ಇವತ್ತು ಮಹಾಶಿವರಾತ್ರಿ. ಶಿವ ನನ್ನ ಇಷ್ಟದೈವ. ಶಿವ ತನ್ನನ್ನು ನಂಬಿದವರನ್ನು ಎಂದೂ ಕೈಬಿಟ್ಟವನಲ್ಲ. ಅವನು ತನ್ನ ಇಷ್ಟದಂತೆ ಬದುಕಿದವನು. ಅವನಲ್ಲಿ ಕಪಟವಿಲ್ಲ, ಕುತಂತ್ರವಿಲ್ಲ. ಹೀಗಾಗಿಯೇ ಶಿವ ನನಗೆ ಇಷ್ಟ.
ಆದರೇಕೋ ಈ ವರ್ಷ ಶಿವರಾತ್ರಿಯ ಸಡಗರಕ್ಕೆ ನನ್ನ ಮನಸ್ಸು ತೆರೆದುಕೊಳ್ಳುತ್ತಿಲ್ಲ. ನಿನ್ನೆ ಬೆಳಗಾವಿಯ ಪ್ರತಿಭಟನೆ ಮುಗಿಸಿ ವಾಪಾಸ್ ಬೆಂಗಳೂರಿಗೆ ಬಂದೆ. ತಡರಾತ್ರಿಯವರೆಗೆ ಒಂದೇ ಸಮನೆ ದೂರವಾಣಿ ಕರೆಗಳು, ವಾಟ್ಸಾಪ್ ಸಂದೇಶಗಳು. ಬಹುತೇಕ ಕರೆ, ಸಂದೇಶಗಳು ಕೆಪಿಎಸ್ ಸಿ ಪರೀಕ್ಷೆ ಬರೆದ ವಿದ್ಯಾರ್ಥಿಗಳದ್ದು.
ಗೌಡ್ರೇ ನಮಗೆ ನ್ಯಾಯ ಕೊಡಿಸಿ, ಯಾರನ್ನೂ ನಂಬುವ ಸ್ಥಿತಿಯಲ್ಲಿ ನಾವಿಲ್ಲ. ನೀವೇ ನಮಗೆ ದಿಕ್ಕು. ಈಗ ನಮಗೆ ಅನ್ಯಾಯವಾದರೆ ಬದುಕಿಯೂ ಪ್ರಯೋಜನವಿಲ್ಲ, ಸತ್ತೇಹೋಗುತ್ತೇವೆ... ಎಲ್ಲರೂ ಈ ಧಾಟಿಯಲ್ಲೇ ಮಾತಾಡುತ್ತಾರೆ. ಅವರ ಮನೆಗಳ ಸಮಸ್ಯೆಗಳು, ಸಂಕಟಗಳನ್ನು ಹೇಳಿಕೊಳ್ಳುತ್ತಾರೆ. ಎಲ್ಲ ಬಡ ಕುಟುಂಬಗಳ ಮಕ್ಕಳು. ಸಾಮಾಜಿಕವಾಗಿ ಹಿಂದುಳಿದ ವರ್ಗಗಳ ಮಕ್ಕಳು. ಈ ನಡುವೆ ಕನ್ನಡ ಮಾಧ್ಯಮದಲ್ಲಿ ಓದುವವರು ಅವರೇ ತಾನೇ?
