🚩 ಫ್ರೀಡಂ ಪಾರ್ಕ್ನಲ್ಲಿ ಸಾವಿರಾರು ಪರವಾನಗಿ ಭೂಮಾಪಕರ ಐತಿಹಾಸಿಕ ಸಮಾವ���ಶ!
27 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಭೂಮಾಪಕರ ನ್ಯಾಯಸಮ್ಮತ ಬೇಡಿಕೆಗಳಾದ ಖಾಯಂ ನೇಮಕಾತಿ, ಸಮಾನ ಕೆಲಸಕ್ಕೆ ಸಮಾನ ವೇತನ ಹಾಗೂ ಸೇವಾ ಭದ್ರತೆಗಾಗಿ ಹೋರಾಟ ಮತ್ತಷ್ಟು ಬಲಗೊಂಡಿದೆ.
ಒಗ್ಗಟ್ಟೇ ನಮ್ಮ ಶಕ್ತಿ... ನ್ಯಾಯ ಸಿಗುವವರೆಗೆ ��ೋರಾಟ ನಿರಂತರ! ✊
�� ರಾಜ್ಯದ 4,500ಕ್ಕೂ ಹೆಚ್ಚು ಪರವಾನಗಿ ಭೂಮಾಪಕರು ತಮ್ಮ ನ್ಯಾಯಸಮ್ಮತ ಬೇಡಿಕೆಗಳಾದ ಖಾಯಂ ನೇಮಕಾತಿ, ಸಮಾನ ಕೆಲಸಕ್ಕೆ ಸಮಾನ ವೇತನ ಹಾಗೂ ಸೇವಾ ಭದ್ರತೆಗಾಗಿ ಇಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಮುಷ್ಕರ ನಡೆಸುತ್ತಿದ್ದಾರೆ. ನ್ಯಾಯ ಸಿಗುವವರೆಗೆ ಹೋರಾಟ ಮುಂದುವರಿಯಲಿದೆ. ✊
#LSStrike #FreedomPark #LicensedSurveyors
🚩20/06/2026 ಸಂಜೆ 5 ಗಂಟೆಗೆ X (Twitter) ಅಭಿಯಾನದಲ್ಲಿ ಭಾಗವಹಿಸಿ. ಪರವಾನಗಿ ಭೂಮಾಪಕರ ನ್ಯಾಯಸಮ್ಮತ ಬೇಡಿಕೆಗಳಾದ ✅ ಖಾಯಂ ನೇಮಕಾತಿ ಮತ್ತು ✅ ಸಮಾನ ಕೆಲಸಕ್ಕೆ ಸಮಾನ ವೇತನಕ್ಕಾಗಿ ನಿಮ್ಮ ಧ್ವನಿ ಎತ್ತಿ. ಪೋಸ್ಟ್, ರಿಪೋಸ್ಟ್ ಮತ್ತು ಕಾಮೆಂಟ್ ಮೂಲಕ ಬೆಂಬಲ ನೀಡಿ.
#LSStrike#EqualPayForEqualWork#LicensedSurveyors
4 ತಿಂಗಳಿಂದ ಪರವಾನಗಿ ಭೂ ಮಾಪಕರು ಮುಷ್ಕರದಲ್ಲಿದ್ದಾರೆ ಸರ್. ಇನ್ನೆಷ್ಟು ದಿನ ನಿರ್ಲಕ್ಷ್ಯ?
ಸರ್ಕಾರಿ ಪರವಾನಗಿ ಭೂ ಮಾಪಕರ ಬೇಡಿಕೆಗಳಿಗೆ ತಕ್ಷಣ ನ್ಯಾಯ ನೀಡಿ. #JusticeForLicensedSurveyor
@BasanagoudaBJP ನಾಲ್ಕು ತಿಂಗಳಾದರೂ ಪರವಾನಗಿ ಭೂಮಾಪಕರ ಅನಿರ್ದಿಷ್ಟ ಮುಷ್ಕರದ ಬಗ್ಗೆ ಸರಕಾರ ಒಂದು ಸಭೆಯನ್ನು ಮಾಡಿಲ್ಲ, ಯಾವ ಕಾರಣಕ್ಕಾಗಿ ಮುಷ್ಕರ ಮಾಡುತ್ತಿದ್ದಾರೆ ಮತ್ತು ರೈತರಿಗೆ ತೊಂದರೆ ಆಗುತ್ತಿರುವ ಬಗ್ಗೆ ಸರಕಾರವು ಮಾಹಿತಿ ಕೇಳುತ್ತಿಲ್ಲ. 6000 ಪರವಾನಗಿ ಭೂಮಾಪಕರ ಬದುಕು ಬೀದಿಗೆ ಬಂದಿದೆ.
