@KEA_karnataka 2023 ರವಗಿನ ಎಲ್ಲ notification ನಲ್ಲಿ ವಾಣಿಜ್ಯ ಶಾಸ್ತ್ರ ಪ್ರಶ್ನೆ ಪತ್ರಿಕೆ ಕನ್ನಡ ಮತ್ತು ಇಂಗ್ಲಿಷ್ ಎರಡೂ ಮಾದ್ಯಮ ದಲ್ಲಿ ಇರುತ್ತಿತ್ತು ಆದರೆ 2024 ರ notification ನಿಂದ ಇಂಗ್ಲಿಷ್ ನಲ್ಲಿ ಮಾತ್ರ ಪ್ರಶ್ನೆ ಪತ್ರಿಕೆ ಬರುವ ಕಾರಣ ಏನು? ಕನ್ನಡ ಮಾಧ್ಯಮ ಅಭ್ಯರ್ಥಿಗಳಿಗೆ ತುಂಬ ನಷ್ಟ ವಾಗುತ್ತಿದೆ.
ಕರ್ನಾಟಕ ಆಹಾರ ಮತ್ತು ನಾಗರೀಕ ಸರಬರಾಜು ನಿಗಮದ 386 ಹುದ್ದೆಗಳ ನೇಮಕಾತಿಯಲ್ಲಿ ಆದಂತಹ ವಿಳಂಬದ ಕುರಿತು ದೇವದುರ್ಗ ವಿಧಾನಸಭೆ ಕ್ಷೇತ್ರದ ಮಾನ್ಯ ಶಾಸಕಿ ಶ್ರೀಮತಿ ಕರೆಮ್ಮ ಅವರು ವಿಧಾನಸಭೆಯಲ್ಲಿ ಪ್ರಶ್ನಿಸಿದರು.
ನೇಮಕಾತಿಯನ್ನು ಆರ್ಥಿಕ ಇಲಾಖೆಯ ಸಹಮತಿಯೊಂದಿಗೆ ಬೇಗ ಪೂರ್ಣಗೊಳಿಸಬೇಕೆಂದು ಸಭಾಪತಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.
@KhMuniyappa@KHMuniyappaklr@siddaramaiah@kharge@RahulGandhi
"ಖಾಲಿ ಉಳಿದಿರುವ ಹುದ್ದೆಗಳ ಭರ್ತಿ ಮಾಡುವಲ್ಲಿ
ಸಂಪೂರ್ಣ ವಿಫಲವಾಗಿದೆ ಕಾಂಗ್ರೆಸ್ ಸರ್ಕಾರ"
ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿ ಉಳಿಸಿಕೊಂಡಿರುವ ಸಾವಿರಾರು ಹುದ್ದೆಗಳ ಭರ್ತಿಗೆ ಆಗ್ರಹಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಭಾಗವಹಿಸಿ ಉದ್ಯೋಗಾಕಾಂಕ್ಷಿಗಳ ಅಹವಾಲು ಸ್ವೀಕರಿಸಲಾಯಿತು. ರಾಜ್ಯ ಸರ್ಕಾರ ಯಾವೊಂದು ಇಲಾಖೆಯಲ್ಲೂ ಖಾಲಿ ಉಳಿದಿರುವ ಹುದ್ದೆಗಳನ್ನು ಭರ್ತಿ ಮಾಡದ ಪರಿಣಾಮ ವಯೋಮಿತಿಯ ಆತಂಕದಲ್ಲಿರುವ ಲಕ್ಷಾಂತರ ಉದ್ಯೋಗಾಕಾಂಕ್ಷಿಗಳು ಆತಂಕದಲ್ಲಿ ದಿನ ದೂಡುತ್ತಿದ್ದು ಈಗಲಾದರೂ ದಪ್ಪ ಚರ್ಮದ ಸರ್ಕಾರ ವಿವಿಧ ಇಲಾಖೆಗಳಲ್ಲಿನ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಕ್ರಮ ವಹಿಸುವಂತೆ ಆಗ್ರಹಿಸಲಾಯಿತು.
