ಟೌನ್ ಶಿಪ್ ಯೋಜನೆಗೆ ಮದ್ಯ ಕರ್ನಾಟಕದ ಹೆಬ್ಬಾಗಿಲು ದಾವಣಗೆರೆಂತಹ ಪ್ರದೇಶಗಳನ್ನು ಪರಿಗಣಿಸಬೇಕು. ಇದರಿಂದ ಸಮತೋಲನದ ಅಭಿವೃದ್ಧಿ ಸಾಧ್ಯವಾಗುತ್ತದೆ.
ಟೌನ್ಶಿಪ್ ಅಭಿವೃದ್ಧಿ ಎನ್ನುವುದು ನಗರೀಕರಣದ ಒಂದು ಭಾಗವಾಗಿದ್ದರೂ, ಅದು ರೈತರ ಹಿತಾಸಕ್ತಿಗಳನ್ನು ಕಡೆಗಣಿಸುವ ರೀತಿಯಲ್ಲಿ ನಡೆಯಬಾರದು. ಅಭಿವೃದ್ಧಿಯ ಹೆಸರಿನಲ್ಲಿ ಫಲವತ್ತಾದ ಕೃಷಿ ಭೂಮಿಯನ್ನು ಬಲವಂತವಾಗಿ ಸ್ವಾಧೀನಪಡಿಸಿಕೊಳ್ಳುವುದು ಸರಿಯಲ್ಲ. ಇದು ರೈತರ ಬದುಕಿನ ಮೇಲೆ ನೇರ ಹೊಡೆತ ನೀಡುವುದಲ್ಲದೆ, ರಾಜ್ಯದ ಆಹಾರ ಭದ್ರತೆಯ ಮೇಲೂ ಪರಿಣಾಮ ಬೀರುತ್ತದೆ.
ಭೂಮಿ ರೈತನಿಗೆ ಕೇವಲ ಸಂಪತ್ತು ಅಲ್ಲ, ಅದು ಅವರ ಜೀವನದ ಆಧಾರ. ಈ ಭೂಮಿಯನ್ನು ಕಳೆದುಕೊಂಡಾಗ ರೈತರು ಉದ್ಯೋಗವಿಲ್ಲದ ಸ್ಥಿತಿಗೆ ತಲುಪುವ ಸಾಧ್ಯತೆ ಇದೆ. ಆದ್ದರಿಂದ, ಟೌನ್ಶಿಪ್ ಯೋಜನೆಗಳನ್ನು ರೂಪಿಸುವಾಗ ಕೃಷಿಗೆ ಅನನುಕೂಲವಾಗದ ಪ್ರದೇಶಗಳನ್ನು ಆಯ್ಕೆ ಮಾಡುವುದು ಅತ್ಯವಶ್ಯಕ.
ಬಿಡದಿ ಪ್ರದೇಶದಂತಹ ಫಲವತ್ತಾದ ಕೃಷಿಭೂಮಿಯನ್ನು ಆಯ್ಕೆ ಮಾಡುವ ಬದಲು, ಅಭಿವೃದ್ಧಿಗೆ ಅನುಕೂಲಕರವಾದ ಹಾಗೂ ಕೃಷಿಗೆ ಕಡಿಮೆ ಹಾನಿಯಾಗುವ ಮದ್ಯ ಕರ್ನಾಟಕದ ಹೆಬ್ಬಾಗಿಲು ದಾವಣಗೆರೆಂತಹ ಪ್ರದೇಶಗಳನ್ನು ಪರಿಗಣಿಸಬೇಕು. ಇದರಿಂದ ಸಮತೋಲನದ ಅಭಿವೃದ್ಧಿ ಸಾಧ್ಯವಾಗುತ್ತದೆ.