ನಾನು ಯಾವ ಅಧಿಕಾರ ಸ್ಥಾನದಲ್ಲೂ ಇಲ್ಲ. ನ್ಯಾಯಕ್ಕಾಗಿ ಈ ಮಕ್ಕಳೊಂದಿಗೆ ಸೇರಿ ಬಡಿದಾಡಬಹುದು ಅಷ್ಟೆ. ಗೌಡ್ರೇ ನೀವೇ ಯಾಕೆ ಒಂದು ಪ್ರಾದೇಶಿಕ ಪಕ್ಷ ಸ್ಥಾಪಿಸಬಾರದು? ನಾವೆಲ್ಲ ನಿಮ್ಮ ಜೊತೆ ಇರುತ್ತೇವೆ ಎನ್ನುತ್ತಾರೆ. ಪಕ್ಷ ಸ್ಥಾಪಿಸುವುದು, ಚುನಾವಣೆಯಲ್ಲಿ ಸೆಣೆಸುವುದು ಅಷ್ಟು ಸುಲಭದ ವಿಷಯವಲ್ಲ. ಅದಕ್ಕೆ ಕಾಲವೂ ಪಕ್ವವಾಗಿಲ್ಲ. ಕನ್ನಡ ಜನತೆಗೆ ಕನ್ನಡ ಕೇಂದ್ರಿತ ರಾಜಕೀಯ ಪಕ್ಷವೊಂದರ ಅಗತ್ಯದ ಮನವರಿಕೆ ಆಗಬೇಕು, ಹಾಗಾದಾಗ ಮಾತ್ರ ಇಂಥ ಪ್ರಯೋಗ ಮಾಡಬಹುದು ಎಂದು ಅವರಿಗೆ ಹೇಳಿದೆ.
ಕೇಂದ್ರೀಯ ಆಡಳಿತಾತ್ಮಕ ನ್ಯಾಯಮಂಡಳಿ (CAT) ಈಗಾಗಲೇ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳ ದೂರಿನ ಹಿನ್ನೆಲೆಯಲ್ಲಿ ಮುಖ್ಯಪರೀಕ್ಷೆಗೆ ತಡೆಯಾಜ್ಞೆ ನೀಡಿದೆ. ಆದರೆ ವಿದ್ಯಾರ್ಥಿಗಳಿಗೆ ಅಲ್ಲೂ ನ್ಯಾಯ ದೊರೆಯುವ ವಿಶ್ವಾಸವಿಲ್ಲ.
ಮಾನ್ಯ ಮುಖ್ಯಮಂತ್ರಿ @siddaramaiah ಸಿದ್ಧರಾಮಯ್ಯನವರಿಗೆ ಮತ್ತೊಮ್ಮೆ ವಿನಂತಿಸುವೆ; ಈ ಕನ್ನಡದ ಮಕ್ಕಳಿಗೆ ನ್ಯಾಯ ಕೊಡಿಸಿ. ಇದರಲ್ಲಿ ಯಾರ ಪ್ರತಿಷ್ಟೆಯಿಲ್ಲ. ಇರುವುದು ಕನ್ನಡದ ಮಕ್ಕಳ ಭವಿಷ್ಯ ಮತ್ತು ಅವರು ವ್ಯವಸ್ಥೆಯ ಮೇಲೆ ಇಟ್ಟ ನಂಬಿಕೆಯ ಪ್ರಶ್ನೆ. ಆ ನಂಬಿಕೆ ಹಾಳಾಗಬಾರದು, ಆ ಮಕ್ಕಳು ನಾಳೆ ತಮಗೆ ಅನ್ಯಾಯವಾಯಿತು ಎಂಬ ಕೋಪದಿಂದ ದಾರಿ ತಪ್ಪಬಾರದು. ದಯವಿಟ್ಟು ಅವರಿಗೆ ನ್ಯಾಯ ಕೊಡಿ.
ನಾವಂತೂ ಚಳವಳಿಯನ್ನು ತೀವ್ರಗೊಳಿಸುವ ನಿರ್ಧಾರ ಕೈಗೊಂಡಿದ್ದೇವೆ. ನಮ್ಮ ಶಾಂತಿಯುತ ಹೋರಾಟ ಬೇರೆ ದಾರಿಗೆ ಹೋದರೆ ಅದಕ್ಕೆ ನೀವೇ ಕಾರಣರಾಗುತ್ತೀರಿ. ಅದಕ್ಕೆ ಅವಕಾಶ ಕೊಡಬೇಡಿ.
ಸಮಸ್ತ ಕನ್ನಡ ಜನತೆಗೆ ಮಹಾಶಿವರಾತ್ರಿ ಹಬ್ಬದ ಶುಭಾಶಯಗಳು.