ಈ ಸಂದರ್ಭದಲ್ಲಿ ಶಾಸಕರಾದ ಶ್ರೀ ಶರಣು ಸಲಗರ್, ಜಿಲ್ಲಾಧ್ಯಕ್ಷರಾದ ಶ್ರೀ ಸಪ್ತಗಿರಿ ಗೌಡ, ಸೇರಿದಂತೆ ಪಕ್ಷದ ಪ್ರಮುಖರು, ಹಾಗೂ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ಸಹಸ್ರಾರು ಉದ್ಯೋಗಾಕಾಂಕ್ಷಿಗಳು ಉಪಸ್ಥಿತರಿದ್ದರು.
#CongressFailsKarnataka
@siddaramaiah ಹಾಗೂ @KHMuniyappaklr ಅವರಲ್ಲಿ ಮನವಿ 🙏
*KEA* ಯು *670* ಹುದ್ದೆಗಳಿಗೆ ಪರೀಕ್ಷೆಯನ್ನು ನಡೆಸಿತ್ತು. ಅದರಲ್ಲಿ *58%* ಹುದ್ದೆಗಳು *ಆಹಾರ ಇಲಾಖೆ(KFCSC)* ಗೆ ಮಾತ್ರ ಸೇರಿದ್ದವು. ಉಳಿದ ಹುದ್ದೆಗಳು *1) Labour department, 2) KIONICS, 3) MSIL* ಗೆ ಸಂಬಂಧಿಸಿದ್ದವು.
ಉಳಿದ *3 department* ಗಳು ದಾಖಲಾತಿ ಪರಿಶೀಲನೆ ಪ್ರಕ್ರಿಯೆ ಮುಗಿಸಿವೆ, ಆದರೆ *HK & NHK issue* ಆಗಿ, ಅಂತಿಮ ಆಯ್ಕೆ ಪಟ್ಟಿಯನ್ನು ಬಿಡುವುದರಲ್ಲಿ ತಡವಾಗುತ್ತಿದೆ. ಕೆಲವೇ ದಿನಗಳಲ್ಲಿ ಬಿಡುವ ಸಂಭವನೀಯತೆ ಇದೆ.
ಆದರೆ, *KFCSC* ಯ *386* ಹುದ್ದೆಗಳಿಗೆ *ಹಣಕಾಸು ಇಲಾಖೆಯಿಂದ ತಡೆ* ನೀಡಿದ್ದು, ನೇಮಕಾತಿ ಪ್ರಕ್ರಿಯೆಯನ್ನು ಅಲ್ಲಿಗೆ *ನಿಲ್ಲಿಸಲಾಗಿದೆ* .
ದಾಖಲಾತಿ ಪರಿಶೀಲನೆಯು ನಡೆದಿಲ್ಲ.
ತಕ್ಷಣವೇ ನೇಮಕಾತಿ ಪ್ರಕ್ರಿಯೆಗೆ *ಅನುಮತಿ ನೀಡಿ,* ಆದಷ್ಟು ಬೇಗ ಪೂರ್ಣಗೊಳಿಸುವಂತೆ *ಮನವಿ* ಸಲ್ಲಿಸಬೇಕಾಗಿ ವಿನಂತಿ..
Meet the Indian media anchors -
Manipur - SILENT
NEET Scam = SILENT
Train Accidents = SILENT
Bridge Collapses = SILENT
Karnataka Stampede - LETS OPEN OUR MOUTH AND BLAME VIRAT KOHLI AND TRY TO GET SOME REACH, TRP ON HIS NAME AS NO ONE IS WATCHING OUR CHANNELS
Dear #Tamil people, Gentle Warning ⚠️: Please stop posting provocative content targeting Kannada & Kannada activists.There are so many Tamilians earning and living here📷👍
This isn’t a Tamil vs #Kannada issue. It’s about a specific irresponsible statement made by Kamal Haasan.
#Thuglifetrailer #ThuglifeAudioLaunch #ThugLifeInRamCinemas #BanThugLifeInKarnataka #BanKamalHassan
@GabbbarSingh@AshwiniVaishnaw@HMOIndia What an idiot you are, Abhishek Asthana
You’re the one actually promoting Pakistan’s propaganda. They misused my video by cutting out of context clips. Instead of telling people the truth, you’re just re-sharing Pakistani lies!
Only cuz of ur hate for me, you became Anti-India.
She is Falaq Naaz , an Indian Actress
She has got the spine to speak for the Nation 🇮🇳 unlike many from all faiths who are silent!
This is how a true Indian and a True Muslim is!
The country comes first!
