Official Twitter account of DCP KENGERI (South-West) Division, Bengaluru City. Dial 112 in case of emergency, Help us to serve you better @BlrCityPolice
@DCPKENGERIBCP ಉಪ ಪೊಲೀಸ್ ಆಯುಕ್ತರಾಗಿ ಅಧಿಕಾರ ವಹಿಸಿಕೊಂಡಿದ್ದೇನೆ.
ಕಾನೂನು ಸುವ್ಯವಸ್ಥೆ ಕಾಪಾಡುವುದು ಹಾಗೂ ಅಪರಾಧಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ತಮ್ಮೆಲ್ಲರ ಸಹಕಾರವನ್ನು ಕೋರುತ್ತೇನೆ.
ಸಾರ್ವಜನಿಕರ ಸುರಕ್ಷತೆ, ಪರಿಣಾಮಕಾರಿ ಪೊಲೀಸ್ ಸೇವೆ ಹಾಗೂ ಸಾರ್ವಜನಿಕರ ವಿಶ್ವಾಸವನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಸಮರ್ಪಣೆ ಮತ್ತು ಕರ್ತವ್ಯನಿಷ್ಠೆಯಿಂದ ಕಾರ್ಯನಿರ್ವಹಿಸಲಿದ್ದೇನೆ.
– ಯತೀಶ್ ಎನ್., IPS
ಜೈ ಕರ್ನಾಟಕ! 💛❤️ ಜೈ ಹಿಂದ್! 🇮🇳 @BlrCityPolice@DgpKarnataka@CCP_Blr
@JbharathiPS1 ಪೊಲೀಸ್ ಠಾಣೆಗೆ ಭೇಟಿ ನೀಡಿ, ಠಾಣೆಯ ಕಾರ್ಯಚಟುವಟಿಕೆಗಳನ್ನು ಪರಿಶೀಲಿಸಿ, ಠಾಣಾಧಿಕಾರಿಗಳಿಂದ ಹೆಚ್ಚಿನ ಮಾಹಿತಿ ಪಡೆಯಲಾಯಿತು. ಠಾಣಾ ವ್ಯಾಪ್ತಿಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವುದು, ಅಕ್ರಮ ಚಟುವಟಿಕೆಗಳ ಮೇಲೆ ನಿರಂತರ ನಿಗಾ ವಹಿಸುವುದು ಹಾಗೂ ಠಾಣಾ ಆವರಣದಲ್ಲಿ ಸ್ವಚ್ಛತೆ ಕಾಪಾಡುವಂತೆ ಅಧಿಕಾರಿಗಳಿಗೆ ಸಲಹೆ ಮತ್ತು ನಿರ್ದೇಶನಗಳನ್ನು ನೀಡಲಾಯಿತು. @BlrCityPolice @WestCommissionerate
#BengaluruCityPolice #WestCommissionerate #KengeriDivision
@girinagarps ಗೆ ಭೇಟಿ ನೀಡಿ, ಠಾಣಾ ವ್ಯಾಪ್ತಿಯ ಕಾನೂನು ಮತ್ತು ಸುವ್ಯವಸ್ಥೆ ಸಮಸ್ಯೆಗಳು ಹಾಗೂ ಅಪರಾಧ ಪರಿಸ್ಥಿತಿಗೆ ಸಂಬಂಧಿಸಿದಂತೆ ಅಧಿಕಾರಿಗಳಿಂದ ಅಗತ್ಯ ಮಾಹಿತಿಗಳನ್ನು ಪಡೆಯಲಾಯಿತು. ಪ್ರಾಥಮಿಕ ಪರಿಶೀಲನೆ ನಡೆಸಿ, ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸಲಹೆ ಮತ್ತು ಸೂಚನೆಗಳನ್ನು ನೀಡಲಾಯಿತು. @BlrCityPolice @WestCommissionerate
#BengaluruCityPolice #WestCommissionerate #KengeriDivision
🚨 ಕೆಂಗೇರಿ ವಿಭಾಗದಲ್ಲಿ ರೌಡಿ ನಿಗ್ರಹ ವಿಶೇಷ ಕಾರ್ಯಾಚರಣೆ - ಅನಿರೀಕ್ಷಿತವಾಗಿ ರೌಡಿಗಳ ಮನೆ ಪರಿಶೀಲನೆ 🚨
ಸಾರ್ವಜನಿಕರ ಸುರಕ್ಷತೆ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ
📆 ದಿನಾಂಕ: 22.11.2026 ಬೆಳಿಗ್ಗೆ @DCPKENGERIBCP ವಿಭಾಗದ ಎಲ್ಲಾ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ #AntiRowdySquadTeam ವತಿಯಿಂದ ರೌಡಿ ಶೀಟರ್ಗಳ ವಿರುದ್ಧ ವಿಶೇಷ ನಿಗ್ರಹ ಕಾರ್ಯಾಚರಣೆ ನಡೆಸಿ ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗದಂತೆ ಎಚ್ಚರಿಕೆ ನೀಡಲಾಯಿತು.
