ಮಾನ್ಯ @RAshokaBJP ಅವರೇ,
ವಿರೋಧ ಪಕ್ಷದ ನಾಯಕರಾಗಿ ಈ ನಾಡಿನ ಮುಖ್ಯಮಂತ್ರಿಗಳನ್ನು “ದಲ್ಲಾಳಿ” ಎಂದು ಸಂಬೋಧಿಸಿ ಮಾತನಾಡುವುದು ಎಷ್ಟರ ಮಟ್ಟಿಗೆ ಸಮಂಜಸ ಎಂಬುದನ್ನು ತಾವೇ ಒಮ್ಮೆ ಆತ್ಮಾವಲೋಕನ ಮಾಡಿಕೊಳ್ಳಬೇಕು.
ನೀವು ವಿರೋಧ ಪಕ್ಷದ ನಾಯಕರಾಗಿದ್ದು, ಶಾಡೋ ಮುಖ್ಯಮಂತ್ರಿಯ ಜವಾಬ್ದಾರಿಯ ಸ್ಥಾನದಲ್ಲಿದ್ದೀರಿ.ಆದರೆ ಇಂತಹ ಹೇಳಿಕೆಗಳು ನಿಮ್ಮ ಸ್ಥಾನಕ್ಕೆ ಶೋಭೆ ತರುವುದಿಲ್ಲ.
ಈ ರಾಜ್ಯದ ಮಖ್ಯಮಂತ್ರಿಗಳನ್ನು ದಲ್ಲಾಳಿ ಎಂದು ಕರೆಯುವುದು ಕನ್ನಡನಾಡಿನ ಜನರಿಗೆ ಮತ್ತು ಸಂವಿಧಾನಕ್ಕೆ ಮಾಡುವ ಅಪಮಾನ.
ನಿಮ್ಮ ಮಾತುಗಳು, ನಡೆ-ನುಡಿಗಳು ಇತರ ಶಾಸಕರುಗಳಿಗೆ ಮತ್ತು ಯುವಕರಿಗೆ ಆದರ್ಶವಾಗಿರಬೇಕು.ಆ ನಿಟ್ಟಿನಲ್ಲಿ ನಿಮ್ಮ ಮನಸ್ಥಿತಿಯನ್ನು ��ದಲಾಯಿಸಿಕೊಳ್ಳಬೇಕು.
ತಾವು ಬಳಸಿದ “ದಲ್ಲಾಳಿ” ಎಂಬ ಪದದಿಂದ ಪ್ರತಿಕ್ರಿಯಿಸುವ ಅನಿವಾರ್ಯತೆ ನನಗೆ ಉಂಟಾಯಿತು, ನನ್ನ ಮಾತುಗಳಿಂದ ನಿಮ್ಮ ಮನಸ್ಸಿಗೆ ನೋವಾಗಿದ್ದರೆ ಕ್ಷಮೆಯಾಚಿಸುತ್ತೇನೆ ,
ಮುಖ್ಯಮಂತ್ರಿಗಳ ಜಿಲ್ಲೆಯ ಶಾಸಕನಾಗಿ ನಾನು ಮಾತನಾಡಿದ್ದೇನೆ ಹೊರತು ಯಾವುದೇ ಸಚಿವ ಸ್ಥಾನದ ಆಸೆಯಿಂದಲ್ಲ. ಯಾರ ಹಣೆಬರಹವನ್ನು ಯಾರೂ ಬರೆಯಲು ಸಾಧ್ಯವಿಲ್ಲ. ನನ್ನ ಹಣೆಬರಹದಲ್ಲಿ ಬರೆದಿದ್ದರೆ ನಾನು ಸಚಿವನಾಗುತ್ತೇನೆ; ಅದನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ.
ಮುಂದಿ��� ದಿನಗಳಲ್ಲಾದರೂ ಮಾನ್ಯ ಮುಖ್ಯಮಂತ್ರಿಗಳ ಬಗ್ಗೆ ಗೌರವಯುತವಾಗಿ ಮಾತನಾಡುವ ಸದ್ಭುದ್ಧಿಯನ್ನು ತಾಯಿ ಬನಶಂಕರಮ್ಮ ತಮಗೆ ನೀಡಲಿ ಎಂದು ಪ್ರಾರ್ಥಿಸುತ್ತೇನೆ.
ತಮ್ಮನ್ನು ಬೈದರೆ ನನಗೆ ಸಚಿವ ಸ್ಥಾನದ ಸಿಗುತ್ತದೆ ಎಂದು ಹೇಳಿದ್ದೀರಿ, ವಿರೋಧಪಕ್ಷದವರಿಗೆ ಬೈದರೆ ಸಚಿವ ಸ್ಥಾನ ಕೊಡುವ ಕೆಟ್ಟ ಸಂಸ್ಕೃತಿ ನಮ್ಮ ಪಕ್ಷದಲ್ಲಿಲ್ಲ. ನನ್ನ ಕೆಲಸ ನೋಡಿ ನನಗೆ ಸಚಿವ ಸ್ಥಾನ ನೀಡಬೇಕೋ ಬೇಡವೋ ಎಂದು ನಮ್ಮ ಮುಖ್ಯಮಂತ್ರಿಗಳು ಮತ್ತು ವರಿಷ್ಠರು ನಿರ್ಧರಿಸುತ್ತಾರೆ.
ಬಹುಷಃ ತಾವು ��ುಖ್ಯಮಂತ್ರಿಗಳನ್ನು ಅವಾಚ್ಯ ಶಬ್ದಗಳಿಂದ ಬೈದರೆ ಬಿಜೆಪಿ ಹೈಕಮಾಂಡ್ ತಮ್ಮನ್ನು ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಘೋಷಿಸುತ್ತದೆ ಎಂಬ ಭ್ರಮೆಯಲ್ಲಿದ್ದೀರಿ, ತಾಯಿ ಬನಶಂಕರಮ್ಮ ತಮಗೆ ಒಳ್ಳೆಯದನ್ನು ಮಾಡಲಿ ಎಂದು ಶುಭ ಹಾರೈಸುತ್ತೇನೆ.
ಮುಖ್ಯಮಂತ್ರಿಯಾಗಿ ಆಯ್ಕೆಯಾದ ನಮ್ಮ ನಾಡಿನ ಮಣ್ಣಿನ ಮಗ, ಹೋರಾಟದ ಹಾದಿಯಲ್ಲಿ ಯಶಸ್ಸು ಕಂಡ ಹಠವಾದಿ, ಎಂತಹ ಸಂಕಷ್ಟಗಳನ್ನೂ ಎದುರಿಸುವ ಛಲಗಾರ, ದೂರದೃಷ್ಟಿಯ ಕನಸುಗಾರ, ತಾಳ್ಮೆಯ ಹೆಬ್ಬಂಡೆ, ಅಚಲ ನಿಷ್ಠೆಯ ಪ್ರತಿರೂಪರಾದ ಡಿ.ಕೆ. ಶಿವಕುಮಾರ್ ಸಾಹೇಬರಿಗೆ ಹೃತ್ಪೂರ್ವಕ ಅಭಿನಂದನೆಗಳು.
#DKShivakumar#ChiefMinister#Karnataka