'ವಿದ್ಯಾರ್ಥಿ ಧ್ವನಿ' ವಿದ್ಯಾರ್ಥಿ ನಾಯಕತ್ವದ ಹೊಸ ಅಧ್ಯಾಯ
ನಂಜನಗೂಡು ನಗರದ ನಂದಿ ಕನ್ವೆನ್ಷನ್ ಹಾಲ್ನಲ್ಲಿ ಭಾರತೀಯ ರಾಷ್ಟ್ರೀಯ ವಿದ್ಯಾರ್ಥಿಗಳ ಒಕ್ಕೂಟ (NSUI) ನಂಜನಗೂಡು ವತಿಯಿಂದ ಆಯೋಜಿಸಲಾದ "ವಿದ್ಯಾರ್ಥಿ ಧ್ವನಿ" ಕಾರ್ಯಕ್ರಮದಲ್ಲಿ ನೂತನ ಅಧ್ಯಕ್ಷರು ಹಾಗೂ ಪದಾಧಿಕಾರಿಗಳಿಗೆ ಶುಭ ಹಾರೈಸಿ. ಎಸ್.ಎಸ್.ಎಲ್.ಸಿ ಹಾಗೂ ಪಿ.ಯು.ಸಿಯಲ್ಲಿ ಅತ್ಯುತ್ತಮ ಅಂಕಗಳನ್ನು ಪಡೆದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಅಭಿನಂದಿಸಿದ ಕ್ಷಣಗಳು.
#StudentLeadership #NSUI
ನಂಜನಗೂಡು ತಾಲೂಕಿನ ಮಹದೇವನಗರದ ಮುಳ್ಳೇಗುಡ್ಡದಲ್ಲಿರುವ ಶ್ರೀ ಮುರಾರ್ಜಿ ದೇಸಾಯಿ ಮಾದರಿ ವಸತಿ ಶಾಲೆಗೆ ಭೇಟಿ ನೀಡಿ, ಸಂಬಂಧಿತ ಅಧಿಕಾರಿಗಳು, ಮುಖ್ಯಶಿಕ್ಷಕರು ಹಾಗೂ ಸಿಬ್ಬಂದಿಯೊಂದಿಗೆ ಸಭೆ ನಡೆಸಿದೆ.
ಬಳಿಕ ವಿದ್ಯಾರ್ಥಿಗಳೊಂದಿಗೆ ಮಾತುಕತೆ ನಡೆಸಿ, ಶಾಲೆ ಹಾಗೂ ಹಾಸ್ಟೆಲ್ನಲ್ಲಿರುವ ಸಮಸ್ಯೆಗಳು ಮತ್ತು ಅಗತ್ಯತೆಗಳ ಕುರಿತು ಮಾಹಿತಿ ಪಡೆದು, ವಿದ್ಯಾರ್ಥಿಗಳ ಮನವಿಗಳನ್ನು ಶೀಘ್ರವಾಗಿ ಬಗೆಹರಿಸುವಂತೆ ಸಂಬಂಧಿತ ಅಧಿಕಾರಿಗಳಿಗೆ ಸೂಚನೆ ನೀಡಿದ ಕ್ಷಣಗಳು.
#MurarjiDesaiResidentialSchool
ನಂಜನಗೂಡು ತಾಲೂಕಿನ ಮಹದೇವ ನಗರದ ಮುಳ್ಳೇಗುಡ್ಡದಲ್ಲಿರುವ ಶ್ರೀ ಮುರಾರ್ಜಿ ದೇಸಾಯಿ ಮಾದರಿ ವಸತಿ ಶಾಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ ಎಂಬ ದೂರು ಬಂದ ಹಿನ್ನೆಲೆಯಲ್ಲಿ ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ.
ಶಾಲೆಯ ಪರಿಸ್ಥಿತಿಯನ್ನು ವೀಕ್ಷಿಸಿದ ಬಳಿಕ ಸಂಬಂಧಿತ ಅಧಿಕಾರಿಗಳು ಹಾಗೂ ಶಾಲೆಯ ಮುಖ್ಯಶಿಕ್ಷಕರು ಮತ್ತು ಸಿಬ್ಬಂದಿಯೊಂದಿಗೆ ಸಭೆ ನಡೆಸಿ, ಕುಡಿಯುವ ನೀರಿನ ಸಮಸ್ಯೆಯನ್ನು ತಕ್ಷಣವೇ ಪರಿಹರಿಸಿ ವಿದ್ಯಾರ್ಥಿಗಳಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದೆ.