ಸರ್ಕಾರವು ಈ ವಿಷಯದಲ್ಲಿ ರೈತರ ಭಾವನೆಗಳನ್ನು ಗೌರವಿಸಿ, ರೈತ ವಿರೋಧಿ ಎಂಬ ಮುದ್ರೆ ಬಾರದಂತೆ ಸೂಕ್ತ ನಿರ್ಧಾರ ಕೈಗೊಳ್ಳಬೇಕು. ಅಭಿವೃದ್ಧಿ ಮತ್ತು ರೈತರ ಹಿತ ಎರಡನ್ನೂ ಸಮಾನವಾಗಿ ಕಾಪಾಡುವುದು ಸರ್ಕಾರದ ಜವಾಬ್ದಾರಿಯಾಗಿದೆ.
#ಎಸ್ಡಿಪಿಐ ಕರ್ನಾಟಕ ರಾಜ್ಯಾಧ್ಯಕ್ಷ #ಅಬ್ದುಲ್ ಮಜೀದ್ ಅವರಿಗೆ ಹೃತ್ತೂರ್ವಕ ಅಭಿನಂದನೆಗಳು.
ಜನರ ಹಕ್ಕು, ನ್ಯಾಯ ಮತ್ತು ಸಮಾನತೆಗಾಗಿ ನಿರಂತರವಾಗಿ ಹೋರಾಡುತ್ತಿರುವ ದಣಿವರಿಯದ ಜನನಾಯಕ ಅಬ್ದುಲ್ ಮಜೀದ್ ಅವರ ಸೇವೆ, ತ್ಯಾಗ ಮತ್ತು ಜನಪರ ಹೋರಾಟಕ್ಕೆ ಸಂದ ಗೌರವವೇ Karnataka TV Leader Award 2025.
ಸಮಾಜದ ಶೋಷಿತರು, ಬಡವರು ಮತ್ತು ಸಾಮಾನ್ಯ ಜನರ ಧ್ವನಿಯಾಗಿ ಸದಾ ನ್ಯಾಯಕ್ಕಾಗಿ ಹೋರಾಡುತ್ತಿರುವ ಅವರ ಬದ್ಧತೆ ಹಾಗೂ ಜನಸೇವೆಯ ಫಲವಾಗಿ ಈ ಪ್ರತಿಷ್ಠಿತ ಪ್ರಶಸ್ತಿ ಲಭಿಸಿರುವುದು ಹೆಮ್ಮೆಯ ಸಂಗತಿ.
ಇನ್ನಷ್ಟು ಜನಸೇವೆ, ನ್ಯಾಯಪರ ಹೋರಾಟ ಮತ್ತು ಸಮಾಜಮುಖಿ ಕಾರ್ಯಗಳಿಗೆ ಈ ಪ್ರಶಸ್ತಿ ಮತ್ತಷ್ಟು ಪ್ರೇರಣೆಯಾಗಲಿ ಎಂದು ಹಾರೈಸುತ್ತೇವೆ. @AbdulMajedSDPI@SDPI_KarPresi
#Congratulations !
#ಬೆಳಗಾವಿಯ ಆಜಂನಗರದ ಯುವಕರು ಕೃಷಿ ಉದ್ದೇಶಕ್ಕಾಗಿ ಖರೀದಿಸಿದ ಎತ್ತನ್ನು ರಾಯಬಾಗಕ್ಕೆ ಕೊಂಡೊಯ್ಯುತ್ತಿದ್ದ ಸಂದರ್ಭದಲ್ಲಿ ಕಾಕತಿ ಗ್ರಾಮದ ಬಳಿ 40-50 ಮಂದಿಯ ಸಂಘಟಿತ ಗೂಂಡಾಗಳ ಗುಂಪು ಮಾರಕ ಆಯುಧಗಳೊಂದಿಗೆ ದಾಳಿ ನಡೆಸಿರುವ ಘಟನೆ ನಾಗರಿಕ ಸಮಾಜ ತಲೆತಗ್ಗಿಸುವಂತಹ ಕೃತ್ಯವಾಗಿದೆ.
