@GBA_office GBA ಗೆ health inspector ನೇಮಕಾತಿ ಮಾಡಿ ಸ್ವಾಮಿ 2009 ರಿಂದ ಯಾವುದೇ ನೇಮಕಾತಿ ಆಗಿಲ್ಲ ಆರೋಗ್ಯ ಇಲಾಖೆ ಇಂದ 54 ಜನ ಡೆಪ್ಯೂಟೇಷನ್ ಬಂದು ಅಲ್ಲೇ ಜಾಂಡಾ ಉರಿದ್ದಾರೆ 10 ವರ್ಷ ಆದ್ರೂ
@GBA_office GBA ಗೆ health inspector ನೇಮಕಾತಿ ಮಾಡಿ ಸ್ವಾಮಿ 2009 ರಿಂದ ಯಾವುದೇ ನೇಮಕಾತಿ ಆಗಿಲ್ಲ ಆರೋಗ್ಯ ಇಲಾಖೆ ಇಂದ 54 ಜನ ಡೆಪ್ಯೂಟೇಷನ್ ಬಂದು ಅಲ್ಲೇ ಜಾಂಡಾ ಉರಿದ್ದಾರೆ 10 ವರ್ಷ ಆದ್ರೂ
These are the RTC records of approximately 80 acres of land owned by former KPSC Chairman Shivashankarappa Sahukar, whose daughter Suma Sahukar declared an annual income of ₹40,000 and secured a government job through the KPSC.
#KPSCScam
ಪೊಲೀಸ್ ಇಲಾಖೆಯಲ್ಲಿ ಖಾಲಿಯಿರುವ ಉಳಿಕೆ ಮೂಲ ವೃಂದದ 3,395 ಮತ್ತು ಸ್ಥಳೀಯ ವೃಂದದ 596 ಪೊಲೀಸ್ ಕಾನ್ಸ್ಟೇಬಲ್ (sivil) ಹುದ್ದೆಗಳ ನೇರ ನೇಮಕಾತಿ ಪರೀಕ್ಷೆಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ @KEA_karnataka ಒಂದೇ ದಿನ ನಡೆಸುತ್ತಿರುವುದು ಎರಡೂ ಹುದ್ದೆಗಳಿಗೆ ಅರ್ಜಿಸಲ್ಲಿಸಿದ ಅಭ್ಯರ್ಥಿಗಳಿಗೆ ತೀವ್ರ ತೊಂದರೆಯಾಗಿದೆ. ಪ್ರಾಧಿಕಾರಕ್ಕೆ ಕಿಂಚಿತ್ತಾದರೂ ಸಾಮಾನ್ಯ ಜ್ಞಾನವಿದ್ದರೆ ಈ ರೀತಿಯಾದ ಸಮಸ್ಯೆ ಉದ್ಭವಿಸುತ್ತಿರಲಿಲ್ಲ. ಅವೈಜ್ಞಾನಿಕ ಪರೀಕ್ಷೆ ವೇಳಾಪಟ್ಟಿಯಿಂದ (Unscientific Examination Scheduling) ಪರೀಕ್ಷಾರ್ಥಿಗಳಿಗೆ ತೀವ್ರ ತೊಂದರೆಯಾಗುತ್ತದೆ.
ಪರೀಕ್ಷಾರ್ಥಿಗಳ ಹಿತವನ್ನು ಕಾಪಾಡಿಕೊಂಡು ಪರೀಕ್ಷೆ ವೇಳಾಪಟ್ಟಿ ರಚಿಸಬೇಕೇ ಹೊರತು, ಯಾವುದೋ ಒಂದು ಭಾನುವಾರ ಪರೀಕ್ಷೆ ನಡೆಸಿ ಕೈ ತೊಳೆದುಕೊಳ್ಳೋಣ ಎಂಬ ಪ್ರಾಧಿಕಾರದ ವರ್ತನೆ ಖಂಡನೀಯ. ಪರೀಕ್ಷೆಗೆ ಹಗಲಿರುಳು ಕಷ್ಟಪಟ್ಟು ಓದಿಕೊಂಡಿರುವ ಪರೀಕ್ಷಾರ್ಥಿಗಳಿಗೆ ಇದು ತೀವ್ರ ಹಿನ್ನಡೆಯಾಗಲಿದೆ. ಅವರ ಭವಿಷ್ಯ ಡೋಲಾಯಮಾನವಾಗಲಿದೆ. ಮತ್ತೊಮ್ಮೆ ಪರೀಕ್ಷೆ ಎದುರಿಸಲು ಅವರಿಗೆ ವಯೋಮಿತಿಯ ಸಮಸ್ಯೆ ಎದುರಾಗುತ್ತದೆ.
