ಕರ್ನಾಟಕದಲ್ಲಿ ಕೇಂದ್ರ ಸರ್ಕಾರಿ ಇಲಾಖೆಗಳಲ್ಲಿ ಕನ್ನಡವೇ ಆಡಳಿತ ಭಾಷೆಯಾಗಬೇಕು. ಅಂತಾರಾಜ್ಯ ವ್ಯವಹಾರಗಳೂ ಕನ್ನಡದಲ್ಲೇ ಆಗಬೇಕು. ಹಿಂದಿ ಹೇರಿಕೆಯನ್ನು ಪೂರ್ಣವಾಗಿ ತಿರಸ್ಕರಿಸಿ!
#GoBackGoverner
ಭಾಷೆ ಕೇವಲ ಮಾತಲ್ಲ
ಅದು ನಮ್ಮ ಸಂಸ್ಕೃತಿ, ನಮ್ಮ ಇತಿಹಾಸ
ಅದನ್ನು ನಾಶ ಮಾಡಲು ಯಾರಿಗೂ ಹಕ್ಕಿಲ್ಲ
ನಾವು ಎದ್ದು ನಿಲ್ಲುವ ಸಮಯ ಬಂದಿದೆ
ಕನ್ನಡಕ್ಕಾಗಿ ಹೋರಾಟ ಮುಂದುವರಿಯುತ್ತದೆ
#GoBackGoverner#ಬೆಳಗಾವಿ_ರಾಯಣ್ಣ#ಹಿಂದಿಹೇರಿಕೆಅಂತ್ಯ
ಕರ್ನಾಟಕದ ಮೊದಲ ರಾಜ್ಯಪಾಲರಾಗಿದ್ದವರು ಜಯಚಾಮರಾಜೇಂದ್ರ ಒಡೆಯರ್ ಅವರು. ಮೈಸೂರು ಸಂಸ್ಥಾನದ ಕೊನೆಯ ಮಹಾರಾಜರಾಗಿದ್ದ ಅವರು ಕನ್ನಡ ನಾಡಿನ ಸಂಸ್ಕೃತಿ, ಕಲೆ, ಸಾಹಿತ್ಯದ ದೊಡ್ಡ ಪೋಷಕರಾಗಿದ್ದವರು. ಕರ್ನಾಟಕದಲ್ಲಿ ಆಗಿಹೋದ ಟಿ.ಎನ್.ಚತುರ್ವೇದಿ, ಖುರ್ಷಿದ್ ಆಲಂ ಖಾನ್, ವಿ.ಎಸ್.ರಮಾದೇವಿ ಅವರುಗಳು ಈ ನಾಡಿನ ಅಸ್ಮಿತೆಯನ್ನು ಗೌರವಿಸಿ ಕನ್ನಡಿಗರ ಪ್ರೀತಿ ಗೆದ್ದಿದ್ದರು.
ಕನ್ನಡಿಗರ ದೌರ್ಭಾಗ್ಯವೆಂಬಂತೆ ಈ ಬೆರಳೆಣಿಕೆಯ ರಾಜ್ಯಪಾಲರನ್ನು ಹೊರತುಪಡಿಸಿದರೆ ರಾಷ್ಟ್ರೀಯ ಪಕ್ಷಗಳ ಕೈಗೊಂಬೆ ರಾಜಕಾರಣಿಗಳನ್ನು ರಾಜ್ಯಪಾಲರನ್ನಾಗಿ ನೇಮಿಸಲಾಗಿದೆ. ರಾಜ್ಯಪಾಲರುಗಳು ಪಕ್ಷ ರಾಜಕಾರಣದಿಂದ ದೂರ ಉಳಿಯಬೇಕು ಎಂಬುದು ಸಾಂವಿಧಾನಿಕ, ನೈತಿಕ ಕರ್ತವ್ಯ. ಆದರೆ ತಾವು ಪ್ರತಿನಿಧಿಸುತ್ತಿದ್ದ ರಾಜಕೀಯ ಪಕ್ಷ, ತನ್ನನ್ನು ನೇಮಕ ಮಾಡಿದ ಸರ್ಕಾರದ ಏಜೆಂಟರಂತೆ ಇವರು ವರ್ತಿಸಿದ್ದೇ ಹೆಚ್ಚು.
