ನೂತನ ಪುಸ್ತಕ ಮಳಿಗೆ ಉದ್ಘಾಟನಾ ಸಮಾರಂಭ ಹಾಗೂ ರಂಗಭೂಮಿ ಗ್ರಂಥಾಲಯ, ವಾಚನಾಲಯ ರಂಗಭೂಮಿಯ ಅಪರೂಪದ ಛಾಯಚಿತ್ರಗಳ ಗ್ಯಾಲರಿ ಉದ್ಘಾಟನೆ ಹಾಗೂ ಮಂಡ್ಯ ಮತ್ತು ಬಳ್ಳಾರಿ ಜಿಲ್ಲೆಗಳ ರಂಗಭೂಮಿ ಕೃತಿಗಳ ಅನಾವರಣ ಕಾರ್ಯಕ್ರಮದ ಆಹ್ವಾನ ಪತ್ರಿಕೆ.
ಕರ್ನಾಟಕ ನಾಟಕ ಅಕಾಡೆಮಿಯವತಿಯಿಂದ ಬೆಂಗಳೂರಿನ ರಂಗಚಕ್ರ ತಂಡದ ನಿರ್ವಹಣೆಯಲ್ಲಿ ನಾಟ್ಕ, ಬೆಂಗಳೂರು ಸಹಕಾರದೊಂದಿಗೆ ದಿನಾಂಕ 06 ಸೆಪ್ಟಂಬರ್ 2025 ಶನಿವಾರ ಸಂಜೆ 5.00 ಗಂಟೆಗೆ ಜಾನಪದ ಗಾಯಕರು ಹಾಗೂ ರಂಗಕರ್ಮಿಗಳಾದ "ಶ್ರೀ ಪಿಚ್ಚಳ್ಳಿ ಶ್ರೀನಿವಾಸ" ಅವರೊಂದಿಗೆ "ರಂಗಸಂವಾದ-08" ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಸ್ಥಳ : ರಂಗಚಾವಡಿ,
ಕರ್ನಾಟಕ ನಾಟಕ ಅಕಾಡೆಮಿಯ ತಿಂಗಳ ನಾಟಕ ಸಂಭ್ರಮ ಯೋಜನೆಯಡಿಯಲ್ಲಿ ದಿನಾಂಕ : 16.08.2025 ರಂದು ಸಂಜೆ 6.30 ಕ್ಕೆ ಕಲಾಗ್ರಾಮದ ಸಮುಚ್ಛಯ ಭವನದಲ್ಲಿ ಪರಿವರ್ತನ ರಂಗ ಸಮಾಜ, ಮೈಸೂರು ತಂಡವು ಪ್ರೋ. ಎಸ್ ಆರ್ ರಮೇಶ್ ರವರ ವಿನ್ಯಾಸ ಮತ್ತು ನಿರ್ದೇಶನದಲ್ಲಿ "ಮೂರನೇ ಕಿವಿ" ನಾಟಕ ಪ್ರದರ್ಶನ ನೀಡಿತು.
ತಿಂಗಳ ನಾಟಕ ಸಂಭ್ರಮ ಕಾರ್ಯಕ್ರಮದಲ್ಲಿ ದಿನಾಂಕ : 16.08.2025 ರಂದು ಸಂಜೆ 6.30 ಕ್ಕೆ ಸಮುಚ್ಛಯ ಭವನ, ಕಲಾಗ್ರಾಮ, ಮಲ್ಲತ್ತಹಳ್ಳಿಯಲ್ಲಿ
ಪರಿವರ್ತನ ರಂಗ ಸಮಾಜ, ಮೈಸೂರು ತಂಡವು
"ಮೂರನೇ ಕಿವಿ" ನಾಟಕ ಪ್ರದರ್ಶನ ನೀಡುತ್ತಿದೆ.