Jai Hind 🇮🇳
#IndiaPakistanWar#OperationSindoor#ProudIndian
ಕೆಪಿಎಸ್ಸಿ ವಿವಾದಗಳ ಕುರಿತಾದ ಮುಖ್ಯಮಂತ್ರಿಗಳ ನಿನ್ನೆಯ ಹೇಳಿಕೆ "ಹಾವೂ ಸಾಯಲಿಲ್ಲ, ಕೋಲೂ ಮುರಿಯಲಿಲ್ಲ" ಎಂಬಂತೆ ಕೇಳಿಸುತ್ತದೆ. ಮುಖ್ಯಮಂತ್ರಿಗಳು ತಮ್ಮ ಮೇಲಿನ ಭಾರವನ್ನು ನ್ಯಾಯಾಲಯಕ್ಕೆ ಹೊರಿಸುವ ಮೂಲಕ ತಮ್ಮ ಜವಾಬ್ದಾರಿಯಿಂದ ನುಣುಚಿಕೊಂಡಿದ್ದಾರೆ. ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಆಗಿರುವ ಅನ್ಯಾಯ ಅವರಿಗೆ ಚೆನ್ನಾಗಿ ಗೊತ್ತಿದೆ. ಆದರೆ ಅವರು ಮರು ಅಧಿಸೂಚನೆ ಹೊರಡಿಸಲು ಹಿಂಜರಿಯುತ್ತಿದ್ದಾರೆ. ಇದಕ್ಕೆ ಕಾರಣ ಅವರ ಸುತ್ತ ಇರುವ ಅಧಿಕಾರಶಾಹಿಯ ಲಾಬಿ.
ಕರ್ನಾಟಕ ಲೋಕಸೇವಾ ಆಯೋಗದ ಸುಧಾರಣೆಗೆ ಮುಖ್ಯಮಂತ್ರಿಗಳು ನಿನ್ನೆ ಹಲವು ಪ್ರಸ್ತಾಪಗಳನ್ನು ಮುಂದಿಟ್ಟಿದ್ದಾರೆ. ಅವೆಲ್ಲವೂ ಸ್ವಾಗತಾರ್ಹ. ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ಮುಂದೆಂದೂ ತೊಂದರೆಯಾಗದಂತೆ ಪ್ರಶ್ನೆ ಪತ್ರಿಕೆಗಳನ್ನು ಕನ್ನಡದಲ್ಲಿಯೇ ತಯಾರಿಸಿ, ನಂತರ ಇಂಗ್ಲಿಷ್ ಗೆ ಅನುವಾದಿಸುವಂತೆ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ. ತಪ್ಪಿತಸ್ಥ ವಿಷಯ ತಜ್ಞರು, ಭಾಷಾಂತರಕಾರರ ಮೇಲೆ ಕ್ರಮ ಕೈಗೊಳ್ಳುವುದಾಗಿಯೂ ಹೇಳಿದ್ದಾರೆ. ಕಳೆದ ಆರೇಳು ತಿಂಗಳಿನಿಂದ ನಾವು ನಡೆಸುತ್ತಿರುವ ಹೋರಾಟಕ್ಕೆ ದೊರೆತ ಭಾಗಶಃ ಗೆಲುವು ಇದು. ನಾವು ಬೀದಿಯಲ್ಲಿ ನಿಂತು ಹೋರಾಡದಿದ್ದರೆ ಇದ್ಯಾವುದೂ ಆಗುತ್ತಿರಲಿಲ್ಲ.
