ಕರ್ನಾಟಕ ಶಿಲ್ಪಕಲಾ ಅಕಾಡೆಮಿ, ಬೆಂಗಳೂರು ವತಿಯಿಂದ ಮೊದಲ ಬಾರಿಗೆ ದೃಶ್ಯಕಲಾ ಮಹಾವಿದ್ಯಾಲಯ, ದಾವಣಗೆರೆ ಇವರ ಸಹಯೋಗದೊಂದಿಗೆ ವಸತಿಯೊಂದಿಗೆ ಶಿಲ್ಪಕಲಾ ಅಧ್ಯಯನ ಕಾರ್ಯಾಗಾರದ ಉದ್ಘಾಟನಾ ಸಮಾರಂಭವನ್ನು ದಿ:24-08-2026ರಂದು ಬೆಳಗ್ಗೆ:11.00ಗಂಟೆಗೆ ದಾವಣಗೆರೆ ದೃಶ್ಯಕಲಾ ಮಹಾವಿದ್ಯಾಲಯದ ಆವರಣದಲ್ಲಿ ಏರ್ಪಡಿಸಲಾಗಿರುತ್ತದೆ.
ಕರ್ನಾಟಕ ಶಿಲ್ಪಕಲಾ ಅಕಾಡೆಮಿಯ 2024ನೇ ಹಾಗೂ 2025ನೇ ಸಾಲಿನ ಗೌರವ ಪ್ರಶಸ್ತಿ ಮತ್ತು 2024ನೇ ಸಾಲಿನ ಶಿಲ್ಪಶ್ರೀ ಪ್ರಶಸ್ತಿ ಹಾಗೂ ಹತ್ತೊಂಭತ್ತನೇಯ ವಾರ್ಷಿಕ ಶಿಲ್ಪಕಲಾ ಪ್ರದರ್ಶನ-2025ಕ್ಕೆ ಶಿಲ್ಪಕಲಾ ಕೃತಿಗಳನ್ನು ಬಹುಮಾನಕ್ಕೆ ಆಯ್ಕೆ ಮಾಡಲಾಗಿದೆ. ಆಯ್ಕೆಯಾದ ಎಲ್ಲಾ ಹಿರಿಯ ಹಾಗೂ ಕಿರಿಯ ಶಿಲ್ಪಕಲಾವಿದರಿಗೆ ಅಭಿನಂದನೆಗಳು
ಅರ್ಜಿ ಸಲ್ಲಿಸುವ ಕಲಾವಿದರು
ಕೊನೆಯ ದಿನಾಂಕ : ಜನವರಿ 10-2026
ಹೆಚ್ಚಿನ ಮಾಹಿತಿಗಾಗಿ : 080- 22278725 ಸಂಪರ್ಕಿಸಬಹುದಾಗಿದೆ.
ಈ ಲಿಂಕ್ ಮೂಲಕ ಸ್ಪರ್ಧೆಗೆ ಪ್ರವೇಶಾತಿ ಅರ್ಜಿ ಭರ್ತಿ ಪಡೆಯಬಹುದು. ಅಥವಾ ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡಿ ಅರ್ಜಿ ಭರ್ತಿ ಮಾಡಬಹುದು.
https://t.co/jEr7x0dwbC...
ಕರ್ನಾಟಕ ಶಿಲ್ಪಕಲಾ ಅಕಾಡಮಿಯು ತನ್ನ 30 ವರ್ಷ ಪೂರೈಸಿದ ಸಂಭ್ರಮಾಚರಣೆಯಲ್ಲಿ ಹತ್ತೊಂಭತ್ತನೇ ವಾರ್ಷಿಕ ಶಿಲ್ಪಕಲಾ ಪ್ರದರ್ಶನ -2025ರ ಅಂಗವಾಗಿ ಹೊಸ ತಲೆಮಾರಿನ ಶಿಲ್ಪ ಕಲಾವಿದರ ಸೃಜನಶೀಲತೆಯನ್ನು ವಿಶೇಷವಾಗಿ ಗಮನದಲ್ಲಿಟ್ಟು ಕೊಂಡು ಪ್ರಥಮ ಬಾರಿಗೆ ಪ್ರತಿಷ್ಠಾಪನಾ ಕಲಾ ಪ್ರದಶನಕ್ಕೆ ರಾಜ್ಯದ ಎಲ್ಲಾ ಕಲಾವಿದರಿಂದ ಅರ್ಜಿಯನ್ನು ಅಹ್ವಾನಿಸಲಾಗಿದೆ
ಕರ್ನಾಟಕ ಶಿಲ್ಪಕಲಾ ಅಕಾಡೆಮಿ ಹಾಗೂ ತೋಟಗಾರಿಕೆ ಇಲಾಖೆ ಬೆಂಗಳೂರು ಇವರ ಸಹಯೋಗದೊಂದಿಗೆ ದಿನಾಂಕ 2.01.2026 ರಿಂದ 17.01.2026 ರ ವರೆಗೆ ಲಾಲ್ ಬಾಗ್ ಬೆಂಗಳೂರು ಇಲ್ಲಿ ಎರಡನೇ ರಾಷ್ಟ್ರೀಯ ಮರಕೆತ್ತನೆ ಶಿಲ್ಪ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ.
