ಮಧುಗಿರಿ ತಾಲ್ಲೂಕು ಮಾನ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಸಹಾಯಕ ನಿರ್ದೇಶಕರು ಇಂದು ಗ್ರಾಮ ಕಾಯಕ ಮಿತ್ರರ ಪ್ರಗತಿ ಪರಿಶೀಲನಾ ಸಭೆ ಹಮ್ಮಿಕೊಂಡಿದ್ದರು. ಈ ವೇಳೆ ತಾಂತ್ರಿಕ ಸಂಯೋಜಕರು, IEC ಸಂಯೋಜಕರು ಭಾಗಿಯಾಗಿದ್ದರು.
ಮಧುಗಿರಿ ತಾಲ್ಲೂಕು ನೇರಳೆಕೆರೆ ಗ್ರಾಮ ಪಂಚಾಯತಿ ವ್ಯಾಪ್ತಿಯ ದೊಡ್ಡಗೊಲ್ಲರಹಟ್ಟಿ ಗ್ರಾಮದಲ್ಲಿ ಕೆರೆ ಅಭಿವೃದ್ಧಿ ಕಾಮಗಾರಿ ಬಳಿ ರೋಜ್ ಗಾರ್ ದಿನಾಚರಣೆ ಮಾಡಲಾಯಿತು. ಈ ವೇಳೆ BFT, GKM, ಗ್ರಾಮ ಪಂಚಾಯತಿ ಸಿಬ್ಬಂದಿ ಭಾಗಿಯಾಗಿದ್ದರು ಐಇಸಿ ಸಂಯೋಜಕರು, ತಾಲ್ಲೂಕು ಪಂಚಾಯತಿ ��ಧುಗಿರಿ
ಮಧುಗಿರಿ ತಾಲ್ಲೂಕು ಬ್ರಹ್ಮಸಮುದ್ರ ಗ್ರಾಮ ಪಂಚಾಯತಿ ವ್ಯಾಪ್ತಿಯ ಸಮುದಾಯ ಕಾಮಗಾರಿ ಬಳಿ ಕೂಲಿಕಾರರ ಜೊತೆ ರೋಜ್ ಗಾರ್ ದಿವಸ್ ಆಚರಣೆ ಮಾಡಲಾಯಿತು. ಈ ವೇಳೆ ನರೇಗಾ ಯೋಜನೆಯ ಬಗ್ಗೆ ಮಾಹಿತಿ ನೀಡಲಾಯಿತು
ಮಧುಗಿರಿ ತಾಲ್ಲೂಕು ಕೊಟಗಾರಲಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮನೆ ಮನೆ ಭೇಟಿ ಕಾರ್ಯಕ್ರಮ ಹಮ್ಮಿಕೊಂಡು ವೃದ್ಧರಿಗೆ, ಅಂಗವಿಕಲರಿಗೆ, ಮಹಿಳೆಯರಿಗೆ ನರೇಗಾ ಯೋಜನೆಯಡಿ ಕೂಲಿ ಕೆಲಸಕದಕೆ ಅವಕಾಶ ಇದೆ ಎಂಬುದನ್ನು ಮನವರಿಕೆ ಮಾಡಲಾಯಿತು.. ಹಾಗೂ ವಯಕ್ತಿಕ ಕಾಮಗಾರಿಗಳನ್ನು ಕೈಗೊಳ್ಳುವಂತೆ ಅರಿವು ಮೂಡಿಸಲಾಯಿತಿ
ಮಧುಗಿರಿ ತಾಲ್ಲೂಕು ರಂಗಾಪುರ ಗ್ರಾಮ ಪಂಚಾಯತಿ ವ್ಯಾಪ್ತಿಯ ಗಿಡದಾಗಲಹಳ್ಳಿ ಗ್ರಾಮದಲ್ಲಿ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ನರೇಗಾ ಮಾಹಿತಿ ಮಳಿಗೆಯನ್ನು ಹಾಕಲಾಗಿದ್ದು, ಮಾಹಿತಿಯನ್ನು ��್ರಚಾರ ಮಾಡಲಾಯಿತು