ಮಹಿಳಾ ವಿರೋಧಿ ಕಾಂಗ್ರೆಸ್ ಸರ್ಕಾರಕ್ಕೆ ಧಿಕ್ಕಾರ!
ಮಹಿಳಾ ಸಬಲೀಕರಣ, ಸಮಾನ ಮಹಿಳಾ ಪ್ರಾತಿನಿಧ್ಯಗಳೆಲ್ಲವೂ ಕಾಂಗ್ರೆಸ್ ಪಕ್ಷಕ್ಕೆ ಘೋಷಣೆ ಮಾತ್ರ, ಅನುಷ್ಠಾನ ಶೂನ್ಯ! ಈ @INCKarnataka ಸರ್ಕಾರದಲ್ಲಿ ಮಹಿಳೆಯರಿಗೆ ಸೂಕ್ತ ಸಂಪುಟ ಸ್ಥಾನಮಾನ ನೀಡದೆ ರಾಜ್ಯದ ಸಮಸ್ತ ಮಹಿಳಾ ವರ್ಗಕ್ಕೆ ಅವಮಾನ ಮಾಡುತ್ತಿದೆ. ಇದರ ವಿರುದ್ಧ ಇಂದು ವಿಧಾನಸೌಧದ ಆವರಣದಲ್ಲಿರುವ ತಾಯಿ ಭುವನೇಶ್ವರಿ ಪ್ರತಿಮೆಯ ಮುಂದೆ ಬೃಹತ್ ಪ್ರತಿಭಟನೆ ನಡೆಸಲಾಯಿತು.
ರಾಜ್ಯದ ಮಹಿಳೆಯರಿಗೆ ಸೂಕ್ತ ಪ್ರಾತಿನಿಧ್ಯ, ಅರ್ಹ ಗೌರವ ಸಿಗಬೇಕು ಎನ್ನುವ ನಿಟ್ಟಿನಲ್ಲಿ ನಮ್ಮ ಆಗ್ರಹವಾಗಿದೆ. ಪ್ರತಿಭಟನೆಯಲ್ಲಿ ವಿಧಾನಸಭೆಯ ವಿಪಕ್ಷ ನಾಯಕರಾದ ಶ್ರೀ @RAshokaBJP , ವಿಧಾನಪರಿಷತ್ ವಿಪಕ್ಷ ನಾಯಕರಾದ ಶ್ರೀ @NswamyChalavadi, ಪಕ್ಷದ ಶಾಸಕರು ಮತ್ತು ವಿಧಾನಪರಿಷತ್ ಸದಸ್ಯರುಗಳು ಉಪಸ್ಥಿತರಿದ್ದರು.
#MahilaVirodhiCongress
ಗೃಹ ಇಲಾಖೆಯನ್ನು ಸಮರ್ಥವಾಗಿ ನಿಭಾಯಿಸಲಾಗದ ಮಾನ್ಯ ಗೃಹ ಸಚಿವ ಶ್ರೀ @PriyankKharge 'ರಾಷ್ಟ್ರೀಯ ಸ್ವಯಂಸೇವಕ ಸಂಘ ವಿರೋಧಿ ಇಲಾಖೆ' ಸಚಿವರಾಗಲಿ!
ದೇಶದ ಭದ್ರತೆಗೆ ಕಂಟಕರಾದ ದೇಶವಿರೋಧಿ ಶಕ್ತಿಗಳ ಬಗ್ಗೆ ಮೃದು ಧೋರಣೆ ತಾಳುತ್ತಾ, ದೇಶಸೇವೆಯಲ್ಲಿ ತೊಡಗಿರುವ @RSSorg ವಿರುದ್ಧ ನಿಮ್ಮ ನಂಜನ್ನು, ಕಾಂಗ್ರೆಸ್ ಸರ್ಕಾರದ ಕಪಟತನವನ್ನು ಜನ ಗಮನಿಸುತ್ತಿದ್ದಾರೆ.
