ಶ್ರೀಯುತ ಗೃಹ ಸಚಿವರೇ ಮತ್ತು ಕೆಇಎ ಎಂಡಿ ಪ್ರಸನ್ನ ಸರ್ ಅವರೇ ಸೆಪ್ಟೆಂಬರ್ 22 ರ ನಂತರ 1 ವಾರ ದಿಂದ 15 ದಿನಗಳ ಒಳಗಾಗಿ 402 PSI ಪರೀಕ್ಷೆ ಮಾಡಬಹುದು ಸರ್ ಪ್ಲಿಜ್ 🙏ದಯವಿಟ್ಟು ನೀವು ಮನಸ್ಸು ಮಾಡಿದ್ರೇ ನಿಮ್ಮಿಂದ ಮಾತ್ರ ಸಾಧ್ಯ ಸರ್🙏
ವಿದ್ಯಾರ್ಥಿಗಳ ಬಹುದಿನದ ಬೇಡಿಕೆ ಈಡೇರಿದೆ ಮಸೂದೆ ಮಂಡಿಸಿದ @INCKarnataka ಸರ್ಕಾರಕ್ಕೂ ಹಾಗೂ ಕಾರಣಕರ್ತರಾದ @siddaramaiah@PriyankKharge@DrParameshwara ಅವರಿಗೂ ಹಾಗೂ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಬೆಂಬಲಿಸಿದ ಎಲ್ಲಾ ಜನಪ್ರತಿನಿಧಿಗಳಿಗೂ ಹೃದಯಪೂರ್ವಕ ಧನ್ಯವಾದಗಳು
ಕಾಯ್ದೆ ಪರಿಣಾಮಕಾರಿಯಾಗಿ ಜಾರಿಯಾಗಲಿ
ಉದ್ಯೋಗ ಆಕಾಂಕ್ಷಿಗಳಿಗೆ ಅನ್ಯಾಯವಾಗದಂತೆ ರಾಜ್ಯ ಸರ್ಕಾರ ಹಾಗೂ ಕೆಪಿಎಸ್ಸಿ ಎಚ್ಚರ ವಹಿಸಬೇಕು..
ಗ್ರೂಪ್ ಬಿ ಹುದ್ದೆಗಳ ಸ್ಪರ್ಧಾತ್ಮಕ ಪರೀಕ್ಷೆಗಳ ಗೊಂದಲ ನಿವಾರಿಸುವುದರ ಜೊತೆಗೆ ಸೆಪ್ಟಂಬರ್ 22ರಂದು ನಡೆಸಲು ಉದ್ದೇಶಿಸಿರುವ ಪಿಎಸ್ಐ ಪರೀಕ್ಷೆಯನ್ನು ಮುಂದೂಡಬೇಕು...
@INCKarnataka@siddaramaiah@secretarykpsc
#KPSCಮರುಪರೀಕ್ಷೆ
#KPSCಮೋಸ
#KPSC
@siddaramaiah@DrParameshwara
ಸೆಪ್ಟೆಂಬರ್ 22ರಂದು ಪಿಎಸ್ಐ 402 ಪರೀಕ್ಷೆ ನಿಗದಿಯಾಗಿದೆ ಅದೇ ದಿನ ನಮ್ಮ ನಾಡಿನ ಈ ಕೆಳಕಂಡ ವಿದ್ಯಾರ್ಥಿಗಳು ಯುಪಿಎಸ್ಸಿ ಮುಖ್ಯ ಪರೀಕ್ಷೆಯನ್ನು ತೆಗೆದುಕೊಂಡಿದ್ದಾರೆ
ಯುಪಿಎಸ್ಸಿ ಪರೀಕ್ಷೆ ತೆಗೆದುಕೊಳ್ಳಿ ಎಂದು ಪ್ರೋತ್ಸಾಹಿಸಿ ಅವಕಾಶ ನೀಡದಿದ್ದರೆ ಹೇಗೆ ?
ಸರ್ಕಾರವೇ ಕನಸುಗಳನ್ನು ಕೊಲ್ಲುತ್ತಿದೆ!
ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುತ್ತಿರುವ ರಾಜ್ಯದ ಪ್ರತಿಭಾವಂತ ಅಭ್ಯರ್ಥಿಗಳು ಇಂದು ನನ್ನನ್ನು ಭೇಟಿ ಮಾಡಿ, ಸೆ.22ರಂದು ಯುಪಿಎಸ್ಸಿ ಹಾಗೂ 402 ಪಿಎಸ್ಐ ಹುದ್ದೆಗಳಿಗೆ ಲಿಖಿತ ಪರೀಕ್ಷೆ ಒಂದೇ ದಿನ ನಿಗದಿ ಮಾಡಲಾಗಿದ್ದು, ಈ ಎರಡು ಪರೀಕ್ಷೆಗೆ ಹಲವು ವರ್ಷಗಳಿಂದ ರಾತ್ರಿ ಹಗಲು ತಯಾರಿ ನಡೆಸಿದ ಅಭ್ಯರ್ಥಿಗಳಿಗೆ ಅನ್ಯಾಯವಾಗಲಿದೆ ಹಾಗಾಗಿ ಪಿಎಸ್ಐ ಪರೀಕ್ಷೆ ಮುಂದೂಡಬೇಕೆಂದು ಅಭ್ಯರ್ಥಿಗಳು ತಮ್ಮ ನೋವು ನನ್ನಲ್ಲಿ ತೋಡಿಕೊಂಡರು.
ಯುಪಿಎಸ್ಸಿ ಹಾಗೂ ಪಿಎಸ್ಐ ಪರೀಕ್ಷೆ ಬರೆಯಲು 60ಕ್ಕೂ ಹೆಚ್ಚು ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದಾರೆ. ಒಂದೇ ದಿನ ಈ ಎರಡು ಪರೀಕ್ಷೆ ನಡೆಯುವುದರಿಂದ ಪರೀಕ್ಷೆಗೆ ತಯಾರಿ ನಡೆಸಿದ ಪ್ರಾಮಾಣಿಕ ಅಭ್ಯರ್ಥಿಗಳಿಗೆ ಅನ್ಯಾಯ ಆಗಬಾರದು. ಹಾಗಾಗಿ, ಮುಖ್ಯಮಂತ್ರಿಗಳು ಈ ಕೂಡಲೇ ಪಿಎಸ್ಐ ಪರೀಕ್ಷೆ ಮುಂದೂಡಬೇಕೆಂದು ಮನವಿ ಮಾಡುತ್ತೇನೆ.
@siddaramaiah | @AKSSAofficial
#PSIExams
@KEA_karnataka ನೀವು 402 PSI ಹುದ್ದೆಗಳಿಗೆ ಪರೀಕ್ಷೆಯನ್ನು SEP 22 ರಂದು ನಿಗದಿಪಡಿಸಿದ್ದೀರಿ, ಆದರೆ ಅಂದು UPSC ಮುಖ್ಯಪರೀಕ್ಷೆ ಇರುವ ಕಾರಣ ಮುಂದೂಡುವಂತೆ ಅಭ್ಯರ್ಥಿಗಳು ವಿನಂತಿಸುತ್ತಿದ್ದಾರೆ, ಕೇಂದ್ರ ಸರ್ಕಾರದ ಪರೀಕ್ಷೆಗಳು ಇಲ್ಲದ ದಿನಾಂಕವನ್ನು ನಿಗದಿಪಡಿಸಬೇಕು ಎಂದು ಕೇಳಿಕೊಳ್ಳುತ್ತಿದ್ದಾರೆ. @DrParameshwara@prajavani
Request everyone preparing for all government competitive exams to come out of your comfort zones and participate in huge numbers to show your strength and support to fight against KPSC - to force it to conduct re-exam and also for the larger cause of forcing government to reform KPSC urgently. Location: Freedom Park, on 2nd September at 10 am. #kpsc_ಮೋಸ #KPSC @AKSSAofficial
Dear @secretarykpsc sir, here’s a dictionary, because clearly, Google Translate isn’t cutting it for you.
English words from any part of the world can be translated to Kannada with ease and clarity.
#KPSCmosa#KPSCಮೋಸ#KPSC_Mosa#KPSC_Scam#kpsc
"ಅಂಗೈ ಹುಣ್ಣಿಗೆ ಕನ್ನಡಿ ಬೇಕೆ" ಎಂಬಂತೆ ಕೆಪಿಎಸ್ ಸಿ ಪ್ರಶ್ನೆಪತ್ರಿಕೆಯ ತುಂಬಾ ಕಣ್ಣಿಗೆ ಕುಕ್ಕುವ ಹಾಗೆ ಕಾಣುತ್ತಿರುವ ಲೋಪದೋಷಗಳು ಸಾಮಾಜಿಕ ಜಾಲತಾಣಗಳಲ್ಲಿ, ಮಾಧ್ಯಮಗಳು ಈಗಾಗಲೇ ಹರಿದಾಡುತ್ತಿದ್ದರೂ, ದೋಷಗಳಿಗೆ, ಭಾಷಾಂತರ ತಪ್ಪುಗಳಿಗೆ ಆಕ್ಷೇಪಣೆ ಸಲ್ಲಿಸಬೇಕು ಎಂದು ಹೊರಡಿಸಿರುವ ಪ್ರಕಟಣೆ ಅತ್ಯಂತ ಹಾಸ್ಯಾಸ್ಪದ ಮತ್ತು ಅಸಂಬದ್ಧವಾಗಿದೆ.
