ದಿನಾಂಕ : 24-09-2024 ರಂದು ವಿಶ್ವ ನದಿಗಳ ದಿನಾಚರಣೆ ಪ್ರಯುಕ್ತ ಭದ್ರಾವತಿ ವಿಭಾಗದ ಲಕ್ಕವಳ್ಳಿ ವಲಯದ ವತಿಯಿಂದ, ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು, ಬಾವಿಕೆರೆ ಇವರ ಸಹಯೋಗದೊಂದಿಗೆ ಸದರಿ ಕಾಲೇಜಿನ ಆವರಣದ ಒಳಗೆ ವಿಶ್ವ ನದಿ ದಿನಾಚರಣೆ ಕಾರ್ಯಕ್ರಮವನ್ನು ಆಚರಿಸಲಾಯಿತು.
ಶಿವಮೊಗ್ಗ ವೃತ್ತದ ಅರಣ್ಯ ಅಧಿಕಾರಿಗಳಿಗೆ ಕಾನೂನು ಅರಿವು ಕಾರ್ಯಾಗಾರ ಹಮ್ಮಿಕೊಳ್ಳಲಾಗಿತ್ತು. ಬದಲಾದ ಹಾಗೂ ತಿದ್ದುಪಡಿಗೊಂಡ ಹೊಸ ಕಾನೂನುಗಳ ಬಗ್ಗೆ ಕಾರ್ಯಾಗಾರದಲ್ಲಿ ಚರ್ಚಿಸಲಾಯಿತು.
@CirKfd
ಶಿವಮೊಗ್ಗ ವೃತ್ತದ, ಸಾಮಾಜಿಕ ಅರಣ್ಯ ವಿಭಾಗದ, ಶಿಕಾರಿಪುರ ಸಾಮಾಜಿಕ ಅರಣ್ಯ ವಲಯದಿಂದ ಸರ್ಕಾರಿ ಪದವಿ ಪೂರ್ವ ಕಾಲೇಜು, ಪ್ರೌಢ ಶಾಲಾ ವಿಭಾಗ ಶಿಕಾರಿಪುರದಲ್ಲಿ ಗಿಡಗಳನ್ನು ನೆಡುವ ಮೂಲಕ ಧರ್ಮಸ್ಥಳ ಸಂಘದವರ ಸಹಯೋಗದೊಂದಿಗೆ ವಿಶ್ವ ಪರಿಸರ ದಿನಾಚರಣೆಯನ್ನುಆಚರಿಸಲಾಯಿತು.
ಶಿವಮೊಗ್ಗ ವೃತ್ತದ, ಶಿವಮೊಗ್ಗ ವಿಭಾಗದ, ನಗರ ವಲಯ ವ್ಯಾಪ್ತಿಯ ಸೊನಲೆ ಶಾಖೆಯ ರಾಮಚಂದ್ರಾಪುರ ಗ್ರಾಮದಲ್ಲಿರುವ ಸರ್ಕಾರಿ ಪ್ರೌಢಶಾಲೆ, ಕಾರಣಗಿರಿಯಲ್ಲಿ ವಿಶ್ವ ಪರಿಸರ ದಿನಾಚರಣೆಯ ಸಂಭ್ರಮ.
ಶಿವಮೊಗ್ಗ ವೃತ್ತದ, ಶಿವಮೊಗ್ಗ ವಿಭಾಗದ, ತೀರ್ಥಹಳ್ಳಿ ವಲಯ ವ್ಯಾಪ್ತಿಯ ಡಬ್ಬನಗದ್ದೆ ಗ್ರಾಮದಲ್ಲಿ ಶಾಲೆಯ ಮಕ್ಕಳು, ಶಿಕ್ಷಕರು ಹಾಗೂ ಅರಣ್ಯ ಇಲಾಖೆಯ ಸಹಭಾಗಿತ್ವದಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು.
ಶಿವಮೊಗ್ಗ ವೃತ್ತದ, ಭದ್ರಾವತಿ ವಿಭಾಗದ, ಉಂಬ್ಳೆಬೈಲು ವಲಯದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಮಂಡೇನಕೊಪ್ಪ ಆವರಣದಲ್ಲಿ ಗಿಡಗಳನ್ನು ನೆಡುವ ಮೂಲಕ ಹಾಗೂ ಪರಿಸರದ ಬಗ್ಗೆ ಜಾಗೃತಿ ಕಾರ್ಯಕ್ರಮ ಕೈಗೊಳ್ಳುವ ಮೂಲಕ ಪರಿಸರ ದಿನಾಚರಣೆ ಆಚರಿಸಲಾಯಿತು.