80ನೇ ಸ್ವಾತಂತ್ರ್ಯ ದಿನಾಚರಣೆಯ ಪವಿತ್ರ ಸಂದರ್ಭದಲ್ಲಿ ಸ್ವಕ್ಷೇತ್ರ ಶಿಕಾರಿಪುರದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಆಯೋಜಿಸಲಾಗಿದ್ದ ರಾಷ್ಟ್ರ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಅತ್ಯಂತ ಹೆಮ್ಮೆ ಗೌರವಗಳಿಂದ ಭಾಗವಹಿಸಿ, ಶಿಕಾರಿಪುರದ ಸಮಸ್ತ ಜನತೆಗೆ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳನ್ನು ಕೋರಲಾಯಿತು.
ಅಮರ ಯೋಧರ ಹಾಗೂ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ-ಬಲಿದಾನಗಳ ಸ್ಮರಣೆಯೊಂದಿಗೆ, ದೇಶದ ವಿಕಾಸ ಹಾಗೂ ಕನ್ನಡಿಗರ ಏಳಿಗೆಗಾಗಿ ನಿರಂತರವಾಗಿ ಶ್ರಮಿಸುವ ಸಂಕಲ್ಪ ತೊಡೋಣ.
ಈ ಸ್ವಾತಂತ್ರ್ಯೋತ್ಸವದಲ್ಲಿ ಸಂಸದರಾದ ಶ್ರೀ @BYRBJP ರ, ದಿಶಾ ಸಮಿತಿ ಸದಸ್ಯರು, ಹಿರಿಯರಾದ ಶ್ರೀ ಗುರುಮೂರ್ತಿ, ಪ್ರಮುಖರಾದ ಶ್ರೀ ಪದ್ಮನಾಭ ಭಟ್, ಶ್ರೀ ಹುಲ್ಮಾರ್ ಮಹೇಶ್, ಶ್ರೀ ಬಸವರಾಜ್, ಶ್ರೀ ರುದ್ರಮುನಿ, ಶ್ರೀ ಪಾಲಾಕ್ಷಪ್ಪ, ಶ್ರೀ ಚನ್ನವೀರಪ್ಪ ಸೇರಿದಂತೆ ಹಲವಾರು ಗಣ್ಯರು ಭಾಗವಹಿಸಿದ್ದರು.
80ನೇ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮದ ಅಂಗವಾಗಿ ಪಕ್ಷದ ಯುವ ಮೋರ್ಚಾ ವತಿಯಿಂದ ಶಿಕಾರಿಪುರದಲ್ಲಿ ಇಂದು ಆಯೋಜಿಸಲಾಗಿದ್ದ ಬೃಹತ್ ಬೈಕ್ ರ್ಯಾಲಿಗೆ ಚಾಲನೆ ನೀಡಿ, ನಮ್ಮ ಯುವ ಕಾರ್ಯಕರ್ತರು ಮತ್ತು ಸಾರ್ವಜನಿಕರೊಂದಿಗೆ ಭಾಗವಹಿಸಲಾಯಿತು.
ತಾಲೂಕು ಕೃಷಿಕ ಸಮಾಜ ಅಧ್ಯಕ್ಷ ಶ್ರೀ ಹುಲ್ಮಾರ್ ಮಹೇಶ್, ಜಿಲ್ಲಾ ಯುವ ಮೋರ್ಚಾ ಉಪಾಧ್ಯಕ್ಷ ಶ್ರೀ ಬೆಣ್ಣೆ ಪ್ರವೀಣ್, ಮಂಡಲ ಯುವ ಮೋರ್ಚಾ ಅಧ್ಯಕ್ಷ ಶ್ರೀ ವೀರಣ್ಣ ಗೌಡ ಮುಖಂಡರಾದ ಶ್ರೀ ಲೋಹಿತ್ ನಾಯಕ್, ಶ್ರೀ ರಾಘವೇಂದ್ರ, ಶ್ರೀ ಪ್ರಶಾಂತ್, ಶ್ರೀ ರಾಜು, ಶ್ರೀ ಡಿ.ಎಲ್.ಬಸವರಾಜ್ ಸೇರಿದಂತೆ ನೂರಾರು ಯುವ ಮುಖಂಡರು, ಕಾರ್ಯಕರ್ತರು ದೇಶಭಕ್ತಿಯೊಂದಿಗೆ ಉತ್ಸಾಹದಿಂದ ಪಾಲ್ಗೊಂಡಿದ್ದರು.