ಬಳಿಕ ತರಗತಿ ಕೊಠಡಿಗಳು ಹಾಗೂ ವಸತಿ ನಿಲಯಕ್ಕೆ ಭೇಟಿ ನೀಡಿ ವಿದ್ಯಾರ್ಥಿಗಳೊಂದಿಗೆ ಆತ್ಮೀಯವಾಗಿ ಮಾತುಕತೆ ನಡೆಸಿ, ಶಾಲೆ ಮತ್ತು ಹಾಸ್ಟೆಲ್ನಲ್ಲಿರುವ ಸಮಸ್ಯೆಗಳು ಹಾಗೂ ಅವರ ಅಗತ್ಯತೆಗಳ ಕುರಿತು ಮಾಹಿತಿ ಪಡೆದೆ. ವಿದ್ಯಾರ್ಥಿಗಳಿಂದ ಬಂದ ಪ್ರತಿಯೊಂದು ಮನವಿಯನ್ನು ಸಂಬಂಧಿತ ಅಧಿಕಾರಿಗಳ ಗಮನಕ್ಕೆ ತಂದು ಶೀಘ್ರದಲ್ಲಿ ಸಮಸ್ಯೆಗಳನ್ನು ಬಗೆಹರಿಸುವಂತೆ ಸೂಚನೆ ನೀಡಿದೆ.
ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣದ ಜೊತೆಗೆ ಸುರಕ್ಷಿತ, ಸ್ವಚ್ಛ ಮತ್ತು ಅಗತ್ಯ ಮೂಲಸೌಲಭ್ಯಗಳಿರುವ ವಾತಾವರಣ ಕಲ್ಪಿಸುವುದು ನಮ್ಮೆಲ್ಲರ ಆದ್ಯತೆಯಾಗಿದೆ.
#MurarjiDesaiResidentialSchool #SchoolVisit #Nanjangudu
ನಂಜನಗೂಡು ನಗರದ ನಂದಿ ಕನ್ವೆನ್ಷನ್ ಹಾಲ್ ಭಾರತೀಯ ರಾಷ್ಟ್ರೀಯ ವಿದ್ಯಾರ್ಥಿಗಳ ಒಕ್ಕೂಟ ನಂಜನಗೂಡು ವತಿಯಿಂದ ನಡೆದ "ವಿದ್ಯಾರ್ಥಿ ದ್ವನಿ" ಎಂಬ ಶೀರ್ಷಿಕೆಯಲ್ಲಿ ನೂತನ ಅಧ್ಯಕ್ಷರು ಮತ್ತು ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಹಾಗೂ ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿ ಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿಯಲ್ಲಿ ಅತ್ಯುತ್ತಮ ಅಂಕಗಳನ್ನು ಪಡೆದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಅಭಿನಂದಿಸಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿ.
ಪೂಜ್ಯ ತಂದೆಯವರಾದ ದಿ. ಆರ್. ಧ್ರುವನಾರಾಯಣ್ ಅವರು NSUI ವಿದ್ಯಾರ್ಥಿ ಸಂಘಟನೆಯ ಮೂಲಕ ತಮ್ಮ ರಾಜಕೀಯ ಪಯಣವನ್ನು ಆರಂಭಿಸಿದರು. ವಿದ್ಯಾರ್ಥಿ ನಾಯಕತ್ವದಿಂದ ಬೆಳೆದು ಸಮರ್ಥ ಸಂಘಟಕರಾಗಿ ಹೊರಹೊಮ್ಮಿದ ಅವರು, ಜನರ ಅಪಾರ ವಿಶ್ವಾಸವನ್ನು ಗಳಿಸಿ ಶಾಸಕರಾಗಿ ಹಾಗೂ ಸಂಸದರಾಗಿ ಸೇವೆ ಸಲ್ಲಿಸಿದರು.
NSUI ರಾಜಕೀಯ ನಾಯಕರನ್ನು ಬೆಳೆಸುವ ಮಹತ್ವದ ವೇದಿಕೆಯಾಗಿದೆ. ವಿದ್ಯಾರ್ಥಿ ಜೀವನದಲ್ಲೇ ನಾಯಕತ್ವದ ಗುಣಗಳನ್ನು ಬೆಳೆಸುವ ಈ ಸಂಘಟನೆ ಸಮಾಜಮುಖಿ ಚಿಂತನೆ ಮತ್ತು ಜನಸೇವೆಯ ಮೌಲ್ಯಗಳನ್ನು ರೂಪಿಸುತ್ತದೆ.
