PSI 545 ಫಲಿತಾಂಶ ಪ್ರಕಟಿಸಲು ನಮ್ಮ ಬೆನ್ನೆಲುಬಾಗಿ ನಿಂತು, ಫ್ರೀಡಂ ಪಾರ್ಕ್ ನಲ್ಲಿ AKSSA ಸಂಘಟನೆಯ ವತಿಯಿಂದ ಪ್ರತಿಭಟನೆ ನಡೆಸಿ, ಸಂಪೂರ್ಣ ಬೆಂಬಲ ನೀಡಿದ್ದಕ್ಕಾಗಿ AKSSA ಸಂಘಟನೆಯ ಅಧ್ಯಕ್ಷರಾದ @kanthakumarr ರವರಿಗೆ ಹೃತ್ಪೂರ್ವಕ ಧ್ಯವಾದಗಳು.
ಅಂತೂ ಇಂತೂ ಬಹುದಿನದಿಂದ ಕಾಯ್ತಿದ್ದ PSI 545 ಫಲಿತಾಂಶ ಇಂದು ಬಿಡುಗಡೆಗೊಂಡಿದ್ದು, ಮಾನ್ಯ ಗೃಹ ಮಂತ್ರಿಗಳಾದ @DrParameshwara ರವರಿಗೆ ಇದಕ್ಕಾಗಿ ಧನ್ಯವಾದಗಳನ್ನು ತಿಳಿಸುತ್ತೇವೆ. ಹಾಗೆಯೇ ಮುಂದಿರುವ ಪ್ರಕ್ರಿಯೆಗಳನ್ನು ಎಷ್ಟು ಬೇಗ ಆಗುತ್ತೋ ಅಷ್ಟು ವೇಗದಿಂದ ಪೂರ್ಣಗೊಳಿಸುವ ಮೂಲಕ ನೇಮಕಾತಿಗೆ ಮುಕ್ತಿ ನೀಡುವಂತೆ ವಿನಂತಿಸಿಕೊಳ್ಳುತ್ತೇವೆ
@SantoshSLadINC
4 ವರ್ಷದಿಂದ ಕಾಯುತ್ತಲೇ ಇದ್ದೇವೆ,
ಮಾನ್ಯರೇ, #PSI545 ನೇಮಕಾತಿಯ ಪ್ರಕ್ರಿಯೆ ಶುರುವಾಗುವುದು ಯಾವಾಗ ? ರಕ್ತದಿಂದ ಪತ್ರಗಳನ್ನು ಸಹ ಬರೆದು ಪ್ರತಿಭಟನೆ ನಡೆಸಿದ್ದಾಯ್ತು,
ನ್ಯಾಯಯುತವಾಗಿ ಪರಿಕ್ಷೆ ಬರೆದರೂ ಇನ್ನು ಸಿಗದ ಮುಕ್ತಿ. ದಯವಿಟ್ಟು ತ್ವರಿತವಾಗಿ ಫಲಿತಾಂಶ ಬಿಡುಗಡೆ ಮಾಡಿ ಅಭ್ಯರ್ಥಿಗಳ ಹಿತಾಸಕ್ತಿ ಕಾಪಾಡಿ
PSI 545 ಫಲಿತಾಂಶ ಪ್ರಕಟಣೆ ವಿಳಂಬ ಧೋರಣೆಗೆ ಅಭ್ಯರ್ಥಿಗಳಿಂದ ರಕ್ತದಿಂದ ಪತ್ರ, 5000 ಲಿಖಿತ ಪತ್ರಗಳ ಸುರಿಮಳೆ ಮೂಲಕ ಫ್ರೀಡಂ ಪಾರ್ಕ್ ನಲ್ಲಿ ಬೃಹತ್ ಪ್ರತಿಭಟನೆ ಮಾಡಿದರೂ ಲೆಕ್ಕಿಸದ ಸರ್ಕಾರ ಇನ್ನೂ ಕೂಡ ಫಲಿತಾಂಶ ಪ್ರಕಟಿಸಿಲ್ಲ ಇನ್ನು 3 ದಿನಗಳಲ್ಲಿ ಯಾವುದೇ ಪ್ರಕ್ರಿಯೆ ಶುರುವಾಗದಿದ್ದರೆ ನಾವು ಇನ್ನೊಂದು ಬೃಹತ್ ಹೋರಾಟ ಕೈಗೊಳ್ಳುತ್ತೇವೆ.
PSI 545 ಫಲಿತಾಂಶಕ್ಕಾಗಿ ರಕ್ತದಿಂದ ನೂರಾರು ಪತ್ರಗಳನ್ನು ಬರೆದಿದ್ದೇವೆ
ಇನ್ನೆರಡು ಮೂರು ದಿನಗಳಲ್ಲಿ PSI 545 ಫಲಿತಾಂಶ ಬಿಡಲಿಲ್ಲ ಎಂದರೆ ಮುಂದಿನ ವಾರ ಸಾವಿರಾರು ಪತ್ರಗಳು ರಕ್ತದಿಂದ ಬರೆದು ಪ್ರತಿಭಟನೆ ಮಾಡಲಿದ್ದೇವೆ.
