#TOXICmovie – ಒಂದು ವಿಭಿನ್ನ ಸಿನಿಮಾ ಅನುಭವ! 🔥
ಕನ್ನಡ ಸಿನಿಮಾದಲ್ಲಿ ಈ ರೀತಿಯ ಸೈಕೋ-ಥ್ರಿಲ್ಲರ್ ಕಥೆಯನ್ನು ತೆರೆಗೆ ತರುವುದೇ ಒಂದು ದೊಡ್ಡ ಧೈರ್ಯ. ಸಾಮಾನ್ಯ ಕಥೆಗಳಿಂದ ಹೊರಬಂದು ಹೊಸ ಪ್ರಯೋಗಕ್ಕೆ ಕೈ ಹಾಕಿರುವ ಚಿತ್ರತಂಡಕ್ಕೆ ಮೊದಲು ಒಂದು Hatsoff! 👏
ಇದರ ಜೊತೆಗೆ ಹೆಂಡತಿ, ಮಗು, ಕುಟುಂಬ ಮತ್ತು ಸಂಬಂಧಗಳ ನಡುವಿನ ಸಂಘರ್ಷ — ಇವೆಲ್ಲದರ ನಡುವೆ ತನ್ನದೇ ಆದ ಜಗತ್ತಿನಲ್ಲಿ ಒದ್ದಾಡುವ ಒಬ್ಬ ನಾಯಕನ ಕಥೆ.
ಇದು ಕೇವಲ ಒಬ್ಬ ಹೀರೋನ ಕಥೆಯಲ್ಲ;
ಸಂಬಂಧಗಳು, ಪ್ರೀತಿ, ಬಾಲ್ಯದ ಪ್ರಭಾವ ಮತ್ತು ಮನಸ್ಸಿನೊಳಗಿನ ಸಂಘರ್ಷಗಳ ಕಥೆ.
ಒಂದು ಮಗುವಿನ ಬಾಲ್ಯದಿಂದ ಯವ್ವನದವರೆಗಿನ ಪಯಣ, ಆತನ ಬದುಕಿನಲ್ಲಿ ಬರುವ ವಿಚಿತ್ರವಾದ ಅಮ್ಮನ ಪಾತ್ರ, ಅಮ್ಮನ ಸ್ಥಾನ ತುಂಬುವ ಅಕ್ಕ, ಬದುಕಿನಲ್ಲಿ ನಿಜವಾದ ಪ್ರೀತಿಯ ಅರ್ಥವನ್ನು ಅರಿವು ಮಾಡಿಸುವ ಪ್ರೇಯಸಿ…
ಯಶ್ ಅವರ ಅಭಿನಯ ಅದ್ಭುತ.
ಪಾತ್ರದ ವಿಭಿನ್ನ ಆಯಾಮಗಳನ್ನು ತಮ್ಮ ಅಭಿನಯದ ಮೂಲಕ ಕಟ್ಟಿಕೊಟ್ಟಿರುವ ರೀತಿ ನಿಜಕ್ಕೂ ಗಮನ ಸೆಳೆಯುತ್ತದೆ. ವಿಶೇಷವಾಗಿ ನಾಯಕನ ಮನಸ್ಥಿತಿ, ಒಳಗಿನ ಸಂಘರ್ಷ ಮತ್ತು ಭಾವನೆಗಳನ್ನು ಅವರು ನಿರ್ವಹಿಸಿರುವ ರೀತಿ ಮೆಚ್ಚುವಂತದ್ದು
ಬಡವರ ಮನೆಯ ಒಲೆ ನಿರಂತರ ಉರಿಯುವಂತೆ ಮಾಡುವ ನಿರ್ಧಾರ ಕೈಗೊಂಡ ಯಾವುದೇ ಸರ್ಕಾರವಿರಲಿ ನಾನು ಮುಕ್ತಕಂಠದಿಂದ ಶ್ಲಾಘಿಸುತ್ತೇನೆ.
ಆದರೆ ಬಡತನ ಎನ್ನುವುದು ಅಣಕದ ವಿಚಾರವಾಗ ಕೂಡದು. ದುಡಿಯುವ ಕೈಗಳಿಗೆ ಕೆಲಸ ಒದಗಿಸಿದರೆ ಬಡತನ ಎನ್ನುವುದಕ್ಕೆ ತಿಲಾಂಜಲಿ ಹಾಡಬಹುದು. ಸರಕಾರ ಈ ನಿಟ್ಟಿನಲ್ಲಿ ಗಂಭೀರವಾಗಿ ಯೋಚಿಸಬೇಕು.
1/2
#ಸಮೃದ್ಧಬೈಂದೂರು
ಪಶುವೈದ್ಯಾಧಿಕಾರಿಗಳ ನೇಮಕಕ್ಕೆ ಆಗ್ರಹ!