ಪ್ರಶ್ನೆ ಪತ್ರಿಕೆ ತಯಾರಾದ ನಂತರ ನುರಿತ ಸಂಪನ್ಮೂಲ ವ್ಯಕ್ತಿಗಳ ಕೈಯಲ್ಲಿ Proof Read ಮಾಡಿಸಿ, ಪ್ರಶ್ನೆಗಳ ರಚನೆ, ನಿಖರತೆ, ತರ್ಜುಮೆ ಮುಂತಾದವುಗಳಲ್ಲಿ ಯಾವುದಾದರೂ ಲೋಪದೋಷಗಳು ಇದ್ದಲ್ಲಿ ಅದನ್ನು ತಿದ್ದುಪಡಿ ಮಾಡಿದ ನಂತರ ಪ್ರಶ್ನೆ ಪತ್ರಿಕೆ ಅಂತಿಮಗೊಳಿಸಿ ಪರೀಕ್ಷೆ ನಡೆಸಿದ್ದರೆ ಇವತ್ತು ಇಡೀ ವ್ಯವಸ್ಥೆ ನಗೆಪಾಟಲಿಗೀಡಾಗುವ ಪರಿಸ್ಥಿತಿ ಬರುತ್ತಿರಲಿಲ್ಲ.
ಮಾಧ್ಯಮಗಳಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ಪ್ರಶ್ನೆ ಪತ್ರಿಕೆಯಲ್ಲಿ ಆಗಿರುವ ಲೋಪದೋಷಗಳ ಬಗ್ಗೆ ಈಗಾಗಲೇ ಬಹಿರಂಗ ಚರ್ಚೆಯಾಗುತ್ತಿರುವಾಗ ಆಕ್ಷೇಪಣೆ ಸಲ್ಲಿಸಬೇಕು ಎಂದು ಪ್ರಕಟಣೆ ಹೊರಡಿಸಿರುವುದು ಆಯೋಗ ಎಷ್ಟು ಅಸಮರ್ಥವಾಗಿದೆ ಎಂಬುದನ್ನ ಮತ್ತೊಮ್ಮೆ ಜಗಜ್ಜಾಹೀರು ಮಾಡಿದೆ.
ಪ್ರಶ್ನೆಪತ್ರಿಕೆ ಸಿದ್ಧಪಡಿಸಲು ಜವಾಬ್ದಾರರಾದ ಅಧಿಕಾರಿಗಳನ್ನು ಈ ಕೊಡಲೇ ಅಮಾನತ್ತು ಮಾಡಿ ತನಿಖೆಗೆ ಆದೇಶ ನೀಡಬೇಕು. ಸುದ್ಧಿಗೋಷ್ಠಿ ನಡೆಸಿ ಪರೀಕ್ಷಾರ್ಥಿಗಳಿಗೆ ಸ್ಪಷ್ಟನೆ ನೀಡಿ, ಮುಂದಿನ ನಡೆಯ ಬಗ್ಗೆ ಮಾಹಿತಿ ನೀಡಬೇಕು.
ಕೆಪಿಎಸ್ ಸಿ ವ್ಯವಸ್ಥೆಗೆ ಆಮೂಲಾಗ್ರ ಸುಧಾರಣೆ ತರುವ ನಿಟ್ಟಿನಲ್ಲಿ ಸರ್ಕಾರ ಕ್ರಮ ಕೈಗೊಳ್ಳಬೇಕು.
ಕರ್ನಾಟಕ ಲೋಕಸೇವಾ ಆಯೋಗ ಎಷ್ಟು ಭ್ರಷ್ಟಗೆಟ್ಟಿದೆ ಎನ್ನುವುದಕ್ಕೆ ಇತ್ತೀಚಿನ ಕೆಪಿಎಸ್ಸಿ ಪರೀಕ್ಷೆಯೇ ಜ್ವಲಂತ ನಿದರ್ಶನ. ಕುಂಟುನೆಪ ಹೇಳಿಕೊಂಡು ವಾರದ ದಿನ ಪರೀಕ್ಷೆಯಿಟ್ಟು ಅರ್ಧದಷ್ಟು ಮಂದಿ ಆಕಾಂಕ್ಷಿಗಳು ಪರೀಕ್ಷೆಗೆ ಬಾರದೇ ಇರುವಂತೆ ನೋಡಿಕೊಳ್ಳುವುದು ಒಂದು ಹಂತದ ಕುತ್ಸಿತ ಬುದ್ಧಿಯಾದರೆ, ಬೇಕಂತಲೇ ಪ್ರಶ್ನೆ ಪತ್ರಿಕೆಯಲ್ಲಿ ತಪ್ಪುಗಳನ್ನು ಮುದ್ರಿಸಿ ಬಂದ ಆಕಾಂಕ್ಷಿಗಳಲ್ಲಿ ಗೊಂದಲ ಉಂಟುಮಾಡಿ ಕೈತೊಳೆದುಕೊಳ್ಳುವುದು ಎರಡನೆಯ ಹಂತದ ಕುತ್ಸಿತ ಮನೋಭಾವ.