ಈ ಕೂಡಲೇ PSI 545 ಫಲಿತಾಂಶ ಬಿಟ್ಟು ಆದೇಶ ಪ್ರತಿ ನೀಡಿ ಎಂದು ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇವೆ. @DrParameshwara@siddaramaiah@DgpKarnataka
ಮಾನ್ಯರೇ, #PSI545 ನೇಮಕಾತಿಯೂ ಅಧಿಸೂಚನೆಗೊಂಡು 4 ವರ್ಷ ಕಳೆದರೂ, ಫಲಿತಾಂಶಕ್ಕಾಗಿ ರಕ್ತದಿಂದ ಪತ್ರ ಬರೆಯುವ ಮೂಲಕ ಪ್ರತಿಭಟನೆ ಮಾಡಿದರೂ ಇನ್ನೂ ಫಲಿತಾಂಶ ಬಿಡುಗಡೆಯಾಗಿಲ್ಲ. ಏನೇ ಸಮಸ್ಯೆಗಳಿದ್ದರೂ ಶೀಘ್ರ ಪರಿಹರಿಸಿ ಆದಷ್ಟು ಬೇಗನೆ ನೇಮಕಾತಿ ಆದೇಶ ಪ್ರತಿ ನೀಡಲು ಪ್ರಯತ್ನಿಸಿ. ಅಭ್ಯರ್ಥಿಗಳ ಹಿತಾಸಕ್ತಿಗಳನ್ನು ಕಾಪಾಡಿ.
ಮಾನ್ಯ @siddaramaiah ಮತ್ತು @DrParameshwara ರವರೆ ಇನ್ನೇನು 2 ತಿಂಗಳಲ್ಲಿ 2025 ಬರತ್ತೆ, ಅಂತೂ ಇಂತೂ #psi545 ನೇಮಕಾತಿಯನ್ನು ಪಂಚವಾರ್ಷಿಕ ಯೋಜನೆಯಡಿ ಸೇರಿಸಿದ ಕೀರ್ತಿ ನಿಮಗೆ ಸಲ್ಲುವುದು. ಈ ನಿಮ್ಮ ಧೋರಣೆ 2025 ಕ್ಕೆ ನಿಲ್ಲುವುದೋ ಅಥವಾ ಇನ್ನೂ ಮುಂದೂಡುವ ಯೋಚನೆಯೇನಾದರೂ ಇದೆಯೇ?
#announcePSI545resultssoon
ಮಾನ್ಯ @siddaramaiah ಮತ್ತು @DrParameshwara ರವರೆ, ನಿಮಗೆ ಕಗ್ಗಂಟಾದ PSI 545 ನೇಮಕಾತಿಯು, ತಾವು 10 ದಿನದ ಹಿಂದೆ ಸಭೆಯಲ್ಲಿ ಮಾಡಿದ ನಿರ್ಧಾರದಿಂದ ಪರಿಹರಿಸಲಾಗಿದ್ದು, ಫಲಿತಾಂಶ ಪ್ರಕಟಣೆಗೆ ಯಾಕಿಷ್ಟು ತಡ ಮಾಡುತ್ತಿದ್ದೀರಿ ? ಆದೇಶ ನೀಡಲು ನಿಮ್ಮನ್ನ ತಡೆಹಿಡಿಯುತ್ತಿರುವ ಶಕ್ತಿಯಾದರೂ ಯಾವುದು ?
#announcePSI545resultssoon
@PriyankKharge ಮೊನ್ನೆ ನಡೆದ ಪ್ರತಿಭಟನೆಯಲ್ಲಿ ಕೇವಲ ಕೆಲವು ಜನರ ರಕ್ತದಿಂದ ಮಾತ್ರ ಪತ್ರಗಳನ್ನು ಬರೆದಿದ್ದೇವೆ. ಇನ್ನು ನೀವು ವಿಳಂಬ ನೀತಿ ಅನುಸರಿಸಿದರೆ ಪ್ರತಿ ಕುಟುಂಬದ ರಕ್ತದ ಹನಿಗಳಿಂದ ಪತ್ರಗಳನ್ನು ಬರೆಯುತ್ತೇವೆ.
ಆದ್ದರಿಂದ ನಮ್ಮ ಹುದ್ದೆಯಾದ PSI 545 ನ ಫಲಿತಾಂಶ ಪ್ರಕಟಿಸಿ.