ಪ್ರಾಧಿಕಾರವು ಕೂಡಲೇ ಯಾವುದಾದರು ಒಂದು ಪರೀಕ್ಷೆಯನ್ನು ಮುಂದೆ ಹಾಕಿ ಪರೀಕ್ಷಾರ್ಥಿಗಳ ಹಿತವನ್ನು, ಭವಿಷ್ಯವನ್ನು ಕಾಪಾಡಲಿ
@AKSSAofficial I @VijayaKarnataka I @Vijaykarnataka I @CMofKarnataka
ಕೆಪಿಎಸ್ಸಿಯ ಪಶುವೈದ್ಯಾಧಿಕಾರಿಗಳ ನೇಮಕಾತಿಯಲ್ಲಿ ₹80 ಲಕ್ಷದವರೆಗೆ ಲಂಚ ಪಡೆದಿರುವ ಗಂಭೀರ ಆರೋಪಗಳು ಕರ್ನಾಟಕದ ಲಕ್ಷಾಂತರ ಉದ್ಯೋಗಾಕಾಂಕ್ಷಿಗಳ ನಂಬಿಕೆಗೆ ದೊಡ್ಡ ಆಘಾತ ನೀಡಿವೆ.
ಇಂತಹ ಸಂದರ್ಭದಲ್ಲಿ ಕೆಪಿಎಸ್ಸಿಯೇ ತನ್ನ ವಿರುದ್ಧದ ಆರೋಪಗಳನ್ನು ಆಂತರಿಕವಾಗಿ ತನಿಖೆ ನಡೆಸುವುದರಿಂದ ಸತ್ಯ ಹೊರಬರುವುದಿಲ್ಲ; ಸಾರ್ವಜನಿಕರ ವಿಶ್ವಾಸವೂ ಮೂಡುವುದಿಲ್ಲ.
ಈ ನಿಟ್ಟಿನಲ್ಲಿ ಇಂದು ವಿಧಾನ ಪರಿಷತ್ ಪ್ರತಿಪಕ್ಷ ನಾಯಕರಾದ ಶ್ರೀ ಛಲವಾದಿ ನಾರಾಯಣಸ್ವಾಮಿ ಹಾಗೂ ಹಿರಿಯ ಶಾಸಕರಾದ ಶ್ರೀ ಸುರೇಶ್ ಕುಮಾರ್ ಅವರೊಂದಿಗೆ ಕೆಪಿಎಸ್ಸಿ ಕಾರ್ಯದರ್ಶಿಯವರನ್ನು ಭೇಟಿ ಮಾಡಿ, ಈ ಆಂತರಿಕ ತನಿಖೆಯನ್ನು ತಕ್ಷಣವೇ ರದ್ದುಗೊಳಿಸಿ, ಪ್ರಕರಣವನ್ನು ಸಿಬಿಐ ಅಥವಾ ಕರ್ನಾಟಕ ಹೈಕೋರ್ಟ್ನ ಹಾಲಿ ನ್ಯಾಯಮೂರ್ತಿಯವರ ನೇತೃತ್ವದ ಸ್ವತಂತ್ರ ನ್ಯಾಯಾಂಗ ತನಿಖೆಗೆ ಒಪ್ಪಿಸುವಂತೆ ಒತ್ತಾಯಿಸಿ ಮನವಿ ಸಲ್ಲಿಸಿದ್ದೇವೆ.
