ಕರ್ನಾಟಕ ಸರ್ಕಾರದ ನೂತನ ಅರಣ್ಯ ಸಚಿವರಾಗಿ ನೇಮಕಗೊಂಡಿರುವ @RLR_BTM
ಶ್ರೀ ರಾಮಲಿಂಗಾರೆಡ್ಡಿ ಅಣ್ಣವರಿಗೆ ಹೃತ್ಪೂರ್ವಕ ಅಭಿನಂದನೆಗಳು 💐🙏🏻
ತಮ್ಮ ಅನುಭವ, ಸರಳತೆ ಹಾಗೂ ಜನಪರ ಕಾಳಜಿಯಿಂದ ಅರಣ್ಯ ಇಲಾಖೆಗೆ ಮತ್ತಷ್ಟು ಉತ್ತಮ ದಿಕ್ಕು ನೀಡಲಿ ಎಂದು ಹಾರೈಸುತ್ತೇನೆ.
@DKShivakumar@siddaramaiah@HariprasadBK2
ಉತ್ತರ ಕರ್ನಾಟಕ ಪ್ರವಾಸದ ಭಾಗವಾಗಿ ವಿವಿಧ ಸ್ಥಳಗಳಿಗೆ ಭೇಟಿ ನೀಡಿ ಪ್ರಮುಖ ಯೋಜನೆಗಳನ್ನು ವೀಕ್ಷಿಸಿ ಪರಿಶೀಲನೆಯನ್ನು ನಡೆಸಿದೆ.
🧊ಆಲಮಟ್ಟಿ: ಜಲಾಶಯದ ಉದ್ಯಾನವನಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಾಯಿತು.
🧊ನಾರಾಯಣಪುರ (ಯಾದಗಿರಿ ಜಿಲ್ಲೆ): ನಾರಾಯಣಪುರ ಅಣೆಕಟ್ಟೆಗೆ ಭೇಟಿ ನೀಡಿ, NLBC-SCADA ಗೇಟ್ ಹಾಗೂ SCADA ಕಂಟ್ರೋಲ್ ರೂಮ್ನ ಕಾರ್ಯನಿರ್ವಹಣೆಯನ್ನು ವೀಕ್ಷಿಸಿ ಪರಿಶೀಲಿಸಲಾಯಿತು.
🧊ಮುದ್ದೇಬಿಹಾಳ: ಮುದ್ದೇಬಿಹಾಳ ಪಟ್ಟಣದಲ್ಲಿ ಕೃಷ್ಣಾ ಭಾಗ್ಯ ಜಲ ನಿಗಮ ನಿಯಮಿತ (KBJNL) ವತಿಯಿಂದ ನೂತನವಾಗಿ ನಿರ್ಮಿಸಿರುವ ನೂತನ ಉದ್ಯಾನವನವನ್ನು ಉದ್ಘಾಟಿಸಲಾಯಿತು.
🧊ಕೊಲ್ಲಾರ: HRLIS (ಹೆಬ್ಬಾಳ-ಆಲಮಟ್ಟಿ ಏತನೀರಾವರಿ) ಯೋಜನಾ ಸ್ಥಳಕ್ಕೆ ಭೇಟಿ ನೀಡಿ, HRLIS ಹೆಡ್ ವರ್ಕ್ಸ್ ಕಾಮಗಾರಿಗಳ ಪರಿಶೀಲನೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಮಾಜಿ ಸಚಿವರು ಹಾಗೂ ಶಾಸಕರಾದ ಶ್ರೀ ಶಿವಾನಂದ ಪಾಟೀಲ್, ಬಿಳಗಿ ಶಾಸಕರಾದ ಶ್ರೀ ಜಿ.ಟಿ. ಪಾಟೀಲ್, ಮುದ್ದೇಬಿಹಾಳ ಶಾಸಕರಾದ ಶ್ರೀ ಸಿ. ಎಸ್ ನಾಡಗೌಡ, ಸುರಪುರ ಶಾಸಕರಾದ ಶ್ರೀ ರಾಜಾ ವೇಣುಗೋಪಾಲ ನಾಯಕ, ಬಾಗಲಕೋಟೆ ಶಾಸಕರಾದ ಶ್ರೀ ಉಮೇಶ್ ಹುಲ್ಲಪ್ಪ ಮೇಟಿ, ಮುಖಂಡರಾದ ಶ್ರೀ ಮಹಾಂತೇಶ ಬಿರಾದಾರ, ಶ್ರೀ ಸುರೇಶ ದೇಸಾಯಿ, ಸ್ಥಳೀಯ ಜನಪ್ರತಿನಿಧಿಗಳು, ಕೃಭಾಜನಿನಿ (KBJNL) ಮತ್ತು ನೀರಾವರಿ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
#RamalingaReddy #AlmattiDam #NarayanapuraDam #Muddebihal #Kollar #KBJNL #Karnataka #NorthKarnataka
ಇಂದು ನಮ್ಮ ಶಹಾಪುರದ ಭೀಮರಾಯನಗುಡಿ ಪ್ರವಾಸಿ ಮಂದಿರದಲ್ಲಿ ಮತದಾರರ ವಿಶೇಷ ಪರಿಷ್ಕರಣೆ ( #SIR ) ಗೆ ಚಾಲನೆ ನೀಡಿದೆ.
