4 ವರ್ಷ ಕಳೆದರೂ ಮುಗಿಯದ ಗೋಳು #PSI 545#
PSI 545 ರ ನೇಮಕಾತಿಯ ಅಧಿಸೂಚನೆಯು 2020 ರಲ್ಲಿ ಹೊರಡಿಸಲಾಗಿರುತ್ತದೆ.ಅದರ ಪರೀಕ್ಷೆಯು ಅಕ್ಟೋಬರ್ 3 2021 ಎಲ್ಲಿ ನಡೆದು ಅದರ ಫಲಿತಾಂಶವನ್ನು ಜನವರಿ 19 2022 ರಾಲ್ಲಿ ಪ್ರಕಟಿಸಿರುತಾರೆ.ನಂತರ ಅದರಲ್ಲಿ ಅಕ್ರಮ ಕಂಡುಬಂದ ಇನ್ನೆಲೆ ಆಗಿನ ಸರ್ಕಾರವು ಅದಕ್ಕೆ ಮರು ಪರೀಕ್ಷೆ ಮಾಡಬೇಕು ಎಂದು ಆದೇಶಿಸುತ್ತದೆ. ನಂತರ ಅದರಲ್ಲಿ ಆಯ್ಕೆಗೊಂಡ ಅಭ್ಯರ್ಥಿಗಳು ನ್ಯಾಯಾಲಯದ ಮೆಟ್ಟಿಲು ಹೇರುತ್ತಾರೆ. ಇದಕ್ಕೆ ಅನುಗುಣವಾಗಿ ಮಾನ್ಯ ಘನ ನ್ಯಾಯಲಯವು ಮರು ಪರೀಕ್ಷೆ ಮಾಡುವುದು ಸೂಕ್ತ ಎಂದು ನವೆಂಬರ್ 19 2023 ರಂದು ತೀರ್ಪು ನೀಡಿ ಸರ್ಕಾರಕ್ಕೆ ಆದೇಶಿಸುತ್ತದೆ. ಇದಕ್ಕೆ ಅನುಗುಣವಾಗಿ ಮಾನ್ಯ ಸರ್ಕಾರವು ಇದರ ಮರು ಪರೀಕ್ಷೆಯನ್ನು ಮಾಡುವಂತೆ KEA ಗೆ ಆದೇಶ ನೀಡುತ್ತದೆ. ನಂತರ KEA January 23 2024 ರಂದು ಇದರ ಮರು ಪರೀಕ್ಷೆ ನಡೆಸಿ ಅದರ ಎಲ್ಲರ ಅಭ್ಯರ್ಥಿಗಳ ಅಂಕ ಪಟ್ಟಿಯನ್ನು ಮಾರ್ಚ್ 1 2024 ರಂದು ಸಿದ್ಧಗೊಳಿಸಿ ಅದನ್ನು ಮುಂದಿನ ಪ್ರಕ್ರಿಯೆಗಾಗಿ KSP(Karnataka state police) ಗೆ ವರ್ಗಾಯಿಸುತ್ತದೆ.ತದನಂತರ ಅದರ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟಿಸುವ ಯಾವುದೆ ಪ್ರಕ್ರಿಯೆ ನೀಡಿದಿರುವುದಿಲ್ಲ. ಇದರಿಂದ ಮನ ನೊಂದ ಪಿಎಸ್ಐ ಅಭ್ಯರ್ಥಿಗಳು ಮಾನ್ಯ ಸರ್ಕಾರವನ್ನು ಎಷ್ಟು ಬಾರಿ ಒತ್ತಾಯಿಸಿದರು ಯಾವುದೆ ಬೆಳವಣಿಗೆಗಳು ಆಗಿರುವುದಿಲ್ಲ. ನಂತರ ಅಭ್ಯರ್ಥಿಗಳು ಸರ್ಕಾರಕ್ಕೆ ತಮ್ಮ ರಕ್ತದಲ್ಲಿಯೂ ಸಹ ಪತ್ರ ಬರೆದು ಮನವಿ ಮಾಡಿಕೊಂಡಿರುತ್ತಾರೆ.ಆದ್ದರಿಂದ ಈ ವಿಷಯವನ್ನು ಘನ ಸರ್ಕಾರವು ಅತ್ಯಂತ ಗಂಭೀರವಾಗಿ ಪರಿಗಣಿಸಿ ಅದರ ಆಯ್ಕೆ ಪಟ್ಟಿಯನ್ನು ಪ್ರಕಟಿಸಿ ಅಭ್ಯರ್ಥಿಗಳು ಹಾಗೂ ಅವರ ಕುಟುಂಬದವರಿಗೆ ಕರ್ನಾಟಕ ಸರ್ಕಾರ ಯುವ ಜನತೆಯ ಪರ ಎಂಬುದನ್ನು ಸಾಬೀತುಪಡಿಸಬೇಕು. ಇಲ್ಲವಾದರೆ ಆಯ್ಕೆ ಪಟ್ಟಿ ಬಿಡುಗಡೆಗಾಗಿ ಅಭ್ಯರ್ಥಿಗಳು AKKSA ಸಂಘಟನೆಯ ವತಿಯಿಂದ ಅಕ್ಟೋಬರ್ 14 ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ದೊಡ್ಡ ಮಟ್ಟದ ಹೋರಾಟಕ್ಕೆ ಮುಂದಾಗಿದ್ದಾರೆ. @DrParameshwara@siddaramaiah@PriyankKharge