ಇದು ಕೇವಲ ಒಂದು ನೇಮಕಾತಿಯ ಪ್ರಶ್ನೆಯಲ್ಲ. ತಮ್ಮ ಜೀವನದ ಅಮೂಲ್ಯ ವರ್ಷಗಳನ್ನು ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಮೀಸಲಿಟ್ಟಿರುವ ಲಕ್ಷಾಂತರ ಯುವಕರ ಕನಸು, ಪರಿಶ್ರಮ ಮತ್ತು ನ್ಯಾಯಯುತ ಹಕ್ಕಿನ ಪ್ರಶ್ನೆಯಾಗಿದೆ.
ವಿಶ್ವಾಸಾರ್ಹತೆ ಇಲ್ಲದ ಕಾಟಾಚಾರದ ತನಿಖೆಯಿಂದ ಯಾರಿಗೂ ಪ್ರಯೋಜನವಿಲ್ಲ. ಕೆಪಿಎಸ್ಸಿಯ ಮೇಲಿನ ಸಾರ್ವಜನಿಕರ ವಿಶ್ವಾಸವನ್ನು ಮರುಸ್ಥಾಪಿಸಲು ಸಂಪೂರ್ಣ ಸ್ವತಂತ್ರ ತನಿಖೆಯೊಂದೇ ಮಾರ್ಗ.
ಉದ್ಯೋಗಾಕಾಂಕ್ಷಿ ಯುವಕರ ಹಕ್ಕುಗಳಿಗಾಗಿ ನಮ್ಮ ಹೋರಾಟ ನಿರಂತರ.
ಕೆಪಿಎಸ್ಸಿ ಪಿಡಿಒ ನೇಮಕಾತಿಯಲ್ಲೂ ಅಕ್ರಮದ ಆರೋಪ; ತನಿಖೆಗೆ ಅಭ್ಯರ್ಥಿಗಳ ಒತ್ತಾಯ | Janamitra
https://t.co/KPJcgcaSVd
ಕರ್ನಾಟಕ ಸ್ವಾಭಿಮಾನಿ ವಿದ್ಯಾರ್ಥಿ ಸಮೂಹ ರಸ್ತೆಗೆ ಇಳಿದು ಪ್ರತಿಭಟಿಸುವ ಮುನ್ನ
@secretarykpsc ಕೂಡಲೇ @PDO ನೇಮಕಾತಿ ಪ್ರಕ್ರಿಯೆ ತಡೆ ಹಿಡಿಯಿರಿ ಹಾಗೂ ಪಾರದರ್ಶಕ ತನಿಖೆ ಮಾಡಿ
@DKShivakumar
ಕರ್ನಾಟಕ ಲೋಕಸೇವಾ ಆಯೋಗ (KPSC)ದಲ್ಲಿ ಇತ್ತೀಚಿನ ದಿನಗಳಲ್ಲಿ ಹೊರಬರುತ್ತಿರುವ ಗಂಭೀರ ಆರೋಪಗಳು ರಾಜ್ಯದ ಲಕ್ಷಾಂತರ ಉದ್ಯೋಗಾಕಾಂಕ್ಷಿಗಳ ವಿಶ್ವಾಸವನ್ನು ಬುಡಮೇಲು ಮಾಡಿವೆ. ಕೆಪಿಎಸ್ಸಿ ಅಧ್ಯಕ್ಷರಾಗಿದ್ದ ಶಿವಶಂಕರಪ್ಪ ಸಾಹುಕಾರ್ ಅವರ ವಿರುದ್ಧ ಕೇಳಿಬಂದಿರುವ ನೇಮಕಾತಿ ಅಕ್ರಮ, ಸ್ವಜನಪಕ್ಷಪಾತ ಹಾಗೂ ಭ್ರಷ್ಟಾಚಾರದ ಆರೋಪಗಳು ರಾಜ್ಯದ ಆಡಳಿತ ವ್ಯವಸ್ಥೆಯ ವಿಶ್ವಾಸಾರ್ಹತೆಯ ಮೇಲೆಯೇ ಪ್ರಶ್ನಾರ್ಥಕ ಚಿಹ್ನೆ ಮೂಡಿಸಿವೆ. ಈ ಹಿನ್ನೆಲೆಯಲ್ಲಿ ಕೇವಲ ಇಲಾಖಾ ಅಥವಾ ಸೀಮಿತ ತನಿಖೆಯಿಂದ ಸತ್ಯ ಹೊರಬರುವುದಿಲ್ಲ. ಹೀಗಾಗಿ ಕೆಪಿಎಸ್ಸಿ ನೇಮಕಾತಿಗಳಲ್ಲಿನ ಎಲ್ಲ ಅಕ್ರಮಗಳ ಕುರಿತು ಕೇಂದ್ರ ತನಿಖಾ ದಳ (CBI)ದಿಂದ ಸಮಗ್ರ ಮತ್ತು ನ್ಯಾಯಸಮ್ಮತ ತನಿಖೆ ನಡೆಸಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ಆಗ್ರಹಿಸುತ್ತದೆ.