ಎಲ್ಲಾ ಅರ್ಹ ಮತದಾರರು ಈ ಪ್ರಕ್ರಿಯೆಯಲ್ಲಿ ಪಾಲ್ಗೊಂಡು,ಅಗತ್ಯ ಮಾಹಿತಿ ಹಾಗೂ ದಾಖಲೆಗಳನ್ನು ಸಲ್ಲಿಸಿ,ಮತದಾರರ ಪಟ್ಟಿಯಲ್ಲಿ ಅನಗತ್ಯವಾಗಿ ಹೆಸರು ತಪ್ಪಿಹೋಗದಂತೆ ಎಚ್ಚರ ವಹಿಸಿ...
ಇಂದು ಬೆಂಗಳೂರಿನ ನನ್ನ ಕಚೇರಿಯಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದರಾದ ಶ್ರೀ ಬಿ.ವೈ. ರಾಘವೇಂದ್ರ ಅವರು ಭೇಟಿ ಮಾಡಿ, ತಮ್ಮ ಕ್ಷೇತ್ರದ ವ್ಯಾಪ್ತಿಯ ಪ್ರಮುಖ ನೀರಾವರಿ ಯೋಜನೆಗಳಿಗೆ ಅನುದಾನ ಬಿಡುಗಡೆ ಮಾಡುವಂತೆ ಕೋರಿ ಮನವಿ ಸಲ್ಲಿಸಿದರು.
ಮನವಿಯಲ್ಲಿನ ಪ್ರಮುಖ ವಿಷಯಗಳು:
ತುಂಗಾ ಏತ ನೀರಾವರಿ ಯೋಜನೆ: ಈ ಯೋಜನೆಯ ಆಧುನೀಕರಣ ಹಾಗೂ ಪ್ರವಾಹ ನಿಯಂತ್ರಣ ತಡೆಗೋಡೆ ನಿರ್ಮಾಣಕ್ಕೆ ಅನುದಾನ ಒದಗಿಸುವಂತೆ ಕೋರಿದ್ದಾರೆ.
ವಿದ್ಯುತ್ ಬಿಲ್ ಬಾಕಿ ಪಾವತಿ: ಉಡುಗಣಿ-ತಾಳಗುಂದ ಸೇರಿದಂತೆ 8 ಪ್ರಮುಖ ಏತ ನೀರಾವರಿ ಯೋಜನೆಗಳ ಬಾಕಿ ವಿದ್ಯುತ್ ಬಿಲ್ ಪಾವತಿಗೆ ತುರ್ತು ಅನುದಾನ ಹಾಗೂ ನಿರಂತರ ವಿದ್ಯುತ್ ಸರಬರಾಜಿಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಮನವಿ.
ಸಿದ್ಧಾಪುರ ಏತ ನೀರಾವರಿ ಯೋಜನೆ: ಬೈಂದೂರು ವ್ಯಾಪ್ತಿಯಲ್ಲಿ ಸ್ಥಗಿತಗೊಂಡಿರುವ ಸಿದ್ಧಾಪುರ ಏತ ನೀರಾವರಿ ಯೋಜನೆಯ ಕಾಮಗಾರಿಯನ್ನು ಪುನರಾರಂಭಿಸಲು ಪ್ರತ್ಯೇಕ ಮನವಿ ನೀಡಿದ್ದಾರೆ.
ರಾಜ್ಯದ ಅನ್ನದಾತರ ಹಿತರಕ್ಷಣೆ ನಮ್ಮ ಸರ್ಕಾರದ ಮೊದಲ ಆದ್ಯತೆಯಾಗಿದೆ. ಈ ಎಲ್ಲಾ ಬೇಡಿಕೆಗಳನ್ನು ಸಕಾರಾತ್ಮಕವಾಗಿ ಪರಿಗಣಿಸಲಾಗಿದ್ದು, ತಾಂತ್ರಿಕ ಹಾಗೂ ಆರ್ಥಿಕ ಸಾಧ್ಯತೆಗಳನ್ನು ಪರಿಶೀಲಿಸಿ ಶೀಘ್ರದಲ್ಲೇ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದೇನೆ.
