಎಂಬ ನೀತಿ ಸರಿಯೇ?
ಹಿಂದಿಯನ್ನು ರಾಷ್ಟ್ರೀಯ ದೃಷ್ಟಿಕೋನದಿಂದ ನೋಡಲಾಗುತ್ತಿದೆ ಎಂದು ಹೇಳಿದ್ದೀರಿ. ಇದು ಯಾವ ಬಗ್ಗೆಯ ಚಿಂತನೆ? ಕನ್ನಡವನ್ನು, ತಮಿಳನ್ನು, ತೆಲುಗನ್ನು ಅಥವಾ ಇನ್ನುಳಿದ ಭಾಷೆಗಳನ್ನು ನೀವು ಯಾಕೆ ರಾಷ್ಟ್ರೀಯ ದೃಷ್ಟಿಕೋನದಲ್ಲಿ ನೋಡುವುದಿಲ್ಲ. ನಮ್ಮ ಭಾಷೆಗಳೆಲ್ಲ ಬೇರೆ ದೇಶಗಳಿಂದ ಬಂದವುಗಳಾ? ಅಥವಾ ಮೂರನೇ ದರ್ಜೆ ಭಾಷೆಗಳಾ? ಹಿಂದಿಯೊಂದೇ ರಾಷ್ಟೀಯವೇ? ಬೇರೆಯ ಭಾಷೆಗಳೆಲ್ಲ ಏನು ಹಾಗಾದರೆ? ಈ ಬಾಲಿಷ, ಕುಯುಕ್ತಿಯ ಚಿಂತನೆಗಳನ್ನು ನೀವೂ ಯಾಕೆ ಪ್ರತಿಪಾದಿಸುತ್ತಿದ್ದೀರಿ?
ಒಂದು ಕೆಲಸ ಮಾಡಿ. ಉತ್ತರ ಪ್ರದೇಶ, ಬಿಹಾರ ಇನ್ನಿತ್ಯಾದಿ ಹಿಂದಿ ರಾಜ್ಯಗಳಲ್ಲಿ ನಿಮ್ಮದೇ ಪಕ್ಷದ ಸರ್ಕಾರಗಳಿವೆ. ಅಲ್ಲಿ ಕೇವಲ ಎರಡು ಭಾಷೆಗಳನ್ನು ಕಲಿಸಲಾಗುತ್ತಿದೆ. ನೀವು ಅಲ್ಲಿ ಮೂರನೇ ಭಾಷೆಯನ್ನಾಗಿ ಕನ್ನಡವನ್ನು ಕಡ್ಡಾಯಗೊಳಿಸಿ. ನೂರು ಅಂಕ ನಿಗದಿಪಡಿಸಿ. ಅಲ್ಲಿನ ಮಕ್ಕಳು ಕನ್ನಡ ಓದಿ, ಕನಿಷ್ಠ 35 ಅಂಕ ಪಡೆದು ಪಾಸಾಗಲಿ. ಇದು ನಿಮಗೆ, ನಿಮ್ಮ ಪಕ್ಷಕ್ಕೆ ನೇರ ಸವಾಲು. ಇದು ಸಾಧ್ಯವೇ ನಿಮ್ಮಿಂದ? ಸಾಧ್ಯವಿಲ್ಲವಾದರೆ ಕರ್ನಾಟಕದ ಮಕ್ಕಳು ಮೂರನೇ ಭಾಷೆ ಹೇರಿಸಿಕೊಂಡು ಫೇಲಾಗಿ ಭವಿಷ್ಯ ಹಾಳುಮಾಡಿಕೊಳ್ಳಲಿ ಎಂದು ದಯವಿಟ್ಟು ಬೋಧನೆ ಮಾಡಬೇಡಿ. ಕನ್ನಡಿಗರು ಈಗ ಎಚ್ಚೆತ್ತುಕೊಂಡಿದ್ದಾರೆ. ಇದು ಹೊಸ ಕರ್ನಾಟಕ, ನಾವು ಬಗ್ಗುವುದೂ ಇಲ್ಲ, ಜಗ್ಗುವುದೂ ಇಲ್ಲ. ನಾವು ಯಾರ ಗುಲಾಮರೂ ಅಲ್ಲ.
