ಮಾನ್ಯ ಉಚ್ಚ ನ್ಯಾಯಾಲಯದ ಆದೇಶದ ಮೇರೆಗೆ ನೇಮಕಾತಿ ಪ್ರಾರಂಭಿಸಲೇಬೇಕು.
1) PSI ಸಿವಿಲ್ 600 ಆರ್ಥಿಕ ಅನುಮೋದನೆ ದೊರೆತಿದ್ದು ಕೂಡಲೇ ನೇಮಕಾತಿ ಪ್ರಾರಂಭಿಸಿ.
2) Police Constable ಹುದ್ದೆಗಳ ನೇಮಕಾತಿಯನ್ನು ಆರ್ಥಿಕ ಇಲಾಖೆಯಿಂದ ಅನುಮತಿ ಪಡೆದಿರುವ ಎಲ್ಲಾ ಹುದ್ದೆಗಳನ್ನು ಕೂಡಲೇ ಪ್ರಾರಂಭಿಸಿ.
3) KSRP, RSI, KSISF, Wireless & IB ಪೊಲೀಸ್ ಸಬ್ ಇನ್ಸ್ಪೆಕ್ಟರ್ ಕೂಡಲೇ ನೇಮಕಾತಿ ಪ್ರಾರಂಭಿಸಬೇಕು.
4) SOCO ನೇಮಕಾತಿ ಪ್ರಾರಂಭಿಸಿ.
5) PSTR, GPSTR, HSTR ಕೂಡಲೇ ನೇಮಕಾತಿ ಪ್ರಾರಂಭಿಸಬೇಕು.
6) PU Lecturer & Assistant Professor ಕೂಡಲೇ ನೇಮಕಾತಿ ಪ್ರಾರಂಭಿಸಿ.
7) ದೈಹಿಕ ಶಿಕ್ಷಕರು & ಕಂಪ್ಯೂಟರ್ ಆಪರೇಟರ್ & ವಾರ್ಡನ್ ಕೂಡಲೇ ನೇಮಕಾತಿ ಪ್ರಾರಂಭಿಸಿ.
8) 384 KAS ಕನ್ನಡ ಅಭ್ಯರ್ಥಿಗಳಿಗೆ ನ್ಯಾಯ ದೊರಕಿಸಿ.
9) 2000 FDA & 2000 SDA ನೇಮಕಾತಿಯನ್ನು ಕೂಡಲೇ ಪ್ರಾರಂಭಿಸಬೇಕು.
10) EXCISE ಸಬ್ ಇನ್ಸ್ಪೆಕ್ಟರ್ 247 ಹುದ್ದೆಗಳ ನೇಮಕಾತಿಯನ್ನು ಕೂಡಲೇ ಪ್ರಾರಂಭಿಸಲೇಬೇಕು.
11) EXCISE POLICE ಕಾನ್ಸ್ಟೇಬಲ್ ಹುದ್ದೆಗಳ ನೇಮಕಾತಿಯನ್ನು ಕೂಡಲೇ ಪ್ರಾರಂಭಿಸಬೇಕು.
12) SUB REGISTER ಮತ್ತು REVENUE ಇನ್ಸ್ಪೆಕ್ಟರ್ ಹುದ್ದೆಗಳ ನೇಮಕಾತಿಯನ್ನು ಕೂಡಲೇ ಪ್ರಾರಂಭಿಸಲೇಬೇಕು.
13) CTI & RTO ಹೊಸ ನೇಮಕಾತಿಯನ್ನು ಕೂಡಲೇ ಪ್ರಾರಂಭಿಸಲೇಬೇಕು.
14) PDO, Grade 1 & Grade 2 FDA & SDA, VAO ಕೂಡಲೇ ನೇಮಕಾತಿ ಪ್ರಾರಂಭಿಸಲೇಬೇಕು.
15) OBC, SWD, Minority dept, DMO &Taluk Welfare Officerಹೊಸ ನೇಮಕಾತಿಯನ್ನು ಕೂಡಲೇ ಪ್ರಾರಂಭಿಸಲೇಬೇಕು.
16) Food & Civil Supply ಇಲಾಖೆಯ Food Inspector ಹೊಸ ನೇಮಕಾತಿಯನ್ನು ಕೂಡಲೇ ಪ್ರಾರಂಭಿಸಲೇಬೇಕು.
17) Land Surveyor, AO & AAO ಹುದ್ದೆಗಳನ್ನು ಕೂಡಲೇ KEA ಮೂಲಕ ನೇಮಕಾತಿ ಪ್ರಾರಂಭಿಸಲೇಬೇಕು.
18) ACF, RFO, ಮತ್ತು DRFO ಕೊಡಲೇ ನೇಮಕಾತಿ ಪ್ರಾರಂಭಿಸಬೇಕು.
19) ಭ್ರಷ್ಟಾಚಾರ ಮುಕ್ತ ನೇಮಕಾತಿ ನಡೆಸಬೇಕು.
20) ಪ್ರತಿ ವರ್ಷ ಎಲ್ಲಾ ಇಲಾಖೆಗಳಿಂದ ಎಲ್ಲಾ ನೇಮಕಾತಿಗಳು ಕಡ್ಡಾಯವಾಗಿ ಆಗಬೇಕು.
21) UPSC ಮಾದರಿಯಲ್ಲಿ ನಮ್ಮ ರಾಜ್ಯದಲ್ಲಿ ಪರೀಕ್ಷಾ ಶುಲ್ಕ ಅಳವಡಿಸಬೇಕು.
22) ಪೊಲೀಸ್ ಕಾನ್ಸ್ಟೇಬಲ್ ವಯೋಮಿತಿಯನ್ನು (SC/ST/OBC 33 ವರ್ಷ, GM ಗೆ 30 ವರ್ಷ) ಖಾಯಂಗೊಳಿಸಬೇಕೆಂದು ವಿನಂತಿ.
23) AC SAAD ಮುಖ್ಯ ಪರೀಕ್ಷೆಯ ಫಲಿತಾಂಶ ಬಿಟ್ಟು ಕೂಡಲೇ ನೇಮಕಾತಿಯನ್ನು ಪೂರ್ಣಗೊಳಿಸಬೇಕೆಂದು ವಿನಂತಿ.
24) 1200 Staff Nurse ಹುದ್ದೆಗಳ ನೇಮಕಾತಿಯನ್ನು ಕೂಡಲೇ ಪ್ರಾರಂಭಿಸಬೇಕು.
@eshwar_khandre@HKPatilINC @NCheluvarayaS @blsanthosh@BJP4Karnataka@INCKarnataka@publictvnews@AsianetNewsSN@prajavani@KannadaPrabha@shalinirajnish@BasanagoudaBJP@Dr_Yathindra_S@RLR_BTM@ashwaveganews@BasanagoudaBJP@PriyankKharge@DKShivakumar@tv9kannada@Sowmyareddyr@KhMuniyappa@byrathi_suresh@sstangadagi@RahulGandhi@iShivanandpatil@MBPatil@dineshgrao@BZZameerAhmedK@krishnabgowda@laxmi_hebbalkar @dsudhakar2727 @DrParameshwara
ತಕ್ಷಣ ಜಾರಿಗೆ ತರಬೇಕಾದ ಬೇಡಿಕೆಗಳು
1. ಒಳ ಮೀಸಲಾತಿ ಸೇರಿದಂತೆ ಎಲ್ಲಾ ಬಾಕಿ ಇರುವ ನೇಮಕಾತಿ ಪ್ರಕ್ರಿಯೆಗಳನ್ನು ಕೂಡಲೇ ಪ್ರಾರಂಭಿಸಬೇಕು.
2. ಪೊಲೀಸ್ ಕಾನ್ಸ್ಟೇಬಲ್ ನೇಮಕಾತಿಯಲ್ಲಿ SC, ST, OBC ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿಯನ್ನು 33 ವರ್ಷಗಳವರೆಗೆ ಹಾಗೂ GM ಅಭ್ಯರ್ಥಿಗಳಿಗೆ ನಿಗದಿತವಾಗಿ ಖಾಯಂಗೊಳಿಸಬೇಕು.
