ಮೈಸೂರು ದಸರಾ 2026: ಅಭಿಮನ್ಯುವಿನ ಅಮೂಲ್ಯ ಸೇವೆಗೆ ಸರ್ಕಾರದ ವಿಶೇಷ ಗೌರವ! 🐘👑
ಹಲವು ವರ್ಷಗಳ ಕಾಲ ಚಿನ್ನದ ಅಂಬಾರಿಯನ್ನು ಗಾಂಭೀರ್ಯದಿಂದ ಹೊತ್ತು ಕರುನಾಡಿನ ಜನರ ಮನಗೆದ್ದ ಅಭಿಮನ್ಯುವಿನ ಸುದೀರ್ಘ ಸೇವೆಯನ್ನು ಗೌರವಿಸಿ, ಈ ಬಾರಿಯ ಮೈಸೂರು ದಸರಾ-2026ರ ಜಂಬೂಸವಾರಿಯಲ್ಲಿ ಅಭಿಮನ್ಯುವಿಗೆ ಸಕಲ ಸರ್ಕಾರಿ ಗೌರವಗಳನ್ನು ನೀಡಿ, ‘ನಿಶಾನೆ ಆನೆ’ಯನ್ನಾಗಿ ಗೌರವಪೂರ್ವಕವಾಗಿ ಮುಂಚೂಣಿಯಲ್ಲಿ ಮುನ್ನಡೆಸಲು ಅರಣ್ಯ ಇಲಾಖೆಗೆ ಸೂಚಿಸಿದ್ದೇನೆ.
ದಸರಾ ಗಜಪಡೆಯ ಹಿರಿಮೆ ಅಭಿಮನ್ಯು, ಎಂದೆಂದಿಗೂ ನಮ್ಮ ಹೆಮ್ಮೆ! 💛❤️
#RamalingaReddy #MysuruDasara #Abhimanyu #Dasara2026 #ನಮ್ಮಅಭಿಮನ್ಯು
ಉತ್ತರಾಖಂಡದಲ್ಲಿ ನಡೆದಿರುವ ಘಟನೆ ಬಿಜೆಪಿಯ ದ್ವಂದ್ವ ನಿಲುವಿಗೆ ಮತ್ತೊಂದು ಸಾಕ್ಷಿಯಾಗಿದೆ.
ದಲಿತ ಸಮುದಾಯದ ಹಿರಿಯ ನಾಯಕ, ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ ಮಲ್ಲಿಕಾರ್ಜುನ ಖರ್ಗೆ ಅವರು ಭಾಗವಹಿಸಿದ್ದ ಕಾರ್ಯಕ್ರಮದ ಸ್ಥಳದಲ್ಲಿ ‘ಶುದ್ಧೀಕರಣ’ದ ಹೆಸರಿನಲ್ಲಿ ನಡೆದಿರುವ ಘಟನೆ ಕುರಿತು ಪ್ರಶ್ನೆ ಎತ್ತಿದ ವಿರೋಧ ಪಕ್ಷದ ನಾಯಕ ಶ್ರೀ ರಾಹುಲ್ ಗಾಂಧಿ ಅವರ ವಿರುದ್ಧ FIR ದಾಖಲಿಸಲಾಗಿದೆ.
ಆದರೆ, ಈ ಘಟನೆಗೆ ಸಂಬಂಧಿಸಿದಂತೆ ಕ್ರಮ ಕೈಗೊಳ್ಳಬೇಕಾದ ಸರ್ಕಾರ ಮೌನ ವಹಿಸಿರುವುದು ಏಕೆ?
ಇದಕ್ಕಿಂತಲೂ ವಿಚಿತ್ರವೆಂದರೆ, ಇಂದು ಬಿಜೆಪಿಯವರೇ ರಾಹುಲ್ ಗಾಂಧಿಯವರ ಭಾವಚಿತ್ರ ಇಟ್ಟು ‘ಬುದ್ಧಿ ಶುದ್ಧಿ’ ಯಜ್ಞ ನಡೆಸಿದ್ದಾರೆ.
ಇದು ರಾಜಕೀಯ ಪಿತೂರಿ ಮತ್ತು ಸಂವಿಧಾನದ ಮೌಲ್ಯಗಳನ್ನು ಅವಮಾನಿಸುವ ಮನಸ್ಥಿತಿಯಲ್ಲದೇ ಮತ್ತೇನು?
