🚩 ಫ್ರೀಡಂ ಪಾರ್ಕ್ನಲ್ಲಿ ಸಾವಿರಾರು ಪರವಾನಗಿ ಭೂಮಾಪಕರ ಐತಿಹಾಸಿಕ ಸಮಾವೇಶ!
27 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಭೂಮಾಪಕರ ನ್ಯಾಯಸಮ್ಮತ ಬೇಡಿಕೆಗಳಾದ ಖಾಯಂ ನೇಮಕಾತಿ, ಸಮಾನ ಕೆಲಸಕ್ಕೆ ಸಮಾನ ವೇತನ ಹಾಗೂ ಸೇವಾ ಭದ್ರತೆಗಾಗಿ ಹೋರಾಟ ಮತ್ತಷ್ಟು ಬಲಗೊಂಡಿದೆ.
ಒಗ್ಗಟ್ಟೇ ನಮ್ಮ ಶಕ್ತಿ... ನ್ಯಾಯ ಸಿಗುವವರೆಗೆ ಹೋರಾಟ ನಿರಂತರ! ✊
ಬೆಂಗಳೂರು ಫ್ರೀಡಂ ಪಾರ್ಕ್ನಲ್ಲಿ ಪರವಾನಗಿ ಭೂಮಾಪಕರ ಐತಿಹಾಸಿಕ ಧರಣಿ ಮುಂದುವರಿದಿದೆ. ಖಾಯಂ ನೇಮಕಾತಿ, ಸಮಾನ ಕೆಲಸಕ್ಕೆ ಸಮಾನ ವೇತನ ಹಾಗೂ ಸೇವಾ ಭದ್ರತೆಗಾಗಿ ಸಾವಿರಾರು ಭೂಮಾಪಕರು ಒಗ್ಗಟ್ಟಿನಿಂದ ಹೋರಾಟ ನಡೆಸುತ್ತಿದ್ದಾರೆ. ನಮ್ಮ ನ್ಯಾಯಸಮ್ಮತ ಬೇಡಿಕೆಗಳನ್ನು ಸರ್ಕಾರ ತಕ್ಷಣ ಈಡೇರಿಸಲಿ.
Held a review meeting at Vidhana Soudha with officials of the Revenue Department to assess the implementation of various departmental schemes, administrative progress, and public service delivery. Following a comprehensive review, directions were issued for the expeditious disposal of all pending files.
To improve the efficiency of the Revenue Department, greater responsibilities should be entrusted to Assistant Commissioners (ACs).
A meeting of licensed surveyors should be convened to hear their grievances and demands. Necessary steps must be taken to address their service-related and professional concerns and ensure their timely resolution.
The recruitment process for various vacant posts in the Revenue Department must be accelerated. There should be no delay in the promotion of officers and staff. The seniority list should be published at the earliest, and the promotion process should be completed transparently and in accordance with the prescribed rules.
Officials have been directed to ensure that all online and public services of the department, including the e-Pauti Khata system, are delivered within the stipulated timelines. Efficiency and transparency in service delivery must be maintained to ensure that citizens are not required to make unnecessary visits to government offices.
District- and taluk-level officials must respond promptly to public grievances. Continuous monitoring should be undertaken to reduce delays in the disposal of land records, khata transfers, survey operations, mutation cases, and other revenue-related services.
Officials have also been instructed to regularly review the progress of all departmental activities and remain focused on achieving targets. Administrative processes should be further expedited to ensure better service delivery to the public.
ಕಂದಾಯ ಇಲಾಖೆಯ ವಿವಿಧ ಯೋಜನೆಗಳು, ಆಡಳಿತಾತ್ಮಕ ಪ್ರಗತಿ ಹಾಗೂ ಸಾರ್ವಜನಿಕ ಸೇವೆಗಳ ಅನುಷ್ಠಾನದ ಕುರಿತಂತೆ ಇಲಾಖೆಯ ಅಧಿಕಾರಿಗಳೊಂದಿಗೆ ವಿಧಾನಸೌಧದಲ್ಲಿ ಸಭೆ ನಡೆಸಿದೆ. ಸಮಗ್ರ ಪರಿಶೀಲನೆ ನಡೆಸಿ, ಬಾಕಿ ಉಳಿದಿರುವ ಕಡತಗಳನ್ನು ಶೀಘ್ರ ವಿಲೇವಾರಿ ಮಾಡುವಂತೆ ನಿರ್ದೇಶನ ನೀಡಿದೆ.