ಹಿಂದೆ ರಾಜ್ಯಪಾಲರಾಗಿದ್ದ ವಜೂಬಾಯಿ ವಾಲಾ ಎಂಬುವವರು ರಾಜಭವನವನ್ನು ಗುಜರಾತ್ ಭವನವನ್ನಾಗಿ ಮಾಡಿಕೊಂಡಿದ್ದರು. ಈಗ ಮಧ್ಯಪ್ರದೇಶದವರಾದ ತಾವರ್ ಚಂದ್ ಗೆಹ್ಲೋಟ್ ತಮಗೆ ಬೇಡವಾದ ವಿಷಯಕ್ಕೆ ತಲೆಹಾಕಿ ಕನ್ನಡಿಗರ ಆಕ್ರೋಶಕ್ಕೆ ಗುರಿಯಾಗಿದ್ದಾರೆ.
ರಾಜ್ಯ ಸರ್ಕಾರ ಎಸ್ ಎಸ್ ಎಲ್ ಸಿ ಪರೀಕ್ಷೆಗಳಲ್ಲಿ ತೃತೀಯ ಭಾಷೆಗೆ ಗ್ರೇಡಿಂಗ್ ವ್ಯವಸ್ಥೆ ಮಾಡಿದರೆ ರಾಜ್ಯಪಾಲರಿಗೇನು ಸಮಸ್ಯೆ? ಜನರಿಂದ ಆಯ್ಕೆಯಾದ ರಾಜ್ಯ ಸರ್ಕಾರ ಕರ್ನಾಟಕದ ಶಾಲಾಮಕ್ಕಳ ಮೇಲಿನ ಹೊರೆಯನ್ನು ಕಡಿಮೆ ಮಾಡಿದರೆ ರಾಜ್ಯಪಾಲರ ಗಂಟೇನು ಹೋಗುತ್ತದೆ? ಸರ್ಕಾರ ತನ್ನ ನೀತಿಯನ್ನು ಪುನರ್ ಪರಿಶೀಲಿಸಲಿ ಎಂದು ಅವರು ಯಾಕೆ ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿಗಳಿಗೆ ಪತ್ರ ಬರೆಯುತ್ತಾರೆ? ಇದೇ ಕಾಳಜಿಯನ್ನು ಅವರು ತಮ್ಮ ತವರು ರಾಜ್ಯ ಮಧ್ಯಪ್ರದೇಶದ ಮಕ್ಕಳ ಮೇಲೆ ಏಕೆ ತೋರುವುದಿಲ್ಲ. ಅವರು ಅಲ್ಲಿಯೂ ಮಕ್ಕಳಿಗೆ ಮೂರನೇ ಭಾಷೆಯನ್ನು ಅಂಕಗಳಿಗೆ ಕಡ್ಡಾಯ ಮಾಡಬೇಕಲ್ಲವೇ? ಅಲ್ಲಿ ಕನ್ನಡವನ್ನು ಕಡ್ಡಾಯವಾಗಿ ಕಲಿಸಲಿ ನೋಡೋಣ.
ನಾವು ಹಿಂದೆ ಬ್ರಿಟಿಷ್ ಸಾಮ್ರಾಜ್ಯಶಾಹಿಯ ಅಡಿಯಾಳಾಗಿದ್ದೆವು. ಈಗ ಹಿಂದಿ ಸಾಮ್ರಾಜ್ಯಶಾಹಿಯ ಗುಲಾಮರನ್ನಾಗಿಸಲು ಯತ್ನಿಸಲಾಗುತ್ತಿದೆ. ಈಗ ಕರ್ನಾಟಕ ಎಚ್ಚೆತ್ತುಕೊಂಡಿದೆ. ಇನ್ನು ಈ ಷಡ್ಯಂತ್ರಗಳಿಗೆ ನಾವು ಬಲಿಯಾಗುವುದಿಲ್ಲ.