"ಏಸೂರು ಕೊಟ್ಟರೂ ಈಸೂರು ಕೊಡೆವು" ಎಂಬ ಸಿಂಹಘರ್ಜನೆಯೊಂದಿಗೆ ಬ್ರಿಟಿಷ್ ಸಾಮ್ರಾಜ್ಯಶಾಹಿಯ ವಿರುದ್ಧ ಕೆಚ್ಛೆದೆಯಿಂದ ಸೆಡ್ಡು ಹೊಡೆದು, ಆಕ್ರಮಣಕಾರರ ಎದೆಯಲ್ಲಿ ನಡುಕ ಹುಟ್ಟಿಸಿ, ಭಾರತದಲ್ಲೇ ಮೊದಲ ಸ್ವತಂತ್ರ ಸರ್ಕಾರ ಘೋಷಿಸಿದ ಕ್ರಾಂತಿಯ ಭೂಮಿ ಈಸೂರಿನ ಎಲ್ಲ ಶೂರ, ಹುತಾತ್ಮ ಹೋರಾಟಗಾರರ ಸ್ಮಾರಕಕ್ಕೆ, 80ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಇಂದು ಭೇಟಿ ನೀಡಿ, ನಮಸ್ಕರಿಸಿ ಧನ್ಯತಾ ಭಾವ ಅನುಭವಿಸಿದೆ.
ಈ ಸಂದರ್ಭದಲ್ಲಿ ಹಿರಿಯರಾದ ಶ್ರೀ ಕೆ.ಎಸ್.ಗುರುಮೂರ್ತಿ, ಶ್ರೀ ಸಂಕ್ಲಾಪುರ ಹನುಮಂತಪ್ಪ, ಶ್ರೀ ಹುಲ್ಮಾರ್ ಮಹೇಶ್, ಮಾಜಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಶ್ರೀ ಚನ್ನವೀರಪ್ಪ, ಶ್ರೀ ಅಶೋಕ್ ಮಾವಳ್ಳಿ, ಈಸೂರು ಪಂಚಾಯಿತಿ ಆಡಳಿತಾಧಿಕಾರಿ ಶ್ರೀ ರವಿ, ಶ್ರೀ ಬೆಣ್ಣೆ ಪ್ರವೀಣ್, ಶ್ರೀ ಗೋಣಿ ಸಂದೀಪ್, ಶ್ರೀ ಹುಚ್ಚುರಾಯಪ್ಪ ಸೇರಿದಂತೆ ಅನೇಕ ಪ್ರಮುಖರು ಜೊತೆಗಿದ್ದರು.
ತಾಯ್ನಾಡಿನ ಗೌರವ ಮತ್ತು ಸ್ವರಾಜ್ಯಕ್ಕಾಗಿ ಜೀವ ತೆತ್ತ ಈಸೂರಿನ ವೀರ ಹುತಾತ್ಮರ ಬಲಿದಾನ ಪ್ರತಿಯೊಬ್ಬ ಭಾರತೀಯನ ಧಮನಿಯಲ್ಲೂ ದೇಶಪ್ರೇಮದ ಕಿಡಿಯನ್ನು ಜಾಗೃತಗೊಳಿಸುತ್ತದೆ. ಎಲ್ಲರೂ ಒಮ್ಮೆಯಾದರೂ ಈಸೂರಿನ ಈ ಪವಿತ್ರ ಸ್ವಾತಂತ್ರ್ಯ ಸ್ಮಾರಕಕ್ಕೆ ಭೇಟಿ ನೀಡಲೇಬೇಕು ಎಂದು ಕೋರುತ್ತೇನೆ.