ಈ ಕಾರ್ಯಾಚರಣೆಯ ವೇಳೆ ಒಟ್ಟು 13 ರೌಡಿ ಶೀಟರ್ಗಳನ್ನು ಪರಿಶೀಲಿಸಿ, ಅವರ ಚಟುವಟಿಕೆಗಳ ಕುರಿತು ಮಾಹಿತಿ ಸಂಗ್ರಹಿಸಲಾಯಿತು ಹಾಗೂ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಯಿತು.
👮♀️👮♂️ ಕಾನೂನು ಸುವ್ಯವಸ್ಥೆ ಕಾಪಾಡುವುದು ನಮ್ಮ ಆದ್ಯತೆ. ಸಾರ್ವಜನಿಕರ ಸುರಕ್ಷತೆಗೆ ಪೊಲೀಸ್ ಇಲಾಖೆ ಸದಾ ಬದ್ಧವಾಗಿದೆ. @BlrCityPolice@jt_cpwestbcp
#BengaluruCityPolice #KengeriDivision #AntiRowdySquad #CrimePrevention #PublicSafety
@DCPKENGERIBCP ವ್ಯಾಪ್ತಿಯ ACPs ಹಾಗೂ PIs ರವರೊಂದಿಗೆ ಕಾನೂನು ಸುವ್ಯವಸ್ಥೆ ಮತ್ತು ಅಪರಾಧ ಪರಿಸ್ಥಿತಿಗಳ ಕುರಿತು ಸಮಗ್ರ ಚರ್ಚೆ ನಡೆಸಲಾಯಿತು.
ಜನಸ್ನೇಹಿ ಪೊಲೀಸ್ ವ್ಯವಸ್ಥೆಯನ್ನು ಬಲಪಡಿಸುವುದು, ಅಪರಾಧ ತಡೆಗಟ್ಟುವಿಕೆ, ರೌಡಿಗಳ ಚಟುವಟಿಕೆಗಳ ನಿಗ್ರಹ ಹಾಗೂ ಸಾರ್ವಜನಿಕ ಸುರಕ್ಷತೆಯನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಎಲ್ಲಾ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಯಿತು..@BlrCityPolice@CCP_Blr
ಸಮನ್ವಯದ ಮೂಲಕ ಪೊಲೀಸ್ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ!
ಬೆಂಗಳೂರು ನಗರದ ಮುಖ್ಯ ಪೊಲೀಸ್ ಆಯುಕ್ತರಾದ ಶ್ರೀ ಆರ್. ಹಿತೇಂದ್ರ, ಐ.ಪಿ.ಎಸ್. ಅವರು, ಐವರು ಪೊಲೀಸ್ ಆಯುಕ್ತರೊಂದಿಗೆ ಕರ್ನಾಟಕದ ಮಾನ್ಯ ಗೃಹ ಸಚಿವರಾದ ಶ್ರೀ ಪ್ರಿಯಾಂಕ್ ಖರ್ಗೆ ಅವರನ್ನು ಭೇಟಿ ಮಾಡಿದರು.