ಹಣ, ಮೊಬೈಲ್ ಹಾಗೂ ಎತ್ತನ್ನು ದೋಚಿ, ಯುವಕರನ್ನು ಕ್ರೂರವಾಗಿ ಹಲ್ಲೆ ಮಾಡಿರುವುದು ಕೇವಲ ದಾಳಿಯಲ್ಲ; ಇದು ಸರ್ಕಾರ ಹಾಗೂ ಜಿಲ್ಲೆಯ ಕಾನೂನು ಮತ್ತು ಸುವ್ಯವಸ್ಥೆಯ ವೈಫಲ್ಯ. ರಾಜ್ಯದಲ್ಲಿ ಕಾನೂನಿನ ಆಳ್ವಿಕೆ ಇದೆಯೇ ಅಥವಾ ಗೂಂಡಾಗಳ ಆಳ್ವಿಕೆ ನಡೆಯುತ್ತಿದೆಯೇ ಎಂಬ ಪ್ರಶ್ನೆ ಇಂದು ಸಾರ್ವಜನಿಕರ ಮನಸ್ಸಿನಲ್ಲಿ ಮೂಡಿದೆ.
ಯಾವ ಅಧಿಕಾರದ ಮೇಲೆ ಈ ಗೂಂಡಾಗಳು ತಲ್ವಾರ್ಗಳಂತಹ ಮಾರಕ ಆಯುಧಗಳನ್ನು ಹಿಡಿದು ರಸ್ತೆಗಳ ಮೇಲೆ ಓಡಾಡುತ್ತಿದ್ದಾರೆ? ಇವರಿಗೆ ವಾಹನ ತಡೆದು ಪರೀಕ್ಷಿಸುವ ಅಧಿಕಾರ ನೀಡಿದವರು ಯಾರು? ನಿರಪರಾಧಿಗಳನ್ನು ಅಡ್ಡಗಟ್ಟಿ ಹಲ್ಲೆ ನಡೆಸುವ ಧೈರ್ಯ ಇವರಿಗೆ ಎಲ್ಲಿಂದ ಬರುತ್ತಿದೆ? ಈ ಸಮಾಜಘಾತುಕ ಗೂಂಡಾಗಳಿಗೆ ಕಾನೂನಿನ ಭಯವಿಲ್ಲವೇ? ಪೊಲೀಸ್ ಇಲಾಖೆ ಇಂತಹ ಸಮಾಜಘಾತಕ ಶಕ್ತಿಗಳ ವಿರುದ್ಧ ಮೌನ ವಹಿಸಿರುವುದು ಯಾವ ಕಾರಣಕ್ಕೆ?
ಕಾನೂನನ್ನು ಕೈಗೆತ್ತಿಕೊಂಡು ಸಾರ್ವಜನಿಕರಲ್ಲಿ ಭಯದ ವಾತಾವರಣ ಸೃಷ್ಟಿಸುತ್ತಿರುವ ಈ ಗೂಂಡಾಗಳನ್ನು ಕೂಡಲೇ ಬಂಧಿಸಿ, ಕೊಲೆ ಯತ್ನ, ದರೋಡೆ ಹಾಗೂ ಕಾನೂನುಬಾಹಿರ ಗುಂಪು ಸೇರುವಿಕೆ ಸೇರಿದಂತೆ ಕಠಿಣ ಪ್ರಕರಣಗಳನ್ನು ದಾಖಲಿಸಬೇಕು. ತಪ್ಪಿತಸ್ಥರ ವಿರುದ್ಧ ಮಾದರಿ ಶಿಕ್ಷೆಯಾಗದಿದ್ದರೆ,ಇಂತಹ ದುಷ್ಕೃತ್ಯಗಳು ಮತ್ತಷ್ಟು ಹೆಚ್ಚಾಗುವ ಅಪಾಯವಿದೆ.