The Congress must answer a simple question: Is it really too much to expect its leaders to respect the symbols of our nation?
Yesterday, Congress Minister Zameer Ahmed Khan claimed he was “too busy” to hoist the national flag on Independence Day. Today, Sonia Gandhi, the de facto head of the Congress, objects to Vande Mataram being played.
These are not isolated lapses. They reveal an attitude that flows from the very top of the Congress leadership, one in which respect for India’s national symbols appears optional.
@INCIndia owes the people of India an explanation for why honouring our national symbols appears to be too much to ask of its leaders.
#CongressFailsBharat
#CongressAgainstBharat
ದೇಶ ಕಂಡ ಮೇರು ನಾಯಕ, ಅಜಾತಶತ್ರು, ಭಾರತರತ್ನ, ಮಾಜಿ ಪ್ರಧಾನಮಂತ್ರಿ ಶ್ರೀ ಅಟಲ್ ಬಿಹಾರಿ ವಾಜಪೇಯಿ ಜೀ ಅವರ ಪುಣ್ಯಸ್ಮರಣೆಯಂದು ಆ ಶ್ರೇಷ್ಠ ಚೇತನಕ್ಕೆ ಭಕ್ತಿಪೂರ್ವಕ ಪ್ರಣಾಮಗಳು. ರಾಷ್ಟ್ರನಿಷ್ಠೆ, ಸುಶಾಸನ ಮತ್ತು ವಿಶ್ವ ಮಟ್ಟದಲ್ಲಿ ಭಾರತದ ಗರಿಮೆಯನ್ನು ಎತ್ತಿಹಿಡಿಯುವಲ್ಲಿ ಅವರ ಸಾಧನೆ, ಅವರು ತೋರಿದ ಮುತ್ಸದ್ದಿತನ, ಅವರ ಪರಿಶ್ರಮ ಹಾಗೂ ಕೊಡುಗೆ ಅಪಾರ.
ಆದರ್ಶಪ್ರಾಯ ನೇತಾರರಾಗಿದ್ದ ಶ್ರೀ ಅಟಲ್ ಜೀ, ತಮ್ಮ ಅಸಾಧಾರಣ ವಾಕ್ಪಟುತ್ವ, ಕವಿಹೃದಯ, ಅಸಾಮಾನ್ಯ ಸಂಘಟನಾ ಕೌಶಲ್ಯಗಳಿಂದ, ತತ್ವ-ಸಿದ್ದಾಂತ ಆಧಾರಿತ ರಾಜಕಾರಣದ ಸಾಕಾರ ಮೂರ್ತಿಯಾಗಿದ್ದರು. ಆ ಮಹಾನ್ ನಾಯಕನ ಪವಿತ್ರ ಸ್ಮರಣೆ, ರಾಷ್ಟ್ರ ಸೇವೆಯ ಕರ್ತವ್ಯದ ಜಾಗೃತಿ ಮೂಡಿಸುತ್ತದೆ.