@BasanagoudaBJP Justice for licenced surveyors 🙏🙏. ಮಾನ್ಯ ಮುಖ್ಯಮಂತ್ರಿಗಳು ಆದಷ್ಟು ಬೇಗನೆ ಸ್ಪಂದಿಸಿ ನಮ್ಮ ಬೇಡಿಕೆ ಈಡೇರಿಸಬೇಕೆಂದು ನಮ್ಮ ಪರವಾಗಿ ನ್ಯಾಯ ಕೊಡಿಸಲು ನಮ್ಮ ಜೊತೆಗೆ ಕೈ ಜೋಡಿಸಿದ ಮಾನ್ಯ ಬಸವನಗೌಡ sir ರವರಿಗೆ ವಂದನೆಗಳು 🙏💐💐
"ಪರವಾನಗಿ ಭೂಮಾಪಕರ ಬಗ್ಗೆ ಕಾಳಜಿ ವಹಿಸುತ್ತಿರುವ ತಮಗೆ ಧನ್ಯವಾದಗಳು. ಕಳೆದ ಮೂರುವರೆ ತಿಂಗಳುಗಳಿಂದ ಮುಷ್ಕರ ನಡೆಸುತ್ತಿದ್ದರೂ ಸರ್ಕಾರ ಸ್ಪಂದಿಸಿಲ್ಲ. ತಕ್ಷಣವೇ ವೇತನ ನಿಗದಿಪಡಿಸಿ, ಉದ್ಯೋಗ ಭದ್ರತೆ ನೀಡಿ, ನಮ್ಮ ಹೋರಾಟ ಹಾಗೂ ರೈತರ ಕಷ್ಟಕ್ಕೆ ನ್ಯಾಯ ಒದಗಿಸಬೇಕು."
#ಪರವಾನಗಿ_ಭೂಮಾಪಕರಿಗೆ_ನ್ಯಾಯ_ಬೇಕು
ಕಂದಾಯ ಇಲಾಖೆಯಲ್ಲಿ ಭೂ ಮಾಪಕರ ಪಾತ್ರ ಪ್ರಮುಖವಾದದ್ದು. ಭೂ ಮಾಪಕರ ಮುಷ್ಕರದಿಂದ ಕಡತಗಳು ವಿಲೇವಾರಿಯಾಗದೆ ಸ್ಥಗಿತಗೊಂಡಿದೆ. ಹದ್ದುಬಸ್ತು, 11 E ಸ್ಕೆಚ್, ಜಮೀನು ಸರ್ವೇ, ಗಡಿ ಗುರುತು ಹಾಗೂ ಇತರೆ ಭೂ ದಾಖಲೆ ಸಿಗದೇ ರೈತರು ಪರದಾಡುವ ಸ್ಥಿತಿ ಬಂದಿದೆ. ಹದ್ದುಬಸ್ತು, 11 E ಸ್ಕೆಚ್ ಸಿಗದೇ ರೈತರಿಗೆ ಬ್ಯಾಂಕ್ ಸಾಲ ಸಿಗುತ್ತಿಲ್ಲ. ಗ್ರಾಮೀಣ ಭಾಗದಲ್ಲಿ ಜಾಮೀನು ವ್ಯಾಜ್ಯಗಳು ಹೆಚ್ಚುತ್ತಿದೆ. ಇಷ್ಟೆಲ್ಲಾ ಆಗುತ್ತಿದ್ದರೂ ಸಹ ಕರ್ನಾಟಕ ಲೋಕ ಸೇವಾ ಆಯೋಗದಿಂದ (KPSC) 750 ಭೂಮಾಪಕರ ನೇಮಕಾತಿ ಆಗುವ ಲಕ್ಷಣಗಳು ಕಾಣುತ್ತಿಲ್ಲ.
ಕಂದಾಯ ಇಲಾಖ���ಯ ಬೆನ್ನೆಲುಬಾದ ಭೂ ಮಾಪಕರ ಕಥೆ ಹೇಳ ತೀರದಂತಾಗಿದೆ. ಇತ್ತ, ಭೂಮಾಪಕರ ಅನುಪಸ್ಥಿತಿಯಿಂದ ರೈತರಿಗೂ ತೊಂದರೆಯಾಗುತ್ತಿದೆ.
ಹಗಲು ರಾತ್ರಿ ಎನ್ನದೆ ಕಳೆದ ಎರಡು ದಶಕಗಳಿಂದ ಸೇವೆ ಮಾಡುತ್ತಿರುವ ಪರವಾನಗಿ ಭೂಮಾಪಕರ ಸೇವೆಯನ್ನು ಸರ್ಕಾರ ಖಾಯಂ ಗೊಳಿಸಿ ಅವರ ಕುಟುಂಬಗಳಿಗೆ ಆಸರೆಯಾಗಲಿ.
@Vijayavani_Digi I @CMofKarnataka I @AKSSAofficial I
Best wishes to the new Karnataka Government
🙏 Licensed surveyors' long-pending demand — job security & regularization into govt surveyor posts — deserves positive consideration. @DKShivakumar
ಒಬ್ಬ ಪರವಾನಗಿ ಭೂಮಾಪಕ ಸೇವೆಯಲ್ಲಿರುವಾಗ ತೀರಿಕೊಂಡರೆ —
ಪಿಂಚಣಿ ಇಲ್ಲ.
ಗ್ರಾಚುಯಿಟಿ ಇಲ್ಲ.
ವಿಮೆ ಇಲ್ಲ.
ಪರಿಹಾರ ಇಲ್ಲ.
20+ ವರ್ಷ ಸರ್ಕಾರಿ ಕೆಲಸ ಮಾಡಿ, ಕುಟುಂಬಕ್ಕೆ ಉಳಿಸಿಹೋಗುವುದು ಶೂನ್ಯ.
ಇದಕ್ಕಿಂತ ದೊಡ್ಡ ಅ���್ಯಾಯ ಏನಿದೆ?
@siddaramaiah @krishnabgowda
#JusticeForLicensedSurveyors