#RamalingaReddy #IrrigationDepartment #KarnatakaGovernment #Shivamogga #WaterResources
@BYRBJP
ಇಂದು ನನ್ನ ಕಚೇರಿಯಲ್ಲಿ ಹಿರಿಯ ನಾಯಕರಾದ ಶ್ರೀ ಎಸ್.ಆರ್. ಪಾಟೀಲ್, ಶ್ರೀ ಅಜಯಕುಮಾರ ಸರನಾಯಕ, ಶ್ರೀ ಜೆ.ಟಿ. ಪಾಟೀಲ ಹಾಗೂ ಶ್ರೀ ಮುತ್ತು ದೇಸಾಯಿ ಅವರ ನೇತೃತ್ವದಲ್ಲಿ ಬಾಗಲಕೋಟೆ ಹಾಗೂ ವಿಜಯಪುರ ಉಭಯ ಜಿಲ್ಲೆಗಳ ನಿಯೋಗವು ಭೇಟಿ ನೀಡಿ ಮನವಿ ಸಲ್ಲಿಸಿತು.
ಪ್ರಮುಖ ಬೇಡಿಕೆಗಳು:
ಮುಳುಗಡೆ ಸಂತ್ರಸ್ತರ ಭೂಸ್ವಾಧೀನ ಪ್ರಕ್ರಿಯೆಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸುವುದು.
ಈ ಹಿಂದೆ ಸರ್ಕಾರ ಘೋಷಿಸಿದಂತೆ ನೀರಾವರಿ ಭೂಮಿಗೆ ಪ್ರತಿ ಎಕರೆಗೆ ₹40 ಲಕ್ಷ ಹಾಗೂ ಖುಷ್ಕಿ ಭೂಮಿಗೆ ಪ್ರತಿ ಎಕರೆಗೆ ₹30 ಲಕ್ಷ ಪರಿಹಾರವನ್ನು ಶೀಘ್ರವಾಗಿ ವಿತರಿಸುವುದು.
ಈ ನ್ಯಾಯಸಮ್ಮತ ಮನವಿಯನ್ನು ಧನಾತ್ಮಕವಾಗಿ ಪರಿಗಣಿಸಲಾಗುವುದು ಹಾಗೂ ಸಂತ್ರಸ್ತರಿಗೆ ಶೀಘ್ರದಲ್ಲೇ ಸೂಕ್ತ ನ್ಯಾಯ ಕೊಡಿಸಲು ಸರ್ಕಾರದ ಮಟ್ಟದಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು.
ಈ ಸಂದರ್ಭದಲ್ಲಿ ಬಾಗಲಕೋಟೆ ಹಾಗೂ ವಿಜಯಪುರ ಜಿಲ್ಲೆಗಳ ಹಲವಾರು ಸಂತ್ರಸ್ತರು ಉಪಸ್ಥಿತರಿದ್ದರು.
#RamalingaReddy #Bagalkot #Vijayapura #FarmersSupport #Karnataka
ಬಿಡದಿ ಟೌನ್ಶಿಪ್ ಬಗ್ಗೆ ಬಿಜೆಪಿ-ಜೆಡಿಎಸ್ ನಾಯಕರ ವಿರೋಧ ನೋಡಿದರೆ ಒಂದು ಪ್ರಶ್ನೆ ಕೇಳಲೇಬೇಕು...
2006ರಲ್ಲಿ ಈ ಯೋಜನೆಗೆ ಚಾಲನೆ ನೀಡಿದ್ದು ಯಾರು?
📌 23.09.2006 ರಂದು ಆಗಿನ ಮುಖ್ಯಮಂತ್ರಿ ಶ್ರೀ ಹೆಚ್.ಡಿ. ಕುಮಾರಸ್ವಾಮಿ ಹಾಗೂ ಉಪಮುಖ್ಯಮಂತ್ರಿ ಶ್ರೀ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಬಿಜೆಪಿ-ಜೆಡಿಎಸ್ ಮೈತ್ರಿ ಸರ್ಕಾರವೇ ಬಿಡದಿ ಸೇರಿದಂತೆ 5 ಸಮಗ್ರ ಟೌನ್ಶಿಪ್ಗಳ ಅಭಿವೃದ್ಧಿಗೆ ತೀರ್ಮಾನ ಕೈಗೊಂಡಿತ್ತು.