ತಿಂಗಳ ಅತಿಥಿಯಾಗಿ ಪ್ರಜಾವಾಣಿ ದಿನಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕರಾದ "ಶ್ರೀ ರವೀಂದ್ರ ಭಟ್" ರವರು
ಕರ್ನಾಟಕ ನಾಟಕ ಅಕಾಡೆಮಿಯ
ತಿಂಗಳ ನಾಟಕ ಸಂಭ್ರಮ ಕಾರ್ಯಕ್ರಮದಲ್ಲಿ ದಿನಾಂಕ : 19.07.2025 ರಂದು ಸಂಜೆ 6.30 ಕ್ಕೆ ಸಮುಚ್ಛಯ ಭವನ, ಕಲಾಗ್ರಾಮ, ಮಲ್ಲತ್ತಳ್ಳಿ ಇಲ್ಲಿ
ತರಳಬಾಳು ಕಲಾಸಂಘ, ಸಿರಿಗೆರೆ ತಂಡವು
ಸ್ವಾತಂತ್ರ್ಯದ ಓಟ ನಾಟಕ ಪ್ರದರ್ಶನ ನೀಡುತ್ತಿದೆ.
ತಿಂಗಳ ಅತಿಥಿ : "ಶ್ರೀ ಕಾ ತ ಚಿಕ್ಕಣ್ಣ" ನವರು ನಮ್ಮೊಂದಿಗಿರುತ್ತಾರೆ.
ಕರ್ನಾಟಕ ನಾಟಕ ಅಕಾಡೆಮಿಯು ನಮ್ಮನ್ನಗಲಿದ ಹಿರಿಯ ರಂಗಭೂಮಿ ಕಲಾವಿದೆ ಮತ್ತು ಪ್ರತಿಷ್ಠಿತ ಗುಬ್ಬಿ ವೀರಣ್ಣ ಪ್ರಶಸ್ತಿ ಪುರಸ್ಕೃತರಾದ ಶ್ರೀಮತಿ ಥೆರೇಸಮ್ಮ ಡಿಸೋಜ ಅವರಿಗೆ ದಿನಾಂಕ 16.06.2025ರಂದು ಸಂಜೆ 4.00ಕ್ಕೆ ನಯನ ಸಭಾಂಗಣದಲ್ಲಿ ನುಡಿ ರಂಗ ನಮನ ಕಾರ್ಯಕ್ರಮವನ್ನು ಆಯೋಜಿಸುತ್ತಿದೆ.
ಸರ್ವರಿಗೂ ಆತ್ಮೀಯ ಆಮಂತ್ರಣ
ಮೈಸೂರಿನ ಕಲಾಮಂದಿರ ಆವರಣದ ಕಿರು ರಂಗಮಂದಿರದಲ್ಲಿ ದಿನಾಂಕ : 25/05/2025 ಭಾನುವಾರ ನಡೆದ
"ಆಧುನಿಕ ಕನ್ನಡ ರಂಗಭೂಮಿ ಪ್ರಯೋಗಶೀಲತೆ"
ವಿಷಯವನ್ನು ಕುರಿತ ಒಂದು ದಿನದ ರಾಜ್ಯ ಮಟ್ಟದ ವಿಚಾರ ಸಂಕಿರಣದ ಚಿತ್ರಗಳು.
"ಆಧುನಿಕ ಕನ್ನಡ ರಂಗಭೂಮಿ ಪ್ರಯೋಗಶೀಲತೆ"
ವಿಷಯವನ್ನು ಕುರಿತ ಒಂದು ದಿನದ ರಾಜ್ಯ ಮಟ್ಟದ ವಿಚಾರ ಸಂಕಿರಣ
ದಿನಾಂಕ : 25/05/2025 ಭಾನುವಾರ ಬೆಳಗ್ಗೆ 10.30 ರಿಂದ
ಸ್ಥಳ : ಕಿರು ರಂಗಮಂದಿರ, ಕಲಾಮಂದಿರ ಆವರಣ, ಮೈಸೂರು
ಮೈಸೂರು ಜಿಲ್ಲಾ ಹವ್ಯಾಸಿ ರಂಗಕರ್ಮಿಗಳ ವೇದಿಕೆ (ರಿ,) ಸಹಕಾರದೊಂದಿಗೆ
ಮೈಸೂರಿನ ಕಾವಲು ಮನೆ ಸಾಂಸ್ಕೃತಿಕ ಕೇಂದ್ರದ ಆಯೋಜನೆಯಲ್ಲಿ
"ಆಧುನಿಕ ಕನ್ನಡ ರಂಗಭೂಮಿ ಪ್ರಯೋಗಶೀಲತೆ"
ರಾಜ್ಯ ಮಟ್ಟದ ವಿಚಾರ ಸಂಕಿರಣವನ್ನು ಆಯೋಜಿಸುತ್ತಿದೆ.
