"ಪ್ರಜಾಪ್ರಭುತ್ವದಲ್ಲಿ ಪ್ರಶ್ನೆ ಕೇಳುವುದು ಅಪರಾಧವಲ್ಲ, ಅದು ಪ್ರತಿಯೊಬ್ಬ ನಾಗರಿಕನ ಹಕ್ಕು." 🇮🇳
"ವಿದ್ಯಾರ್ಥಿಯ ಮೇಲೆ ಎತ್ತಿದ ಪ್ರತಿಯೊಂದು ಲಾಠಿಯೂ ವ್ಯವಸ್ಥೆಯನ್ನೇ ಪ್ರಶ್ನಿಸುತ್ತದೆ."
"ಸತ್ಯದ ಪರ ನಿಲ್ಲುವ ಧೈರ್ಯವೇ ನಿಜವಾದ ಪ್ರಜಾಪ್ರಭುತ್ವ.✊
ರಾಷ್ಟ್ರೀಯ ಧ್ವಜ ದಿನದ ಶುಭಾಶಯಗಳು. 🇮🇳
ನಮ್ಮ ತ್ರಿವರ್ಣ ಧ್ವಜವು ದೇಶದ ಗೌರವ, ಏಕತೆ ಮತ್ತು ಸ್ವಾತಂತ್ರ್ಯದ ಸಂಕೇತವಾಗಿದೆ. ರಾಷ್ಟ್ರೀಯ ಧ್ವಜ ದಿನದ ಅಂಗವಾಗಿ ಎಲ್ಲರಿಗೂ ಹಾರ್ದಿಕ ಶುಭಾಶಯಗಳು. ನಮ್ಮ ರಾಷ್ಟ್ರಧ್ವಜಕ್ಕೆ ಸದಾ ಗೌರವ ನೀಡಿ, ದೇಶದ ಪ್ರಗತಿಗೆ ಕೈಜೋಡಿಸೋಣ.
ಜೈ ಹಿಂದ್ 🇮🇳
ಓ ಮಳೆರಾಯ...🌧️🌧️
ಲೂಟಿ ಹೊಡೆದವರೆಲ್ಲರೂ ಬದುಕುತ್ತಿದ್ದಾರೆ, ಭೂಮಿಯನ್ನು ನಂಬಿ ನಾಟಿ ಮಾಡಿದ ರೈತನನ್ನು ಬದುಕಿಸಯ್ಯ.
ಬಿಸಿಲಿನ ಬೇಗೆಯಿಂದ ಬಾಡಿದ ಬೆಳೆಗಳಿಗೆ ನಿನ್ನ ಕರುಣೆಯ ಹನಿಗಳನ್ನು ಸುರಿಸಯ್ಯ.
ಅನ್ನದಾತನ ಮುಖದಲ್ಲಿ ಮತ್ತೆ ನಗು ಮೂಡಿಸಿ, ಭರವಸೆಯ ಬೆಳಕನ್ನು ಹರಿಸಯ್ಯ.
🎂 ಜನುಮದಿನದ ಹಾರ್ದಿಕ ಶುಭಾಶಯಗಳು ಗೆಳೆಯಾ.❤️🎂
ನಿನ್ನ ಜೀವನವು ಸದಾ ಸಂತೋಷ, ಆರೋಗ್ಯ, ಯಶಸ್ಸು ಮತ್ತು ಸಮೃದ್ಧಿಯಿಂದ ತುಂಬಿರಲಿ. ನೀ ಕಂಡ ಎಲ್ಲ ಕನಸುಗಳು ನನಸಾಗಲಿ. ದೇವರು ನಿನಗೆ ದೀರ್ಘಾಯುಷ್ಯ, ಹಾಗೂ ಉಜ್ವಲ ಭವಿಷ್ಯವನ್ನು ಕರುಣಿಸಲಿ.
ಹುಟ್ಟುಹಬ್ಬದ ಶುಭಾಶಯಗಳು ಗೆಳೆಯಾ 🎂🎊❤️
ಕಳಬೇಡ, ಕೊಲಬೇಡ ಹುಸಿಯ ನುಡಿಯಲು ಬೇಡ
ಮುನಿಯಬೇಡ, ಅನ್ಯರಿಗೆ ಅಸಹ್ಯಪಡಬೇಡ
ತನ್ನ ಬಣ್ಣಿಸಬೇಡ, ಇದಿರ ಹಳಿಯಲು ಬೇಡ
ಇದೇ ಅಂತರಂಗಶುದ್ಧಿ, ಇದೇ ಬಹಿರಂಗಶುದ್ಧಿ
ಇದೇ ನಮ್ಮ ಕೂಡಲಸಂಗಮದೇವರನೊಲಿಸುವ ಪರಿ
ಬೀದರ್ ಜಿಲ್ಲೆ ಬಸವಕಲ್ಯಾಣದಲ್ಲಿ ನೂತನವಾಗಿ ನಿರ್ಮಿಸುತ್ತಿರುವ ಅನುಭವ ಮಂಟಪಕ್ಕೆ ಭೇಟಿ ನೀಡಿ, ಕಾಮಗಾರಿಯ ಪ್ರಗತಿಯನ್ನು ಪರಿಶೀಲಿಸಲಾಯಿತು.