- ಟಿ.ಎ.ನಾರಾಯಣಗೌಡ
ರಾಜ್ಯಾಧ್ಯಕ್ಷರು, ಕರ್ನಾಟಕ ರಕ್ಷಣಾ ವೇದಿಕೆ
ಕೆಪಿಎಸ್ ಸಿ ನಡೆಸಿರುವ ಕೆಎಎಸ್ ಪರೀಕ್ಷೆಗಳಲ್ಲಿ ಮತ್ತೆ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ಆಗಿರುವ ಅನ್ಯಾಯದ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆ ಫೆ.18ರಂದು ಬೆಂಗಳೂರಿನಲ್ಲಿ ದೊಡ್ಡ ಹೋರಾಟವನ್ನು ಹಮ್ಮಿಕೊಂಡಿದೆ. ಅನ್ಯಾಯಕ್ಕೆ ಒಳಗಾದ ಸಾವಿರಾರು ವಿದ್ಯಾರ್ಥಿಗಳು ಈ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಹಿಂದೆ ಪ್ರಶ್ನೆ ಪತ್ರಿಕೆಯಲ್ಲಿ ಕನ್ನಡಾನುವಾದದ ಸಮಸ್ಯೆ ಕಂಡುಬಂದಿದ್ದರಿಂದ ಆದ ಅನ್ಯಾಯದ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆ ಸ್ವಾತಂತ್ರ್ಯ ಉದ್ಯಾನವನದಲ್ಲಿ ಬೃಹತ್ ಚಳವಳಿ ಹಮ್ಮಿಕೊಂಡಿತ್ತು. ನಮ್ಮ ಚಳವಳಿಗೆ ಸ್ಪಂದಿಸಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಮರುಪರೀಕ್ಷೆಗೆ ಆದೇಶಿಸಿದ್ದರು. ಮುಖ್ಯಮಂತ್ರಿಗಳ ತೀರ್ಮಾನವನ್ನು ನಾವೆಲ್ಲ ಒಕ್ಕೊರಲಿನಿಂದ ಅಭಿನಂದಿಸಿದ್ದೆವು.
ಆದರೆ ಮರುಪರೀಕ್ಷೆಯಲ್ಲೂ ಕನ್ನಡಾನುವಾದದ ಸಮಸ್ಯೆ ಉಂಟಾಗಿದೆ. ಹೋರಾಟದ ಸಂದರ್ಭದಲ್ಲಿ ನಾವು ಕನ್ನಡದಲ್ಲೇ ಪ್ರಶ್ನೆ ಪತ್ರಿಕೆ ಸಿದ್ಧಪಡಿಸಿ ನಂತರ ಅದನ್ನು ಇಂಗ್ಲಿಷ್ ಗೆ ಅನುವಾದಿಸುವಂತೆ ಆಗ್ರಹಿಸಿದ್ದೆವು. ಕರ್ನಾಟಕದ ಆಡಳಿತ ಭಾಷೆ ಕನ್ನಡವಾದ್ದರಿಂದ ಇದೇ ಸಹಜವಾಗಿ ನಡೆಯಬೇಕಿತ್ತು. ಆದರೆ ದುರಂಹಕಾರಿ ಅಧಿಕಾರಿಗಳಿಂದಾಗಿ ಮತ್ತೆ ಇಂಗ್ಲಿಷ್ ನಲ್ಲಿ ಪ್ರಶ್ನೆ ಪತ್ರಿಕೆ ತಯಾರಿಸಿ, ಕನ್ನಡಕ್ಕೆ ತಪ್ಪುತಪ್ಪಾಗಿ ಅನುವಾದಿಸಲಾಗಿದೆ. ಇದರಿಂದಾಗಿ ಕನ್ನಡ ಮಾಧ್ಯಮದಲ್ಲಿ ಕಲಿತ ವಿದ್ಯಾರ್ಥಿಗಳಿಗೆ ವಂಚನೆ ಎಸಗಲಾಗಿದೆ.