ಕಂದಾಯ ಇಲಾಖೆಯ ಕಾರ್ಯಕ್ಷಮತೆ ಹೆಚ್ಚಿಸಲು ಸಹಾಯಕ ಆಯುಕ್ತರಿಗೆ (AC) ಹೆಚ್ಚಿನ ಜವಾಬ್ದಾರಿ ನೀಡಬೇಕು.
ಪರವಾನಗಿ ಭೂಮಾಪಕರ ಸಭೆಯನ್ನು ಕರೆದು ಅವರ ಅಹವಾಲುಗಳು ಹಾಗೂ ಬೇಡಿಕೆಗಳನ್ನು ಆಲಿಸಬೇಕು. ಭೂಮಾಪಕರ ಸೇವಾ ಹಾಗೂ ವೃತ್ತಿಪರ ಸಮಸ್ಯೆಗಳ ಪರಿಹಾರಕ್ಕೆ ಅಗತ್ಯ ಕ್ರಮ ಕೈಗೊಂಡು, ತ್ವರಿತವಾಗಿ ಇತ್ಯರ್ಥಪಡಿಸಬೇಕು.
ಕಂದಾಯ ಇಲಾಖೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯನ್ನು ವೇಗಗೊಳಿಸಬೇಕು. ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಬಡ್ತಿ ನೀಡುವ ಪ್ರಕ್ರಿಯೆಯಲ್ಲಿ ಯಾವುದೇ ರೀತಿಯ ವಿಳಂಬ ಉಂಟಾಗಬಾರದು. ಜೇಷ್ಠತಾ ಪಟ್ಟಿಯನ್ನು ಶೀಘ್ರ ಪ್ರಕಟಿಸಿ, ನಿಯಮಾನುಸಾರ ಪಾರದರ್ಶಕವಾಗಿ ಬಡ್ತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು.
ಇ-ಪೌತಿ ಖಾತೆ ಸೇರಿದಂತೆ ಇಲಾಖೆಯ ಎಲ್ಲ ಆನ್ಲೈನ್ ಮತ್ತು ಸಾರ್ವಜನಿಕ ಸೇವೆಗಳನ್ನು ನಿಗದಿತ ಕಾಲಮಿತಿಯೊಳಗೆ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದೆ. ನಾಗರಿಕರು ಕಚೇರಿಗಳಿಗೆ ಅನಗತ್ಯವಾಗಿ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗದಂತೆ ಸೇವೆಗಳ ವಿತರಣೆಯಲ್ಲಿ ದಕ್ಷತೆ ಮತ್ತು ಪಾರದರ್ಶಕತೆ ಕಾಪಾಡಬೇಕು.
ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಜನಸಾಮಾನ್ಯರ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸಬೇಕು. ಭೂ ದಾಖಲೆ, ಖಾತೆ ಬದಲಾವಣೆ, ಸರ್ವೇ ಕಾರ್ಯ, ಮ್ಯೂಟೇಷನ್ ಹಾಗೂ ಇತರೆ ಕಂದಾಯ ಸೇವೆಗಳ ವಿಲೇವಾರಿಯಲ್ಲಿ ವಿಳಂಬ ಕಡಿಮೆ ಮಾಡುವ ನಿಟ್ಟಿನಲ್ಲಿ ನಿರಂತರ ಮೇಲ್ವಿಚಾರಣೆ ನಡೆಸಬೇಕು.
ಇಲಾಖೆಯ ಎಲ್ಲಾ ಕಾರ್ಯಗಳ ಪ್ರಗತಿಯನ್ನು ನಿಯಮಿತವಾಗಿ ಪರಿಶೀಲಿಸಿ, ಗುರಿ ಸಾಧನೆಯತ್ತ ಗಮನ ಹರಿಸಬೇಕು. ಸಾರ್ವಜನಿಕರಿಗೆ ಉತ್ತಮ ಸೇವೆ ಒದಗಿಸುವ ಉದ್ದೇಶದಿಂದ ಆಡಳಿತಾತ್ಮಕ ಕಾರ್ಯಗಳಿಗೆ ಮತ್ತಷ್ಟು ವೇಗ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದೆ.