ಆದರೆ ಈಗಾಗಲೇ ಆಗಿರುವ ಪ್ರಮಾದಕ್ಕೆ ಅವರ ಮಾತುಗಳಲ್ಲಿ ಯಾವ ಉತ್ತರವೂ ಇಲ್ಲ. ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ಆದ ಅನ್ಯಾಯವನ್ನು ನ್ಯಾಯಾಲಯವೇ ಸರಿಪಡಿಸಬೇಕೇ? ಅದು ಮುಖ್ಯಮಂತ್ರಿಗಳಿಂದ ಆಗದ ಕೆಲಸವೇ? ಕೆಪಿಎಸ್ಸಿ ಸ್ವಾಯತ್ತ ಸಂಸ್ಥೆ, ಸರ್ಕಾರ ಮಧ್ಯ ಪ್ರವೇಶಿಸಲು ಆಗದು ಎಂಬ ಇಂಗಿತ ಅವರದು. ಹಾಗೆಂದು ಅನ್ಯಾಯ ನೋಡಿಕೊಂಡು ಸುಮ್ಮನಿರುತ್ತೀರೇ? ನಾವು ಮರುಪರೀಕ್ಷೆ ಮಾಡಿ ಎಂದು ಕೇಳುತ್ತಿಲ್ಲ, ಮರು ಅಧಿಸೂಚನೆ ಹೊರಡಿಸಿ ಎಂದು ಕೇಳುತ್ತಿದ್ದೇವೆ. ಅದು ನಿಮ್ಮ ಕೈಯಲ್ಲೇ ಇದೆಯಲ್ಲವೇ? ಕೆಪಿಎಸ್ಸಿ ಅಧ್ಯಕ್ಷರು, ಸದಸ್ಯರು, ಅಲ್ಲಿನ ಅಧಿಕಾರಿಗಳು ನಿಮ್ಮ ಮಾತು ಕೇಳೋದಿಲ್ಲವೇ? ಯಾಕಾಗಿ ಈ ಅಸಹಾಯಕತೆಯ ಪ್ರದರ್ಶನ?
ಮುಖ್ಯಮಂತ್ರಿಗಳು ಉತ್ತರ ನೀಡುವಾಗ ಕೆಪಿಎಸ್ಸಿ ಕೊಟ್ಟ ಮಾಹಿತಿಯನ್ನು ಯಥಾವತ್ತಾಗಿ ಓದಿದರು. ಕೆಪಿಎಸ್ಸಿ ಪ್ರಕಾರ ಮರುಪರೀಕ್ಷೆಯ ಪ್ರಶ್ನೆ ಪತ್ರಿಕೆಗಳಲ್ಲಿ ಆದ ದೋಷಗಳ ತನಿಖೆಗೆ ತಜ್ಞರ ಸಮಿತಿಯೊಂದನ್ನು ನೇಮಿಸಿತ್ತು. ಆ ಸಮಿತಿ ಆರು ದೋಷಗಳನ್ನು ಗುರುತಿಸಿ 5 ಕೃಪಾಂಕ ನೀಡಲು ಶಿಫಾರಸು ಮಾಡಿದೆ! ಆರು ದೋಷಗಳಲ್ಲಿ ಮೂರು ದೋಷಗಳು ಇಂಗ್ಲಿಷ್ ಮತ್ತು ಕನ್ನಡ ಎರಡೂ ಪ್ರಶ್ನೆಪತ್ರಿಕೆಗಳಲ್ಲಿ ಆಗಿರುವ ಸಾಮಾನ್ಯ ದೋಷ, ಅನುವಾದದ ದೋಷವಲ್ಲ! ಎಂಥ ಮೋಸ? ಎಂಥ ದುರಹಂಕಾರದ ಸಮರ್ಥನೆ!
ಎಸ್ ಎಸ್ ಎಲ್ ಸಿ ಓದಿರುವ ನಮ್ಮ ಹಳ್ಳಿಗಾಡಿನ ಪ್ರತಿಭಾವಂತ ಹೆಣ್ಣುಮಗಳಿಗೆ ಪ್ರಶ್ನೆ ಪತ್ರಿಕೆಗಳನ್ನು ಕೊಟ್ಟರೆ ಆಕೆ ಸಮರ್ಥವಾಗಿ ಆಗಿರುವ ತಪ್ಪುಗಳನ್ನು ಗುರುತಿಸುತ್ತಾಳೆ. ಹೀಗಿರುವಾಗ ಎರಡೂ ಪ್ರಶ್ನೆಪತ್ರಿಕೆಗಳಲ್ಲಿ ಆಗಿರುವ 80 ದೋಷಗಳು ಈ ತಜ್ಞರ ಸಮಿತಿಗೆ ಕಾಣಲಿಲ್ಲವೇ? ಹೊಟ್ಟೆಗೆ ಇವರು ಏನು ತಿನ್ನುತ್ತಾರೆ? ಅಥವಾ ಈ ತಜ್ಞರ ಸಮಿತಿಯೆಂಬುದೇ ಕೆಪಿಎಸ್ಸಿ ಆಡಿದ ನಾಟಕವೇ? ಪ್ರತಿಯೊಂದು ತಪ್ಪುಗಳನ್ನೂ ನಾವು ಮುಖ್ಯಮಂತ್ರಿಗಳ ಗಮನಕ್ಕೆ ತಂದಿದ್ದೆವು. ಹೀಗಿದ್ದಾಗ್ಯೂ ಅವರು ಕೆಪಿಎಸ್ಸಿ ಕೊಟ್ಟ ಸುಳ್ಳು ಉತ್ತರ, ಮೋಸದ ಸಮರ್ಥನೆಯನ್ನೇ ಹೇಳಬೇಕಿತ್ತೇ?