3. 545 PSI ಹಾಗೂ 402 PSI ಪರೀಕ್ಷೆಗಳಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳಿಗೆ ಮತ್ತೊಮ್ಮೆ ಅವಕಾಶ ನೀಡಬೇಕು. ಜೊತೆಗೆ ಪೊಲೀಸ್ ಇಲಾಖೆಯ ಎಲ್ಲಾ ಬಾಕಿ ನೇಮಕಾತಿಗಳನ್ನು ಕೂಡಲೇ ಪ್ರಾರಂಭಿಸಬೇಕು.
4. PSTR, GPSTR, HSTR, ದೈಹಿಕ ಶಿಕ್ಷಕರು, PU ಉಪನ್ಯಾಸಕರು ಹಾಗೂ ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಪ್ರಕ್ರಿಯೆಗಳನ್ನು ತಕ್ಷಣ ಆರಂಭಿಸಬೇಕು.
5. ಎಲ್ಲಾ ನೇಮಕಾತಿಗಳಲ್ಲೂ ಭ್ರಷ್ಟಾಚಾರ ರಹಿತ, ಪಾರದರ್ಶಕ ಪ್ರಕ್ರಿಯೆಯನ್ನು ಖಚಿತಪಡಿಸಬೇಕು.
6. ಗ್ರಂಥಪಾಲಕರು ಹಾಗೂ ಸಹಾಯಕ ಗ್ರಂಥಪಾಲಕರ ನೇಮಕಾತಿ ಪ್ರಕ್ರಿಯೆಯನ್ನು ಕೂಡಲೇ ಆರಂಭಿಸಬೇಕು.
7. ಪ್ರತಿವರ್ಷ ಎಲ್ಲಾ ಇಲಾಖೆಗಳಲ್ಲಿನ ಎಲ್ಲಾ ಹುದ್ದೆಗಳ ನೇಮಕಾತಿ ನಡೆಸುವ ವ್ಯವಸ್ಥೆಯನ್ನು ಜಾರಿಗೆ ತರಬೇಕು.
8. ಮುಂದಿನ ಐದು ವರ್ಷಗಳ ಕಾಲ ಎಲ್ಲಾ ಇಲಾಖೆಗಳಿಗೂ ಶಾಶ್ವತ ವಯೋಮಿತಿ ಸಡಿಲಿಕೆಯನ್ನು ಖಾಯಂಗೊಳಿಸಬೇಕು.
9. ಕೇಂದ್ರ ಲೋಕಸೇವಾ ಆಯೋಗದ (UPSC) ಮಾದರಿಯಲ್ಲಿ ನಮ್ಮ ರಾಜ್ಯದಲ್ಲಿಯೂ ಪರೀಕ್ಷಾ ಶುಲ್ಕ ವ್ಯವಸ್ಥೆಯನ್ನು ಅನ್ವಯಿಸಬೇಕು.
10. AO, AAO, Land Surveyor, Veterinary Officer ಹುದ್ದೆಗಳ ನೇಮಕಾತಿಯನ್ನು ಕೂಡಲೇ ಪ್ರಾರಂಭಿಸಬೇಕು.
11. 3A ಮತ್ತು 3B ವರ್ಗದ ಅಭ್ಯರ್ಥಿಗಳಿಗೆ ನ್ಯಾಯ ಒದಗಿಸುವ ಸಲುವಾಗಿ ನೇಮಕಾತಿ ಪ್ರಕ್ರಿಯೆಯಲ್ಲಿ ಪೋಸ್ಟರ್ ಬಿಂದುವನ್ನು ತಕ್ಷಣ ಅಳವಡಿಸಬೇಕು.
12. ಆರೋಗ್ಯ ಇಲಾಖೆಯಲ್ಲಿರುವ Group A, Group B, Group C ಹಾಗೂ ನರ್ಸಿಂಗ್ ಸಿಬ್ಬಂದಿಗಳ ಎಲ್ಲಾ ಬಾಕಿ ನೇಮಕಾತಿಗಳನ್ನು ಕೂಡಲೇ ಪೂರ್ಣಗೊಳಿಸಬೇಕು.
13. ಅತಿಥಿ ಉಪನ್ಯಾಸಕರ ನೇಮಕಾತಿಯಲ್ಲಿ UGC ಅರ್ಹ ಅಭ್ಯರ್ಥಿಗಳಿಗೆ ನ್ಯಾಯ ಒದಗಿಸಿ, ಪಾರದರ್ಶಕ ಕೌನ್ಸಿಲಿಂಗ್ ಪ್ರಕ್ರಿಯೆಯನ್ನು ಜಾರಿಗೆ ತರಬೇಕು.
ನಾಡಿನ ಯುವಶಕ್ತಿಯ ತಾಳ್ಮೆಯನ್ನು ಸರ್ಕಾರ ಪರೀಕ್ಷಿಸುತ್ತಿರುವಂತೆ ಕಾಣುತ್ತಿದೆ. ಹಗಲಿರುಳು ಶ್ರಮಪಟ್ಟು ಸರ್ಕಾರಿ ಉದ್ಯೋಗಕ್ಕಾಗಿ ತಯಾರಿ ನಡೆಸುತ್ತಿರುವ ಉದ್ಯೋಗಾಕಾಂಕ್ಷಿಗಳಿಗೆ ಸರ್ಕಾರ ನಿರಂತರವಾಗಿ ಅನ್ಯಾಯ ಎಸಗುತ್ತಿದೆ. ಈಗಾಗಲೇ ಅನೇಕ ಅಭ್ಯರ್ಥಿಗಳ ವಯೋಮಿತಿ ಮುಗಿದಿದ್ದು, ಅವರ ಭವಿಷ್ಯ ಅನಿಶ್ಚಿತತೆಯಲ್ಲಿ ಸಿಲುಕಿದೆ.
ಯುವಕರಿಗೆ ಉದ್ಯೋಗ ಒದಗಿಸಬೇಕಾದ ಸರ್ಕಾರ ನಿರ್ಲಕ್ಷ್ಯ ಧೋರಣೆಯಲ್ಲಿ ಕಾಲಹರಣ ಮಾಡುತ್ತಿದೆ. 2026–27 ವಿತ್ತೀಯ ವರ್ಷದ ಬಜೆಟ್ ಮಂಡಿಸುವ ಸಂದರ್ಭದಲ್ಲಿ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯನವರು ಖಾಲಿ ಇರುವ ಎಲ್ಲಾ ಹುದ್ದೆಗಳನ್ನು ಭರ್ತಿ ಮಾಡುವ ಸ್ಪಷ್ಟ ಮತ್ತು ದೃಢ ಆಶ್ವಾಸನೆಯನ್ನು ನೀಡಬೇಕು.