ಈಗ ಫಲಿತಾಂಶದಲ್ಲಿ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳು ತೀರಾ ಕನಿಷ್ಟ ಪ್ರಮಾಣದಲ್ಲಿ ಉತ್ತೀರ್ಣರಾಗಿದ್ದಾರೆ ಎಂಬ ಮಾಹಿತಿ ಇದೆ. ಇದಕ್ಕೆ ಕೆಟ್ಟದಾಗಿ ಸಿದ್ಧಪಡಿಸಿದ ಕನ್ನಡಾನುವಾದದ ಪ್ರಶ್ನೆ ಪತ್ರಿಕೆಗಳೇ ಕಾರಣ ಎಂದು ಕನ್ನಡ ವಿದ್ಯಾರ್ಥಿಗಳು ಹೇಳುತ್ತಿದ್ದಾರೆ. ಇವರೆಲ್ಲ ಗ್ರಾಮೀಣ ಭಾಗದ ವಿದ್ಯಾರ್ಥಿಗಳು, ಸಾಮಾಜಿಕವಾಗಿ ಹಿಂದುಳಿದ ಜನವರ್ಗಗಳಿಂದ ಬಂದವರು. ಇಂಥವರಿಗೆ ಅನ್ಯಾಯವಾಗುತ್ತಿದ್ದರೂ ಸರ್ಕಾರ ಮೌನವಾಗಿ ಕುಳಿತುಕೊಳ್ಳಲು ಹೇಗೆ ಸಾಧ್ಯ?
ಹಲವಾರು ವಿದ್ಯಾರ್ಥಿಗಳು ಪ್ರತಿನಿತ್ಯ ನನ್ನೊಂದಿಗೆ ಮಾತನಾಡುತ್ತಿದ್ದಾರೆ. ಅವರ ಸಂಕಟಗಳನ್ನು ಹೇಳುತ್ತಿದ್ದಾರೆ. ಅವರ ಭವಿಷ್ಯದ ಬದುಕು ಬೀದಿಗೆ ಬಿದ್ದಂತಾಗಿದೆ. ಎಷ್ಟೋ ವರ್ಷಗಳಿಂದ ಅವರು ಈ ಪರೀಕ್ಷೆಗಾಗಿ ಸಿದ್ಧತೆ ನಡೆಸಿದ್ದರು. ಇದಕ್ಕಾಗಿ ಅವರ ಪೋಷಕರೂ ತ್ಯಾಗ ಮಾಡಿದ್ದಾರೆ. ಈ ಪರೀಕ್ಷೆಯಲ್ಲಿ ಅವರು ಅನುತ್ತೀರ್ಣಗೊಂಡರೆ ಬಹುತೇಕರು ವಯೋಮಿತಿಯ ಕಾರಣಕ್ಕೆ ಮುಂದೆ ಇನ್ನೊಂದು ಪರೀಕ್ಷೆ ಬರೆಯಲು ಸಾಧ್ಯವಿಲ್ಲ. ಯಾರೋ ದುಷ್ಟ ಅಧಿಕಾರಿಗಳು ಮಾಡಿದ ದ್ರೋಹಕ್ಕೆ ಅವರ ಬದುಕು ನರಕವಾಗಿದೆ.