ನೂತನ ಅನುಭವ ಮಂಟಪವು ಕರ್ನಾಟಕದ ಸಾಂಸ್ಕೃತಿಕ ನಾಯಕ ಬಸವಣ್ಣನವರ ತತ್ವಗಳನ್ನು ಬಿಂಬಿಸುವ ಒಂದು ಬೃಹತ್ ಯೋಜನೆಯಾಗಿದೆ. ತ್ರಿಪುರಾಂತ ಕೆರೆಯ ದಡದಲ್ಲಿ ನಿರ್ಮಾಣವಾಗುತ್ತಿರುವ ಈ ಐತಿಹಾಸಿಕ ಸಂಕೀರ್ಣವು ಕಲ್ಯಾಣ ಚಾಲುಕ್ಯ ಶೈಲಿಯ ವಾಸ್ತುಶಿಲ್ಪವನ್ನು ಹೊಂದಿದೆ.
12ನೇ ಶತಮಾನದಲ್ಲಿ ಬಸವಕಲ್ಯಾಣದಲ್ಲಿ ಬಸವಣ್ಣರು ಸ್ಥಾಪಿಸಿದ ಅನುಭವ ಮಂಟಪವು ಸಮಾನತೆ, ಸಾಮಾಜಿಕ ನ್ಯಾಯ, ಪ್ರಜಾಪ್ರಭುತ್ವ, ಅಭಿವ್ಯಕ್ತಿ ಸ್ವಾತಂತ್ರ್ಯ ಹಾಗೂ ಮಾನವೀಯ ಮೌಲ್ಯಗಳ ಪ್ರತೀಕವಾಗಿ ವಿಶ್ವದೆಲ್ಲೆಡೆ ಗುರುತಿಸಿಕೊಂಡಿತ್ತು. ಇದೇ ಮಹಾನ್ ಪರಂಪರೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಉದ್ದೇಶದಿಂದ ಬಸವಕಲ್ಯಾಣದಲ್ಲಿ ನೂತನ ಅನುಭವ ಮಂಟಪವನ್ನು ನಿರ್ಮಿಸಲಾಗುತ್ತಿದೆ.
ಈ ಅನುಭವ ಮಂಟಪವು ಕೇವಲ ಕಟ್ಟಡವಲ್ಲ, ಬಸವ ತತ್ವ, ವಚನ ಸಾಹಿತ್ಯ, ಕಾಯಕ ದಾಸೋಹ, ಸಮಾನತೆ ಹಾಗೂ ಶರಣ ಸಂಸ್ಕೃತಿಯ ಜೀವಂತ ಕೇಂದ್ರವಾಗಿ ರೂಪುಗೊಳ್ಳುತ್ತಿದೆ. ಇಲ್ಲಿ ಬಸವಣ್ಣ, ಅಲ್ಲಮ ಪ್ರಭು, ಅಕ್ಕ ಮಹಾದೇವಿ, ಚನ್ನಬಸವಣ್ಣ ಸೇರಿದಂತೆ ಶರಣ, ಶರಣೆಯರ ಚಿಂತನೆ, ವಚನಗಳು ಹಾಗೂ ಅವರ ಸಾಮಾಜಿಕ ಕ್ರಾಂತಿಯ ಸಂದೇಶವನ್ನು ಆಧುನಿಕ ತಂತ್ರಜ್ಞಾನದ ಮೂಲಕ ಜನರಿಗೆ ಪರಿಚಯಿಸುವ ವ್ಯವಸ್ಥೆ ಕಲ್ಪಿಸಲಾಗುತ್ತಿದೆ.