As a part of World Environment Day, cleaning drive was conducted in the roads passing through Shettihalli and Sharavati LTM sanctuary and planting program was conducted.
@aranya_kfd@CirKfd@kanara_kfd@moefcc@aranya_kfd_k
ಸದರಿ ಕಾರ್ಯಕ್ರಮದಲ್ಲಿ ಶ್ರೀ ಜ್ಞಾನಾನಂದ ಪ್ರಭಾರ DCF ಅರಣ್ಯ ಸಂಚಾರಿ ದಳ ಶಿವಮೊಗ್ಗ, ಶ್ರೀ ಸುರೇಶ್ ಪ್ರಭಾರ ACF ಅರಣ್ಯ ಸಂಚಾರಿ ದಳ ಶಿವಮೊಗ್ಗ, ಶ್ರೀ ಹನುಮಂತರಾಯ ಜಿ ಪ್ರಭಾರ ವಲಯ ಅರಣ್ಯಾಧಿಕಾರಿಗಳು, ಸೈನಿಕ ಕಲ್ಯಾಣ ವತಿಯಿಂದ ಶ್ರೀ ಡಾ. ಹಿರೇಮಠ್ ಮತ್ತು ಮಾಜಿ ಸೈನಿಕರು ಹಾಗೂ ಅರಣ್ಯ ಸಂಚಾರಿ ದಳದ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಇಂದು ಅರಣ್ಯ ಸಂಚಾರಿ ದಳ ಶಿವಮೊಗ್ಗ ಹಾಗೂ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ಶಿವಮೊಗ್ಗ ಇವರ ಸಂಯುಕ್ತ ಆಶ್ರಯದಲ್ಲಿ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ವನಮಹೋತ್ಸವ ಕಾರ್ಯಕ್ರಮವು ಶಿವಮೊಗ್ಗದ ಸೈನಿಕ ಪಾರ್ಕಿನಲ್ಲಿ ನಡೆಯಿತು.
@aranya_kfd@CirKfd
ಕಾರ್ಯಕ್ರಮದಲ್ಲಿ ಶ್ರೀ ಜ್ಞಾನನಂದ ಪ್ರಭಾರ DCF ಅರಣ್ಯ ಸಂಚಾರಿ ದಳ ಶಿವಮೊಗ್ಗ, ಶ್ರೀ ಸುರೇಶ್ ಪ್ರಭಾರ ACF ಅರಣ್ಯ ಸಂಚಾರಿ ದಳ ಶಿವಮೊಗ್ಗ, ಶ್ರೀ ಹನುಮಂತರಾಯ ಜಿ ಪ್ರಭಾರ ವಲಯ ಅರಣ್ಯಾಧಿಕಾರಿಗಳು, ಸೈನಿಕ ಕಲ್ಯಾಣ ವತಿಯಿಂದ ಶ್ರೀ ಡಾ. ಹಿರೇಮಠ್ ಮತ್ತು ಮಾಜಿ ಸೈನಿಕರು & ಅರಣ್ಯ ಸಂಚಾರಿ ದಳದ ಸಿಬ್ಬಂದಿಗಳು ಉಪಸ್ಥಿತರಿದ್ದರು.
@aranya_kfd
ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಆಯನೂರು ವಲಯ ವ್ಯಾಪ್ತಿಯಲ್ಲಿರುವ ಕುಂಸಿ ಶಾಖೆಯ ಕುಂಸಿ ಗ್ರಾಮದಲ್ಲಿ ಅರಣ್ಯ ಇಲಾಖೆಯ ವಸತಿ ಗೃಹ ಆವರಣದಲ್ಲಿ ಸಸಿ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಈ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತಿ ಕುಂಸಿಯ ಚುನಾಯಿತ ಜನಪ್ರತಿನಿಧಿಗಳು ಭಾಗವಹಿಸಿದ್ದರು.