PSI 545 ನೇಮಕಾತಿ ಶುರುವಿನಿಂದಲೂ ಹಲವಾರು ಅಡೆತಡೆಗಳನ್ನು ಎದುರಿಸಿದ್ದು, ಎಲ್ಲವುಗಳಿಗೆ ನಾವು ಅಭ್ಯರ್ಥಿಗಳು ಸಹಿಸುತ್ತ ಬಂದಿದ್ದೇವೆ. ಪ್ರಸ್ತುತ ನೇಮಕಾತಿಗೆ ಯಾವುದೇ ಅಡೆತಡೆ ಇಲ್ಲದಿರುವುದರಿಂದ ಅತೀ ಶೀಘ್ರವಾಗಿ ಫಲಿತಾಂಶ ಪ್ರಕಟಿಸಬೇಕು, ಇಲ್ಲವಾದಲ್ಲಿ ಮತ್ತೊಮ್ಮೆ ಪ್ರತಿ ಕುಟುಂಬದಿಂದ ರಕ್ತಸಹಿತ ಪತ್ರ ಬರೆದು ಪ್ರತಿಭಟನೆ ನಡೆಸುತ್ತೇವೆ.
PSI 545 ನೇಮಕಾತಿಯ ವಿಳಂಬ ನೀತಿಯ ಸಂಬಂಧಿತವಾಗಿ ಮೊನ್ನೆ ನಡೆದ ಪ್ರತಿಭಟನೆಯಿಂದ ಎಲ್ಲರ ಗಮನ ಸೆಳೆದಿದ್ದು, ಫಲಿತಾಂಶ ತಡೆ ಹಿಡಿದಿರುವುದಕ್ಕೆ ಸಾರ್ವಜನಿಕರು, ಪತ್ರಿಕೆಗಳು ಸಹ ವಿಷಾದ ವ್ಯಕ್ತಪಡಿಸುತ್ತಿದ್ದು, ಆದಷ್ಟು ಬೇಗನೆ ಫಲಿತಾಂಶ ಪ್ರಕಟಿಸಿ ಆದೇಶ ನೀಡಬೇಕು ಎಂದು ವಿನಂತಿಸಿಕೊಳ್ಳುತ್ತೇವೆ.
#announcePSI545resultssoon
ನಿನ್ನೆ ನಡೆದ ಪಿಎಸ್ಐ 545 ರಿಸಲ್ಟ್ ವಿಳಂಬ ಧೋರಣೆ ವಿರುದ್ಧ ಪ್ರತಿಭಟನೆಯಲ್ಲಿ ಪಾಲ್ಗೊಂಡು ಅಭ್ಯರ್ಥಿಗಳಿಗೆ ಮಾನ್ಯ @BYVijayendra ರವರು ಶಕ್ತಿ ತುಂಬಿದರು. ಮಾನ್ಯ @siddaramaiah
ಮತ್ತು @DrParameshwara ರವರೆ, ಇನ್ನಾದರೂ ಎಚ್ಚೆತ್ತು ಫಲಿತಾಂಶ ಬಿಡುಗಡೆ ಮಾಡಿ. https://t.co/eFZbG8VH8M via @publictvnews
ಮಾನ್ಯ @siddaramaiah ಮತ್ತು @DrParameshwara ರವರೆ, PSI ನೇಮಕಾತಿ ಪ್ರಕ್ರಿಯೆಯು,
1. ಅರ್ಜಿ ಸಲ್ಲಿಕೆ
2. ದೈಹಿಕ ಸಾಮರ್ಥ್ಯ
3. ಲಿಖಿತ ಪರೀಕ್ಷೆ
4. ವೈದ್ಯಕೀಯ
5. ಮಾನಸಿಕ ಹೋರಾಟ
6. ಮನವಿ ಪತ್ರಗಳ ಸಲ್ಲಿಕೆ
7. ಕಾನೂನು ಹೋರಾಟ
8. ಪ್ರತಿಭಟನೆ( ರಕ್ತಸಹಿತ ಪತ್ರ)
ಇನ್ನೂ ಏನಾದರೂ ಇದ್ದರೆ ಹೇಳಿ, ಮಾಡುತ್ತೇವೆ ಆದರೆ ಫಲಿತಾಂಶ ನೀಡಿ.
ಮಾನ್ಯ ಗೃಹ ಸಚಿವರೇ @DrParameshwara ಪಿಎಸ್ಐ 545 ನೇಮಕಾತಿ ಆರಂಭಗೊಂಡು 4 ವರ್ಷಗಳು ಕಳೆದಿವೆ, ಪರೀಕ್ಷೆ ನಡೆದು 9 ತಿಂಗಳಾಗಿವೆ. ಆದಷ್ಟು ಬೇಗ ಪಿಎಸ್ಐ 545 ಆಯ್ಕೆ ಪಟ್ಟಿ ಪ್ರಕಟಿಸಿ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುವ ಅಭಿಲಾಷೆ ಹೊತ್ತು ಕಾಯುತ್ತಿರುವ ಪರೀಕ್ಷಾರ್ಥಿಗಳ ಗೊಂದಲಗಳಿಗೆ ತೆರೆ ಎಳೆಯಿರಿ.