ಕಲಬುರಗಿಯ ಲುಂಬಿಣಿ ಉದ್ಯಾನದಲ್ಲಿನ ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್ ಅವರ ಪುತ್ತಳಿಗೆ ಅಪಮಾನ ಉಂಟುಮಾಡಿ ವಿಕೃತಿ ಮೆರೆದಿರುವ ಘಟನೆ ಹೇಡಿಗಳ ನೀಚ ಕೃತ್ಯವಾಗಿದೆ. ಇದಕ್ಕೆ ಸಂಬಂಧಿಸಿದಂತೆ ಕಿಡಿಗೇಡಿಗಳನ್ನು ಸರ್ಕಾರ ಈ ಕೂಡಲೇ ಬಂಧಿಸಲಿ. ಇದರಿಂದ ಕಲಬುರಗಿ ನಗರದಲ್ಲಿ ಕಾನೂನು ಸುವ್ಯವಸ್ಥೆ ಪರಿಸ್ಥಿತಿ ಹದಗೆಡುತ್ತಿದ್ದು ಪರಿಸ್ಥಿತಿಯ ಗಂಭೀರತೆ ಅರಿತು ನಗರದ ಶಾಂತಿಗೆ ಭಂಗ ಉಂಟಾಗದಂತೆ ಹಾಗೂ ಜನರ ಆಕ್ರೋಶ ಇನ್ನಷ್ಟು ವ್ಯಾಪಿಸದಂತೆ ಪೊಲೀಸರು ಈ ಕೂಡಲೇ ಕ್ರಮ ಜರುಗಿಸಬೇಕೆಂದು
ಒತ್ತಾಯಿಸುವೆ.
ಅಯೋಧ್ಯೆಯಲ್ಲಿ ಬಾಲರಾಮನ ಪ್ರಾಣ ಪ್ರತಿಷ್ಠಾಪನೆಯ ಹಿನ್ನಲೆಯಲ್ಲಿ ಕಳೆದೆರಡು ದಿನಗಳಿಂದ ರಾಜ್ಯದಲ್ಲಿ ವಿಶೇಷ ಎಚ್ಚರಿಕೆಯ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಹೇಳುತ್ತಿದ್ದ ಕಾಂಗ್ರೆಸ್ ಸರ್ಕಾರ ಬಾಬಾ ಸಾಹೇಬರ ಪುತ್ಥಳಿಗೂ ರಕ್ಷಣೆ ನೀಡಲಾಗದಷ್ಟು ದುರ್ಬಲವಾಗಿದೆ ಎಂದರೆ ಇದರ ನೈತಿಕ ಹೊಣೆ ಯಾರು ಹೊರಬೇಕೆಂದು ಸರ್ಕಾರವೇ ನಿರ್ಧರಿಸಲಿ.
ಪೋಲಿಸ್ ಇಲಾಖೆ ಸಂಪೂರ್ಣವಾಗಿ ನಿಷ್ಕ್ರಿಯಗೊಂಡಿದೆ ಎನ್ನುವುದನ್ನು ಈ ಘಟನೆ ಸಾಕ್ಷೀಕರಿಸುತ್ತಿದೆ.
ಬಾಬಾ ಸಾಹೇಬ್ ಅಂಬೇಡ್ಕರ್ ಅವರಂತಹ ಮಹಾನ್ ಮಾನವತಾವಾದಿಯ ಪುತ್ತಳಿಗೆ ಸುರಕ್ಷತೆ ಒದಗಿಸಲಾಗದ ಕಾಂಗ್ರೆಸ್ ಸರ್ಕಾರ ಸಂವಿಧಾನ ರಕ್ಷಣೆ ಆಶ್ರಯಿಸುವ ಸಾಮಾನ್ಯ ನಾಗರಿಕರಿಗೆ ಯಾವ ಬಗೆಯ ರಕ್ಷಣೆ ನೀಡಲು ಸಾಧ್ಯ?
ರಾಮಾಯಣಕ್ಕೂ ಕರುನಾಡಿಗೂ ಅವಿನಾಭಾವ ಸಂಬಂಧ.
ಪ್ರಭು ಶ್ರೀರಾಮಚಂದ್ರರ ಪರಮ ಭಕ್ತ ಪವನಪುತ್ರ ಆಂಜನೇಯನ ಜನ್ಮಸ್ಥಳ ಸಹ ನಮ್ಮ ಕರುನಾಡು.