ಪರೀಕ್ಷೆ ಬರೆದವರಿಗೆಲ್ಲ ಕೆಎಎಸ್ ಹುದ್ದೆಯೇನು ಲಭಿಸುವುದಿಲ್ಲ. ಆದರೆ ಕನ್ನಡ ಮಾಧ್ಯಮದಲ್ಲಿ ಪರೀಕ್ಷೆ ಬರೆದ ಲಕ್ಷಾಂತರ ವಿದ್ಯಾರ್ಥಿಗಳನ್ನು ಬೇಕೆಂದೇ ತಪ್ಪುತಪ್ಪಾದ ಪ್ರಶ್ನೆ ಪತ್ರಿಕೆ ಕೊಟ್ಟು ಅಂಕಗಳಿಸಿದಂತೆ ತಡೆಯಲಾಯಿತು ಎಂಬ ಅನ್ಯಾಯ ಪ್ರಜ್ಞೆ ಅವರನ್ನು ಕೊನೆಯವರೆಗೂ ಬಾಧಿಸಲಿದೆ. ಅಧಿಕಾರಿಗಳಾಗುವ ನಮ್ಮ ಆಸೆಗೆ ರಾಜ್ಯ ಸರ್ಕಾರವೇ ತಣ್ಣೀರೆರಚಿತು, ನಮಗೆ ಮೋಸ ಮಾಡಿತು ಎಂದು ಅವರು ಭಾವಿಸುತ್ತಾರೆ. ಇದು ಬೇಕಾಗಿರಲಿಲ್ಲ. ಇದಕ್ಕೆ ನೇರವಾಗಿ ಕೆಪಿಎಸ್ ಸಿ ಮತ್ತು ರಾಜ್ಯ ಸರ್ಕಾರವೇ ಹೊಣೆ. ಇದನ್ನು ಸರಿಪಡಿಸುವ ಜವಾಬ್ದಾರಿಯನ್ನೂ ಸರ್ಕಾರವೇ ಹೊರಬೇಕಿದೆ.
ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಹಿಂದೆ ಮಾಡಿದಂತೆ ಕೂಡಲೇ ಮಧ್ಯೆ ಪ್ರವೇಶಿಸಿ ಕೂಡಲೇ ಫಲಿತಾಂಶವನ್ನು ತಡೆಹಿಡಿಯಬೇಕು, ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ಆಗಿರುವ ಅನ್ಯಾಯ ಸರಿಪಡಿಸಲು ಪರಿಹಾರ ಸೂತ್ರವನ್ನು ರೂಪಿಸಬೇಕು. ತಪ್ಪಿತಸ್ಥ ಅಧಿಕಾರಿಗಳ ಮೇಲೆ ಮೊಕದ್ದಮೆ ಹೂಡಿ ಜೈಲಿಗಟ್ಟಬೇಕು. ಫೆ. 18ರಂದು ನಡೆಯುವ ಸಾಂಕೇತಿಕ ಪ್ರತಿಭಟನೆಯಲ್ಲೇ ಹತ್ತಾರು ಸಾವಿರ ಮಂದಿ ನೆರೆಯುತ್ತಿದ್ದಾರೆ. ಅನ್ಯಾಯ ಸರಿಪಡಿಸದೇ ಹೋದಲ್ಲಿ ಅದರ ಪರಿಣಾಮ ಗಂಭೀರವಾಗಿರುತ್ತದೆ.
ದೇಶದಲ್ಲಿ ಅತಿ ಹೆಚ್ಚು ಶಿಕ್ಷಕರ ಕೊರತೆಯನ್ನು ಅನುಭವಿಸುತ್ತಿರುವ ರಾಜ್ಯ ಕರ್ನಾಟಕ. ಮಾನ್ಯ ಮುಖ್ಯಮಂತ್ರಿಗಳು ಈ ಬಜೆಟ್ ನಲ್ಲಿ 50,000 ಶಿಕ್ಷಕರ ನೇಮಕಾತಿಯನ್ನು ಘೋಷಿಸಬೇಕು ನಿರುದ್ಯೋಗ ಸಮಸ್ಯೆಯನ್ನು ತೊಲಗಿಸಬೇಕು
➦ಅತ್ಯಂತ ವೃತ್ತಿಪರವಾಗಿ, ಪರೀಕ್ಷಾರ್ಥಿಗಳ ಪರವಾಗಿ, ಯಾವುದೇ ತಪ್ಪು/ದೋಷಗಳಿಗೆ ಆಸ್ಪದ ಕೊಡದೆ ಕೆಲಸ ಮಾಡಬೇಕಾಗಿದ್ದ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ವಿಲೇಜ್ ಅಕೌಂಟೆಂಟ್ ಹುದ್ದೆಗಳಿಗೆ ನಡೆಸಿದ ಪರೀಕ್ಷೆಗಳಿಗೆ ಬಿಡುಗಡೆಗೊಳಿಸಿದ ಕೀ ಉತ್ತರಗಳು ದೋಷಪೂರಿತವಾಗಿದೆ/ತಪ್ಪಾಗಿದೆ ಎಂದು ವಿದ್ಯಾರ್ಥಿಗಳು ದೂರಿದ್ದಾರೆ.