ಸದೈವ ಅಟಲ್! 🙏🏼
ಶಿವಮೊಗ್ಗ ಜಿಲ್ಲೆಯ, ಹೊಸನಗರ ತಾಲೂಕಿನ ಹರತಾಳು ಗ್ರಾಮದಲ್ಲಿ ಮಧ್ಯರಾತ್ರಿ ಅಕ್ರಮವಾಗಿ ಗೋವುಗಳನ್ನು ಸಾಗಿಸುತ್ತಿದ್ದ ಜಾಲವನ್ನು ಧೈರ್ಯದಿಂದ ತಡೆಯಲು ಯತ್ನಿಸಿದ ಸ್ಥಳೀಯ ಹಿಂದೂ ಯುವಕರ ಮೇಲೆ ದುಷ್ಕರ್ಮಿಗಳು ಮಾರಣಾಂತಿಕ ಹಲ್ಲೆ ನಡೆಸಿರುವುದು ಅತ್ಯಂತ ಖಂಡನೀಯ ಹಾಗೂ ಆತಂಕಕಾರಿ. ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಸಂಪೂರ್ಣವಾಗಿ ಕುಸಿದುಬಿದ್ದಿದ್ದು, ದುಷ್ಕರ್ಮಿಗಳಿಗೆ ಕಾನೂನಿನ ಕಿಂಚಿತ್ ಭಯವೂ ಇಲ್ಲದಿರುವುದು ಮತ್ತೊಮ್ಮೆ ಸಾಬೀತಾಗಿದೆ. ಇನ್ನೊಂದೆಡೆ, ಅಕ್ರಮ ತಡೆಯುವ ಆಡಳಿತ ಯಂತ್ರದ ವಿಫಲತೆಯಿಂದಾಗಿ ನಾಗರಿಕರೇ ರಸ್ತೆಗೆ ಇಳಿಯುವ, ಗೋವುಗಳನ್ನು ರಕ್ಷಿಸುವ ಹಾಗೂ ಜೀವಕ್ಕೆ ಕಂಟಕ ತಂದೊಡ್ಡುವ ದುಸ್ಥಿತಿ ನಿರ್ಮಾಣವಾಗಿದೆ.
ರಾಜ್ಯದಲ್ಲಿ ಗೋವು ಕಳ್ಳತನ ಮತ್ತು ಅಕ್ರಮ ಸಾಗಾಟ ಜಾಲಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಮುಖ್ಯಮಂತ್ರಿ ಶ್ರೀ @DKShivakumar ಹಾಗೂ ಗೃಹ ಸಚಿವ ಶ್ರೀ @PriyankKharge ರವರು ವಿಫಲರಾಗುತ್ತಿರುವುದು ಮೇಲ್ನೋಟಕ್ಕೆ ಸಾಬೀತಾಗಿದೆ. ರಾಜ್ಯ ಸರ್ಕಾರದ ಮೃದು ಧೋರಣೆ ಹಾಗೂ ಓಲೈಕೆ ರಾಜಕಾರಣ ಸಮಾಜಘಾತಕ ಶಕ್ತಿಗಳಿಗೆ ಕಾನೂನಿನ ಭಯವಿಲ್ಲದೆ ಮೆರೆಯಲು ಪ್ರಚೋದನೆ ನೀಡುತ್ತಿರುವುದೂ ಕೂಡ ಮೇಲಿಂದ ಮೇಲೆ ಸಾಬೀತಾಗುತ್ತಿದೆ. ಅಕ್ರಮ ಚಟುವಟಿಕೆ ತಡೆಯಲು ಮುಂದಾದ ಯುವಕರ ಮೇಲೆ ಹಲ್ಲೆ, ಧಾಂದಲೆ ನಡೆಸುವುದೆಂದರೆ, ಸಮಾಜವಿರೋಧಿ ಶಕ್ತಿಗಳು, ಅಪರಾಧಿಗಳೇ ವಿಜೃಂಭಿಸುವಂತಹ, ಜಂಗಲ್ ರಾಜ್ ಪರಿಸ್ಥಿತಿ ನಿರ್ಮಾಣವಾಗಿರುವುದು ರಾಜ್ಯದ ಪೋಲೀಸ್ ಇಲಾಖೆಯ ವೈಫಲ್ಯವಲ್ಲವೇ ಮುಖ್ಯಮಂತ್ರಿಗಳೇ?