ನೂತನವಾಗಿ ಆಯ್ಕೆಯಾದ ಎಲ್ಲಾ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ವಿದ್ಯಾರ್ಥಿಗಳ ಧ್ವನಿಯಾಗಿ ಕಾರ್ಯನಿರ್ವಹಿಸಿ, ಅವರ ಸಮಸ್ಯೆಗಳಿಗೆ ಸ್ಪಂದಿಸಿ, ಹಕ್ಕುಗಳ ರಕ್ಷಣೆಗಾಗಿ ಪ್ರಾಮಾಣಿಕವಾಗಿ ಕೆಲಸ ಮಾಡುವಂತೆ ತಿಳಿಸಿದೆ.
ಈ ವೇಳೆ ಮಾಜಿ ಶಾಸಕರಾದ ಕಳಲೆ ಕೇಶವಮೂರ್ತಿ ರವರು, NSUI ರಾಜ್ಯಾಧ್ಯಕ್ಷರಾದ Kirthi Ganesh ರವರು, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಸ್. ಸಿ ಬಸವರಾಜ್ ರವರು, ಜಿಲ್ಲಾ ಮಹಿಳಾ ಗ್ರಾಮಾಂತರ ಕಾಂಗ್ರೆಸ್ ಅಧ್ಯಕ್ಷರಾದ ಲತಾ ಸಿದ್ದಶೆಟ್ಟಿ ರವರು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕುರಹಟ್ಟಿ ಮಹೇಶ್ ರವರು, ನಗರ ಕಾಂಗ್ರೆಸ್ ಅಧ್ಯಕ್ಷರಾದ ಸಿ. ಎಂ ಶಂಕರ್ ರವರು, NSUI ರಾಜ್ಯ ಉಪಾಧ್ಯಕ್ಷರಾದ ರಫೀಕ್ ಆಲಿ ರವರು, NSUI ಪ್ರಧಾನ ಕಾರ್ಯದರ್ಶಿ ಲೋಕೇಶ್ ರವರು, ನಂದಕುಮಾರ್ ರವರು, ನಾಗರಾಜಯ್ಯ ರವರು, ಶಶಿರೇಖಾ ರವರು, ನೂತನ NSUI ಅಧ್ಯಕ್ಷರಾದ ಉಸ್ಮಾನ್ ರವರು, ಉಪಾಧ್ಯಕ್ಷರಾದ ರಾಜೇಂದ್ರ ರವರು ಸೇರಿದಂತೆ ಪದಾಧಿಕಾರಿಗಳು ವಿವಿಧ ಘಟಕಗಳ ಅಧ್ಯಕ್ಷರು, ಮುಖಂಡರು, ಕಾರ್ಯಕರ್ತರು ಹಾಜರಿದ್ದರು.
#NSUI #Nanjangudu #StudentLeadership
ನಂಜನಗೂಡು ನಗರದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ತಾಲ್ಲೂಕಿನ ಎಲ್ಲಾ ಗ್ರಾಮ ಪಂಚಾಯಿತಿಗಳ ಪಿಡಿಒಗಳೊಂದಿಗೆ ಸಭೆ ನಡೆಸಿದೆ.
ಗ್ರಾಮೀಣ ಭಾಗಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವುದು, ನೀರಿನ ಪೂರೈಕೆಯನ್ನು ಸಮರ್ಪಕವಾಗಿ ನಿರ್ವಹಿಸುವುದು ಹಾಗೂ ಸಾರ್ವಜನಿಕರ ಕುಂದುಕೊರತೆಗಳಿಗೆ ತ್ವರಿತವಾಗಿ ಸ್ಪಂದಿಸುವ ಕುರಿತು ಅಧಿಕಾರಿಗಳಿಗೆ ಅಗತ್ಯ ಸೂಚನೆಗಳನ್ನು ನೀಡಲಾಯಿತು.
ಆಯುಷ್ಮಾನ್ ಇಲಾಖೆಯ ವತಿಯಿಂದ ಇದೇ ಜುಲೈ 19 ರಂದು ಆಯೋಜಿಸಲಾಗುತ್ತಿರುವ ಯೋಗ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಲು ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳುವಂತೆ ಹಾಗೂ ಸಾರ್ವಜನಿಕರ ಹೆಚ್ಚಿನ ಭಾಗವಹಿಸುವಿಕೆಗೆ ಕ್ರಮವಹಿಸುವಂತೆ ಸೂಚಿಸಲಾಯಿತು.