ಸರ್ಕಾರ ತನ್ನ ನಿರ್ಲಕ್ಷ್ಯ ಧೋರಣೆಯನ್ನು ಮುಂದುವರೆಸಿದಲ್ಲಿ, ವಿಜಯಪುರದಿಂದ - ಬೆಂಗಳೂರಿನವರೆಗೆ “ವಿಧಾನಸೌಧ ಚಲೋ” ಪಾದಯಾತ್ರೆಯ ಮೂಲಕ ಸರ್ಕಾರಿ ಉದ್ಯೋಗಾಕಾಂಕ್ಷಿಗಳಿಗೆ ಆಗುತ್ತಿರುವ ಅನ್ಯಾಯವನ್ನು ರಾಜ್ಯದ ಮುಂದೆ ಬಯಲಿಗೆಳೆಯಬೇಕಾಗುತ್ತದೆ
ಯುವ ಶಕ್ತಿ
ದೇಶದ ಶಕ್ತಿ
@AKSSAofficial I @tv9kannada I @AsianetNewsSN I @prajavani I @News18Kannada I @publictvnews I @guaranteenews I @kanthakumarr I @KannadaRepublic I #JusticeforKPSCAspirants I #CongressFailsKarnataka I #KPSC I
ಮುಂದಿನ ಒಂದು ವಾರದಲ್ಲಿ ನಮ್ಮ ಸಮಸ್ಯೆಗಳನ್ನು ಬಗೆಹರಿಸದಿದ್ದರೆ ಇದೇ ರೀತಿ ರಾಜ್ಯಾದ್ಯಂತ ಪ್ರತಿಭಟನೆ ಮಾಡುತ್ತೇವೆ. @siddaramaiah@RahulGandhi@DrParameshwara@PriyankKharge
ವಿಷಯ :- ನೇಮಕಾತಿ ಪ್ರಾರಂಭಿಸಲು ಮತ್ತು ಪೊಲೀಸ್ ಇಲಾಖೆಯಲ್ಲಿ PC, PSI, in-service PSI ಇತ್ಯಾದಿ, ಸೇರಿದಂತೆ ವಿವಿಧ ಎಲ್ಲ ಇಲಾಖೆಯಲ್ಲಿ ವಯೋಮಿತಿ ಹೆಚ್ಚಿಸಿ ನೇಮಕಾತಿ ಪ್ರಾರಂಭಿಸುವ ಬೇಡಿಕೆ ಹಾಗೂ KAS ನಲ್ಲಿ ಆಗಿರುವ ಕನ್ನಡ ಅನುವಾದದ ತಪ್ಪುಗಳನ್ನು ಪರಿಶೀಲಿಸಿ ಅಧಿಸೂಚನೆಯನ್ನು ರದ್ದುಪಡಿಸಿ ಹೊಸ ಅಧಿಸೂಚನೆ ಹೊರಡಿಸುವ ಕುರಿತು.
ಮಾನ್ಯರೇ,
ಈ ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ಕೆಲವು ವರ್ಷಗಳೇ ಕಳೆದರು ಯಾವುದೇ ನೇಮಕಾತಿ ಇಲ್ಲದೆ ಲಕ್ಷಾಂತರ ವಿದ್ಯಾರ್ಥಿಗಳು ಹಾಗೂ ಸ್ಪರ್ಧಾತ್ಮಕ ತರಬೇತಿ ಸಂಸ್ಥೆಗಳು ಸಾಕಷ್ಟು ತೊಂದರೆಗಳನ್ನು ಅನುಭವಿಸುತ್ತಿದ್ದಾರೆ ಮತ್ತು ಕೆಲವೊಂದು ಇಲಾಖೆಯಲ್ಲಿ ಉದಾಹರಣೆಗೆ :- ವರ್ಷಾನು ಗಟ್ಟಲೆಯಿಂದ ಶಿಕ್ಷಕರ ನೇಮಕಾತಿಯಾಗಿಲ್ಲ, ನಾಲ್ಕೈದು ವರ್ಷಗಳಾದರೂ(PC, PSI etc) ಯಾವುದೇ ನೇಮಕಾತಿ ಆಗಿಲ್ಲ, ಕಳೆದ ಏಳು ಎಂಟು ವರ್ಷಗಳಿಂದ FDA,SDA, ಪಶು ವೈದರು,land survey, AO & AAO, ಶಿಕ್ಷಕರ ಹುದ್ದೆ, ಪದವಿ ಪೂರ್ವ ಕಾಲೇಜುಗಳಲ್ಲಿ ಉಪನ್ಯಾಸಕರು, ಸಹಾಯಕ ಪ್ರಾಧ್ಯಾಪಕರು, ಅಬಕಾರಿ ಹುದ್ದೆ, Sub- Register, ಗ್ರಂಥಾಪಾಲಕರು, ಇತರೆ ಎಲ್ಲ ಇಲಾಖೆಗಳಲ್ಲಿ ಸುಮಾರು 3 ಲಕ್ಷ ಹುದ್ದೆಗಳಿಗೆ ಈ ಕೂಡಲೇ ನೇಮಕಾತಿ ಪ್ರಾರಂಭಿಸಬೇಕು, ಮತ್ತು ಯಾವುದೇ ನೇಮಕಾತಿ ಆಗದ ಕಾರಣ ಲಕ್ಷಾಂತರ ವಿದ್ಯಾರ್ಥಿಗಳಿಗೆ ವಯೋಮಿತಿ ಮೀರಿರುವ ಕಾರಣ ಕನಿಷ್ಠ ಐದು ವರ್ಷ ವಯೋಮಿತಿಯನ್ನು ಸಡಿಲಿಕೆ ಮಾಡಬೇಕು ಮತ್ತು ಪೊಲೀಸ್ ನೇಮಕಾತಿಗೆ ಸಾಮಾನ್ಯ ವರ್ಗಕ್ಕೆ 30 ಪರಿಶಿಷ್ಟ ಜಾತಿ,ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ವರ್ಗಕ್ಕೆ 33 ವಯೊಮಿತಿಯನ್ನು ಖಾಯಂಗೊಳಿಸಿ ಈ ಕೂಡಲೇ ನೇಮಕಾತಿ ಮಾಡಬೇಕೆಂದು ಎಲ್ಲ ಸ್ಪರ್ಧಾತ್ಮಕ ಆಕಾಂಕ್ಷಿಗಳ ಪರವಾಗಿ ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇವೆ. ಹಾಗೂ ಈ ಬಾರಿ ನಡೆಸಿದ KAS ಪರೀಕ್ಷೆಯಲ್ಲಿ ಕನ್ನಡ ಭಾಷೆಯ ಅನುವಾದದಲ್ಲಿ ಬಹಳಷ್ಟು ತಪ್ಪುಗಳು ಜರುಗಿದ್ದು ಅಭ್ಯರ್ಥಿಗಳು ಗೊಂದಲಕ್ಕೀಡಾಗಿರುತ್ತಾರೆ ಆದ್ದರಿಂದ ಇದನ್ನು ರದ್ದುಪಡಿಸಿ ಹೊಸ ಅಧಿಸೂಚನೆ ಹೊರಡಿಸಬೇಕೆಂದು ಎಲ್ಲಾ ಸ್ಪರ್ಧಾರ್ಥಿಗಳ ಪರವಾಗಿ ಕೇಳಿಕೊಳ್ಳುತ್ತಿದ್ದೇವೆ.
ಈ ಮೇಲಿನ ವಿಷಯಕ್ಕೆ ಸಂಬಂಧಿಸಿದಂತೆ ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ಈ ಕೂಡಲೇ ನಮ್ಮ ಬೇಡಿಕೆಯನ್ನು ಈಡೇರಿಸಬೇಕೆಂದು ಕೋರುತ್ತೇವೆ.
The Congress Government has failed in its promise to finalize the recruitment process, providing trivial justifications for the delay.
The aspirants find themselves in a state of uncertainty, as the Government has not only been unable to secure a Government job for them but also has hindered their ability to transition to alternative careers for the past two years.
It is important that the Government promptly issues notifications regarding available vacancies and completes the recruitment process within a specified timeframe.
I strongly support the voice of young aspirants whose careers are being sabotaged by the Congress Government due to the incompetence of certain officials and Ministers
The Government must not jeopardize the future of countless aspirants who are diligently striving to achieve their aspirations of obtaining a Government job.
ಸ್ಪರ್ಧಾತ್ಮಕ ಪರೀಕ್ಷೆಯ ಫಲಿತಾಂಶ ವಿಳಂಬದಿಂದ ಪರೀಕ್ಷಾರ್ಥಿಗಳ ಪಾಡು ಹೇಳತೀರದಾಗಿದೆ.