ಆಂಜನೇಯ ಜನ್ಮಸ್ಥಳ ಕಿಷ್ಕಿಂಧೆಯ ಸಂಪೂರ್ಣ ಹಿನ್ನೆಲೆಯನ್ನು ತಿಳಿಯಲು ಈ ವಿಡಿಯೋ ನೋಡಿ.
#JaiShriRam#AyodhyaRamMandir
History is about to unfold and the air is charged with devotion and anticipation for the sacred PranPrathista of Prabhu Shri Rama.
Here I am participating in the #NannaRama abhiyan, & i cordially invite @BSYBJP, @ArunSinghbjp, @RAshokaBJP,@CTRavi_BJP, @Jaggesh2, @Tejasvi , @amitmalviya , @mepratap, @BYRBJP, @astitvam , @rajeshpadmar and all Rama devotees to be a part of this divine abhiyan, uniting us in chanting the sacred Rama japa.
I request you all to take part in this movement and invite your friends and family to greet Prabhu Shri Rama with boundless devotion. Let every echo sing His praise.
#NannaRama
"ರಾಮಾಯ ರಾಮಭದ್ರಾಯ
ರಾಮ ಚಂದ್ರಾಯ ವೇಧಸೇ
ರಘುನಾಥಾಯ ನಾಥಾಯ
ಸೀತಾಯಾಃ ಪತಯೇ ನಮಃ"
ಶತಮಾನಗಳ ಕನಸು ಅಯೋಧ್ಯೆ ರಾಮಮಂದಿರ ಪ್ರಾಣ ಪ್ರತಿಷ್ಠಾಪನೆ ಅಂಗವಾಗಿ ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್ ರಾಣಿ ಅಬ್ಬಕ್ಕ ಆಟದ ಮೈದಾನದಲ್ಲಿ ಆಯೋಜಿಸಿರುವ 'ರಾಮತಾರಕ ಮಹಾಯಾಗ'ದಲ್ಲಿ ಭಾಗವಹಿಸಿ ಪೂಜಾ ಕೈಂಕರ್ಯಗಳನ್ನು ನೆರವೇರಿಸಿ ಶ್ರೀರಾಮನನ್ನು ಆರಾಧಿಸಲಾಯಿತು. ಇದೇ ವೇಳೆ ಆಯೋಧ್ಯೆ ರಾಮಮಂದಿರ ಪ್ರಾಣ ಪ್ರತಿಷ್ಠಾಪನೆಯನ್ನು ನೇರಪ್ರಸಾರದಲ್ಲಿ ವೀಕ್ಷಿಸುವ ಮೂಲಕ ಬಾಲರಾಮನ ಪವಿತ್ರ ದರುಶನ ಪಡೆದೆವು.
ಈ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಶ್ರೀ @BSBommai ಅವರು,ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ @PRajeevBJP, ಮಾಜಿ ಸಚಿವರು ಹಾಗೂ ಶಾಸಕರಾದ ಶ್ರೀ @GopalaiahK, ರಾಜ್ಯ ಉಪಾಧ್ಯಕ್ಷರಾದ ಶ್ರೀಮತಿ @MalavikaBJP, ಮಹಿಳಾ ಮೋರ್ಚಾ ರಾಜ್ಯಾಧ್ಯಕ್ಷರಾದ ಮಂಜುಳಾ, ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷರಾದ ಶ್ರೀ ಹರೀಶ್, ಮುಖಂಡರಾದ ಶ್ರೀ ನೆ.ಲ.ನರೇಂದ್ರ ಬಾಬು, ಶ್ರೀ ರಾಜೇಂದ್ರ ಕುಮಾರ್, ರಾಜ್ಯ ಕಾರ್ಯದರ್ಶಿ ಶ್ರೀ ಶರಣು ತಳ್ಳೀಕೆರೆ, ವಿವಿಧ ಮಠಗಳ ಪರಮಪೂಜ್ಯ ಶ್ರೀಗಳು, ಸ್ಥಳೀಯ ಮುಖಂಡರು ಹಾಗೂ ರಾಮಭಕ್ತರು ಭಾಗವಹಿಸಿದ್ದರು.