@aranya_kfd@CirKfd
ಈ ಕಾರ್ಯಕ್ರಮದಲ್ಲಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳು, ಹೊಸನಗರ ಉಪವಿಭಾಗ, ಹೊಸನಗರ, ವಲಯ ಅರಣ್ಯಾಧಿಕಾರಿ, ನಗರ ವಲಯ ಹಾಗೂ ಸಿಬ್ಬಂದಿಗಳು, ಶಾಲಾ ಶಿಕ್ಷಕರು ಹಾಗೂ ಸಿಬ್ಬಂದಿಗಳು, ವಿದ್ಯಾರ್ಥಿಗಳು, ಎಸ್.ಡಿ.ಎಂ.ಸಿ ಅಧ್ಯಕ್ಷರು ಹಾಗೂ ಸದಸ್ಯರು ಉಪಸ್ಥಿತರಿದ್ದರು.
ದಿನಾಂಕ:05-06-2024 ರಂದು ನಗರ ವಲಯ ವ್ಯಾಪ್ತಿಯ ನಗರ ಶಾಖೆಯ ಹಿಲ್ಕುಂಜಿ ಗ್ರಾಮದ ಹಿಲ್ಕುಂಜಿ ಸರ್ಕಾರಿ ಕಿರಿಯ ಪ್ರಾಥಮಿಕ ಪಾಠ ಶಾಲೆಯಲ್ಲಿ ಗಿಡಗಳನ್ನು ನೆಡುವುದರ ಮೂಲಕ ವಿಶ್ವ ಪರಿಸರ ದಿನಾಚರಣೆಯನ್ನು ಆಚರಣೆ ಮಾಡಲಾಯಿತು.
@aranya_kfd@CirKfd
ಆರೋಪಿಗಳ ವಿರುದ್ಧ ಪ್ರಕರಣವನ್ನು ದಾಖಲಿಸಿ ಆರೋಪಿತರಿಂದ ಜಿಂಕೆಯ (Spotted Deer) ತಲೆ – 01 ಸಂಖ್ಯೆ, ಜಿಂಕೆಯ (Spotted Deer) ಚರ್ಮ-01 ಸಂಖ್ಯೆ ಮತ್ತು ನಾಡಬಂದೂಕು-01 ಸಂಖ್ಯೆಯನ್ನು ವಶಪಡಿಸಿಕೊಂಡು, ಆರೋಪಿಗಳನ್ನು ದಿನಾಂಕ:04.04.2024ರಂದು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ.
ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ಶರಾವತಿ ಕಣಿವೆ ಸಿಂಘಳೀಕ ಅಭಯಾರಣ್ಯದ ಕಾರ್ಗಲ್ ವನ್ಯಜೀವಿ ವಲಯದ ಮುಪ್ಪಾನೆ ಶಾಖೆಯ,ಕಳಸವಳ್ಳಿ ಗಸ್ತಿನ ಅಂಬಾರಗೋಡ್ಲು ಗ್ರಾಮದ ಸರ್ವೆ ನಂ 57ರ ಶರಾವತಿ ಹಿನ್ನೀರಿನ ಅಂಚಿನ ಅರಣ್ಯ ಪ್ರದೇಶಕ್ಕೆ ಅಕ್ರಮವಾಗಿ ಪ್ರವೇಶಿಸಿ ಜಿಂಕೆ(Spotted Deer)ಯನ್ನು ನಾಡಬಂದೂಕಿನಲ್ಲಿ ಹತ್ಯೆ ಮಾಡಿರುವ ಪ್ರಕರಣವನ್ನು
ದಿನಾಂಕ:03.04.2024ರಂದು ಕಾರ್ಗಲ್ ವನ್ಯಜೀವಿ ವಲಯದ ವಲಯ ಅರಣ್ಯಾಧಿಕಾರಿ ಶ್ರೀಮತಿ.ಸಂಧ್ಯಾ,ಮುಪ್ಪಾನೆ ಶಾಖೆಯ ಉಪ ವಲಯ ಅರಣ್ಯಾಧಿಕಾರಿ ವ ಮೋಜಣಿದಾರ,ಶ್ರೀ.ಸುಧಾಕರ ಜಿ.ಕೆ ಮತ್ತು ಕಳಸವಳ್ಳಿಗಸ್ತಿನ ಗಸ್ತು ಅರಣ್ಯ ಪಾಲಕ ಶ್ರೀ.ಮಹೇಶ್ ಬಮ್ಮನಳ್ಳಿರವರು ಕಾರ್ಯಾಚರಣೆ ನಡೆಸಿ ಪ್ರಕರಣದಲ್ಲಿ ಭಾಗಿಯಾದ 03 ಜನ ಆರೋಪಿಗಳನ್ನುಬಂಧಿಸಿ,