@SandeepCR15 ಚಿತ್ರ ಕನಿಷ್ಠ 2.30 ಇರಬೇಕು ಜೊತೆಗೆ ನಾಯಕ, ನಾಯಕಿ ಕಾಲಿನಿಂದ ತಲೆವರೆಗೂ ತೋರಿಸೋದು ಬಿಟ್ಟು ಒಳ್ಳೆ ಚಿತ್ರಕತೆ ಮಾಡೋದು ಕಲಿಬೇಕು, ನಿರ್ದೇಶಕ ಹುಡುಗಿ ಹಿಂದೆ ಸುತ್ತೋದು ಬಿಟ್ಟು ಕತೆ ಹಿಂದೆ ಸುತ್ತಬೇಕು, ಸಂಗೀತಾ ಚಿತ್ರಕ್ಕೆ ತಕ್ಕ ಹಾಗೇ ಇರಬೇಕು ಕೈಗೆ ಸಿಕ್ತು ಅಂತ ಬಾರ್ಸೋದು, ಚಿತ್ರದಲಿ ಶುದ್ಧ ಕನ್ನಡ ಬಳಕೆ ಮಾಡಬೇಕು ...
Only in Karnataka other state people are given the first priority where as locals are treated as third grade citizens
Something to learn from KL and TN .
There are rumours that Telugu Congress politician Y.S. Sharmila Reddy may be nominated for Rajya Sabhe from Karnataka.
Why should an Andhra Pradesh politician be nominated from Karnataka ?
Congress is oppressing the rightful opportunities of Kannadigas.
ಬನ್ನಿ ಬನ್ನಿ... ಎಲ್ಲರೂ ಬೀದಿಗೆ ಇಳಿಯೋಣ, ಲೂಟಿ ಮಾಡಲು ನಮ್ಮವರಿಗೇ ಅವಕಾಶ ಕೇಳೋಣ!
"ಒಕ್ಕಲಿಗರನ್ನು ಸಿಎಂ ಮಾಡದಿದ್ದರೆ ಬೀದಿಗೆ ಇಳಿಯುತ್ತೇವೆ" ಎಂದು ಒಕ್ಕಲಿಗರ ಸಂಘದ ಅಧ್ಯಕ್ಷ ಎಲ್. ಶ್ರೀನಿವಾಸ್ ಅವರು ಗುಡುಗಿದ್ದಾರಂತೆ! ಅಷ್ಟೇ ಯಾಕೆ, ಆಯಾ ಜಾತಿಯ ಮಠದ ಸ್ವಾಮೀಜಿಗಳು ಕೂಡ ಈಗ ಭಕ್ತರ ಉದ್ಧಾರ ಬಿಟ್ಟು, ಸಿಎಂ ಸೀಟಿಗಾಗಿ ಬೀದಿಗೆ ಇಳಿಯಲು ರೆಡಿಯಾಗಿದ್ದಾರಂತೆ!
ವಾಹ್! ಎಂಥಾ ಅದ್ಭುತ ಪ್ರಜಾಪ್ರಭುತ್ವ ನಮ್ಮದು!
ನನ್ನದೊಂದು ವಿನಮ್ರ ಸಲಹೆ: ಕೇವಲ ಒಂದು ಅಥವಾ ಎರಡು ಜಾತಿಯವರು ಯಾಕೆ ಬೀದಿಗೆ ಇಳಿಯಬೇಕು? ಕರ್ನಾಟಕದಲ್ಲಿರುವ ಎಲ್ಲಾ ಜಾತಿ, ಉಪಜಾತಿಗಳವರೂ ದಯವಿಟ್ಟು ಒಟ್ಟಿಗೇ ಬೀದಿಗೆ ಇಳಿದುಬಿಡಿ. ಯಾರೂ ಮನೆಯಲ್ಲಿ ಉಳಿಯಬೇಡಿ. ಎಲ್ಲರೂ ತಮ್ಮ ತಮ್ಮ ಜಾತಿಯ ಲೀಡರ್ನನ್ನೇ ಮುಖ್ಯಮಂತ್ರಿ ಮಾಡಬೇಕು ಎಂದು ಹಠ ಹಿಡಿಯಿರಿ.