ದಿನಾಂಕ : 25/05/2025 ಭಾನುವಾರ ಬೆಳಗ್ಗೆ 10.30 ರಿಂದ
ಸ್ಥಳ : ಕಿರು ರಂಗಮಂದಿರ, ಮೈಸೂರು
ಕಿತ್ತೂರು ರಾಣಿ ಚನ್ನಮ್ಮ ಪತ್ರಿಮೆಯಿಂದ ರವೀಂದ್ರ ಕಲಾಕ್ಷೇತ್ರದವರೆಗೆ ತ್ರಿರಂಗ ಮತ್ತು ಡೊಳ್ಳಿನೊಂದಿಗೆ ಕನ್ನಡದ ಪ್ರಸಿದ್ಧ ನಟಿ ಡಾ. ಗಿರಿಜಾ ಲೋಕೇಶ್ ಡಾ. ಮುಖ್ಯ ಮಂತ್ರಿ ಚಂದ್ರುರವರು ಮೆರವಣಿಗೆಭಾಗವಹಿಸಿ ರವೀಂದ್ರ ಕಲಾಕ್ಷೇತ್ರದ ಮೆಟ್ಟಿಲುಗಳ ಮೇಲೆ ಪಾರಿವಾಳಗಳನ್ನು ಬಾನಿಗೆ ಹಾರಿಸುವ ಮೂಲಕ ಮಕ್ಕಳ ರಂಗ ಹಬ್ಬಕ್ಕೆ ಚಾಲನೆ ನೀಡಿದರು.
ತಿಂಗಳ ನಾಟಕ ಸಂಭ್ರಮದ ಯೋಜನೆಯಡಿಯಲ್ಲಿ
ದಿನಾಂಕ 18 ಜನವರಿ 2025 ಶನಿವಾರದಂದು
ನಾಟಕ : "ವಾಲಿವದೆ".
ಪ್ರಸ್ತುತಿ : ಗಜಾನನ ಯುವಕ ಮಂಡಳಿ, ಶೇಷಗಿರಿ
ನಿರ್ದೇಶನ : ಗಣೇಶ್ ಮಂದಾರ್ತಿ
ತಿಂಗಳ ಅತಿಥಿ : ಶ್ರೀ ಶಶಿಧರ್ ಅಡಪ, ಕಲಾ ನಿರ್ದೇಶಕರು, ಬೆಂಗಳೂರು
ಸ್ಥಳ : ಸಮುಚ್ಛಯ ಭವನ, ಕಲಾಗ್ರಾಮ, ಮಲ್ಲತ್ತಹಳ್ಳಿ
*ಸರ್ವರಿಗೂ ಆತ್ಮೀಯ ಸ್ವಾಗತ*
ತಿಂಗಳ ನಾಟಕ ಸಂಭ್ರಮದ ಯೋಜನೆಯಡಿಯಲ್ಲಿ
ದಿನಾಂಕ 21 ಡಿಸಂಬರ್ 2024 ಶನಿವಾರದಂದು
ನಾಟಕ : "ನಿತ್ಯಸಚಿವ".