ನಾಡಹಬ್ಬ ಮೈಸೂರು ದಸರಾ ಮಹೋತ್ಸವ-2025ಅಂಗವಾಗಿ ದಸರಾ ಲಲಿತಕಲೆ ಹಾಗೂ ಕರಕುಶಲ ಕಲೆ ಉಪಸಮಿತಿ, ಕರ್ನಾಟಕ ಶಿಲ್ಪಕಲಾ ಅಕಾಡೆಮಿ ಹಾಗೂ ಚಾಮರಾಜೇಂದ್ರ ಸರ್ಕಾರಿ ದೃಶ್ಯಕಲಾ ಕಾಲೇಜು (ಕಾವಾ), ಮೈಸೂರು ಸಹಯೋಗದೊಂದಿಗೆ ಟೆರಾಕೋಟಾ ಭಿತ್ತಿ ಶಿಲ್ಪಕಲಾ ಶಿಬಿರವನ್ನು ಮೈಸೂರು ಇಲ್ಲಿ ದಿ:02-09-2025 ರಿಂದ ದಿ:08-09-2025ರವರೆಗೆ ಏರ್ಪಡಿಸಲಾಗುತ್ತಿದೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು ವತಿಯಿಂದ
ಅಂತಾರಾಷ್ಟ್ರೀಯ ಬೂಕರ್ ಪ್ರಶಸ್ತಿ ಪುರಸ್ಕೃತರಾದ ಶ್ರೀಮತಿ ಬಾನು ಮುಷ್ತಾಕ್ ಹಾಗೂ ಶ್ರೀಮತಿ ದೀಪಾ ಭಾಸ್ತಿ ರವರಿಗೆ ಅಭಿನಂದನಾ ಸಮಾರಂಭವನ್ನು ದಿನಾಂಕ : 02-06-2025ರ ಸೋಮವಾರದಂದು ಬೆಳಗ್ಗೆ: 11.00 ಗಂಟೆಗೆ ಬ್ಯಾಂಕ್ವೆಟ್ ಹಾಲ್, ವಿಧಾನಸೌಧ ಬೆಂಗಳೂರು ಇಲ್ಲಿ ಆಯೋಜಿಸಲಾಗಿದೆ.
ಅದಲ್ಲದೇ ದಿ:08-04-2025ರಂದು ಕಲಾಕೃತಿ ರಚನೆ ವಿವಿಧ ಮಾಧ್ಯಮಗಳು ಹಾಗೂ ಸಮಕಾಲೀನ ಶಿಲ್ಪಕಲೆಯೆ ವೈವಿಧ್ಯತೆಗಳು ವಿಷಯದ ಕುರಿತು ಉಪನ್ಯಾಸವನ್ನು ಸಹ ಏರ್ಪಡಿಸಲಾಗಿದೆ. ದಯಮಾಡಿ ಸದರಿ ಕಾರ್ಯಕ್ರಮಕ್ಕೆ ತಾವು ಬನ್ನಿ ತಮ್ಮವರನ್ನು ಕರೆತನ್ನಿ.
ವಂದನೆಗಳೊಂದಿಗೆ
ಆಧ್ಯಕ್ಷರು ಮತ್ತು ರಿಜಿಸ್ಟ್ರಾರ್
ಕರ್ನಾಟಕ ಶಿಲ್ಪಕಲಾ ಅಕಾಡೆಮಿ
ಕರ್ನಾಟಕ ಶಿಲ್ಪಕಲಾ ಅಕಾಡೆಮಿ ಹಾಗೂ ದೃಶ್ಯಕಲಾ ಮಹಾವಿದ್ಯಾಲಯ, ದಾವಣಗೆರೆ ವಿಶ್ವವಿದ್ಯಾಲಯ, ದಾವಣಗೆರೆ ಇವರ ಸಹಯೋಗದೊಂದಿಗೆ ದಿ07-04-2025 ರಿಂದ 09-04-2025ರವರೆಗೆ ಕಾಲೇಜಿನಲ್ಲಿ ಅಧ್ಯಯನ ಮಾಡುತ್ತಿರುವ ಶಿಲ್ಪಕಲಾ ವಿದ್ಯಾರ್ಥಿಗಳಿಗೆ ಕಲಿಕಾ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ.