ಭ್ರಷ್ಟಾಚಾರ ಮತ್ತು ಸ್ವಜನ ಪಕ್ಷಪಾತದಆರೋಪಗಳ ಹಿನ್ನೆಲೆಯಲ್ಲಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಅವರನ್ನು ಅಮಾನತುಗೊಳಿಸಲಾಗಿದೆ ಹಾಗೂ ಹೈಕೋರ್ಟ್ನಲ್ಲಿಯೂ ಸಿಬಿಐ ತನಿಖೆಗೆ ಸಂಬಂಧಿಸಿದ ಅರ್ಜಿಗಳು ವಿಚಾರಣೆಯಲ್ಲಿವೆ. ಆದರೆ ಇಷ್ಟು ಸಾಲದು. ಸರಿಯಾದ ತನಿಖೆ ನಡೆದು ಆರೋಪಿಗಳಿಗೆ ತಕ್ಕ ಶಿಕ್ಷೆ ಆಗಬೇಕು.
ಕೆಪಿ ಎಸ್ ಸಿ ಮೂಲಕ ನಡೆಡೆದಿರುವ ವಿವಿಧ ನೇಮಕಾತಿ ಪ್ರಕ್ರಿಯೆಗಳು, ಪರೀಕ್ಷೆಗಳು, ಫಲಿತಾಂಶಗಳು ಮತ್ತು ಆಯ್ಕೆ ಪಟ್ಟಿಗಳ ಬಗ್ಗೆ ಸಾರ್ವಜನಿಕರಲ್ಲಿ ಗಂಭೀರ ಅನುಮಾನಗಳು ಮೂಡಿವೆ. ಪಶುವೈದ್ಯಾಧಿಕಾರಿಗಳ ನೇಮಕಾತಿ ಸೇರಿದಂತೆ ಹಲವು ನೇಮಕಾತಿಗಳಲ್ಲಿ ಹಣದ ವ್ಯವಹಾರ ನಡೆದಿದೆ, ಮಧ್ಯವರ್ತಿಗಳ ಮೂಲಕ ಉದ್ಯೋಗ ಮಾರಾಟವಾಗಿದೆ ಎಂಬ ಆರೋಪಗಳೂ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿವೆ. ಸಮಗ್ರ ತನಿಖೆಯ ಮೂಲಕವೇ ಸತ್ಯಾಸತ್ಯತೆ ತಿಳಿಯಬೇಕು.