ಬಾಬಾಸಾಹೇಬ್ ಅಂಬೇಡ್ಕರ್ ಅವರು ನಮಗೆ ಕೊಟ್ಟ ಸಂವಿಧಾನವು ಜಾತಿ, ಧರ್ಮ, ವರ್ಗದ ಆಧಾರದ ಮೇಲೆ ಯಾರನ್ನೂ ಕೀಳಾಗಿ ಕಾಣಬಾರದು ಎಂಬ ಸಮಾನತೆಯ ಸಂದೇಶ ನೀಡಿದೆ.
ಸರ್ಕಾರ ಮಾಡಬೇಕಾದ ಕೆಲಸವೆಂದರೆ ಪ್ರಶ್ನಿಸುವವರ ಮೇಲೆ ಪ್ರಕರಣ ದಾಖಲಿಸುವುದಲ್ಲ; ಜಾತಿ ಆಧಾರಿತ ಅವಮಾನ ಅಥವಾ ತಾರತಮ್ಯದ ಆರೋಪಗಳು ಬಂದಾಗ ನಿಷ್ಪಕ್ಷಪಾತವಾಗಿ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದು.
ಸಂವಿಧಾನ ರಕ್ಷಣೆಯ ಈ ಹೋರಾಟದಲ್ಲಿ ಬಿಜೆಪಿಯ ಬೆದರಿಕೆ ರಾಜಕಾರಣಕ್ಕೆ ಕಾಂಗ್ರೆಸ್ ತಲೆಬಾಗುವ ಪ್ರಶ್ನೆಯೇ ಇಲ್ಲ.
#RamalingaReddy #RahulGandhi #MallikarjunKharge #Uttarakhand #Congress
@RahulGandhi@kharge
We protest the FIR against LoP Shri @RahulGandhi, condemn attempts to silence the voice of democracy.
✊ We stand with Rahul Gandhi.
📜 We stand with Mallikarjun Kharge Ji.
🇮🇳 We stand with the Constitution and Democracy.
Protest & effigy burning against the Uttarakhand BJP Govt
ಮೈಸೂರು ಮತ್ತು ಮಂಡ್ಯ ಜಿಲ್ಲೆಗಳ ವ್ಯಾಪ್ತಿಯಲ್ಲಿ ಮಾನವ-ವನ್ಯಜೀವಿ ಸಂಘರ್ಷ ನಿಯಂತ್ರಣ ಹಾಗೂ ತುರ್ತು ಕಾರ್ಯಾಚರಣೆಗಳನ್ನು ಪರಿಣಾಮಕಾರಿಯಾಗಿ ಕೈಗೊಳ್ಳುವ ನಿಟ್ಟಿನಲ್ಲಿ, ಮೈಸೂರು ಅರಮನೆ ಆವರಣದಲ್ಲಿ ಅರಣ್ಯ ಇಲಾಖೆಯ 4 ಬೊಲೆರೊ (ಕ್ಯಾಂಪರ್) ಹಾಗೂ 8 ದ್ವಿಚಕ್ರ ವಾಹನಗಳನ್ನು ಲೋಕಾರ್ಪಣೆಗೊಳಿಸಿ ಚಾಲನೆ ನೀಡಲಾಯಿತು.
ಈ ನೂತನ ವಾಹನಗಳು ಮಾನವ-ವನ್ಯಜೀವಿ ಸಂಘರ್ಷದ ಸಂದರ್ಭಗಳಲ್ಲಿ ಅರಣ್ಯ ಸಿಬ್ಬಂದಿ ತ್ವರಿತವಾಗಿ ಸ್ಥಳಕ್ಕೆ ತೆರಳಿ ಪರಿಣಾಮಕಾರಿ ರಕ್ಷಣಾ ಹಾಗೂ ನಿಯಂತ್ರಣ ಕಾರ್ಯಾಚರಣೆಗಳನ್ನು ಕೈಗೊಳ್ಳಲು, ಸಿಬ್ಬಂದಿಯ ಕ್ಷೇತ್ರ ಕಾರ್ಯವನ್ನು ಮತ್ತಷ್ಟು ಬಲಪಡಿಸಲು ಮತ್ತು ಸಾರ್ವಜನಿಕರ ಸುರಕ್ಷತೆಯನ್ನು ಖಚಿತಪಡಿಸಲು ಸಹಕಾರಿಯಾಗಲಿವೆ.