@CMofKarnataka KAS ಮರು ಪರೀಕ್ಷೆಗೆ ಆದೇಶ ನೀಡಿ ಒಂದು ತಿಂಗಳಾದರೂ @secretarykpsc ಪರೀಕ್ಷಾ ದಿನಾಂಕ (group b,c, land surveyor) ಬಿಡದ ಕಾರಣದಿಂದ ಅತಿ ಶೀಘ್ರದಲ್ಲಿ kpsc ಮುಂಭಾಗ ಪ್ರತಿಭಟನೆ ಮಾಡಲು ಈ ಮೂಲಕ ತಿಳಿಸುತ್ತೇವೆ.
@DKShivakumar@CMofKarnataka@siddaramaiah
"ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆಯೇ ?
ಜಲಸಂಪನ್ಮೂಲ ಇಲಾಖೆಯಲ್ಲಿ WRD AE/JE 1020 ಹುದ್ದೆಗಳು ಖಾಲಿ ಉಳಿದಿದ್ದು ಕೇವಲ 94 ಹುದ್ದೆಗಳನ್ನು ಆರ್ಥಿಕ ಇಲಾಖೆ ಅನುಮೋದನೆ ನೀಡಿದೆ ಖಾಲಿ ಇರುವ ಎಲ್ಲ ಹುದ್ದೆಗಳನ್ನು ಅನುಮೋದಿಸಿ ಅಧಿಸೂಚನೆ ಹೊರಡಿಸಲು ವಿನಂತಿಸಿಕೊಳ್ಳುತ್ತೇವೆ
It has come to my attention that students have expressed outrage over the confusion in the KPSC exam question paper, which has erupted across the state. If the concerned officials provide justice, it will be beneficial for the students to build a comprehensive country.
#kpscexam
ಕರ್ನಾಟಕ ಲೋಕಸೇವಾ ಆಯೋಗ ಎಷ್ಟು ಭ್ರಷ್ಟಗೆಟ್ಟಿದೆ ಎನ್ನುವುದಕ್ಕೆ ಇತ್ತೀಚಿನ ಕೆಪಿಎಸ್ಸಿ ಪರೀಕ್ಷೆಯೇ ಜ್ವಲಂತ ನಿದರ್ಶನ. ಕುಂಟುನೆಪ ಹೇಳಿಕೊಂಡು ವಾರದ ದಿನ ಪರೀಕ್ಷೆಯಿಟ್ಟು ಅರ್ಧದಷ್ಟು ಮಂದಿ ಆಕಾಂಕ್ಷಿಗಳು ಪರೀಕ್ಷೆಗೆ ಬಾರದೇ ಇರುವಂತೆ ನೋಡಿಕೊಳ್ಳುವುದು ಒಂದು ಹಂತದ ಕುತ್ಸಿತ ಬುದ್ಧಿಯಾದರೆ, ಬೇಕಂತಲೇ ಪ್ರಶ್ನೆ ಪತ್ರಿಕೆಯಲ್ಲಿ ತಪ್ಪುಗಳನ್ನು ಮುದ್ರಿಸಿ ಬಂದ ಆಕಾಂಕ್ಷಿಗಳಲ್ಲಿ ಗೊಂದಲ ಉಂಟುಮಾಡಿ ಕೈತೊಳೆದುಕೊಳ್ಳುವುದು ಎರಡನೆಯ ಹಂತದ ಕುತ್ಸಿತ ಮನೋಭಾವ.