ವಿಶೇಷವಾಗಿ, ಸಾಹುಕಾರ್ ಅವರ ಅಧ್ಯಕ್ಷತೆಯ ಅವಧಿಯಲ್ಲಿ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಪಡೆದ ಸಾವಿರಾರು ಅಭ್ಯರ್ಥಿಗಳಿಗೆ ತೀವ್ರ ಅನ್ಯಾಯವಾಗಿದೆ. ಹುದ್ದೆಗಳನ್ನು ಮಾರಿಕೊಂಡ ಹಿನ್ನಲೆಯಲ್ಲೇ ಕನ್ನಡ ಮಾಧ್ಯಮ ಅಭ್ಯರ್ಥಿಗಳಿಗೆ ದೊರಕಬೇಕಿದ್ದ ನ್ಯಾಯ ದೊರೆಯಲಿಲ್ಲ. ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾದ್ಯಂತ ಪ್ರತಿಭಟನೆಗಳನ್ನು ನಡೆಸಿ ಸರ್ಕಾರ ಹಾಗೂ ಕೆಪಿಎಸ್ಸಿಯ ಗಮನ ಸೆಳೆದಿತ್ತು. ಆದರೂ ಸಮಸ್ಯೆಗೆ ಶಾಶ್ವತ ಪರಿಹಾರ ದೊರಕಲಿಲ್ಲ. ಕನ್ನಡದಲ್ಲಿ ಶಿಕ್ಷಣ ಪಡೆದ ಪ್ರತಿಭಾವಂತ ಯುವಜನರ ಭವಿಷ್ಯವನ್ನು ಹಾಳು ಮಾಡಿದ ಎಲ್ಲ ನಿರ್ಧಾರಗಳ ಬಗ್ಗೆಯೂ ತನಿಖೆಯಾಗಬೇಕು.
ಕೆಪಿಎಸ್ಸಿ ಎನ್ನುವುದು ಸಾಮಾನ್ಯ ಸಂಸ್ಥೆಯಲ್ಲ. ಇದು ರಾಜ್ಯದ ಆಡಳಿತ ವ್ಯವಸ್ಥೆಗೆ ಅಧಿಕಾರಿಗಳನ್ನು ಆಯ್ಕೆ ಮಾಡುವ ಸಾಂವಿಧಾನಿಕ ಸಂಸ್ಥೆ. ಅಂತಹ ಸಂಸ್ಥೆಯ ಮೇಲೆಯೇ ಜನರ ವಿಶ್ವಾಸ ಕುಸಿದರೆ ಅದು ಪ್ರಜಾಪ್ರಭುತ್ವದ ಆಡಳಿತ ವ್ಯವಸ್ಥೆಗೆ ಅಪಾಯಕಾರಿ ಬೆಳವಣಿಗೆಯಾಗುತ್ತದೆ. ಆದ್ದರಿಂದ ಕೇವಲ ಕೆಲ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವುದರಿಂದ ಸಾಲದು. ಕಳೆದ ಹಲವು ವರ್ಷಗಳ ನೇಮಕಾತಿ ಪ್ರಕ್ರಿಯೆಗಳು, ಮೌಲ್ಯಮಾಪನ, ಮೀಸಲಾತಿ ಅನುಷ್ಠಾನ, ಅಂಕಗಳ ಹಂಚಿಕೆ ಹಾಗೂ ಅಭ್ಯರ್ಥಿಗಳ ಆಯ್ಕೆ ಸೇರಿದಂತೆ ಎಲ್ಲ ಆಯಾಮಗಳ ಬಗ್ಗೆ ಸ್ವತಂತ್ರ ತನಿಖೆ ನಡೆಯಬೇಕು.
ನಮ್ಮ ಹಕ್ಕೊತ್ತಾಯಗಳು:
1. ಕೆಪಿಎಸ್ಸಿಯ ಎಲ್ಲ ಪ್ರಮುಖ ನೇಮಕಾತಿ ಅಕ್ರಮಗಳ ಕುರಿತು ತಕ್ಷಣ ಸಿಬಿಐ ತನಿಖೆಗೆ ಶಿಫಾರಸು ಮಾಡಬೇಕು.
2. ಸಾಹುಕಾರ್ ಅವರ ಅಧ್ಯಕ್ಷತೆಯ ಅವಧಿಯ ಎಲ್ಲ ನೇಮಕಾತಿಗಳನ್ನು ಸಮಗ್ರವಾಗಿ ಪರಿಶೀಲಿಸಬೇಕು.
3. ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಆಗಿರುವ ಅನ್ಯಾಯದ ಕುರಿತು ಪ್ರತ್ಯೇಕ ನ್ಯಾಯಾಂಗ ಅಥವಾ ಉನ್ನತ ಮಟ್ಟದ ತನಿಖೆ ನಡೆಸಬೇಕು.
