ಇಂದು ಠಾಣೆಗೆ ಮಾನ್ಯ ಐಜಿಪಿ ಸಾಹೇಬರು ಉತ್ತರ ವಲಯ ಬೆಳಗಾವಿ ಅವರು ಗೌರವಾನ್ವಿತ ಭೇಟಿ ನೀಡಿದರು.ಠಾಣೆಯ ದೈನಂದಿನ ಕಾರ್ಯಕಲಾಪಗಳು ಮತ್ತು ದಾಖಲಾತಿಗಳನ್ನು ಪರಿಶೀಲಿಸಿದರು. ತದನಂತರ, ಕಾನೂನು ಮತ್ತು ಸುವ್ಯವಸ್ಥೆಯನ್ನು ಇನ್ನಷ್ಟು ಅತ್ಯುತ್ತಮವಾಗಿ ನಿರ್ವಹಿಸುವ ಕುರಿತು ಅತ್ಯಮೂಲ್ಯವಾದ ಸಲಹೆ ಮತ್ತು ಸೂಕ್ತ ಸೂಚನೆಗಳನ್ನು ನೀಡಿದರು.
ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ವತಿಯಿಂದ ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ಪೊಲೀಸ್ ಕಾನ್ಸ್ಟೇಬಲ್ (ಸಿವ್ಹಿಲ್) ಹುದ್ದೆಗಳ ನೇರ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಒಟ್ಟು 3,991 ಸಿವಿಲ್ ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗಳ ನೇರ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
@IgpBelagavi@DgpKarnataka@KarnatakaCops
@shabbirSH37@KarnatakaCops@CPBlr@DgpKarnataka Dear Sir, your tweet has been noted. The said court warrant copy has not been received at the Jamkhandi Town Police Station as of today. Therefore, you are requested to kindly contact the concerned Hon'ble Court for further information or updates regarding the matter.
@shabbirSH37@IgpBelagavi@BagalkotPolice@DgpKarnataka Dear Sir, your tweet has been noted. The said court warrant copy has not been received at the Jamkhandi Town Police Station as of today. Therefore, you are requested to kindly contact the concerned Hon'ble Court for further information or updates regarding the matter.
@shabbirSH37@BagalkotPolice@DgpKarnataka@SpBagalkote Dear Sir, your tweet has been noted. The said court warrant copy has not been received at the Jamkhandi Town Police Station as of today. Therefore, you are requested to kindly contact the concerned Hon'ble Court for further information or updates regarding the matter.
ಲೋಕಕ್ಕೆ ಅಹಿಂಸೆ ಮತ್ತು ಕರುಣೆಯ ಸಂದೇಶವನ್ನು ಸಾರಿದ ಭಗವಾನ್ ಗೌತಮ ಬುದ್ಧನ ಜಯಂತಿಯ ಈ ಪವಿತ್ರ ದಿನವು ಎಲ್ಲರ ಬಾಳಿನಲ್ಲಿ ಸುಖ, ನೆಮ್ಮದಿ ಹಾಗೂ ಸೌಹಾರ್ದತೆಯನ್ನು ತರಲಿ.
ಸಮಾಜದಲ್ಲಿ ಶಾಂತಿ ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ನಾವೆಲ್ಲರೂ ಬುದ್ಧನ ತತ್ವಗಳನ್ನು ಅಳವಡಿಸಿಕೊಳ್ಳೋಣ. ಎಲ್ಲರಿಗೂ ಬುದ್ಧ ಪೂರ್ಣಿಮೆಯ ಹಾರ್ದಿಕ ಶುಭಾಶಯಗಳು.
ಸಾರ್ವಜನಿಕರೇ, ಇತ್ತೀಚಿನ ದಿನಗಳಲ್ಲಿ ಸೈಬರ್ ಕ್ರಿಮಿನಲ್ಗಳು ಜನರನ್ನು ವಂಚಿಸಲು ಹೊಸ ದಾರಿಯನ್ನು ಕಂಡುಕೊಂಡಿದ್ದಾರೆ. ನಿಮ್ಮ ವಾಟ್ಸಾಪ್ (WhatsApp) ಸಂಖ್ಯೆಗೆ ಅಪರಿಚಿತರಿಂದ ಅಥವಾ ಪರಿಚಿತರ ಹೆಸರಿನಲ್ಲಿ "ಮದುವೆಯ ಆಮಂತ್ರಣ" (Wedding Invitation) ಎಂಬ ಸಂದೇಶ ಬರಬಹುದು.