ಗೂಗಲ್ ಅನುವಾದ ಕೂಡ ಮಾಡಲಾರದಷ್ಟು ದಟ್ಟದರಿದ್ರವಾದ ಕನ್ನಡ ಅವತರಣಿಕೆಯಿಂದ ಆಕಾಂಕ್ಷಿಗಳು ಬೇಸತ್ತು ಅಧಿಕಾರಿಗಳನ್ನು ಪ್ರಶ್ನಿಸುತ್ತಿದ್ದಾರೆ. ೮ ಕ್ಕಿಂತ ಹೆಚ್ಚಿನ ಪ್ರಶ್ನೆಗಳಲ್ಲಿ ಗೊಂದಲವಿದ್ದರೆ ಮರುಪರೀಕ್ಷೆ ನಡೆಸಬೇಕೆನ್ನುವ ಕಾನೂನನ್ನು ಕಾಂಗ್ರೆಸ್ ಸರ್ಕಾರ ಖಂಡಿತ ಪಾಲಿಸುವುದಿಲ್ಲ. ಯಾಕಂದ್ರೆ, ಮೀಡಿಯಾ ಪ್ರಕಾರ ಸೀಟುಗಳು ಅದಾಗಲೇ ಮಾರಾಟವಾಗಿವೆ.
ಈ ಹೀನಾತಿಹೀನ ಕನ್ನಡ ಅನುವಾದ ಬೇಕಂತಲೇ ಮಾಡಿರುವ ಹುನ್ನಾರ ಎನ್ನವುದು ಪ್ರತಿಯೊಬ್ಬ ಕನ್ನಡಿಗನೂ ಮಾತನಾಡಿಕೊಳ್ಳುತ್ತಿರುವ ಸಂಗತಿ. ಪರೀಕ್ಷೆಯನ್ನು ಕನ್ನಡದಲ್ಲಿ ಬರೆಯುವವರು ಕನ್ನಡಿಗರೇ ಅಲ್ಲವೇ? ಅಂದಮೇಲೆ ಈ ಕಾಂಗ್ರೆಸ್ ಸರ್ಕಾರಕ್ಕೇಕೆ ಕನ್ನಡಿಗರ ಮೇಲೆ ಇಷ್ಟು ದ್ವೇಷ?
ವೀರ ಸಾವರ್ಕರ್ ಮೇಲ್ಸೇತುವೆಯ ನಾಮಫಲಕ ಕೆಡವುವುದಕ್ಕೆ ಬೀದಿಗಿಳಿದ, ಲೇ ಮಾರ್ವಾಡಿ ನೆಕ್ಸ್ಟ್ ನೀನೇ ಎನ್ನುತ್ತಾ ಬೀದಿ ಬೀದಿ ಅಲೆದ ಓಲಾಟಗಳು ಈಗ ಕಾಂಗ್ರೆಸ್ ಹಾಕಿದ ಬಿಸ್ಕೆಟ್ ಬಾಯಲ್ಲಿಟ್ಟುಕೊಂಡು, ನಾಮಕಾವಸ್ಥೆಗೆ ಒಂದು ಟುವ್ವಿ ಹಾಕಿ 'ನಾವು ಇದರ ವಿರುದ್ಧ ದನಿ ಎತ್ತಿದ್ದೀವಿ' ಅಂತ ತೋರಿಕೆಯಾಟ ಆಡಿದ್ದಾರೆ.
ಕಾಂಗ್ರೆಸ್ ಸರ್ಕಾರದಲ್ಲಿ ಕನ್ನಡಿಗರಿಗೆ ಅನ್ಯಾಯ ಆಗಿದೆ. ನೀಟ್ ಪರೀಕ್ಷೆಯ ಬಗ್ಗೆ ಇಲ್ಲಸಲ್ಲದ ಕೊಂಕೆತ್ತುವ ಕಾಂಗ್ರೆಸ್ ನಾಯಕರ ಕೈವಾಡದಿಂದ ಕೆಪಿಎಸ್ಸಿ ಪರೀಕ್ಷೆಯಲ್ಲಿ ಕನ್ನಡಿಗರಿಗೆ ಅನ್ಯಾಯವಾಗಿದೆ. ಇದರ ನ್ಯಾಯತೀರ್ಮಾನ ಇಂದಲ್ಲ ನಾಳೆ ಆಗಿಯೇ ತೀರಲಿದೆ.