ಈ ಸಂದರ್ಭದಲ್ಲಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳಾದ (PCCF) ಶ್ರೀಮತಿ ಮೀನಾಕ್ಷಿ ನೇಗಿ, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳಾದ (CF) ಡಾ. ಎಸ್.ಎಸ್. ರವಿಶಂಕರ್, ಶ್ರೀ ಪ್ರಭಾಕರನ್, ಮೈಸೂರು ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾದ (DCF) ಡಾ. ಐ.ಬಿ. ಪ್ರಭುಗೌಡ, ಮೈಸೂರು ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕರಾದ (DCF) ಶ್ರೀಮತಿ ಪಿ. ಅನುಷಾ ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
#ForestDepartment #RamalingaReddy #KarnatakaForest #WildlifeProtection #Mysuru #Mandya
‘₹22,006-Crore Debt, 99.97% Haircut?’ Congress Seeks Answers
‘₹22,006 ಕೋಟಿ ಸಾಲ, 99.97% ಕಡಿತ?’ ಕೇಂದ್ರದ ಉತ್ತರ ಕೇಳಿದ ಕಾಂಗ್ರೆಸ್
“How can ordinary borrowers face harsh recovery action while massive corporate debts allegedly receive extraordinary haircuts?” asked @KPCCKarnataka General Secretary @SManoharCONG, protesting the alleged 99.97% debt haircut/settlement involving @ZeeNews founder Subhash Chandra.
He demanded that PM @narendramodi and Finance Minister @nsitharaman disclose all facts, protect public money and order an independent examination into any possible irregularities.
Who approved such a massive haircut and on what grounds?
Bengaluru Rahul Gandhi Kharge @PriyankKharge
#SubhashChandra #DebtHaircut #Congress #BJP #Accountability Mohan Bhagwat
🐘🌿 ಮೈಸೂರು ದಸರೆಯ ವೈಭವಕ್ಕೆ ಅದ್ಧೂರಿ ಚಾಲನೆ❤️❤️
ನಾಡಹಬ್ಬ ಮೈಸೂರು ದಸರಾ ಅಂಗವಾಗಿ ಆಗಮಿಸಿದ ಮೊದಲ ಹಂತದ 9 ಗಜಪಡೆಗೆ ಮೈಸೂರು ಅರಮನೆಯ ಐತಿಹಾಸಿಕ ಜಯಮಾರ್ತಾಂಡ ದ್ವಾರದಲ್ಲಿ ಅರಣ್ಯ ಸಚಿವರಾದ @RLR_BTM ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ @Dr_Yathindra_S ಆತ್ಮೀಯ ಸ್ವಾಗತ ಕೋರಿದರು. 🙏
🌹 Celebrated the birth anniversaries of Shri Rajiv Gandhi and Shri D. Devaraj Urs with visually impaired children. 🙏
Remembering their vision for modern India, social justice and empowerment of the poor.
#RajivGandhi#DevarajUrs#SocialJustice@INCIndia@RahulGandhi@kharge
ಸೋನಿಯಾ ಗಾಂಧಿ ರಕ್ತದ ಬಗ್ಗೆ ನಾಲಿಗೆ ಹರಿಬಿಟ್ಟ ಕುಮಾರಸ್ವಾಮಿ ಗೆ ಕಾಂಗ್ರೆಸ್ ಕಾರ್ಯಕರ್ತರ ಸಂದೇಶ.
ಕುಮಾರಸ್ವಾಮಿಯವರೇ,
ಶ್ರೀಮತಿ ಚನ್ನಮ್ಮನವರ ಪುತ್ರರಾಗಿರುವ ನಿಮ್ಮ ಬಾಯಿಂದ ಶ್ರೀಮತಿ ಸೋನಿಯಾ ಗಾಂಧಿಯವರ ಬಗ್ಗೆ ಇಂತಹ ಕೀಳುಮಟ್ಟದ ಮಾತುಗಳು ಕೇಳಿಬಂದಿರುವುದು ಅತ್ಯಂತ ಖಂಡನೀಯ. ಚನ್ನಮ್ಮನವರಂತಹ ಧೈರ್ಯ, ತ್ಯಾಗ ಮತ್ತು ಮಾನವೀಯತೆಯ ಪ್ರತೀಕವಾಗಿರುವ ಮಹಾನ್ ಮಹಿಳೆಯ ಪರಂಪರೆಯನ್ನು ಗೌರವಿಸಬೇಕಾದ ನೀವು, ಒಬ್ಬ ಗೌರವಾನ್ವಿತ ಮಹಿಳೆಯ ವಿರುದ್ಧ ಇಂತಹ ಹೇಳಿಕೆ ನೀಡಿರುವುದು ಅತ್ಯಂತ ದುರದೃಷ್ಟಕರ.