ಮುಖ್ಯಮಂತ್ರಿಗಳ ಒಟ್ಟು ಹೇಳಿಕೆ ಅಧಿಕಾರಶಾಹಿಯ ಪ್ರಭಾವಳಿಯಲ್ಲಿ ಓರ್ವ ಕನ್ನಡಪರ ಚಿಂತನೆಯ ರಾಜಕಾರಣಿ ಅಸಹಾಯಕತೆಯಲ್ಲಿ ಕೈ ಚೆಲ್ಲಿ ಕುಳಿತಂತೆ ಕಾಣುತ್ತದೆ. ಸಿದ್ಧರಾಮಯ್ಯನವರಂಥ ಗಟ್ಟಿ ಗುಂಡಿಗೆಯ ನಾಯಕರು ಹೀಗೆ ಐಎಎಸ್ ಲಾಬಿಗೆ ಶರಣಾಗಬಾರದಿತ್ತು.
ಕರ್ನಾಟಕ ರಕ್ಷಣಾ ವೇದಿಕೆ ಈ ಹೋರಾಟವನ್ನು ಮುಂದುವರೆಸುತ್ತದೆ. ಇದಕ್ಕೊಂದು ತಾರ್ಕಿಕ ಅಂತ್ಯ ದೊರೆಯುವವರೆಗೆ ಮುಂದುವರೆಸುತ್ತದೆ. ಕನ್ನಡ ಮಾಧ್ಯಮ ವಿದ್ಯಾರ್ಥಿಗಳು ಅಧೀರರಾಗಬಾರದು. ನಮಗೆ ನ್ಯಾಯಾಲಯಗಳಾದರೂ ನ್ಯಾಯ ಕೊಡಬಹುದೆಂಬ ನಿರೀಕ್ಷೆ ಇಟ್ಟುಕೊಳ್ಳೋಣ. ಅಲ್ಲೂ ನಮಗೆ ನ್ಯಾಯ ಸಿಗದೇ ಇದ್ದರೆ ಮತ್ತೆ ಬೀದಿಯಲ್ಲಿ ನಿಲ್ಲೋಣ. ಈ ನಾಡಿನ ಭವಿಷ್ಯ ರೂಪಿಸಬೇಕಾದ ಯುವಕ/ಯುವತಿಯರನ್ನು ಈ ಸರ್ಕಾರ, ಈ ವ್ಯವಸ್ಥೆ ಏನು ಮಾಡುತ್ತದೆ, ನೋಡಿಯೇ ಬಿಡೋಣ. ನಿಮ್ಮೊಂದಿಗೆ ನಾನು ಸದಾ ಇರುತ್ತೇನೆ.
- ಟಿ.ಎ.ನಾರಾಯಣಗೌಡ
@siddaramaiah@DKShivakumar@CMofKarnataka@BJPKarnataka@KPCCKarnataka@KPCCPresident #KPSCMOSA #KpscDroha #KPSC
ಕರ್ನಾಟಕ ಲೋಕ ಸೇವಾ ಆಯೋಗ ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಗಳ ಮೇಲ್ವಿಚಾರಣೆ, ಸಮರ್ಥ ನಿರ್ವಹಣೆ , ಆಡಳಿತ ಮಾಡಲು ವಿಷಯ ತಜ್ಞರು, ಉತ್ತಮ ವಿದ್ಯಾರ್ಹತೆ ಇರುವಂತವರು, ಅನುಭವಿಗಳು, ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿರುವವರು - ಕಾರ್ಯದರ್ಶಿ, ವಿಶೇಷಾಧಿಕಾರಿಗಳ ಸ್ಥಾನವನ್ನು ಅಲಂಕರಿಸಬೇಕು.