ಕರ್ನಾಟಕ ಶಿಲ್ಪಕಲಾ ಅಕಾಡೆಮಿಯು 2022, 2023ನೇ ಸಾಲಿನ ಗೌರವ ಪ್ರಶಸ್ತಿ, 2023ನೇ ಸಾಲಿನ ಶಿಲ್ಪಶ್ರೀ ಪ್ರಶಸ್ತಿ ಹಾಗೂ ಹದಿನೆಂಟನೇ ವಾರ್ಷಿಕ ಶಿಲ್ಪಕಲಾ ಪ್ರದರ್ಶನ ಹಾಗೂ ಬಹುಮಾನ ವಿತರಣಾ ಸಮಾರಂಭವನ್ನು ದಿ:17-01-2025ರಂದು ಕುವೆಂಪು ಕಲಾಮಂದಿರ, ಚಿಕ್ಕಮಗಳೂರು ಇಲ್ಲಿ ಏರ್ಪಡಿಸಲಾಗುತ್ತಿದೆ. ತಾವು ಬನ್ನಿ ತಮ್ಮವರನ್ನೂ ಕರೆತನ್ನಿ
ಕರ್ನಾಟಕ ಶಿಲ್ಪಕಲಾ ಅಕಾಡೆಮಿಯ 2022ನೇ 2023ನೇ ಸಾಲಿನ ಗೌರವ ಪ್ರಶಸ್ತಿ ಮತ್ತು 2023ನೇ ಸಾಲಿನ ಶಿಲ್ಪಶ್ರೀ ಪ್ರಶಸ್ತಿ ಹಾಗೂ ಹದಿನೆಂಟನೇ ವಾರ್ಷಿಕ ಶಿಲ್ಪಕಲಾ ಪ್ರದರ್ಶನ-2024ಕ್ಕೆ ಶಿಲ್ಪಕಲಾ ಕೃತಿಗಳನ್ನು ಬಹುಮಾನಕ್ಕೆ ಆಯ್ಕೆ ಮಾಡಲಾಗಿದೆ. ಆಯ್ಕೆಯಾದ ಎಲ್ಲಾ ಹಿರಿಯ ಹಾಗೂ ಕಿರಿಯ ಶಿಲ್ಪಕಲಾವಿದರಿಗೆ ಅಭಿನಂದನೆಗಳು
ಶಿಲ್ಪಿ ಶ್ರೀ ಬಸವರಾಜ ಎಸ್ ಬಡಿಗೇರ, ಬೆಂಗಳೂರು ಇವರು ಶಿಲ್ಪಕಲಾ ಕ್ಷೇತ್ರದಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿರುವುದಾಕ್ಕಾಗಿ ಕರ್ನಾಟಕ ಸರ್ಕಾರವು 2024ನೇ ಸಾಲಿನಲ್ಲಿ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದೆ. ಇವರಿಗೆ ಕರ್ನಾಟಕ ಶಿಲ್ಪಕಲಾ ಅಕಾಡೆಮಿಯ ವತಿಯಿಂದ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತದೆ.
ಶಿಲ್ಪಿ ಶ್ರೀ ಅರುಣ್ ಯೋಗಿರಾಜ್, ಮೈಸೂರು ಜಿಲ್ಲೆ ಇವರು ಶಿಲ್ಪಕಲಾ ಕ್ಷೇತ್ರದಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿರುವುದಾಕ್ಕಾಗಿ ಕರ್ನಾಟಕ ಸರ್ಕಾರವು 2024ನೇ ಸಾಲಿನಲ್ಲಿ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದೆ. ಇವರಿಗೆ ಕರ್ನಾಟಕ ಶಿಲ್ಪಕಲಾ ಅಕಾಡೆಮಿಯ ವತಿಯಿಂದ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತದೆ.
ಕರ್ನಾಟಕ ಶಿಲ್ಪಕಲಾ ಅಕಾಡೆಮಿಯ ಅಧ್ಯಕ್ಷರಾಗಿ ಶ್ರೀ ಎಂ.ಸಿ.ರಮೇಶ್ ಅವರು ಗುರುವಾರ ದಿ:13.06.2024ರಂದು ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿರುತ್ತಾರೆ. ಶ್ರೀಯುತರಿಗೆ ಎಲ್ಲಾ ಶಿಲ್ಪಕಲಾವಿದರ ಪರವಾಗಿ ಅಭಿನಂದನೆಗಳು.