ʻʻಕೇಂದ್ರ ಸರಕಾರದ ಉದ್ಯೋಗಗಳಿಗೆ ಸೇರ್ಪಡೆಗೊಳ್ಳುವ ಕರ್ನಾಟಕದ ಯುವಸಮೂಹವು ರಾಷ್ಟ್ರಮಟ್ಟದಲ್ಲಿ ಹಿಂದೆ ಬೀಳಬಾರದುʼʼ ಎಂದು ಕಾಳಜಿ ತೋರಿದ್ದೀರಿ. ಇದು ಸರಿಯಾದ ಮಾತು. ಇದಕ್ಕೆ ಸರಿಯಾದ ಉತ್ತರವೂ ನಿಮ್ಮ ಬಳಿಯೇ ಇರುತ್ತದೆ. ಕೇಂದ್ರ ಸರ್ಕಾರದ ಉದ್ಯೋಗಗಳಿಗೆ ಹೋಗುವವರಿಗೆ ಹಿಂದಿ ಗೊತ್ತಿರಲೇಬೇಕು ಎಂಬ ವಾತಾವರಣವನ್ನು ಈ ಕೂಡಲೇ ಬದಲಾಯಿಸಿ. ಕೇಂದ್ರ ಸರ್ಕಾರವನ್ನು ಹಿಂದಿ ಭಾಷಿಕರಿಗೆ ನಾವು ಬರೆದುಕೊಟ್ಟಿಲ್ಲ. ಕೇಂದ್ರ ಸರ್ಕಾರವೆಂದರೆ ಅದು ಎಲ್ಲರ ಸರ್ಕಾರ, ಕನ್ನಡಿಗರ, ಮಲೆಯಾಳಿಗಳ, ಅಸ್ಸಾಮಿಗಳ, ಬಂಗಾಳಿಗಳ ಹೀಗೆ ಎಲ್ಲರ ಸರ್ಕಾರ. ಅದನ್ನು ಅರ್ಥ ಮಾಡಿಕೊಂಡು ಎಲ್ಲ ಭಾಷೆಗಳನ್ನು ಕೇಂದ್ರ ಸರ್ಕಾರದ ಆಡಳಿತ ಭಾಷೆಯನ್ನಾಗಿ ಮಾಡಿ. ಆಗ ನಿಮ್ಮ ಕಾಳಜಿಗೆ ಸರಿಯಾದ ಉತ್ತರ ಸಿಗುತ್ತದೆ.
ನಿಮ್ಮ ತಂದೆಯವರಾದ ಮಾನ್ಯ ಬಿ.ಎಸ್.ಯಡಿಯೂರಪ್ಪನವರು @BSYBJP ಹಲವು ಬಾರಿ ಮುಖ್ಯಮಂತ್ರಿಗಳಾಗಿದ್ದಾಗ ಕನ್ನಡದ ವಿಷಯಕ್ಕೆ ಬಂದಾಗ ಯಾವತ್ತೂ ರಾಜಿ ಆದವರಲ್ಲ. ನಿಮ್ಮದೇ ಪಕ್ಷದವರು ಕನ್ನಡ ಬಾವುಟ ಹಾರಿಸಬಾರದು ಎಂದು ಆದೇಶ ಹೊರಡಿಸಿದಾಗಲೂ ರಾಜ್ಯೋತ್ಸವದಂದು ಕಂಠೀರವ ಸ್ಟೇಡಿಯಂನಲ್ಲಿ ಕನ್ನಡ ಬಾವುಟ ಹಾರಿಸಿದವರು ಅವರು. ನೀವು ಅವರ ರಾಜಕೀಯ ಪುಟಗಳಿಂದ ಈ ಸ್ವಾಭಿಮಾನದ ಪಾಠವನ್ನು ಕಲಿತಹಾಗೆ ಕಾಣುತ್ತಿಲ್ಲ.
ದಯವಿಟ್ಟು ನಿಮ್ಮನ್ನು ತಪ್ಪು ದಾರಿಗೆ ಎಳೆಯುತ್ತಿರುವವರಿಗೆ ಬುದ್ಧಿಹೇಳಿ, ಕನ್ನಡ ಪ್ರೇಮಿಗಳಾಗಿ. ನಾವೆಲ್ಲರೂ ನಿಮ್ಮನ್ನು ಗೌರವಿಸುತ್ತೇವೆ. ಆ ಗೌರವವನ್ನು ನೀವೇ ಕಳೆದುಕೊಳ್ಳಬೇಡಿ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ನಂದಿನಿ ಹಾಲಿನ ವಿಷಯವು ಯಾವ ಪ್ರಮಾಣದಲ್ಲಿ ನಿಮ್ಮ ಪಕ್ಷಕ್ಕೆ ಘಾಸಿ ಮಾಡಿತು ಎಂಬುದನ್ನು ನೀವು ಮರೆತಿಲ್ಲ ಎಂಬುದನ್ನು ಭಾವಿಸುತ್ತೇನೆ.
ನಾವಂತೂ ಹಿಂದಿಹೇರಿಕೆ ಪರವಾಗಿರುವವರನ್ನು ನಾಡದ್ರೋಹಿಗಳು ಎಂದು ತೀರ್ಮಾನಿಸಿದ್ದೇವೆ. ನೀವು ನಾಡದ್ರೋಹಿಗಳಾಗಬೇಡಿ. ನಿಮ್ಮ ಮೇಲಿನ ಪ್ರೀತಿಯಿಂದಲೇ ಈ ಮಾತನ್ನು ಹೇಳುತ್ತಿದ್ದೇನೆ.
Happiness is watching your favourite sports in your favourite language 🥹
Experience the best of world sport in Kannada from April 1.
📞 Contact your Cable or DTH operator to subscribe! 📺
#SonySportsNetwork