ಈ ವೇಳೆ ವೈಕುಂಠ ಕೃಷ್ಣ ರವರು, ಆಯುಷ್ ಇಲಾಖೆ DD ಡಾ. ರೇಣುಕಾ ರವರು, EO ಜೆರಾಲ್ಡ್ ರಾಜೇಶ್ ರವರು ಸೇರಿದಂತೆ ತಾಲೂಕಿನ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಹಾಜರಿದ್ದರು.
ನಂಜನಗೂಡು ತಾಲೂಕಿನ ದೊಡ್ಡ ಕವಲಂದೆ ಗ್ರಾಮದಲ್ಲಿ ಟಿಪ್ಪು ಟೈಗರ್ ಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಪಾಲ್ಗೊಂಡು ಉದ್ಘಾಟನೆ ಮಾಡಿ ಬ್ಯಾಟ್ ಬಿಸುವುದರ ಮೂಲಕ ಚಾಲನೆ ನೀಡಿ ಶುಭ ಹಾರೈಸಿದೆ.
ಈ ವೇಳೆ ನಸ್ರುಲ್ಲಾ ಖಾನ್ ರವರು, ಜೊಹರ್ ಅಹ್ಮೆದ್ ರವರು, ನಾಜೀಮ್ ಉಲ್ಲಾ ರವರು, ಸಮಿ ರವರು, ಛೂಟು ರವರು, ಫ಼ೈರೊಜ್ ತನ್ವೀರ್ ರವರು, ಆನಂದ್ ರವರು, ಅಹ್ಮೆದ್ ಶೂಬಾ ಜಬೀರ್ ಸೇರಿದಂತೆ ಹಲವು ಮುಖಂಡರು ಹಾಜರಿದ್ದರು.
ಚಾಮರಾಜನಗರ ಜಿಲ್ಲೆ ಹೆಗ್ಗವಾಡಿ ಗ್ರಾಮದ ಡಾ. ಬಿ. ಆರ್ ಅಂಬೇಡ್ಕರ್ ಭವನದಲ್ಲಿ ವಾಣಿಜ್ಯ ತೆರಿಗೆ ಇಲಾಖೆ ನಿವೃತ್ತ ಉಪ ಆಯುಕ್ತರಾಗಿದ್ದ ದಿ. ಎಂ ಪುಟ್ಟಸ್ವಾಮಿ ಅವರ ಹತ್ತನೇ ವರ್ಷದ ಪುಣ್ಯಸ್ಮರಣೆ ಪ್ರಯುಕ್ತ ಆಯೋಜಿಸಲಾಗಿರುವ ಉಚಿತ ಹೃದಯ ಹಾಗೂ ಸಾಮಾನ್ಯ ಅರೋಗ್ಯ ತಪಾಸಣಾ ಶಿಬಿರವನ್ನು ಉದ್ಘಾಟನೆ ಮಾಡಿ ಶುಭ ಹಾರೈಸಿದೆ.
ಈ ವೇಳೆ ತೇಜಸ್ ರವರು, ಗುಣತಿತ್ತು ರವರು, ಕೆಂಪರಾಜು ರವರು, ಭಾರತ್ ರವರು, ಲಲಿಂಗ ಸ್ವಾಮಿ ರವರು, ಮಲ್ಲಿಕಾರ್ಜುನ ಸ್ವಾಮಿ ರವರು ಸೇರಿದಂತೆ ಗ್ರಾಮಸ್ಥರು ಹಾಜರಿದ್ದರು.
ಚಾಮರಾಜನಗರ ಜಿಲ್ಲೆಯ ಯಡಬೆಟ್ಟದಲ್ಲಿರುವ ನಳಂದ ಬೌದ್ಧ ವಿಶ್ವವಿದ್ಯಾನಿಲಯ ಧ್ಯಾನ ಮತ್ತು ಅಧ್ಯಯನ ಕೇಂದ್ರದಲ್ಲಿ ಆಯೋಜಿಸಿದ್ದ ಜನಪರ ವೇದಿಕೆ ಮೂರನೇ ವರ್ಷದ ವಾರ್ಷಿಕೋತ್ಸವ ಹಾಗೂ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಹಿನ್ನೆಲೆ ಭೇಟಿ ನೀಡಿದೆ.
ಶಿಕ್ಷಣ, ಪ್ರತಿಭೆ ಮತ್ತು ಸಾಮಾಜಿಕ ಜಾಗೃತಿಗೆ ಪ್ರೋತ್ಸಾಹ ನೀಡುತ್ತಿರುವ ಈ ಕಾರ್ಯಕ್ರಮಕ್ಕೆ ಶುಭ ಹಾರೈಸಿದೆ.