ಅಧಿಕಾರಕ್ಕಾಗಿ ಶ್ರೀ ರಾಹುಲ್ ಗಾಂಧಿಯವರನ್ನು “ದೇವರು” ಎಂದು ಕರೆದಿದ್ದನ್ನು ಮರೆತಿದ್ದೀರಾ? ಅಧಿಕಾರದ ರಾಜಕೀಯ ಲೆಕ್ಕಾಚಾರ ಬದಲಾದ ತಕ್ಷಣ ನಿಮ್ಮ ನಿಲುವು ಬದಲಾಗಿದೆ. ಇಂದು ನೀವು ಹಿಂದೆ ಟೀಕಿಸಿದ್ದ ಅದೇ ಬಿಜೆಪಿಯೊಂದಿಗೆ ಕೈಜೋಡಿಸಿ ಕೇಂದ್ರದಲ್ಲಿ ಸಚಿವರಾಗಿದ್ದೀರಿ. ಇದಕ್ಕಿಂತ ದೊಡ್ಡ ರಾಜಕೀಯ ಅವಕಾಶವಾದಿತನ ಮತ್ತೇನಿದೆ?
ನಿಮ್ಮನ್ನು “ವಚನಭ್ರಷ್ಟ” ಎಂದು ಟೀಕಿಸಿದ್ದ ಬಿಜೆಪಿಯೊಂದಿಗೇ ಇಂದು ನೀವು ಕೈಜೋಡಿಸಿದ್ದೀರಿ. ನಿಮ್ಮ ಹಿಂದಿನ ಹೇಳಿಕೆಗಳು ಮತ್ತು ಇಂದಿನ ರಾಜಕೀಯ ನಡೆಗಳನ್ನು ಕರ್ನಾಟಕದ ಜನತೆ ಗಮನಿಸುತ್ತಿದ್ದಾರೆ. ರಾಜಕೀಯ ಅನುಕೂಲಕ್ಕಾಗಿ ನಿಲುವು ಬದಲಾಯಿಸುವುದು ನಿಮ್ಮ ರಾಜಕೀಯ ಇತಿಹಾಸದ ಭಾಗವಾಗಬಾರದು.
ನೈಸ್ ಮತ್ತು ಬಿಡದಿ ಯೋಜನೆಗಳ ವಿಚಾರದಲ್ಲಿಯೂ ರಾಜಕೀಯ ಮಾಡಬೇಡಿ. ಇವು ಸರ್ಕಾರದ ನಿರ್ಧಾರಗಳು ಮತ್ತು ಸಂಬಂಧಿತ ಸಂಸ್ಥೆಗಳ ಪ್ರಕ್ರಿಯೆಗಳ ಮೂಲಕ ಜಾರಿಗೊಂಡ ಅಭಿವೃದ್ಧಿ ಯೋಜನೆಗಳು. ಇಂತಹ ಸಾರ್ವಜನಿಕ ಅಭಿವೃದ್ಧಿ ಯೋಜನೆಗಳನ್ನು ನಿಮ್ಮ ಪುತ್ರನ ರಾಜಕೀಯ ಭವಿಷ್ಯವನ್ನು ಬೆಳೆಸುವ ಉದ್ದೇಶದಿಂದ ರಾಜಕೀಯ ವಿಷಯವನ್ನಾಗಿ ಮಾಡುವುದು ಸರಿಯಲ್ಲ.
ಅಭಿವೃದ್ಧಿ ಯೋಜನೆಗಳು ಜನರಿಗಾಗಿ, ಯಾವುದೇ ಒಂದು ಕುಟುಂಬದ ರಾಜಕೀಯ ಲಾಭಕ್ಕಾಗಿ ಅಲ್ಲ.
