ನೆಲದ ಹೊರಮಯ್ ನಡುವಿಗೆ ಸರಿಯಾಗಿ ಒಂದು ಅಡ್ಡಗೆರೆಯನ್ನು ಎಳೆದರೆ ಅದು ಸರಿಗೆರೆ. ನೆಲದ ಬಡಗು ತುದಿಯಿಂದ ತೆಂಕು ತುದಿಯವರೆಗು ಎಷ್ಟೇ ಅಡ್ಡಗೆರೆಗಳನ್ನು ಎಳೆದರೂ ಅವುಗಳಲ್ಲೆಲ್ಲಾ ಸರಿಗೆರೆಯೇ ಹೆಚ್ಚು ಉದ್ದವಾಗಿರುತ್ತದೆ.
https://t.co/IOmRqgxZDT
ನೆಲನಡುಗೆರೆಯ ತಾವೆಲ್ಲ ಬಿಸಿಗೊಂಡ ಗಾಳಿಯು ಮೇಲಕ್ಕೇರಿ ತುದಿಗಳೆಡೆಗೆ ಸಾಗುತ್ತದೆ. ಇದು ಕಡಿಮೆ ಒತ್ತಡದೇರ್ಪಾಟು. ಹಾಗೆಯೇ ತಣಿದ, ಒತ್ತೊಟ್ಟಾದ (denser) ಗಾಳಿಯು ನೆಲದ ಮೇಲ್ಮಯ್ ಮೇಲೆ ಹಾದು ನೆಲನಡುಗೆರೆಯೆಡೆಗೆ, ಅದಾಗಲೇ ಬಿಸಿಗಾಳಿ ತೆರವುಗೊಂಡಿದ್ದ ತಾವನ್ನು ಸೇರಿಕೊಳ್ಳುತ್ತದೆ. ಇದು ಹೆಚ್ಚು ಒತ್ತಡದೇರ್ಪಾಟು.
https://t.co/IkNIBjaEW0
ಸುರಕ್ಷತೆಯನ್ನು ಹೆಚ್ಚಿಸುವುದು ಇಂದಿನ ಕಾರು ತಯಾರಕರ ಮುಖ್ಯ ಗುರಿಗಳಲ್ಲೊಂದು.
ಬ್ರೇಕ್ ಒತ್ತಿದಾಗ ಕಾರು ಡ್ರೈವರ್ ಕೈತಪ್ಪಿ ಅಪಘಾತಕ್ಕೆ ಈಡಾಗುವುದು ಸಾಮಾನ್ಯ. ಇದನ್ನು ತಡೆಗಟ್ಟಲು ಬಳಸುವ ವ್ಯವಸ್ಥೆಯೇ ABS.
ಈ ವಿಡಿಯೋದಲ್ಲಿ ABS ಕೆಲಸ ಮಾಡುವ ಬಗೆಯನ್ನು ವಿವರಿಸಲಾಗಿದೆ.
https://t.co/cTQHJp3JzO
ನಮ್ಮ ಸುತ್ತಮುತ್ತಲಿನ ವಿಜ್ಞಾನವನ್ನು ತಿಳಿಯುವುದಕ್ಕೂ ಈ ಬರಿಗೆಯೆಣಿಕೆಗೂ ಏನಪ್ಪಾ ನಂಟು ಅಂದ್ಕೊಂಡ್ಬಿಟ್ರಾ. ಬನ್ನಿ ಉದಾಹರಣೆಯೊಂದಿಗೆ ತಿಳಿಯೋಣ
ನೀವು 2 ಮೀ ಎತ್ತರವಿದ್ದೀರಿ ಎಂದುಕೊಳ್ಳಿ. ನೀವು ಒಂದು ಕಲ್ಲನ್ನ 14 m/s ವೇಗದಲ್ಲಿ ಎಸೆಯುತ್ತೀರ, ಆ ಕಲ್ಲು ನೆಲಕ್ಕೆ ಬೀಳಲು ಎಷ್ಟು ಹೊತ್ತು ತೆಗೆದುಕೊಳ್ಳುತ್ತದೆ?
https://t.co/C1aueZCBjs
ಕಾಫಿ ಒಣಗಿಸಲೊಂದು ಚುರುಕಿನ ಚಳಕ
(ಕಾಫಿಯನ್ನು ಒಣಗಿಸುವ ಮಾದರಿ)
ಒಣಗಿಸುವ ಕೋಣೆ: ಒಣಗಿಸುವ ಕೋಣಯು ಬೇಕಾದಷ್ಟು (ಎತ್ತುಗೆಗಾಗಿ 20×30 (ಉದ್ದ x ಅಗಲ)ರಷ್ಟು) ಜಾಗದಲ್ಲಿ ಕಟ್ಟಿರಬೇಕು. ಕೋಣೆಯ ಒಳಗಿನ ಗೋಡೆಗಳಿಗೆ ಮರದ ಹಲಗೆ (ಪ್ಲಯ್ ವುಡ್) ಹೊಡೆದಿರಬೇಕು, ಇದು ಬಿಸಿಗಾಳಿಯನ್ನು ಹೊರಗೆ ಹೋಗದಂತೆ ತಡೆಯುತ್ತದೆ
https://t.co/EzTmcmLXc0
ಕನ್ನಡದಲ್ಲಿ ಸರಳವಾದ ಪದ ಕಟ್ಟುವ ಪದಕಟ್ಟಣೆ ಪೈಪೋಟಿಯಲ್ಲಿ ಹತ್ತಿರ ಹತ್ತಿರ 100 ಜನರು ಪಾಲ್ಗೊಂಡರು.
ಪೈಪೋಟಿಯಲ್ಲಿ ಗೆದ್ದವರ ವಿವರ ಹೀಗಿದೆ..
https://t.co/fS5IRImMtk
ಮುಂದಿನ ದಿನಗಳಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನದ ಹಲವಾರು ವಿಷಯಗಳಲ್ಲಿ ಹೆಚ್ಚೆಚ್ಚು ಕನ್ನಡಿಗರು ಪಾಲ್ಗೊಳ್ಳುವತ್ತ ಇದು ಮೊದಲ ಪುಟ್ಟ ಹೆಜ್ಜೆ..
#Kannada@tilipadakannada @munnota