ನಮ್ಮ ಹೆಗ್ಗವಾಡಿ ಗ್ರಾಮದಲ್ಲಿ ನಂಜನಗೂಡು ತಾಲ್ಲೂಕಿನ ವಿವಿಧ ಗ್ರಾಮಗಳಿಂದ ಆಗಮಿಸಿದ ಸಾರ್ವಜನಿಕರು, ಮುಖಂಡರು ಹಾಗೂ ಕಾರ್ಯಕರ್ತರಿಂದ ಅಹವಾಲುಗಳು ಮತ್ತು ಬೇಡಿಕೆಗಳನ್ನು ಸ್ವೀಕರಿಸಿ, ಪ್ರತಿಯೊಬ್ಬರ ಸಮಸ್ಯೆಯನ್ನು ಆತ್ಮೀಯವಾಗಿ ಆಲಿಸಿದೆ.
#JanathaDarshana
ಕರ್ನಾಟಕ ಏಕೀಕರಣದ ರೂವಾರಿ, ಕನ್ನಡದ ಕುಲಪುರೋಹಿತರೆಂದೇ ಚಿರಸ್ಮರಣೀಯರಾದ ಆಲೂರು ವೆಂಕಟರಾಯರ ಜನ್ಮದಿನದಂದು ಅವರಿಗೆ ನನ್ನ ಗೌರವಪೂರ್ಣ ನಮನಗಳು. ಅವರ ಆದರ್ಶಗಳು, ಕನ್ನಡಾಭಿಮಾನ ಮತ್ತು ನಾಡಿನ ಏಕತೆಗಾಗಿ ಮಾಡಿದ ಅವಿರತ ಸೇವೆ ಸದಾ ಸ್ಫೂರ್ತಿ.
#ಆಲೂರುವೆಂಕಟರಾಯರು
ಮಧುರ ಕಂಠದ ಮೂಲಕ ಕೋಟ್ಯಾಂತರ ಸಂಗೀತಾಭಿಮಾನಿಗಳ ಮನಸೂರೆಗೊಂಡ ಗಾನ ಕೋಗಿಲೆ ಎಸ್.ಜಾನಕಿ ಅವರ ನಿಧನದ ಸುದ್ದಿಕೇಳಿ ನೋವನ್ನುಂಟು ಮಾಡಿದೆ.ತಮ್ಮ ಅಪರೂಪದ ಗಾಯನದ ಮೂಲಕ ಭಾರತೀಯ ಸಂಗೀತಲೋಕಕ್ಕೆ ನೀಡಿರುವ ಕೊಡುಗೆ ಚಿರಸ್ಥಾಯಿಯಾಗಿರಲಿದೆ.ಅವರ ಅಗಲಿಕೆಯನೋವನ್ನು ಭರಿಸುವ ಶಕ್ತಿಯನ್ನು ಅವರ ಕುಟುಂಬದವರು ಬಂಧುಗಳು ಹಾಗೂ ಅಪಾರ ಅಭಿಮಾನಿಗಳಿಗೆ ಕರುಣಿಸಲಿ.
ವಿಶ್ವ ಜನಸಂಖ್ಯಾ ದಿನ
ಸುಸ್ಥಿರ ಅಭಿವೃದ್ಧಿ, ಆರೋಗ್ಯಕರ ಸಮಾಜ ಮತ್ತು ಉತ್ತಮ ಭವಿಷ್ಯಕ್ಕಾಗಿ ಜನಸಂಖ್ಯೆ ಹೆಚ್ಚಳದಿಂದ ಉಂಟಾಗುವ ಸವಾಲುಗಳ ಕುರಿತು ಜಾಗೃತಿ ಮೂಡಿಸಿ, ಕುಟುಂಬ ಯೋಜನೆಗೆ ಹೆಚ್ಚಿನ ಆದ್ಯತೆ ನೀಡೋಣ.
#WorldPopulationDay
12ನೇ ಶತಮಾನದ ಶರಣ ಚಳುವಳಿಯ ಪ್ರಮುಖ ವಚನಕಾರರು, ಜಗಜ್ಯೋತಿ ಬಸವಣ್ಣನವರ ಪರಮ ಆಪ್ತರು ಹಾಗೂ ಕಲ್ಯಾಣದ ಅನುಭವ ಮಂಟಪದ ಪ್ರಧಾನ ಕಾರ್ಯದರ್ಶಿಯಾಗಿ ಸಮಾಜ ಸೇವೆ ಸಲ್ಲಿಸಿದ ಶಿವಶರಣ ಹಡಪದ ಅಪ್ಪಣ್ಣನವರ ಜನ್ಮದಿನದಂದು ಅವರಿಗೆ ಗೌರವಪೂರ್ವಕ ನಮನಗಳು.