#RevenueDepartment #review #meeting #vidhanasoudha
ಭೂಮಾಪಕರ ಧರಣಿಯಿಂದ ರೈತರಿಗೆ ಬೇಕಾದ ಅಗತ್ಯ ಸೇವೆ ಸಿಗದೇ ಪರದಾಡುತ್ತಿದ್ದಾರೆ. ಇತ್ತ ಸರ್ಕಾರ ಅವರ ಸಮಸ್ಯೆಗಳನ್ನು ಆಲಿಸಲು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ರಾಜ್ಯದಲ್ಲಿ 45% ರಷ್ಟು ಭೂ ಮಾಪಕರ ಹುದ್ದೆಗಳು ಖಾಲಿ ಇದೆ. ಈ ಬೇಡಿಕೆಯನ್ನು ಪೂರೈಸಲು ಸರ್ಕಾರ ಸುಮಾರು 4,500 ಖಾಸಗಿ ಭೂಮಾಪಕರನ್ನು (private licensed land surveyors) ನಿಯೋಜಿಸಿದೆ. ಖಾಸಗಿ ಭೂ ಮಾಪಕರ ಪ್ರತಿಭಟನೆಯಿಂದ 5.78 ಲಕ್ಷ ಸರ್ವೇ ಅರ್ಜಿಗಳು ಬಾಕಿ ಉಳಿದಿವೆ.
ಮ್ಯುಟೇಷನ್ ಪೂರ್ವ ನಕ್ಷೆ ತಯಾರಿಕೆ, ತತ್ಕಾಲ್ ಪೋಡಿ ಅಳತೆ, ದರಖಾಸ್ತು ಪೋಡಿ, ಮರುಭೂಮಾಪನ, ಕೆರೆ ಅಳತೆ, ನಾಳ, ವಿದ್ಯುತ್ ಮಾರ್ಗ, ಹೆದ್ದಾರಿ, ಮುಜರಾಯಿ ದೇವಸ್ಥಾನಗಳ ಭೂಮಾಪನವನ್ನು ಇವರು ಮಾಡುತ್ತಿದ್ದಾರೆ. ರೈತರು ಭೂ ಹಕ್ಕು ಸಂಬಂಧಿತ ಪ್ರಕ್ರಿಯೆಗಳು ಇವರ ಸೇವೆಯ ಮೇಲೆ ಅವಲಂಬಿತವಾಗಿದೆ.
ಜಮೀನು ಪೋಡಿ ಮಾಡುವುದು, ನಕ್ಷೆ ಸಿದ್ದಪಡಿಸುವುದು, ಖರೀದಿ ನಕ್ಷೆ, ವಿಭಾಗ ನಕ್ಷೆ, ದಾನಪತ್ರ ನಕ್ಷೆ ಹದ್ದುಬಸ್ತು, ದರಖಾಸ್ತು, 11 E ಕೆಲಸಗಳನ್ನು ಭೂ ಮಾಪಕರು ಮಾಡುತ್ತಿದ್ದಾರೆ. ಸರ್ವೇ ಕೆಲಸ ಇಲ್ಲದ ಸಮಯದಲ್ಲಿ ದಾಖಲೆಗಳ ಡಿಜಟಲೀಕರಣ, ನಿರ್ವಹಣೆ, ಹಿಸ್ಸಾ ತಿದ್ದುಪಡಿ, ಜಾಮೀನು ಒಟ್ಟುಗೂಡಿಸುವಿಕೆ ಕೆಲಸವನ್ನು ಸರ್ಕಾರ ನೀಡುತ್ತದೆ.