ಆದರೆ, ವಾಸ್ತವದಲ್ಲಿ 7 ನೇ ಕ್ಲಾಸು ನಪಾಸಾದವರು, ಅನುಕಂಪದ ಆಧಾರದ ಮೇರೆಗೆ ಕೆಲಸ ಗಿಟ್ಟಿಸಿಕೊಂಡವರೇ ಹೆಚ್ಚಾಗಿದ್ದರೆ. ಪ್ರಸ್ತುತ 288 ಹುದ್ದೆಗಳಲ್ಲಿ 180 ಜನ ಮಾತ್ರ ಕಾರ್ಯನಿರ್ವಹಿಸುತ್ತಿದ್ದು ಇದರಲ್ಲಿ 50 % ನಷ್ಟು ಸಿಬ್ಬಂದಿ ಅನುಕಂಪದ ಆಧಾರದ ಮೇಲೆ ನೇಮಕವಾಗಿ, ಸರಿಯಾದ ಶಿಕ್ಷಣ ಇಲ್ಲದೆ ಇರುವುದರಿಂದ ಆಯೋಗದ ಕಾರ್ಯನಿರ್ವಹಣೆಯ ಮೇಲೆ ಪ್ರಭಾವ ಬೀರಿದೆ.
ಸ್ಪರ್ಧಾತ್ಮಕ ಪರೀಕ್ಷೆಯನ್ನು ನಡೆಸುವ ಗಂಭೀರವಾದ ಜವಾಬ್ದಾರಿಯನ್ನು ಹೊತ್ತಿರುವ ಆಯೋಗದಲ್ಲಿ ಉತ್ತರದಾಯಿತ್ವವೇ ಇಲ್ಲ. ಸಿಬ್ಬಂದಿ ಕೆಲಸ ಮಾಡುವ ಬದಲಿಗೆ ಕ್ಯಾಂಟೀನ್ ನಲ್ಲೆ ಹೆಚ್ಚು ಸಮಯ ಕಳೆಯುವುದು ಕಂಡು ಬಂದಿದೆ. ಇವರಿಗಿರುವ ಕನಿಷ್ಠ ವಿದ್ಯಾರ್ಹತೆಯಿಂದ ಆಯೋಗದ ಉತ್ಪಾದಕತೆಯ ಮೇಲೂ ಪ್ರಭಾವ ಬೀರಿ ಪದೇ ಪದೇ ತಪ್ಪುಗಳು, ದೋಷಗಳು ಆಗುತ್ತಿದೆ.
ಕಾರ್ಯದರ್ಶಿ, ವಿಶೇಷಾಧಿಕಾರಿ, ಪರೀಕ್ಷಾ ನಿಯಂತ್ರಕ ಸಿಬ್ಬಂದಿ ಸೇರಿದಂತೆ ಆಯೋಗದ ಪ್ರಮುಖ ಇಲಾಖೆಗಳಲ್ಲಿ ವಿಷಯ ತಜ್ಞರನ್ನು, ಅನುಭವಿಗಳನ್ನು ಸರ್ಕಾರ ನೇಮಿಸಬೇಕು. ಅನುಕಂಪದ ಹುದ್ದೆಯಲ್ಲಿರುವ ಶೈಕ್ಷಣಿಕ ಅರ್ಹತೆಯನ್ನು ಸರ್ಕಾರ ಕೂಡಲೇ ಪರಿಶೀಲಿಸಿ ಅರ್ಹತೆ ಇಲ್ಲದವರಿಗೆ ಗೇಟ್ ಪಾಸ್ ನೀಡಲಿ.