#ಭವ್ಯರಾಮಮಂದಿರ
#JaiShriRam
#AyodhyaRamMandir
#RamMandirPranPrathistha
#NannaRama
"2024 ಮತ್ತೊಮ್ಮೆ ಮೋದಿ
ತಯಾರಿ ಆರಂಭ"
ಲೋಕಸಭಾ ಚುನಾವಣೆ-2024 ಸಿದ್ಧತೆಯ ಭಾಗವಾಗಿ ಬೆಂಗಳೂರಿನ ಶೇಷಾದ್ರಿಪುರಂ ಮಾರುತಿ ಆಸ್ಪತ್ರೆಯ ಬಳಿ ಗೋಡೆ ಬರಹಕ್ಕೆ ಚಾಲನೆ ನೀಡಲಾಯಿತು. ಸುಭದ್ರ ಭಾರತಕ್ಕಾಗಿ ಸಮಗ್ರ ಯೋಜನೆಗಳನ್ನು ಜಾರಿಗೊಳಿಸಿರುವ ಪ್ರಧಾನಿ ಮೋದಿಜೀ ಜನಸಾಮಾನ್ಯರ ಗ್ಯಾರಂಟಿಯಾಗಿದ್ದು ಬಿಜೆಪಿ ಪರವಾಗಿ ಇರುವ ಅಲೆಯನ್ನು ದುಪ್ಪಟ್ಟಾಗಿಸುವ ಸಂಕಲ್ಪ ನಮ್ಮದು.
ಈ ಸಂದರ್ಭದಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ನಂದೀಶ್ ರೆಡ್ಡಿ, ಶ್ರೀ ಪ್ರೀತಮ್ ಗೌಡ, ಸಂಸದರಾದ ಶ್ರೀ ಪಿ.ಸಿ. ಮೋಹನ್, ಬೆಂಗಳೂರು ದಕ್ಷಿಣ ಜಿಲ್ಲಾಧ್ಯಕ್ಷರು ಹಾಗೂ ಶಾಸಕರಾದ ಶ್ರೀ ಸಿ.ಕೆ. ರಾಮಮೂರ್ತಿ ಅವರು, ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷರಾದ ಶ್ರೀ ಎಸ್. ಹರೀಶ್, ಬೆಂಗಳೂರು ಕೇಂದ್ರ ಜಿಲ್ಲಾಧ್ಯಕ್ಷರಾದ ಶ್ರೀ ಸಪ್ತಗಿರಿ ಗೌಡ, ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
ರಾಜ್ಯಾಧ್ಯಕ್ಷರಾದ ಶ್ರೀ @BYVijayendra ಅವರು ಬಿಜೆಪಿಯ ಸಂಘಟನಾತ್ಮಕ ಜಿಲ್ಲೆಗಳ ಜಿಲ್ಲಾಧ್ಯಕ್ಷರು, ಪ್ರಕೋಷ್ಠಗಳ ರಾಜ್ಯ ಸಂಯೋಜಕರು ಹಾಗೂ ರಾಜ್ಯ ಕಾರ್ಯಾಲಯ ಕಾರ್ಯದರ್ಶಿಗಳು, ಸಹ ಕಾರ್ಯದರ್ಶಿಗಳನ್ನು ನೇಮಿಸಿ ಆದೇಶ ಹೊರಡಿಸಿದ್ದಾರೆ.
ನೂತನವಾಗಿ ನೇಮಕಗೊಂಡ ಎಲ್ಲರಿಗೂ ಅಭಿನಂದನೆಗಳು.
Prime Minister Shri Narendra Modi ji #NaMoNavMatData Sammelan will be Live in 5000+ locations on January 25 at 10 AM.
I encourage all the new voters from Karnataka to be a part of the initiative, learn the significance of their right to vote and be part of building a #NewIndia.
Scan the QR Code or give a missed call at 7820078200 to register.
Your first vote matters!
ದೇವದುರ್ಗದಲ್ಲಿ ಶ್ರೀ ಕಾಗಿನೆಲೆ ಕನಕ ಗುರುಪೀಠ ಆಯೋಜಿಸಿದ್ದ ಹಾಲುಮತ ಸಂಸ್ಕೃತಿ ವೈಭವ-2024 ಕಾರ್ಯಕ್ರಮದಲ್ಲಿ ಭಾಗವಹಿಸಿ ಯುವಜನ ಸಮಾವೇಶವನ್ನು ಉದ್ಘಾಟಿಸಲಾಯಿತು. ಈ ನೆಲದ ಜನಪದ ಸಂಸ್ಕೃತಿಗೆ ಬಹುದೊಡ್ಡ ಕೊಡುಗೆ ಕೊಟ್ಟಂತಹ ಹಾಲುಮತ ಸಮಾಜ ಎಂದಿಗೂ ಯಾರಿಗೂ ಎಂದು ಕೆಡುಕು ಬಯಸದೆ, ಸಮಾಜದ ಒಳಿತಿಗಾಗಿ ತನ್ನನ್ನು ಸಮರ್ಪಿಸಿಕೊಂಡ ಸಮುದಾಯವಾಗಿದೆ.