ಈ ಅಪರಾಧ ಕೃತ್ಯ ಹಾಗೂ ಭೀಕರ ಹಲ್ಲೆಯ ಹಿಂದಿರುವ ಪ್ರತಿಯೊಬ್ಬ ಆರೋಪಿಯನ್ನು, ಅಕ್ರಮ ಸಾಗಾಟಕ್ಕೆ ಬಳಸಿದ ವಾಹನ ಮತ್ತು ಅದರ ಮಾಲೀಕರನ್ನು ತಕ್ಷಣವೇ ಪತ್ತೆಹಚ್ಚಿ ಕಾನೂನು ರೀತ್ಯಾ ಕಠಿಣ ಕ್ರಮ ಕೈಗೊಳ್ಳಬೇಕು. ಈ ಪ್ರಕರಣವನ್ನು ಯಾವುದೇ ಕಾರಣಕ್ಕೂ ಲಘುವಾಗಿ ಪರಿಗಣಿಸದೇ, ಅಕ್ರಮ ಗೋವು ಕಳ್ಳತನದ ಜಾಲವನ್ನು ಬುಡಸಮೇತ ಕಿತ್ತೊಗೆಯುವ ಸೂಕ್ತ ತನಿಖೆ ನಡೆಸಬೇಕು ಎಂದು ಆಗ್ರಹಿಸುತ್ತೇವೆ. ಗಾಯಾಳು ಯುವಕರಿಗೆ ಸೂಕ್ತ ಚಿಕಿತ್ಸೆ, ರಕ್ಷಣೆ ಹಾಗೂ ನ್ಯಾಯ ದೊರಕುವವರೆಗೆ ನಮ್ಮ ಹೋರಾಟ ನಿಲ್ಲುವುದಿಲ್ಲ!
#HinduVirodhiCongress
ಅಭಿವೃದ್ಧಿ ಹಾಗೂ ಜನಸೇವೆಯನ್ನೇ ತಮ್ಮ ಕಾರ್ಯಶೈಲಿಯನ್ನಾಗಿಸಿಕೊಂಡಿರುವ ಆತ್ಮೀಯ ಸಹೋದರ, ಶಿವಮೊಗ್ಗ ಕ್ಷೇತ್ರದ ಜನಪ್ರಿಯ ಸಂಸದರಾದ ಶ್ರೀ @BYRBJP ಅವರಿಗೆ ಜನ್ಮದಿನದ ಹೃದಯಪೂರ್ವಕ ಶುಭಾಶಯಗಳು. ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗಾಗಿ, ಹಿಡಿದ ಕೆಲಸ ಪೂರ್ಣಗೊಳ್ಳುವವರೆಗೆ ನಿರಂತರವಾಗಿ ಶ್ರಮಿಸುತ್ತಾ, ತಮ್ಮ ಪ್ರಾಮಾಣಿಕ ಪರಿಶ್ರಮ, ಸಾಧನೆ, ಜನಸೇವೆ ಹಾಗೂ ಜನಾನುರಾಗಿ ವ್ಯಕ್ತಿತ್ವದ ಮೂಲಕ ಜನಮಾನಸದಲ್ಲಿ ಸ್ಥಾನ ಪಡೆದಿರುವ ನೀವು, ಕ್ಷೇತ್ರದಲ್ಲಷ್ಟೇ ಅಲ್ಲದೆ, ರಾಜ್ಯ ಮತ್ತು ದೇಶಮಟ್ಟದಲ್ಲಿಯೂ ಆದರ್ಶಪ್ರಾಯ, ಮಾದರಿ ಜನಪ್ರತಿನಿಧಿಗಳಾಗಿ ಸ್ಥಾನ ಗಳಿಸಿರುವುದು ಅತ್ಯಂತ ಹೆಮ್ಮೆಯ ಸಂಗತಿ.