ಯಾಕೆ ಗೊತ್ತಾ?
ರಾಜ್ಯದ ರಸ್ತೆಗಳು ಗುಂಡಿ ಬಿದ್ದಿದ್ದರೆ ಪರವಾಗಿಲ್ಲ, ನಿರುದ್ಯೋಗ ತಾಂಡವವಾಡುತ್ತಿದ್ದರೆ ನಮಗೇನು, ಬಡವನಿಗೆ ಹೊಟ್ಟೆಗೆ ಹಿಟ್ಟಿಲ್ಲದಿದ್ದರೆ ಹರಕೆಯಿಲ್ಲ... ನಮ್ಮ ಜಾತಿಯ ಲೀಡರ್ ಸಿಎಂ ಕುರ್ಚಿಯ ಮೇಲೆ ಕೂರಬೇಕು, ಅಷ್ಟೇ! ಅವನು ಕೂತು ಏನು ಮಾಡಬೇಕು? "ಅವರವರ ಜಾತಿ ಲೀಡರ್ ನಮಗೆ ಮುಖ್ಯಮಂತ್ರಿ ಸಿಕ್ಕರೆ, ಅವರು ಮನಸಾರೆ ಲೂಟಿ ಮಾಡಲು ನಾವೇ ಸ್ವತಃ ಅವಕಾಶ ಮಾಡಿಕೊಟ್ಟ ಹಾಗೆ ಆಗುತ್ತದೆ
ಸ್ವಾಮಿಗಳೇ ಮತ್ತು ಸಂಘದ ನಾಯಕರೇ, ನಿಮ್ಮ ಈ 'ಬೀದಿ ಹೋರಾಟ' ರಾಜ್ಯದ ಅಭಿವೃದ್ಧಿಗಾ? ಅಥವಾ ನಿಮ್ಮ ಜಾತಿಯ ಲೀಡರ್ ಕೋಟಿ ಕೋಟಿ ಲೂಟಿ ಹೊಡೆದು, ಅದರಲ್ಲಿ ಒಂದಿಷ್ಟು ಪಾಲು ನಿಮ್ಮ ಮಠಗಳಿಗೂ, ನಿಮ್ಮ ಸಂಘಗಳಿಗೂ ತಲುಪಲಿ ಎಂಬ ದೂರದೃಷ್ಟಿಗಾ?
ಪ್ರಜೆಗಳಿಗೆ ರಸ್ತೆ, ನೀರು, ಉದ್ಯೋಗ, ಆರೋಗ್ಯ ಮುಖ್ಯವಲ್ಲ; ನಾಯಕರಿಗೆ ಅಧಿಕಾರ ಮತ್ತು ಹಣ ಮುಖ್ಯ. ಅದಕ್ಕೆ ಜಾತಿಯ ಮುಖವಾಡ ತೊಡಿಸಿ ಜನರನ್ನು ರೊಚ್ಚಿಗೆಬ್ಬಿಸುವುದು ಎಷ್ಟು ಸುಲಭ ಅಲ್ವಾ?
ಇನ್ನು ಮುಂದೆ ಚುನಾವಣಾ ಪ್ರಣಾಳಿಕೆಯಲ್ಲಿ "ನಾವು ಇಷ್ಟು ಉದ್ಯೋಗ ಕೊಡುತ್ತೇವೆ, ರಸ್ತೆ ಮಾಡುತ್ತೇವೆ" ಎಂದು ಬರೆಯುವುದನ್ನು ನಿಲ್ಲಿಸಿ. ಬದಲಿಗೆ: "ನಾವು ಇಂತಿಷ್ಟು ವರ್ಷ ನಿಮ್ಮ ಜಾತಿಯವರಿಗೆ ಲೂಟಿ ಮಾಡಲು ಮುಕ್ತ ಅವಕಾಶ ನೀಡುತ್ತೇವೆ" ಎಂದು ಬರೆದುಕೊಳ್ಳಿ. ಜನರಿಗೂ ನಿರಾಳ, ನಿಮಗೂ ನಿರಾಳ.
ಬನ್ನಿ, ಜಾತಿಯ ಹೆಸರಿನಲ್ಲಿ ರಾಜ್ಯವನ್ನು ಮತ್ತಷ್ಟು ಹರಾಜು ಹಾಕೋಣ!