Shame on KPSC the least you could do was to take this exam seriously.
It’s a known fact that Kannada medium aspirants are the ones who are affected U have no right to play with the lives of lakhs of aspirants. They come from mostly rural background and from underprivileged section of the society whoever is responsible should be made to pay the price of this grave arrogance and irresponsibility. @KpscSecretary
ಕನ್ನಡ ಮಾಧ್ಯಮ ಮತ್ತು ಗ್ರಾಮೀಣ ಅಭ್ಯರ್ಥಿಗಳಿಗೆ ಆದ ಅನ್ಯಾಯವನ್ನು ಖಂಡಿಸಿದ್ದಕ್ಕಾಗಿ ಎಲ್ಲ ವಿದ್ಯಾರ್ಥಿಗಳ ಪರವಾಗಿ @vinaygb ಸರ್ ನಿಮಗೆ ಹೃದಯಪೂರ್ವಕ ಧನ್ಯವಾದಗಳನ್ನು ಈ ಮೂಲಕ ಅರ್ಪಿಸುತ್ತಿದ್ದೇವೆ
ನ್ಯಾಯ ಬೇಕು
ಕನ್ನಡಕ್ಕೆ ಹಾಗೂ ಕನ್ನಡಿಗರಿಗೆ ಅವಮಾನ ಮಾಡಿರೋ ಈಗಿನ ಕೆಪಿಎಸ್ಸಿಯನ್ನು ತಕ್ಷಣ ವಜಾ ಮಾಡಿ,ಅಥವಾ ಅವರಿಂದಲೇ ಹೊಸದಾಗಿ ಪರೀಕ್ಷೆ ಮಾಡಿಸಿ
ಗ್ರಾಮೀಣ ಭಾಗವು ಸೇರಿದಂತೆ ರಾಜ್ಯದ ಲಕ್ಷಾಂತರ ಕನ್ನಡಿಗರಿಗೆ ನ್ಯಾಯ ಸಿಗಲಿ.
ನಿಮ್ಮ ಕನ್ನಡದ ಬದ್ಧತೆ ಇಲ್ಲಿ ತೊರಿಸಿ
ಮಾನ್ಯ
@siddaramaiah@DKShivakumar#KPSCಮೋಸ#KPSCReExam
ಇದು ಕೆಪಿಎಸ್ಸಿ ಯ ಅಯೋಗ್ಯ ತನದ ಕೆಲಸ ಕಷ್ಟಪಟ್ಟು ಓದಿದ ಮಕ್ಕಳಿಗೆ ಅದರಲ್ಲೂ ಕನ್ನಡದ ಮಕ್ಕಳಿಗೆ ಮಾಡಿರುವ ದೊಡ್ಡ ಅಪರಾಧ ಕೆಪಿಎಸ್ಸಿ ಸಂಸ್ಥೆಯ ಜೊತೆ ಸರಕಾರವು ಸಹ ಜವಾಬ್ದಾರಿಯನ್ನು ಹೊರಬೇಕಾಗುತ್ತದೆ ಪ್ರಶ್ನೆ ಪತ್ರಿಕೆ ತಯಾರಿಸಿದ ಅಧಿಕಾರಿಗಳನ್ನು ಮೊದಲು ವಜಾಗೊಳಿಸಬೇಕು ;
ಕೋಟಗಾನಹಳ್ಳಿ ರಾಮಯ್ಯ ಚಿಂತಕರು
#KPSC_Mosa#KASReExam
ದಶಕದಿಂದ ಪರೀಕ್ಷೆ ನಡೆಸದ ಕರ್ನಾಟಕ ಲೋಕಸೇವಾ ಆಯೋಗವು ಮೊನ್ನೆ ನಡೆಸಿರೋ ಪೂರ್ವಭಾವಿ ಪರೀಕ್ಷೆಯಲ್ಲಿ ಕನ್ನಡದ ಮಕ್ಕಳಿಗೆ ಆಗಿರೋ ಅನ್ಯಾಯ ಖಂಡನೀಯ
ಇದರ ವಿರುದ್ಧ ಕನ್ನಡಿಗರೆಲ್ಲ ಜೊತೆ ಯಾಗಲಿದ್ದೇವೆ.
