ಕುಮಾರಸ್ವಾಮಿ ಅವರನ್ನು ಎದುರಿಸಲು ಮೆಗಾಸಿಟಿ ಯೋಗೀಶ್ವರನಿಗೆ ಗಾಳ ಹಾಕುತ್ತಿರುವ ನೀವು, ನಿಮ್ಮ ನಾಯಕರೇ ಕುತಂತ್ರದಿಂದ ಈ ಹೇಳಿಕೆಯನ್ನು ಯೋಗೀಶ್ವರ್ ಬಾಯಲ್ಲಿ ಹೇಳಿಸಿರೋದ್ರಲ್ಲಿ ಯಾವುದೇ ಅಚ್ಚರಿಯಿಲ್ಲ, ಇಂದೇ ಬರೆದಿಟ್ಟುಕೊಳ್ಳಿ ಈ ಬಾರಿ ಕನ್ನಡಿಗರ ಪರವಾದ ಜಾತ್ಯತೀತ ಸರ್ಕಾರ ರಚಿಸುವುದು ಜಾತ್ಯತೀತ ಜನತಾದಳವೇ ಹೊರತು ದೆಹಲಿ ಗುಲಾಮರಲ್ಲ. 5/5
ಕಾಂಗ್ರೆಸ್ ಶಾಸಕರನ್ನು ಬಿಜೆಪಿಗೆ ಗುಪ್ತವಾಗಿ ಕಳುಹಿಸಿ ಈಗ ಪುನಃ ವಾಪಸ್ ಕರೆಸಿಕೊಳ್ಳುತ್ತಿರುವ ನವರಂಗಿ ಸಿದ್ದಹಸ್ತರ ಆಟ ಇನ್ನು ಮುಂದೆ ರಾಜ್ಯದಲ್ಲಿ ನಡೆಯುವುದಿಲ್ಲ, ಕೋಲಾರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಗೆ ಸಹಕಾರಿಯಾಗಿದ್ದು ಯಾವ ಬೀ ಟೀಂ ಎನ್ನುವುದನ್ನು ಹೇಳುವಿರಾ ಕಾಂಗಿಗಳೇ..?? 4/5
ಇನ್ನೂ ಚುನಾವಣೆ ಘೋಷಣೆಯೇ ಆಗಿಲ್ಲ ಆದರೂ ನಿಮ್ಮ ಪಕ್ಷದ ನಾಯಕರು ಹೆಚ್ ಡಿ ಕುಮಾರಸ್ವಾಮಿ ಅವರ ಮನೆ ಬಾಗಿಲು ತಟ್ಟುತ್ತಿದ್ದಾರೆ ಎನ್ನುವ ಸುದ್ದಿ ಮಾಧ್ಯಮಗಳಲ್ಲಿ ವರದಿಯಾಗಿದೆ, ಹೀಗಿರೋವಾಗ ನೀವು ಟ್ವಿಟರ್ ನಲ್ಲಿ ತೌಡು ಕುಟ್ಟಿದರೆ ಪುಡಿ ಸಹಾ ಉದುರುವುದಿಲ್ಲ. 3/5
ಜಾತ್ಯತೀತ ಅನ್ನೋದನ್ನ ಸರಿಯಾಗಿ ಬರೆಯೋಕೂ ಬಾರದ ಈ ಅಧಮರಿಗೆ ಜಾತ್ಯತೀತೆಯ ಬಗ್ಗೆ ಮಾತನಾಡೋ ನೈತಿಕತೆ ಎಲ್ಲಿದೆ.? ಮುಸ್ಲಿಂಮರ ಮೀಸಲಾತಿಯನ್ನು ಬಿಜೆಪಿ ಪಕ್ಷ ಕಿತ್ತುಕೊಂಡರೂ ಸೊಲ್ಲೆತ್ತದ ನಿಮಗೆ ಈ ಬಾರಿ ಮುಸ್ಲಿಂಮರು ಸರಿಯಾಗಿ ಬುದ್ದಿ ಕಲಿಸುತ್ತಾರೆ. 2/5
ಬಿಜೆಪಿ ಪಕ್ಷದ ನಾಲಾಯಕರು ಹೇಳುವ ಮಾತುಗಳನ್ನೆಲ್ಲಾ ಕಾಂಗ್ರೆಸ್ ಪಕ್ಷದ ನಾಯಕರು ಸತ್ಯ ಎಂದು ಒಪ್ಪುವುದಾದರೆ, ಕರ್ನಾಟಕ ಬಿಜೆಪಿ ನಾಯಕರು ಕಾಂಗ್ರೆಸ್ ಪಕ್ಷದ ವಿರುದ್ಧ ರಾಹುಲ್ ಗಾಂಧಿ, ಸೋನಿಯಾ ಗಾಂಧಿ ವಿರುದ್ಧ ಏನೆಲ್ಲಾ ಹೇಳಿದ್ದಾರೆ ಅನ್ನೋದನ್ನು ಕಾಂಗ್ರೆಸ್ ಪಕ್ಷ ಒಮ್ಮೆ ನೆನಪು ಮಾಡಿಕೊಳ್ಳಲಿ. 1/5
ತ್ಯಾಮಗೊಂಡ್ಲು ಹೋಬಳಿ ವ್ಯಾಪ್ತಿಯ ಮಿಣ್ಣಾಪುರ ಗ್ರಾಮದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಶಾಲಾ ಕಟ್ಟಡದ ಕೊಠಡಿಗಳ ಉದ್ಘಾಟನಾ ಸಮಾರಂಭ ಕಾರ್ಯಕ್ರಮದಲ್ಲಿ ಭಾಗವಹಿಸಿದೆ.
ಈ ಸಂದರ್ಭದಲ್ಲಿ ತ್ಯಾಮಗೊಂಡ್ಲು ಹೋಬಳಿ ಭಾಗದ ಹಿರಿಯ ಮುಖಂಡರುಗಳು, ಕಾರ್ಯಕರ್ತರು, ಯುವಕ ಮಿತ್ರರು ಹಾಗೂ ಮಿಣ್ಣಾಪುರ ಗ್ರಾಮ ಭಾಗದ ಗ್ರಾಮಸ್ಥರುಗಳು ಭಾಗವಹಿಸಿದ್ದರು.
#JDS
ನೆಲಮಂಗಲ ತಾಲ್ಲೂಕು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯವರು ತಾಲ್ಲೂಕಿನ ಖಾಸಗಿ ಗುಬ್ಬಿಗೂಡು ರೆಸಾರ್ಟ್ ನಲ್ಲಿ ಆಯೋಜಿಸಲಾಗಿದ್ದ "ವಿಶ್ವ ಮಹಿಳಾ ದಿನಾಚರಣೆ"ಯ ಕಾರ್ಯಕ್ರಮದಲ್ಲಿ ನನ್ನ
ಧರ್ಮಪತ್ನಿ ಶ್ರೀಮತಿ ಡಾ.ಕೆ. ಸುಜಾ ಶ್ರೀನಿವಾಸ್ ರವರೊಂದಿಗೆ ಭಾಗವಹಿಸಿದೆ.
#JanatadalSecular#Nelamangala#ಜನತಾಸರ್ಕಾರ#JDS