📌 18.10.2006 ರಂದು ಅಧಿಕೃತ ಅಧಿಸೂಚನೆ ಹೊರಡಿಸಲಾಯಿತು.
📌 11.06.2007 ರಂದು ಬಿಡದಿ ಟೌನ್ಶಿಪ್ ವ್ಯಾಪ್ತಿಯನ್ನು ಮತ್ತಷ್ಟು ವಿಸ್ತರಿಸಲಾಯಿತು.
📌 ಆ ಅವಧಿಯಲ್ಲಿ ಶ್ರೀ ಆರ್. ಅಶೋಕ್ ಸಚಿವರಾಗಿದ್ದರು.
📌 01.06.2010 ರಂದು ಬಿಜೆಪಿ ಸರ್ಕಾರದ ಅವಧಿಯಲ್ಲಿ ಯೋಜನೆಗಾಗಿ ಮರು ಟೆಂಡರ್ ಕರೆಯಲಾಯಿತು.
📌 26.07.2012 ರಂದು ಶ್ರೀ ಜಗದೀಶ್ ಶೆಟ್ಟರ್ ನೇತೃತ್ವದ ಬಿಜೆಪಿ ಸರ್ಕಾರವೇ ಟೌನ್ಶಿಪ್ ಅನುಷ್ಠಾನಕ್ಕಾಗಿ ಉನ್ನತ ಮಟ್ಟದ ಸಮಿತಿ ರಚಿಸಿತು.
📌 18.05.2020 ರಂದು ಬಿಜೆಪಿ ಸರ್ಕಾರದ ಅವಧಿಯಲ್ಲಿ ಸುಮಾರು 9,000 ಎಕರೆ ಪ್ರದೇಶದಲ್ಲಿ ಸಮಗ್ರ ಟೌನ್ಶಿಪ್ ಅಭಿವೃದ್ಧಿಪಡಿಸುವ ಬಗ್ಗೆ ಸಭೆ ನಡೆಸಿ ನಿರ್ಧಾರ ಕೈಗೊಳ್ಳಲಾಯಿತು. ಆಗಲೂ ಆರ್. ಅಶೋಕ್ ಸಚಿವರಾಗಿದ್ದರು.
📌 04.03.2022ರ ಬಜೆಟ್ನಲ್ಲಿ ಶ್ರೀ ಬಸವರಾಜ ಬೊಮ್ಮಾಯಿ ಸರ್ಕಾರ ಇಂಟಿಗ್ರೇಟೆಡ್ ಟೌನ್ಶಿಪ್ ಅಭಿವೃದ್ಧಿಯನ್ನು ಘೋಷಿಸಿತು.
📌 13.05.2022 ರಂದು ಬಿಜೆಪಿ ಸರ್ಕಾರವೇ ಅನುಷ್ಠಾನಕ್ಕಾಗಿ ಮತ್ತೊಂದು ಉನ್ನತ ಮಟ್ಟದ ಸಮಿತಿ ರಚಿಸಿತು. ಆಗ ಡಾ. ಸಿ.ಎನ್. ಅಶ್ವತ್ಥ ನಾರಾಯಣ ಸರ್ಕಾರದ ಪ್ರಮುಖ ಸಚಿವರಾಗಿದ್ದರು.
ಅಂದಿನ ನಿರ್ಧಾರಗಳು ಅಭಿವೃದ್ಧಿ...
ಇಂದಿನ ಅನುಷ್ಠಾನ ಮಾತ್ರ ತಪ್ಪೇ?
ಸತ್ಯ ಏನೆಂದರೆ, ಬಿಡದಿ ಟೌನ್ಶಿಪ್ ಯಾವುದೇ ಹೊಸ ಯೋಜನೆಯಲ್ಲ. ಕಳೆದ ಎರಡು ದಶಕಗಳಿಂದ ವಿವಿಧ ಸರ್ಕಾರಗಳು ಮುಂದುವರಿಸಿಕೊಂಡು ಬಂದ ಯೋಜನೆ.
ನಮ್ಮ ಸರ್ಕಾರ ರೈತರಿಗೆ ನ್ಯಾಯಸಮ್ಮತ ಪರಿಹಾರ, ಪಾರದರ್ಶಕ ಪ್ರಕ್ರಿಯೆ ಹಾಗೂ ಕಾನೂನುಬದ್ಧ ರಕ್ಷಣೆಗಳೊಂದಿಗೆ ಯೋಜನೆಯನ್ನು ಮುಂದಕ್ಕೆ ತೆಗೆದುಕೊಂಡು ಹೋಗುತ್ತಿದೆ.