@AKSSAofficial I @secretarykpsc I @CMofKarnataka I @siddaramaiah I @Vijayavani_Digi I
ಬ್ರಹ್ಮಾಂಡ ಭ್ರಷ್ಟಾಚಾರ, ಸ್ವಜನಪಕ್ಷಪಾತ, ಅಸಮರ್ಥ ಆಡಳಿತಕ್ಕೆ ಇನ್ನೊಂದು ಹೆಸರು ಕರ್ನಾಟಕ ಲೋಕ ಸೇವಾ ಆಯೋಗವಾಗಿದೆ. ಕನ್ನಡ ಮಾಧ್ಯಮ ಅಭ್ಯರ್ಥಿಗಳಿಗೆ ಅನ್ಯಾಯ, ಪ್ರಶ್ನೆ ಪತ್ರಿಕೆಯಲ್ಲಿ ಸಾಲು ಸಾಲು ದೋಷಗಳು, ನೂರಾರು ಕಿ.ಮೀ. ದೂರದೂರುಗಳಲ್ಲಿ ಪರೀಕ್ಷಾ ಕೇಂದ್ರಗಳ ನಿಗದಿ, ಭಾಷಾಂತರ ದೋಷಗಳು ಮಾಡುತ್ತಿರುವ ಆಯೋಗಕ್ಕೆ ಉತ್ತರದಾಯಿತ್ವ, ಹೊಣೆಗಾರಿಕೆ ತರಬೇಕಿದೆ ಎಂದು ಇಂದು ಅಧಿವೇಶನದಲ್ಲಿ ಮಾತನಾಡಿದೆ. ಯಾವುದೇ ಬಾಹ್ಯ ಒತ್ತಡಗಳಿಲ್ಲದೆ ನೇಮಕಾತಿ ಮಾಡಿದರಷ್ಟೇ ನಮಗೆ ಉತ್ತಮ ಅಧಿಕಾರಿಗಳ ಸೇವೆ ಸಿಗಲು ಸಾಧ್ಯ ಹಾಗೂ ಪ್ರತಿಭಾನ್ವಿತರಿಗೆ ಉದ್ಯೋಗ ಸಿಗಲು ಸಾಧ್ಯ ಎಂದು ಸರ್ಕಾರಕ್ಕೆ ತಿಳಿಸಲಾಯಿತು.
@AKSSAofficial I @tv9kannada I @AsianetNewsSN I @AsianetNewsSN I @prajavani I @VijayaKarnataka I @VishwavaniNews I @HosadiganthaWeb I @UttarKarnataka3 I @Kar_engineers I
ಸ್ಪರ್ಧಾರ್ಥಿಗಳೇ ಆತಂಕಪಡುವ ಅಗತ್ಯವಿಲ್ಲ ಸಮುದಾಯ ಎರಡು ಹಂತದಲ್ಲಿ (ಪಾದಯಾತ್ರೆ ಹಾಗೂ ಬೆಂಗಳೂರು ಫ್ರೀಡಂ ಪಾರ್ಕ್ ನಲ್ಲಿ ಅನಿರ್ಧಿಷ್ಟ ಧರಣಿ )ಒಳಮೀಸಲಾತಿ ಹೋರಾಟಕ್ಕೆ ಇಳಿದ್ದಿದ್ದಾಗಿದೆ ಶೀಘ್ರದಲ್ಲಿ ರಾಜ್ಯದಲ್ಲಿ ಒಳಮೀಸಲಾತಿ ಜಾರಿಯಾಗಲಿದೆ.
***
ಚಿತ್ರದುರ್ಗ, ಮಾರ್ಚ್. 01 : ಒಳಮೀಸಲಾತಿ ಜಾರಿಗೊಳಿಸುವಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ ಅನಗತ್ಯವಾಗಿ ವಿಳಂಭ ಮಾಡುತ್ತಿರುವುದನ್ನು ವಿರೋಧಿಸಿ ಮಾ. 5 ರಂದು ಬಿ.ಕೃಷ್ಣಪ್ಪ ಸಮಾಧಿಯಿಂದ ಪಾದಯಾತ್ರೆ ಹೊರಟು 22 ರಂದು ಬೆಂಗಳೂರು ತಲುಪಲಿದೆ ಎಂದು ಒಳ ಮೀಸಲಾತಿ ಹೋರಾಟಗಾರ ಬಿ.ಆರ್.ಭಾಸ್ಕರ್ ಪ್ರಸಾದ್ ತಿಳಿಸಿದರು.
ಪ್ರವಾಸಿ ಮಂದಿರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸುಪ್ರಿಂಕೋರ್ಟ್ ತೀರ್ಪಿನಂತೆ ರಾಜ್ಯ ಸರ್ಕಾರ ಇಷ್ಟೊತ್ತಿಗಾಗಲೆ ಒಳಮೀಸಲಾತಿಯನ್ನು ಜಾರಿಗೊಳಿಸಬೇಕಿತ್ತು. ದಲಿತರನ್ನು ಯಾಮಾರಿಸುವ ನಯವಂಚಕತನ ಪ್ರದರ್ಶಿಸುತ್ತಿದೆ. ಪಾದಯಾತ್ರೆಯಲ್ಲಿ ಅರೆಬೆತ್ತಲೆ, ಉರುಳುಸೇವೆ, ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಮಾಜ ಕಲ್ಯಾಣ ಸಚಿವ ಹೆಚ್.ಸಿ.ಮಹದೇವಪ್ಪನ ಅಣಕು ಶವಯಾತ್ರೆಯಿರುತ್ತದೆ. ಕಾರ್ಯಕರ್ತರು ರಕ್ತದಲ್ಲಿ ಸರ್ಕಾರಕ್ಕೆ ಪತ್ರ ಬರೆದು ಅಂತಿಮ ಎಚ್ಚರಿಕೆ ನೀಡಲಿದ್ದಾರೆಂದರು.