ಭೂ ಮಾಪಕರ ಬೇಡಿಕೆಗಳಾಗಿರುವ ಗೌರವಯುತ ಬದುಕು ಮತ್ತು ಸೇವಾ ಭದ್ರತೆಯನ್ನು ಸರ್ಕಾರ ಕೂಡಲೇ ನೀಡಬೇಕು. ಮಾನ್ಯ ಮುಖ್ಯ ಮಂತ್ರಿಗಳಾದ @CMofKarnataka ನವರು ಈ ಹಿಂದೆ ಪ್ರತಿಪಕ್ಷ ನಾಯಕರಾಗಿದ್ದಾಗ ಭೂ ಮಾಪಕರ ಪರ ಧ್ವನಿ ಎತ್ತಿದ್ದರು, ಈಗ 'ಜಾಣ ಕಿವುಡು' ಪ್ರದರ್ಶಿಸುತ್ತಿದ್ದಾರೆ. ಭೂ ಮಾಪಕರ ಧರಣಿಯಿಂದ ಜಮೀನು ಸರ್ವೆ ವಿವಾದಗಳು ನಿರ್ಧಾರವಾಗದೆ ರೈತರು ಸರ್ವೇ ಆಗದ ದಾಖಲಾತಿ ಪಡೆಯದ ಕಾರಣ ಅವರಿಗೆ ಬೆಳೆ ಸಾಲ ಸಿಗುತ್ತಿಲ್ಲ.
ಗಾಯದ ಮೇಲೆ ಬರೆ ಇಟ್ಟಂತೆ ಸುಮಾರು 300 ಪ್ರತಿಭಟನಾ ನಿರತ ಭೂ ಮಾಪಕರ ಪರವಾನಗಿಯನ್ನು ರಾತ್ರೋ ರಾತ್ರಿ ಸರ್ಕಾರ ರದ್ದುಗೊಳಿಸಿದೆ. ಮುಖ್ಯ ಮಂತ್ರಿಗಳು ಕೂಡಲೇ ಗಮನ ವಹಿಸಿ ಇವರ ಬೇಡಿಕೆಗಳಿಗೆ ನ್ಯಾಯಯುತವಾದ ಪರಿಹಾರವನ್ನು ಆದ್ಯತೆಯ ಮೇಲೆ ನೀಡಲಿ.
@tv9kannada I @AsianetNewsSN I @Vijayavani_Digi I @Vijaykarnataka I @HosadiganthaWeb I @krishnabgowda I @KannadaRepublic I @AKSSAofficial
“‘ಪರವಾನಗಿ ಭೂ ಮಾಪಕರನ್ನು ಖಾಯಂ ಮಾಡುತ್ತೇವೆ’ ಎಂದು ಭರವಸೆ ನೀಡಿದ ಸರ್ಕಾರವೇ…
ಇಂದು ಕೊಟ್ಟ ಮಾತನ್ನೇ ಮರೆತಿರಾ?
ನಿಮ್ಮ ಒಂದು ಮಾತು ನಂಬಿ 6000 ಕುಟುಂಬಗಳು ಬದುಕು ಕಟ್ಟಿಕೊಂಡಿವೆ…
ಆ ಭರವಸೆಯನ್ನೇ ಈಗ ಕಣ್ಣೀರಾಗಿಸಬೇಡಿ..
@krishnabgowda@siddaramaiah
“ಮಾನ್ಯ ಸರ್ಕಾರವೇ, ವರ್ಷಗಳ ಸೇವೆ ಸಲ್ಲಿಸಿದ ಪರವಾನಗಿ ಭೂ ಮಾಪಕರ ಬದುಕು ಉಳಿಸಿ.
ನಮ್ಮ ಕುಟುಂಬಗಳ ಭವಿಷ್ಯ ಇಂದು ನಿಮ್ಮ ನಿರ್ಧಾರಕ್ಕೆ ಕಟ್ಟಿಹಾಕಲಾಗಿದೆ.
ನಾವು ಹುದ್ದೆಗಾಗಿ ಅಲ್ಲ,
ಬದುಕಿನ ಭದ್ರತೆಗೆ ಮನವಿ ಮಾಡುತ್ತಿದ್ದೇವೆ.
ಪರವಾನಗಿ ಭೂ ಮಾಪಕರಿಗೆ ಶಾಶ್ವತ ನ್ಯಾಯ ನೀಡಿ.”
#JusticeForLicensedSurveyors@krishnabgowda 🙏