ಇತಿಹಾಸವನ್ನು ಅಳಿಸಲು ಸಾಧ್ಯವಿಲ್ಲ. ದಾಖಲೆಗಳು ಮಾತನಾಡುತ್ತವೆ.
ಅಭಿವೃದ್ಧಿಗೆ ಬೆಂಬಲ ನೀಡಿ. ಸುಳ್ಳು ಪ್ರಚಾರವನ್ನು ವಿರೋಧ ಪಕ್ಷಗಳು ನಿಲ್ಲಿಸಬೇಕು.
#RamalingaReddy #Bidadi #BidadiTownship #Congress #BJP #JDS
@hd_kumaraswamy@BSYBJP@RAshokaBJP
RCB - Namma dodda Simhagulu-This is your final step to glory which you have already achieved. Our Lions of Bengaluru fought hard to reach the IPL finals. Now one more Play Bold roar to win the trophy. Good Luck, God Bless you and Roar louder than ever before as the Lions of Bengaluru.
ಎಂಟು ವರ್ಷಗಳ ಕಾಲ ರಾಜ್ಯದ ಬಡವರು, ಜನಸಾಮಾನ್ಯರ ಪರವಾಗಿ ಕಾರ್ಯಕ್ರಮ ರೂಪಿಸಿ ಅದನ್ನು ಸಮರ್ಥವಾಗಿ ಅನುಷ್ಟಾನಗೊಳಿಸಿ ನೂರೆಂಟು ಸಾಧನೆ ಮಾಡಿದ ಶ್ರೀ @Siddaramaiah ಅವರಿಗೆ ಧನ್ಯವಾದಗಳು.
ಕರ್ನಾಟಕ ರಾಜಕೀಯ ಹೊಸ ಬೆಳವಣಿಗೆಗಳಲ್ಲಿ...........
ನಮ್ಮ ನೆಚ್ಚಿನ ನಾಯಕರದ ಶ್ರೀರಾಮಲಿಂಗಾರೆಡ್ಡಿಯವರಿಗೆ ಅತ್ಯುನ್ನತ ಸ್ಥಾನ ಸಿಗಲಿ.. ಅವರು ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಅಭ್ಯರ್ಥಿಯಾಗಿದ್ದು, ಅವರಿಗೆ ಮುಂಬರುವ ದಿನಗಳಲ್ಲಿ ಅತ್ಯುನ್ನತ ಸ್ಥಾನ ಸಿಗಲಿ ಎಂಬುದು ನಮ್ಮೆಲ್ಲರ ಅಭಿಲಾಷೆ 💐🙏
@RLR_BTM@DKShivakumar
ಪ್ರಚಾರಕ್ಕೆ ಅಂಟಿಕೊಳ್ಳದೆ, ವಿಶಿಷ್ಟ ಆಡಳಿತ ನೀಡುವ, ದಿಟ್ಟ ನಾಯಕತ್ವ ಉಳ್ಳ, ಮೇರು ವ್ಯಕ್ತಿತ್ವದ ನಾಯಕ, ಅತ್ಯಂತ ಹಿರಿಯ ರಾಜಕಾರಣಿಯಾಗಿದ್ದು, 8 ಬಾರಿ ಬೆಂಗಳೂರಿನಲ್ಲಿ ಶಾಸಕರಾಗಿ, ಬೆಂಗಳೂರಿನ ಸರ್ವರಿಗೂ ಒಂದಿಲ್ಲ ಒಂದು ರೀತಿ ಸಹಾಯ ಹಸ್ತ ನೀಡಿ, ಮನೆಮಾತಾಗಿರುವ ನಮ್ಮೆಲ್ಲರ ನೆಚ್ಚಿನ ನಾಯಕರು #ramalingareddy ರವರು🙏
Heartiest Birthday wishes to my Leader, dynamic @INCKarnataka (KPCC) President & Deputy Chief Minister of Karnataka Shri @DKShivakumar ji ✨️🎂❤️💐
✨️🎊Wishing Sir the best of health & happiness and more Success & Power to serve the People of Karnataka 🙏🏻🎊
A journey built on loyalty, hard work, and unwavering commitment.
For DK Shivakumar, it has always been Party First, People First, a leader shaped by the struggles of workers, strengthened by the trust of the people and driven by a vision for Karnataka’s progress.
Rooted in the organisation. Rising with the people.