➦ಬಿಡುಗಡೆ ಮಾಡುವ ಮೂಲಕ ಪ್ರಶ್ನೆ - ಉತ್ತರ ಎರಡು ತಾಳೆಮಾಡಿಕೊಂಡು, ವಿಷಯದ ತಜ್ಞರೊಂದಿಗೆ ಚರ್ಚಿಸಿ ನಂತರ ಪ್ರೂಫ್ ರೀಡ್ ಮಾಡಿ ಬಿಡುಗಡಗೊಳಿಸಲು ಬದಲಾಗಿ ದೋಷಪೂರಿತವಾಗಿ ಕೀ ಉತ್ತರ ಪ್ರಕಟ ಮಾಡಿರುವುದು ನಿಜಕ್ಕೂ ಖಂಡನೀಯ.
➦ಇದು ಪರೀಕ್ಷಾರ್ಥಿಗಳಿಗೆ ಮಾಡಿದ ಅನ್ಯಾಯ. ಕೂಡಲೇ ಸಂಬಂಧಪಟ್ಟ ಅಧಿಕಾರಿಯನ್ನು ಕಡ್ಡಾಯ ರಜೆಗೆ ಕಳುಹಿಸಿ ಆಗಿರುವ ತಪ್ಪನ್ನು ಸರಿಪಡಿಸಲಿ. ಲಕ್ಷಾಂತರ ರೂಪಾಯಿ ಸಂಬಳ ಪಡೆಯುವ ಅಧಿಕಾರಿಗಳು ಹಾಗೂ ಸಂಬಂಧಪಟ್ಟ ಸಿಬ್ಬಂದಿ ಸ್ವಲ್ಪವಾದರೂ ಉತ್ತರದಾಯಿಗಳಾಗಲಿ.
@CMofKarnataka I @cskarnataka I @tv9kannada I @OneindiaKannada I @AsianetNewsSN I @prajavani I @AKSSAofficial I @KEA_karnataka I
@KEA_karnataka@CMofKarnataka
ಮಾನ್ಯ ಗೌರವಾನ್ವಿತರೇ,
ಇದೀಗ ಪ್ರಕಟಿಸಿದ VAO ಕೀ ಉತ್ತರಗಳಲ್ಲಿ ಹಲವು ಉತ್ತರಗಳು ತಪ್ಪಾಗಿವೆ.!! ಈ ಕೂಡಲೇ ಸಂಬಂಧಿಸಿದವರು ಎಚ್ಚೆತ್ತುಕೊಂಡು ಸೂಕ್ತ ಕ್ರಮವಹಿಸಲಿ ಎಂದು ಲಕ್ಷಾಂತರ ಅಭ್ಯರ್ಥಿಗಳ ಪರವಾಗಿ ಗೌರವಪೂರ್ವಕವಾಗಿ ವಿನಂತಿಸುತ್ತೇವೆ.!!
ವಂದನೆಗಳು.!!