ರಾಜಕೀಯ ಇಚ್ಚಾಶಕ್ತಿ ಕೊರತೆಯೇ ಹಾಗೂ ತಮ್ಮ ಸಮಸ್ತ ಆಡಳಿತ ವ್ಯವಸ್ಥೆಯನ್ನು ಗ್ಯಾರಂಟಿ ಯೋಜನೆಗಳ ಪ್ರಚಾರ, ಅನುಷ್ಠಾನದಲ್ಲೇ ನಿರತವಾಗಿರುವ ಸರ್ಕಾರ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುತ್ತಿರುವ ಲಕ್ಷಾಂತರ ಅಭ್ಯರ್ಥಿಗಳಿಗೆ ಅನ್ಯಾಯ ವೆಸಗುತ್ತಿದೆ.
ಸರ್ಕಾರದ ನಿಷ್ಕಾಳಜಿಯಿಂದ ಸ್ಪರ್ಧಾತ್ಮಕ ಪರೀಕ್ಷೆಯ ಅಭ್ಯರ್ಥಿಗಳ ಭವಿಷ್ಯ ಡೋಲಾಯಮಾನವಾಗಿದೆ. ಅತ್ತ, ಸರ್ಕಾರಿ ಕೆಲಸವೂ ಇಲ್ಲದ ಹಾಗೆ, ಇತ್ತ ಖಾಸಗಿ ಕ್ಷೇತ್ರಗಳಿಗೆ ಉದ್ಯೋಗಕ್ಕೆ ಹೋಗಲಾಗದೆ ಅಡಕತ್ತರಿಯಲ್ಲಿದ್ದಾರೆ. ಕಳೆದ ಎರಡು ವರ್ಷಗಳಿಂದ ಅಭ್ಯರ್ಥಿಗಳು ಸಾಕಷ್ಟು ಗೊಂದಲ, ಸಂಕಷ್ಟದಲ್ಲಿದ್ದಾರೆ. ಮುಖ್ಯ ಮಂತ್ರಿಗಳು ಕೂಡಲೇ ಸ್ಪಂದಿಸಿ ನಿರ್ದಿಷ್ಟ ಕಾಲಮಿತಿಯಲ್ಲಿ ಪರೀಕ್ಷೆಗಳ ಫಲಿತಾಂಶವನ್ನು ಪ್ರಕಟಿಸಬೇಕು ಹಾಗೂ ಬಾಕಿ ಇರುವ ಖಾಲಿ ಹುದ್ದೆಗಳ ಅಧಿಸೂಚನೆಯನ್ನು ಆದ್ಯತೆಯ ಮೂಲಕ ಪ್ರಕಟಿಸಬೇಕು.
@AKSSAofficial
ಒಳಮೀಸಲಾತಿಯ ನೆಪವನ್ನಿಟ್ಟು ನೇಮಕಾತಿಗಳನ್ನು ಸ್ಥಗಿತ ಮಾಡಿರುವ ರಾಜ್ಯ ಸರ್ಕಾರದ ಕ್ರಮ ಅವೈಜ್ಞಾನಿಕ ಹಾಗೂ ಸರ್ಕಾರಿ ಕೆಲಸ ಸಿಗಬೇಕೆಂದು ಅಹರ್ನಿಶಿ ಓದುತ್ತಿರುವ ಅಭ್ಯರ್ಥಿಗಳಿಗೆ ಮಾಡುತ್ತಿರುವ ಅನ್ಯಾಯ.
ಒಳಮೀಸಲಾತಿ ಪ್ರಕಟವಾಗುವ ಹೊತ್ತಿಗೆ ಅಭ್ಯರ್ಥಿಗಳಿಗೆ age bar ಆಗುವುದರಿಂದ ವರ್ಷಗಟ್ಟಲೆ ಪಟ್ಟ ಕಷ್ಟವು, ಸಮಯವೂ ವ್ಯರ್ಥವಾಗುತ್ತದೆ.
ಈಗಾಗಲೇ ಅಭ್ಯರ್ಥಿಗಳ ಮನೋಬಲ ಕುಸಿದಿದೆ. ಸರ್ಕಾರದ ವಿಳಂಬ ಧೋರಣೆಯಿಂದ ಇನ್ನಷ್ಟು ಸಮಸ್ಯೆ ಆಗುವ ಮುಂಚೆಯೇ ಸರ್ಕಾರ ಇದಕ್ಕೆ ಪರಿಹಾರ ನೀಡಲಿ. ಅರ್ಹ ಯುವಕ, ಯುವತಿಯರಿಗೆ ಸರ್ಕಾರ ಮೋಸ ಮಾಡದಿರಲಿ.
@AKSSAofficial
ಮಾನ್ಯ @INCKarnataka@kharge@RahulGandhi ರಾಜ್ಯ ಸರ್ಕಾರ ಒಳ ಮೀಸಲಾತಿ ನೆಪ ಹೇಳಿ ಸುಮಾರು ಒಂದು ವರ್ಷದಿಂದ ಯಾವುದೇ ನೇಮಕಾತಿ ಮಾಡದಿರುವುದರಿಂದ ರಾಜ್ಯದ ಲಕ್ಷಾಂತರ ವಿದ್ಯಾರ್ಥಿಗಳು ನಿರುದ್ಯೋಗಿಗಳಾಗಿದ್ದಾರೆ ಸಾವಿರಾರು ಅಭ್ಯರ್ಥಿಗಳು ವಯೋಮಿತಿ ಕಳೆದುಕೊಂಡಿದ್ದಾರೆ ಆದರೂ ರಾಜ್ಯ @siddaramaiah ಸರ್ಕಾರ ಒಳ ಮೀಸಲಾತಿ ಜಾರಿ ವಿಳಂಬ ಮಾಡುತ್ತಿರುವುದು ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯಕ್ಕೆ ಕುತ್ತಾಗುತ್ತಿದೆ.
ಆದ್ದರಿಂದ ಈ ಕೂಡಲೇ ರಾಜ್ಯದಲ್ಲಿ ಖಾಲಿ ಇರುವ ನೇಮಕಾತಿಗಳ ಅಧಿಸೂಚನೆ ಹೊರಡಿಸಬೇಕೆಂದು ಒತ್ತಾಯಿಸಿ ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿ ಸಂಘಟನೆಯು ದಿನಾಂಕ 4.08.2025 ರಂದು ಬೆಂಗಳೂರು ಸ್ವತಂತ್ರ ಉದ್ಯಾನವನದಲ್ಲಿ ಬೃಹತ್ ಪ್ರತಿಭಟನೆಯಲ್ಲಿ ಎಲ್ಲರೂ ಭಾಗವಹಿಸಿ ಬದಲಾವಣೆ ನಿಮ್ಮಿಂದ.