#HadapadaAppanna
ಇಂದು ಬೆಂಗಳೂರಿನ ವಿಕಾಸ ಸೌಧದಲ್ಲಿ ಯಂಗ್ ಕರ್ನಾಟಕ ವಿಧಾನಸಭೆ ಸಚಿವಾಲಯ ಹಾಗೂ ಯಂಗ್ ಇಂಡಿಯನ್ಸ್ ಬೆಂಗಳೂರು ಆಯೋಜಿಸಿದ್ದ 'ಯಂಗ್ ಇಂಡಿಯನ್ಸ್ ಪಾರ್ಲಿಮೆಂಟ್ (YIP)–2026' ಕಾರ್ಯಕ್ರಮದಲ್ಲಿ ಪಾಲ್ಗೊಂಡು, ವಿದ್ಯಾರ್ಥಿ ಮಿತ್ರರೊಂದಿಗೆ ದೇಶದ ಭವಿಷ್ಯ ನಿರ್ಮಾಣದಲ್ಲಿ ಯುವ ನಾಯಕತ್ವದ ಪಾತ್ರ, ಪ್ರಜಾಪ್ರಭುತ್ವದ ಮೌಲ್ಯಗಳು ಹಾಗೂ ಸಾರ್ವಜನಿಕ ಜೀವನದಲ್ಲಿ ಯುವಜನರ ಜವಾಬ್ದಾರಿಗಳು ಕುರಿತು ಸಂವಾದ ನಡೆಸಿದೆ.
ಭಾರತವು ವಿಶ್ವದ ಅತಿ ಹೆಚ್ಚು ಯುವಜನರನ್ನು ಹೊಂದಿರುವ ರಾಷ್ಟ್ರವಾಗಿದೆ. ನಮ್ಮ ದೇಶದ ಅಭಿವೃದ್ಧಿ, ಉತ್ತಮ ಆಡಳಿತ ಮತ್ತು ಸಮೃದ್ಧ ಭವಿಷ್ಯ ನಿರ್ಮಾಣದಲ್ಲಿ ಯುವಜನರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಯುವಕರು ಕೇವಲ ಭವಿಷ್ಯದ ನಾಯಕರು ಮಾತ್ರವಲ್ಲ, ಇಂದಿನ ಸಮಾಜದಲ್ಲಿ ಬದಲಾವಣೆಯನ್ನು ತರಬಲ್ಲ ಶಕ್ತಿಯೂ ಹೌದು. ಪ್ರಜಾಪ್ರಭುತ್ವದ ಮೌಲ್ಯಗಳನ್ನು ಅರಿತು, ಸಂವಿಧಾನದ ಆಶಯಗಳನ್ನು ಅಳವಡಿಸಿಕೊಂಡು, ಸಮಾಜಮುಖಿ ಚಿಂತನೆಯೊಂದಿಗೆ ಸಾರ್ವಜನಿಕ ಜೀವನದಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವ ಯುವ ನಾಯಕತ್ವ ಇಂದು ಅಗತ್ಯವಾಗಿದೆ.
ಈ ವೇಳೆ MLC ಕೆ. ಎಸ್ ನವೀನ್ ರವರು, ಅಧ್ಯಕ್ಷರಾದ ಹರೀಶ್ ರವರು ವಿದ್ಯಾರ್ಥಿಗಳು ಸೇರಿದಂತೆ ಹಲವರು ಹಾಜರಿದ್ದರು.
#YoungIndiansParliament #YIP2026 #YouthLeadership
ಧ್ರುವತಾರೆಯ ನೆನಪಿನಲ್ಲಿ ಸಮಾಜಮುಖಿ ಸಂಕಲ್ಪ
ಮಾಜಿ ಸಂಸದರು, ಪೂಜ್ಯ ತಂದೆಯವರಾದ ದಿ. ಆರ್. ಧ್ರುವನಾರಾಯಣ್ ಅವರ 65ನೇ ಜನ್ಮದಿನದ (ಜುಲೈ 31) ಅಂಗವಾಗಿ ನಂಜನಗೂಡಿನ ಪ್ರವಾಸಿ ಮಂದಿರದಲ್ಲಿ ಮುಖಂಡರು, ಕಾರ್ಯಕರ್ತರು ಹಾಗೂ ಅಭಿಮಾನಿಗಳೊಂದಿಗೆ ಪೂರ್ವಭಾವಿ ಸಭೆ ನಡೆಸಲಾಯಿತು.