ಬೈಂದೂರು ಕ್ಷೇತ್ರದಲ್ಲಿ ಸುಮಾರು 80 ಸಾವಿರಕ್ಕೂ ಅಧಿಕ ಜಾನುವಾರುಗಳಿವೆ, ಆದರೆ ಪಶು ವೈದ್ಯಾಧಿಕಾರಿಗಳು ಇರುವುದು ಕೇವಲ ಇಬ್ಬರೇ. ನಿಯಮದ ಪ್ರಕಾರ ನಾಲ್ಕು ಸಾವಿರ ಜಾನುವಾರುಗಳಿಗೆ ಒಬ್ಬ ವೈದ್ಯಾಧಿಕಾರಿ ಇರಬೇಕು. ಆದರೆ ನಮ್ಮ ಕ್ಷೇತ್ರದಲ್ಲಿ 40 ಸಾವಿರಕ್ಕೆ ಒಬ್ಬ ವೈದ್ಯಾಧಿಕಾರಿ ಇದ್ದಾರೆ.
1/2
ಉಡುಪಿ ಜಿಲ್ಲೆಯ ಪರಿಶಿಷ್ಟ ವರ್ಗದ ಬಂಧುಗಳು ಎದುರಿಸುತ್ತಿರುವ ವಸತಿ, ಆರೋಗ್ಯ, ಶಿಕ್ಷಣದ ಸಮಸ್ಯೆ ನಿವಾರಿಸುವ ಕುರಿತು ಕಾಪು ಶಾಸಕರಾದ ಶ್ರೀ @GurmeSuresh ಅವರ ಪರವಾಗಿ ಸದನದಲ್ಲಿ ಪ್ರಸ್ತಾಪಿಸಲಾಯಿತು.
ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ @siddaramaiah ಅವರಿಗೆ ಮರವಂತೆ, ಗಂಗೊಳ್ಳಿ ಭಾಗದ ಕಡಲ್ಕೊರೆತಕ್ಕೆ ತುರ್ತು ನಿಧಿ ಹಾಗೂ ಬೈಂದೂರು ತಾಲೂಕು ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸುವ ಕುರಿತಂತೆ ವಿಶೇಷ ಅನುದಾನಕ್ಕಾಗಿ ಮನವಿಯನ್ನು ಸಲ್ಲಿಸಲಾಯಿತು.
ಮಾನ್ಯ ಮುಖ್ಯಮಂತ್ರಿಗಳು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ.
#ಸಮೃದ್ಧಬೈಂದೂರು
ಹೆಮ್ಮೆಯ ಪ್ರಧಾನ ಮಂತ್ರಿಗಳಾದ ಶ್ರೀ @narendramodi ಜಿ ಅವರಿಗೆ ಪೂರ್ಣ ವಿಶ್ವಾಸವಿದೆ. ಈ ಬಾರಿ ಬಿಜೆಪಿಯ ಗೆಲುವು ನಿಶ್ಚಿತ.
ನಿಮ್ಮೆಲ್ಲರ ಸಹಕಾರದಿಂದ ಬೈಂದೂರಿನಲ್ಲಿ ಗೆಲುವು ನಮ್ಮದಾಗಲಿ, ನಾವೆಲ್ಲರೂ ಸೇರಿ ಬೂತ್ ಗೆಲ್ಲಿಸೋಣ, ಬಿಜೆಪಿ ಗೆಲ್ಲಿಸೋಣ.
#SamvadaWithModi#BJPYeBharavase
ನಮ್ಮೆಲ್ಲರ ಹೆಮ್ಮೆಯ ನವಭಾರತ ಚಾಣಾಕ್ಯ ಶ್ರೀ ಅಮಿತ್ ಶಾ ಅವರನ್ನು ಸ್ವಾಗತಿಸೋಣ.
ಲಕ್ಷ-ಲಕ್ಷ ಸಂಖ್ಯೆಯಲ್ಲಿ ನಾವೆಲ್ಲ ಬಂದು ಸೇರೋಣ, ಬೈಂದೂರು ಕ್ಷೇತ್ರದ ಕಾರ್ಯಕರ್ತರ ಶಕ್ತಿ-ಸಾಮರ್ಥ್ಯವನ್ನು ತೋರಿಸೋಣ, ಬೈಂದೂರಿನಲ್ಲಿ ಮತ್ತೊಮ್ಮೆ ಬಿಜೆಪಿ ಗೆಲ್ಲಿಸೋಣ,
@bjp4byndoor#BJPYeBharavase
ನಿಮ್ಮೆಲ್ಲರ ಪ್ರೀತಿ-ವಿಶ್ವಾಸಕ್ಕೆ ಧನ್ಯವಾದಗಳು.
ನಾವೆಲ್ಲರೂ ಸಂಘಟಿತರಾಗಿ ಭವ್ಯಭಾರತ ನಿರ್ಮಾಣಕ್ಕಾಗಿ ಬೈಂದೂರಿನ ಮನೆ-ಮನಗಳಲ್ಲಿ, ಗ್ರಾಮ-ಗ್ರಾಮಗಳಲ್ಲಿ ಬಿಜೆಪಿಯ ಕಮಲವನ್ನು ಅರಳಿಸೋಣ.
ಈ ಕಾರ್ಯಕ್ಕೆ ನಿಮ್ಮ ಸಹಕಾರ ನಿರಂತರ ನನ್ನೊಂದಿಗಿರಲಿ..
#BJPYeBharavase