ಬೆಂಗಳೂರು ನಗರ ಪೊಲೀಸ್ ಇಲಾಖೆಯನ್ನು ಐದು ಕಮಿಷನರೇಟ್ಗಳಾಗಿ ಪುನರ್ರಚಿಸಿದ ಹಿನ್ನೆಲೆಯಲ್ಲಿ ನಡೆದ ಈ ಔಪಚಾರಿಕ ಭೇಟಿಯು, ಪರಿಣಾಮಕಾರಿ ಸಮನ್ವಯ, ಬಲಿಷ್ಠ ಕಾನೂನು ಜಾರಿ, ಸಾರ್ವಜನಿಕ ಸುರಕ್ಷತೆ ಹಾಗೂ ನಾಗರಿಕ ಕೇಂದ್ರಿತ ಪೊಲೀಸ್ ಸೇವೆಯ ಬದ್ಧತೆಯನ್ನು ಮತ್ತೊಮ್ಮೆ ದೃಢಪಡಿಸಿತು.
Strengthening Coordination for a Safer Bengaluru!
Hon’ble Home Minister of Karnataka, Shri Priyank Kharge, visited the Bengaluru City Police Commissioner’s Office today and was welcomed with a ceremonial Guard of Honour.
The Hon’ble Minister subsequently chaired a meeting with Shri R. Hithendra, IPS, Chief Commissioner of Police, Bengaluru City, the five Commissioners of Police and other senior police officers.
The meeting marked an important step towards strengthening coordination, effective law enforcement and citizen-centric policing under Bengaluru’s newly established five-Commissionerate structure.
#BengaluruCityPolice #KarnatakaPolice #PublicSafety #Bengaluru
🙏 ಧನ್ಯವಾದಗಳು | ನೈಋತ್ಯ ವಿಭಾಗ 🙏
ನೈಋತ್ಯ ವಿಭಾಗದಿಂದ ವರ್ಗಾವಣೆಯಾಗುತ್ತಿರುವ ಹಿನ್ನೆಲೆಯಲ್ಲಿ, ಈ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸಿದ ಅವಧಿಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಹಾಗೂ ಅಪರಾಧ ಪತ್ತೆ ಕಾರ್ಯಗಳಲ್ಲಿ ಸಹಕಾರ ಮತ್ತು ಬೆಂಬಲ ನೀಡಿದ ಎಲ್ಲಾ ಅಧಿಕಾರಿ ಮತ್ತು ಸಿಬ್ಬಂದಿ ವರ್ಗದವರಿಗೆ ಹಾಗೂ ಸಾರ್ವಜನಿಕರಿಗೆ ಹೃತ್ಪೂರ್ವಕ ಧನ್ಯವಾದಗಳು.
ನೀಡಿದ ನಿಮ್ಮೆಲ್ಲರ ಸಹಕಾರ, ಪ್ರೀತಿ ಮತ್ತು ವಿಶ್ವಾಸ ಸದಾ ಸ್ಮರಣೀಯ. @BlrCityPolice @JointCPWest
#SouthWestDivision #ThankYou #BengaluruCityPolice
ಕರ್ನಾಟಕ ಲೋಕಸೇವಾ ಆಯೋಗದ ವತಿಯಿಂದ 2026-27ನೇ ಸಾಲಿನ ಗೆಜೆಟೆಡ್ ಪ್ರೊಬೇಷನರ್ಸ್ Group A ಮತ್ತು B ವೃಂದದ ಲಿಖಿತ ಪರೀಕ್ಷೆಯ ಹಿನ್ನೆಲೆಯಲ್ಲಿ, @DCPSOUTHWESTBCP division @kengeribcpksp , @JbharathiPS1 ಹಾಗೂ @sbpurabcp ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿರುವ ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ ಪೊಲೀಸ್ ಬಂದೋಬಸ್ತ್ ಮತ್ತು ಭದ್ರತಾ ವ್ಯವಸ್ಥೆಗಳನ್ನು ಪರಿಶೀಲಿಸಲಾಯಿತು. ಪರೀಕ್ಷೆಯು ಶಾಂತಿಯುತವಾಗಿ, ಸುರಕ್ಷಿತವಾಗಿ ಹಾಗೂ ಸುಸೂತ್ರವಾಗಿ ನಡೆಯುವಂತೆ ಅಗತ್ಯ ಪೊಲೀಸ್ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. 👮♂️🇮🇳 @BlrCityPolice@blrcitytraffic@DgpKarnataka
🌈 ಮಕ್ಕಳ ಕನಸುಗಳೇ ನಾಳಿನ ಭವಿಷ್ಯದ ಭರವಸೆ! 🌈
ಮಕ್ಕಳ ನಗು, ಮುಗ್ಧತೆ ಮತ್ತು ಕನಸುಗಳೇ ಉತ್ತಮ ಸಮಾಜದ ಭದ್ರ ಬುನಾದಿ. ಪ್ರತಿಯೊಂದು ಮಗುವಿಗೂ ಸುರಕ್ಷಿತ ಬಾಲ್ಯ, ಗುಣಮಟ್ಟದ ಶಿಕ್ಷಣ ಹಾಗೂ ಉಜ್ವಲ ಭವಿಷ್ಯ ದೊರೆಯಲಿ.