ಇಷ್ಟೆಲ್ಲಾ ನಾಟಕಗಳನ್ನು ಕಣ್ಣಾರೆ ನೋಡುತ್ತಿದ್ದರೂ ನಮ್ಮ ಜನರಿಗೆ ಬುದ್ಧಿ ಬರುವುದಿಲ್ಲ ನೋಡಿ, ಅದೇ ದೊಡ್ಡ ದುರಂತ!.
ಒಂದೆಡೆ ವಂಶಪಾರಂಪರ್ಯ ರಾಜಕಾರಣ, ಸ್ವಜನಪಕ್ಷಪಾತ ಮತ್ತು ಜಾತಿ ರಾಜಕಾರಣದ ವಿರುದ್ಧ ಪ್ರಾಮಾಣಿಕವಾಗಿ, ರಾತ್ರಿ-ಹಗಲು ಎನ್ನದೆ ಹೋರಾಡುತ್ತಿರುವ KRS (ಕರ್ನಾಟಕ ರಾಷ್ಟ್ರ ಸಮಿತಿ) ಪಕ್ಷ ಕಣ್ಣೆದುರಿಗೇ ಇದೆ. ಲಂಚ ಮುಕ್ತ, ಜಾತಿ ಮುಕ್ತ ಕರ್ನಾಟಕ ಕಟ್ಟುತ್ತೇವೆ ಎಂದು ಅವರು ಒದ್ದಾಡುತ್ತಿದ್ದರೆ, ನಮ್ಮ ಜನ ಮಾತ್ರ ಅವರನ್ನು ಗೆಲ್ಲಿಸದೆ ಮೂಲೆಗೆ ಕೂರಿಸಿದ್ದಾರೆ.
KRS ಪಕ್ಷವನ್ನು ಯಾಕೆ ಗೆಲ್ಲಿಸಲಿಲ್ಲ ಗೊತ್ತಾ?
ಅಲ್ಲಿ ಜಾತಿಯ ತಕ್ಕಡಿ ಇಲ್ಲ, ಅಲ್ಲಿ ಹಣದ ಹಂಚಿಕೆ ಇಲ್ಲ, ಅಲ್ಲಿ "ನಮ್ಮ ಜಾತಿಯವನಿಗೆ ಲೂಟಿ ಮಾಡಲು ಬಿಡಿ" ಎನ್ನುವ ಅಜೆಂಡಾ ಇಲ್ಲ.
ನಮಗೆ ಪ್ರಾಮಾಣಿಕತೆ ಬೇಡ, ಭ್ರಷ್ಟಾಚಾರ ಮುಕ್ತ ಆಡಳಿತ ಬೇಡ. ನಮಗೆ ಬೇಕಿರುವುದು ನಮ್ಮ ಜಾತಿಯ ನಾಯಕ, ಅವನು ಎಷ್ಟೇ ಲೂಟಿ ಹೊಡೆದರೂ ನಮ್ಮವನೇ ಎಂಬ ಅಹಂಕಾರ.
KRS ಪಕ್ಷದಂತಹ ಪ್ರಾಮಾಣಿಕ ಪ್ರಯತ್ನಗಳನ್ನು ಸೋಲಿಸಿ, ಇವತ್ತು ಜಾತಿ ಸಂಘಟನೆಗಳ ಮತ್ತು ಮಠಾಧೀಶರ ಕಾಲಿಗೆ ಬಿದ್ದು "ನಮ್ಮ ಜಾತಿಗೆ ಸಿಎಂ ಸೀಟು ಕೊಡಿ" ಎಂದು ಭಿಕ್ಷೆ ಬೇಡುವ ಸ್ಥಿತಿಗೆ ತಲುಪಿದ್ದೀವಿ ಎಂದರೆ ತಪ್ಪು ಯಾರದ್ದು?