ಕನ್ನಡ ವಿರೋಧಿ ಧೋರಣೆ ತಳೆದಿರುವ ತಾವರ್ ಚಂದ್ ಗೆಹ್ಲೋಟ್ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಹೋಗಲಿ, ಅಥವಾ ಅವರನ್ನು ನೇಮಿಸಿರುವ ಕೇಂದ್ರ ಸರ್ಕಾರ ಅವರನ್ನು ಹಿಂದಕ್ಕೆ ಕರೆಯಿಸಿಕೊಳ್ಳಲಿ. ಕರ್ನಾಟಕದಲ್ಲಿ ಕನ್ನಡದ್ರೋಹಿಗಳಿಗೆ ಯಾವುದೇ ಜಾಗವಿಲ್ಲ.
- ಟಿ.ಎ.ನಾರಾಯಣಗೌಡ
#GoBackGoverner
ಅಕ್ರಮ ನುಸುಳಿಕೆಯನ್ನು ಯಾವತ್ತಿಗೂ ಸಹಿಸಲು ಸಾಧ್ಯವಿಲ್ಲ.
ಬಾಂಗ್ಲಾದೇಶದಿಂದ ನಡೆಯುತ್ತಿರುವ ಅಕ್ರಮ ವಲಸೆ
ನಾಡ ಭದ್ರತೆ, ಆರ್ಥಿಕತೆ ಮತ್ತು ಸಾಮಾಜಿಕ ಸಮತೋಲನಕ್ಕೆ ನೇರ ಬೆದರಿಕೆ.
ಕಾನೂನು ಉಲ್ಲಂಘನೆ ಮಾಡುವವರಿಗೆ
ಮಾನವೀಯತೆ ಎಂಬ ನೆಪದಲ್ಲಿ ರಕ್ಷಣೆ ಕೊಡಬಾರದು.
ಗಡಿಗಳಲ್ಲಿ ಕಠಿಣ ನಿಯಂತ್ರಣ
ಮತ್ತು ಅಕ್ರಮ ವಲಸಿಗರ ವಿರುದ್ಧ ತಕ್ಷಣದ ಕ್ರಮ ಅಗತ್ಯ, ಇಲ್ಲವಾದಲ್ಲಿ ದಕ್ಷಿಣ ರಾಜ್ಯಗಳ ವಿನಾಶ ಖಂಡಿತ.
ಇದು ದ್ವೇಷವಲ್ಲ, ಇದು ನಾಡ ಆತ್ಮರಕ್ಷೆ, ಒಡನಾಡಿಗಳೆ ಅಕ್ರಮ ವಲಸೆ ವಿರುದ್ದ ಕೂಗೆಬ್ಬಿಸಿ ಕರುನಾಡನ್ನ ಕಾಪಾಡಿ!.
🗓️ ನಾಳೆ 27, ಶನಿವಾರ. ರಾತ್ರಿ 09 ಗಂಟೆಗೆ.
#StopBangladeshiMigrants
#ನಮ್ಮನಾಡು_ನಮ್ಮಆಳ್ವಿಕೆ
ಮೊಟ್ಟಮೊದಲ ಬಾರಿಗೆ ಕನ್ನಡಕ್ಕೆ ಅಂತಾರಾಷ್ಟ್ರೀಯ ಬೂಕರ್ ಪ್ರಶಸ್ತಿಯ ಹಿರಿಮೆ ತಂದ, ಕನ್ನಡದ ಕಂಪನ್ನು ಜಗದಗಲ ಪಸರಿಸಿದ ಹೆಮ್ಮೆಯ ಸಾಹಿತಿ ಶ್ರೀಮತಿ ಬಾನು ಮುಷ್ತಾಕ್ ಮತ್ತು ಅನುವಾದಕಿ ಶ್ರೀಮತಿ ದೀಪಾ ಭಾಸ್ತಿ ಇಬ್ಬರಿಗೂ ಅಭಿನಂದನೆಗಳು! ಕನ್ನಡದ 'ಹಸೀನಾ ಮತ್ತು ಇತರ ಕಥೆಗಳು' ಕೃತಿಯ ಇಂಗ್ಲೀಷ್ ಅನುವಾದ ಹಾರ್ಟ್ ಲ್ಯಾಂಪ್ ಕೃತಿಗೆ ಈ ಪ್ರಶಸ್ತಿ ಲಭಿಸಿರುವುದು ದೇಶ ಮತ್ತು ಸಮಸ್ತ ಕನ್ನಡಿಗರಿಗೆ ಹೆಮ್ಮೆಯ ಕ್ಷಣವಾಗಿದೆ.