ಮಕ್ಕಳ ಹಕ್ಕುಗಳನ್ನು ಗೌರವಿಸಿ, ಅವರ ಕನಸುಗಳಿಗೆ ರೆಕ್ಕೆಗಳಾಗೋಣ. ಮಕ್ಕಳ ಸುರಕ್ಷತೆ ಮತ್ತು ಸರ್ವತೋಮುಖ ಬೆಳವಣಿಗೆಗೆ ಕೈಜೋಡಿಸೋಣ.
ಮಹತ್ತರ ಕನಸುಗಳನ್ನು ಹೊತ್ತ ಪುಟ್ಟ ಹೃದಯಗಳಿಂದಲೇ ಪ್ರತಿಯೊಂದು ಶ್ರೇಷ್ಠ ಭವಿಷ್ಯವೂ ನಿರ್ಮಾಣವಾಗುತ್ತದೆ.
ನಾಡಿನ ಸಮಸ್ತ ಮಕ್ಕಳಿಗೂ ಬೆಂಗಳೂರು ನಗರ ಪೊಲೀಸ್, ನೈಋತ್ಯ ವಿಭಾಗದ ವತಿಯಿಂದ ಮಕ್ಕಳ ದಿನಾಚರಣೆಯ ಹಾರ್ದಿಕ ಶುಭಾಶಯಗಳು! 💐 @BlrCityPolice @JointCPWest @JointCP_crime
#ChildrensDay #BengaluruCityPolice #SouthWestDivision #ChildSafety
ಮಾನ್ಯ ಭಾರತದ ಪ್ರಧಾನಮಂತ್ರಿಗಳ ಬೆಂಗಳೂರು ಭೇಟಿಯ ಹಿನ್ನೆಲೆಯಲ್ಲಿ, ನೈಋತ್ಯ ವಿಭಾಗದ ವ್ಯಾಪ್ತಿಯ ಎಲ್ಲಾ ಪೊಲೀಸ್ ಠಾಣೆಗಳ ರಾತ್ರಿ ಗಸ್ತು ಅಧಿಕಾರಿಗಳು ಹಾಗೂ ಸಿಬ್ಬಂದಿಯವರು ಮುಂಜಾಗ್ರತಾ ಕ್ರಮವಾಗಿ ಬಾರ್ ಮತ್ತು ಲಾಡ್ಜ್ಗಳಲ್ಲಿ ತಪಾಸಣೆ ನಡೆಸಿ, ಅನುಮಾನಾಸ್ಪದ ವ್ಯಕ್ತಿಗಳನ್ನು ಪರಿಶೀಲಿಸಿದರು. ಜೊತೆಗೆ ಕ್ರಿಮಿನಲ್ ಹಿನ್ನೆಲೆಯುಳ್ಳ ವ್ಯಕ್ತಿಗಳ ಮೇಲೂ ನಿಗಾ ವಹಿಸಿ ತಪಾಸಣೆ ಕೈಗೊಳ್ಳಲಾಯಿತು.
ಸಾರ್ವಜನಿಕರ ಸುರಕ್ಷತೆ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ನಿರಂತರವಾಗಿ ಕೈಗೊಳ್ಳಲಾಗುತ್ತಿದೆ. @BlrCityPolice @JointCPWest @dgpcidkarnataka
#DCPsouthwest #BengaluruCityPolice #SouthWestDivision #NightPatrolling
ದೀಪಗಳೊಂದಿಗೆ ದೀಪಾವಳಿಯ ಸಂಭ್ರಮ, ನಗು ಮತ್ತು ಒಗ್ಗಟ್ಟಿನ ಕ್ಷಣಗಳು!