ಇನ್ನು ವಂದೇ ಮಾತರಂ, ರಾಷ್ಟ್ರಧ್ವಜ ಮತ್ತು ದೇಶಭಕ್ತಿಯ ಬಗ್ಗೆ ಕಾಂಗ್ರೆಸ್ಗೆ ಪಾಠ ಹೇಳಿಕೊಡುವ ಅಗತ್ಯ ನಿಮಗಿಲ್ಲ. ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಕಾಂಗ್ರೆಸ್ ಪಕ್ಷದ ಕೊಡುಗೆ ಐತಿಹಾಸಿಕವಾಗಿದೆ. ರಾಷ್ಟ್ರಧ್ವಜ, ವಂದೇ ಮಾತರಂ ಮತ್ತು ದೇಶದ ಸ್ವಾತಂತ್ರ್ಯ ಹೋರಾಟದ ಮೌಲ್ಯಗಳಿಗೆ ಕಾಂಗ್ರೆಸ್ ಸದಾ ಗೌರವ ನೀಡಿದೆ.
ಆದ್ದರಿಂದ ಕಾಂಗ್ರೆಸ್ ಪಕ್ಷದ ದೇಶಭಕ್ತಿಯನ್ನು ಪ್ರಶ್ನಿಸುವ ಮೊದಲು ನಿಮ್ಮದೇ ಹಿಂದಿನ ರಾಜಕೀಯ ನಿಲುವುಗಳನ್ನು ಒಮ್ಮೆ ನೆನಪಿಸಿಕೊಳ್ಳಿ.
ನೀವು ನಿಜವಾಗಿಯೂ ಮಾಜಿ ಪ್ರಧಾನಮಂತ್ರಿ ಶ್ರೀ ಎಚ್. ಡಿ. ದೇವೇಗೌಡರ ಪುತ್ರ ಎಂಬ ಗೌರವವನ್ನು ಮತ್ತು ಅವರ ರಾಜಕೀಯ ಪರಂಪರೆಯನ್ನು ಕಾಪಾಡಿಕೊಳ್ಳಲು ಬಯಸಿದರೆ, ಮೊದಲು ಶ್ರೀಮತಿ ಸೋನಿಯಾ ಗಾಂಧಿಯವರ ಬಗ್ಗೆ ನೀಡಿರುವ ಅವಹೇಳನಕಾರಿ ಹೇಳಿಕೆಯನ್ನು ಹಿಂಪಡೆದು ಬಹಿರಂಗವಾಗಿ ಕ್ಷಮೆಯಾಚಿಸಿ.
ಕುಮಾರಸ್ವಾಮಿಯವರೇ, ರಾಜಕೀಯ ಟೀಕೆಗೆ ಕಾಂಗ್ರೆಸ್ ಹೆದರುವುದಿಲ್ಲ. ಆದರೆ ವೈಯಕ್ತಿಕ ಅವಹೇಳನ ಮತ್ತು ಕೀಳುಮಟ್ಟದ ಹೇಳಿಕೆಗಳನ್ನು ಸಹಿಸುವುದಿಲ್ಲ.
ಮೊದಲು ಶ್ರೀಮತಿ ಸೋನಿಯಾ ಗಾಂಧಿಯವರಲ್ಲಿ ಕ್ಷಮೆಯಾಚಿಸಿ. ಇಲ್ಲವಾದರೆ ಕರ್ನಾಟಕದಾದ್ಯಂತ ನೀವು ಎಲ್ಲಿಗೆ ಹೋದರೂ ಕಾಂಗ್ರೆಸ್ ಕಾರ್ಯಕರ್ತರು ಪ್ರಜಾಸತ್ತಾತ್ಮಕ ರೀತಿಯಲ್ಲಿ ಪ್ರತಿಭಟನೆ ನಡೆಸಿ ನಿಮ್ಮ ಹೇಳಿಕೆಯನ್ನು ಖಂಡಿಸಲಿದ್ದಾರೆ.
ಇದು ಬೆದರಿಕೆಯಲ್ಲ; ಪ್ರಜಾಸತ್ತಾತ್ಮಕವಾಗಿ ನಿಮ್ಮ ಹೇಳಿಕೆಗೆ ಉತ್ತರಿಸುವ ಕಾಂಗ್ರೆಸ್ ಕಾರ್ಯಕರ್ತರ ಸ್ಪಷ್ಟ ಎಚ್ಚರಿಕೆ.