ತಂದೆಯವರ ಜನ್ಮದಿನವನ್ನು ಕೇವಲ ಆಚರಣೆಯಾಗಿಸದೆ, ಸಾರ್ವಜನಿಕರಿಗೆ ಅನುಕೂಲವಾಗುವ ಅರ್ಥಪೂರ್ಣ ಸಮಾಜಮುಖಿ ಕಾರ್ಯಕ್ರಮಗಳ ಮೂಲಕ ಸಾರ್ಥಕಗೊಳಿಸಲು ಸಭೆಯಲ್ಲಿ ಚರ್ಚಿಸಿ, ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಯಿತು. ಅವರ ಜನಪರ ಆದರ್ಶಗಳೇ ನಮಗೆ ಸದಾ ದಾರಿದೀಪ.
#RDhruvanarayana65thBirthday #JanaNayaka
ನಂಜನಗೂಡು ನಗರದ ಪ್ರವಾಸಿ ಮಂದಿರದಲ್ಲಿ ಶ್ರೀ ಶ್ರೀಕಂಠೇಶ್ವರ ಸ್ವಾಮಿ ದೇವಾಲಯದ ವ್ಯವಸ್ಥಾಪನಾ ಸಮಿತಿಯ ಸಭೆಯನ್ನು ನಡೆಸಿ, ದೇವಾಲಯದ ಅಭಿವೃದ್ಧಿ, ಭಕ್ತರಿಗೆ ಉತ್ತಮ ಸೌಲಭ್ಯಗಳ ಕಲ್ಪನೆ ಹಾಗೂ ಆಡಳಿತಾತ್ಮಕ ವಿಚಾರಗಳ ಕುರಿತು ಸಮಗ್ರವಾಗಿ ಚರ್ಚಿಸಿ ಅಗತ್ಯ ಸಲಹೆ-ಸೂಚನೆಗಳನ್ನು ನೀಡಿದೆ.
ಈ ಸಂದರ್ಭದಲ್ಲಿ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿಗಳಾದ ಕೃಷ್ಣ ರವರು, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಬಸವೇಗೌಡ ರವರು, ಧರ್ಮದರ್ಶಿಗಳಾದ ಶ್ರೀಧರ್ ರವರು, ಗೋಪಾಲ್ ರವರು, ಮಹದೇವಮ್ಮ ರವರು, ಮಹೇಶ್ ರವರು, ನಂಜಮಣಿ ರವರು ಹಾಗೂ ಮೂರ್ತಿ ರವರು ಉಪಸ್ಥಿತರಿದ್ದರು.
#SrikanteshwaraTemple #Nanjangudu
ಸರಗೂರು ತಾಲೂಕಿನ ನುಗು ಡ್ಯಾಮ್ಗೆ ಭೇಟಿ ನೀಡಿ ಪ್ರಕೃತಿಯ ಅದ್ಭುತ ಸೌಂದರ್ಯವನ್ನು ಸವಿದ ಕ್ಷಣ.
ನಿಶ್ಶಬ್ದ ವಾತಾವರಣ ಮತ್ತು ಪ್ರಕೃತಿಯ ಮಡಿಲಿನಲ್ಲಿ ಕಳೆದ ಸಮಯ ಮನಸ್ಸಿಗೆ ನೆಮ್ಮದಿಯನ್ನು ನೀಡಿತು.
#NuguDam#Saraguru#Nature
ನುಗು ಡ್ಯಾಮ್ ಪ್ರವಾಸಿ ಮಂದಿರದಲ್ಲಿ ಇಂದು ನೀರಾವರಿ ಇಲಾಖೆಯ ನುಗು ಡ್ಯಾಮ್ ವ್ಯಾಪ್ತಿಯ ನುಗು ಬಲದಂಡೆ ನಾಲೆ ಮತ್ತು ನುಗು ಎಡದಂಡೆ ನಾಲಾ ಅಭಿವೃದ್ಧಿ ಕಾಮಗಾರಿಗಳ ಗುದ್ದಲಿ ಪೂಜೆ ಹಾಗೂ ನುಗು ಡ್ಯಾಮ್ ಪ್ರವಾಸಿ ಮಂದಿರ ಆಧುನಿಕರಣ ಕಾಮಗಾರಿಗೆ ₹ 1 ಕೋಟಿ ರೂ ವೆಚ್ಚದಲ್ಲಿ ಗುದ್ದಲಿ ಪೂಜೆಯನ್ನು ನೆರವೇರಿಸಿದೆ.