ದಾರವಾಡದ ಶ್ರೀನಗರದಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ಓದಲು ಬಂದ ಗಂಗಾಧರ ಕರಿಗೌಡರ (ಇಂಜಿನಿಯರ್ ಪದವಿದರ ವಿದ್ಯಾರ್ಥಿ ವಯಸ್ಸು ಸುಮಾರು 32) ಎಂಬ ವಿದ್ಯಾರ್ಥಿ ಒಬ್ಬ ಹಠಾತ್ತನೆ ಮರಣ ಹೊಂದಿದು ನಿಜಕ್ಕೂ ದುರದೃಷ್ಟಕರ,
ಮೆಲ್ನೊಟಕ್ಕೆ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆಂದು ಕಂಡು ಬಂದಿದೆ. ಅವರ ಸಂಬಂಧಿಕರು ಹೆಳುವ ಪ್ರಕಾರ 5 ವರ್ಷದಿಂದ ಮನೆಯ ಯಾವುದೇ ಕಾರ್ಯಕ್ರಮಗಳಿಗೆ ಹೊಗದೆ ಅಧ್ಯಯನದಲ್ಲಿ ನಿರಂತರವಾಗಿದ, ಆದರೆ ಇತ್ತಿಚಿನ ದಿನಗಳಲ್ಲಿ ಯಾವುದೇ ನೊಟಿಪಿಕೇಶನ್ ಆಗದೆ ಇರುವುದರಿಂದ ವಿದ್ಯಾರ್ಥಿಗಳಲ್ಲಿ ಮನೊಸ್ಥೈರ್ಯ ಕುಸಿತವಾಗುತ್ತಿರುವುದು ನಿಜಕ್ಕೂ ವಿಪರ್ಯಾಸ, ಸರ್ಕಾರ ವಿದ್ಯಾರ್ಥಿಗಳ ಈ ಕಷ್ಟಕರ ವಿಷಯವನ್ನು ಅರ್ಥ ಮಾಡಿಕೊಳ್ಳದೆ ಒಳಮಿಸಲಾತಿ ವಿಷಯ ಇಟ್ಟುಕೊಂಡು ನೊಟಿಪಿಕೇಶನ್ ಮುಂದುಡುತ್ತಾ ಹೊಗುತ್ತಿರುವುದು ನಿಜಕ್ಕೂ ನಾಚಿಕೆಗೇಡಿನ ಸಂಗತಿ... ಸರ್ಕಾರದ ಈ ದುರ್ವರ್ತನೆ ಹೀಗೆ ಮುಂದುವರೆದರೆ ಮುಂದೊಂದಿನ ವಿದ್ಯಾರ್ಥಿ ಕ್ರಾಂತಿ ಮಾಡುವುದು ಅನಿವಾರ್ಯವಾಗುತ್ತದೆ... ಪ್ರತಿಯೊಬ್ಬರು ಸರ್ಕಾರ ಸ್ಪರ್ಧಾತಿಗಳ ಬಗ್ಗೆ ತೊರುತ್ತಿರುವ ಈ ನಿರ್ಲಕ್ಷ್ಯ ಬಗ್ಗೆ ಜಾಗೃತವಹಿಸಿ ಒಗ್ಗೂಡಿ ಹೊರಾಡಬೇಕು ಇಲ್ಲದಿದ್ದರೆ ಅದೆಷ್ಟು ವಿದ್ಯಾರ್ಥಿಗಳ ಮನೊಸ್ಥೈರ್ಯ ಕುಸಿದು ಜೀವಗಳು ಸಾವಿಗೆ ಬಲಿಯಾಗುತ್ತೆ ಗೊತ್ತಿಲ್ಲ....@siddaramaiah@kharge@RahulGandhi@PriyankKharge
ದಾರವಾಡದ ಶ್ರೀನಗರದಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ಓದಲು ಬಂದ ಗಂಗಾಧರ ಕರಿಗೌಡರ (ಇಂಜಿನಿಯರ್ ಪದವಿದರ ವಿದ್ಯಾರ್ಥಿ ವಯಸ್ಸು ಸುಮಾರು 32) ಎಂಬ ವಿದ್ಯಾರ್ಥಿ ಒಬ್ಬ ಹಠಾತ್ತನೆ ಮರಣ ಹೊಂದಿದು ನಿಜಕ್ಕೂ ದುರದೃಷ್ಟಕರ,
ಮೆಲ್ನೊಟಕ್ಕೆ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆಂದು ಕಂಡು ಬಂದಿದೆ. ಅವರ ಸಂಬಂಧಿಕರು ಹೆಳುವ ಪ್ರಕಾರ 5 ವರ್ಷದಿಂದ ಮನೆಯ ಯಾವುದೇ ಕಾರ್ಯಕ್ರಮಗಳಿಗೆ ಹೊಗದೆ ಅಧ್ಯಯನದಲ್ಲಿ ನಿರಂತರವಾಗಿದ, ಆದರೆ ಇತ್ತಿಚಿನ ದಿನಗಳಲ್ಲಿ ಯಾವುದೇ ನೊಟಿಪಿಕೇಶನ್ ಆಗದೆ ಇರುವುದರಿಂದ ವಿದ್ಯಾರ್ಥಿಗಳಲ್ಲಿ ಮನೊಸ್ಥೈರ್ಯ ಕುಸಿತವಾಗುತ್ತಿರುವುದು ನಿಜಕ್ಕೂ ವಿಪರ್ಯಾಸ, ಸರ್ಕಾರ ವಿದ್ಯಾರ್ಥಿಗಳ ಈ ಕಷ್ಟಕರ ವಿಷಯವನ್ನು ಅರ್ಥ ಮಾಡಿಕೊಳ್ಳದೆ ಒಳಮಿಸಲಾತಿ ವಿಷಯ ಇಟ್ಟುಕೊಂಡು ನೊಟಿಪಿಕೇಶನ್ ಮುಂದುಡುತ್ತಾ ಹೊಗುತ್ತಿರುವುದು ನಿಜಕ್ಕೂ ನಾಚಿಕೆಗೇಡಿನ ಸಂಗತಿ... ಸರ್ಕಾರದ ಈ ದುರ್ವರ್ತನೆ ಹೀಗೆ ಮುಂದುವರೆದರೆ ಮುಂದೊಂದಿನ ವಿದ್ಯಾರ್ಥಿ ಕ್ರಾಂತಿ ಮಾಡುವುದು ಅನಿವಾರ್ಯವಾಗುತ್ತದೆ... ಪ್ರತಿಯೊಬ್ಬರು ಸರ್ಕಾರ ಸ್ಪರ್ಧಾತಿಗಳ ಬಗ್ಗೆ ತೊರುತ್ತಿರುವ ಈ ನಿರ್ಲಕ್ಷ್ಯ ಬಗ್ಗೆ ಜಾಗೃತವಹಿಸಿ ಒಗ್ಗೂಡಿ ಹೊರಾಡಬೇಕು ಇಲ್ಲದಿದ್ದರೆ ಅದೆಷ್ಟು ವಿದ್ಯಾರ್ಥಿಗಳ ಮನೊಸ್ಥೈರ್ಯ ಕುಸಿದು ಜೀವಗಳು ಸಾವಿಗೆ ಬಲಿಯಾಗುತ್ತೆ ಗೊತ್ತಿಲ್ಲ....@siddaramaiah@kharge@RahulGandhi@PriyankKharge
ವಿಧಾನಸಭೆಯ ಅಧಿವೇಶನದಲ್ಲಿ ಆಶ್ವಾಸನೆ ಕೊಟ್ಟಂತೆ ದೋಷಪೂರಿತ ಕೆಎಎಸ್ ಪೂರ್ವಭಾವಿ ಪರೀಕ್ಷೆಯನ್ನು ರದ್ದು ಪಡಿಸಿ, ಮರು ಪರೀಕ್ಷೆಗೆ ಆದೇಶಿಸುವ ಮೂಲಕ ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿರುವ 70,000ಕ್ಕೂ ಹೆಚ್ಚು ಗ್ರಾಮೀಣ ಅಭ್ಯರ್ಥಿಗಳಿಗೆ ಆಗಿರುವ ಅನ್ಯಾಯವನ್ನು ಸರಿಪಡಿಸಬೇಕು ಎಂದು ಒತ್ತಾಯಿಸಿ ಮುಖ್ಯಮಂತ್ರಿ @siddaramaiah ಅವರಿಗೆ ಪತ್ರ ಬರೆದಿದ್ದೇನೆ.
#KAS #KPSC #Prelims
ಕೆಲ ರಾಜಕೀಯ ಪಟ್ಟಭದ್ರರು, ಅಡ್ಜಸ್ಟ್ಮೆಂಟ್ ರಾಜಕಾರಣದ ಹರಿಕಾರರಿಂದ ಲೋಕ ಸಭಾ ಚುನಾವಣೆಯಲ್ಲಿ ಪಕ್ಷಕ್ಕೆ ತೀವ್ರ ಹಿನ್ನಡೆಯಾಯಿತು. ಕಲ್ಬುರ್ಗಿ, ರಾಯಚೂರು, ಬಳ್ಳಾರಿ, ಚಿಕ್ಕೋಡಿಯಲ್ಲಿ ಆದ ಸೋಲಿನ ಪರಾಮರ್ಶೆಯನ್ನು ಹೈ ಕಮಾಂಡ್ ಮಾಡದೆ ಇರುವುದು ಕಲ್ಯಾಣ ಕರ್ನಾಟಕದಲ್ಲಿ ಪಕ್ಷದ ಅವನತಿಗೆ ಕಾರಣವಾಗಿದೆ.