ಒಡಹುಟ್ಟಿದ ಸೋದರನಾಗಿ, ಕುಟುಂಬದ ಹಿರಿಯನಾಗಿ ಹಾಗೂ ಸಾರ್ವಜನಿಕ ಜೀವನದಲ್ಲಿ ಬದ್ಧತೆಯುಳ್ಳ ನೇತಾರರಾಗಿ ನಿಮ್ಮ ನಡೆ, ನುಡಿ ಹಾಗೂ ಮಾರ್ಗದರ್ಶನ ನನಗೆ ಶಕ್ತಿ ನೀಡಿದೆ. ಜೀವನದ ಪ್ರತಿಯೊಂದು ಘಟ್ಟದಲ್ಲೂ ಬೆನ್ನೆಲುಬಾಗಿ ಬೆಂಬಲಕ್ಕೆ ನಿಂತಿರುವ, ಅಸಂಖ್ಯಾತ ಕಾರ್ಯಕರ್ತರ ಹಾಗೂ ನಾಗರೀಕ ಬಂಧುಗಳ ನೆಚ್ಚಿನ ರಾಘಣ್ಣನಿಗೆ ಜನ್ಮದಿನದ ಶುಭಕಾಮನೆಗಳನ್ನು ಸಲ್ಲಿಸುತ್ತಾ, ಶ್ರೀ ಮಂಜುನಾಥ ಸ್ವಾಮಿಯು ನಿಮಗೆ ದೀರ್ಘಾಯುಷ್ಯವನ್ನು, ಉತ್ತಮ ಆರೋಗ್ಯವನ್ನು ಹಾಗೂ ನಿಮ್ಮ ದೇಶಸೇವೆ ಮತ್ತಷ್ಟು ವ್ಯಾಪಕವಾಗಿ ನಡೆಸುವ ಶಕ್ತಿಯನ್ನು ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ.
Has the Home Ministry been leased out to anti-national elements and criminals by the @INCKarnataka government?
The silence of Home Minister @PriyankKharge and his department over posters openly challenging the Bengaluru Police is a direct affront to the courage, professionalism, and authority of our brave police force. It reflects a government that appears more preoccupied with appeasement politics than with upholding the dignity of the Police Department and maintaining law and order.
The audacity of these anti-national posters, brazenly daring the Bengaluru Police to "do whatever they can," reflects the sense of impunity such elements seem to enjoy under this government. The same government that chose to blame honest police officers for the Chinnaswamy Stadium tragedy and stampede, which claimed the lives of 11 innocent people.
This is hardly surprising when the Chief Minister @DKShivakumar himself has, in the past, made controversial statements defending the Mangaluru cooker blast accused and also attempting to shield those involved in the Hotel Rameshwaram blast case.
A state once celebrated as a model of peace is, unfortunately, witnessing a steady deterioration in law and order, with anti-national elements and notorious rioters appearing increasingly emboldened.
Man is mortal but the love for them is immortal. Though u r not present here with all of us but ur memory n the love towards u ll always stores with us.🖤
ನನ್ನ ನಗುವಿನ ಪರಮಾತ್ಮ.✨♥️
ಪ್ರೀತಿ ಗೌರವ ಕೊನೆಯವರೆಗೂ.💎🕊️
#DrPuneethRajkumar
ಒಳ್ಳೆಯವರಿಗೆ ಆಯುಸ್ಸು ಕಡಿಮೆ,
ಈ ಯುಗದಲ್ಲಿ ದುಷ್ಟ ಚಂಡಾಳರಿಗೆ ಆಯುಸ್ಸು ಹೆಚ್ಚಾಗಿ ಇರುತ್ತೆ.ಆದರು ಒಂದು ಅಂತ ಸತ್ಯ
ನಮ್ಮ ಪರಮಾತ್ಮನಿಗೆ 🙏
ಎಂದು ಸಾವಿಲ್ಲ
#PuneethRajkumar#AppuBoss