ಈ ವೇಳೆ ಮಾಜಿ ಶಾಸಕರಾದ ಕಳಲೆ ಕೇಶವಮೂರ್ತಿ ರವರು, ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಕೆ. ಮಾರುತಿ ರವರು, ಹುಲ್ಲಹಳ್ಳಿ ಬ್ಲಾಕ್ ಅಧ್ಯಕ್ಷರಾದ ಶ್ರೀಕಂಠ ನಾಯಕ ರವರು, ಶಂಭು ಲಿಂಗ ನಾಯಕ ರವರು, ಬಸವರಾಜ್ ರವರು, ಜೈ ರಾಮ್ ರವರು, ಅಭಿನಂದನ್ ಪಟೇಲ್ ರವರು, ಚಂದನ್ ರವರು, ಶಿವರಾಜ್ ರವರು, ಪೂಜಾ ಶ್ರೀ ರವರು, ಆದರ್ಶ್ ರವರು, ರಫೀಕ್ ಆಲಿ ರವರು, ಮಹದೇವು ರವರು, ಆನಂದ್ ರವರು, ಹರೀಶ್ ರವರು, ಪುಟ್ಟು ರವರು ಸೇರಿದಂತೆ ಹಲವು ಮುಖಂಡರು, ಗ್ರಾಮಸ್ಥರು ಕಾರ್ಯಕರ್ತರು ಹಾಜರಿದ್ದರು.
#DevelopmentWork
ನಂಜನಗೂಡು ತಾಲೂಕಿನ ಹುಲ್ಲಹಳ್ಳಿ ಗ್ರಾಮದಲ್ಲಿ ನೀರಾವರಿ ಇಲಾಖೆಯ ಕಬಿನಿ ಬಲದಂಡೆ ಮತ್ತು ಹುಲ್ಲಹಳ್ಳಿ ನಾಲಾ ಅಭಿವೃದ್ಧಿ ಕಾಮಗಾರಿಗಳ ಗುದ್ದಲಿ ಪೂಜೆ ಹಾಗೂ ಹುಲ್ಲಹಳ್ಳಿ ಪ್ರವಾಸಿ ಮಂದಿರ ಆಧುನಿಕರಣ ಕಾಮಗಾರಿಗೆ ₹ 1 ಕೋಟಿ ರೂ ವೆಚ್ಚದಲ್ಲಿ ಗುದ್ದಲಿ ಪೂಜೆಯನ್ನು ನೆರವೇರಿಸಿದೆ.
ಈ ವೇಳೆ ಮಾಜಿ ಶಾಸಕರಾದ ಕಳಲೆ ಕೇಶವಮೂರ್ತಿ ರವರು, ಹುಲ್ಲಹಳ್ಳಿ ಬ್ಲಾಕ್ ಅಧ್ಯಕ್ಷರಾದ ಶ್ರೀಕಂಠ ನಾಯಕ ರವರು, ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಕೆ. ಮಾರುತಿ ರವರು, ಮಾದಪ್ಪ ರವರು, ಕೆಪಿಸಿಸಿ ಸದಸ್ಯರಾದ ಬಸವರಾಜ್ ರವರು, ಅಭಿನಂದನ್ ಪಟೇಲ್ ರವರು, ಲೋಕೇಶ್ ರವರು, ಮಹದೇವು ರವರು, ನಿರಂಜನ್ ಮೂರ್ತಿ ರವರು, ಚಂದನ್ ರವರು, ಶಿವನಂಜ ನಾಯಕ ರವರು, ಆದರ್ಶ್ ರವರು, ಸಕಲೇಶ ರವರು, ಹಾಲ್ಲರೆ ಮಹದೇವು ರವರು, ಮಹಾದೇವ ಸ್ವಾಮಿ ರವರು, ಮಲ್ಲೇಶ್ ರವರು, ನಾಝಿಮ್ ಅಹಮದ್ ರವರು ಸೇರಿದಂತೆ ಹಲವು ಮುಖಂಡರು, ಗ್ರಾಮಸ್ಥರು ಹಾಜರಿದ್ದರು.
#Nanjangudu #DevelopmentWork