ನಮ್ಮ ಜಮಖಂಡಿ ಶಹರ ಪೊಲೀಸ್ ಠಾಣೆಯ ತಂಡವು ಅತ್ಯಂತ ಚಾಣಾಕ್ಷತನದಿಂದ ಕಾರ್ಯಾಚರಣೆ ನಡೆಸಿ, ಮೋಟಾರ್ ಸೈಕಲ್ ಕಳ್ಳತನ ಪ್ರಕರಣವನ್ನು ಯಶಸ್ವಿಯಾಗಿ ಭೇದಿಸಿದೆ. ಈ ಕಾರ್ಯಾಚರಣೆಯಲ್ಲಿ ಓರ್ವ ಆರೋಪಿಯನ್ನು ಬಂಧಿಸಿ, ಆತನಿಂದ ಸುಮಾರು 3,50,000/- ರೂ. ಕಿಮ್ಮತ್ತಿನ ಒಟ್ಟು 4 ಮೋಟಾರ್ ಸೈಕಲ್ಗಳನ್ನು ಜಪ್ತಿಪಡಿಸಿಕೊಳ್ಳಲಾಗಿದೆ.💐💐
ಕಳೆದುಹೋದ ಹಣ, ಆಸ್ತಿ, ವಾಹನ ಮತ್ತೆ ಗಳಿಸಬಹುದು. ಆದರೆ, ಮನೆಯ ಆಧಾರಸ್ತಂಭವಾಗಬೇಕಿದ್ದ ಮಗ ಹೆಣವಾಗಿ ಮನೆಗೆ ಬಂದಾಗ ಅನುಭವಿಸುವ ನೋವು ಜಗತ್ತಿನ ಯಾವ ಸಂಪತ್ತಿನಿಂದಲೂ ಅಳಿಸಲು ಸಾಧ್ಯವಿಲ್ಲ. ನಿಮ್ಮ ಮಕ್ಕಳಿಗೆ ಶಿಸ್ತು ಕಲಿಸಿ, ಅವರ ಸಂಚಾರದ ಬಗ್ಗೆ ಪ್ರಶ್ನಿಸಿ. ಪೊಲೀಸರ ದಂಡಕ್ಕೆ ಹೆದರುವುದಕ್ಕಿಂತ ಹೆಚ್ಚಾಗಿ, ನಿಮ್ಮ ಮಕ್ಕಳ ಜೀವಕ್ಕೆ ಹೆದರಿ.
ಭಾರತ ಸಂವಿಧಾನವು ನಮಗೆ ನೀಡಿರುವ ಸಮಾನತೆ, ಸ್ವಾತಂತ್ರ್ಯ ಮತ್ತು ನ್ಯಾಯದ ಮೌಲ್ಯಗಳನ್ನು ಸದಾ ಕಾಪಾಡಿಕೊಂಡು, ದೇಶದ ಶಾಂತಿ–ಸುವ್ಯವಸ್ಥೆ ಮತ್ತು ನಾಗರಿಕರ ಸುರಕ್ಷೆಗೆ ನಾವೆಲ್ಲರೂ ಬದ್ಧರಾಗಿರೋಣ.
ಎಲ್ಲಾ ನಾಗರಿಕರಿಗೆ #77ನೇ_ಗಣರಾಜ್ಯೋತ್ಸವದ_ಹಾರ್ದಿಕ_ಶುಭಾಶಯಗಳು.*
ಜೈ ಹಿಂದ್ 🇮🇳
@pankajs89796129@SpBagalkote Regarding this matter, a case has already been registered at the Jamkhandi Town Police Station and an investigation has been taken up
ಘೋಸ್ಟ್ ಪೇರಿಂಗ್ ಎಂಬ ಹೊಸ ವಂಚನೆಯ ಮೂಲಕ ಹ್ಯಾಕರ್ಗಳು ಕೇವಲ ಪೇರಿಂಗ್ ಕೋಡ್ ಬಳಸಿ ನಿಮ್ಮ WhatsApp ಖಾತೆಗೆ ಪ್ರವೇಶ ಪಡೆಯುತ್ತಿದ್ದಾರೆ.