@DgpKarnataka@COPBELAGAVI@SPBelagavi@KarnatakaCops@AddlSPBelagavi@ips_patil@IgpNr@CMofKarnataka@DKShivakumar@HMOKarnataka@PriyankKharge
The destruction of around 4,000 EVMs, including VVPATs, in the Alipore Zilla Parishad fire raises serious concerns about electoral transparency. Given their reported use in the recent West Bengal Assembly elections, a thorough and independent investigation under the supervision of the Kolkata High Court is essential to ensure accountability and restore public trust. #SDPI #EVM #VVPAT #ElectoralTransparency #Democracy #ElectionIntegrity #WestBengal #Accountability #PublicTrust #FreeAndFairElections #KolkataHighCourt
ಬೆಳಗಾವಿಯ ಶಹಾಪೂರ ಕುಂತಿ ನಗರದಲ್ಲಿ ವಿದ್ಯುತ್ ಕಂಬ ಅಪಾಯಕರಿಯಾಗಿ ಬಾಗಿ ಬೀಳುವ ಹಂತದಲ್ಲಿರುವದನ್ನು ಹಲವು ಬಾರಿ ದೂರು ನೀಡಿದರು ಯಾವುದೇ ಕ್ರಮ ಕೈಗೊಂಡಿಲ್ಲ ಈ ಸಮಸ್ಯಯಿಂದಾಗಿ ಅನಾಹುತ ಗಳಾದರೆ ಯಾರು ಜವಾಬ್ದಾರರು ಜನರ ಜೀವಕ್ಕೆ ಬೆಲೆ ಇಲ್ಲವೆ? @thekjgeorge@CMofKarnataka@HescomHubli@osd_cmkarnataka
Shamli SP in a video to Aaj Tak Said, Ayush Malik might still be in touch with Religious scholar from Pakistan, Dr. Israr Ahmed.
Israr Ahmad Passed away in 2010.
Young Democrats National Organising Committee Member Adv. Adil M. H.e, Submits Memorandum to CBSE Chairperson Opposing Mandatory Three-Language Policy
#youngdemocrats#cbse#threelanguagepolicy#students
ಸಕಲೇಶಪುರ ಭೇಟಿ – ಕಾರ್ಯಕರ್ತರ ಸಮಾವೇಶ ಯಶಸ್ವಿ | ಸಂಘಟನೆಯ ಬಲವರ್ಧನೆಗೆ ದಿಟ್ಟ ಹೆಜ್ಜೆ
ಇಂದು (07/06/2026) ಹಾಸನ ಜಿಲ್ಲೆಯ ಸಕಲೇಶಪುರ ವಿಧಾನಸಭಾ ಕ್ಷೇತ್ರ ಸಮಿತಿ ವತಿಯಿಂದ ದೋಣಿಗಲ್ ನೂರಾನಿ ಶಾದಿ ಮಹಲ್ನಲ್ಲಿ ಆಯೋಜಿಸಲಾದ ಕಾರ್ಯಕರ್ತರು ಹಾಗೂ ಸದಸ್ಯರ ಸಮಾವೇಶದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸುವ ಅವಕಾಶ ದೊರೆಯಿತು. ಈ ಸಮಾವೇಶವು ಉತ್ಸಾಹಭರಿತ ಹಾಗೂ ಕಾರ್ಯೋನ್ಮುಖ ವಾತಾವರಣದಲ್ಲಿ ಯಶಸ್ವಿಯಾಗಿ ನೆರವೇರಿತು.