4. ಅಕ್ರಮ ಸಾಬೀತಾದರೆ ಸಂಬಂಧಪಟ್ಟ ಅಧಿಕಾರಿಗಳು, ಮಧ್ಯವರ್ತಿಗಳು ಹಾಗೂ ಇತರರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು.
5. ತಪ್ಪು ಕಂಡುಬಂದ ನೇಮಕಾತಿಗಳನ್ನು ಮರುಪರಿಶೀಲಿಸಿ ಅರ್ಹ ಅಭ್ಯರ್ಥಿಗಳಿಗೆ ನ್ಯಾಯ ಒದಗಿಸಬೇಕು.
6. ಕೆಪಿಎಸ್ಸಿಯಲ್ಲಿ ಪಾರದರ್ಶಕತೆ ಮತ್ತು ವಿಶ್ವಾಸ ಮರುಸ್ಥಾಪಿಸಲು ಶಾಶ್ವತ ಸುಧಾರಣಾ ಕ್ರಮಗಳನ್ನು ಜಾರಿಗೊಳಿಸಬೇಕು.
ರಾಜ್ಯದ ಲಕ್ಷಾಂತರ ಯುವಜನರ ಭವಿಷ್ಯದ ಪ್ರಶ್ನೆಯಾಗಿರುವ ಈ ಪ್ರಕರಣದಲ್ಲಿ ಸರ್ಕಾರ ಯಾವುದೇ ಮುಚ್ಚಿಹಾಕುವ ಪ್ರಯತ್ನ ಮಾಡಬಾರದು. ಸತ್ಯ ಹೊರಬಂದು ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಹಾಗೂ ನಿರಪರಾಧ ಅಭ್ಯರ್ಥಿಗಳಿಗೆ ನ್ಯಾಯ ಸಿಗಬೇಕು. ಕರ್ನಾಟಕ ರಕ್ಷಣಾ ವೇದಿಕೆ ಈ ಹೋರಾಟವನ್ನು ರಾಜ್ಯದ ಯುವಜನರ ಹಿತದೃಷ್ಟಿಯಿಂದ ಮುಂದುವರಿಸಲಿದೆ.
– ಟಿ.ಎ. ನಾರಾಯಣಗೌಡ
ರಾಜ್ಯಾಧ್ಯಕ್ಷರು
ಕರ್ನಾಟಕ ರಕ್ಷಣಾ ವೇದಿಕೆ
ವಿಷಯ: ಶಿಕ್ಷಕರ ನೇಮಕಾತಿಯಲ್ಲಿರುವ ಸಮಸ್ಯೆಗಳನ್ನು ಬಗೆಹರಿಸುವುದು ಹಾಗೂ ಅರಣ್ಯ ಇಲಾಖೆಯ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡುವ ಕುರಿತು.
ಮಾನ್ಯರೇ,
ಕೆಳಕಂಡ ಬೇಡಿಕೆಗಳನ್ನು ಸರ್ಕಾರವು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ವಿನಂತಿಸುತ್ತೇವೆ.
1. PSTR, GPSTR, HSTR ಹಾಗೂ ದೈಹಿಕ ಶಿಕ್ಷಣ ಶಿಕ್ಷಕರ (Physical Education Teacher) ನೇಮಕಾತಿಯಲ್ಲಿ ಎರಡು ಪೇಪರ್ಗಳ ವಸ್ತುನಿಷ್ಠ (MCQ) ಪರೀಕ್ಷಾ ಪದ್ಧತಿ ಜಾರಿಗೊಳಿಸಬೇಕು.