ಹಾಗೂ 2023-24ನೇ ಸಾಲಿನ ಪ್ರಶಸ್ತಿಗೆ ಶಿಲ್ಪಿ ಶ್ರೀ ಎಸ್.ಪಿ.ಜಯಣ್ಣಾಚಾರ್, ಚಿಕ್ಕಮಗಳೂರು ಇವರುಗಳನ್ನು ಆಯ್ಕೆ ಮಾಡಲಾಗಿದೆ. ಜಕಣಾಚಾರಿ ಪ್ರಶಸ್ತಿಗೆ ಆಯ್ಕೆಯಾದ ಶಿಲ್ಪಿಗಳಿಗೆ ಕರ್ನಾಟಕ ಶಿಲ್ಪಕಲಾ ಅಕಾಡೆಮಿಯ ವತಿಯಿಂದ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತದೆ.
ಶಿಲ್ಪಕಲಾ ಕ್ಷೇತ್ರದಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿರುವುದಾಕ್ಕಾಗಿ ಕರ್ನಾಟಕ ಸರ್ಕಾರವು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಪ್ರತಿ ವರ್ಷ ಕೊಡಮಾಡುವ ಜಕಣಾಚಾರಿ ಪ್ರಶಸ್ತಿಗೆ 2022-23ನೇ ಸಾಲಿನ ಪ್ರಶಸ್ತಿಗೆ ಶ್ರೀ ಮಹಾದೇವಪ್ಪ ಶಂಭುಲಿಂಗಪ್ಪ ಶಿಲ್ಪಿ, ಚಿತ್ತಾಪುರ, ಕಲಬುರಗಿ ಜಿಲ್ಲೆ
"ನಮ್ಮ ಜಾತ್ರೆ" ಬೆಂಗಳೂರನ್ನು ಸಂಭ್ರಮಿಸೋಣ (ಆಚರಿಸೋಣ) ಡಿಸೆಂಬರ್ 9 ಮತ್ತು 10, ಬೆಳಗ್ಗೆ 11 ರಿಂದ ರಾತ್ರಿ 8.00 ರವರೆಗೆ, ಸ್ಥಳ : ರವೀಂದ್ರ ಕಲಾಕ್ಷೇತ್ರ ಆವರಣ.
ಸರ್ವರಿಗೂ ಸುಸ್ವಾಗತ - ಉಚಿತ ಪ್ರವೇಶ
#ಕನ್ನಡ_ಮತ್ತು_ಸಂಸ್ಕೃತಿ_ಇಲಾಖೆ#ನಮ್ಮ_ಜಾತ್ರೆ#ಬೆಂಗಳೂರು_ಹಬ್ಬ
"ನಮ್ಮ ಜಾತ್ರೆ" ಬೆಂಗಳೂರನ್ನು ಸಂಭ್ರಮಿಸೋಣ (ಆಚರಿಸೋಣ) ಡಿಸೆಂಬರ್ 9 ಮತ್ತು 10, ಬೆಳಗ್ಗೆ 11 ರಿಂದ ರಾತ್ರಿ 8.00 ರವರೆಗೆ, ಸ್ಥಳ : ರವೀಂದ್ರ ಕಲಾಕ್ಷೇತ್ರ ಆವರಣ.
ಸರ್ವರಿಗೂ ಸುಸ್ವಾಗತ - ಉಚಿತ ಪ್ರವೇಶ
#ಕನ್ನಡ_ಮತ್ತು_ಸಂಸ್ಕೃತಿ_ಇಲಾಖೆ#ನಮ್ಮ_ಜಾತ್ರೆ#ಬೆಂಗಳೂರು_ಹಬ್ಬ
"ನಮ್ಮ ಜಾತ್ರೆ" ಬೆಂಗಳೂರನ್ನು ಸಂಭ್ರಮಿಸೋಣ (ಆಚರಿಸೋಣ) ಡಿಸೆಂಬರ್ 9 ಮತ್ತು 10, ಬೆಳಗ್ಗೆ 11 ರಿಂದ ರಾತ್ರಿ 8.00 ರವರೆಗೆ, ಸ್ಥಳ : ರವೀಂದ್ರ ಕಲಾಕ್ಷೇತ್ರ ಆವರಣ.
ಸರ್ವರಿಗೂ ಸುಸ್ವಾಗತ - ಉಚಿತ ಪ್ರವೇಶ
#ಕನ್ನಡ_ಮತ್ತು_ಸಂಸ್ಕೃತಿ_ಇಲಾಖೆ#ನಮ್ಮ_ಜಾತ್ರೆ#ಬೆಂಗಳೂರು_ಹಬ್ಬ