🔐 ನಿಮ್ಮನ್ನು ರಕ್ಷಿಸಿಕೊಳ್ಳಲು:
✅ ಅನುಮಾನಾಸ್ಪದ ಲಿಂಕ್ಗಳನ್ನು ಕ್ಲಿಕ್ ಮಾಡಬೇಡಿ
✅ ಸಂದೇಶ ಬಂದವರ ಬಳಿ ದೃಢಪಡಿಸಿ
✅ WhatsApp → Linked Devices ಪರಿಶೀಲಿಸಿ
ನಿನ್ನೆ ಜಮಖಂಡಿ ಶಹರ ಪೊಲೀಸ್ ಠಾಣೆಯ ಆವರಣದಲ್ಲಿ, ಮಾನ್ಯ ಡಿಎಸ್ಪಿ (ಜಮಖಂಡಿ ಉಪವಿಭಾಗ) ರವರ ನೇತೃತ್ವದಲ್ಲಿ ದಲಿತ ಮುಖಂಡರ ವಿಶೇಷ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು. ಈ ಸಭೆಯಲ್ಲಿ ತಾಲೂಕಿನ ವಿವಿಧ ಇಲಾಖೆಗಳಾದ:ಕಂದಾಯ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ನಗರಸಭೆ, ಅಬಕಾರಿ ಇಲಾಖೆ ಮುಂತಾದ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು.
🛵⚠️ #ಸಂಚಾರ_ಜಾಗೃತಿ⚠️🛵
ದ್ವಿಚಕ್ರ ವಾಹನದಲ್ಲಿ ಪ್ರಯಾಣಿಸುವಾಗ ಪಿಲ್ಲನ್ ರೈಡರ್ರ ಉದ್ದ ಬಟ್ಟೆ, ದುಪಟ್ಟಾ, ಶಾಲು ಗಾಳಿಯಲ್ಲಿ ಹಾರಿಕೊಂಡು ಚಕ್ರ, ಚೈನ್ ಅಥವಾ ವೀಲ್ಗಳಲ್ಲಿ ಸಿಕ್ಕಿ ತೀವ್ರ ಅಪಘಾತಕ್ಕೆ ಕಾರಣವಾಗುತ್ತಿರುವ ಘಟನೆಗಳು ಹೆಚ್ಚುತ್ತಿವೆ.
👉 ಕೆಲವೇ ಕ್ಷಣದ ನಿರ್ಲಕ್ಷ್ಯ
👉 ಗಂಭೀರ ಗಾಯ… ಜೀವಾಪಾಯವೂ ಸಹ…
Cyber arrest ಎಂಬುದು
👉 ಇದು ಸಂಪೂರ್ಣ ನಕಲಿ ಮತ್ತು ಅಪರಾಧ ಕೃತ್ಯ.
👉 ಯಾವುದೇ ಸರ್ಕಾರ ಅಥವಾ ಪೋಲೀಸ್ ಇಲಾಖೆ ಯಾರನ್ನೂ ಆನ್ಲೈನ್ನಲ್ಲಿ “ಅರೆಸ್ಟ್” ಮಾಡುವುದಿಲ್ಲ.
👉 ಇಂತಹ ಕರೆಗಳು ಬಂದರೆ ತಕ್ಷಣ ಕರೆ ಕಡಿದು, 1930 (ಸೈಬರ್ ಕ್ರೈಂ ಸಹಾಯವಾಣಿ) ಗೆ ವರದಿ ಮಾಡಿ.
👉 ಅಥವಾ https://t.co/e0mBttj4cj ನಲ್ಲಿ ದೂರು ಸಲ್ಲಿಸಿ.
ಅಕ್ಟೋಬರ್ 31 ರಂದು “ಸರ್ಧಾರ್ ವಲ್ಲಾಭಾಯಿ ಪಟೇಲ್” ಅವರ ಜನ್ಮದಿನದ ಅಂಗವಾಗಿ ಏಕತೆ, ಭ್ರಾತೃತ್ವ ಮತ್ತು ರಾಷ್ಟ್ರೀಯ ಸಮಗ್ರತೆಯ ಮಹತ್ವವನ್ನು ಸ್ಮರಿಸಲಾಗುತ್ತದೆ. ಆ ಪ್ರಯುಕ್ತ
ಜಮಖಂಡಿ ವೃತ್ತ ನಿರೀಕ್ಷಕರಾದ ಶ್ರೀ ಎಂ.ಡಿ. ಮಡ್ಡಿ ರವರ ನೇತೃತ್ವದಲ್ಲಿ ಇಂದು “ಏಕತಾ ನಡಿಗೆ” (Run for Unity) ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.