ಕಾರ್ಯಕರ್ತರ ಪಕ್ಷ ಎಂದು ಹೆಸರುವಾಸಿಯಾಗಿದ್ದ ಭಾರತೀಯ ಜನತಾ ಪಕ್ಷ ಈಗ ಕುಟುಂಬ ರಾಜಕಾರಣದಲ್ಲಿ ಮುಳುಗಿರುವುದು ವಿಷಾದನೀಯ.
ಪಕ್ಷದ ವಿರುದ್ದ ಬಹಿರಂಗವಾಗಿ ಮಾತನಾಡಿ ಹಾಗೂ ಆಡಳಿತಾರೂಢ ಪಕ್ಷದ ಸಭೆಯಲ್ಲಿ ಭಾಗವಹಿಸುತ್ತಿದ್ದ ಶಾಸಕರ ಉಚ್ಚಾಟನೆ ಮಾಡದೆ ಉತ್ತರ ಕರ್ನಾಟಕದ ಭಾಗದಲ್ಲಿ ಪಕ್ಷದ ಬಲವರ್ಧನೆಗೆ ಟೊಂಕಕಟ್ಟಿ ಕೆಲಸ ಮಾಡಿದ ನನ್ನಂತವರಿಗೆ ಉಚ್ಚಾಟನೆ ಮಾಡುವುದು ಪಕ್ಷದ ದ್ವಂದ್ವ ನೀತಿಗಳಿಗೆ ಹಿಡಿದ ಕೈಗನ್ನಡಿ.
ಕಲ್ಯಾಣ ಕರ್ನಾಟಕದಲ್ಲಿ ಸಧೃಡವಾಗಿದ್ದ ಪಕ್ಷ ಲೋಕ ಸಭಾ ಚುನಾವಣೆಯಲ್ಲಿ ಮಕಾಡೆ ಮಲಗಿದ್ದು ಯಾರ 'ಅಡ್ಜಸ್ಟ್ಮೆಂಟ್ ರಾಜಕಾರಣದಿಂದ' ಎಂದು ಪಕ್ಷದ ಪ್ರಮುಖರು ವಿಶ್ಲೇಷಿಸಲಿ.
ಬಿ.ಬಿ.ಶಿವಪ್ಪ, ಮಲ್ಲಿಕಾರ್ಜುನಪ್ಪ, ಡಾ ವಿ.ಎಸ.ಆಚಾರ್ಯರು ಸೇರಿದಂತೆ ಪಕ್ಷದ ಅನೇಕ ಧುರೀಣರು, ಸಾವಿರಾರು ಕಾರ್ಯಕರ್ತರು ಪಕ್ಷವನ್ನು ಸಂಘಟಿಸಿದ ಪರಿಣಾಮದಿಂದಲೇ ಪಕ್ಷ ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲು ಸಾಧ್ಯವಾಗಿದ್ದು. ಬಿಡಿಗಾಸಿಲ್ಲದೇ, ಕಾರ್ಯಕರ್ತರ ಓಡಾಟ, ಉಪಹಾರಕ್ಕೂ ಹಣವಿಲ್ಲದಿರುವ ಕಾಲಘಟ್ಟದಲ್ಲಿ ದಿವಂಗತ ಮಲ್ಲಿಕಾರ್ಜುನಪ್ಪನವರು ತಮ್ಮ ಸ್ವಂತ ಸಂಪನ್ಮೂಲದಿಂದ ಪಕ್ಷವನ್ನು ಮುನ್ನೆಡೆಸಿ ಕಾರ್ಯಕರ್ತರ ಮನೋಬಲವನ್ನು ಹೆಚ್ಚಿಸಿ ಸಂಘಟನೆಗೆ ಕಾರಣವಾದರು. ಮಾತು ಕಡಿಮೆಯಾದರೂ ತಮ್ಮ ಕೆಲಸದಿಂದ ಕರಾವಳಿಯಲ್ಲಿ ಪಕ್ಷವನ್ನು ಸಂಘಟಿಸಿದ್ದು ಪಕ್ಷ ಮರೆಯಲಾಗದ ಮಾಣಿಕ್ಯ ಡಾ. ವಿ.ಎಸ್.ಆಚಾರ್ಯರು. ಆಯಕಟ್ಟಿನ ಸ್ಥಾನದಲ್ಲಿದ್ದರೂ ಆಚಾರ್ಯರ ಕುಟುಂಬದವರು ಯಾರೂ ಸಹ ರಾಜಕಾರಣಕ್ಕೆ ಬರಲಿಲ್ಲ ಎಂಬುದು ಹಲವರಿಗೆ ಗೊತ್ತಿಲ್ಲ.
ಹಿಂದುತ್ವವಾದ ಬಗ್ಗೆ ರಾಜಿ ಮಾಡಿಕೊಳ್ಳದೆ, ಕುಟುಂಬ ರಾಜಕಾರಣದ ವಿರುದ್ಧ ಧ್ವನಿ ಎತ್ತಿದ್ದಕ್ಕಾಗಿ ರಾಜ್ಯದಲ್ಲಿ ಪಕ್ಷವನ್ನು ಕಟ್ಟಿದ್ದ ಈಶ್ವರಪ್ಪನವರನ್ನು ಹೊರಗಿಟ್ಟರು. ನಿಸ್ವಾರ್ಥ ಕಾರ್ಯಕರ್ತರು, ತನು-ಮನ-ಧನದಿಂದ ದುಡಿದ ಮುಖಂಡರಿಂದ ಪಕ್ಷದ ಸಂಘಟನೆಯಾಯಿತೇ ಹೊರತು ಸ್ವಯಂಘೋಷಿತ 'ಪೂಜ್ಯ' ರಿಂದಲ್ಲ.
ರಾಜ್ಯದಲ್ಲಿ ಪ್ರ ಪ್ರಥಮ ಬಾರಿಗೆ ವಕ್ಫ್ ಹೋರಾಟಕ್ಕೆ ಧರಣಿ ಸತ್ಯಾಗ್ರಹವನ್ನು ಪ್ರಾರಂಭಿಸಿದ್ದು ನಾವೇ, ವಾಲ್ಮೀಕಿ ಹಗರಣ, ದಲಿತರಿಗೆ SCSP/TSP ಅನುದಾನದ ದುರ್ಬಳಕೆಯನ್ನು ಖಂಡಿಸಿದ್ದು, ಹೋರಾಟ ರೂಪಿಸಿದ್ದು, ವಕ್ಫ್ ವಿರುದ್ಧ ನಾವು ಮಾಡಿದ್ದ ಮಾಹಿತಿ ಸಂಗ್ರಹಕ್ಕೆ ಜೆ.ಪಿ.ಸಿ ಅಧ್ಯಕ್ಷರಾದ ಶ್ರೀ ಜಗದಂಬಿಕಾ ಪಾಲ್ ಅವರು ಪ್ರಶಂಸಿಸಿದ್ದರು.
ಪ್ರತಿ ಬಾರಿ ಅಧಿವೇಶನ ನಡೆದಾಗಲೂ ಉತ್ತರ ಕರ್ನಾಟಕಕ್ಕೆ ಆಗುತ್ತಿರುವ ಮಲತಾಯಿ ಧೋರಣೆಯನ್ನು, ಕೃಷ್ಣ ಯೋಜನೆಯ ವಿಳಂಬದ ಬಗ್ಗೆ ಧ್ವನಿ ಎತ್ತಿದ್ದು ನಾವೇ, ಕರ್ನಾಟಕ ಲೋಕ ಸೇವಾ ಆಯೋಗದಲ್ಲಿರುವ ಭ್ರಷ್ಟರನ್ನು ಕಿತ್ತೊಗೆಯಲು ಸ್ಪರ್ಧಾರ್ಥಿಗಳ ಜೊತೆಗೆ ನಿಂತಿದ್ದು ನಾವೇ. ಬಾಣಂತಿಯರ ಸಾವಿನ ಬಗ್ಗೆ ತನಿಖೆಯಾಗಬೇಕು ಎಂದು ಆಗ್ರಹಿಸಿದ್ದು ನಾನೇ. ಪಕ್ಷದಲ್ಲಿ ಆಗಬೇಕಾದ ಕೆಲ ಬದಲಾವಣೆಗಳು, ಸುಧಾರಣೆಗಳು ಸೂಚಿಸಿದಕ್ಕೆ ನಮ್ಮ ನಿಲುವು ಕೆಲವರಿಗೆ 'ಅಪಥ್ಯ' ವಾಗಿದೆ.