ದಕ್ಷಿಣ ಪಶ್ಚಿಮ ವಿಭಾಗದ ಡಿಸಿಪಿ ಡಾ. ಎಸ್. ಕೆ. ಸೌಮ್ಯಲತಾ, ಐಪಿಎಸ್ ಅವರು ಇತರ ಪೊಲೀಸ್ ಅಧಿಕಾರಿಗಳೊಂದಿಗೆ ಸಿಎಆರ್ (CAR) ಪ್ರಧಾನ ಕಚೇರಿಯಲ್ಲಿ ಪೊಲೀಸ್ ಸಿಬ್ಬಂದಿ ಹಾಗೂ ಅವರ ಕುಟುಂಬದವರೊಂದಿಗೆ ಸೇರಿ ದೀಪಾವಳಿ ಹಬ್ಬವನ್ನು ಆಚರಿಸಿದರು.
ಸಾಂಪ್ರದಾಯಿಕ ದೀಪಗಳನ್ನು ಬೆಳಗಿಸುವುದರಿಂದ ಹಿಡಿದು ಮಕ್ಕಳೊಂದಿಗೆ ಹಬ್ಬದ ಸಂತೋಷವನ್ನು ಹಂಚಿಕೊಳ್ಳುವವರೆಗೆ, ಈ ಆಚರಣೆಯು ಕಳಕಳಿ, ಸಂತೋಷ ಮತ್ತು ಒಗ್ಗಟ್ಟಿನಿಂದ ಕಂಗೊಳಿಸಿತು.
ಒಂದೇ ಪೊಲೀಸ್ ಕುಟುಂಬ, ಅಸಂಖ್ಯಾತ ನಗುಗಳು ಮತ್ತು ಎಂದೆಂದೂ ನೆನಪಿನಲ್ಲಿ ಉಳಿಯುವಂತಹ ಆಚರಣೆ!
Lighting Up Diwali with Smiles and Togetherness!
Dr. S. K. Soumyalatha, IPS, DCP South West, along with other police officers, joined police personnel and their families at CAR Headquarters to celebrate the festival of lights.
From lighting traditional lamps to sharing festive joy with children, the celebration was filled with warmth, happiness and togetherness.
One police family, countless smiles and a celebration to remember!
#DiwaliCelebrations #PoliceFamily #BengaluruCityPolice
@CPBlr
@seemantsingh96@DgpKarnataka@KarnatakaCops@Jointcptraffic@CMofKarnataka@PriyankKharge
ಬೆಳಕಿನ ಹಬ್ಬ ದೀಪಾವಳಿಯ ಪ್ರಯುಕ್ತ, @DCPSOUTHWESTBCP ರವರ ನೇತೃತ್ವದಲ್ಲಿ @DCPWestBCP ವ್ಯಾಪ್ತಿಯ @APNagarBCP ಪೊಲೀಸ ವಸತಿ ಗೃಹದಲ್ಲಿ ನೈರುತ್ಯ ವಿಭಾಗದ ACPs ಹಾಗೂ PIs ರವರುಗಳು ಪೊಲೀಸ್ ಸಿಬ್ಬಂದಿ ಮತ್ತು ಅವರ ಕುಟುಂಬದ ಸದಸ್ಯರೊಂದಿಗೆ ಸಿಹಿ ಹಂಚಿಕೊಂಡು, ಪರಸ್ಪರ ಶುಭಾಶಯಗಳನ್ನು ವಿನಿಮಯ ಮಾಡಿಕೊಳ್ಳುವ ಮೂಲಕ ದೀಪಾವಳಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು.
ಈ ದೀಪಾವಳಿಯು ಎಲ್ಲರ ಜೀವನದಲ್ಲೂ ಸುಖ, ಶಾಂತಿ, ಸಮೃದ್ಧಿ ಹಾಗೂ ಸಂತೋಷದ ಬೆಳಕನ್ನು ಹರಡಲಿ.
ಎಲ್ಲರಿಗೂ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು! 🪔 @BlrCityPolice@blrcitytraffic @JointCPWest
ಸುರಕ್ಷಿತ ದೀಪಾವಳಿ – ಸಂತಸದ ದೀಪಾವಳಿ!