ಈ ಕಾರ್ಯಕ್ರಮವು ಕೇವಲ ಸಾಮಾನ್ಯ ಸಭೆಯಾಗಿರದೆ, ಮುಂಬರುವ ಎಲ್ಲಾ ಚುನಾವಣೆಗಳನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಪಕ್ಷದ ಸಂಘಟನೆಯನ್ನು ಇನ್ನಷ್ಟು ಬಲಪಡಿಸುವುದು, ಕಾರ್ಯಕರ್ತರಲ್ಲಿ ಹೊಸ ಉತ್ಸಾಹ ತುಂಬುವುದು ಹಾಗೂ ಜನರ ವಿಶ್ವಾಸವನ್ನು ಮತ್ತಷ್ಟು ಗಟ್ಟಿಗೊಳಿಸುವ ಉದ್ದೇಶದಿಂದ ರೂಪಿಸಲಾದ ಸಮಗ್ರ ವೇದಿಕೆಯಾಗಿತ್ತು.
ಸಭೆಯಲ್ಲಿ ಚುನಾವಣೆಯ ಮಹತ್ವವನ್ನು ವಿವರವಾಗಿ ಪ್ರಸ್ತಾಪಿಸಿ, Voters Mapping, Booth Management, ಮತದಾರರೊಂದಿಗೆ ನೇರ ಸಂಪರ್ಕ ನಿರ್ಮಾಣ ಹಾಗೂ ಸಂಘಟಿತ ಕಾರ್ಯತಂತ್ರಗಳ ಬಗ್ಗೆ ಆಳವಾದ ಮಾರ್ಗದರ್ಶನ ನೀಡಲಾಯಿತು. ಪ್ರತಿಯೊಬ್ಬ ಕಾರ್ಯಕರ್ತನು ತನ್ನ ಬೂತ್, ವಾರ್ಡ್ ಮತ್ತು ಗ್ರಾಮ ಮಟ್ಟದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು, ಮನೆ ಮನೆಗೆ ಭೇಟಿ ನೀಡಿ ಪಕ್ಷದ ತತ್ವಗಳು, ಕಾರ್ಯಕ್ರಮಗಳು ಮತ್ತು ಜನಪರ ಹೋರಾಟಗಳನ್ನು ಜನರಿಗೆ ತಲುಪಿಸಬೇಕೆಂದು ಕರೆ ನೀಡಲಾಯಿತು.
ಇದೇ ಸಂದರ್ಭದಲ್ಲಿ SIR Enumeration Forms Filling ಪ್ರಕ್ರಿಯೆಯನ್ನು ವಿವರವಾಗಿ ತಿಳಿಸಿ, ಯಾವುದೇ ಮತದಾರರು ತಮ್ಮ ಮತದಾನದ ಹಕ್ಕಿನಿಂದ ವಂಚಿತರಾಗದಂತೆ ಜಾಗೃತಿ ಮೂಡಿಸುವುದು ಅತ್ಯಂತ ಪ್ರಮುಖ ಜವಾಬ್ದಾರಿಯೆಂದು ಒತ್ತಿಹೇಳಲಾಯಿತು. ಮತದಾರರ ಪಟ್ಟಿಯ ಶುದ್ಧತೆ ಮತ್ತು ನಿಖರತೆ ಕಾಪಾಡುವಲ್ಲಿ ಕಾರ್ಯಕರ್ತರ ಪಾತ್ರ ನಿರ್ಣಾಯಕವಾಗಿದೆ ಎಂದು ಸ್ಪಷ್ಟಪಡಿಸಲಾಯಿತು.
“ಚುನಾವಣೆ ಕೇವಲ ಮತದಾನವಲ್ಲ; ಅದು ಜನರ ಹಕ್ಕುಗಳನ್ನು ಕಾಪಾಡುವ, ನ್ಯಾಯ ಒದಗಿಸುವ ಮತ್ತು ಪರ್ಯಾಯ ರಾಜಕೀಯವನ್ನು ನಿರ್ಮಿಸುವ ಪ್ರಜಾಪ್ರಭುತ್ವದ ಪವಿತ್ರ ಪ್ರಕ್ರಿಯೆ. ಆದ್ದರಿಂದ ಪ್ರತಿಯೊಬ್ಬ ಕಾರ್ಯಕರ್ತನು ಶಿಸ್ತಿನೊಂದಿಗೆ, ಪ್ರಾಮಾಣಿಕತೆಯಿಂದ ಹಾಗೂ ಸಮರ್ಪಣಾಭಾವದಿಂದ ಕಾರ್ಯನಿರ್ವಹಿಸಬೇಕು” ಎಂದು ಕರೆ ನೀಡಲಾಯಿತು.
SIR ಪ್ರಕ್ರಿಯೆಯ ಕುರಿತು ಗಂಭೀರ ಆತಂಕ ವ್ಯಕ್ತಪಡಿಸಿ, ದೇಶದಾದ್ಯಂತ ಲಕ್ಷಾಂತರ ಜನರನ್ನು ಮತದಾರರ ಪಟ್ಟಿಯಿಂದ ಹೊರಗುಳಿಸಿದರೂ ಅದನ್ನು ಸಾಮಾನ್ಯವಾಗಿ ತೆಗೆದುಕೊಳ್ಳಲಾಗುತ್ತಿರುವುದು ಯಾರ ಹಿತಾಸಕ್ತಿಗೆ ಎಂಬ ಪ್ರಶ್ನೆಯನ್ನು ಉದ್ಭವಿಸುತ್ತದೆ. ನಾಗರಿಕತ್ವದ ಮಾನದಂಡಗಳು ಪದೇಪದೇ ಬದಲಾಗುತ್ತಿರುವುದು ಪ್ರಜಾಪ್ರಭುತ್ವದ ದೃಷ್ಟಿಯಿಂದ ಆತಂಕಕಾರಿ ಬೆಳವಣಿಗೆಯಾಗಿದೆ ಎಂದು ತಿಳಿಸಲಾಯಿತು.
ಕರ್ನಾಟಕದ ಅಭಿವೃದ್ಧಿ, ಸಾಮಾಜಿಕ ನ್ಯಾಯ ಮತ್ತು ಸೌಹಾರ್ದತೆಯ ಪರಂಪರೆಯಲ್ಲಿ ಮುಸ್ಲಿಂ ಸಮುದಾಯದ ಕೊಡುಗೆ ಅಪಾರವಾಗಿದೆ. ಈ ಹಿನ್ನೆಲೆಯಲ್ಲಿ ಸಮುದಾಯದ ಹಕ್ಕುಗಳು, ಸಕ್ರಿಯ ರಾಜಕೀಯ ಪಾಲ್ಗೊಳ್ಳುವಿಕೆ ಮತ್ತು ನ್ಯಾಯಸಮ್ಮತ ಪ್ರತಿನಿಧಿತ್ವಕ್ಕಾಗಿ ಇದು ಅತ್ಯಂತ ಮಹತ್ವದ ಘಟ್ಟವಾಗಿದೆ. ಚುನಾವಣಾ ಪೂರ್ವದಲ್ಲಿ ನೀಡಿದ ಭರವಸೆಯಂತೆ ಕಾಂಗ್ರೆಸ್ ಪಕ್ಷ 2ಬಿ ಮೀಸಲಾತಿಯನ್ನು ಮರುಸ್ಥಾಪಿಸಬೇಕೆಂದು ಆಗ್ರಹಿಸಲಾಯಿತು.
ಈ ಸಮಾವೇಶದಲ್ಲಿ ಜಿಲ್ಲಾಧ್ಯಕ್ಷರಾದ ಇಮ್ರಾನ್ ಅರೇಹಳ್ಳಿ, ಜಿಲ್ಲಾ ಉಪಾಧ್ಯಕ್ಷರಾದ ಸಿದ್ದೀಕ್ ಆನೆಮಹಲ್, ಮಾಜಿ ಜಿಲ್ಲಾಧ್ಯಕ್ಷರಾದ ಅಮೀರ್ ಜಾನ್, ಅಸೆಂಬ್ಲಿ ಉಪಾಧ್ಯಕ್ಷರಾದ ಸೈಯದ್ ಮೈದೀನ್ ಹಾಗೂ Women India Movement ನಾಯಕಿಯರು ಉಪಸ್ಥಿತರಿದ್ದರು. ಸಭೆಯ ಅಧ್ಯಕ್ಷತೆಯನ್ನು ಅಸೆಂಬ್ಲಿ ಅಧ್ಯಕ್ಷರಾದ ವಾಜಿದ್ ಪಾಶ ವಹಿಸಿದ್ದರು. ಕಾರ್ಯದರ್ಶಿ ಹೈದರ್ ಸ್ವಾಗತಿಸಿ, ಅಶ್ರಫ್ ಚಿಲಿಂಬಿ ಧನ್ಯವಾದಗಳನ್ನು ಸಲ್ಲಿಸಿದರು.
ಸಂಘಟಿತ ಶಕ್ತಿ, ಸ್ಪಷ್ಟ ದಿಕ್ಕು ಮತ್ತು ಪ್ರಾಮಾಣಿಕ ಕಾರ್ಯ ಇವೇ ನಮ್ಮ ಯಶಸ್ಸಿನ ಬುನಾದಿ.
Sakaleshpur Visit – Cadres Convention Successful | A Strong Step Towards Organizational Strengthening
Today (07/06/2026), I had the opportunity to participate as the chief guest in the cadres’ and members’ convention organized by the Sakaleshpur Assembly Constituency Committee in Hassan district at Donigal Noorani Shadi Mahal. The convention was successfully held in an enthusiastic and action-oriented atmosphere.
This was not just an ordinary meeting, but a well-planned platform aimed at strengthening the party organization, energizing cadres, and reinforcing public trust in preparation for the upcoming elections.
During the session, the importance of elections was explained in detail, and comprehensive training was provided on voter mapping, booth management, direct voter engagement, and organized campaign strategies. Cadres were urged to actively engage at the booth, ward, and village levels, and to conduct door-to-door outreach to communicate the party’s ideology, programs, and people-centric struggles.
At the same time, the SIR enumeration form-filling process was explained in detail, emphasizing the critical responsibility of ensuring that no voter loses their right to vote. It was highlighted that cadres play a decisive role in maintaining the accuracy and integrity of the voter list.
“Elections are not merely about voting; they are a democratic process that safeguards people’s rights,
1/2
Here is one more hate speech and call for boycotting Indian Muslims BJP leader Nazia Elahi Khan, Says "Hindus should stay vigilant and should boycott Muslims from Govt sector and Private sectors. Urges to boycott Muslims atleast for 2-3 years.
ایل پی جی کی قیمت میں حالیہ 29 روپے کے اضافے سے پہلے ہی مارچ سے اب تک مجموعی طور پر تقریباً 89 روپے کا اضافہ ہو چکا ہے۔ ایک ایسا خاندان جو ہر ماہ ایک سلنڈر استعمال کرتا ہے، اب سالانہ 1,000 روپے سے زیادہ اضافی خرچ برداشت کرنے پر مجبور ہوگا۔ بڑھتی ہوئی مہنگائی اور روزمرہ زندگی کے اخراجات کے اس دور میں یہ عام لوگوں پر ایک غیر منصفانہ بوجھ ہے۔#SDPI مطالبہ کرتی ہے کہ ایل پی جی کی قیمتوں میں کیے گئے حالیہ اضافے کو فوری طور پر واپس لیا جائے اور ایسے مؤثر اقدامات کیے جائیں جن سے کھانا پکانے کی گیس ہر طبقے کے لیے قابلِ استطاعت اور سستی رہے۔
The latest Rs 29 hike in LPG prices comes after increases totaling nearly Rs 89 since March. A family using one cylinder a month will now spend over Rs 1,000 extra annually. At a time of rising living costs, this is an unfair burden on ordinary people. SDPI demands an immediate rollback of the LPG price hike and measures to keep cooking gas affordable for all. #LPGprice #pricehike #SDPI