ಅಡ್ಜಸ್ಟ್ಮೆಂಟ್ ರಾಜಕಾರಣ ನಿಲ್ಲದಿದ್ದರೆ ಪಕ್ಷ ಮಕಾಡೆ ಮಲಗುವುದು ಖಚಿತ. ಕುಟುಂಬ ರಾಜಕಾರಣಕ್ಕೆ ಕಡಿವಾಣ ಹಾಕಿ, ನಿಜವಾದ ಜನ ಪರ ಕಾಳಜಿ ಇರುವ ನಾಯಕರಿಗೆ ಪಕ್ಷ ಅವಕಾಶ ನೀಡಬೇಕು. ಕಾಟಾಚಾರಕ್ಕೆ ಸರ್ಕಾರದ ನೀತಿಗಳನ್ನು ಖಂಡಿಸಿ ಸಂಜೆ ವೇಳೆ ಅವರ ಮನೆಯಲ್ಲಿ ಭೋಜನ ಕೂಟದಲ್ಲಿ ಭಾಗವಹಿಸುವ ನಾಯಕರ ಅವಶ್ಯ ಪಕ್ಷಕ್ಕಿಲ್ಲ.
Nation First, Party next, Self last ಎಂಬ ತತ್ವದಡಿ ಕೆಲಸ ಮಾಡುವ ನನ್ನ ನೀತಿಯಲ್ಲಿ ಯಾವುದೇ ಬದಲಾವಣೆ ಇಲ್ಲ.
🚩🚩
ಕೆಪಿಎಸ್ಸಿ ವಿವಾದಗಳ ಕುರಿತಾದ ಮುಖ್ಯಮಂತ್ರಿಗಳ ನಿನ್ನೆಯ ಹೇಳಿಕೆ "ಹಾವೂ ಸಾಯಲಿಲ್ಲ, ಕೋಲೂ ಮುರಿಯಲಿಲ್ಲ" ಎಂಬಂತೆ ಕೇಳಿಸುತ್ತದೆ. ಮುಖ್ಯಮಂತ್ರಿಗಳು ತಮ್ಮ ಮೇಲಿನ ಭಾರವನ್ನು ನ್ಯಾಯಾಲಯಕ್ಕೆ ಹೊರಿಸುವ ಮೂಲಕ ತಮ್ಮ ಜವಾಬ್ದಾರಿಯಿಂದ ನುಣುಚಿಕೊಂಡಿದ್ದಾರೆ. ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಆಗಿರುವ ಅನ್ಯಾಯ ಅವರಿಗೆ ಚೆನ್ನಾಗಿ ಗೊತ್ತಿದೆ. ಆದರೆ ಅವರು ಮರು ಅಧಿಸೂಚನೆ ಹೊರಡಿಸಲು ಹಿಂಜರಿಯುತ್ತಿದ್ದಾರೆ. ಇದಕ್ಕೆ ಕಾರಣ ಅವರ ಸುತ್ತ ಇರುವ ಅಧಿಕಾರಶಾಹಿಯ ಲಾಬಿ.
ಕರ್ನಾಟಕ ಲೋಕಸೇವಾ ಆಯೋಗದ ಸುಧಾರಣೆಗೆ ಮುಖ್ಯಮಂತ್ರಿಗಳು ನಿನ್ನೆ ಹಲವು ಪ್ರಸ್ತಾಪಗಳನ್ನು ಮುಂದಿಟ್ಟಿದ್ದಾರೆ. ಅವೆಲ್ಲವೂ ಸ್ವಾಗತಾರ್ಹ. ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ಮುಂದೆಂದೂ ತೊಂದರೆಯಾಗದಂತೆ ಪ್ರಶ್ನೆ ಪತ್ರಿಕೆಗಳನ್ನು ಕನ್ನಡದಲ್ಲಿಯೇ ತಯಾರಿಸಿ, ನಂತರ ಇಂಗ್ಲಿಷ್ ಗೆ ಅನುವಾದಿಸುವಂತೆ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ. ತಪ್ಪಿತಸ್ಥ ವಿಷಯ ತಜ್ಞರು, ಭಾಷಾಂತರಕಾರರ ಮೇಲೆ ಕ್ರಮ ಕೈಗೊಳ್ಳುವುದಾಗಿಯೂ ಹೇಳಿದ್ದಾರೆ. ಕಳೆದ ಆರೇಳು ತಿಂಗಳಿನಿಂದ ನಾವು ನಡೆಸುತ್ತಿರುವ ಹೋರಾಟಕ್ಕೆ ದೊರೆತ ಭಾಗಶಃ ಗೆಲುವು ಇದು. ನಾವು ಬೀದಿಯಲ್ಲಿ ನಿಂತು ಹೋರಾಡದಿದ್ದರೆ ಇದ್ಯಾವುದೂ ಆಗುತ್ತಿರಲಿಲ್ಲ.
ಆದರೆ ಈಗಾಗಲೇ ಆಗಿರುವ ಪ್ರಮಾದಕ್ಕೆ ಅವರ ಮಾತುಗಳಲ್ಲಿ ಯಾವ ಉತ್ತರವೂ ಇಲ್ಲ. ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ಆದ ಅನ್ಯಾಯವನ್ನು ನ್ಯಾಯಾಲಯವೇ ಸರಿಪಡಿಸಬೇಕೇ? ಅದು ಮುಖ್ಯಮಂತ್ರಿಗಳಿಂದ ಆಗದ ಕೆಲಸವೇ? ಕೆಪಿಎಸ್ಸಿ ಸ್ವಾಯತ್ತ ಸಂಸ್ಥೆ, ಸರ್ಕಾರ ಮಧ್ಯ ಪ್ರವೇಶಿಸಲು ಆಗದು ಎಂಬ ಇಂಗಿತ ಅವರದು. ಹಾಗೆಂದು ಅನ್ಯಾಯ ನೋಡಿಕೊಂಡು ಸುಮ್ಮನಿರುತ್ತೀರೇ? ನಾವು ಮರುಪರೀಕ್ಷೆ ಮಾಡಿ ಎಂದು ಕೇಳುತ್ತಿಲ್ಲ, ಮರು ಅಧಿಸೂಚನೆ ಹೊರಡಿಸಿ ಎಂದು ಕೇಳುತ್ತಿದ್ದೇವೆ. ಅದು ನಿಮ್ಮ ಕೈಯಲ್ಲೇ ಇದೆಯಲ್ಲವೇ? ಕೆಪಿಎಸ್ಸಿ ಅಧ್ಯಕ್ಷರು, ಸದಸ್ಯರು, ಅಲ್ಲಿನ ಅಧಿಕಾರಿಗಳು ನಿಮ್ಮ ಮಾತು ಕೇಳೋದಿಲ್ಲವೇ? ಯಾಕಾಗಿ ಈ ಅಸಹಾಯಕತೆಯ ಪ್ರದರ್ಶನ?