#BengaluruCityPolice #DCPSouthWest #PoliceFamily #HappyDeepavali #SafeDeepavali 🪔✨❤️
ನೈಋತ್ಯ ವಿಭಾಗದ ವ್ಯಾಪ್ತಿಯ ಪೊಲೀಸ್ ಠಾಣೆಗಳ ರಾತ್ರಿ ಗಸ್ತು ಅಧಿಕಾರಿಗಳು ಮತ್ತು ಸಿಬ್ಬಂದಿಯವರು ವಿವಿಧ ಸ್ಥಳಗಳಲ್ಲಿ ನಾಕಾಬಂದಿ ನಡೆಸಿ ವಾಹನಗಳ ತಪಾಸಣೆ ಕೈಗೊಂಡರು.
ಇದರೊಂದಿಗೆ ಕ್ರಿಮಿನಲ್ ಹಿನ್ನೆಲೆಯುಳ್ಳ ವ್ಯಕ್ತಿಗಳ ತಪಾಸಣೆ ಹಾಗೂ ಪರಿಶೀಲನೆ ನಡೆಸಿ, ಸಾರ್ವಜನಿಕರ ಸುರಕ್ಷತೆ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಯಿತು. @BlrCityPolice @JointCPWest @AcpKengeri
#DCPsouthwest #SouthWestDivision #NightPatrolling #NakaBandi
ಬೆಳಕಿನ ಹಬ್ಬ ದೀಪಾವಳಿಯು ಪ್ರತಿಯೊಬ್ಬರ ಜೀವನದಲ್ಲಿ ಸಂತೋಷ, ಶಾಂತಿ, ಸಮೃದ್ಧಿ ಹಾಗೂ ಉತ್ತಮ ಆರೋಗ್ಯವನ್ನು ತರಲಿ. ದೀಪಗಳ ಬೆಳಕು ಬದುಕಿನ ಕತ್ತಲೆಯನ್ನು ದೂರಮಾಡಿ, ಹೊಸ ಭರವಸೆ, ಸಂತೋಷ ಮತ್ತು ಯಶಸ್ಸಿನ ಹಾದಿಯನ್ನು ಬೆಳಗಿಸಲಿ.
ಪಟಾಕಿಗಳನ್ನು ಸಿಡಿಸುವಾಗ ಎಚ್ಚರಿಕೆ ವಹಿಸಿ, ನಿಗದಿತ ಸಮಯ ಮತ್ತು ಸುರಕ್ಷತಾ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಿ. ಸಾರ್ವಜನಿಕರ ಸುರಕ್ಷತೆ ಹಾಗೂ ಪರಿಸರ ಸಂರಕ್ಷಣೆಗೆ ಎಲ್ಲರೂ ಕೈಜೋಡಿಸೋಣ.
ಸುರಕ್ಷಿತ ದೀಪಾವಳಿ, ಸಂತಸದ ದೀಪಾವಳಿ! 🪔
ನಾಡಿನ ಸಮಸ್ತ ಜನತೆಗೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು! 🪔✨ @BlrCityPolice @JointCPWest @AcpKengeri@ablesbpura
#HappyDiwali2026 #FestivalOfLights #SafeDiwali #CelebrateResponsibly #DCPSouthWest
ಪಟಾಕಿಗಳನ್ನು ಸಿಡಿಸುವಾಗ ಅಗತ್ಯ ಮುನ್ನೆಚ್ಚರಿಕೆ ವಹಿಸಿ. ಹಸಿರು ಪಟಾಕಿಗಳನ್ನೇ ಬಳಸಿ ಹಾಗೂ ಸುಪ್ರೀಂ ಕೋರ್ಟ್ ನಿಗದಿಪಡಿಸಿರುವ ಸಮಯದ ಮಿತಿಯನ್ನು ಕಡ್ಡಾಯವಾಗಿ ಪಾಲಿಸಿ.
ಸಾರ್ವಜನಿಕರ ಸುರಕ್ಷತೆ ಮತ್ತು ಪರಿಸರ ಸಂರಕ್ಷಣೆಗೆ ಆದ್ಯತೆ ನೀಡಿ, ಜವಾಬ್ದಾರಿಯುತವಾಗಿ ಹಾಗೂ ಸುರಕ್ಷಿತವಾಗಿ ದೀಪಾವಳಿ ಹಬ್ಬವನ್ನು ಆಚರಿಸೋಣ.@BlrCityPolice
#SafeDeepavali #GreenCrackers #CelebrateSafely #EcoFriendlyDeepavali