ಗೂಗಲ್ ಅನುವಾದ ಕೂಡ ಮಾಡಲಾರದಷ್ಟು ದಟ್ಟದರಿದ್ರವಾದ ಕನ್ನಡ ಅವತರಣಿಕೆಯಿಂದ ಆಕಾಂಕ್ಷಿಗಳು ಬೇಸತ್ತು ಅಧಿಕಾರಿಗಳನ್ನು ಪ್ರಶ್ನಿಸುತ್ತಿದ್ದಾರೆ. ೮ ಕ್ಕಿಂತ ಹೆಚ್ಚಿನ ಪ್ರಶ್ನೆಗಳಲ್ಲಿ ಗೊಂದಲವಿದ್ದರೆ ಮರುಪರೀಕ್ಷೆ ನಡೆಸಬೇಕೆನ್ನುವ ಕಾನೂನನ್ನು ಕಾಂಗ್ರೆಸ್ ಸರ್ಕಾರ ಖಂಡಿತ ಪಾಲಿಸುವುದಿಲ್ಲ. ಯಾಕಂದ್ರೆ, ಮೀಡಿಯಾ ಪ್ರಕಾರ ಸೀಟುಗಳು ಅದಾಗಲೇ ಮಾರಾಟವಾಗಿವೆ.
ಈ ಹೀನಾತಿಹೀನ ಕನ್ನಡ ಅನುವಾದ ಬೇಕಂತಲೇ ಮಾಡಿರುವ ಹುನ್ನಾರ ಎನ್ನವುದು ಪ್ರತಿಯೊಬ್ಬ ಕನ್ನಡಿಗನೂ ಮಾತನಾಡಿಕೊಳ್ಳುತ್ತಿರುವ ಸಂಗತಿ. ಪರೀಕ್ಷೆಯನ್ನು ಕನ್ನಡದಲ್ಲಿ ಬರೆಯುವವರು ಕನ್ನಡಿಗರೇ ಅಲ್ಲವೇ? ಅಂದಮೇಲೆ ಈ ಕಾಂಗ್ರೆಸ್ ಸರ್ಕಾರಕ್ಕೇಕೆ ಕನ್ನಡಿಗರ ಮೇಲೆ ಇಷ್ಟು ದ್ವೇಷ?
ವೀರ ಸಾವರ್ಕರ್ ಮೇಲ್ಸೇತುವೆಯ ನಾಮಫಲಕ ಕೆಡವುವುದಕ್ಕೆ ಬೀದಿಗಿಳಿದ, ಲೇ ಮಾರ್ವಾಡಿ ನೆಕ್ಸ್ಟ್ ನೀನೇ ಎನ್ನುತ್ತಾ ಬೀದಿ ಬೀದಿ ಅಲೆದ ಓಲಾಟಗಳು ಈಗ ಕಾಂಗ್ರೆಸ್ ಹಾಕಿದ ಬಿಸ್ಕೆಟ್ ಬಾಯಲ್ಲಿಟ್ಟುಕೊಂಡು, ನಾಮಕಾವಸ್ಥೆಗೆ ಒಂದು ಟುವ್ವಿ ಹಾಕಿ 'ನಾವು ಇದರ ವಿರುದ್ಧ ದನಿ ಎತ್ತಿದ್ದೀವಿ' ಅಂತ ತೋರಿಕೆಯಾಟ ಆಡಿದ್ದಾರೆ.
ಕಾಂಗ್ರೆಸ್ ಸರ್ಕಾರದಲ್ಲಿ ಕನ್ನಡಿಗರಿಗೆ ಅನ್ಯಾಯ ಆಗಿದೆ. ನೀಟ್ ಪರೀಕ್ಷೆಯ ಬಗ್ಗೆ ಇಲ್ಲಸಲ್ಲದ ಕೊಂಕೆತ್ತುವ ಕಾಂಗ್ರೆಸ್ ನಾಯಕರ ಕೈವಾಡದಿಂದ ಕೆಪಿಎಸ್ಸಿ ಪರೀಕ್ಷೆಯಲ್ಲಿ ಕನ್ನಡಿಗರಿಗೆ ಅನ್ಯಾಯವಾಗಿದೆ. ಇದರ ನ್ಯಾಯತೀರ್ಮಾನ ಇಂದಲ್ಲ ನಾಳೆ ಆಗಿಯೇ ತೀರಲಿದೆ.