* Paper–1: ಸಾಮಾನ್ಯ ಜ್ಞಾನ (General Knowledge)
* Paper–2: ವಿಷಯಾಧಾರಿತ (Specific Subject)
2. B.Ed ಪೂರ್ಣಗೊಳಿಸಿರುವ ಅಭ್ಯರ್ಥಿಗಳಿಗೆ GPSTR ಹಾಗೂ HSTR ಹುದ್ದೆಗಳ ನೇಮಕಾತಿಯಲ್ಲಿ ಅವಕಾಶ ಕಲ್ಪಿಸಬೇಕು.
3. Beat Forest Officer ಹಾಗೂ Beat Forest Watcher ಹುದ್ದೆಗಳ ನೇಮಕಾತಿಯಲ್ಲಿ SSLC ಹಾಗೂ PUC ಅಂಕಗಳಿಗೆ ಆದ್ಯತೆ ನೀಡುವ ಬದಲು CET ಅಂಕಗಳ ಆಧಾರದ ಮೇಲೆ ಆಯ್ಕೆ ಪ್ರಕ್ರಿಯೆ ನಡೆಸಬೇಕು.
4. HK ಹಾಗೂ NHK ಭಾಗಗಳಲ್ಲಿ ಸಂಗೀತ ಶಿಕ್ಷಕರ ಖಾಲಿ ಹುದ್ದೆಗಳನ್ನು ತಕ್ಷಣ ಭರ್ತಿ ಮಾಡಬೇಕು.
5. HK ಹಾಗೂ NHK ಭಾಗಗಳಲ್ಲಿ PSTR ಹುದ್ದೆಗಳ ಸಂಖ್ಯೆಯನ್ನು ಹೆಚ್ಚಿಸಬೇಕು.
6. HK ಹಾಗೂ NHK ಭಾಗಗಳಲ್ಲಿ ದೈಹಿಕ ಶಿಕ್ಷಣ ಶಿಕ್ಷಕರ ಹುದ್ದೆಗಳ ಸಂಖ್ಯೆಯನ್ನು ಹೆಚ್ಚಿಸಬೇಕು.
7. PSTR ಹುದ್ದೆಗಳನ್ನು ಸಾಮಾನ್ಯ ಶಿಕ್ಷಕರ (General Teacher) ಹುದ್ದೆಗಳಾಗಿ ನೇಮಕಾತಿ ಮಾಡಬೇಕು.
8. PSTR ಹುದ್ದೆಗಳ ನೇಮಕಾತಿಯಲ್ಲಿ PUC ಒಟ್ಟು ಅಂಕಗಳಿಗೆ 50% ತೂಕ (Weightage) ನೀಡಬೇಕು.
9. ಹಿಂದಿ ವಿಷಯದ ಶಿಕ್ಷಕರ ಹುದ್ದೆಗಳನ್ನು ತಕ್ಷಣ ನೇಮಕಾತಿ ಮಾಡಬೇಕು.
10. ಗಣಿತ ವಿಷಯದ ಶಿಕ್ಷಕರ ಹುದ್ದೆಗಳನ್ನು ನೇಮಕಾತಿ ಮಾಡಬೇಕು.
11. GPSTR ಹಾಗೂ HSTR ನೇಮಕಾತಿಯಲ್ಲಿ Biotechnology ಹಾಗೂ Biochemistry ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳಿಗೂ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಬೇಕು.
ಮೇಲಿನ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರದ ಗಮನ ಸೆಳೆಯುವ ಉದ್ದೇಶದಿಂದ ದಿ. 28-07-2026 ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಶಾಂತಿಯುತ ಪ್ರತಿಭಟನೆ ನಡೆಸಲು ಅನುಮತಿ ನೀಡುವಂತೆ ಈ ಮೂಲಕ ವಿನಮ್ರವಾಗಿ ಕೋರಲಾಗಿದೆ.
@eshwar_khandre@HKPatilINC @NCheluvarayaS @blsanthosh@BJP4Karnataka@INCKarnataka@publictvnews@AsianetNewsSN@prajavani@KannadaPrabha@shalinirajnish@BasanagoudaBJP@Dr_Yathindra_S@RLR_BTM@ashwaveganews@BasanagoudaBJP@PriyankKharge@DKShivakumar@tv9kannada@Sowmyareddyr@KhMuniyappa@byrathi_suresh@sstangadagi@RahulGandhi@iShivanandpatil@MBPatil@dineshgrao@BZZameerAhmedK@krishnabgowda@laxmi_hebbalkar @dsudhakar2727 @DrParameshwara
KPSC SCAM is in next level 🚨
ಸಂಬಂಧಿಕರ ಮಕ್ಕಳಿಗೆ ಪಶು ವೈದ್ಯ ಹುದ್ದೆ ಗಿಫ್ಟ್ ಅಂತೆ 🤷🏻♂️
Wikipedia server gets down for state issues 🌚
No sandalwood actresses put stories now
No Twitter outrage for resignation
ನಮ್ಮ ನಾಡು, ನಮ್ಮ ಆಳ್ವಿಕೆ ಅಂದ್ರೆ ಇದೇನಾ ಸ್ವಾಮಿ?