— ಎಸ್. ಮನೋಹರ್
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ
ರಾಜಕೀಯ ಭಿನ್ನಾಭಿಪ್ರಾಯ ಇರಬಹುದು, ಆದರೆ ವೈಯಕ್ತಿಕವಾಗಿ ಅವಮಾನಿಸುವುದು ಸರಿಯಲ್ಲ. ತಮ್ಮ ಹೇಳಿಕೆಯನ್ನು ಹಿಂಪಡೆದು ಕ್ಷಮೆಯಾಚಿಸಬೇಕು. ಇಲ್ಲವಾದರೆ ಕಾಂಗ್ರೆಸ್ ಕಾರ್ಯಕರ್ತರ ತೀವ್ರ ಪ್ರತಿರೋಧ ಎದುರಿಸಬೇಕಾಗುತ್ತದೆ.
ಎ. ಆನಂದ್ @AnandaA36429443
ಹಿರಿಯ ಕಾಂಗ್ರೆಸ್ ಕಾರ್ಯಕರ್ತರು
@INCIndia@KPCCKarnataka
@rashtrapatibhvn ರಾಷ್ಟ್ರಪತಿಗಳೇ
ದಲಿತ ನಾಯಕರಾದ @kharge ಶ್ರೀ ಖರ್ಗೆ ಜಿರನ್ನು ಅಪಮಾನಿಸಿರುವ@BJP4India ಸರ್ಕಾರವನ್ನು ಕೂಡಲೇ ವಜಾಗೊಳಿಸಿ. Honourable President, please immediately dismiss the BJP-led Union Government for insulting Shri Mallikarjun Kharge Ji, a prominent Dalit leader.@INCIndia
ಉತ್ತರಾಖಂಡದ ಹಲ್ದ್ವಾನಿಯಲ್ಲಿ ಎಐಸಿಸಿ ಅಧ್ಯಕ್ಷ, ಹಿರಿಯ ದಲಿತ ನಾಯಕ ಶ್ರೀ ಮಲ್ಲಿಕಾರ್ಜುನ ಖರ್ಗೆ ಅವರು ಮಾತನಾಡಿದ ವೇದಿಕೆಯನ್ನು ಕೇವಲ ಎರಡು ದಿನಗಳ ನಂತರ ‘ಶುದ್ಧೀಕರಣ’ ಹೆಸರಿನಲ್ಲಿ ಅಪವಿತ್ರಗೊಳಿಸಿರುವುದು ಅತ್ಯಂತ ಆಘಾತಕಾರಿ ಮತ್ತು ಅಕ್ಷಮ್ಯ.
ಇದು ಹಸಿ ಹಸಿಯಾದ ಜಾತಿ ತಾರತಮ್ಯ ಹಾಗೂ ಅಸ್ಪೃಶ್ಯತಾ ಮನೋಭಾವದ ಕರಾಳ ಮುಖವಲ್ಲವೇ?
ಪ್ರಧಾನಿ ನರೇಂದ್ರ ಮೋದಿ ಅವರ "ಸಬ್ ಕಾ ಸಾಥ್, ಸಬ್ ಕಾ ವಿಕಾಸ್" ಎನ್ನುವ ಘೋಷಣೆ ಕೇವಲ ಚುನಾವಣಾ ಪ್ರಚಾರದ ಗಿಮಿಕ್ ಮಾತ್ರವೇ? ಇಂತಹ ಹೇಯ ಕೃತ್ಯದ ವಿರುದ್ಧ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಏನು ಮಾಡುತ್ತಿದ್ದಾರೆ? ಅವರ ಈ ಮೌನದ ಅರ್ಥವೇನು?
ಈ ಕೃತ್ಯದೊಂದಿಗೆ ನಮಗೆ ಸಂಬಂಧವಿಲ್ಲ ಎನ್ನುವ ಬಿಜೆಪಿ ಪಕ್ಷ ಸಹ, ಕೇವಲ ಮೌನ ವಹಿಸದೆ ಈ ವಿಕೃತ ಕೃತ್ಯವನ್ನು ಬಹಿರಂಗವಾಗಿ ಖಂಡಿಸಲಿ.
ಸಂವಿಧಾನದ ವಿರೋಧಿಗಳಾದ ಇಂತಹ ಜಾತಿವಾದಿ ಶಕ್ತಿಗಳ ವಿರುದ್ಧ ಕೂಡಲೇ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ನಾನು ಬಲವಾಗಿ ಆಗ್ರಹಿಸುತ್ತೇನೆ.
#RamalingaReddy #MallikarjunKharge #AICC #Congress #BJP
@kharge@narendramodi@AmitShah
“Pakistan is not our enemy; we should not hate Pakistan for long,” says Mohan Bhagwat.
