Veerashaiva Lingayata Maha Vedike (R.)
ಪ್ರಶಾಂತ್ ಕಲ್ಲೂರ್ ನೇತೃತ್ವದ ವೀರಶೈವ ಲಿಂಗಾಯತ ಮಹಾ ವೇದಿಕೆ, ಕರ್ನಾಟಕ ರಾಜ್ಯದ ಅತಿ ದೊಡ್ಡ ವೀರಶೈವ ಸಮುದಾಯದ ಬಲಿಷ್ಠ ಸಂಘಟನೆಯಾಗಿದೆ.
ಗೌರಿಬಿದನೂರು ನಗರದಲ್ಲಿ ಪ್ರಪ್ರಥಮ ಬಾರಿಗೆ ಶ್ರೀಮದ್ ರಂಭಾಪುರಿ ಭಗವತ್ಪಾದರ ಅಡ್ಡಪಲ್ಲಕ್ಕಿ ಉತ್ಸವಕ್ಕಾಗಿ ಹಗಲಿರುಳು ಶ್ರಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿದ ಅಡ್ಡ ಪಲ್ಲಕ್ಕಿ ಉತ್ಸವ ಸಮಿತಿ ಸದಸ್ಯರಿಗೆ ವೇದಿಕೆ ಕೇಂದ್ರ ಕಚೇರಿಯಲ್ಲಿ ವೇದಿಕೆಯ ರಾಜ್ಯ ಅಧ್ಯಕ್ಷರಾದ ಶ್ರೀ. ಪ್ರಶಾಂತ್ ಕಲ್ಲೂರ್ ರವರು ಗೌರವಪೂರ್ವಕವಾಗಿ ಅಭಿನಂದಿಸಿದರು.
ಕರ್ನಾಟಕ ನ್ಯೂಸ್ ಬೀಟ್ ವಾಹಿನಿಯ 13 ವರ್ಷದ ಯಶಸ್ವಿ ಪಯಣದ ಅಂಗವಾಗಿ, ಸ್ನೇಹಿತರಾದ ನಾಗರಾಜ್ ಅರೆಹೊಳೆ ಅವರ ಆತ್ಮೀಯ ಆಹ್ವಾನದ ಮೇರೆಗೆ 13ರ ಸಂಭ್ರಮದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ವ್ಯವಸ್ಥಾಪಕರು ಹಾಗೂ ಸಂಪಾದಕರು ಆದ ಶ್ರೀ ನಾಗರಾಜ್ ಅರೆಹೊಳೆ ಹಾಗೂ ಶ್ರೀ ವೇಣುಕುಮಾರ್ ರವರಿಂದ ಗೌರವ ಸ್ವೀಕರಿಸಿದ ಸಂದರ್ಭ.
#newsbeat#prashanthkallur
ಕರ್ನಾಟಕ ರತ್ನ, ಸಿದ್ದಗಂಗೆಯ ಸಿದ್ದೀ ಪುರುಷರಾದ ಪರಮಪೂಜ್ಯ ಡಾ.ಶ್ರೀ ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮಿಗಳ ಪುಣ್ಯಸ್ಮರಣೆ ಹಾಗೂ ದಾಸೋಹ ದಿನದಂದು ಭಕ್ತಿಪೂರ್ವಕ ಪ್ರಣಾಮಗಳು. ಸೇವೆ, ಸತ್ಕಾರ್ಯ, ತತ್ವಾದರ್ಶಗಳೊಂದಿಗೆ ತ್ರಿವಿಧ ದಾಸೋಹದ ಮಹಿಮೆಯನ್ನು ವಿಶ್ವಕ್ಕೆ ಸಾರಿದ ಶ್ರೀಗಳ ತತ್ವಗಳು, ಆದರ್ಶಗಳು ಸದಾ ನಮಗೆ ದಾರಿ ದೀಪವಾಗಿವೆ.
ವಿದ್ಯಾರ್ಥಿಗಳ ಶಿಕ್ಷಣಕ್ಕಾಗಿ 3000ಕ್ಕೂ ಅಧಿಕ ಎಕರೆ ಜಮೀನನ್ನು ದಾನ ಮಾಡಿದ ಜ್ಞಾನದಾಸೋಹಿ, ದಾನವೀರ ಶರಣ, ಮಹಾದಾನಿ ಶಿರಸಂಗಿ ಲಿಂಗರಾಜರವರ 165ನೇ ಜಯಂತೋತ್ಸವದ ಶುಭಾಶಯಗಳು....
#ವೀರಶೈವ_ಲಿಂಗಾಯತ_ಮಹಾ_ವೇದಿಕೆ#vlmvedike#sirasangi
ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲ ಸೌಲಭ್ಯ ಅಭಿವೃದ್ಧಿ ಸಚಿವರಾದ ಶ್ರೀ @MBPatil ಅವರಿಗೆ ಜನ್ಮದಿನದ ಶುಭಾಶಯಗಳು.
ತಮ್ಮ ಜನಪರ ಕೆಲಸಗಳು ಮತ್ತು ಅಭಿವೃದ್ಧಿಯ ನಿರಂತರ ಪ್ರಯತ್ನಗಳು ಯಶಸ್ವಿಯಾಗಲಿ. ಭಗವಂತ ನಿಮಗೆ ಆಯುರಾರೋಗ್ಯ ಮತ್ತು ದೀರ್ಘಾಯುಷ್ಯ ಕರುಣಿಸಲಿ.
ಜೆ ಎಸ್ ಎಸ್ ಆಸ್ಪತ್ರೆ , ಮೈಸೂರಿನಲ್ಲಿ ನಡೆದ ನಾಡು ನುಡಿ ಧಾರ್ಮಿಕ ಶೈಕ್ಷಣಿಕ ಸಾಂಸ್ಕೃತಿಕ ಆರೋಗ್ಯ ಕ್ಷೇತ್ರದಲ್ಲಿ ಅಭಿವೃದ್ಧಿಯ ಮಹಾ ಹೊಳೆಯನ್ನೇ ಹರಿಸಿದ ಈ ಯುಗದ ಶ್ರೇಷ್ಠ ಸಂತರಲೊಬ್ಬರಾದ ಶ್ರೀ ಕ್ಷೇತ್ರ ಸುತ್ತೂರಿನ ಡಾ. ಶ್ರೀ.ಶ್ರೀ. ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳವರ 110ನೆಯ ಜಯಂತಿ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದೆ...