ಜನರು ಸಾಯ್ತ ಇದ್ರೆ, ಮಹಾನುಭಾವ ದಿನಕ್ಕೆ 3ಬಾರಿ ಬಟ್ಟೆ ಬದಲಾಯಿಸುತ್ತಾ ನವಿಲಿಗೆ ಕಾಳು ಹಾಕ್ತಾ ಇದ್ದ, ಚುನಾವಣೆಯಲ್ಲಿ ಜನ ಇದನ್ನು ಮರೆತರೆ ಮುಂದೆ ಜನರ ಬದುಕು ಅದೋಗತಿ..
#BJPChombuSarkara
ಕನ್ನಡಿಗರು ಕನ್ನಡದ ವಿರೋದಿಗಳು ಎನ್ನೊದಕ್ಕೆ ಇದು ಸಾಕ್ಷಿ
#StopHindiImposition@kharge ಕನ್ನಡದ ನೆಲದಲ್ಲಿ ನಿಂತು ಹಿಂದಿಯನ್ನ ಹೆರುತ್ತಿರುವ ನಿಮಗೆ ಕನ್ನಡಿಗರ ದಿಕ್ಕಾರವಿದೆ!. #Bidar ಸಾಕು ನಿಲ್ಲಿಸಿ ಓಲೈಕೆ ರಾಜಕಾರಣವನ್ನ
ಸುಳ್ಳೇ ನಮ್ಮನೆ ದೇವರು🤦♂️
2ಬಾರಿ ಕರ್ನಾಟಕದಿಂದ mpಯಾಗಿ ಆಯ್ಕೆ ಆಗಿ ಒಂದು ದಿನ ನಾಡಿನ ಪರವಾಗಿ ಮಾತಾಡಲಿಲ್ಲ.
ಈಗ ತನ್ನನ್ನು ಆಯ್ಕೆ ಮಾಡಿ ಕಳಿಸಿದ ತನ್ನ ನೆಲದ ಬಗ್ಗೆ ಈ ರೀತಿ ಕೆಟ್ಟದಾಗಿ ಮಾತಾಡುತ್ತ ನಾಡಿಗೆ ಅವಮಾನ ಮಾಡುತ್ತಿರೋ @nsitharaman
ಇದನ್ನೆ ನಂಬಿಕೆದ್ರೋಹ ಅನ್ನೋದು.
ಈ ನಾಡಿಗೆ ತಾವು ಕೊಟ್ಟದ್ದೇನು?
ಇಂದು ಹುಬ್ಬಳ್ಳಿಯ ಮೂರು ಸಾವಿರ ಮಠದಲ್ಲಿ ಜಿಲ್ಲೆಯ ಹಲವು ಮಠಾಧೀಶರು ದಿಂಗಾಲೇಶ್ವರ ಶ್ರೀಗಳ ನೇತೃತ್ವದಲ್ಲಿ ಸಭೆ ಸೇರಿದ್ದು,ಧಾರವಾಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯನ್ನು ಮಾರ್ಚ್ 31ರ ಒಳಗಾಗಿ ಬದಲಾಯಿಸಬೇಕು ಇಲ್ಲವಾದಲ್ಲಿ ಸಮುದಾಯದ ವತಿಯಿಂದ ಒಬ್ಬ ಸ್ವತಂತ್ರ ಅಭ್ಯರ್ಥಿಯನ್ನು ಸ್ಪರ್ಧೆಗೆ ಇಳಿಸುವುದಾಗಿ (1)
ದಿಂಗಾಲೇಶ್ವರ ಶ್ರೀಗಳು ಲಿಂಗಾಯತರ ಸ್ವಾಭಿಮಾನದ ಬಗ್ಗೆ ಮಾತನಾಡುತ್ತಿದ್ದಾರೆ ಇಡೀ ಅಖಂಡ ವೀರಶೈವ ಲಿಂಗಾಯತ ಸಮಾಜ ಸ್ವಾಮೀಜಿಗಳೊಂದಿಗೆ ಇದ್ದೇವೆ. ಜಾತಿವಾದಿ ಹಾಗೂ ಸ್ವಜನಾಪಕ್ಷಪಾತೀಯ ವಿರುದ್ಧ ನಿಮ್ಮ ಹೋರಾಟ ಮುಂದುವರೆಯಲಿ, ನಮ್ಮ ಸಮುದಾಯದ ಯಾವ ನಾಯಕ ನಿಮ್ಮ ಪರ ನಿಲ್ಲುವುದಿಲ್ಲ ಅವರು ವೀರಶೈವ ಲಿಂಗಾಯತರೇ ಅಲ್ಲ.
ಪತ್ರಕರ್ತ ಬೇರೆ..
ಸತ್ಯ ಮಾತನಾಡುವ,ನಾಡಿನ ಪರ ನಿಲ್ಲುವ, ಜನಸಾಮಾನ್ಯರ ಧ್ವನಿ ಆಗುವ ಪತ್ರಕರ್ತ ಬೇರೆ..
ಅದ್ಭುತವಾಗಿ ವಿವರಿಸಿದ್ದಾರೆ ಒಮ್ಮೆ ನೋಡಿ..
#ನನ್ನತೆರಿಗೆನನ್ನಹಕ್ಕು#SouthTaxMovement
ಮೊನ್ನೆ ನಮ್ಮ ಮಾನ್ಯ ತೆಜಸ್ವಿ ಸೂರ್ಯ ಅವರು ಸಂಸತ್ ಅಲ್ಲಿ #ನನ್ನತೆರಿಗೆನನ್ನಹಕ್ಕು#SouthTaxMovement ವಿಚಾರವಾಗಿ ಮಾತನಾಡುತ್ತಾ ನಾನು ಒಬ್ಬ ಕನ್ನಡಿಗ ಅಂದರು!, ಕ್ಷಣ ಅವಕ್ಕಾಗಿ ನನ್ನಲ್ಲೆ ಅನ್ಕೊಂಡೆ ಅಲಾ ಒಬ್ಬಟ್ಟು ಒಂದು ಕಾಲದಲ್ಲಿ ಕನ್ನಡ ಹೋರಾಟಗಾರರನ್ನ ಗೂಂಡಾ ಎಂದು ಕರೆದವನು, ಹಿಂದಿ ಹೇರಿಕೆಯನ್ನ ಬಹಿರಂಗವಾಗಿಯೇ ಒಪ್ಪಿ ಕನ್ನಡವನ್ನ ತುಚ್ಚವಾಗಿ ಕಂಡವನು, ಕನ್ನಡ ಬಾವುಟವನ್ನ ಒಪ್ಪದವನ ಬಾಯಲ್ಲಿ ಇವತ್ತು ನಾನೊಬ್ಬ ಕನ್ನಡಿಗ ಎಂದು ಹೇಳಿಸಿದ ಹಿನ್ನೆಲೆಯಲ್ಲಿ ಕನ್ನಡ ಹೋರಾಟಗರರ ಶ್ರಮ ಬಲು ದೊಡ್ಡದು ಇದೆ ಎಂಬ ಹೆಮ್ಮೆ ಮೂಡಿತು.
ಜೊತೆಗೆ ಇವತ್ತು ಪ್ರಶ್ನೆಯನ್ನು ಮಾಡ್ತಿದಿನಿ ಈ ಆಸಾಮಿಗೆ! ಏ Mr ಕನ್ನಡ ಕನ್ನಡ ಹೋರಾಟಗಾರರು ಅಂದ್ರೆ ಊರಿದು ಬಿಳ್ತದ್ದ ನಿಮಗೆ ಈಗ ನಿವೊಬ್ಬ ಕನ್ನಡಿಗ ಎಂಬುದು ನೆನಪಾಯಿತೆ?
ಕನ್ನಡಿಗರು ಬಾವುಟ ಅಧಿಕೃತವಾಗಲಿ ಎಂದು Campaign ಮಾಡಿದಾಗ ಇದರ ವಿರುದ್ದ ಮಾತನಾಡಿ ಕನ್ನಡಿಗರ ಮನ ನೋಯಿಸಿದಾಗ ನಿನಗೆ ನಾನೊಬ್ಬ #ಕನ್ನಡಿಗ ಎಂದು ಅನಿಸಲಿಲ್ಲವೇ?
ಮೆಟ್ರೊದಲ್ಲಿ #ಹಿಂದಿಹೇರಿಗೆ ಆದಾಗ ಕನ್ನಡಿಗರು ಶ್ರಮಪಟ್ಟು ಹೋರಾಟ ಮಾಡುವಾಗ ನೀನು ನೇರವಾಗಿ ಹಿಂದಿ ಇರಲಿ ಎಂದು ಕನ್ನಡಿಗರನ್ನು ಅವಹೇಳನ ಮಾಡಿದಾಗ ನಾನೊಬ್ಬ ಕನ್ನಡಿಗ ಎಂದು ನೆನಪಾಗಲಿಲ್ಲವೇ?
ನಿಸ್ವಾರ್ಥವಾಗಿ ಹೋರಾಟ ಮಾಡುವ ಕನ್ನಡ ಹೋರಾಟಗಾರರನ್ನ ರೌಡಿ ಎಂದು ಜರೆದು ನೋವುಂಟು ಮಾಡಿದಾಗ ನಿನಗೆ ನೋವಾಗಲಿಲ್ಲವೇ?
ನಿನಗೆ MP ಸೀಟ್ ಘೋಷಣೆ ಆಗುತ್ತಿದ್ದಂತೆ ಟ್ವಿಟರ್ ಅಲ್ಲಿರುವ ಅಷ್ಟು ಕನ್ನಡ ವಿರೋಧಿ ಟ್ವಿಟ್ ಗಳನ್ನ ಡಿಲಿಟ್ ಮಾಡಬಹುದು ಆದರೆ ಕನ್ನಡಿಗರ ಎದೆಯೊಳಗೆ ಮಾಡಿದ ಆ ನೋವನ್ನ ಹೇಗೆ ಸರಿಸುವೇ Mr?
ನಿನಗೆ ಬೇಕಾದಾಗ ಅಥವಾ ನಿನ್ನ ಪಕ್ಷಕ್ಕೆ ನೆರವಾಗುವ ಸಂದರ್ಭದಲ್ಲಿ ಮಾತ್ರ ಕನ್ನಡತನ ಜಾಗೃತವಾಗುತ್ತದೆಯೇ? ಈಗ ಕನ್ನಡಿಗರು ತಮ್ಮ ನ್ಯಾಯಯುತವಾದ ತೆರಿಗೆ ಹಕ್ಕನ್ನ ಕೇಂದ್ರಕ್ಕೆ ಕೇಳುತ್ತಿದ್ದಂತೆಯೆ ನಿನ್ನಲ್ಲಿ ಎಲ್ಲಿಲ್ಲದ ಕನ್ನಡ ಪ್ರೇಮ ಉಕ್ಕಿ ಬಂದು ಕರ್ನಾಟಕಕ್ಕೆ ಅನ್ಯಾಯ ಆಗಿಲ್ಲ ನಾನು ಕರ್ನಾಟಕದವನಾಗಿ ಹೇಳುತ್ತಿದ್ದೆನೆ ಎಂದು ಡೌ! ಗಳನ್ನ ಮಾಡಿದರೆ ಕನ್ನಡಿಗರು ನಂಬುತ್ತಾರೆ ಅನ್ಕೊಂಡಿದಿಯಾ?
ಅಲ್ಲಾ ನಾಡಿಗೆ ಆಗುವ ಅನ್ಯಾಯವನ್ನ ಮುಚ್ಚಿಟ್ಟು ಮುಕಕ್ಕೆ ಕನ್ನಡದ ಮುಖವಾಡ ಹಾಕಿ ಆ ಅನ್ಯಾಯವನ್ನ ಅನ್ಯಾಯವಲ್ಲ ಎಂದು ಹೇಳುವ ನಿನ್ನ ಮನಸ್ಸಲ್ಲಿ ಅದೆಷ್ಟು ಘೋರ ವೈಷಮ್ಯ ಇರಬಹುದು? ಕನ್ನಡಿಗರು ಮಾಡುತ್ತಿರುವ ಹೋರಾಟವನ್ನು ಒಂದು ಪಕ್ಷದ ಪ್ರೊಪಗಂಡಾ ಎಂದು ಕರೆಯುವ ನಿನ್ನ ಬೀಷಣ ಹೃದಯಕ್ಕೆ ಕನ್ನಡಿಗರ ಧಿಕ್ಕಾರವಿದೆ, ಇನ್ನಾದರು ಎಚ್ಚೆತ್ತುಕೋ ಕನ್ನಡಿಗರು ಜಾಗೃತರಾಗಿದ್ದಾರೆ ಮುಖವಾಡ ತೆಗೆದು ಬಯಲಲ್ಲೆ ಬೆತ್ತಲು ಮಾಡಿಯಾರು.
ಒಬ್ಬ MP ಯಾಗಿ ಸಂಸತ್ ಅಲ್ಲಿ ಒಂದು ದಿನವಾದರು ಮೇಜು ಕುಟ್ಟಿದೆಯಾ? ಕುಟ್ಟಿದ್ದು ಬರಿ ಮೋದಿ ಹೊಗಳಲಿಕ್ಕೆ ನಮ್ಮ ಮೊದಿ ಸೂರ್ಯ ಚಂದ್ರ ಹಾಗೇಹೀಗೆ ಎಂದು ಹೇಳುತ್ತ ಕರ್ನಾಟಕ ಬಿಡಿ ನಿನ್ನ ಕ್ಷೇತ್ರದ ಸಮಸ್ಯೆಗಳನ್ನು ದ್ವನಿ ಎತ್ತದೆ ಕನ್ನಡಿಗರಿಗೂ ನಿನ್ನ ಕ್ಷೇತ್ರದ ಮತದಾರನಿಗೂ ನೇರವಾಗಿ ಮೋಸವನ್ನೆ ಮಾಡಿದ್ದಿರಿ Mr.
ಕೊನೆಯದಾಗಿ ಕನ್ನಡಿಗರು ಕೇಂದ್ರದಿಂದ ನಮ್ಮ ಹಕ್ಕಿನ ತೆರಿಗೆಯನ್ನ ಪಡೆದೆ ತಿರುತ್ತೇವೆ, ಬಿಜೆಪಿ ಕನ್ನಡಗರನ್ನ ಕಡೆಗಣಿಸಿದಕ್ಕೆ ಮನೆಗೆ ಕಳಿಸಿದ್ದೇವೆ, ಮುಂದೆ ಕನ್ನಡಿಗರ ಹಕ್ಕುಗಳನ್ನ ಕಡೆಗಣಿಸಲು ಬಂದರೆ ಕರ್ನಾಟಕದಿಂದ ಆಚೆಗೆ ಅಟ್ಟುತ್ತೆವೆ.
Shivanna Gundanavar
ಕೇಂದ್ರ ಸರ್ಕಾರದ ಆರ್ಥಿಕ ದೌರ್ಜನ್ಯ ಖಂಡಿಸಿ " ಚಲೋ ದಿಲ್ಲಿ " ಚಳವಳಿ.
ನಾಳೆ ಬೆಳಿಗ್ಗೆ 11 ಗಂಟೆಗೆ ದೆಹಲಿಯ ಜಂತರ್ ಮಂತರ್ ನಲ್ಲಿ ಕನ್ನಡಿಗರ ನ್ಯಾಯಯುತ ತೆರಿಗೆ ಪಾಲು ಮತ್ತು ಅನುದಾನ ಹಂಚಿಕೆಯಲ್ಲಿ ಆಗುತ್ತಿರುವ ತಾರತಮ್ಯದ ವಿರುದ್ಧ ಧ್ವನಿಯೆತ್ತುತ್ತೇವೆ.
ಈ ಚಳವಳಿ ಯಾರ ವಿರುದ್ಧವೂ ಅಲ್ಲ, ಇದು ಕರುನಾಡು ಹಾಗೂ ಕನ್ನಡಿಗರ ಹಿತಕ್ಕಾಗಿ. ಪಕ್ಷಾತೀತವಾಗಿ ಎಲ್ಲರೂ ಈ ಧರಣಿ ಸತ್ಯಾಗ್ರಹದಲ್ಲಿ ಭಾಗವಹಿಸಬೇಕೆಂದು ಮನವಿ ಮಾಡುತ್ತೇವೆ.
#ಚಲೋದಿಲ್ಲಿ #ChaloDilli
#SouthTaxMovement
#ನನ್ನತೆರಿಗೆನನ್ನಹಕ್ಕು