ಕನಕದಾಸರಂತಹ ದಾರ್ಶನಿಕರು ಹುಟ್ಟಿ ಆಧ್ಯಾತ್ಮದ ಬೆಳಕಾಗಿ, ನಾಡಿನ ದಾಸ ಸಾಹಿತ್ಯವನ್ನು ವಿಶ್ವಮಾನ್ಯಗೊಳಿಸಿದರು. ಸಂಗೊಳ್ಳಿ ರಾಯಣ್ಣನಂತಹ ಒಬ್ಬ ವೀರ ಸೇನಾನಿ ಕನ್ನಡ ನಾಡಿನ ಪ್ರತಿಯೊಬ್ಬ ಯುವಜನರಲ್ಲಿ ಸ್ವಾಭಿಮಾನದ ಸಂಕೇತವಾಗಿರುದನ್ನು ಸ್ಮರಿಸಲಾಯಿತು.
ಈ ಸಂದರ್ಭದಲ್ಲಿ ಕಾಗಿನೆಲೆ ಗುರುಪೀಠದ ಪರಮಪೂಜ್ಯ ಶ್ರೀ ನಿರಂಜನಾನಂದಪುರಿ ಶ್ರೀಗಳು, ಪೂಜ್ಯ ಶ್ರೀ ಸಿದ್ದರಾಮಾನಂದ ಶ್ರೀಗಳು, ಪೂಜ್ಯ ಗುರು ಮಹಾಂತ ಶ್ರೀಗಳು, ಕೇಂದ್ರ ಸಚಿವರಾದ ಶ್ರೀ @JoshiPralhad ಅವರು, ಸಂಸದರುಗಳಾದ ಶ್ರೀ ರಾಜಾ ಅಮರೇಶ್ವರ ನಾಯಕ, ಶ್ರೀ ಉಮೇಶ್ ಜಾಧವ್, ಶಾಸಕರುಗಳಾದ ಶ್ರೀ ಮಾನಪ್ಪ ಡಿ ವಜ್ಜಲ್, ಶ್ರೀ ದೊಡ್ಡನಗೌಡ ಪಾಟೀಲ್, ವಿಧಾನ ಪರಿಷತ್ ಸದಸ್ಯರಾದ ಶ್ರೀ ರಘುನಾಥ ಮಲ್ಕಾಪುರೆ ಮಾಜಿ ಶಾಸಕರುಗಳಾದ ಶ್ರೀ ಶಿವನಗೌಡ ನಾಯಕ್, ಶ್ರೀ ಬಂಡೆಪ್ಪ ಕಾಶಪ್ಪನವರ್, ಬಿಜೆಪಿ ರಾಜ್ಯ ಕಾರ್ಯದರ್ಶಿ ಶ್ರೀ ಶರಣು ತಳ್ಳೀಕೆರೆ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.
In the last 9 years, our Hon PM Thiru @narendramodi avl has shown the world what truly is Bharat.
He has shown the West our true culture & heritage, knowledge & capabilities and the scenic beauty of our country.
For those who wish to embrace the adventurer in them, Lakshadweep has to be on your list.
During my stay, I also tried snorkelling - what an exhilarating experience it was!
ಶ್ರೀ ಹಿಮವತ್ ಕೇದಾರ ವೈರಾಗ್ಯ ಪೀಠದ ಜಗದ್ಗುರುಗಳಾದ ಪರಮಪೂಜ್ಯ ಭೀಮಾಶಂಕರ ಶಿವಾಚಾರ್ಯ ಭಗವತ್ಪಾದ ಶ್ರೀಗಳ ಆಶೀರ್ವಾದ ಪಡೆಯಲಾಯಿತು. ಧಾರ್ಮಿಕ ಶ್ರದ್ಧೆ, ಆಧ್ಯಾತ್ಮಿಕ ಚಿಂತನೆ, ಸನಾತನ ಧರ್ಮ ಜಾಗೃತಿಯ ಮೂಲಕ ಸಮಾಜಕ್ಕೆ ಮಾರ್ಗದರ್ಶನ ನೀಡುತ್ತಿರುವ ಶ್ರೀಗಳ ದರ್ಶನ ಭಾಗ್ಯ ನನ್ನಲ್ಲಿನ ಆತ್ಮವಿಶ್ವಾಸ ಹೆಚ್ಚಿಸಿತು.