@BMushtaqAuthor
#ಕೆಂಪೇಗೌಡಅಂತಾರಾಷ್ಟ್ರೀಯವಿಮಾನನಿಲ್ದಾಣಬೆಂಗಳೂರು #ಬಾನುಮುಷ್ತಾಕ್ #ದೀಪಾಭಾಸ್ತಿ #ಕನ್ನಡ #ಅಂತಾರಾಷ್ಟ್ರೀಯಬೂಕರ್ಪ್ರಶಸ್ತಿ
MSIL ಉತ್ಪನ್ನಗಳಿಗೆ ಹೊಸ ರೂಪ
ವಿದ್ಯಾ-ಲೇಖಕ್ ನೋಟ್ ಬುಕ್ಸ್: ಹಳೆಯ ನಮೂನೆಗೆ ಮರುಜೀವ ನೀಡಿ ಐತಿಹಾಸಿಕ ಸ್ಥಳಗಳು, ಮಹಾಪುರುಷರು, ಮತ್ತು ವಿಜ್ಞಾನಿಗಳ ಥೀಮ್ನಲ್ಲಿ ಹೊರತರಲಾಗುವುದು.
ಚಿಟ್ ಫಂಡ್ಸ್ : ವಾರ್ಷಿಕ ರೂ. 250 ಕೋಟಿ ವಹಿವಾಟು ನಡೆಸುತ್ತಿದ್ದು, ಮುಂದಿನ 5ವರ್ಷಗಳಲ್ಲಿ ರೂ. 5,000 ಕೋಟಿಗೆ ಹೆಚ್ಚಿಸಲಾಗುವುದು.
ಟೂರ್ಸ್ & ಟ್ರಾವಲ್ಸ್: ಪ್ರವಾಸೋದ್ಯಮದ ಪ್ರೋತ್ಸಾಹಕ್ಕಾಗಿ ಪ್ಯಾಕೇಜ್ ಟೂರ್ ಸೇವೆಗಳನ್ನು ಆರಂಭಿಸಲಾಗುತ್ತಿದ್ದು, ಶೀಘ್ರದಲ್ಲೇ ಮುಖ್ಯಮಂತ್ರಿಗಳಿಂದ ಈ ಯೋಜನೆಗೆ ಅಧಿಕೃತ ಚಾಲನೆ ದೊರೆಯಲಿದೆ.
#MSIL @siddaramaiah@ucpshetty
ನನ್ನ ರಾಜಕೀಯ ಏಳಿಗೆ ಬಯಸಿ, ಬಬಲೇಶ್ವರ ಮತ ಕ್ಷೇತ್ರದ ತಿಕೋಟಾ ತಾಲ್ಲೂಕಿನ ಬಾಬಾನಗರ ಗ್ರಾಮದ ನಿವಾಸಿಯಾದ ಶ್ರೀ ರಾಜಕುಮಾರ ರವೀಂದ್ರ ಹೊನವಾಡ ಅವರು ಬಾಬಾನಗರದಿಂದ ಶಬರಿಮಲೆಯವರೆಗೂ ಸುಮಾರು 1,200 ಕಿ.ಮೀ. ಪಾದಯಾತ್ರೆ ಕೈಗೊಳ್ಳುತ್ತಾ ಬರುತ್ತಿದ್ದಾರೆ. ಈ ಬಾರಿಯೂ ಅವರು ಯಾತ್ರೆ ಮುಗಿಸಿ ಬಂದು ನನ್ನನ್ನು ಭೇಟಿಯಾಗಿ ಶಬರಿಮಲೆ ಪ್ರಸಾದ ನೀಡಿದರು. ಅವರ ಛಲ, ಭಕ್ತಿ ಮತ್ತು ಧೈರ್ಯ ಪ್ರೇರಣಾತ್ಮಕ. ಇಂತಹ ಅಭಿಮಾನಿಗಳ ಹೃದಯಸ್ಪರ್ಶಿ ಪ್ರೀತಿಯೇ ನಮ್ಮ ಬಲ!