KPSC ಪಶುವೈದ್ಯಾಧಿಕಾರಿ ಪರೀಕ್ಷೆಯಲ್ಲಿ 80 ಲಕ್ಷ ಬೇಡಿಕೆ ಇಟ್ಟ ಪ್ರಕರಣದಲ್ಲಿ FIR ದಾಖಲು.
ಈಗೇನಾದರೂ ಬಿಜೆಪಿ ಅರುಣ್ ಶ್ಯಾಮ್ ಅನ್ನು ಡಿಫೆಂಡ್ ಮಾಡೋಕೆ ಕಳಿಸಿದ್ರೇ ಎಕ್ಕಡ ಸೇವೆ ಆಗುತ್ತೆ. ಅವರಿಗೆಲ್ಲ.
🚨
KPSC ಸ್ಕ್ಯಾಮ್🚨
KEA ನಡೆಸಿದ VAO exam ನಲ್ಲಿ ಚಿಲ್ಲರೆ ಅಂಕ ಗಳಿಸಿದವರು KPSC ಯ PDO ಪರೀಕ್ಷೆಯಲ್ಲಿ toppers.
CTI exam ನಲ್ಲೂ ಈ pattern ಕಂಡು ಬಂದಿತ್ತು. ಈಗ PDO exam ಸರದಿ.
CTI, PDO, KAS ಇನ್ನಿತರ ಹಲವಾರು exam ಗಳ ತನಿಖೆ ಆಗಲೇಬೇಕು.
@DKShivakumar ಅವರೇ. ಕೂಡಲೇ ಸಿಬಿಐ ಗೆ ಕೊಡಿ ಇಲ್ಲವೇ ರಾಜೀನಾಮೆ ಕೊಡಿ.
@secretarykpsc#PDO ನೇಮಕಾತಿಯಲ್ಲಿ ಅಕ್ರಮದ ವಾಸನೆ ಕಂಡು ಬಂದಿದ್ದು #KSVS ವಿದ್ಯಾರ್ಥಿಗಳ ಸಮೂಹ ಕೂಡಲೇ CBI ತನಿಖೆಗೆ ಆದೇಶಿಸಬೇಕೆಂದು @INCKarnataka ಸರ್ಕಾರವನ್ನು ಆಗ್ರಹಿಸುತ್ತದೆ
ಪಾರದರ್ಶಕ ಹಾಗೂ ಸೂಕ್ತ ಕ್ರಮ ಕೈಗೊಳ್ಳಬೇಕು ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ರಾಜ್ಯದೆಲ್ಲೆಡೆ ಬೃಹತ್ ವಿದ್ಯಾರ್ಥಿ ಚಳವಳಿ ನಡೆಯಲಿದೆ
@SCAMPDO
💔 BJP ಸರ್ಕಾರ ಪೋಲಿಸರಿಂದ ವಿದ್ಯಾರ್ಥಿಗಳ ಮೇಲೆ ಕಲ್ಲೆಸೆಯುವಂತೆ ಮಾಡಿದೆ!
🚨 ಟ್ರಕ್ ತುಂಬಾ ಕಲ್ಲುಗಳನ್ನು ಮೊದಲೇ ತಂದಿದ್ದ ಪೋಲೀಸರು!
⚠️ ಮುರುಕುವಾಹನ ನಿಲ್ಲಿಸಿದ್ದ ಪೋಲಿಸರು!
ಸರ್ಕಾರದ ಪಿತೂರಿ ಬಟಾಬಯಲು!
🙏 Share it Maximum!