ಈ ವೇಳೆ ಪೂಜ್ಯ ಶ್ರೀ ನಾಡೋಜ ಬಸವಲಿಂಗ ಪಟ್ಟದೇವರು, ಶ್ರೀ ಶಿವಾನಂದ ಮಹಾಸ್ವಾಮೀಜಿ, ಶ್ರೀ ಗುರುಬಸವ ಪಟ್ಟದ್ದೇವರು, ಅಕ್ಕಾ ಗಂಗಂಬಿಕಾ ತಾಯಿ, ಶ್ರೀ ಬಸವ ಪ್ರಭು ಸ್ವಾಮೀಜಿ, ಡಾ. ಸಿದ್ದರಾಮ ಶರಣು ಬೇಲದ್ದಳ, ಶ್ರೀ ಪರ್ವತ ಲಿಂಗ ಪರಮೇಶ್ವರ್ ಮಹಾರಾಜ, ಉಪಮುಖ್ಯಮಂತ್ರಿಗಳಾದ ಡಾ. ಜಿ. ಪರಮೇಶ್ವರ್, ಸಚಿವರಾದ ಈಶ್ವರ್ ಖಂಡ್ರೆ, ಮಾಜಿ ಸಚಿವರಾದ ಶರಣ ಪ್ರಕಾಶ್ ಪಾಟೀಲ್, ಸಂಸದರಾದ ಸಾಗರ ಖಂಡ್ರೆ ಸೇರಿದಂತೆ ಬಸವಾದಿ ಶರಣರು ಜೊತೆಗಿದ್ದರು.
🕉️ಧರ್ಮ, ಸಾಮರಸ್ಯ, ಪರಿಸರ, ಕೃಷಿ ಹಾಗೂ ರೈತರ ಕಲ್ಯಾಣಕ್ಕಾಗಿ ನಡೆಯುವ ಬಸವಾದಿ ಶಿವಶರಣರ ಬೃಹತ್ ಹಿಂದೂ ಸಮಾವೇಶಕ್ಕೆ ಎಲ್ಲ ಭಕ್ತರು, ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ವಿನಂತಿ. 🙏
ಶ್ರೀ ಗುಂಡುರೆಡ್ಡಿ .ಆರ್. ಕಮಲಾಪೂರೆ ಮಾಜಿ ತಾಲ್ಲೂಕು ಪಂಚಾಯತ ಅಧ್ಯಕ್ಷರು ಬಸವಕಲ್ಯಾಣ ಮಾಜಿ ಜಿಲ್ಲಾ ಪಂಚಾಯತ ಸದಸ್ಯರು ಬೀದರ.🙏
ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು Rahul Gandhi ಸರ್. ನಿಮಗೆ ಉತ್ತಮ ಆರೋಗ್ಯ, ಸಂತೋಷ ಹಾಗೂ ದೀರ್ಘಾಯುಷ್ಯ ದೊರೆಯಲಿ. ದೇಶದ ಜನರ ಸೇವೆಯಲ್ಲಿ ಇನ್ನಷ್ಟು ಯಶಸ್ಸು ಮತ್ತು ಸಾಧನೆಗಳು ನಿಮ್ಮದಾಗಲಿ ಎಂದು ಹಾರೈಸುತ್ತೇವೆ. 🎉🎂
🌿 ಪರಿಸರವಿಲ್ಲದೆ ನಾವಿಲ್ಲ, ಪರಿಸರದಿಂದಲೇ ನಾವೆಲ್ಲ. 🌿
ನಮ್ಮ ಬದುಕಿನ ಪ್ರತಿಯೊಂದು ಉಸಿರು, ಆಹಾರ, ನೀರು ಮತ್ತು ಆರೋಗ್ಯ ಪರಿಸರದ ಮೇಲೆಯೇ ಅವಲಂಬಿತವಾಗಿದೆ. ಪ್ರಕೃತಿಯ ಸಮತೋಲನ ಕಾಪಾಡುವುದು ನಮ್ಮೆಲ್ಲರ ಜವಾಬ್ದಾರಿ. ಹೆಚ್ಚುತ್ತಿರುವ ಮಾಲಿನ್ಯ, ಅರಣ್ಯನಾಶ ಮತ್ತು ಹವಾಮಾನ ಬದಲಾವಣೆಯಂತಹ ಸವಾಲುಗಳ ನಡುವೆ ಪರಿಸರ ಸಂರಕ್ಷಣೆ ಇಂದಿನ ಅಗತ್ಯವಾಗಿದೆ.
ಬನ್ನಿ, ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಇಂದೇ ಒಂದು ಸಸಿ ನೆಟ್ಟು, ಅದನ್ನು ಮರವಾಗಿ ಬೆಳೆಸುವ ಸಂಕಲ್ಪ ಮಾಡೋಣ. ಕೇವಲ ಸಸಿ ನೆಡುವುದಷ್ಟೇ ಅಲ್ಲ, ಅದನ್ನು ಪೋಷಿಸಿ ಬೆಳೆಸುವುದರ ಮೂಲಕ ಮುಂದಿನ ಪೀಳಿಗೆಗೆ ಹಸಿರು, ಸ್ವಚ್ಛ ಮತ್ತು ಸುಂದರ ಭೂಮಿಯನ್ನು ನೀಡೋಣ.