ಶ್ರೀ ಸಿದ್ದಲಿಂಗೇಶ್ವರ ಜಯಂತೋತ್ಸವ ಹಾಗೂ ತೋಂಟದ ಸಿದ್ಧಲಿಂಗ ಶ್ರೀ ಪ್ರಶಸ್ತಿ ಪ್ರದಾನ ಸಮಾರಂಭ
ಶ್ರೀ ಸುತ್ತೂರು ಮಠದ ಪರಮಪೂಜ್ಯ ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳ ಹಾಗೂ ಶ್ರೀ ಸಿದ್ದಗಂಗಾ ಮಠದ ಪರಮಪೂಜ್ಯ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ಬೆಂಗಳೂರಿನ ವಿಜಯನಗರದಲ್ಲಿನ ಶ್ರೀ ಬಸವೇಶ್ವರ ಸುಜ್ಞಾನ ಮಂಟಪದಲ್ಲಿ ಇಂದು ನಡೆದ ಶ್ರೀ ಸಿದ್ದಲಿಂಗೇಶ್ವರ ಜಯಂತಿ ಉತ್ಸವ ಹಾಗೂ ತೋಂಟದ ಸಿದ್ಧಲಿಂಗ ಶ್ರೀ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪಾಲ್ಗೊಂಡು ಗುರು ಹಿರಿಯರೊಂದಿಗೆ ಕಾರ್ಯಕ್ರಮ ಉದ್ಘಾಟಿಸಿ 'ಯೋಗಸ್ಥ (5ನೇ ಆವೃತ್ತಿ)' ಕೃತಿ ಬಿಡುಗಡೆಗೊಳಿಸಿದೆ.
ಕಾರ್ಯಕ್ರಮದ ಕೇಂದ್ರ ಬಿಂದು ಕನಕಪುರ ದೇಗುಲ ಮಠದ ಪರಮಪೂಜ್ಯ ಶ್ರೀ ಮುಮ್ಮಡಿ ನಿರ್ವಾಣ ಮಹಾಸ್ವಾಮಿಗಳಿಗೆ ತೋಂಟದ ಸಿದ್ಧಲಿಂಗ ಶ್ರೀ ಪ್ರಶಸ್ತಿ ಪ್ರಧಾನ ಮಾಡಲಾಯಿತು.
ಬೇಲಿ ಮಠದ ಪರಮಪೂಜ್ಯ ಶ್ರೀ ಚರಮೂರ್ತಿ ಶಿವರುದ್ರ ಸ್ವಾಮಿಗಳು, ಮಾಗಡಿ ತಾಲೂಕು ಗದ್ದುಗೆ ಮಠದ ಪರಮಪೂಜ್ಯ ಶ್ರೀ ಮಹಾಂತ ಸ್ವಾಮಿಗಳು, ನೆಲಮಂಗಲದ ಪವಾಡ ಶ್ರೀ ಬಸವೇಶ್ವರ ಮಠದ ಪರಮಪೂಜ್ಯ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳು, ಬೆಟ್ಟಳ್ಳಿ ಮಠದ ಪರಮಪೂಜ್ಯ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳು, ಸಿದ್ದಗಂಗಾ ಮಠದ ಕಿರಿಯ ಶ್ರೀಗಳಾದ ಶ್ರೀ ಶಿವಸಿದ್ದೇಶ್ವರ ಸ್ವಾಮಿಗಳು, ಕೇಂದ್ರ ಸಚಿವರಾದ ಶ್ರೀ ಸೋಮಣ್ಣ ರವರ ಧರ್ಮಪತ್ನಿ ಶ್ರೀಮತಿ ಶೈಲಜಾ ಸೋಮಣ್ಣ, ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶ್ರೀ ಸೋಮಶೇಖರ್ ಸೇರಿದಂತೆ ಅನೇಕ ಗುರು ಹಿರಿಯರು ವೇದಿಕೆ ಅಲಂಕರಿಸಿದ್ದರು.
ಕಾರ್ಯಕ್ರಮದಲ್ಲಿ ಸಮಾಜದ ಹಿರಿಯರು-ಬಂಧುಗಳು, ಬಸವ ಅನುಯಾಯಿಗಳು ಅಸಂಖ್ಯಾತ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.