ಮುಖ್ಯಮಂತ್ರಿಗಳು ಉತ್ತರ ನೀಡುವಾಗ ಕೆಪಿಎಸ್ಸಿ ಕೊಟ್ಟ ಮಾಹಿತಿಯನ್ನು ಯಥಾವತ್ತಾಗಿ ಓದಿದರು. ಕೆಪಿಎಸ್ಸಿ ಪ್ರಕಾರ ಮರುಪರೀಕ್ಷೆಯ ಪ್ರಶ್ನೆ ಪತ್ರಿಕೆಗಳಲ್ಲಿ ಆದ ದೋಷಗಳ ತನಿಖೆಗೆ ತಜ್ಞರ ಸಮಿತಿಯೊಂದನ್ನು ನೇಮಿಸಿತ್ತು. ಆ ಸಮಿತಿ ಆರು ದೋಷಗಳನ್ನು ಗುರುತಿಸಿ 5 ಕೃಪಾಂಕ ನೀಡಲು ಶಿಫಾರಸು ಮಾಡಿದೆ! ಆರು ದೋಷಗಳಲ್ಲಿ ಮೂರು ದೋಷಗಳು ಇಂಗ್ಲಿಷ್ ಮತ್ತು ಕನ್ನಡ ಎರಡೂ ಪ್ರಶ್ನೆಪತ್ರಿಕೆಗಳಲ್ಲಿ ಆಗಿರುವ ಸಾಮಾನ್ಯ ದೋಷ, ಅನುವಾದದ ದೋಷವಲ್ಲ! ಎಂಥ ಮೋಸ? ಎಂಥ ದುರಹಂಕಾರದ ಸಮರ್ಥನೆ!
ಎಸ್ ಎಸ್ ಎಲ್ ಸಿ ಓದಿರುವ ನಮ್ಮ ಹಳ್ಳಿಗಾಡಿನ ಪ್ರತಿಭಾವಂತ ಹೆಣ್ಣುಮಗಳಿಗೆ ಪ್ರಶ್ನೆ ಪತ್ರಿಕೆಗಳನ್ನು ಕೊಟ್ಟರೆ ಆಕೆ ಸಮರ್ಥವಾಗಿ ಆಗಿರುವ ತಪ್ಪುಗಳನ್ನು ಗುರುತಿಸುತ್ತಾಳೆ. ಹೀಗಿರುವಾಗ ಎರಡೂ ಪ್ರಶ್ನೆಪತ್ರಿಕೆಗಳಲ್ಲಿ ಆಗಿರುವ 80 ದೋಷಗಳು ಈ ತಜ್ಞರ ಸಮಿತಿಗೆ ಕಾಣಲಿಲ್ಲವೇ? ಹೊಟ್ಟೆಗೆ ಇವರು ಏನು ತಿನ್ನುತ್ತಾರೆ? ಅಥವಾ ಈ ತಜ್ಞರ ಸಮಿತಿಯೆಂಬುದೇ ಕೆಪಿಎಸ್ಸಿ ಆಡಿದ ನಾಟಕವೇ? ಪ್ರತಿಯೊಂದು ತಪ್ಪುಗಳನ್ನೂ ನಾವು ಮುಖ್ಯಮಂತ್ರಿಗಳ ಗಮನಕ್ಕೆ ತಂದಿದ್ದೆವು. ಹೀಗಿದ್ದಾಗ್ಯೂ ಅವರು ಕೆಪಿಎಸ್ಸಿ ಕೊಟ್ಟ ಸುಳ್ಳು ಉತ್ತರ, ಮೋಸದ ಸಮರ್ಥನೆಯನ್ನೇ ಹೇಳಬೇಕಿತ್ತೇ?
ಮುಖ್ಯಮಂತ್ರಿಗಳ ಒಟ್ಟು ಹೇಳಿಕೆ ಅಧಿಕಾರಶಾಹಿಯ ಪ್ರಭಾವಳಿಯಲ್ಲಿ ಓರ್ವ ಕನ್ನಡಪರ ಚಿಂತನೆಯ ರಾಜಕಾರಣಿ ಅಸಹಾಯಕತೆಯಲ್ಲಿ ಕೈ ಚೆಲ್ಲಿ ಕುಳಿತಂತೆ ಕಾಣುತ್ತದೆ. ಸಿದ್ಧರಾಮಯ್ಯನವರಂಥ ಗಟ್ಟಿ ಗುಂಡಿಗೆಯ ನಾಯಕರು ಹೀಗೆ ಐಎಎಸ್ ಲಾಬಿಗೆ ಶರಣಾಗಬಾರದಿತ್ತು.
ಕರ್ನಾಟಕ ರಕ್ಷಣಾ ವೇದಿಕೆ ಈ ಹೋರಾಟವನ್ನು ಮುಂದುವರೆಸುತ್ತದೆ. ಇದಕ್ಕೊಂದು ತಾರ್ಕಿಕ ಅಂತ್ಯ ದೊರೆಯುವವರೆಗೆ ಮುಂದುವರೆಸುತ್ತದೆ. ಕನ್ನಡ ಮಾಧ್ಯಮ ವಿದ್ಯಾರ್ಥಿಗಳು ಅಧೀರರಾಗಬಾರದು. ನಮಗೆ ನ್ಯಾಯಾಲಯಗಳಾದರೂ ನ್ಯಾಯ ಕೊಡಬಹುದೆಂಬ ನಿರೀಕ್ಷೆ ಇಟ್ಟುಕೊಳ್ಳೋಣ. ಅಲ್ಲೂ ನಮಗೆ ನ್ಯಾಯ ಸಿಗದೇ ಇದ್ದರೆ ಮತ್ತೆ ಬೀದಿಯಲ್ಲಿ ನಿಲ್ಲೋಣ. ಈ ನಾಡಿನ ಭವಿಷ್ಯ ರೂಪಿಸಬೇಕಾದ ಯುವಕ/ಯುವತಿಯರನ್ನು ಈ ಸರ್ಕಾರ, ಈ ವ್ಯವಸ್ಥೆ ಏನು ಮಾಡುತ್ತದೆ, ನೋಡಿಯೇ ಬಿಡೋಣ. ನಿಮ್ಮೊಂದಿಗೆ ನಾನು ಸದಾ ಇರುತ್ತೇನೆ.
- ಟಿ.ಎ.ನಾರಾಯಣಗೌಡ
@siddaramaiah@DKShivakumar@CMofKarnataka@BJPKarnataka@KPCCKarnataka@KPCCPresident #KPSCMOSA #KpscDroha #KPSC
ಲೋಕಸೇವಾ ಆಯೋಗಕ್ಕೆ ಉತ್ತರದಾಯಿತ್ವ, ಜವಾಬ್ದಾರಿ, ವೃತ್ತಿಪರತೆ, ಪರೀಕ್ಷಾರ್ಥಿ ಸ್ನೇಹಿ ಸೇವೆಗಳನ್ನು ತರದಿದ್ದರೆ ಆಡಳಿತಾರೂಡಿ ಕಾಂಗ್ರೆಸ್ ಪಕ್ಷ ಮುಂದಿನ ಚುನಾವಣೆಯಲ್ಲಿ ಎರಡಂಕಿ ಕೂಡ ದಾಟೋದಿಲ್ಲ.
ಮುಖ್ಯ ಮಂತ್ರಿಗಳು ರಾಜಕೀಯ ಇಚ್ಛಾಶಕ್ತಿ ಪ್ರದರ್ಶಿಸಿ ಆಯೋಗವನ್ನು ಶುದ್ದೀಕರಿಸಲಿ. ಆಯೋಗದಲ್ಲಿ ಕೆಲಸ ಮಾಡುವ ಕೆಲ ಹಂತದ ನೌಕರರಿಂದ ಹಿಡಿದು ಆಯಕಟ್ಟಿನ ಹುದ್ದೆಯಲ್ಲಿರುವ ಅಧಿಕಾರಿಯವರೆಗೂ ಉತ್ತರದಾಯಿತ್ವವನ್ನು ತರಬೇಕು. One Lunch, Two Punch ಸಂಸ್ಕೃತಿ ಬಿಟ್ಟು ಗಂಭೀರವಾಗಿ ಕೆಲಸ ಮಾಡುವಂತೆ ಸರ್ಕಾರ ಕೆಲಸ ಮಾಡಬೇಕು.
@AKSSAofficial