KPTCL ಲೈನ್ ಮ್ಯಾನ್ ಹುದ್ದೆಗಳನ್ನು ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕವೇ ಆಯ್ಕೆ ಮಾಡಿಕೊಳ್ಳುವ ಮೂಲಕ ಸರ್ಕಾರ ಪಾರದರ್ಶಕತೆ ಪ್ರದರ್ಶಿಸಬೇಕು. ಬೇರೆ ರಾಜ್ಯಗಳಲ್ಲಿಯೂ ಸಹ ಇದೆ ರೀತಿಯಾದ ನೇಮಕಾತಿ ಪ್ರಕ್ರಿಯೆ ಇರುವುದರಿಂದ ಕರ್ನಾಟಕವೂ ಸಹ ಇದೆ ಮಾದರಿಯನ್ನು ಅನುಸರಿಸಬೇಕು. ಸ್ಪರ್ದಾತ್ಮಕ ಪರೀಕ್ಷೆಗಳ ಮೂಲಕ ಆಯ್ಕೆ ಪ್ರಕ್ರಿಯೆ ನಡೆದರೆ ಸಮರ್ಥ ಹಾಗೂ ಅರ್ಹ ಅಭ್ಯರ್ಥಿಗಳ ನೇಮಕ ಆಗುತ್ತದೆ. ಇಲಾಖೆಗೆ ದಕ್ಷ, ಪ್ರಾಮಾಣಿಕ, ಸಮರ್ಥ ಹಾಗೂ ಅರ್ಹ ಸಿಬ್ಬಂದಿ ಸಿಕ್ಕಲ್ಲಿ ಇಲಾಖೆಯ ಉತ್ಪಾದಕತೆ ಹಾಗೂ ಕಾರ್ಯಕ್ಷಮತೆ ಹೆಚ್ಚುತ್ತದೆ. ಸರ್ಕಾರ ಎಚ್ಚೆತ್ತುಕೊಳ್ಳಲಿ.
@kptcl_official@KJGeorgeOffice@siddaramaiah
ಗೌರವಾನ್ವಿತರೇ,
KPTCL ನ Junior Powerman & Junior Station Attendant ಒಟ್ಟು 2,975 ಹುದ್ದೆಗಳಿಗೆ SSLC ಅಂಕಗಳು ಮತ್ತು ದೈಹಿಕ ಪರೀಕ್ಷೆ ಆಧಾರದಲ್ಲಿ ನೇಮಕಾತಿ ಮಾಡಿಕೊಳ್ಳುವ ಬದಲು ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ನೇಮಕಾತಿ ಮಾಡಿಕೊಳ್ಳಬೇಕೆಂದು ಲಕ್ಷಾಂತರ ಅಭ್ಯರ್ಥಿಗಳ ಮನವಿ.
ಸುಮಾರು ವರ್ಷಗಳಿಂದ ಶಿಕ್ಷಕರ ಕೊರತೆ & ಶಿಕ್ಷಕ ಹುದ್ದೆಯ ಆದೇಶ ಪತ್ರಕ್ಕಾಗಿ ಕಾಯಿಯುತ್ತಿರುವ ಅರ್ಭ್ಯಥಿಗಳು ಇದಕ್ಕೆಲ್ಲ ತೆರೆ ಎಳೆಯುವ ಕೆಲಸ ನಿಮ್ಮಿಂದ ಆದಷ್ಟು ಬೇಗ ಆಗಬೇಕು. ನಿಮ್ಮ ನಿರೀಕ್ಷೆಯಲ್ಲಿ ನಾವುಗಳು 👉 ಶಾಲಾ ಮಕ್ಕಳು ಮತ್ತು ಅಭ್ಯರ್ಥಿಗಳು.🙏🏻
#GPSTR2022#Announce_Counsilling_Date@CMofKarnataka@Madhu_Bangarapp
ಸುಮಾರು ವರ್ಷಗಳಿಂದ ಶಿಕ್ಷಕರ ಕೊರತೆ & ಶಿಕ್ಷಕ ಹುದ್ದೆಯ ಆದೇಶ ಪತ್ರಕ್ಕಾಗಿ ಕಾಯಿಯುತ್ತಿರುವ ಅರ್ಭ್ಯಥಿಗಳು ಇದಕ್ಕೆಲ್ಲ ತೆರೆ ಎಳೆಯುವ ಕೆಲಸ ನಿಮ್ಮಿಂದ ಆದಷ್ಟು ಬೇಗ ಆಗಬೇಕು. ನಿಮ್ಮ ನಿರೀಕ್ಷೆಯಲ್ಲಿ ನಾವುಗಳು 👉 ಶಾಲಾ ಮಕ್ಕಳು ಮತ್ತು ಅಭ್ಯರ್ಥಿಗಳು.
#GPSTR2022#Announce_Counsilling_Date@CMofKarnataka@Madhu_Bangarapp