ಪ್ರಸ್ತುತಿ : ಕರ್ನಾಟಕ ಸಂಘ (ರಿ,) ಮಂಡ್ಯ
ನಿರ್ದೇಶನ : ಪ್ರಮೋದ್ ಶಿಗ್ಗಾಂವ್
ತಿಂಗಳ ಅತಿಥಿ : ಜೆ. ಲೋಕೇಶ್, ಮಾಜಿ ಅಧ್ಯಕ್ಷರು, ಕರ್ನಾಟಕ ನಾಟಕ ಅಕಾಡೆಮಿ
ಸ್ಥಳ : ಸಮುಚ್ಛಯ ಭವನ, ಕಲಾಗ್ರಾಮ, ಮಲ್ಲತ್ತಹಳ್ಳಿ
ಹಾಸ್ಯಬ್ರಹ್ಮ ಶ್ರೀ ನರಸಿಂಹರಾಜುರವರ ಜನ್ಮ ಶತಮಾನೋತ್ಸವ ಅಂಗವಾಗಿ ತುಮಕೂರು ಜಿಲ್ಲೆಯ ಗುಬ್ಬಿ ವೀರಣ್ಣ ಟ್ರಸ್ಟ್ ಸಹಯೋಗದೊಂದಿಗೆ ಗುಬ್ಬಿ ಪಟ್ಟಣದಲ್ಲಿರುವ ಡಾ. ಗುಬ್ಬಿ ವೀರಣ್ಣ ರಂಗಮಂದಿರದಲ್ಲಿ ದಿನಾಂಕ: 25.12.2024 ರಿಂದ 29.12.2024ರವರೆಗೆ 5 ದಿನಗಳ ನಾಟಕೋತ್ಸವವನ್ನು ಆಯೋಜಿಸುತ್ತಿದೆ.
ಎಲ್ಲಾ ರಂಗಾಸಕ್ತರಿಗೂ ಆತ್ಮೀಯ ಸ್ವಾಗತ
ಕರ್ನಾಟಕ ನಾಟಕ ಅಕಾಡೆಮಿಯು ರವೀಂದ್ರ ಕಲಾಕ್ಷೇತ್ರದ ಆವರಣದಲ್ಲಿ 45 ದಿನಗಳ ಪೌರಾಣಿಕ ರಂಗ ತರಬೇತಿ ಶಿಬಿರವನ್ನು ಆಯೋಜಿಸುತ್ತಿದ್ದು ಶಿಬಿರದ ಉದ್ಘಾಟನಾ ಸಮಾರಂಭವನ್ನು ನಯನ ರಂಗಮಂದಿರದಲ್ಲಿ ಹಮ್ಮಿಕೊಳ್ಳಲಾಗಿತ್ತು ಕಾರ್ಯಕ್ರಮಕ್ಕೆ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದ ಎಲ್ಲ ರಂಗಾಸಕ್ತರಿಗೂ ಧನ್ಯವಾದಗಳು.
ಕರ್ನಾಟಕ ನಾಟಕ ಅಕಾಡೆಮಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಮತ್ತು ಕರ್ನಾಟಕ ಸಂಗೀತ ಅಕಾಡೆಮಿಯ ಸಹಯೋಗದೊಂದಿಗೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸಮ್ಮೇಳನಾಧ್ಯಕ್ಷರಾದ ನಾಡೋಜ "ಡಾ. ಗೊ.ರು. ಚನ್ನಬಸಪ್ಪ" ಅವರನ್ನು "ರಂಗಚಾವಡಿ"ಯಲ್ಲಿ ಅಭಿನಂದಿಸಿ ಸಂಭ್ರಮಿಸಿದ ಕ್ಷಣಗಳು. ಕಾರ್ಯಕ್ರಮದ ಯಶಸ್ಸಿಗೆ ಕಾರಣರಾದ ಎಲ್ಲರಿಗೂ ಧನ್ಯವಾದಗಳು.
ಕರ್ನಾಟಕ ನಾಟಕ ಅಕಾಡೆಮಿಯು ರವೀಂದ್ರ ಕಲಾಕ್ಷೇತ್ರದ ಆವರಣದಲ್ಲಿ 45 ದಿನಗಳ ಪೌರಾಣಿಕ ರಂಗ ತರಬೇತಿ ಶಿಬಿರವನ್ನು ಆಯೋಜಿಸುತ್ತಿದ್ದು ಇದೇ 09 ಡಿಸಂಬರ್ 2024 ಸೋಮವಾರ ಬೆಳಗ್ಗೆ 11.30ಕ್ಕೆ ನಯನ ರಂಗಮಂದಿರದಲ್ಲಿ ಶಿಬಿರದ ಉದ್ಗಾಟನಾ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ.
ಸರ್ವರಿಗೂ ಆದರದ ಸುಸ್ವಾಗತ.