ಪ್ರಕೃತಿಯನ್ನು ಉಳಿಸುವುದು ಎಂದರೆ ನಮ್ಮನ್ನೇ ಉಳಿಸಿಕೊಳ್ಳುವುದು. ಹಸಿರು ಪರಿಸರವೇ ಆರೋಗ್ಯಕರ ಜೀವನದ ಆಧಾರ.
🌱 "ಒಂದು ಸಸಿ – ಒಂದು ಜೀವ, ಒಂದು ಮರ – ಸಾವಿರ ಉಸಿರು." 🌱
ವಿಶ್ವ ಪರಿಸರ ದಿನಾಚರಣೆಯ ಶುಭಾಶಯಗಳು. 🍃💚
ಮಾನ್ಯ ಮುಖ್ಯಮಂತ್ರಿಗಳಾದ D. K. Shivakumar ಅವರು ಪ್ರಮಾಣ ವಚನ ಸ್ವೀಕರಿಸುವ ಮುನ್ನ ದೇಗುಲ ಮಠದ ಕಿರಿಯ ಶ್ರೀಗಳ ಆಶೀರ್ವಾದ ಪಡೆದ ಈ ಪವಿತ್ರ ಕ್ಷಣವು ಭಕ್ತಿ, ಸಂಸ್ಕಾರ, ಗುರುಪರಂಪರೆಯ ಮೇಲಿನ ಗೌರವ ಹಾಗೂ ವಿನಯಶೀಲತೆಯ ಪ್ರತೀಕವಾಗಿದೆ. 💐🙏
ಹನುಮಂತನ ಕೃಪೆ ಸದಾ ನಮ್ಮ ನಾಡಿನ ಜನತೆಯ ಮೇಲಿರಲಿ.
ಧೈರ್ಯ, ಶಕ್ತಿ, ಭಕ್ತಿ ಹಾಗೂ ಸೇವಾ ಮನೋಭಾವವು ಎಲ್ಲರ ಜೀವನದಲ್ಲೂ ತುಂಬಿರಲಿ.
ಸರ್ವರಿಗೂ ಸುಖ, ಶಾಂತಿ, ಸಮೃದ್ಧಿ ಮತ್ತು ಆರೋಗ್ಯ ದೊರೆಯಲಿ.
🚩 ಜೈ ಶ್ರೀರಾಮ
🚩 ಜೈ ಭಜರಂಗಿ
🚩 ಜೈ ಹನುಮಾನ್ 🙏🏻
ಇವರು ಮಠಗಳನ್ನು ರಾಜಕೀಯಕ್ಕೆ ಬಳಸಲಿಲ್ಲ.
ಅವರು ಹಣ ಮಾಡಿಕೊಳ್ಳಲು ರಾಜಕೀಯಕ್ಕೆ ಬಂದವರಲ್ಲ.
ತೀವ್ರ ವಿರೋಧಗಳ ನಡುವೆಯೂ ಸಾಮಾಜಿಕ ನ್ಯಾಯಕ್ಕಾಗಿ ಹೋರಾಡಿದರು.
ಅತ್ಯಂತ ಕಠಿಣ ಸಂದರ್ಭಗಳಲ್ಲಿಯೂ ಧರ್ಮನಿರಪೇಕ್ಷತೆಯನ್ನು ಉಳಿಸಿಕೊಂಡರು.
ತಮ್ಮ ಜಾತಿಯವರನ್ನೇ ಸಚಿವ ಸಂಪುಟ ಅಥವಾ ಆಡಳಿತ ವ್ಯವಸ್ಥೆಯಲ್ಲಿ ತುಂಬಲಿಲ್ಲ.
ಪ್ರತೀಕಾರ ರಾಜಕೀಯಕ್ಕೆ ಎಂದಿಗೂ ಹೋಗಲಿಲ್ಲ.
ಕೆಟ್ಟ ರಾಜಕೀಯ ಆಟಗಳನ್ನು ಆಡಲಿಲ್ಲ.
ತತ್ವಗಳನ್ನು ಅಧಿಕಾರಕ್ಕಿಂತ ಮೇಲಾಗಿ ನೋಡಿದ ಅಪರೂಪದ ನಾಯಕ.
ಒಬ್ಬ near-perfect ರಾಜಕಾರಣಿ.🙏