Those who call others “anti-national” for mentioning Pakistan—why are BJP leaders silent now?
What is the political agenda? The truth must come out @smanohar#MohanBhagwat#RSS#BJP
Today I handed over an interim dividend cheque of ₹1 crore for the financial year 2025–26 to Hon'ble @CMofKarnataka Shri. @DKShivakumar at #VidhanaSoudha, on behalf of @The_MEI_ltd.
Continued financial performance of this state-run enterprise under our #EnergyDepartment has been extremely efficient, and its steady contribution to Karnataka's exchequer is a hallmark of this dedicated work. Energy Department Additional Chief Secretary Shri @Gaurav_Gupta67, MEI Chairman Shri @SManoharCONG, and Managing Director Smt. #AnitaC and other senior officials were present on the occasion.
ಇಂದು ನಾನು ವಿಧಾನಸೌಧದಲ್ಲಿ ನಮ್ಮ ಮೈಸೂರು ಎಲೆಕ್ಟ್ರಿಕಲ್ ಇಂಡಸ್ಟ್ರೀಸ್ ಲಿಮಿಟೆಡ್ (MEI) ಪರವಾಗಿ 2025-26ನೇ ಆರ್ಥಿಕ ವರ್ಷದ ₹1 ಕೋಟಿ ಮಧ್ಯಂತರ ಲಾಭಾಂಶದ ಚೆಕ್ ಅನ್ನು ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಡಿ.ಕೆ. ಶಿವಕುಮಾರ್ ಅವರಿಗೆ ಹಸ್ತಾಂತರಿಸಿದೆ.
ಇಂಧನ ಇಲಾಖೆ ವ್ಯಾಪ್ತಿಯ ಈ ರಾಜ್ಯ ಸ್ವಾಮ್ಯದ ಸಂಸ್ಥೆಯ ಸಮರ್ಥ ಸಾಧನೆ, ನಿರಂತರ ಆರ್ಥಿಕ ಪ್ರಗತಿಯಿಂದಾಗಿ ಈ ಸಂಸ್ಥೆಯು ನಮ್ಮ ರಾಜ್ಯದ ಬೊಕ್ಕಸಕ್ಕೆ ತನ್ನ ಕೊಡುಗೆಯನ್ನು ನೀಡುತ್ತಿದೆ. ಈ ಸಂದರ್ಭದಲ್ಲಿ ಇಂಧನ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳಾದ ಶ್ರೀ ಗೌರವ್ ಗುಪ್ತಾ, MEI ಅಧ್ಯಕ್ಷರಾದ ಶ್ರೀ ಮನೋಹರ್, ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ಶ್ರೀಮತಿ ಅನಿತಾ ಸಿ ಅವರು ಉಪಸ್ಥಿತರಿದ್ದರು.
@EnergyDeptGoK@INCKarnataka@KarnatakaVarthe
ದಿ ಮೈಸೂರು ಎಲೆಕ್ಟ್ರಿಕಲ್ ಇಂಡಸ್ಟ್ರೀಸ್ ಲಿಮಿಟೆಡ್ ವತಿಯಿಂದ ಸರ್ಕಾರಕ್ಕೆ 2025-26ನೇ ಸಾಲಿನ ಮಧ್ಯಂತರ ಡಿವಿಡೆಂಡ್ ಚೆಕ್ ಮೂಲಕ 1 ಕೋಟಿ ರೂಪಾಯಿಗಳನ್ನು ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ @DKShivakumar ಅವರಿಗೆ ಇಂಧನ ಸಚಿವರಾದ ಶ್ರೀ ಕೆ. ಜೆ. ಜಾರ್ಜ್ ಅವರು ವಿಧಾನಸೌಧದಲ್ಲಿ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಶ್ರೀ ಗೌರವ್ ಗುಪ್ತ, ದಿ ಮೈಸೂರು ಎಲೆಕ್ಟ್ರಿಕಲ್ ಇಂಡಸ್ಟ್ರೀಸ್ ಲಿ. ಅಧ್ಯಕ್ಷರಾದ ಶ್ರೀ ಮನೋಹರ್ ಹಾಗೂ ವ್ಯವಸ್ಥಾಪಕ ನಿರ್ದೇಶಕಿ ಅನಿತಾ ಸಿ. ಉಪಸ್ಥಿತರಿದ್ದರು.