ನ್ಯಾಯ ಸಿಗಲೇಬೇಕು.
ಕರ್ನಾಟಕದ ಪರೀಕ್ಷೆಗಳಲ್ಲಿ ಈ ರೀತಿ ಆದ್ರೆ ಗತಿಯೇನು?
@CMofKarnataka@secretarykpsc#KPSCmosa#KASReExam
Mr. @RahulGandhi is now silent on the blatant exam irregularities in Congress-ruled Karnataka!
Students are left polishing shoes in protest, desperately trying to draw attention to #KPSC & KAS exam scandal, yet Congress govt is shamelessly turning a blind eye.
Where is your outrage now, Rahul?
ಕರ್ನಾಟಕ ಲೋಕಸೇವಾ ಆಯೋಗ (KPSC) ಈ ತಿಂಗಳ 27ರಂದು 2023-24ರ KAS ಪೂರ್ವಭಾವಿ ಪರೀಕ್ಷೆ ನಡೆಸಲು ಎಲ್ಲಿಲ್ಲದ ತರಾತುರಿ ನಡೆಸುತ್ತಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ವಿಕಲಚೇತನ ಆಕಾಂಕ್ಷಿಗಳ ಹಿತದೃಷ್ಟಿಯಿಂದ ಪರೀಕ್ಷೆಯನ್ನು ಮುಂದಕ್ಕೆ ಹಾಕಿ ಮತ್ತೊಂದು ದಿನಾಂಕ ನಿಗದಿ ಮಾಡಬೇಕು ಎಂದು ಅಭ್ಯರ್ಥಿಗಳು ಮನವಿ ಮಾಡುತ್ತಿದ್ದರೂ KPSC ಹಟಕ್ಕೆ ಬಿದ್ದಿರುವುದು ಸರಿಯಲ್ಲ.
ಪರೀಕ್ಷೆ ಬರೆಯುವವರನ್ನೇ ಚಿತ್ರಹಿಂಸೆಗೆ ಒಳಪಡಿಸಿ KPSCಯು ಪರೀಕ್ಷೆ ನಡೆಸುವ ಆತುರದ ಹಿಂದಿರುವ ದುರುದ್ದೇಶವಾದರೂ ಏನು? ಅನೇಕ ಆಕಾಂಕ್ಷಿಗಳಿಗೆ ಪರೀಕ್ಷೆ ಬರೆಯಲಿಕ್ಕೇ ಸಾಧ್ಯವಾಗುತ್ತಿಲ್ಲ. ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡುತ್ತಿರುವ, ಅದರಲ್ಲೂ ಅಂಧ ಅಭ್ಯರ್ಥಿಗಳಿಗೆ ಪರೀಕ್ಷೆಗೆ ಹಾಜರಾಗುವುದು ಬಹುದೊಡ್ಡ ಸಮಸ್ಯೆಯಾಗಿದೆ.
ಕೆಲವರು ದುಡ್ಡು ಮಾಡಿಕೊಳ್ಳುವುದಕ್ಕೆ ಈ ಪರೀಕ್ಷೆಯನ್ನು ನಡೆಸುತ್ತಿರುವಂತೆ ಕಾಣುತ್ತಿದೆ. 4-5 ವರ್ಷಗಳಿಂದ ಕಷ್ಟಪಟ್ಟು ಓದಿರುವವರಿಗೆ ಅನ್ಯಾಯ ಮಾಡುವ ದುರಾಸೆ ಒಳ್ಳೆಯದಲ್ಲ. @INCKarnataka ಸರಕಾರ ಹಾಗೂ #KPSC ಕೂಡಲೇ ಪರೀಕ್ಷೆಯನ್ನು ಮುಂದೂಡಬೇಕು. ಎಲ್ಲಾ ಆಯಾಮಗಳನ್ನು ಪರಿಶೀಲಿಸಿ ಎಲ್ಲಾ ಆಕಾಂಕ್ಷಿಗಳಿಗೂ ಅನುಕೂಲ ಆಗುವ ದಿನಾಂಕ ನಿಗದಿಪಡಿಸಿ ಪರೀಕ್ಷೆ ನಡೆಸಲಿ.
#postponekas
From the last 2 weeks caste & religion details haven't been fetching while applying for Sindhutva Certificate on @GoK_SevaSindhu portal due to server issues so @osd_cmkarnataka kindly intervene & resolve the issue.
@BCWGOK