ನಮ್ಮ ನೋವು ಅರ್ಥಮಾಡಿಕೊಂಡು ಶೀಘ್ರವೇ ಒಳ ಮೀಸಲಾತಿಯನ್ನು ಜಾರಿಗೆ ತರುವಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸುವುದಕ್ಕಾಗಿ ಪಾದಯಾತ್ರೆ ಆರಂಭಿಸಿದ್ದು, ದಿನಕ್ಕೆ ಹದಿನೈದರಿಂದ ಇಪ್ಪತ್ತು ಕಿ.ಮೀ. ನಡೆದು ಯಾತ್ರೆ ಬೆಂಗಳೂರು ತಲುಪಲಿದೆ. ಮಾದಿಗ ಸಮುದಾಯದ ಸಚಿವರುಗಳ ಅಣಕು ಬೊಂಬೆಗಳನ್ನು ಮಾಡಿ ರಕ್ತದ ಅಭಿಷೇಕ ಮಾಡುತ್ತೇವೆ. ಒಟ್ಟಾರೆ ಈ ಪಾದಯಾತ್ರೆ ಉಗ್ರವಾಗಿರುತ್ತದೆ. ಜಸ್ಟಿಸ್ ನಾಗಮೋಹನ್ದಾಸ್ ಸರ್ಕಾರಕ್ಕೆ ನೀಡಿರುವ ಗಡುವು ಮುಗಿದಿರುವುದರಿಂದ ಯಾವುದೇ ಕಾರಣಕ್ಕೂ ತಡ ಮಾಡದೆ ಒಳ ಮೀಸಲಾತಿಯನ್ನು ಜಾರಿಗೊಳಿಸಬೇಕೆಂಬುದು ನಮ್ಮ ಉದ್ದೇಶ. ಒಳ ಮೀಸಲಾತಿ ಬಗ್ಗೆ ಚಿಂತಿಸುವ ಎಲ್ಲಾ ಸಂಘಟನೆಗಳು ಪಾದಯಾತ್ರೆಯಲ್ಲಿ ಪಾಲ್ಗೊಳ್ಳಬಹುದೆಂದು ಬಿ.ಆರ್.ಭಾಸ್ಕರ ಪ್ರಸಾದ್ ಮನವಿ ಮಾಡಿದರು.@AKSSAofficial
ಪೊಲೀಸ್ ಕಾನ್ಸ್ಟೇಬಲ್ ನೇಮಕಾತಿಗೆ ವಯೋಮಿತಿಯನ್ನು ಸಡಿಲಿಕೆ ಮಾಡುವುದಾಗಿ ಆಶ್ವಾಸನೆ ನೀಡಿದ್ದ ಮುಖ್ಯ ಮಂತ್ರಿಗಳು ಹಾಗೂ ಉಪ ಮುಖ್ಯ ಮಂತ್ರಿಗಳು ಈಗ ತಟಸ್ಥರಾಗಿದ್ದಾರೆ. ಕಾನ್ಸ್ಟೇಬಲ್ ನೇಮಕಾತಿ ಅಧಿಸೂಚನೆ ಇನ್ನೇನು ಪ್ರಕಟವಾಗುವ ಸಮಯದಲ್ಲಿ ಸರ್ಕಾರ ಯಾವುದೇ ನಿರ್ಧಾರ ಕೈಗೊಳ್ಳದೇ ಇರುವುದು ನಿಜಕ್ಕೂ ದುರದೃಷ್ಟಕರ.
ಸರ್ಕಾರ ಕೂಡಲೇ ಎಚೆತ್ತುಕೊಂಡು ನೇಮಕಾತಿ ಅಧಿಸೂಚನೆ ಹೊರಡಿಸುವ ಮುಂಚೆಯೇ ವಯೋಮಿತಿ ಸಡಿಲಿಕೆ ಮಾಡಲಿ.
@CMofKarnataka I @AKSSAofficial I @VijayaKarnataka I @DrParameshwara