ಯಾವಾಗ ಪ್ರಜೆಗಳು ಯೋಗ್ಯತೆ, ಪ್ರಾಮಾಣಿಕತೆ ನೋಡಿ ವೋಟ್ ಹಾಕುವುದನ್ನು ಬಿಟ್ಟು, ಜಾತಿ ಮತ್ತು ಹಣ ನೋಡಿ ಮುಖಂಡರನ್ನು ಆರಿಸುತ್ತಾರೋ, ಆವಾಗ ಇಂತಹ "ಬೀದಿಗೆ ಇಳಿಯುವ" ನಾಟಕಗಳು ಸಾಮಾನ್ಯವಾಗುತ್ತವೆ.
ಪ್ರಾಮಾಣಿಕ ರಾಜಕಾರಣವನ್ನು ಕಡೆಗಣಿಸಿ, ಜಾತಿ ರಾಜಕಾರಣದ ಬೆನ್ನು ಬಿದ್ದಿರುವ ಕನ್ನಡಿಗರಿಗೆ ಈಗ ಸಿಗುತ್ತಿರುವ ನಾಯಕರ ದೊಂಬರಾಟ ಕಾಣುತ್ತವೆ.
ಈಗಲಾದರೂ ಬದಲಾಗಿ
ಈಗಲ್ಲದೆ ಮತ್ತೆ ಯಾವಾಗ?
ನೀವಲ್ಲದೆ ಮತ್ಯಾರು?
ರವಿಕುಮಾರ್ ಎಂ ನ್ಯಾಯಾವಾದಿ
ರಾಜ್ಯ ಸಂಘಟನಾ ಕಾರ್ಯದರ್ಶಿ KRS ಪಕ್ಷ
#ಜಾತಿರಾಜಕಾರಣ #ಸಿಎಂಕುರ್ಚಿ #ಲೂಟಿಕೊಡಿ #ಕರ್ನಾಟಕರಾಜಕೀಯ #ಬೀದಿಹೋರಾಟ #CastePolitics #KarnatakaPolitics #WakeUpKarnataka #SatireOnPolitics
Tv9Kannada #ಸಿಎಂಕುರ್ಚಿ #ಕರ್ನಾಟಕರಾಜಕೀಯ #KarnatakaPolitics
ಕನ್ನಡಿಗರ ಸಂಸ್ಕೃತಿ ಕದ್ದು ಮರಾಠಿ ಸಂಸ್ಕೃತಿ ಅಂತ್ ಬಿಂಬಿಸುತ್ತಿರುವ tanishq's Jwellers
ಕನ್ನಡಿಗರೇ ಸುಮ್ಮನೆ ಕೂತರೆ ನಮ್ಮ ಅಸ್ತಿತ್ವ ಅಳಿಸಿ ಹೋಗುತ್ತೆ
ಇದನ್ನ ಸರಿಪಡಿಸದೆ ಹೋದರೆ
#bycott_tanishq#bycott_tanishq_Jwellers
ಕಾಫಿ ಬೋರ್ಡು ಇರುವುದು ಬೆಂಗಳೂರಿನಲ್ಲಿ, ಈ ಕಾಫಿ ಪುಡಿ ಮಾರಾಟವಾಗುತ್ತಿರುವುದು ಕರ್ನಾಟಕದಲ್ಲಿ, ಈ ಕಾಫಿಯನ್ನು ಬೆಳೆದಿರುವುದು ಹಿಂದಿಯೇತರರ ರಾಜ್ಯಗಳಲ್ಲಿ. ಕಾಫಿಬೋರ್ಡಿಗೆ ಹಣಕಾಸಿನ ಬೆಂಬಲ ಸಿಗುವುದೇ ನಮ್ಮ ರಾಜ್ಯಗಳಲ್ಲಿ ಬೆಳೆದ ಕಾಫಿ ಮೇಲಿನ ಸೆಸ್ ಮೂಲಕ. ಆದರೆ ಕಾಫಿ ಪುಡಿ ಪೊಟ್ಟಣದ ಮೇಲೆ ಉತ್ತರದ ಹಿಂದಿಯಿದೆ, ಕನ್ನಡಕ್ಕೆ ಜಾಗವಿಲ್ಲ.
Is it wrong to ask for service in Kannada in Karnataka? At Phoenix MarketCity game zone, staff refused, saying “only Hindi.” A supervisor then shouted at me, questioned my identity, and asked for proof I’m from Bengaluru. @PLEKarnataka@karnatabala@rajanna_rupesh@Kannadiga71